ಡಿಜಿಟ್ ಪಾರ್ಟ್ನರ್ ಆಗಿ
35,000ಕ್ಕೂ ಅಧಿಕ ಪಾಲುದಾರರು ಡಿಜಿಟ್‌ನೊಂದಿಗೆ 674 ಕೋಟಿಗೂ ಹೆಚ್ಚು ಗಳಿಸಿದ್ದಾರೆ.

ವಿದ್ಯಾರ್ಥಿಗಳು ಯಾವುದೇ ಹೂಡಿಕೆ ಇಲ್ಲದೆ ಆನ್‌ಲೈನ್‌ನಲ್ಲಿ ಹಣ ಗಳಿಸುವುದು ಹೇಗೆ?

Source: pexels

ಒಬ್ಬ ವ್ಯಕ್ತಿಯ ಜೀವಮಾನದಲ್ಲಿ ವಿದ್ಯಾರ್ಥಿ ಜೀವನ ಒಂದು ಪ್ರಮುಖ ಘಟ್ಟವಾಗಿದೆ. ಆದಾಗ್ಯೂ, ಅಧ್ಯಯನವು ಪೂರ್ಣ ಸಮಯದ ಉದ್ಯೋಗವಾಗಿದೆ ಮತ್ತು ಆದ್ದರಿಂದ ಸ್ವಲ್ಪ ಹಣವನ್ನು ಗಳಿಸಲು ಬಯಸುವ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಪರಿಣಾಮ ಬೀರದ ಹಾಗೆ ಪಾರ್ಟ್ - ಟೈಮ್ ಉದ್ಯೋಗಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ.

ಆನ್‌ಲೈನ್‌ನಲ್ಲಿ ದೊಡ್ಡ ಹೂಡಿಕೆ ಮಾಡದೆ ಅಥವಾ ಕನಿಷ್ಠ ಅನುಭವದ ಅಗತ್ಯವಿರುವ ಉದ್ಯೋಗಗಳನ್ನು ಹುಡುಕುವುದು ಮತ್ತು ಹಣ ಗಳಿಸುವುದು ಹೇಗೆ ಎಂಬುದು ವಿದ್ಯಾರ್ಥಿಗಳ ಇತರ ಕಾಳಜಿಗಳು.

ಇಲ್ಲಿ ಒಂದು ಒಳ್ಳೆಯ ಸುದ್ದಿಯಿದೆ. ವಿದ್ಯಾರ್ಥಿಗಳಿಗಾಗಿ ಹಲವಾರು ಆನ್‌ಲೈನ್ ಪಾರ್ಟ್ ಟೈಮ್ ಉದ್ಯೋಗಗಳಿವೆ, ಇದರಿಂದ ಅವರು ಮನೆಯಲ್ಲಿಯೇ ಹಣ ಗಳಿಸಬಹುದು.

ಒಬ್ಬ ವಿದ್ಯಾರ್ಥಿಯಾಗಿ ಆನ್‌ಲೈನ್‌ನಲ್ಲಿ ಹಣ ಗಳಿಸುವ ಉತ್ತಮ ಮಾರ್ಗಗಳು ಯಾವುವು?

1. ಇನ್ಶೂರೆನ್ಸ್ ಅನ್ನು ಪಿಒಎಸ್‌ಪಿ(POSP) ಆಗಿ ಮಾರಾಟ ಮಾಡಿ

ಪಿಒಎಸ್‌ಪಿ, ಅಥವಾ ಪಾಯಿಂಟ್ ಆಫ್ ಸೇಲ್ಸ್‌ಪರ್ಸನ್ ಆಗಿ ಇನ್ಶೂರೆನ್ಸ್ ಮಾರಾಟ ಮಾಡುವುದು ವಿದ್ಯಾರ್ಥಿಗಳಿಗೆ ಒಂದು ಲಾಭದಾಯಕ ಪಾರ್ಟ್ ಟೈಮ್ ಉದ್ಯೋಗವಾಗಿದೆ. ಪಿಒಎಸ್‌ಪಿ ಎನ್ನುವುದು ಇನ್ಶೂರೆನ್ಸ್ ಏಜೆಂಟ್ ಆಗಿದ್ದು, ಅವರು ತಮ್ಮ ಇನ್ಶೂರೆನ್ಸ್ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಇನ್ಶೂರೆನ್ಸ್ ಕಂಪನಿಯೊಂದಿಗೆ ಕೆಲಸ ಮಾಡುತ್ತಾರೆ.

  • ಇದಕ್ಕೆ ಅವಶ್ಯಕತೆಗಳೇನು? - ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಐ.ಆರ್.ಡಿ.ಎ.ಐ. ನೀಡುವ 15-ಗಂಟೆಗಳ ಕಡ್ಡಾಯ ತರಬೇತಿಯನ್ನು ಸಹ ನೀವು ಪೂರ್ಣಗೊಳಿಸಬೇಕಾಗಿದೆ.

  • ನೀವು ಎಷ್ಟು ಸಂಪಾದಿಸಬಹುದು? - ನಿಮ್ಮ ಆದಾಯವು ನೀವು ಮಾರಾಟ ಮಾಡುವ ಪಾಲಿಸಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಹೀಗಾಗಿ, ನೀವು ಹೆಚ್ಚು ಪಾಲಿಸಿಗಳನ್ನು ಮಾರಾಟ ಮಾಡಿದರೆ, ನೀವು ಹೆಚ್ಚು ಆದಾಯವನ್ನು ಗಳಿಸುತ್ತೀರಿ.

  • ನೀವು ಈ ಕೆಲಸವನ್ನು ಮುಂದುವರಿಸಬಹುದೇ? - ಹೌದು, ನೀವು ಮಾರಾಟ ಮಾಡುವ ಕೌಶಲ್ಯವನ್ನು ಹೊಂದಿದ್ದರೆ, ನೀವು ಇದನ್ನು ನಂತರದ ದಿನಗಳಲ್ಲಿ ಪೂರ್ಣ ಸಮಯದ ಉದ್ಯೋಗವಾಗಿ ಮುಂದುವರಿಸಬಹುದು.

ಇಲ್ಲಿ ಪಿಒಎಸ್‌ಪಿ ಏಜೆಂಟ್ ಆಗಲು ಹಂತಗಳು, ಅವಶ್ಯಕತೆಗಳು ಮತ್ತು ನಿಯಮಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

2. ಫ್ರೀಲ್ಯಾನ್ಸಿಂಗ್ ಆಯ್ಕೆ ಮಾಡಿ

ನೀವು ರೈಟಿಂಗ್, ಪ್ರೋಗ್ರಾಮಿಂಗ್, ಎಡಿಟಿಂಗ್, ಫೋಟೋಗ್ರಫಿ, ಡಿಸೈನಿಂಗ್ ಅಥವಾ ಅಂತಹ ಯಾವುದೇ ಕೌಶಲ್ಯಗಳನ್ನೂ ಹೊಂದಿದ್ದರೆ, ನೀವು ಫ್ರೀಲ್ಯಾನ್ಸರ್ ಆಗಿ ಆನ್‌ಲೈನ್‌ನಲ್ಲಿ ಹಣ ಗಳಿಸಬಹುದು. ಅಪ್ವರ್ಕ್, ಫಿವರ್ರ್, ಅಥವಾ ಟ್ರೂಲ್ಯಾನ್ಸರ್ ನಂತಹ ಪೋರ್ಟಲ್‌ಗಳಲ್ಲಿ ನೀವೇ ಫ್ರೀಲ್ಯಾನ್ಸರ್ ಆಗಿ ನೋಂದಾಯಿಸಿಕೊಳ್ಳಿ. ನಂತರ ನೀವು ನಿಮಗೆ ನಿರಂತರ ಆರ್ಡರ್ ನೀಡುವ ಕ್ಲಯೆಂಟ್ಸ್ ಗೆ ನಿಮ್ಮ ಕೌಶಲ್ಯಗಳನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು.

  • ಇದಕ್ಕೆ ಅವಶ್ಯಕತೆಗಳೇನು? - ನೀವು ಮಾರುಕಟ್ಟೆಯ ಉತ್ತಮ ಕೌಶಲ್ಯ ಹೊಂದಿರುವವರೆಗೆ, ನೀವು ಫ್ರೀಲ್ಯಾನ್ಸರ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು, ಆದರೂ ಇದಕ್ಕೆ ಸಣ್ಣ ಶುಲ್ಕ ಪಾವತಿ ಇರಬಹುದು.

  • ನೀವು ಇದರಿಂದ ಎಷ್ಟು ಸಂಪಾದಿಸಬಹುದು? - ನಿಮ್ಮ ಆದಾಯವು ನೀವು ನೀಡುವ ಕೆಲಸದ ಪ್ರಕಾರ ಮತ್ತು ನೀವು ಎಷ್ಟು ಕೆಲಸವನ್ನು ಮಾಡಲು ಸಮಯವನ್ನು ಹೊಂದಿದ್ದೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.

ನೀವು ಈ ಕೆಲಸವನ್ನು ಮುಂದುವರಿಸಬಹುದೇ? - ಹೌದು, ನೀವು ನೀಡುವ ಕೆಲಸದ ಪ್ರಕಾರದ ಆಧಾರದ ಮೇಲೆ, ನೀವು ಫ್ರೀಲ್ಯಾನ್ಸರ್ ಆಗಿ ಪೂರ್ಣ ಸಮಯ ಕೆಲಸ ಮಾಡುವುದನ್ನು ಮುಂದುವರಿಸಬಹುದು.

3. ಆನ್‌ಲೈನ್‌ನಲ್ಲಿ ಪಾಠ ಮಾಡಲು ಪ್ರಾರಂಭಿಸಿ

ವಿದ್ಯಾರ್ಥಿಗಳು ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುತ್ತಿದ್ದಾರೆ, ಆದ್ದರಿಂದ ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು ಒಂದು ಸುಲಭವಾದ ಮಾರ್ಗವೆಂದರೆ ಈ ಜ್ಞಾನವನ್ನು ಹಂಚಿಕೊಳ್ಳುವುದು. ನೀವು ಶಾಲಾ ಮಕ್ಕಳಿಗೆ ಕಲಿಸಲು ಬಯಸುತ್ತಿದ್ದರೆ ಅಥವಾ ಹೊಸದನ್ನು ಕಲಿಯಲು ಬಯಸುವ ವಯಸ್ಕರಿಗೆ ಕೋರ್ಸ್‌ಗಳನ್ನು ಒದಗಿಸಲು ಬಯಸುತ್ತಿದ್ದರೆ, ನಿಮಗೆ ಬೇಕಾಗಿರುವುದು ವೇಗದ ಇಂಟರ್ನೆಟ್ ಸಂಪರ್ಕ.

ನೀವು ಯುಡಿಮಿ, ಸ್ಕಿಲ್ ಶೇರ್, ಅಥವಾ ಕೋರ್ಸೆರಾ ನಂತಹ ವರ್ಚುವಲ್ ಟ್ಯೂಟರಿಂಗ್ ಪ್ಲಾಟ್‌ಫಾರ್ಮ್‌ನೊಂದಿಗೆ ಸೈನ್ ಅಪ್ ಮಾಡಬಹುದು ಅಥವಾ ನಿಮ್ಮ ಆನ್‌ಲೈನ್ ಟ್ಯೂಟರಿಂಗ್ ತರಗತಿಗಳನ್ನು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹಿತರು ಮತ್ತು ಸಂಬಂಧಿ ವಲಯಗಳಿಗೆ ಸರಳವಾಗಿ ತಲುಪಬಹುದು.

  • ಇದಕ್ಕೆ ಅವಶ್ಯಕತೆಗಳೇನು? - ನಿಮಗೆ ಕೆಲವು ಪಾಠ ಮಾಡುವ ಸ್ಕಿಲ್ ಬೇಕಾಗಿರುತ್ತದೆ ಜೊತೆಗೆ ಸಣ್ಣ ಪ್ರಮಾಣದ ಹೂಡಿಕೆ ಸಹ ಇರುತ್ತದೆ.

  • ನೀವು ಎಷ್ಟು ಸಂಪಾದಿಸಬಹುದು? - ನಿಮ್ಮ ಪರಿಣತಿಯ ಮಟ್ಟ ಮತ್ತು ವಿಷಯದ ಆಧಾರದ ಮೇಲೆ, ನೀವು ಗಂಟೆಗೆ ₹200–500 ವರೆಗೆ ಗಳಿಸಬಹುದು.

ನೀವು ಈ ಕೆಲಸವನ್ನು ಮುಂದುವರಿಸಬಹುದೇ? - ಆನ್‌ಲೈನ್‌ನಲ್ಲಿ ಪಾಠ ಮಾಡುವುದು ಪೂರ್ಣ ಸಮಯದ ಕೆಲಸವಲ್ಲದಿದ್ದರೂ, ನೀವು ಇದನ್ನು ಪಾರ್ಟ್- ಟೈಮ್ ಆಗಿ ಮಾಡುವುದನ್ನು ಮುಂದುವರಿಸಬಹುದು ಅಥವಾ ನೀವು ಪಾಠ ಮಾಡುವ ಕೌಶಲ್ಯವನ್ನು ಹೊಂದಿದ್ದರೆ, ನೀವು ಆಸಕ್ತಿಯಿಂದ ಅಧ್ಯಯನ ಮಾಡುತ್ತಿರುವ ವಿಷಯದಲ್ಲಿ ಬೋಧನಾ ಉದ್ಯೋಗಗಳನ್ನು ನೋಡಿ.

4. ಡೇಟಾ ಎಂಟ್ರಿ ಕೆಲಸಗಳನ್ನು ಹುಡುಕಿ

ಹೂಡಿಕೆಯಿಲ್ಲದೆ ಆನ್‌ಲೈನ್‌ನಲ್ಲಿ ಹಣ ಗಳಿಸಲು ಬಯಸುವ ವಿದ್ಯಾರ್ಥಿಗಳಿಗೆ ಮತ್ತೊಂದು ಆಯ್ಕೆಯೆಂದರೆ ಅದು ಡೇಟಾ ಎಂಟ್ರಿ ಉದ್ಯೋಗಗಳು. ಇದು ಫ್ಲೆಕ್ಸಿಬಲ್ ಆಗಿರುವುದರಿಂದ, ಪಾರ್ಟ್ ಟೈಮ್ ಕೆಲಸಕ್ಕೆ ಇದು ಉತ್ತಮ ಆಯ್ಕೆಯಾಗಿದೆ.

ನೀವು ಏನು ಮಾಡಬೇಕು ಎಂದರೆ ಫ್ರೀಲ್ಯಾನ್ಸರ್, ಡೇಟಾ ಪ್ಲಸ್, ಆಕ್ಸಿಯಾನ್ ಡೇಟಾ ಎಂಟ್ರಿ ಸೇವೆಗಳು ಅಥವಾ ಗುರು ನಂತಹ ವಿಶ್ವಾಸಾರ್ಹ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಿ ನಂತರ ನೀವು ಪ್ರಪಂಚದಾದ್ಯಂತ ಇರುವ ಕಂಪನಿಗಳಿಂದ ಡೇಟಾ ಎಂಟ್ರಿ ಉದ್ಯೋಗಗಳನ್ನು ಸ್ವೀಕರಿಸಲು ಪ್ರಾರಂಭಿಸಬಹುದು. ಆದರೂ, ನಿಮ್ಮ ಖಾತೆಯ ವಿವರಗಳನ್ನು ವರ್ಗಾಯಿಸುವ ಮೊದಲು ಅವರ ಕಾನೂನುಬದ್ಧತೆಯನ್ನು ಪರೀಕ್ಷಿಸಲು ಮರೆಯಬೇಡಿ.

  • ಅವಶ್ಯಕತೆಗಳೇನು? - ನಿಮಗೊಂದು ಕಂಪ್ಯೂಟರ್ ಬೇಕು ಜೊತೆಗೆ ಎಕ್ಸೆಲ್ ಮತ್ತು ಇತರ ಮೈಕ್ರೋಸಾಫ್ಟ್ ಟೂಲ್ಸ್ ಗಳ ಉತ್ತಮ ಕೆಲಸದ ಜ್ಞಾನವನ್ನು ಹೊಂದಿರಬೇಕು.

  • ನೀವು ಎಷ್ಟು ಸಂಪಾದಿಸಬಹುದು? - ಡೇಟಾ ಎಂಟ್ರಿ ಕೆಲಸದಲ್ಲಿ, ನೀವು ಗಂಟೆಗೆ ₹300 ರಿಂದ ₹1,500 ವರೆಗೆ ಗಳಿಸಬಹುದು.

  • ನೀವು ಈ ಕೆಲಸವನ್ನು ಮುಂದುವರಿಸುತ್ತೀರಾ? - ಡೇಟಾ ಎಂಟ್ರಿ ಕೆಲಸಗಳನ್ನು ಸಾಮಾನ್ಯವಾಗಿ ಪಾರ್ಟ್- ಟೈಮ್ ಆಗಿ ಮಾಡಲಾಗುತ್ತದೆ.

5. ಅಪ್ಲಿಕೇಶನ್‌ಗಳನ್ನು ಮತ್ತು ವೆಬ್ ಸೈಟ್ ಗಳನ್ನು ಬೀಟಾ ಟೆಸ್ಟಿಂಗ್ ಮಾಡುವುದು

ಈಗಿನ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ ಹೊಂದಿರುವುದರಿಂದ, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಪರೀಕ್ಷಿಸುವ ಕೆಲಸ ವಿದ್ಯಾರ್ಥಿಗಳಿಗೆ ಪಾರ್ಟ್-ಟೈಮ್ ಹಣವನ್ನು ಗಳಿಸುವ ಒಂದು ಉತ್ತಮ ಆಯ್ಕೆಯಾಗಿದೆ. ಕಂಪನಿಗಳು ಮತ್ತು ಅಪ್ಲಿಕೇಶನ್ ಡೆವಲಪರ್‌ಗಳು ಹೊಸ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ರಚಿಸಿದಾಗ, ಅವರು 'ಬೀಟಾ ಟೆಸ್ಟಿಂಗ್' ಮಾಡಲು ಬಳಕೆದಾರರನ್ನು ನೇಮಿಸಿಕೊಳ್ಳುತ್ತಾರೆ. ನೀವು ಅವರ ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳನ್ನು ಪರೀಕ್ಷಿಸಬೇಕು ಮತ್ತು ನಿಮ್ಮ ಬಳಕೆದಾರರ ಅನುಭವವನ್ನು ವರದಿ ಮಾಡಬೇಕು ಮತ್ತು ಅವು ಸಾರ್ವಜನಿಕರಿಗೆ ಲೈವ್‌ಗೆ ಹೋಗುವ ಮೊದಲು ಅವುಗಳಲ್ಲಿ ಯಾವುದೇ ದೋಷಗಳು ಅಥವಾ ಸಮಸ್ಯೆಗಳು ಇದ್ದರೆ ಗುರುತಿಸಬೇಕು.

ಬೀಟಾಟೆಸ್ಟಿಂಗ್, ಟೆಸ್ಟರ್ ವರ್ಕ್, ಟೆಸ್ಟ್.ಐಒ ಅಥವಾ ಟ್ರೈಮೈಯುಐ ನಂತಹ ಸೈಟ್‌ಗಳಲ್ಲಿ ಈ ಕೆಲಸಗಳನ್ನು ಮಾಡಲು ನೀವು ಸೈನ್ ಅಪ್ ಮಾಡಬಹುದು.

  • ಇದರ ಅವಶ್ಯಕತೆಗಳೇನು? - ಇದಕ್ಕಾಗಿ ನಿಮಗೆ ಯಾವುದೇ ವಿಶೇಷ ಜ್ಞಾನದ ಅಗತ್ಯವಿಲ್ಲ ಆದರೆ ನೀವು ಪರೀಕ್ಷಿಸುತ್ತಿರುವ ಉತ್ಪನ್ನವನ್ನು ಆಧರಿಸಿ, ನೀವು ಅಪ್-ಟು-ಡೇಟ್ ಆಂಡ್ರಾಯ್ಡ್, ಐಒಎಸ್ ಅಥವಾ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರಬೇಕಾಗಬಹುದು.

  • ನೀವು ಎಷ್ಟು ಸಂಪಾದಿಸಬಹುದು? - ಬೀಟಾ ಪರೀಕ್ಷಾ ಪ್ರಕ್ರಿಯೆಯಲ್ಲಿ ನಿಮ್ಮ ಅನುಭವವನ್ನು ಅವಲಂಬಿಸಿ, ನೀವು ಸುಮಾರು ₹1000 ರಿಂದ ₹3000ವರೆಗೆ ಗಳಿಸಬಹುದು.

  • ನೀವು ಈ ಕೆಲಸವನ್ನು ಮುಂದುವರಿಸಬಹುದೇ? - ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಪರೀಕ್ಷೆಯನ್ನು ಸಾಮಾನ್ಯವಾಗಿ ಪಾರ್ಟ್- ಟೈಮ್ ಆಗಿ ಮಾಡಲಾಗುತ್ತದೆ, ಆದರೆ ನೀವು ಪ್ರೋಗ್ರಾಮಿಂಗ್ ಅಥವಾ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಅನುಭವವನ್ನು ಹೊಂದಿದ್ದರೆ, ನಿಮ್ಮ ಭವಿಷ್ಯದ ವೃತ್ತಿಜೀವನದಲ್ಲಿ ನೀವು ಈ ಅನುಭವವನ್ನು ಬಳಸಬಹುದು.

ಆದ್ದರಿಂದ, ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು ಬಯಸುವ ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯವನ್ನು ಹೆಚ್ಚು ಉತ್ಪಾದಕ ರೀತಿಯಲ್ಲಿ ಕಳೆಯುವ ಮೂಲಕ ಸುಲಭವಾಗಿ ಹಣ ಗಳಿಸಬಹುದು. ಈ ಕೆಳಗಿನವುಗಳನ್ನು ಮಾಡುವ ಮೂಲಕ ನಕಲಿ ಏಜೆನ್ಸಿಗಳು, ಸ್ಕ್ಯಾಮ್ ಗಳು ಮತ್ತು ಫ್ರಾಡ್ ಗಳನ್ನು ತಪ್ಪಿಸಲು ಜಾಗರೂಕರಾಗಿರಿ:

  • ಯಾವುದೇ ಸೈಟ್ ಬಗ್ಗೆ ಸಂಪೂರ್ಣವಾಗಿ ರೀಸರ್ಚ್ ಮಾಡುವುದು ಮತ್ತು ಸೈನ್ ಅಪ್ ಮಾಡುವ ಮೊದಲು ಅದರ ಬಗೆಗಿನ ಜನರ ಅಭಿಪ್ರಾಯಗಳನ್ನು ಪರಿಶೀಲಿಸುವುದು.

  • ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳುವ ಯಾವುದೇ ಸೈಟ್ ಬಗ್ಗೆ ಎಚ್ಚರಿಕೆಯಿಂದಿರಿ.

  • ಬಹಳಷ್ಟು ಕೆಲಸವನ್ನು ಒಳಗೊಂಡಿದ್ದರೂ ಪರಿಹಾರವಾಗಿ ಹೆಚ್ಚು ಪಾವತಿಸದ ವೆಬ್‌ಸೈಟ್‌ಗಳಿಗಾಗಿ ನೋಡಿ

  • ಯಾವುದೇ ಒಂದು ಒಪ್ಪಂದಕ್ಕೆ ಸಹಿ ಹಾಕುವ ಮುಂಚೆ ಅದನ್ನು ಚೆನ್ನಾಗಿ ಓದಿ

ಮತ್ತು ಒಮ್ಮೆ ನೀವು ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಯಾವುದೇ ಹೂಡಿಕೆಗಳಿಲ್ಲದೆ ಹಣವನ್ನು ಗಳಿಸಲು ನೀವು ಈ ಸುಲಭ ಮತ್ತು ಸಮಯ ಸ್ನೇಹಿ ಮಾರ್ಗಗಳನ್ನು ಅನುಸರಿಸಬಹುದು.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಪಾರ್ಟ್ ಟೈಮ್ ಉದ್ಯೋಗಗಳು ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡುತ್ತವೆ?

ಪಾರ್ಟ್ ಟೈಮ್ ಉದ್ಯೋಗಗಳು ಎಕ್ಸ್ಟ್ರಾ ಪಾಕೆಟ್ ಮನಿ ಗಳಿಸಲು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗವಾಗಿದೆ. ಮತ್ತು, ವೇತನವನ್ನು ನೀಡುವುದರ ಜೊತೆಗೆ, ಪಾರ್ಟ್-ಟೈಮ್ ಕೆಲಸವು ತರಬೇತಿ ಮತ್ತು ಕೆಲಸದ ಅನುಭವವನ್ನು ಒದಗಿಸುತ್ತದೆ, ವಿಶೇಷವಾಗಿ ನೀವು ನಂತರ ಬಳಸಬಹುದಾದ ವರ್ಗಾವಣೆ ಕೌಶಲ್ಯಗಳಿಗೆ ಸಂಬಂಧಿಸಿದಂತೆ.

ಪಾರ್ಟ್ ಟೈಮ್ ಉದ್ಯೋಗಗಳು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತವೆಯೇ?

ಪಾರ್ಟ್ ಟೈಮ್ ಕೆಲಸವನ್ನು ಹೊಂದಿರುವುದು ತುಂಬಾ ಪ್ರಯೋಜನಕಾರಿಯಾಗಿದೆ, ಆದರೆ ಕೆಲವರಿಗೆ ಪಾರ್ಟ್ ಟೈಮ್ ಕೆಲಸದ ಜೊತೆಗೆ ಫುಲ್ ಟೈಮ್ ಸ್ಟಡಿ ಮಾಡುವುದು ಕಷ್ಟಕರವಾಗಿರುತ್ತದೆ. ಒಂದು ವೇಳೆ ಇದರಿಂದ ನೀವು ಒತ್ತಡವನ್ನು ಅನುಭವಿಸಿದರೆ ಅಥವಾ ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೆ, ನೀವು ಕೆಲಸ ಮಾಡಬೇಕೇ ಅಥವಾ ಬೇಡವೇ ಎಂದು ಆಲೋಚಿಸಬಹುದು.

ವಿದ್ಯಾರ್ಥಿಗಳಿಗೆ ಆನ್‌ಲೈನ್ ಉದ್ಯೋಗಗಳನ್ನು ಎಲ್ಲಿ ಹುಡುಕಬೇಕು?

ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು ಬಯಸುವ ವಿದ್ಯಾರ್ಥಿಗಳಿಗೆ ನಾವು ಈಗಾಗಲೇ ಕೆಲವು ಉನ್ನತ ಸೈಟ್‌ಗಳನ್ನು ನೋಡಿದ್ದೇವೆ. ಆದರೂ ಇವು ನಿಮಗೆ ಇಷ್ಟವಾಗದಿದ್ದರೆ ನೀವು ಮಾನ್ಸ್ಟರ್ ಅಥವಾ ಲಿಂಕ್ಡ್‌ಇನ್‌ನಂತಹ ಉದ್ಯೋಗ ವೆಬ್‌ಸೈಟ್‌ಗಳಿಗೆ ಸೈನ್ ಅಪ್ ಮಾಡಬಹುದು. ಅಷ್ಟೇ ಅಲ್ಲದೆ, ನೀವು ಜಾಬ್ ಲಿಸ್ಟಿಂಗ್ ಪೋಸ್ಟ್ ಮಾಡುವ ಸೋಶಿಯಲ್ ಮೀಡಿಯಾ ಗ್ರೂಪ್ ಗಳಿಗೆ ಸೇರಬಹುದು ಮತ್ತು ಇವೆಲ್ಲವೂ ವಿಫಲವಾದರೆ, ಮುಂಚಿನ ಹಾಗೆ ನಿಮ್ಮ ಸ್ನೇಹಿತರು ಅಥವಾ ಕುಟುಂಬದ ನೆಟ್‌ವರ್ಕ್‌ಗಳ ಮೂಲಕ ಕೆಲಸ ಕೇಳಿ.