ಪ್ರಾಪರ್ಟಿ ಇನ್ಶೂರೆನ್ಸ್ ನಿಮ್ಮ ಮನೆ, ಅಂಗಡಿ ಮತ್ತು ವ್ಯಾಪಾರಕ್ಕಾಗಿ

property-insurance
usp icon

Zero

Documentation

usp icon

Quick Claim

Process

usp icon

Affordable

Premium

back arrow
Home Insurance exchange icon
Zero Paperwork Online Process
home icon
shop icon
office icon
factory icon
Please enter property type
Please select property type
Enter Valid Pincode
+91
Please enter valid mobile number
I agree to the Terms & Conditions
background-illustration
background-illustration

ಪ್ರಾಪರ್ಟಿ ಇನ್ಶೂರೆನ್ಸ್ ಎಂದರೇನು?

ಒಬ್ಬರ ಮನೆ, ಅಪಾರ್ಟ್ಮೆಂಟ್, ಉದ್ಯಮ, ಕ್ಯಾಫೆ ಅಥವಾ ಆಸ್ಪತ್ರೆ ಆಗಿರಲಿ; ಪ್ರಾಪರ್ಟಿ ಇನ್ಶೂರೆನ್ಸ್, ನಿಮ್ಮ ಕಟ್ಟಡ ಹಾಗೂ ಅದರಲ್ಲಿರುವ ವಸ್ತುಗಳನ್ನು ಬೆಂಕಿಗಳಿಂದ, ಕಳ್ಳತನಗಳಿಂದ, ನೈಸರ್ಗಿಕ ವಿಪತ್ತು ಹಾಗೂ ಇತರ ದುರ್ಘಟನೆಗಳ ಅಪಾಯಗಳಿಂದ, ಸಂರಕ್ಷಿಸಲು ಇರುವಂತಹ ಒಂದು ಇನ್ಶೂರೆನ್ಸ್ ಪಾಲಿಸಿಯಾಗಿದೆ.

ನೀವು ಈಗ ತಾನೇ ನಿಮ್ಮ ಕನಸಿನ ಮನೆಯನ್ನು ಖರೀದಿಸಿದ್ದು ಅದನ್ನು ಸಂರಕ್ಷಿಸುವ ವಿಧಾನಗಳನ್ನು ಹುಡುಕುತ್ತಾ ಇಲ್ಲಿಗೆ ಬಂದಿರುವ ಸಾಧ್ಯತೆಗಳಿವೆ. ಎಷ್ಟೇ ಆದರೂ, ನಮ್ಮ ಹೊಸ ಮನೆಯಲ್ಲವೇ, ಅದನ್ನು ಸುರಕ್ಷಿತವಾಗಿಡಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಗಳನ್ನು ಮಾಡೇ ಮಾಡುತ್ತೀರಿ.

ಅಥವಾ ಬಹುಶಃ ನೀವು ನಿಮ್ಮ ಸ್ವಂತ ಉದ್ಯಮ ನಡೆಸುತ್ತಿದ್ದು, ನಿಮ್ಮ ಅಂಗಡಿ ಅಥವಾ ಕಛೇರಿಯ ಆವರಣಗಳನ್ನು ಯಾವುದೇ ರೀತಿಯ ಹಾನಿಗಳಿಂದ ದೂರವಿಡಲು ನೋಡುತ್ತಿರಬಹುದು. ಎಷ್ಟೇ ಆದರೂ, ಎಲ್ಲಾ ಉದ್ಯಮಗಳು ಸೂಕ್ಷ್ಮವಾಗಿದ್ದು, ಯಾವುದೇ ದೊಡ್ಡ ಹಾನಿ ಸಂಭವಿಸದಂತೆ ನೋಡಿಕೊಳ್ಳಲು ನೀವು ನಿಮ್ಮ ಸಾಮರ್ಥ್ಯವನ್ನೂ ಮೀರಿ ಪ್ರಯತ್ನಿಸುವಿರಿ.

ಆದ್ದರಿಂದ, ನೀವು ಕಾಪಾಡಲು ಬಯಸುತ್ತಿರುವುದು ನಿಮ್ಮ ಅಂಗಡಿಯಾಗಿದ್ದರೂ ಅಥವಾ ನಿಮ್ಮ ಅಂದದ ಮನೆಯಾಗಿದ್ದರೂ, ಡಿಜಿಟ್ ನ ಪ್ರಾಪರ್ಟಿ ಇನ್ಶೂರೆನ್ಸ್ ಎರಡು ಪ್ರಾಥಮಿಕ ಲಾಭಗಳನ್ನು ನಿಮಗೆ ನೀಡುತ್ತದೆ; ಬೆಂಕಿ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಸಂರಕ್ಷಣೆ(ಸ್ಟಾಂಡರ್ಡ್ ಫಯರ್ ಆಂಡ್ ಪೆರಿಲ್ಸ್) ಹಾಗೂ ಕಳ್ಳತನದಿಂದಲೂ ಕೂಡಾ, ಎಲ್ಲಾ ಪ್ರಾಪರ್ಟಿಗಳು ಈ ಅಪಾಯಕ್ಕೆ ತುತ್ತಾಗುವ ಸಂಭಾವನೆ ಹೆಚ್ಚಿರುವ ಕಾರಣ. ಇದು, ನಿಮ್ಮೊಂದಿಗಿದ್ದು, ನಿಮ್ಮನ್ನು ಬೆಂಕಿಗಳಿಂದ, ನೈಸರ್ಗಿಕ ವಿಪತ್ತುಗಳಿಂದ, ಕಳ್ಳತನಗಳಿಂದ, ಸ್ಫೋಟಗಳಿಂದ ಹಾಗೂ ನಿಮ್ಮ ದಾರಿಯಲ್ಲಿ ಬರಬಹುದಾದ ಇತರ ಅವಘಡಗಳಿಂದ ನಿಮ್ಮನ್ನು ಕವರ್ ಮಾಡಿ,ಉಂಟಾಗುವ ಸಂಭಾವ್ಯ ಹಾನಿಗಳನ್ನು ಹಾಗೂ ನಷ್ಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

Read More

ಪ್ರಾಪರ್ಟಿ ಇನ್ಶೂರೆನ್ಸ್ ಸೂಕ್ತವಾಗಿದೆ ಎನ್ನುವುದರ ಬಗ್ಗೆ ಖಚಿತತೆಯಿಲ್ಲವೇ?

ಮುಂದೆ ಓದಿ…

Burglary
2017 ರಲ್ಲಿ, ಭಾರತದ ವಸತಿ ಆವರಣಗಳಲ್ಲಿ ಕಳ್ಳತನ, ಕನ್ನ ಹಾಗೂ ಡಕಾಯತಿಗಳ 2,44,119 ಪ್ರಕರಣಗಳು ನಡೆದಿದ್ದವು. (1)
Loss of Property
2017 ರಲ್ಲಿ ಭಾರತೀಯ ವಸತಿ ಆವರಣಗಳಲ್ಲಿ ಆದ ಪ್ರಾಪರ್ಟಿ ಕಳ್ಳತನದಿಂದಾದ ಹಾನಿಯು 40% ರಷ್ಟು ಏರಿಕೆ ಕಂಡಿತ್ತು.(2)
Fire Outbreak
ಬೆಂಕಿ ಅವಘಡವು ಉದ್ಯಮದ ಮುಂದುವರಿಕೆ ಹಾಗೂ ಕಾರ್ಯಾಚಾರಣೆಗಳಿಗೆ ಆಗಬಲ್ಲ ಅಪಾಯದ ಶ್ರೇಣಿಯಲ್ಲಿ  3ನೇ ಅತಿದೊಡ್ಡ ಸ್ಥಾನದಲ್ಲಿದೆ. (3)
Home Theft
ಭಾರತದ 70% ಕಳ್ಳತನಗಳು ಮನೆಗಳ್ಳತನವಾಗಿರುತ್ತವೆ.(4)
Fire in Building
ಬೆಂಕಿಗೆ ತುತ್ತಾಗಿರುವ ಉದ್ಯಮಗಳು ತಮ್ಮ ವ್ಯವಹಾರ ಹಾಗೂ ವಹಿವಾಟಿನಲ್ಲಿ 25-30% ರಷ್ಟು ಇಳಿಮುಖವನ್ನು ಕಾಣುತ್ತವೆ. (5)

ಡಿಜಿಟ್ ನ ಪ್ರಾಪರ್ಟಿ ಇನ್ಶೂರೆನ್ಸ್ ಏಕೆ ಉತ್ತಮವಾಗಿದೆ?

  • ಹಣಕ್ಕಾಗಿ ಮೌಲ್ಯ : ನಿಮ್ಮ ಪ್ರಾಪರ್ಟಿಯನ್ನು ಹಾನಿಗಳಿಂದ ಸಂರಕ್ಷಿಸುವುದು ಮಹತ್ತರವಾದ ಕಾರ್ಯವಾಗಿದೆ. ಎಷ್ಟೇ ಆದರೂ, ಅದರ ಪ್ರಥಮ ಉದ್ದೇಶವು ನಿಮ್ಮ ಕಟ್ಟಡ ಹಾಗೂ ಅದರಲ್ಲಿರುವ ವಸ್ತುಗಳು ಎರಡನ್ನೂ ಕವರ್ ಮಾಡುವುದಾಗಿದೆ! ಆದ್ದರಿಂದಲೇ, ಕಳ್ಳತನದ ಇನ್ಶೂರೆನ್ಸ್ ನ ಪ್ರೀಮಿಯಂ ಕೂಡಾ ಸಾಮಾನ್ಯವಾಗಿ ಹೆಚ್ಚಾಗಿರುವುದನ್ನು ನೀವು ಗಮನಿಸಬಹುದು. ಆದರೆ, ನಾವು ನಿಮ್ಮ ಪ್ರಾಪರ್ಟಿಯನ್ನು ಇನ್ಶೂರ್ ಮಾಡಲು ನಿಮಗೆ ಅತ್ಯುತ್ತಮ ಹಾಗೂ ಕೈಗೆಟಕುವ ದರದ ಪ್ರೀಮಿಯಂ ಅನ್ನು ನೀಡಲು ಕೈಲಾದಷ್ಟು ಪ್ರಯತ್ನವನ್ನು ಮಾಡುತ್ತೇವೆ. 

  • ಡಿಜಿಟಲ್ ಸ್ನೇಹಿ : ಭಾರತದ ಮೊದಲ ಇನ್ಶೂರೆನ್ಸ್ ಕಂಪನಿಗಳಲ್ಲಿ ಒಂದಾಗಿರುವುದರಿಂದ, ಕಳ್ಳತನದ ಇನ್ಶೂರೆನ್ಸ್ ಅನ್ನು ಖರೀದಿಸುವುದರಿಂದ ಹಿಡಿದು ಕಳ್ಳತನದ ಇನ್ಶೂರೆನ್ಸ್ ಕ್ಲೈಮ್ ಮಾಡುವವರೆಗೆ ಎಲ್ಲಾ ಪ್ರಕ್ರಿಯೆಗಳನ್ನೂ ಡಿಜಿಟಲ್ ಆಗಿಸಲು ಪ್ರಯತ್ನಿಸುತ್ತೇವೆ. ಆದ್ದರಿಂದ ಒಂದು ಪರಿಶೀಲನೆಯ ಅಗತ್ಯ ಬಿದ್ದಾಗಲೂ, ನೀವು ಅದನ್ನು ಆನ್ಲೈನ್ ಆಗಿಯೇ ಮಾಡಬಹುದು! (ರೂ  1 ಲಕ್ಷ ಮೇಲ್ಪಟ್ಟ ಕ್ಲೈಮ್ ಅನ್ನು ಹೊರತುಪಡಿಸಿ, ಐ.ಆರ್.ಡಿ.ಎ.ಐ( IRDAI - ಇನ್ಶೂರೆನ್ಸ್ ರೆಗುಲೇಟರಿ ಆಂಡ್ ಡೆವೆಲಪ್ಮೆಂಟ್ ಅಥಾರಿಟಿ) ಪ್ರಕಾರ ಇವುಗಳನ್ನು ನಾವಾಗಿಯೇ ಹೋಗಿ ಮಾಡಬೇಕಾಗಿದೆ).

  • ಎಲ್ಲಾ ಉದ್ಯಮವರ್ಗಗಳನ್ನು ಕವರ್ ಮಾಡುತ್ತದೆ : ನೀವು ನಿಮ್ಮ ಕುಟುಂಬದ ಉದ್ಯಮವನ್ನಾಗಲಿ, ದಿನಸಿ ಅಂಗಡಿ ಅಥವಾ ಅಂಗಡಿಗಳ ಸರಣಿಯನ್ನಾಗಲಿ ಸಂರಕ್ಷಿಸಲು ಬಯಸಿದರೆ, ನಮ್ಮ ಕಳ್ಳತನದ ಇನ್ಶೂರೆನ್ಸ್ ಎಲ್ಲಾ ರೀತಿಯ ಉದ್ಯಮಗಳಿಗೂ ಹೊಂದಿಕೊಳ್ಳುತ್ತದೆ, ಅವುಗಳ ಗಾತ್ರ ಏನೇ ಇರಲಿ.

  • ಬಾಡಿಗೆದಾರರಿಗೆ ಯೋಜನೆಗಳು : ಇಂದಿನ ಮಿಲೇನಿಯಲ್ ಗಳು ಸ್ವಂತಕ್ಕೆ  ಪಡೆಯದೆ, ಬಾಡಿಗೆಗೆ ಪಡೆಯುವುದನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ನಮಗೆ ಅರ್ಥವಾಗುತ್ತದೆ. ಅದಕ್ಕಾಗಿಯೇ, ನಾವು ಬಾಡಿಗೆದಾರರಿಗಾಗಿ ಕೂಡಾ ಯೋಜನೆಗಳನ್ನು ಒದಗಿಸುತ್ತೇವೆ. ಇದು ಕೇವಲ ನೀವು ಒಡೆತನ ಪಡೆದಿರುವ ವಸ್ತುಗಳಿಗೆ ಮಾತ್ರ ಕವರ್ ನೀಡುತ್ತದೆ.

ಡಿಜಿಟ್ ನ ಪ್ರಾಪರ್ಟಿ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ?

Fires

ಬೆಂಕಿಗಳು

ಆಕಸ್ಮಿಕ ಬೆಂಕಿಯಿಂದ ಉಂಟಾಗುವ ನಷ್ಟಗಳಿಂದ ಹಾಗೂ ಹಾನಿಗಳಿಂದ ನಿಮ್ಮ ಪ್ರಾಪರ್ಟಿ ಹಾಗೂ ಅದರಲ್ಲಿರುವ ವಸ್ತುಗಳನ್ನು ಕವರ್ ಮಾಡುತ್ತದೆ!

Explosion & Aircraft Damage

ಸ್ಫೋಟ ಹಾಗೂ ವೈಮಾನಿಕ ಹಾನಿ

ನಿಮ್ಮ ಪ್ರಾಪರ್ಟಿಯನ್ನು ಸ್ಫೋಟ ಅಥವಾ ವೈಮಾನಿಕ ಹಾನಿಯಿಂದ ಕೂಡಾ ಉಂಟಾಗುವ ಹಾನಿಗಳಿಂದ ಅಥವಾ ನಷ್ಟಗಳಿಂದ ಸಂರಕ್ಷಿಸುತ್ತದೆ.

Storms

ಬಿರುಗಾಳಿಗಳು

ನಿಮ್ಮ ಅಂಗಡಿ ಅಥವಾ ಮನೆಯನ್ನು ಬಿರುಗಾಳಿ ಅಸ್ಥವ್ಯಸ್ಥವಾಗಿಸಿದ ಸಂದರ್ಭಗಳಿಗೆ. ಪ್ರಕೃತಿ ವಿಕೋಪಗಳಾದ ಭೀಕರ ಬಿರುಗಾಳಿ ಅಥವಾ ಮಿಂಚುಗಳಿಂದ ಕೂಡಾ ಆಗುವ ಹಾನಿಗಳನ್ನು ಕವರ್ ಮಾಡುತ್ತದೆ.

Floods

ಪ್ರವಾಹಗಳು

ಮಳೆಯು ವಿಪರೀತವಾಗಿ ಪ್ರವಾಹವನ್ನು ಉಂಟುಮಾಡಿದಾಗ ಆಗಬಲ್ಲ ನಷ್ಟಗಳಿಂದ ಹಾಗೂ ಹಾನಿಗಳಿಂದ ನಿಮ್ಮ ಪ್ರಾಪರ್ಟಿಯನ್ನು ಸಂರಕ್ಷಿಸುತ್ತದೆ.

Burglaries

ಕಳ್ಳತನಗಳು

ದುರಾದೃಷ್ಟವಷಾತ್, ಭಾರತದಲ್ಲಿ ಕಳ್ಳತನಗಳು ಸಮಾನ್ಯವಾಗಿವೆ. ಆದರೆ, ಒಂದು ಪ್ರಾಪರ್ಟಿ ಇನ್ಶೂರೆನ್ಸ್ ಇದರಿಂದ ಉಂಟಾಗುವ ನಷ್ಟಗಳಿಂದ ಹಾಗೂ ಹಾನಿಗಳಿಂದ ನಿಮ್ಮ ಪ್ರಾಪರ್ಟಿ ಹಾಗೂ ಅದರಲ್ಲಿರುವ ವಸ್ತುಗಳು ಎರಡನ್ನೂ ಸಂರಕ್ಷಿಸುತ್ತದೆ. ಡಿಜಿಟ್ ಕಳ್ಳತನದ ಇನ್ಶೂರೆನ್ಸ್ ಪಾಲಿಸಿ(UIN: IRDAN158RP0019V01201920)ಯಲ್ಲಿ ಕವರ್ ಆಗಿದೆ.

Earthquakes

ಭೂಕಂಪಗಳು

ಪ್ರಕೃತಿ ವಿಕೋಪಗಳನ್ನು ಯಾರೂ ತೆಡೆಯಲು ಸಾಧ್ಯವಿಲ್ಲವಾದರೂ, ನಿಮ್ಮ ದಾರಿಯಲ್ಲಿ ಬರಬಹುದಾದ ಎಲ್ಲಾ ಸಂಭಾವ್ಯ ಹಾನಿಗಳಿಗೆ ನೀವು ಕವರ್ ಆಗಿದ್ದೀರಿ ಎಂದು ದೃಢಪಡಿಸಿಕೊಳ್ಳಬಹುದು. ಡಿಜಿಟ್ ನ ಸ್ಟಾಂಡರ್ಡ್ ಫಯರ್ ಹಾಗೂ ಸ್ಪೆಷಲ್ ಪೆರಿಲ್ಸ್ ಪಾಲಿಸಿಯು, ಭೂಕಂಪದಂತಹ ನೈಸರ್ಗಿಕ ವಿಪತ್ತುಗಳಿಂದ ಉಂಟಾಗಬಲ್ಲ ಹಾನಿಗಳಿಂದ ಹಾಗೂ ನಷ್ಟಗಳಿಂದ ಕೂಡಾ ಕವರ್ ನೀಡುತ್ತದೆ.

ನಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ನ ಕೊಡುಗೆಗಳು

Home Insurance

ಹೋಂ ಇನ್ಶೂರೆನ್ಸ್

ಹೋಂ ಇನ್ಶೂರೆನ್ಸ್ ನಿಮ್ಮ ಮನೆಗೆ ಹೊಂದಿಕೊಳ್ಳುವಂತೆ ವಿನ್ಯಾಸವಾಗಿದೆ; ಅದು ಅಪಾರ್ಟ್ಮೆಂಟ್, ವಿಲ್ಲಾ ಅಥವಾ ಸ್ವತಂತ್ರ ಮನೆ ಇರಲಿ; ಒಂದು ಹೋಂ ಇನ್ಶೂರೆನ್ಸ್ ನಿಮ್ಮ ಮನೆ ಹಾಗೂ ಅದರಲ್ಲಿರುವ ವಸ್ತುಗಳನ್ನು ಅನಿರೀಕ್ಷಿತ ಘಟನೆಗಳಾದ ಬೆಂಕಿ, ಸ್ಫೋಟ, ಪ್ರವಾಹಗಳು, ಕಳ್ಳತನಗಳು, ಬಿರುಗಾಳಿಗಳು ಇತ್ಯಾದಿಗಳಿಂದ ಕವರ್ ಪಡೆಯಲು ಸಹಾಯ ಮಾಡುತ್ತದೆ.

Business & Shop Insurance

ಉದ್ಯಮ ಹಾಗೂ ಅಂಗಡಿ ಇನ್ಶೂರೆನ್ಸ್

ಉದ್ಯಮ ಹಾಗೂ ಅಂಗಡಿ ಇನ್ಶೂರೆನ್ಸ್ ಯೋಜನೆಯನ್ನು ಉದ್ಯಮಕ್ಕೆ ಸಂಬಂಧಪಟ್ಟ ಪ್ರಾಪರ್ಟಿಗಳನ್ನು ಸಂರಕ್ಷಿಸಲು ವಿನ್ಯಾಸಗೊಳಿಸಲಾಗಿದೆ; ಉದಾಹರಣೆಗೆ ದಿನಸಿ ಅಂಗಡಿಗಳು, ಬುಟೀಕ್ ಗಳು, ಜನರಲ್ ಸ್ಟೋರ್ ಗಳು, ಕಛೇರಿ ಆವರಣಗಳು, ಫ್ಯಾಕ್ಟರಿಗಳು, ಮಾಲ್ ಗಳು ಇತ್ಯಾದಿಗಳಲ್ಲಿ ನೈಸರ್ಗಿಕ ವಿಪತ್ತುಗಳು, ಕಳ್ಳತನಗಳು ಹಾಗೂ ಬೆಂಕಿಗಳಿಂದ ಉಂಟಾಗಬಲ್ಲ ಸಂಭಾವ್ಯ ಹಾನಿಗಳಿಂದ ಹಾಗೂ ನಷ್ಟಗಳಿಂದ.

ಪ್ರಾಪರ್ಟಿ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ಡಿಜಿಟ್ ನಲ್ಲಿ, ನಮ್ಮ ಡಿಜಿಟ್ ಸ್ಟಾಂಡರ್ಡ್ ಫಯರ್ ಹಾಗೂ ಸ್ಪೆಷಿಯಲ್ ಪೆರಿಲ್ಸ್ ಪಾಲಿಸಿ ಮೂಲಕ, ನಮ್ಮ ಇನ್ಶೂರೆನ್ಸ್ ನಿಮ್ಮ ಪ್ರಾಪರ್ಟಿಯನ್ನು ಪ್ರವಾಹ ಹಾಗೂ ಭೂಕಂಪದಂತಹ ನೈಸರ್ಗಿಕ ವಿಪತ್ತುಗಳಿಂದ ಕವರ್ ಅನ್ನು ನೀಡುತ್ತದೆ. ಒಂದು ಪ್ರಾಪರ್ಟಿಯು ಯಾವಾಗಲೂ ಕಳ್ಳತನದ ಅಪಾಯದಲ್ಲಿರುವುದರಿಂದ, ನಾವು ಕಳ್ಳತನವನ್ನೂ ಕವರ್ ಮಾಡುತ್ತೇವೆ. ಈ ರೀತಿ, ನಿಮ್ಮ ಪ್ರಾಪರ್ಟಿಯು ಬೆಂಕಿ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಉಂಟಾಗಬಲ್ಲ ಹಾನಿಗಳಿಂದ ಹಾಗೂ ನಷ್ಟಗಳಿಂದ ಮಾತ್ರವಲ್ಲದೆ ಕಳ್ಳತನದಿಂದಲೂ ಸುರಕ್ಷಿತವಾಗಿರುತ್ತದೆ. ಸರಳ ಅರ್ಥೈಸುವಿಕೆಗಾಗಿ, ನಾವು ಈ ಕೆಳಗಿನಂತೆ ಕವರೇಜ್ ಆಯ್ಕೆಗಳನ್ನು ಪ್ರತ್ಯೇಕಿಸಿದ್ದೇವೆ. 

ಆಯ್ಕೆ 1

ಆಯ್ಕೆ 2

ಆಯ್ಕೆ 3

ಕೇವಲ ನಿಮ್ಮ ಮನೆ ಹಾಗೂ ಉದ್ಯಮದ ವಸ್ತುಗಳನ್ನು ಕವರ್ ಮಾಡುತ್ತದೆ

ನಿಮ್ಮ ಮನೆ ಹಾಗೂ ಉದ್ಯಮದ ವಸ್ತುಗಳ ಜೊತೆ ಕಟ್ಟಡವನ್ನೂ ಕವರ್ ಮಾಡುತ್ತದೆ

ನಿಮ್ಮ ಮನೆ, ಉದ್ಯಮದ ವಸ್ತುಗಳು ಹಾಗೂ ಕಟ್ಟಡದ ಜೊತೆ ತಿಜೋರಿ ಅಥವಾ ಅಂಗಡಿ ಕೌಂಟರ್ನಲ್ಲಿ ರುವ ಕ್ಯಾಷ್ ನಂತಹ ಅಮೂಲ್ಯ ವಸ್ತುಗಳನ್ನೂ ಕವರ್ ಮಾಡುತ್ತದೆ

ಪ್ರಾಪರ್ಟಿ ಇನ್ಶೂರೆನ್ಸ್ ಬಗ್ಗೆ ತಿಳಿಯಬೇಕಾದ ವಿಷಯಗಳು

  • ವಸ್ತುಗಳು - ಪ್ರಾಪರ್ಟಿ ಇನ್ಶೂರೆನ್ಸ್ ನಲ್ಲಿ ‘ವಸ್ತುಗಳು’ ಎಂದರೇನು ಎಂದು ನೀವು ಗೊಂದಲಕ್ಕೊಳಗಾಗಿದ್ದರೆ, ಇದರರ್ಥ ನಿಮ್ಮ ಮನೆಯಲ್ಲಿರುವ ನಿಮ್ಮ ವೈಯಕ್ತಿಕಸ್ವತ್ತುಗಳಾಗಿವೆ. ಉದಾಹರಣೆಗೆ ; ನಿಮ್ಮ ಮನೆಯಲ್ಲಿ ಕಳ್ಳತನವಾಗಿದ್ದು ನಿಮ್ಮ ಲ್ಯಾಪ್ಟಾಪ್ ಕಳವಾಗಿದ್ದರೆ, ನಿಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ನಿಮ್ಮ ವಸ್ತುಗಳನ್ನೂ ಕವರ್ ಮಾಡುತ್ತದೆ ಅಂದರೆ, ನಿಮ್ಮ ಲ್ಯಾಪ್ಟಾಪ್ ಅನ್ನು ಕೂಡಾ.
  • ಕಟ್ಟಡ/ರಚನೆ - ಹೆಸರೇ ಸೂಚಿಸುವಂತೆ, ನಿಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ನಲ್ಲಿರುವ ‘ಕಟ್ಟಡ’ ಅಥವಾ ‘ರಚನೆ’ ನೀವು ಕವರ್ ಮಾಡುತ್ತಿರುವ ಸಂಪೂರ್ಣ ಪ್ರಾಪರ್ಟಿಯನ್ನು ಉಲ್ಲೇಖಿಸುತ್ತದೆ. ಉದಾಹರಣೆಗೆ, ನೀವು ನಿಮ್ಮ ಮನೆ ಅಥವಾ ಪ್ರತ್ಯೇಕ ವಿಲ್ಲಾವನ್ನು ಸಂರಕ್ಷಿಸಲು ಬಯಸುತ್ತಿದ್ದರೆ, ನಿಮ್ಮ ಸಂಪೂರ್ಣ ವಿಲ್ಲಾ ಕವರ್ ಆಗಲ್ಪಡುವ ‘ಕಟ್ಟಡ’ ವನ್ನು ಉಲ್ಲೇಖಿಸುತ್ತದೆ.

ಪ್ರಾಪರ್ಟಿ ಇನ್ಶೂರೆನ್ಸ್ ನ ಅಗತ್ಯ ಯಾರಿಗಿದೆ?

ಆದರ್ಶವಾಗಿ, ನೀವು ವಾಸವಾಗಿರುವ ಮನೆ ಅಥವಾ ನಿಮ್ಮ ಉದ್ಯಮಕ್ಕೆ ಬಳಸುವ ಕಛೇರಿ; ಯಾವುದೇ ರೀತಿಯ ಪ್ರಾಪರ್ಟಿಯನ್ನು ಹೊಂದಿದ ಪ್ರತಿಯೊಬ್ಬ ವ್ಯಕ್ತಿಗೂ ಇದೆ. ಒಂದು ಪ್ರಾಪರ್ಟಿ ಇನ್ಶೂರೆನ್ಸ್, ಅನಿರೀಕ್ಷಿತ ಘಟನೆಗಳಾದ  ನೈಸರ್ಗಿಕ ವಿಪತ್ತುಗಳು, ಸ್ಫೋಟ, ಬೆಂಕಿ ಅಥವಾ ಕಳ್ಳತನಗಳಿಂದ ಕೂಡಾ ಉಂಟಾಗಬಲ್ಲ ಭಾರೀ ಪ್ರಮಾಣದ ಹಾನಿ ಹಾಗೂ ನಷ್ಟಗಳಿಂದ, ಒಬ್ಬರನ್ನು ಕವರ್ ಮಾಡುತ್ತದೆ!

ಮನೆ ಮಾಲೀಕರು

ಅದು ಹಲವು ವರ್ಷಗಳಿಂದ ನಿಮ್ಮ ಮನೆಯಾಗಿದ್ದರೂ ಅಥವಾ ನಿಮ್ಮ ಹೊಸದಾದ ಕನಸಿನ ಮನೆಯಾಗಿದ್ದರೂ, ಮನೆಯು ಒಬ್ಬರ ಅತ್ಯಂತ ಬೆಲೆಬಾಳುವ ಆಸ್ತಿಯಾಗಿರುತ್ತದೆ. ಆದ್ದರಿಂದ ಅದನ್ನು ಅನಿರೀಕ್ಷಿತ ನಷ್ಟ ಹಾಗೂ ಹಾನಿಗಳಿಂದ ಸಂರಕ್ಷಿಸುವುದು ನಿಮ್ಮ ಸರ್ವಪ್ರಥಮ ಆದ್ಯತೆಯಾಗಿರಬೇಕು.

ಬಾಡಿಗೆದಾರರು

ಜನರು ಸಾಮಾನ್ಯವಾಗಿ, ಒಂದು ಕಳ್ಳತನ ಇನ್ಶೂರೆನ್ಸ್ ಇರುವುದು ಪ್ರಾಪರ್ಟಿಯ ಒಡೆತನ ಹೊಂದಿದವರಿಗೆ ಮಾತ್ರ, ಎಂದು ಭಾವಿಸುತ್ತಾರೆ. ಆದರೆ, ಡಿಜಿಟ್ ನಲ್ಲಿ ನಾವು ಬಾಡಿಗೆದಾರರಿಗೂ ಕಳ್ಳತನದ ಇನ್ಶೂರೆನ್ಸ್ ಅನ್ನು ಒದಗಿಸುತ್ತೇವೆ. ಆದ್ದರಿಂದ, ನೀವು ಬಾಡಿಗೆ ಅಪಾರ್ಟ್ಮೆಂಟ್ ನಲ್ಲಿದ್ದರೂ ಕಳ್ಳತನದ ಇನ್ಶೂರೆನ್ಸ್ ಮೂಲಕ ನಿಮ್ಮ ವಸ್ತುಗಳನ್ನು ಸಂರಕ್ಷಿಸಬಹುದಾಗಿದೆ.

ಸಣ್ಣ ಉದ್ಯಮದ ಮಾಲೀಕರು

ನೀವು ಒಂದು ಸಣ್ಣ ಜನರಲ್ ಸ್ಟೋರ್ ಅನ್ನು ನಡೆಸುತ್ತಿದ್ದರೂ ಅಥವಾ ಕರಕುಶಲಗಳ ಸಣ್ಣ ಬುಟೀಕ್ ಅನ್ನು ವ್ಯವಸ್ಥಿತ ಶೈಲಿಯಲ್ಲಿ ನಡೆಸುತ್ತಿದ್ದರೂ, ನಮ್ಮ ಕಳ್ಳತನದ ಇನ್ಶೂರೆನ್ಸ್ ಕವರೇಜ್ ಎಲ್ಲಾ ರೀತಿಯ ಉದ್ಯಮಗಳಿಗೆ ಸೂಕ್ತವಾಗಿದೆ. ನೀವು ಒಂದು ಸ್ವತಂತ್ರ, ಸಣ್ಣ ಉದ್ಯಮವನ್ನು ನಡೆಸುವವರಾಗಿದ್ದರೆ, ಕಳ್ಳತನದಿಂದ ಉಂಟಾಗುವ ಸಾಂಭವ್ಯ ಹಾನಿಗಳಿಂದ ಹಾಗೂ ನಷ್ಟಗಳಿಂದ ನಿಮ್ಮ ಉದ್ಯಮನ್ನು ರಕ್ಷಿಸುವುದು ಆವಶ್ಯಕ.

ಮಧ್ಯಮ ಉದ್ಯಮದ ಮಾಲೀಕರು

ನೀವು ಜನರಲ್ ಸ್ಟೊರ್ ಗಳ ಸರಣಿಯನ್ನು, ರೆಸ್ಟುರೆಂಟ್ ಗಳನ್ನು ಅಥವಾ ಮಧ್ಯಮ ಗಾತ್ರದ ಉದ್ಯಮವನ್ನು ನಡೆಸುತ್ತಿದ್ದರೆ; ನಮ್ಮ ಕಳ್ಳತನದ ಇನ್ಶೂರೆನ್ಸ್ ಕವರೇಜ್ ಮಧ್ಯಮ ಗಾತ್ರದ ಉದ್ಯಮ ಮಾಲೀಕರಿಗೆ ಕಳ್ಳತನದಿಂದ ಉಂಟಾಗಬಹುದಾದ ಯಾವುದೇ ಹಾನಿ ಅಥವಾ ನಷ್ಟಗಳನ್ನು ಕವರ್ ಮಾಡಲು ಸೂಕ್ತವಾಗಿದೆ; ಅದು ಎಷ್ಟೇ ದೊಡ್ಡದು ಅಥವಾ ಸಣ್ಣದಾಗಿದ್ದರೂ ಕೂಡಾ;

ದೊಡ್ಡ ಉದ್ಯಮಗಳು

ನಿಮ್ಮ ಉದ್ಯಮದ ದೊಡ್ಡ ಪ್ರಮಾಣದ ಕಾರ್ಯಾಚರಣೆಯಿಂದಾಗಿ ನೀವು ಹಲವು ಪ್ರಾಪರ್ಟಿಗಳನ್ನು ಹೊಂದಿದ್ದರೆ, ಕಳ್ಳತನದ ಇನ್ಶೂರೆನ್ಸ್ ಒಂದು ಮಾತ್ರವಲ್ಲ ನಿಮ್ಮ ಎಲ್ಲಾ ಪ್ರಾಪರ್ಟಿಗಳನ್ನು ಸಂರಕ್ಷಿಸುವಲ್ಲಿ ಅತೀ ಮುಖ್ಯವಾಗಿದೆ, ಇದು ನಿಮ್ಮ ಉದ್ಯಮದ ಅಪಾಯವನ್ನು ಕಡಿಮೆಗೊಳಿಸುವುದಲ್ಲದೆ, ನೀವು ಒಂದು ಜವಾಬ್ದಾರಿಯುತ ಉದ್ಯಮ ಮಾಲೀಕರೆಂಬ ಹೆಗ್ಗಳಿಕೆಯನ್ನೂ ನಿಮಗೆ ತಂದುಕೊಡುತ್ತದೆ.

ಕವರ್ ಆಗಿರುವ ಹೋಂ ಪ್ರಾಪರ್ಟಿ ಗಳ ವಿಧಗಳು

ಸ್ವತಂತ್ರ ಅಪಾರ್ಟ್ಮೆಂಟ್ ಗಳು

ಇದು, ಒಂದು ಹೌಸಿಂಗ್ ಸೊಸೈಟಿ ಅಥವಾ ಪ್ರತ್ಯೇಕ ಕಟ್ಟಡಗಳ ಭಾಗವಾಗಿರುವ  ಸ್ವತಂತ್ರ ಫ್ಲ್ಯಾಟ್ ನಲ್ಲಿ ವಾಸಿಸುವವರಿಗೆ ಆಗಿದೆ. ಈ ಫ್ಲ್ಯಾಟ್ ನಿಮ್ಮ ಸ್ವಂತದ್ದಾಗಿರಬಹುದು ಅಥವಾ ಬಾಡಿಗೆಯದ್ದಾಗಿರಬಹುದು. ನಮ್ಮ ಉತ್ಪನ್ನವು ಎರಡಕ್ಕೂ ಸೂಕ್ತವಾಗಿದೆ!

 

ಸ್ವತಂತ್ರ ಕಟ್ಟಡ

ಬಹುಶಃ ನೀವು ಸಂಪೂರ್ಣ ಕಟ್ಟಡದಲ್ಲಿ ಫ್ಲ್ಯಾಟ್ಗಳ ಒಡೆತ ಹೊಂದಿದ್ದು, ಅವುಗಳನ್ನು ಬಾಡಿಗೆಗೆ ನೀಡುತ್ತಾ, ನಿಮ್ಮ ವಿಸ್ತೃತ ಕುಟುಂಬದೊಂದಿಗೆ ಒಂದು ಪ್ರತ್ಯೇಕ ಕಟ್ಟಡದಲ್ಲಿ ವಾಸವಾಗಿರಬಹುದು. ಈ ಸಂದರ್ಭದಲ್ಲಿ, ನೀವು ಎಲ್ಲವನ್ನೂ ಕವರ್ ಮಾಡಲು ಡಿಜಿಟ್ ನ ಪ್ರಾಪರ್ಟಿ ಇನ್ಶೂರೆನ್ಸ್ ಅನ್ನು ಪಡೆಯಬಹುದು.

ಸ್ವತಂತ್ರ ಮನೆ

ನೀವು ಒಂದು ಸ್ವತಂತ್ರ ವಿಲ್ಲಾ ಅಥವಾ ಮನೆಯನ್ನು ಹೊಂದಿದ್ದರೆ ಅಥವಾ ಬಾಡಿಗೆಗೆ ಪಡೆದಿದ್ದರೆ, ನಿಮ್ಮ ವಿಲ್ಲಾ ಹಾಗೂ ಅದರಲ್ಲಿರುವ ವಸ್ತುಗಳನ್ನು ಅನಿರೀಕ್ಷಿತ ಘಟನೆಗಳಾದ ಕಳ್ಳತನ, ಪ್ರವಾಹಗಳು, ಬಿರುಗಾಳಿಗಳು ಇತ್ಯಾದಿಗಳಿಂದ ಕಾಪಾಡುವುದು ಆವಶ್ಯಕವಾಗಿದೆ.

ಕವರ್ ಆಗಿರುವ ಅಂಗಡಿ ಹಾಗೂ ಉದ್ಯಮದ ಪ್ರಾಪರ್ಟಿಗಳ ವಿಧಗಳು

ಮೊಬೈಲ್, ಆಟೋಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳು

ಪ್ರಾಥಮಿಕವಾಗಿ ಆಟೊಮೊಬೈಲ್ ಗಳನ್ನು, ಮೊಬೈಲ್ ಫೋನ್ ಗಳನ್ನು, ಮೊಬೈಲ್ ಫೋನ್ ಉಪಕರಣಗಳನ್ನು ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುವ ಉದ್ಯಮಗಳು. ಕ್ರೋಮಾ, ವನ್ ಪ್ಲಸ್, ರೆಡ್ಮಿ ಇತ್ಯಾದಿಗಳು ಇಂತಹ ಪ್ರಾಪರ್ಟಿಗಳಿಗೆ ಉತ್ತಮ ಉದಾಹರಣೆಗಳಾಗಿವೆ. ಇಂತಹ ಸಂದರ್ಭದಲ್ಲಿ ಒಂದು ಕಳ್ಳತನದ ಇನ್ಶೂರೆನ್ಸ್ ಕವರೇಜ್ ನಿಮ್ಮ ಅಂಗಡಿ ಹಾಗೂ ಅದರ ಪ್ರಾಥಮಿಕ ವಸ್ತುಗಳನ್ನು ಕಳ್ಳತನದಿಂದ ಉಂಟಾಗಬಹುದಾದ ಯಾವುದೇ ಸಂಭಾವ್ಯ ಹಾನಿ ಅಥವಾ ನಷ್ಟಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ.

ದಿನಸಿ, ಜನರಲ್ ಹಾಗೂ ಸ್ಟೇಷನರಿ ಅಂಗಡಿಗಳು

ನಿಮ್ಮ ನೆರೆಕರೆಯ ದಿನಸಿ ಅಂಗಡಿಳಿಂದ ಹಿಡಿದು ನಿಮ್ಮ ಬಜೆಟ್ ಸ್ನೇಹಿ ಸೂಪರ್ ಮಾರ್ಕೆಟ್ ಹಾಗೂ ಜನರಲ್ ಸ್ಟೋರ್ ಗಳ ವರೆಗೆ; ಎಲ್ಲಾ ದಿನಸಿ ಅಂಗಡಿಗಳು ಹಾಗೂ ಜನರಲ್ ಸ್ಟೋರ್ ಗಳು ಕೂಡಾ ಕಳ್ಳತನದ ಇನ್ಶೂರೆನ್ಸ್ ನಲ್ಲಿ ಕವರ್ ಆಗುತ್ತವೆ. ಬಿಗ್ ಬಜಾರ್, ಸ್ಟಾರ್ ಬಜಾರ್, ರಿಲಯನ್ಸ್ ಸೂಪರ್ಮಾರ್ಕೆಟ್ ಗಳಂತಹ ಅಂಗಡಿಗಳು ಇದಕ್ಕೆ ಕೆಲ ಸಾಮಾನ್ಯ ಉದಾಹರಣೆಗಳಾಗಿವೆ. 

ಕಛೇರಿಗಳು ಹಾಗೂ ಶೈಕ್ಷಣಿಕ ಸ್ಥಳಗಳು

ನಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯ ಈ ವರ್ಗವು ಕಛೇರಿಗಳು ಹಾಗೂ ಶೈಕ್ಷಣಿಕ ಸ್ಥಳಗಳಾದ ಕಾಲೇಜ್ ಗಳು, ಶಾಲೆಗಳು ಕೋಚಿಂಗ್ ಕ್ಲಾಸ್ ಗಳು ಇತ್ಯಾದಿಗಳಿಗೆ ಹೊಂದುವಂತೆ ವಿನ್ಯಾಸಗೊಳೀಸಲಾಗಿದೆ. ಇಂತಹ ಪ್ರಾಪರ್ಟಿ ಗಳನ್ನು ಕಳ್ಳತನದಿಂದ ಇನ್ಶೂರ್ ಮಾಡುವುದು ನಷ್ಟಗಳನ್ನು ಕವರ್ ಮಾಡುವುದಕ್ಕಾಗಿ ಮಾತ್ರವಲ್ಲದೆ, ನೌಕರರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿಮ್ಮ ಅಯಾ ಸಂಸ್ಥೆಯ ಪ್ರತಿ ಹೆಚ್ಚಿನ ವಿಶ್ವಾಸವನ್ನು ಬೆಳೆಸಲೂ ಮುಖ್ಯವಾಗಿದೆ.

ಮನೆ ರಿಪೇರಿಗಳು ಹಾಗೂ ಮನೆಗೆಲಸದ ಸೇವೆಗಳು

ಉದ್ಯಮದ ಈ ವರ್ಗವು ಮರಗೆಲಸ ಹಾಗೂ ಪ್ಲಂಬಿಂಗ್ ರಿಪೇರಿಗಳಿಂದ ಹಿಡಿದು ಮೋಟಾರ್ ಗ್ಯಾರೇಜ್ ಹಾಗೂ ಎಂಜಿನೀರಿಂಗ್ ವರ್ಕ್ಷಾಪ್ ಗಳ ವರೆಗೆ ಇವೆಲ್ಲವನ್ನೂ ಕಳ್ಳತನದ ಅಪಾಯದಿಂದ ರಕ್ಷಿಸಬಹುದು. 

ವೈಯಕ್ತಿಕಗೃಹ, ಲೈಫ್ಸ್ಟೈಲ್ ಹಾಗೂ ಫಿಟ್‌ನೆಸ್

ನಿಮ್ಮ ನೆಚ್ಚಿನ ಮಾಲ್ ಗಳು ಹಾಗೂ ಬಟ್ಟೆ ಮಳಿಗೆಗಳಿಂದ ಹಿಡಿದು ಸ್ಪಾ ಗಳು, ಜಿಮ್ ಗಳು ಹಾಗೂ ಇತರ ಮಳಿಗೆಗಳವರೆಗೆ; ಡಿಜಿಟ್ ನ ಪ್ರಾಪರ್ಟಿ ಇನ್ಶೂರೆನ್ಸ್ ಅನ್ನು ಕವರ್ ಮಾಡುವ ಕಳ್ಳತನದ ಇನ್ಶೂರೆನ್ಸ್ ವೈಯಕ್ತಿಕಲೈಫ್ಸ್ಟೈಲ್ ಹಾಗೂ ಫಿಟ್‌ನೆಸ್ ವಿಭಾಗದ ಎಲ್ಲಾ ಉದ್ಯಮಗಳನ್ನೂ ಕವರ್ ಮಾಡುತ್ತದೆ. ಎನ್ರಿಚ್ ಸೆಲೋನ್, ಕಲ್ಟ್ ಫಿಟ್‌ನೆಸ್ ಕೇಂದ್ರಗಳು, ಫೀನಿಕ್ಸ್ ಮಾರ್ಕೆಟ್ ಸಿಟಿ ಹಾಗೂ ಇತರ ಅಂಗಡಿಗಳು ಇದಕ್ಕೆ ಉದಾಹರಣೆಗಳಾಗಿವೆ.

ಆಹಾರ ಹಾಗೂ ತಿಂಡಿತಿನಿಸುಗಳು

ಎಲ್ಲರೂ ಹೊಟ್ಟೆ ತುಂಬಿಸಿಕೊಳ್ಳುವ ಆ ಸ್ಥಳ! ಕ್ಯಾಫೆ, ಫೂಡ್ ಟ್ರಕ್ ಗಳಿಂದ ಹಿಡಿದು ರೆಸ್ಟುರೆಂಟ್ ಸರಣಿಗಳು, ಬೇಕರಿಗಳ ವರೆಗೆ; ನಮ್ಮ ಕಳ್ಳತನದ ಇನ್ಶೂರೆನ್ಸ್ ಎಲ್ಲಾ ರೀತಿಯ ಉಪಹಾರ ಗೃಹಗಳಿಗೂ ಉತ್ತಮವಾಗಿ ಹೊಂದಿಕೊಳ್ಳುತ್ತವೆ. ಇಂತಹ ಪ್ರಾಪರ್ಟಿಗಳಿಗೆ ಕೆಲ ಉದಾಹರಣೆಗಳೆಂದರೆ ಫೂಡ್ ಕೋರ್ಟ್ ನಲ್ಲಿರುವ ರೆಸ್ಟುರೆಂಟ್ ಗಳು, ಚಾಯ್ ಪಾಯಿಂಟ್ ಅಥವಾ ಚಾಯೋಸ್ ನಂತಹ ಚಹಾದ ಅಂಗಡಿಗಳು, ಫಾಸ್ಟ್ ಫೂಡ್ ಕೇಂದ್ರಗಳಾದ ಬರ್ಗರ್ ಕಿಂಗ್ ಹಾಗೂ ಪಿಜ್ಜಾ ಹಟ್ ಕೂಡಾ.

ಆರೋಗ್ಯ

ಕಳ್ಳತನ ಹಾಗೂ ಇತರ ಅಪಾಯಗಳಾದ ಬೆಂಕಿ ಅಥವಾ ನೈಸರ್ಗಿಕ ವಿಪತ್ತುಗಳಿಂದ ಸಂರಕ್ಷಣೆ ಪಡೆಯಬೇಕಾದ ಒಂದು ಪ್ರಮುಖ ಪ್ರಾಪರ್ಟಿ ಇದಾಗಿದೆ; ಡಿಜಿಟ್ ನ ಪ್ರಾಪರ್ಟಿ ಇನ್ಶೂರೆನ್ಸ್ ಆಸ್ಪತ್ರೆಗಳನ್ನು, ಕ್ಲಿನಿಕ್ ಗಳನ್ನು, ಡಯಾಗ್ನಾಸ್ಟಿಕ್ ಕೇಂದ್ರಗಳನ್ನು, ಫಾರ್ಮಸಿ ಹಾಗೂ ಇತರ ಮೆಡಿಕಲ್ ಸ್ಟೋರ್ ಗಳನ್ನು ಕೂಡಾ ಕವರ್ ಮಾಡುತ್ತದೆ.

ಸೇವೆಗಳು ಹಾಗೂ ಇತರ

ಮೇಲೆ ಉಲ್ಲೇಖಿಸಿರುವ ವರ್ಗಗಳನ್ನು ಹೊರತುಪಡಿಸಿ, ಡಿಜಿಟ್ ನ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯ ಭಾಗವಾದ ಕಳ್ಳತನದ ಇನ್ಶೂರೆನ್ಸ್ ಕವರೇಜ್ ಎಲ್ಲಾ ಗಾತ್ರದ ಹಾಗೂ ಸ್ವರೂಪದ ಉದ್ಯಮಗಳಿಗೆ ಸೂಕ್ತವಾಗಿದೆ. ಈ ಪಟ್ಟಿಯಲ್ಲಿ ನೀವು ನಿಮ್ಮ ವರ್ಗವನ್ನು ಕಾಣದೇ ಇದ್ದರೆ, ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನಾವು ನಿಮ್ಮ ಮನೆ ಹಾಗೂ ಉದ್ಯಮಕ್ಕೆ ಉತ್ತಮವಾಗಿ ಹೊಂದುವ ಪ್ರಾಪರ್ಟಿ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತೇವೆ. 

ಭಾರತದಲ್ಲಿ ಪ್ರಾಪರ್ಟಿ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಭಾರತದಲ್ಲಿ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು