ಆನ್ಲೈನ್ನಲ್ಲಿ ಹೋಮ್ ಇನ್ಶೂರೆನ್ಸ್ ₹150/ವರ್ಷಕ್ಕೆ ರಿಂದ ಪ್ರಾರಂಭವಾಗುತ್ತದೆ*


Zero
Documentation
Quick Claim
Process
Affordable
Premium
,
Zero
Documentation
Quick Claim
Process
Affordable
Premium
,
ಹೋಮ್ ಇನ್ಶೂರೆನ್ಸ್ ಎಂದರೇನು?
ಹೋಮ್ ಇನ್ಶೂರೆನ್ಸ್ ಎನ್ನುವುದು, ನಿಮ್ಮ ಸ್ವಂತ ಮನೆ ಅಥವಾ ಬಾಡಿಗೆ ಅಪಾರ್ಟ್ಮೆಂಟ್ ಮತ್ತು ಅದರೊಳಗಿರುವ ನಿಮ್ಮ ವೈಯಕ್ತಿಕ ವಸ್ತುಗಳನ್ನು ಬೆಂಕಿ, ಪ್ರವಾಹಗಳು, ಬಿರುಗಾಳಿ ಮತ್ತು ಸ್ಫೋಟಗಳಂತಹ ಅನಿರೀಕ್ಷಿತ ಸಂದರ್ಭಗಳಿಂದ ರಕ್ಷಿಸಲು ನಿಮಗೆ ಸಹಾಯ ಮಾಡುವ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯಾಗಿದೆ.
ಮನೆಯನ್ನು ಖರೀದಿಸುವುದು ಎಂದರೆ ಅದು ಪ್ರಮುಖ ಹೂಡಿಕೆಗಳಲ್ಲಿ ಒಂದಾಗಿದೆ. ಅದಕ್ಕಾಗಿ ಜನರು ತಮ್ಮ ಜೀವನದುದ್ದಕ್ಕೂ ಕೆಲಸ ಮಾಡುತ್ತಾರೆ. ಇನ್ನೂ ಅದೆಷ್ಟೋ ಜನ ತಮ್ಮ ಜೀವನದಲ್ಲಿ ಈ ಪ್ರಮುಖ ಹೂಡಿಕೆಯನ್ನು ಸುರಕ್ಷಿತವಾಗಿರಿಸಲು ಮತ್ತು ರಕ್ಷಿಸಲು ಮರೆಯುತ್ತಾರೆ. ನಿಮ್ಮ ಅತ್ಯಾಧುನಿಕ ಗ್ಯಾಜೆಟ್ಗಳು ಮತ್ತು ಸುಂದರವಾದ ಒಳಾಂಗಣದಿಂದ ಹಿಡಿದು ನಿಮ್ಮ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳವರೆಗೆ; ನಿಮ್ಮ ಮನೆ ಕೇವಲ ಒಂದು ಫಿಸಿಕಲ್ ಪ್ರಾಪರ್ಟಿಯಾಗಿರದೆ, ಅದಕ್ಕಿಂತಲೂ ಹೆಚ್ಚಾಗಿರುತ್ತದೆ ಮತ್ತು ನೀವು ಊಹಿಸುವುದಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ.
ಅದಕ್ಕಾಗಿಯೇ, ನಿಮ್ಮ ಮನೆಯ ಯೋಗಕ್ಷೇಮ ಮತ್ತು ಸುರಕ್ಷತೆಗಾಗಿ ನೀವು ಮಾಡಬಹುದಾದ ಅತ್ಯಂತ ಅವಶ್ಯಕವಾದ ಒಂದು ವಿಷಯವೆಂದರೆ, ಕನಿಷ್ಠ ಹೋಮ್ ಇನ್ಶೂರೆನ್ಸ್ ಅನ್ನು ಪಡೆಯುವುದು. ಅದು ನೀವು ಸುರಕ್ಷಿತವಾಗಿರಲು ಕಳ್ಳತನ, ಪ್ರವಾಹಗಳಂತಹ ಅನಿಶ್ಚಿತ ಮತ್ತು ದುರದೃಷ್ಟಕರ ಸಂದರ್ಭಗಳಲ್ಲಿ ನಿಮಗೆ ರಕ್ಷಣೆ ನೀಡಲು ಅನುವು ಮಾಡಿಕೊಡುತ್ತದೆ. ಹಾಗೂ ಸಂಭವನೀಯವಾಗಿದ್ದರೂ ಅನಿರೀಕ್ಷಿತ ಸಂದರ್ಭಗಳಲ್ಲಿ ಎದುರಾಗುವ ಬೆಂಕಿ, ಮತ್ತು ಭೂಕಂಪಗಳಿಂದ ನಿಮ್ಮ ಮನೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಆಭರಣಗಳಂತಹ ಬೆಲೆಬಾಳುವ ವಸ್ತುಗಳ ಐಚ್ಛಿಕ ಆಡ್-ಆನ್ನೊಂದಿಗೆ ನಮ್ಮ ಗೋ ಡಿಜಿಟ್, ಭಾರತ್ ಗೃಹ ರಕ್ಷಾ ಪಾಲಿಸಿಯು ನಿಮ್ಮ ಮನೆ ಮತ್ತು ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ.
ನಿಮ್ಮ ಮನೆಯು ಕಳ್ಳತನಗಳ ವಿರುದ್ಧವೂ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು, ನೀವು ನಿಮ್ಮ ಗೃಹ ವಿಮಾ ಪಾಲಿಸಿಯೊಂದಿಗೆ ಡಿಜಿಟ್ ಕಳ್ಳತನದ ಇನ್ಶೂರೆನ್ಸ್ ಪಾಲಿಸಿಯನ್ನು (UIN - IRDAN158RP0019V01201920) ಕಂಬೈನ್ ಮಾಡಬಹುದು..
ನಾನೇಕೆ ಹೋಮ್ ಇನ್ಶೂರೆನ್ಸ್ ಅನ್ನು ಪಡೆಯಬೇಕು ?
ಹೋಮ್ ಇನ್ಶೂರೆನ್ಸ್ ಅಗತ್ಯತೆಯ ಬಗ್ಗೆ ನೀವು ಇನ್ನೂ ಗೊಂದಲದಲ್ಲಿದ್ದರೆ,ಇದನ್ನು ಓದಿ…
ಡಿಜಿಟ್ ನ ಹೋಮ್ ಇನ್ಶೂರೆನ್ಸ್ ನಲ್ಲಿ ಏನು ಉತ್ತಮವಾಗಿದೆ?
ಡಿಜಿಟ್ನ ಹೋಮ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?
ಸೂಚನೆ : ಭಾರತದಲ್ಲಿ, ಕಳ್ಳತನಗಳು ಸಾಮಾನ್ಯವಾಗಿದೆ. ನಿಮ್ಮ ವಾಸಸ್ಥಳವನ್ನು ಕಳ್ಳತನಗಳ ವಿರುದ್ಧ ಸುರಕ್ಷಿತವಾಗಿರಿಸಲು ನೀವು ಡಿಜಿಟ್ ಕಳ್ಳತನ ಇನ್ಶೂರೆನ್ಸ್ ಪಾಲಿಸಿಯೊಂದಿಗೆ (UIN: IRDAN158RP0019V01201920) ಹೋಮ್ ಇನ್ಶೂರೆನ್ಸ್ ಪಾಲಿಸಿಯನ್ನು ಸಂಯೋಜಿಸಲು ಆಯ್ಕೆ ಮಾಡಬಹುದು.
ಹೋಮ್ ಇನ್ಶೂರೆನ್ಸಿನ ವಿಧಗಳು
ಆಯ್ಕೆ 1 |
ಆಯ್ಕೆ 2 |
ಆಯ್ಕೆ 3 |
ನಿಮ್ಮ ಮನೆಯೊಳಗಿನ ಕಂಟೆಂಟ್ಗಳನ್ನು (ಅಂದರೆ ವೈಯಕ್ತಿಕ ವಸ್ತುಗಳು) ಮಾತ್ರ ಕವರ್ ಮಾಡುತ್ತದೆ. |
ನಿಮ್ಮ ಮನೆಯ ಕಟ್ಟಡ ಮತ್ತು ಕಂಟೆಂಟ್ಗಳು ಎರಡನ್ನೂ ಕವರ್ ಮಾಡುತ್ತದೆ. |
ನಿಮ್ಮ ಮನೆಯ ಆಸ್ತಿ ಹಾಗೂ ನಿಮ್ಮ ಮನೆಯ ಕಂಟೆಂಟ್ಗಳು ಮತ್ತು ಆಭರಣಗಳನ್ನು ಕವರ್ ಮಾಡುತ್ತದೆ. |
ಹೋಮ್ ಇನ್ಶೂರೆನ್ಸ್ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು
ಕಟ್ಟಡ/ರಚನೆ : ಹೋಮ್ ಇನ್ಶೂರೆನ್ಸ್ನಲ್ಲಿ, ಕಟ್ಟಡವು ನಿಮ್ಮ ಮನೆಯ ಫಿಸಿಕಲ್ ಅಂಶವನ್ನು ಸೂಚಿಸುತ್ತದೆ.
- ವಿಷಯ : ವಿಷಯ ಎನ್ನುವುದು ನಿಮ್ಮ ಮನೆಯಲ್ಲಿರುವ ವೈಯಕ್ತಿಕ ವಸ್ತುಗಳನ್ನು ಸೂಚಿಸುತ್ತದೆ. ಆದ್ದರಿಂದ, ಮನೆಯ ಪೀಠೋಪಕರಣಗಳಂತಹ ವಿಷಯಗಳು, ನಿಮ್ಮ ಹೋಮ್ ಇನ್ಶೂರೆನ್ಸ್ನಲ್ಲಿ ಕವರ್ ಆಗುತ್ತದೆ
ಹೋಮ್ ಇನ್ಶೂರೆನ್ಸ್ನೊಂದಿಗೆ ನಿಮ್ಮ ಮನೆಯನ್ನು ರಕ್ಷಿಸುವ ಪ್ರಯೋಜನಗಳು ಯಾವುವು?
ಹೋಮ್ ಇನ್ಶೂರೆನ್ಸ್ ಅನ್ನು ಯಾರು ಪಡೆಯಬೇಕು?
ಕವರ್ ಆಗುವ ಮನೆಗಳ ವಿಧಗಳು
ಸ್ವತಂತ್ರ ಒಡೆತನದ ಮನೆಗಳಿಂದ ಹಿಡಿದು ಬಾಡಿಗೆ ಅಪಾರ್ಟ್ಮೆಂಟ್ಗಳವರೆಗೆ; ಡಿಜಿಟ್ನಿಂದ ಹೋಮ್ ಇನ್ಶೂರೆನ್ಸ್ ಅನ್ನು ಎಲ್ಲಾ ರೀತಿಯ ಮನೆಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ.
ಹೋಮ್ ಇನ್ಶೂರೆನ್ಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು
ಹೋಮ್ ಇನ್ಶೂರೆನ್ಸ್ ಪ್ಲ್ಯಾನ್ ಏಕೆ ಮುಖ್ಯ?
ನಿಮ್ಮ ಜೀವನದ ಪ್ರಮುಖ ವಿಷಯಗಳಲ್ಲಿ ನಿಮ್ಮ ಮನೆಯು ಒಂದಾಗಿದೆ. ಇದು ನಿಮ್ಮ ಜೀವನದ ಅತ್ಯಗತ್ಯವಾದ ವಿಷಯವಷ್ಟೇ ಆಗಿರದೆ, ಅನೇಕರಿಗೆ ಮನೆಯೆನ್ನುವುದು ಜೀವನದ ದೊಡ್ಡ ಹೂಡಿಕೆಗಳಲ್ಲಿ ಒಂದಾಗಿದೆ.
ಆದ್ದರಿಂದ, ನೀವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ನಿಮ್ಮ ಮನೆಯನ್ನು ಎಲ್ಲದರಿಂದ ಸುರಕ್ಷಿತವಾಗಿರಿಸಿಕೊಳ್ಳಿ. ಹೋಮ್ ಇನ್ಶೂರೆನ್ಸಿನಿಂದ ಕಳ್ಳತನವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ, ಆದರೆ ಇದು ಯಾವುದೇ ಸಮಯದಲ್ಲಿ ನಷ್ಟ ಮತ್ತು ಹಾನಿಗಳಿಂದ ಚೇತರಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ!
ಕಳ್ಳತನಗಳು, ಬೆಂಕಿ, ಪ್ರವಾಹಗಳು, ಬಿರುಗಾಳಿಗಳು ಮತ್ತು ಭೂಕಂಪಗಳಂತಹ ಸಂದರ್ಭದಲ್ಲಿ ನಿಮ್ಮ ಮನೆಗೆ ಸಂಭವಿಸಬಹುದಾದ ಅನಿಶ್ಚಿತ ಮತ್ತು ಅನಿರೀಕ್ಷಿತ ನಷ್ಟಗಳು ಮತ್ತು ಹಾನಿಗಳನ್ನು ಮ್ಯಾನೇಜ್ ಮಾಡಲು ಹೋಮ್ ಇನ್ಶೂರೆನ್ಸ್ ಪ್ಲ್ಯಾನ್ ಮುಖ್ಯವಾಗಿದೆ.
ನಾನು ಹೋಮ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆನ್ಲೈನ್ನಲ್ಲಿ ಏಕೆ ಖರೀದಿಸಬೇಕು?
ನಿಮ್ಮ ಮನೆಯನ್ನು ಭದ್ರಪಡಿಸಿಕೊಳ್ಳುವುದು ತಮಾಷೆಯಲ್ಲ! ಈ ರೀತಿಯ ಮುಖ್ಯವಾದ ನಿರ್ಧಾರಗಳಿಗಾಗಿ, ಸಾಧ್ಯವಾದಷ್ಟು ಉತ್ತಮ ಆಯ್ಕೆಯನ್ನು ಮಾಡಲು ಸಮಯ ಮತ್ತು ಮನಃಶಾಂತಿಯನ್ನು ಹೊಂದುವುದು ಯಾವಾಗಲೂ ಉತ್ತಮ.
ಆನ್ಲೈನ್ ಹೋಮ್ ಇನ್ಶೂರೆನ್ಸಿನೊಂದಿಗೆ , ಇದನ್ನು ಮಾಡುವುದು ತುಂಬಾ ಸುಲಭವಾಗುತ್ತದೆ. ನಿಮ್ಮ ಮನೆಯ ಸೌಕರ್ಯದಲ್ಲಿಯೇ ನೀವು ಆನ್ಲೈನ್ನಲ್ಲಿ ವಿವಿಧ ಹೋಮ್ ಇನ್ಶೂರೆನ್ಸ್ ಪ್ಲ್ಯಾನ್ಗಳನ್ನು ಮೌಲ್ಯಮಾಪನ ಮಾಡಬಹುದು ಮತ್ತು ಹೋಲಿಸಬಹುದು ಹಾಗೂ ಅದಕ್ಕನುಗುಣವಾಗಿ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಇದಲ್ಲದೆ, ಆನ್ಲೈನ್ನಲ್ಲಿ ಹೋಮ್ ಇನ್ಶೂರೆನ್ಸ್ನೊಂದಿಗೆ, ನಿಮ್ಮ ಪಾಲಿಸಿಯನ್ನು ಖರೀದಿಸುವುದು, ನಿಮ್ಮ ಪ್ಲ್ಯಾನ್ ಅನ್ನು ಕಸ್ಟಮೈಸ್ ಮಾಡುವುದು ಮತ್ತು ಡಾಕ್ಯೂಮೆಂಟ್ಗಳನ್ನು ಮ್ಯಾನೇಜ್ ಮಾಡುವುದು, ಎಲ್ಲವನ್ನೂ ಆನ್ಲೈನ್ನಲ್ಲಿ ಮಾಡಬಹುದು. ಇದರಲ್ಲಿ ಯಾವುದೇ ತೊಂದರೆಗಳಿಲ್ಲ ಮತ್ತು ಅತಿಮುಖ್ಯವಾಗಿ, ಯಾವುದೇ ಅನಗತ್ಯ ಪೇಪರ್ವರ್ಕ್ ಇಲ್ಲ!
ಹೋಮ್ ಇನ್ಶೂರೆನ್ಸ್ನ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು
ನಿಮ್ಮ ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಕೆಲವು ಅಂಶಗಳು ಇಲ್ಲಿವೆ:
ಮನೆಯ ಪ್ರಕಾರ - ನಿಮ್ಮ ಮನೆ ನಿಮ್ಮ ಸ್ವಂತ ಆಸ್ತಿಯೇ ಅಥವಾ ಬಾಡಿಗೆಗೆ ತೆಗೆದುಕೊಂಡಿದ್ದೆ? ಇದು ಕಟ್ಟಡದಲ್ಲಿರುವ ಅಪಾರ್ಟ್ಮೆಂಟ್ ಆಗಿದೆಯೇ ಅಥವಾ ಸ್ವತಂತ್ರ ಬಂಗಲೆಯೇ? ನಿಮ್ಮ ಮನೆ ಸ್ವಂತದ್ದಾಗಿರಲಿ ಅಥವಾ ಇಲ್ಲದಿರಲಿ, ನೀವು ವಾಸಿಸುವ ಮನೆಯ ಪ್ರಕಾರವು, ನಿಮ್ಮ ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ನಿಮ್ಮ ಮನೆ ಎಷ್ಟು ಹಳೆಯದು - ಯಾವುದೇ ಇತರ ಇನ್ಶೂರೆನ್ಸ್ ಪಾಲಿಸಿಯಂತೆ, ಪ್ರೀಮಿಯಂ ಬೆಲೆಗಳನ್ನು ನಿರ್ಧರಿಸುವಲ್ಲಿ ವಯಸ್ಸು ಒಂದು ಪ್ರಮುಖ ಅಂಶವಾಗಿದೆ.
ನಿಮ್ಮ ಮನೆ ಎಷ್ಟು ದೊಡ್ಡದಾಗಿದೆ - ನಿಮ್ಮ ಮನೆಯ ಚದರ ಅಡಿ (ಸ್ಕ್ವೇರ್ ಫೀಟ್) ವಿಸ್ತೀರ್ಣವು, ನಿಮ್ಮ ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಹೆಚ್ಚಿನ ಮತ್ತು ನೇರ ಪರಿಣಾಮ ಬೀರುತ್ತದೆ. ಏಕೆಂದರೆ ದೊಡ್ಡ ಮನೆಯು ಹೆಚ್ಚಿನ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುತ್ತದೆ ಮತ್ತು ಅದರಿಂದ ಕ್ರಮವಾಗಿ ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಿರುತ್ತದೆ.
ಮನೆಯ ಸುರಕ್ಷತಾ ಕ್ರಮಗಳು - ನಾವೆಲ್ಲರೂ ನಮ್ಮ ಮನೆಗಳ ಸುರಕ್ಷತೆಯ ಬಗ್ಗೆ ಕಾಳಜಿ ಹೊಂದಿದ್ದೇವೆ. ಆದ್ದರಿಂದ ನಾವು ಮನೆಯ ಬಗ್ಗೆ ಜಾಗೃತರಾಗುತ್ತೇವೆ ಮತ್ತು ನಮ್ಮ ಮನೆಯ ಜಾಗದ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇದು ನಿಮ್ಮ ಮನೆ ದರೋಡೆಯಾಗುವ ಅಪಾಯವನ್ನು ಕಡಿಮೆ ಮಾಡುವುದರಿಂದ ಅಥವಾ ಬೆಂಕಿಯನ್ನು ತಡೆಯಲು ಸಹಾಯ ಮಾಡುವುದರಿಂದ, ಇದು ನಿಮ್ಮ ಹೋಮ್ ಇನ್ಶೂರೆನ್ಸ್ ಪ್ರೀಮಿಯಂನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಮತ್ತು ಕಡಿಮೆ ಆಗುತ್ತದೆ.
ಹೆಚ್ಚುವರಿ ವ್ಯಾಪ್ತಿಗಳು - ಒಂದು ಬೇಸಿಕ್ ಹೋಮ್ ಇನ್ಶೂರೆನ್ಸ್ ಪ್ಲ್ಯಾನ್, ನಿಮ್ಮ ಮನೆ ಮತ್ತು ನಿಮ್ಮ ವೈಯಕ್ತಿಕ ವಸ್ತುಗಳನ್ನು ಮಾತ್ರ ಕವರ್ ಮಾಡುತ್ತದೆ. ಆದರೆ ಆಭರಣಗಳನ್ನು ಕವರ್ ಮಾಡುವುದಿಲ್ಲ. ಆ ಮೂಲಕ, ಕೆಲವು ಹೋಮ್ ಇನ್ಶೂರೆನ್ಸ್ಗಳು ಸ್ಟ್ಯಾಂಡರ್ಡ್ ಪ್ಲ್ಯಾನ್ ಅನ್ನು ಮೀರಿದ ವಸ್ತುಗಳಿಗೆ, ಹೆಚ್ಚುವರಿ ಕವರ್ಗಳನ್ನು ನೀಡುತ್ತವೆ. ಇದು ವ್ಯಕ್ತಿಯೊಬ್ಬನ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ.
ಹೋಮ್ ಇನ್ಶೂರೆನ್ಸ್ ಪ್ಲ್ಯಾನ್ಗಳನ್ನು ಕಂಪೇರ್ ಮಾಡಲು ಸಲಹೆಗಳು
ನೀವು ಹೋಮ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ನಿರ್ಧಾರ ಮಾಡುವಾಗ, ನಿಮ್ಮ ಮನೆಗೆ ಸರಿಯಾದ ಪ್ಲ್ಯಾನ್ ಅನ್ನು ಆಯ್ಕೆ ಮಾಡಲು ನೀವು ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳು ಹೀಗಿವೆ:
ಕವರೇಜ್ ಪ್ರಯೋಜನಗಳು - ನಿಮ್ಮ ಹೋಮ್ ಇನ್ಶೂರೆನ್ಸ್ನ ಪ್ರಮುಖ ಭಾಗವೆಂದರೆ ನೀವು ಪಡೆಯುತ್ತಿರುವ ಕವರೇಜ್. ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ನೀವು ಏನನ್ನು ಕವರ್ ಮಾಡುತ್ತೀರಿ ಎಂಬುದನ್ನು ತಿಳಿದುಕೊಳ್ಳಬೇಕು. ಆದ್ದರಿಂದ, ಯಾವಾಗಲೂ ನಿಮಗೆ ಅತ್ಯಮೂಲ್ಯ ಪ್ಲ್ಯಾನ್ ಅನ್ನು ಸರಿಯಾಗಿ ಪರಿಶೀಲಿಸಲು ಸಹಾಯ ಮಾಡುವ ಯಾವುದನ್ನು ಒಳಗೊಂಡಿದೆ ಮತ್ತು ಯಾವುದನ್ನು ಒಳಗೊಂಡಿಲ್ಲ ಎಂಬುದನ್ನು ನೋಡಿ.
ಇನ್ಶೂರೆನ್ಸ್ ಮೊತ್ತ - ನಿಮ್ಮ ಹೋಮ್ ಇನ್ಶೂರೆನ್ಸ್ನಲ್ಲಿನ ನಿಮ್ಮ ಇನ್ಶೂರೆನ್ಸ್ ಮೊತ್ತವು, ನೀವು ಮಾಡುವ ಕ್ಲೈಮ್ನ ಸಂದರ್ಭದಲ್ಲಿ ನೀವು ಪಡೆಯಬಹುದಾದ ಒಟ್ಟು ಮೊತ್ತವನ್ನು ಸೂಚಿಸುತ್ತದೆ. ಆದ್ದರಿಂದ, ನೀವು ಪಾವತಿಸುವ ಮೊತ್ತದ ಬಗ್ಗೆ ಜಾಗರೂಕರಾಗಿರಿ. ಏಕೆಂದರೆ ಇದು ಕೇವಲ ನಿಮ್ಮ ಹೋಮ್ ಇನ್ಶೂರೆನ್ಸ್ ಪ್ರೀಮಿಯಂನ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೇ, ಹಾನಿಗಳು ಮತ್ತು ನಷ್ಟಗಳ ಸಂದರ್ಭದಲ್ಲಿ ನೀವು ಪಡೆಯುವ ಕ್ಲೈಮ್ ಮೊತ್ತದ ಮೇಲೂ ಪರಿಣಾಮ ಬೀರುತ್ತದೆ!
- ಆಡ್-ಆನ್ಗಳು ಲಭ್ಯವಿದೆ - ಕೆಲವೊಮ್ಮೆ, ನಿಮಗೆ ಕೇವಲ ಬೇಸಿಕ್ ಪ್ಲ್ಯಾನ್ನ ಪ್ರಯೋಜನಗಳನ್ನು ಮೀರಿದ ಕವರೇಜಿನ ಅಗತ್ಯವಿರುತ್ತದೆ. ಇಲ್ಲಿ ಆಡ್-ಆನ್ಗಳು ಬಳಕೆಗೆ ಬರುತ್ತವೆ. ವಿಭಿನ್ನ ಇನ್ಶೂರೆನ್ಸ್ ಪೂರೈಕೆದಾರರು, ಜನರಿಗೆ ಆಯ್ಕೆ ಮಾಡಿಕೊಳ್ಳಲು ವಿಭಿನ್ನ ಶ್ರೇಣಿಯ ಆಡ್-ಆನ್ಗಳನ್ನು ನೀಡುತ್ತಾರೆ. ಅಂತೆಯೇ, ನಾವು ಡಿಜಿಟ್ನಲ್ಲಿ ಹೋಮ್ ಇನ್ಶೂರೆನ್ಸ್ ಹೋಲ್ಡರ್ಗಾಗಿ ವಿಶಿಷ್ಟವಾದ ಆಭರಣ ರಕ್ಷಣೆಯ ಆಡ್-ಆನ್ ಅನ್ನು ನೀಡುತ್ತೇವೆ. ನಿಮಗಿರುವ ಆಯ್ಕೆಗಳನ್ನು ಹೋಲಿಕೆ ಮಾಡಿ ಮತ್ತು ನಿಮಗೆ ಯಾವುದು ಉತ್ತಮವೆನಿಸುತ್ತದೆ ಎನ್ನುವುದನ್ನು ನೀವೇ ನೋಡಿ!
ಸರಿಯಾದ ಇನ್ಶೂರೆನ್ಸ್ ಮೊತ್ತವನ್ನು ಹೇಗೆ ಆಯ್ಕೆ ಮಾಡುವುದು?
ಇನ್ಶೂರೆನ್ಸ್ನಲ್ಲಿ, ಇನ್ಶೂರೆನ್ಸ್ ಮೊತ್ತವು ನಷ್ಟದ ಸಂದರ್ಭದಲ್ಲಿ ನೀವು ಪಡೆಯುವ ಗರಿಷ್ಠ ಮೌಲ್ಯವನ್ನು ಸೂಚಿಸುತ್ತದೆ. ಇದು ನಿಮ್ಮ ಇನ್ಶೂರೆನ್ಸ್ ಮಾಡಿದ ಮನೆಯ ಮೌಲ್ಯವನ್ನು ಸಹ ನಿರ್ಧರಿಸುತ್ತದೆ. ಆದ್ದರಿಂದ ನೀವು ಆಯ್ಕೆ ಮಾಡಿದ ಇನ್ಶೂರೆನ್ಸ್ ಮೊತ್ತವು ನಿಮ್ಮ ಮನೆಯ ನಿಜವಾದ ಮೌಲ್ಯವನ್ನು ರಿಫ್ಲೆಕ್ಟ್ ಮಾಡುತ್ತದೆಂದು ನೀವು ಖಚಿತವಾಗಿ ತಿಳಿದುಕೊಳ್ಳಬೇಕು. ಸರಿಯಾದ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡಲು, ನಿಮ್ಮ ಮನೆಯ ಒಟ್ಟು ವಿಸ್ತೀರ್ಣದ ಚದರ ಅಡಿ ಮತ್ತು ನಿಮ್ಮ ಮನೆಯಲ್ಲಿರುವ ವಸ್ತುಗಳ ಅಂದಾಜು ಮೌಲ್ಯವನ್ನು ನೀವು ಪರಿಗಣಿಸಬೇಕು.