ನಿಮ್ಮ ಮನೆ, ಅಂಗಡಿ ಮತ್ತು ವ್ಯಾಪಾರಕ್ಕಾಗಿ ಫೈರ್ ಇನ್ಶೂರೆನ್ಸ್
property-insurance
usp icon

Zero

Documentation

usp icon

Quick Claim

Process

usp icon

Affordable

Premium

Terms and conditions apply*

back arrow
Home Insurance exchange icon
Zero Paperwork. Online Process.
home icon
shop icon
office icon
factory icon
Please enter property type
Please select property type
Enter Valid Pincode
+91
Please enter valid mobile number
I agree to the Terms & Conditions
background-illustration
background-illustration

ಫೈರ್ ಇನ್ಶೂರೆನ್ಸ್ (ಅಗ್ನಿ ವಿಮೆ) ಎಂದರೇನು?

ಫೈರ್ ಇನ್ಶೂರೆನ್ಸ್ (ಅಗ್ನಿ ವಿಮೆ) ಆಸ್ತಿ ವಿಮಾ ಪಾಲಿಸಿಯ ಪ್ರಮುಖ ಭಾಗವಾಗಿದೆ ಅಂದರೆ ಇದು ನಿಮ್ಮ ಮನೆ, ಅಪಾರ್ಟ್ಮೆಂಟ್ ಕಟ್ಟಡಗಳು, ಕಚೇರಿ ಸ್ಥಳಗಳು ಮತ್ತು ಅಂಗಡಿಗಳಂತಹ ವ್ಯಾಪಾರ ಸಂಬಂಧಿತ ಆಸ್ತಿಗಳನ್ನು ಬೆಂಕಿಯಿಂದಾಗಿ ಉಂಟಾಗಬಹುದಾದ ಯಾವುದೇ ಹಾನಿ ಮತ್ತು ನಷ್ಟಗಳಿಂದ ರಕ್ಷಿಸಲು ನೆರವಾಗುತ್ತದೆ.

*ಡಿಸ್ಕ್ಲೇಮರ್  - ಫೈರ್ ಇನ್ಶೂರೆನ್ಸ್ ಒಂದು ಸ್ಟ್ಯಾಂಡಲೋನ್ ಉತ್ಪನ್ನವಲ್ಲ. ಈ ಕವರ್ ಪಡೆಯಲು, ನೀವು ಗೋ ಡಿಜಿಟ್, ಭಾರತ್ ಲಘು ಉದ್ಯಮ ಸುರಕ್ಷಾ ಮತ್ತು/ಅಥವಾ ಗೋ ಡಿಜಿಟ್ ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಮತ್ತು ಮನೆಗಾಗಿ- ಗೋ ಡಿಜಿಟ್, ಭಾರತ್ ಗೃಹ ರಕ್ಷಾ ಅನ್ನು ಖರೀದಿಸಬೇಕು.

Read More

ಫೈರ್ ಇನ್ಶೂರೆನ್ಸ್ ಏಕೆ ಅವಶ್ಯವಿದೆ ಎಂಬುದು ಗೊತ್ತಿಲ್ಲವೇ?

ಮುಂದೆ ಓದಿ…

1

ಬೆಂಕಿ ಏಕಾಏಕಿ ವ್ಯಾಪಾರದ ನಿರಂತರತೆ ಮತ್ತು ಕಾರ್ಯಾಚರಣೆಗಳಿಗೆ 3 ನೇ ದೊಡ್ಡ ಅಪಾಯವಾಗಿದೆ. (1)

2

ADSI ವರದಿಯು ವಸತಿ ಕಟ್ಟಡಗಳು ಬೆಂಕಿಯ ಏಕಾಏಕಿಗೆ ಹೆಚ್ಚು ಒಳಗಾಗುತ್ತವೆ ಎಂದು ತೋರಿಸಿದೆ. (2)

3

ಭಾರತದಲ್ಲಿ, 2021 ರಲ್ಲಿ ಒಟ್ಟು 1.6 ಮಿಲಿಯನ್ ಬೆಂಕಿ ಅವಘಡಗಳು ನಡೆದಿವೆ.(3)

ಡಿಜಿಟ್ ನಿಂದ ಒದಗಿಸುವ ಫೈರ್ ಇನ್ಶೂರೆನ್ಸ್ ನ ಮಹತ್ವವೇನು?

  • ಹಣಕ್ಕೆ ತಕ್ಕಂತಹ ಬೆಲೆ : ಇಂದಿನ ದಿನಗಳಲ್ಲಿ ಆಸ್ತಿಯನ್ನು ರಕ್ಷಣೆ ಮಾಡಿಕೊಳ್ಳುವುದೇ ಒಂದು ದೊಡ್ಡ ವ್ಯವಹಾರವಾಗಿದೆ. ಏಕೆಂದರೆ ಅದರ ಮೌಲ್ಯ ಸಾಕಷ್ಟಿರುತ್ತದೆ! ಹಾಗಾಗಿ ಇದಕ್ಕೆ ಸಂಬಂಧಿಸಿದ ವಿಮಾ ಪ್ರೀಮಿಯಂಗಳು ಸಹ ಸಾಮಾನ್ಯವಾಗಿ ಹೆಚ್ಚಾಗಿಯೇ ಇರಲಿವೆ ಎಂದು ನೀವು ಭಾವಿಸುತ್ತೀರಿ. ಆದಾಗ್ಯೂ, ಬೆಂಕಿ ಹಾಗು ಇತರ ಸಂಭವಿಸಬಹುದಾದ ಹಾನಿಗಳಿಂದ ನಿಮ್ಮ ಆಸ್ತಿ ವಿಮೆ ಮಾಡಲು ನಾವು ನಿಮಗೆ ಸಾಧ್ಯವಾದಷ್ಟು ಉತ್ತಮವಾದ ಮತ್ತು ಕೈಗೆಟುಕುವ ಪ್ರೀಮಿಯಂ ದರದಲ್ಲಿ ಸೇವೆ ನೀಡಲು ಪ್ರಯತ್ನಿಸುತ್ತೇವೆ.

  • ಡಿಜಿಟಲ್ ಸ್ನೇಹಿ : ಡಿಜಿಟ್, ಭಾರತದ ಮೊದಲ ಡಿಜಿಟಲ್ ವಿಮಾ ಕಂಪನಿಗಳಲ್ಲಿ ಒಂದಾಗಿದ್ದು, ಫೈರ್ ಇನ್ಶೂರೆನ್ಸ್ ಯನ್ನು ಖರೀದಿಸುವುದರಿಂದ ಹಿಡಿದು ಅದನ್ನು ಕ್ಲೈಮ್‌ ಮಾಡುವವರೆಗೂ ನಮ್ಮ ಎಲ್ಲಾ ಪ್ರಕ್ರಿಯೆಗಳನ್ನು ನಾವು ಡಿಜಿಟಲ್ ಆಗಿಯೇ ಮಾಡಲು ಪ್ರಯತ್ನಿಸುತ್ತೇವೆ ಮತ್ತು ಹಾಗೆ ಇರಿಸುತ್ತೇವೆ. ಆದ್ದರಿಂದ ತಪಾಸಣೆಯ ಅಗತ್ಯತೆ ಇದ್ದಾಗಲೂ ನೀವು ಅದನ್ನು ಆನ್‌ಲೈನ್‌ನಲ್ಲಿಯೇ ಮಾಡಬಹುದು! (1 ಲಕ್ಷಕ್ಕಿಂತ ಹೆಚ್ಚಿನ ಕ್ಲೈಮ್‌ಗಳನ್ನು ಹೊರತುಪಡಿಸಿ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI)ದ ಪ್ರಕಾರ ಅವುಗಳನ್ನು ಸಿಬ್ಬಂದಿ ಸ್ವಯಂ ಭೇಟಿ ನೀಡಿ ಮಾತ್ರವೇ ತಪಾಸಣೆ ಮಾಡಬೇಕಾಗಿದೆ).

  • ಎಲ್ಲಾ ವ್ಯವಹಾರ ಪ್ರಕಾರಗಳನ್ನು ಒಳಗೊಂಡಿರುತ್ತದೆ : ನಿಮ್ಮ ಕುಟುಂಬದ ಸ್ವಂತ ವ್ಯಾಪಾರ, ಕಛೇರಿ ಸ್ಥಳ, ಕಿರಾಣಿ ಅಂಗಡಿ ಅಥವಾ ಅಂಗಡಿಗಳ ಸಾಲು ಇಂತಹ ವ್ಯಾಪಾರಗಳನ್ನು ನೀವು ರಕ್ಷಿಸಲು ಬಯಸುವುದಾದರೆ, ಅವುಗಳು ಎಷ್ಟೇ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ನಮ್ಮ ಫೈರ್ ಇನ್ಶೂರೆನ್ಸ್ ಯು ಎಲ್ಲಾ ರೀತಿಯ ವ್ಯವಹಾರಗಳಿಗೆ ಸೂಕ್ತವಾಗಿದೆ.

  • ಬಾಡಿಗೆದಾರರಿಗಾಗಿ ಯೋಜನೆಗಳು : ದೊಡ್ಡ ವ್ಯವಹಾರಗಳನ್ನು ಮಾಡುವವರು ಅಥವಾ ಕೊಟ್ಯಾಧಿಪತಿಗಳು ಇಂದು ತಮ್ಮ ವ್ಯವಹಾರದ ಸ್ಥಳವನ್ನು ಸ್ವಂತವಾಗಿ ಹೊಂದಲು ಆಲೋಚನೆ ಮಾಡುತ್ತಿಲ್ಲ ಆದರೆ ಬಾಡಿಗೆಯಲ್ಲಿ ಉಳಿಸಿಕೊಳ್ಳಲು ಬಯಸುತ್ತಾರೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಹಾಗಾಗಿಯೇ ಬಾಡಿಗೆದಾರರು ಬೇರೆಯವರ ಕಟ್ಟಡದಲ್ಲಿ ಹೊಂದಿರುವ ತಮ್ಮ ವಸ್ತುಗಳಿಗೆ ಮಾತ್ರ ಅನ್ವಯವಾಗುವಂತೆ ನಾವು ಯೋಜನೆಗಳನ್ನು ನೀಡುತ್ತೇವೆ. ಒಂದು ವೇಳೆ ಬಾಡಿಗೆ ಇರುವ ಅಪಾರ್ಟ್ಮೆಂಟ್ ಅಥವಾ ಸ್ಥಳವನ್ನೂ ಸಹ ವಿಮೆಯಿಂದ ರಕ್ಷಿಸಿಕೊಳ್ಳಬೇಕು ಎಂದು ಬಯಸಿದರೆ, ಹಾಗೂ ಕೂಡ ಮಾಡಬಹುದು!

ಡಿಜಿಟ್ ನಿಂದ ನೀಡಲಾಗುವ ಫೈರ್ ಇನ್ಶೂರೆನ್ಸ್ ಏನನ್ನು ಒಳಗೊಂಡಿರುತ್ತದೆ?

ಫೈರ್ ಕವರ್ ಆಡ್-ಆನ್‌ ಸಹಿತ ನಮ್ಮ ಆಸ್ತಿ ವಿಮಾ ಪಾಲಿಸಿ ಇದನ್ನೂ ಕವರ್ ಮಾಡುತ್ತದೆ...

Explosion & Aircraft Damage

ಸ್ಫೋಟ

ಸ್ಫೋಟದಿಂದಾಗಿ ಉಂಟಾದ ಯಾವುದೇ ಹಾನಿ ಅಥವಾ ನಷ್ಟದಿಂದ ನಿಮ್ಮ ಆಸ್ತಿಯನ್ನು ಕವರ್ ಮಾಡುತ್ತದೆ.

Storms

ಚಂಡಮಾರುತ

ನಿಮ್ಮ ಅಂಗಡಿ ಅಥವಾ ಮನೆಗೆ ಚಂಡಮಾರುತ ಬೀಸಿದಾಗ. ಭೀಕರ ಚಂಡಮಾರುತ ಅಥವಾ ಮಿಂಚಿನಂತಹ ಪ್ರಕೃತಿಯ ಕೋಪದಿಂದ ಉಂಟಾಗುವ ಹಾನಿಗಳಿಗೆ ಕವರ್ ನೀಡುತ್ತದೆ.

Floods

ಪ್ರವಾಹ

ಮಳೆಯು ನಿಯಂತ್ರಣದಿಂದ ಹೊರಗಿರುವಾಗ ನಿಮ್ಮ ಆಸ್ತಿಯ ಮೇಲೆ ಪರಿಣಾಮ ಬೀರುವ ಪ್ರವಾಹಕ್ಕೆ ಕಾರಣವಾಗುತ್ತದೆ. ಪ್ರವಾಹದಿಂದ ಉಂಟಾಗುವ ನಷ್ಟಗಳು ಮತ್ತು ಹಾನಿಗಳಿಂದ ನಿಮ್ಮ ಆಸ್ತಿಗೆ ಕವರ ನೀಡುತ್ತದೆ.

Earthquakes

ಭೂಕಂಪನಗಳು

ಪ್ರಕೃತಿಯ ಕೋಪವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಆದರೆ, ನಿಮ್ಮ ದಾರಿಯಲ್ಲಿ ಬರಬಹುದಾದ ಯಾವುದೇ ಸಂಭಾವ್ಯ ನಷ್ಟಗಳಿಗೆ ನೀವು ಕವರ್ ಪಡೆಯುತ್ತೀರಿ ಎಂದು ನೀವು ಏನು ಮಾಡಬಹುದು. ಭಾರತ ಲಘು ಉದ್ಯಮ ಸುರಕ್ಷಾ, ಗೋ ಡಿಜಿಟ್ ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಮತ್ತು ಗೋ ಡಿಜಿಟ್, ಭಾರತ್ ಗೃಹ ರಕ್ಷಾ ಸಹ ಭೂಕಂಪದಂತಹ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿ ಮತ್ತು ನಷ್ಟಗಳಿಗೆ ಕವರ್ ನೀಡುತ್ತದೆ.

ಫೈರ್ ಇನ್ಶೂರೆನ್ಸ್ ನ ವಿಧಗಳು:

ಡಿಜಿಟ್‌ನಲ್ಲಿ, ನಮ್ಮ ಫೈರ್ ಇನ್ಶೂರೆನ್ಸ್ (ಅಗ್ನಿ ವಿಮೆ) ಸ್ಟ್ಯಾಂಡಲೋನ್ ಪಾಲಿಸಿಯಲ್ಲ , ಇದು ಸಂಪೂರ್ಣ ವ್ಯಾಪ್ತಿಯ ಭಾಗವಾಗಿದೆ. ಇದರರ್ಥ, ಬೆಂಕಿ ಮತ್ತು ನೈಸರ್ಗಿಕ ವಿಕೋಪಗಳಿಂದ ಹಿಡಿದು ಎಲ್ಲವನ್ನೂ ಕವರ್ ಮಾಡುತ್ತದೆ. ನಾವು ನೀಡುವ ಕೆಲವು ರೀತಿಯ ಕವರೇಜ್‌ಗಳನ್ನು ಕೆಳಗೆ ನೀಡಲಾಗಿದೆ.

ಆಯ್ಕೆ 1

ಆಯ್ಕೆ 2

ಆಯ್ಕೆ 3

ನಿಮ್ಮ ಮನೆ ಅಥವಾ ವ್ಯಾಪಾರದ ವಸ್ತುಗಳನ್ನು ಮಾತ್ರ ಒಳಗೊಂಡಿದೆ.

ನಿಮ್ಮ ಕಟ್ಟಡ ಮತ್ತು ನಿಮ್ಮ ಮನೆ ಅಥವಾ ವ್ಯಾಪಾರದ ವಸ್ತುಗಳನ್ನು ಒಳಗೊಂಡಿದೆ.

ನಿಮ್ಮ ಬಿಲ್ಡಿಂಗ್ ಅನ್ನು ಮಾತ್ರ ಕವರ್ ಮಾಡುತ್ತದೆ

 

ಮ್ಮ ಮನೆಗಾಗಿ ಫೈರ್ ಇನ್ಶೂರೆನ್ಸ್-

 

  •  ನಿಮ್ಮ ಮನೆಗಾಗಿ ಫೈರ್ ಇನ್ಶೂರೆನ್ಸ್ -ನಮ್ಮ ಫೈರ್ ಇನ್ಶೂರೆನ್ಸ್ ನಮ್ಮ ಹೋಮ್ ಇನ್ಶೂರೆನ್ಸ್ ಒಳಗೊಂಡಿರುವ ಪ್ರಮುಖ ಕವರೇಜ್ ಆಗಿದೆ. ಆದ್ದರಿಂದ ನೀವು ಅಪಾರ್ಟ್ಮೆಂಟ್, ವಿಲ್ಲಾ ಅಥವಾ ಸ್ವತಂತ್ರ ಕಟ್ಟಡವನ್ನು ಹೊಂದಿದ್ದೀರಾ; ನಮ್ಮ ಹೋಮ್ ಇನ್ಶೂರೆನ್ಸ್  ಬೆಂಕಿಯಿಂದ ಉಂಟಾದ ಹಾನಿ ಮತ್ತು ನಷ್ಟಗಳಿಗೆ ಕವರ್ ನೀಡುತ್ತದೆ. ಅಷ್ಟೇ ಅಲ್ಲದೆ, ಸ್ಫೋಟಗಳು, ಪ್ರವಾಹಗಳು ಮತ್ತು ಬಿರುಗಾಳಿಗಳಂತಹ ಇತರ ಅನಿರೀಕ್ಷಿತ ಸಂದರ್ಭಗಳಿಂದ ಉಂಟಾಗುವ ನಷ್ಟಗಳಿಗೂ ಸಹ ಕವರ್ ನೀಡುತ್ತದೆ.
  • ನಿಮ್ಮ ಬಿಸಿನೆಸ್ ಮತ್ತು ಅಂಗಡಿಗೆ ಫೈರ್ ಇನ್ಶೂರೆನ್ಸ್- ನಮ್ಮ ಫೈರ್ ಇನ್ಶೂರೆನ್ಸ್ ಅನ್ನು ಎಲ್ಲಾ ಬಿಸಿನೆಸ್ ಮತ್ತು ಶಾಪ್ ಇನ್ಶೂರೆನ್ಸ್ ನಲ್ಲಿ ಕೂಡ ಸೇರಿಸಲಾಗಿದೆ. ಇದು ಸಣ್ಣ ಮತ್ತು ದೊಡ್ಡ ಬಿಸಿನೆಸ್  ಮತ್ತು ಶಾಪ್‌ಗಳು, ಆಫೀಸ್ ಸ್ಥಳಗಳು, ದಿನಸಿ ಅಂಗಡಿಗಳು, ಇತ್ಯಾದಿಗಳಂತಹ ಎಲ್ಲಾ ಶಾಪ್‌ಗಳನ್ನು ಒಳಗೊಂಡಿರುತ್ತದೆ. ಈ ಬಿಸಿನೆಸ್  ಮತ್ತು ಶಾಪ್‌ ಇನ್ಶೂರೆನ್ಸ್  ಬೆಂಕಿಯಿಂದ ಉಂಟಾದ ನಷ್ಟ ಮತ್ತು ಹಾನಿಗಳಿಗೆ ಮಾತ್ರ ಕವರ್  ನೀಡುವುದಲ್ಲದೆ, ಚಂಡಮಾರುತಗಳು, ಭೂಕಂಪಗಳು ಮತ್ತು ಪ್ರವಾಹಗಳಿಂದ ಉಂಟಾಗಬಹುದಾದ ನಷ್ಟಗಳನ್ನು ಸಹ ಒಳಗೊಂಡಿರುತ್ತದೆ 

ಫೈರ್ ಇನ್ಶೂರೆನ್ಸ್ ಯಾರಿಗೆ ಬೇಕು?

ಬೆಂಕಿ ಅನಿರೀಕ್ಷಿತ, ಯಾವುದೇ ಸಂದರ್ಭದಲ್ಲಿ ಬೇಕಾದರೂ ಅಚಾನಕ್ ಆಗಿ ಉಂಟಾಗಬಹುದು. ಆದ್ದರಿಂದ ಆದರ್ಶಪ್ರಾಯವಾಗಿ ಆಸ್ತಿ ಹೊಂದಿರುವ ಯಾರಾದರೂ ತಮ್ಮ ಮನೆ ಅಥವಾ ವ್ಯಾಪಾರವನ್ನು ಬೆಂಕಿಯ ಕಾರಣದಿಂದ ಸಂಭವಿಸಬಹುದಾದ ಹಾನಿ ಮತ್ತು ನಷ್ಟಗಳಿಂದ ರಕ್ಷಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.

ಮನೆ ಮಾಲೀಕರು

ವರ್ಷಗಳಿಂದ ಇರುವಂತಹ ಮನೆಯಾಗಿರಲಿ ಅಥವಾ ಹೊಸದಾಗಿ ಕೈ ಸೇರಿದ ಕನಸಿನ ಮನೆಯಾಗಿರಲಿ, ಮನೆ ಎನ್ನುವುದು ಯಾರಿಗೇ ಆದರೂ ಒಂದು ಅತ್ಯಂತ ಅಮೂಲ್ಯವಾದ ಆಸ್ತಿಯಾಗಿದೆ. ಇಷ್ಟೇ ಅಲ್ಲದೆ, ವಸತಿ ಕಟ್ಟಡಗಳಲ್ಲಿ ಬೆಂಕಿ ಹೆಚ್ಚು ಕಂಡು ಬರುತ್ತದೆ ಎಂದು ತಿಳಿದುಬಂದಿದೆ. ಹೀಗಾಗಿ, ನೀವು ವಿಮೆ ಮಾಡಿಸುವ ಸಣ್ಣದೊಂದು ಕೆಲಸ ಮಾಡಿದರೆ,  ನಿಮ್ಮ ಜೇಬು ಮತ್ತು ನಿಮ್ಮ ಮನೆ ಎರಡನ್ನೂ ಸಹ ರಕ್ಷಿಸಿಕೊಳ್ಳಬಹುದು.

ಬಾಡಿಗೆದಾರರು

ಜನರು ಸಾಮಾನ್ಯವಾಗಿ ಆಸ್ತಿ ಇರುವ ಜನರಿಗೆ ಮಾತ್ರ ಫೈರ್ ಇನ್ಶೂರೆನ್ಸ್  ಎಂದು ಊಹಿಸುತ್ತಾರೆ ಮತ್ತು ಹೆಚ್ಚಿನ ವಿಮಾದಾರರಿಗೆ ಇದು ನಿಜ ಕೂಡ ಆಗಬಹುದು. ಆದಾಗ್ಯೂ, ಡಿಜಿಟ್‌ನಲ್ಲಿ ನಾವು ಬಾಡಿಗೆ ಆಸ್ತಿಗಳಿಗೂ ಸಹ ಫೈರ್ ಇನ್ಶೂರೆನ್ಸ್ ಯನ್ನು ಒದಗಿಸುತ್ತೇವೆ. ಆದ್ದರಿಂದ, ನೀವು ಬಾಡಿಗೆ ಕಚೇರಿ ಸ್ಥಳ ಅಥವಾ ಬಾಡಿಗೆ ಅಪಾರ್ಟ್ಮೆಂಟ್ ಹೊಂದಿದ್ದರೆ, ನೀವು ಹೊಂದಿರುವ ಭಾಗಗಳಿಗೆ ನೀವು ಫೈರ್ ಇನ್ಶೂರೆನ್ಸ್ ಯನ್ನು ಪಡೆದುಕೊಳ್ಳಬಹುದು; ಉದಾಹರಣೆಗೆ ನಿಮ್ಮ ಮನೆಯಲ್ಲಿರುವ ವಸ್ತುಗಳು.

ಸಣ್ಣ ವ್ಯವಹಾರ ಮಾಲೀಕರುಗಳು

ನೀವು ಕಸ್ಟಮೈಸ್ ಮಾಡಿದ ಫ್ಯಾಶನ್ ಮತ್ತು ಕರಕುಶಲ ವಸ್ತುಗಳನ್ನು ಹೊಂದಿರುವ ಸಣ್ಣ ಸಾಮಾನ್ಯ ಅಂಗಡಿ ಅಥವಾ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದರೆ, ನಮ್ಮ ಅಗ್ನಿ ವಿಮಾ ರಕ್ಷಣೆ ಎಲ್ಲಾ ರೀತಿಯ ವ್ಯವಹಾರಗಳಿಗೆ ಸೂಕ್ತವಾಗಿದೆ. ನೀವು ಸ್ವತಂತ್ರ, ಸಣ್ಣ ವ್ಯಾಪಾರವನ್ನು ನಡೆಸುತ್ತಿರುವವರಾಗಿದ್ದರೆ, ಬೆಂಕಿಯಿಂದ ಉಂಟಾಗಬಹುದಾದ ಯಾವುದೇ ಸಂಭಾವ್ಯ ನಷ್ಟಗಳು ಮತ್ತು ತೊಂದರೆಗಳಿಂದ ನಿಮ್ಮ ವ್ಯಾಪಾರವನ್ನು ರಕ್ಷಿಸಲು ಇದು ಅತ್ಯಗತ್ಯವಾಗಿರುತ್ತದೆ.

ಮಧ್ಯಮ ವ್ಯವಹಾರ ಮಾಲೀಕರುಗಳು

ನೀವು ಸಾಮಾನ್ಯ ಮಳಿಗೆಗಳು, ರೆಸ್ಟೋರೆಂಟ್‌ಗಳು ಅಥವಾ ಮಧ್ಯಮ ಗಾತ್ರದ ಉದ್ಯಮಗಳ ಎಂಟರ್ಪ್ರೈಸ್ ನಡೆಸುತ್ತಿದ್ದು, ಅದು ಎಷ್ಟೇ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಬೆಂಕಿಯ ಕಾರಣದಿಂದ ಉಂಟಾಗಬಹುದಾದ ಯಾವುದೇ ಹಾನಿ ಮತ್ತು ನಷ್ಟಗಳಿಗೆ ಮಧ್ಯಮ ಗಾತ್ರದ ವ್ಯಾಪಾರ ಮಾಲೀಕರಿಗೆ ನಮ್ಮ ಅಗ್ನಿ ವಿಮಾ ರಕ್ಷಣೆಯು ಸೂಕ್ತವಾಗಿದೆ;

ದೊಡ್ಡ ಉದ್ಯಮಗಳು

ನಿಮ್ಮ ವ್ಯಾಪಾರ ಬಹಳ ದೊಡ್ಡದಾಗಿದ್ದು, ದೊಡ್ಡ ಕಾರ್ಯಾಚರಣೆಗಳ ಸಲುವಾಗಿ ನೀವು ಒಂದು ವೇಳೆ ಬಹು ಆಸ್ತಿಯನ್ನು ಹೊಂದಿರುವವರಾಗಿದ್ದರೆ, ಮುಂಜಾಗೃತಾ ಕ್ರಮದಿಂದ ಆಸ್ತಿ ವಿಮೆ ಹೊಂದುವುದು ಕೇವಲ ಒಂದಲ್ಲ ಬದಲಿಗೆ ನಿಮ್ಮ ಎಲ್ಲಾ ಆಸ್ತಿಗಳನ್ನು ರಕ್ಷಿಸುವಲ್ಲಿ ಪ್ರಮುಖವಾಗಿದೆ, ಅದು ಭವಿಷ್ಯದಲ್ಲಿ ವ್ಯಾಪಾರದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವುದಲ್ಲದೆ, ಜವಾಬ್ದಾರಿಯುತ ವ್ಯಾಪಾರ ಉದ್ಯಮವಾಗುವ ಸದ್ಭಾವನೆಯನ್ನು ಅಭಿವೃದ್ಧಿ ಪಡಿಸುತ್ತದೆ.

ಫೈರ್ ಇನ್ಶೂರೆನ್ಸ್ ನಲ್ಲಿ ರಕ್ಷಿಸಲ್ಪಡುವ ಖಾಸಗಿ ಆಸ್ತಿ ಪ್ರಕಾರಗಳು

ವೈಯಕ್ತಿಕ ಅಪಾರ್ಟ್ಮೆಂಟ್

ಇದು ಹೌಸಿಂಗ್ ಸೊಸೈಟಿಗಳ ಅಥವಾ ಸ್ವತಂತ್ರ ಕಟ್ಟಡಗಳ ಭಾಗವಾಗಿರುವ ಸ್ವತಂತ್ರ ಫ್ಲಾಟ್‌ಗಳಲ್ಲಿ ವಾಸಿಸುವವರಿಗೆ. ಅದು ನಿಮ್ಮ ಮಾಲೀಕತ್ವದ ಫ್ಲಾಟ್ ಆಗಿರಬಹುದು ಅಥವಾ ನೀವು ಬಾಡಿಗೆಗೆ ಪಡೆದಿರುವ ಫ್ಲಾಟ್ ಆಗಿರಬಹುದು. ನಮ್ಮ ವಿಮಾ ಉತ್ಪನ್ನ ಎರಡಕ್ಕೂ ಸೂಕ್ತವಾಗಿದೆ!

ವೈಯಕ್ತಿಕ ಕಟ್ಟಡ

ಬಹುಶಃ ನೀವು ಮತ್ತು ನಿಮ್ಮ ವಿಸ್ತೃತ ಕುಟುಂಬವು ಸ್ವತಂತ್ರ ಕಟ್ಟಡದಲ್ಲಿ ವಾಸಿಸುತ್ತಿರಬಹುದು, ಇಡೀ ಕಟ್ಟಡದಲ್ಲಿ ಫ್ಲಾಟ್‌ಗಳನ್ನು ಹೊಂದಿದ್ದೀರಿ ಅಥವಾ ಬಾಡಿಗೆಗೆ ನೀಡಿರಬಹುದು. ಈ ಸಂದರ್ಭದಲ್ಲಿ, ಫೈರ್  ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಅವರೆಲ್ಲರಿಗೂ ಕವರ್  ನೀಡಲು ನೀವು ಆಯ್ಕೆ ಮಾಡಬಹುದು.

ವೈಯಕ್ತಿಕ ವಿಲ್ಲಾ

ನೀವು ಸ್ವತಂತ್ರವಾಗಿ ವಿಲ್ಲಾ ಅಥವಾ ಮನೆಯನ್ನು ಹೊಂದಿದ್ದರೆ ಅಥವಾ ಮನೆ ಬಾಡಿಗೆಗೆ ಪಡೆದಿದ್ದರೆ, ಬೆಂಕಿಯ ಸಂಭಾವ್ಯ ಅಪಾಯದಿಂದ ನಿಮ್ಮ ವಿಲ್ಲಾ ಮತ್ತು ಅದರ ವಸ್ತುಗಳನ್ನು ರಕ್ಷಿಸಲು ಅಗ್ನಿ ವಿಮಾ ರಕ್ಷಣೆ ಅತ್ಯಗತ್ಯ.

ಫೈರ್ ಇನ್ಶೂರೆನ್ಸ್ ನಲ್ಲಿ ರಕ್ಷಿಸಲ್ಪಡುವ ವ್ಯವಹಾರಿಕ ಆಸ್ತಿ ಪ್ರಕಾರಗಳು

ಆಟೋಮೊಬೈಲ್ಸ್ ಮತ್ತು ಎಲೆಕ್ಟ್ರಾನಿಕ್ಸ್

ಪ್ರಾಥಮಿಕವಾಗಿ ಆಟೋಮೊಬೈಲ್ಸ್ , ಮೊಬೈಲ್ ಫೋನ್‌ಗಳು ಮತ್ತು ಅವುಗಳ ಪರಿಕರಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಗಳು.

ದಿನಸಿ, ಸಾಮಾನ್ಯ ಮತ್ತು ಸ್ಟೇಷನರಿ ಅಂಗಡಿಗಳು

ನೆರೆಹೊರೆಯ ದಿನಸಿ ಅಂಗಡಿಗಳಿಂದ ನಿಮ್ಮ ಬಜೆಟ್ ಸ್ನೇಹಿ ಸೂಪರ್ಮಾರ್ಕೆಟ್ಗಳು ಮತ್ತು ಸಾಮಾನ್ಯ ಮಳಿಗೆಗಳು; ಎಲ್ಲಾ ಕಿರಾಣಿ ಅಂಗಡಿಗಳು ಮತ್ತು ಸಾಮಾನ್ಯ ಅಂಗಡಿಗಳು ಸಹ ಫೈರ್  ಇನ್ಶೂರೆನ್ಸ್  ಪಾಲಿಸಿಯಲ್ಲಿ ಒಳಗೊಳ್ಳುತ್ತವೆ.

ಕಛೇರಿಗಳು ಮತ್ತು ಶಿಕ್ಷಣದ ಸ್ಥಳಗಳು

ನಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿರುವ ಈ ವರ್ಗವನ್ನು ಕಚೇರಿ ಆವರಣಗಳು ಮತ್ತು ಕಾಲೇಜುಗಳು, ಶಾಲೆಗಳು ಮತ್ತು ಕೋಚಿಂಗ್ ತರಗತಿಗಳಂತಹ ಶಿಕ್ಷಣ ಸಂಸ್ಥೆಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ.

ರಿಪೇರಿಗಳು ಮತ್ತು ಮನೆ ಸಹಾಯ

ಈ ವರ್ಗದ ವ್ಯವಹಾರಗಳು ಮರಗೆಲಸ ಮತ್ತು ಪ್ಲಮ್ಬಿಂಗ್ ರಿಪೇರಿಗಳಿಂದ ಹಿಡಿದು ಮೋಟಾರ್ ಗ್ಯಾರೇಜ್‌ಗಳು ಮತ್ತು ಎಂಜಿನಿಯರಿಂಗ್ ಕಾರ್ಯಾಗಾರಗಳವರೆಗೆ ಎಲ್ಲವನ್ನೂ ಒಳಗೊಂಡಿದೆ.

ಮನೆ, ಜೀವನಶೈಲಿ ಮತ್ತು ಫಿಟ್ನೆಸ್

ನಿಮ್ಮ ಮೆಚ್ಚಿನ ಮಾಲ್‌ಗಳು ಮತ್ತು ಬಟ್ಟೆ ಅಂಗಡಿಗಳಿಂದ ಸ್ಪಾಗಳು, ಜಿಮ್‌ಗಳು ಮತ್ತು ಇತರ ಅಂಗಡಿಗಳವರೆಗೆ; ಡಿಜಿಟ್‌ನ ಪ್ರಾಪರ್ಟಿ ಇನ್ಶೂರೆನ್ಸ್  ಒಳಗೊಂಡಿರುವ ಫೈರ್  ಇನ್ಶೂರೆನ್ಸ್ ವೈಯಕ್ತಿಕ ಜೀವನಶೈಲಿ ಮತ್ತು ಫಿಟ್‌ನೆಸ್ ವಲಯದಲ್ಲಿನ ಎಲ್ಲಾ ವ್ಯವಹಾರಗಳಿಗೆ ಸಹ ಕವರ್ ನೀಡುತ್ತದೆ.

ಆಹಾರ ಮತ್ತು ತಿನ್ನುವ ಸ್ಥಳಗಳು

ಎಲ್ಲರೂ ಒಟ್ಟಿಗೆ ತಿನ್ನುವ ಒಂದು ಸ್ಥಳ! ಕೆಫೆಗಳು ಮತ್ತು ಆಹಾರ ಟ್ರಕ್‌ಗಳಿಂದ ಹಿಡಿದು ರೆಸ್ಟೋರೆಂಟ್ ಸರಪಳಿಗಳು ಮತ್ತು ಬೇಕರಿಗಳವರೆಗೆ; ನಮ್ಮ ಫೈರ್  ಇನ್ಶೂರೆನ್ಸ್ ಕವರೇಜ್  ಎಲ್ಲಾ ರೀತಿಯ ಉಪಾಹಾರ ಗೃಹಗಳ ಜಾಯಿಂಟ್‌ಗಳಿಗೂ ಸೂಕ್ತವಾಗಿರುತ್ತದೆ. 

ಆರೋಗ್ಯ ರಕ್ಷಣೆ

ಬೆಂಕಿ ಮತ್ತು ಇತರ ಎಲ್ಲಾ ಅಪಾಯಗಳಿಂದ ರಕ್ಷಿಸಬೇಕಾದ ಅತ್ಯಂತ ಪ್ರಮುಖ ಆಸ್ತಿಗಳಲ್ಲಿ ಒಂದಾಗಿದೆ; ಡಿಜಿಟ್‌ನಿಂದ ಆಸ್ತಿ ವಿಮೆ ಆಸ್ಪತ್ರೆಗಳು, ಚಿಕಿತ್ಸಾಲಯಗಳು, ರೋಗನಿರ್ಣಯ ಕೇಂದ್ರಗಳು ಮತ್ತು ಫಾರ್ಮಸಿಗಳು ಮತ್ತು ಇತರ ವೈದ್ಯಕೀಯ ಮಳಿಗೆಗಳನ್ನು ಸಹ ಒಳಗೊಂಡಿದೆ.

ಸೇವೆ ಮತ್ತು ಇತರೆ

ಮೇಲೆ ತಿಳಿಸಿದ ವರ್ಗಗಳ ಹೊರತಾಗಿ, ಡಿಜಿಟ್‌ನ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿ ಫೈರ್  ಇನ್ಶೂರೆನ್ಸ್ ಕವರೇಜ್  ವ್ಯವಹಾರಗಳ ಎಲ್ಲಾ ಸೈಜ್ ಮತ್ತು ಸ್ವರೂಪಕ್ಕೆ ಸೂಕ್ತವಾಗಿದೆ.

ಭಾರತದಲ್ಲಿ ಆನ್‌ಲೈನ್‌ ಫೈರ್ ಇನ್ಶೂರೆನ್ಸ್ ನ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು