ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

2021-22ಕ್ಕೆ ಅಪ್ಲಿಕೇಬಲ್ ಆಗುವ ಟಿಡಿಎಸ್(TDS) ದರಗಳು ಯಾವುವು

ಮೂಲದಲ್ಲಿ ಡಿಡಕ್ಟ್‌ ಮಾಡಲಾದ ಟ್ಯಾಕ್ಸ್ ಅಥವಾ ಟಿಡಿಎಸ್, ಎಂದರೆ ಸಂಬಳ, ಪೇಮೆಂಟ್, ಗಳಿಸಿದ ಇಂಟರೆಸ್ಟ್, ಕಮಿಷನ್ ಇತ್ಯಾದಿಗಳಂತಹ ವಿವಿಧ ಇನ್‌ಕಮ್‌ ಮೂಲಗಳ ಮೇಲೆ ಡಿಡಕ್ಟ್‌ ಮಾಡಲಾದ ಟ್ಯಾಕ್ಸ್. ಆದ್ದರಿಂದ, ಪೇಮೆಂಟ್ ಅನ್ನು ಸುಗಮಗೊಳಿಸಲು ನವೀಕರಿಸಿದ ದರಗಳ ಮೇಲೆ ಗಮನ ಇರಿಸಿಕೊಳ್ಳುವುದು ಮುಖ್ಯವಾಗಿದೆ.

2021-22ರ ಆರ್ಥಿಕ ವರ್ಷದ ಟಿಡಿಎಸ್‌ ದರಗಳ ವಿವರವಾದ ಮಾಹಿತಿಯನ್ನು ಕಂಡುಹಿಡಿಯಲು ಸ್ಕ್ರೋಲ್ ಮಾಡುತ್ತಿರಿ.

ಆರ್ಥಿಕ ವರ್ಷ 2021-22ಕ್ಕೆ ಟಿಡಿಎಸ್‌(TDS) ದರಗಳು

ಎಕನಾಮಿಕ್ ಟೈಮ್ಸ್ 1ನೇ ಏಪ್ರಿಲ್ 2021ರಿಂದ ಜಾರಿಗೆ ಬರುವಂತೆ ಸ್ಯಾಲರಿ ಅಲ್ಲದ ಪೇಮೆಂಟ್‌ಗಳ ಮೇಲೆ ಟಿಡಿಎಸ್‌ ಮತ್ತು ಟಿಸಿಎಸ್‌ ದರಗಳಲ್ಲಿ ಹೆಚ್ಚಳದ ಕುರಿತಾಗಿ ವರದಿ ಮಾಡಿದೆ.

ಉದಾಹರಣೆಗೆ, 1ನೇ ಏಪ್ರಿಲ್ 2021 ಮತ್ತು 31ನೇ ಮಾರ್ಚ್ 2022ರ ನಡುವೆ ಫಿಕ್ಸ್‌ಡ್‌ ಡೆಪಾಸಿಟ್‌ ಮೇಲೆ ಪಾವತಿಸಿದ ಇಂಟರೆಸ್ಟ್ ₹40,000 ಮೀರಿದರೆ, ಸಾಲದಾತನು ಈಗ ಮರುಪಾವತಿಸಿದ ಇಂಟರೆಸ್ಟ್‌ ಮೇಲೆ 10% ಟ್ಯಾಕ್ಸ್ ಅನ್ನು ಡಿಡಕ್ಟ್‌ ಮಾಡುತ್ತಾನೆ. ಹಿಂದೆ ಈ ದರವು ಆರ್ಥಿಕ ವರ್ಷ 2020-21ರಲ್ಲಿ 7.5% ಆಗಿತ್ತು.

ಆರ್ಥಿಕ ವರ್ಷ 2020-21ರ Q4ಗೆ ಟಿಡಿಎಸ್ ರಿಟರ್ನ್ಸ್ ಫೈಲ್ ಮಾಡಲುಅಂತಿಮ ದಿನಾಂಕವನ್ನು 15ನೇ ಜುಲೈ 2021ರವರೆಗೆ ವಿಸ್ತರಿಸಲಾಗಿತ್ತು.

2021-22ರ ಟಿಡಿಎಸ್ ದರವನ್ನು ತೋರಿಸುವ ಟೇಬಲ್ ಇಲ್ಲಿದೆ.

ಪೇಮೆಂಟ್ ಸ್ವರೂಪ ಮತ್ತು ಸೆಕ್ಷನ್ 

ಮಿತಿ  ವೈಯಕ್ತಿಕ/ ಹೆಚ್‌ಯುಎಫ್‌ ಟಿಡಿಎಸ್‌ ದರ 
192A, ಇಪಿಎಫ್‌ನಿಂದ ಅವಧಿಪೂರ್ವ ವಿತ್‌ಡ್ರಾವಲ್‌ ₹ 50,000 10% (ಪ್ಯಾನ್ ಕಾರ್ಡ್ ಇಲ್ಲದಿದ್ದರೆ 20%)
ಸ್ಯಾಲರೀಸ್,192 ಉದ್ಯೋಗಿಯ ಐಟಿ ಡಿಕ್ಲರೇಷನ್ ಪ್ರಕಾರ ಸರಾಸರಿ ದರ
ಡಿವಿಡೆಂಡ್ಸ್, 194 ₹ 5,000 10%
ಸೆಕ್ಯೂರಿಟಿಗಳ ಮೇಲಿನ ಇಂಟರೆಸ್ಟ್,193 ₹ 2,500 10%
ಬ್ಯಾಂಕುಗಳಿಂದ ಇಂಟರೆಸ್ಟ್, 194A ₹ 40,000 10%
ಸೀನಿಯರ್‌ ಸಿಟಿಜನ್‌, 194A ₹ 50,000 10%
ಸಿಂಗಲ್ ಕಾಂಟ್ರಾಕ್ಟರ್ ಪೇಮೆಂಟ್, 194C ₹ 30,000 1%
ಒಟ್ಟು ಕಾಂಟ್ರಾಕ್ಟರ್ ಪೇಮೆಂಟ್, 194C ₹1 ಲಕ್ಷ 1%
ಇನ್ಶೂರೆನ್ಸ್ ಕಮಿಷನ್ (15G ಮತ್ತು 15H ಅನುಮತಿಸಲಾಗಿದೆ), 194D ₹ 15,000 5%
ಲೈಫ್ ಇನ್ಶೂರೆನ್ಸ್ ಪಾಲಿಸಿ, 194DA ₹1 ಲಕ್ಷ 1%
ಎನ್‌ಎಸ್‌ಎಸ್‌, 194EE ₹ 2,500 10%
ಎಮ್‌ಎಫ್‌ಗಳಿಂದ ಮರುಖರೀದಿ ಘಟಕಗಳು, 194F - 20%
ಲಾಟರಿಯಿಂದ ಕಮಿಷನ್, 194G ₹ 15,000 5%
ಬ್ರೋಕರೇಜ್, 194H ₹ 15,000 5%
ಪ್ಲಾಂಟ್, ಮಷೀನರಿ ಅಥವಾ ಸಲಕರಣೆಗಳ ಬಾಡಿಗೆ, 194I(a) ₹2.40 ಲಕ್ಷ 2%
ಕಟ್ಟಡ, ಭೂಮಿ ಮತ್ತು ಪೀಠೋಪಕರಣಗಳ ಬಾಡಿಗೆ, 194I(b) ₹2.40 ಲಕ್ಷ 10%
ಕೃಷಿ ಭೂಮಿ ಜೊತೆಗೆ ಸ್ಥಿರ ಪ್ರಾಪರ್ಟಿ ಟ್ರಾನ್ಸ್‌ಫರ್‌, 194IA ₹50 ಲಕ್ಷ 1%
ವ್ಯಕ್ತಿಗಳು/ ಹೆಚ್‌ಯುಎಫ್‌ರಿಂದ ಬಾಡಿಗೆ (1 ಜೂನ್ 2017ರಿಂದ ಜಾರಿಗೆ ಬರುವಂತೆ), 194IB ಪ್ರತೀ ತಿಂಗಳು ₹50000 5%
ಆರ್ಥಿಕ ವರ್ಷ 2017-18ರಿಂದ ಅಪ್ಲಿಕೇಬಲ್‌ ಆಗುವ ಒಪ್ಪಂದದ ಅಡಿಯಲ್ಲಿ ಪೇಮೆಂಟ್, 194IC - 10%
ಶುಲ್ಕ-ತಂತ್ರಜ್ಞಾನ ಸೇವೆಗಳು, ಕಾಲ್ ಸೆಂಟರ್, ಇತ್ಯಾದಿ, 194J (a) ₹ 30,000 2%
ಗೌರವ ಧನ ಅಥವಾ ಪ್ರೊಫೆಷನಲ್‌ ಸರ್ವೀಸ್‌ಗಾಗಿ ಶುಲ್ಕ, 194J (b) ₹ 30,000 10%
ಕೃಷಿ ಭೂಮಿಯನ್ನು ಹೊರತುಪಡಿಸಿ ಇತರ ಸ್ಥಿರಾಸ್ತಿಗಳ ಟ್ರಾನ್ಸ್‌ಫರ್‌ಗೆ ಪರಿಹಾರ, 194LA ₹2.50 ಲಕ್ಷ 10%
ಮ್ಯೂಚುವಲ್ ಫಂಡ್‌ಗಳಿಂದ ಡಿವಿಡೆಂಡ್‌ಗಳ ಪೇಮೆಂಟ್, 194K ₹ 5,000 10%
ಮೂಲಸೌಕರ್ಯ ಸಾಲ ಫಂಡ್‌ ಇನ್‌ಕಮ್‌ (ಎನ್‌ಆರ್‌ಐಗಳಿಗೆ ಟಿಡಿಎಸ್‌ ದರ), 194LB - 5%
ನಿರ್ದಿಷ್ಟ ಬಾಂಡ್‌ಗಳು ಮತ್ತು ಸರ್ಕಾರಿ ಭದ್ರತೆಗಳ ಮೇಲಿನ ಇಂಟರೆಸ್ಟ್, 194LD - 5%
ಸಾಲ ನೀಡುವ ಸಂಸ್ಥೆಯೊಂದಿಗೆ ಒಂದು ಅಥವಾ ಹೆಚ್ಚಿನ ಖಾತೆಗಳಿಂದ ಹಿಂದಿನ ವರ್ಷದಲ್ಲಿ ಕ್ಯಾಶ್ ವಿತ್‌ಡ್ರಾವಲ್, 194N ₹1 ಕೋಟಿ 2%
ಕಮಿಷನ್ ಅಥವಾ ಬ್ರೋಕರೇಜ್‌ಗೆ ವ್ಯಕ್ತಿ ಅಥವಾ ಹೆಚ್‌ಯುಎಫ್‌ ಪೇಮೆಂಟ್, 194M ₹50 ಲಕ್ಷ 5%
ಸರಕುಗಳ ಖರೀದಿ, 194Q ₹50 ಲಕ್ಷ 0.10%
ಇ-ಕಾಮರ್ಸ್‌ ಮೇಲೆ ಟಿಡಿಎಸ್, 1940 ₹5 ಲಕ್ಷ 1%

ತಾಂತ್ರಿಕವಾಗಿ, ವಿವಿಧ ಇನ್‌ಕಮ್‌ ಮೂಲಗಳಿಂದ ಟ್ಯಾಂಕ್ಸ್‌ ಸಂಗ್ರಹಿಸಲು ಟಿಡಿಎಸ್ ಪರಿಕಲ್ಪನೆಯನ್ನು ಪರಿಚಯಿಸಲಾಯಿತು. ಇದು ಡಿಡಕ್ಟರ್‌ನನ್ನು ನಿರ್ಬಂಧಿಸುತ್ತದೆ, ಡಿಡಕ್ಟೀಗೆ ಪೇಮೆಂಟ್‌ ಮಾಡಲು ಲಯಬಲ್ ಮಾಡುತ್ತದೆ, ಮೂಲದಲ್ಲಿ ಟ್ಯಾಕ್ಸ್ ಡಿಡಕ್ಷನ್ ಮಾಡಿ ಮತ್ತು ಅದನ್ನು ಕೇಂದ್ರ ಸರ್ಕಾರದ ಖಾತೆಗೆ ರವಾನಿಸುತ್ತದೆ.

ಆದ್ದರಿಂದ, ಕೋಷ್ಟಕದಲ್ಲಿ ಉಲ್ಲೇಖಿಸಲಾದ ಟಿಡಿಎಸ್‌ ದರಗಳ ಹೊರತಾಗಿ, ಕಂಪನಿಯನ್ನು ಹೊರತುಪಡಿಸಿ ಇತರ ಭಾರತೀಯ ಘಟಕಗಳಿಗೆ ಸರ್ಕಾರವು ನಿರ್ದಿಷ್ಟ ದರಗಳನ್ನು ನಿಗದಿಪಡಿಸಿದೆ.

[ಮೂಲ 1]

[ಮೂಲ 2]

[ಮೂಲ 3]

ಟಿಡಿಎಸ್‌(TDS ) ದರಗಳು ಭಾರತದ ನಿವಾಸಿಗಳಿಗೆ ಅನ್ವಯಿಸುತ್ತವೆ (ಕಂಪನಿ ಹೊರತುಪಡಿಸಿ)

ಭಾರತೀಯ ನಿವಾಸಿಗಳಿಗೆ ಟಿಡಿಎಸ್‌ ದರ ಚಾರ್ಟ್ ಅನ್ನು ತೋರಿಸುವ ಟೇಬಲ್ ಇಲ್ಲಿದೆ.

ಪೇಮೆಂಟ್ ಸ್ವರೂಪ 

ಸೆಕ್ಷನ್ ಟಿಡಿಎಸ್ ದರ 
ಸ್ಯಾಲರಿಯ ಪೇಮೆಂಟ್ 192 ಸರಾಸರಿ ದರ
ಭದ್ರತೆಗಳ ಮೇಲಿನ ಇಂಟರೆಸ್ಟ್ 193 10%
ಇಂಟರೆಸ್ಟ್ ರೂಪದಲ್ಲಿ ಇನ್‌ಕಮ್‌ 194A 10%
ಯಾವುದೇ ಡಿವಿಡೆಂಡ್ ಪೇಮೆಂಟ್ 194 10%
ಲಾಟರಿ ಮತ್ತು ಇತರ ಆಟಗಳಿಂದ ಇನ್‌ಕಮ್‌ 194B 30%
ಕಾಂಟ್ರಾಕ್ಟರ್‌ಗೆ ಪೇಮೆಂಟ್‌ - ಹೆಚ್‌ಯುಎಫ್‌/ವ್ಯಕ್ತಿ 194C 1%
ಕಾಂಟ್ರಾಕ್ಟರ್‌ಗೆ ಪೇಮೆಂಟ್‌ - ಇತರರು 194C 2%
ಕುದುರೆ ರೇಸ್ ಗೆಲುವಿನಿಂದ ಇನ್‌ಕಮ್‌ 194BB 30%
ಲೈಫ್ ಇನ್ಶೂರೆನ್ಸ್ ಪಾಲಿಸಿಗೆ ಯಾವುದೇ ಮೊತ್ತದ ಪೇಮೆಂಟ್ 194DA 5%
ಇನ್ಶೂರೆನ್ಸ್ ಕಮಿಷನ್ 194D 5%
ಯುನಿಟ್ ಟ್ರಸ್ಟ್ ಆಫ್ ಇಂಡಿಯಾ (ಯುಟಿಐ) ಅಥವಾ ಮ್ಯೂಚುವಲ್ ಫಂಡ್ ಮೂಲಕ ಯುನಿಟ್ ಮರುಖರೀದಿಯ ಕಾರಣದಿಂದ ಪೇಮೆಂಟ್ 194F 20%
ನ್ಯಾಷನಲ್ ಸೇವಿಂಗ್ಸ್ ಸ್ಕೀಮ್ ಅಡಿಯಲ್ಲಿ ಪೇಮೆಂಟ್ 194EE 5%
ಕಮಿಷನ್ ಪೇಮೆಂಟ್‌ಗಳು 194G 5%
ಪ್ಲಾಂಟ್/ಮಷೀನರಿ ಮೇಲೆ ಬಾಡಿಗೆ 194-I 2%
ಭೂಮಿ, ಪೀಠೋಪಕರಣಗಳು, ಕಟ್ಟಡ ಅಥವಾ ಫಿಟ್ಟಿಂಗ್ ಮೇಲೆ ಬಾಡಿಗೆ 194-I 10%
ಬ್ರೋಕರೇಜ್ 194H 5%
ಜಂಟಿ ಅಭಿವೃದ್ಧಿ ಒಪ್ಪಂದದ ಅಡಿಯಲ್ಲಿ ಪೇಮೆಂಟ್ 194-IC 10%
ಕೃಷಿ ಭೂಮಿಯನ್ನು ಹೊರತುಪಡಿಸಿ ಕೆಲವು ಸ್ಥಿರ ಆಸ್ತಿಯ ಟ್ರಾನ್ಸ್‌ಫರ್ ಮೇಲೆ ಮಾಡಿದ ಪೇಮೆಂಟ್ 194-IA 1%
ಹೆಚ್‌ಯುಎಫ್‌ ಅಥವಾ ವ್ಯಕ್ತಿಯಿಂದ ಬಾಡಿಗೆ ಪೇಮೆಂಟ್ 194-IB 5%
ವೃತ್ತಿಪರ ಸೇವೆಗಳಿಗೆ ಶುಲ್ಕ, ನಿರ್ದೇಶಕರಿಗೆ ಕಮಿಷನ್ ಮತ್ತು ಬಿಸಿನೆಸ್‌ಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಯನ್ನು ನಡೆಸದಿರುವುದು 194J 10%
ತಾಂತ್ರಿಕ ಸೇವೆಗಳು ಮತ್ತು ಮಾರಾಟ ಅಥವಾ ವಿತರಣೆಗಾಗಿ ಯಾವುದೇ ಪೇಟೆಂಟ್ ಅನ್ನು ಹಂಚಿಕೊಳ್ಳದಿರುವುದು 194J 2%
ಬಿಸಿನೆಸ್ ಟ್ರಸ್ಟ್‌ನಿಂದ ಅದರ ಯುನಿಟ್‌ಹೋಲ್ಡರ್‌ಗೆ ವಿತರಿಸಿದ ಇನ್‌ಕಮ್‌ 194LBA(1) 10%
ಕೆಲವು ಸ್ಥಿರ ಆಸ್ತಿಯ ಮೇಲಿನ ಪೇಮೆಂಟ್ 194LA 10%
ಮ್ಯೂಚುವಲ್ ಫಂಡ್‌ನ ಘಟಕಗಳಲ್ಲಿ ಯಾವುದೇ ಇನ್‌ಕಮ್‌ನ ಪೇಮೆಂಟ್‌ 194K 10%
ವ್ಯಕ್ತಿಗಳು/ಎಚ್‌ಯುಫ್‌ಗೆ ಭದ್ರತೆ ಫಂಡ್‌ನಲ್ಲಿನ ಇನ್‌ವೆಸ್ಟ್‌ಮೆಂಟ್‌ನಿಂದ ಇನ್‌ಕಮ್‌ 194LBC 25%
₹50 ಲಕ್ಷಗಳ ಲಿಮಿಟ್‌ನೊಂದಿಗೆ ವ್ಯಕ್ತಿ/ಹೆಚ್‌ಯುಎಫ್‌ರಿಂದ ಪೇಮೆಂಟ್‌ಗಳು 194M 5%
₹1 ಕೋಟಿ ಮೊತ್ತದ ಲಿಮಿಟ್ ಅನ್ನು ಮೀರಿದ ವಿತ್‌ಡ್ರಾವಲ್‌ 194N 2%
₹50 ಲಕ್ಷಕ್ಕಿಂತ ಹೆಚ್ಚಿನ ಸರಕುಗಳ ಒಟ್ಟು ವ್ಯಾಲ್ಯೂನೊಂದಿಗೆ ಸರಕುಗಳ ಖರೀದಿಯ ಮೇಲಿನ ಪೇಮೆಂಟ್‌ಗಳು 194Q 0.10%
ಪೇಮೆಂಟ್‌ಗಳನ್ನು ಮಾಡುವಾಗ ಸಾಲ ನೀಡುವ ಸಂಸ್ಥೆಗಳಿಂದ ಟ್ಯಾಕ್ಸ್ ಡಿಡಕ್ಷನ್ 194P ಒಟ್ಟು ಇನ್‌ಕಮ್‌ ಮೇಲಿನ ಟ್ಯಾಕ್ಸ್‌
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ಸರಕುಗಳ ಮಾರಾಟ 194O 1%
ಇತರ ಇನ್‌ಕಮ್‌ - 10%

ಈಗ 2021-22ರ ಆರ್ಥಿಕ ವರ್ಷದಲ್ಲಿ ಅನಿವಾಸಿಗಳಿಗೆ ಟಿಡಿಎಸ್ ದರವನ್ನು ಪರಿಶೀಲಿಸೋಣ.

[ಮೂಲ]

ಅನಿವಾಸಿ ಭಾರತೀಯರಿಗೆ ಅಪ್ಲಿಕೇಬಲ್ ಆಗುವ ಟಿಡಿಎಸ್(TDS ) ದರಗಳು (ಕಂಪನಿ ಹೊರತುಪಡಿಸಿ)

ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎನ್‌ಆರ್‌ಐಗಳಿಗೆ ಟಿಡಿಎಸ್‌ ದರಗಳನ್ನು ತೋರಿಸುವ ಟೇಬಲ್ ಇಲ್ಲಿದೆ.

ಪೇಮೆಂಟ್ ಸ್ವರೂಪ 

ಸೆಕ್ಷನ್  ಟಿಡಿಎಸ್ ದರ 
ಸ್ಯಾಲರಿಯ ಪೇಮೆಂಟ್ 192 ಸರಾಸರಿ ದರ
ಕಮಿಷನ್ 194G 5%
ಇಪಿಎಫ್‌ನಿಂದ ಅವಧಿಪೂರ್ವ ವಿತ್‌ಡ್ರಾವಲ್‌ 192A 10%
ಲಾಟರಿ ಗೆಲುವುಗಳಿಂದ ಇನ್‌ಕಮ್‌ 194B 30%
ಕುದುರೆ ರೇಸಿಂಗ್‌ನಿಂದ ಇನ್‌ಕಮ್‌ 194BB 30%
ಯುನಿಟ್ ಟ್ರಸ್ಟ್ ಆಫ್ ಇಂಡಿಯಾದಿಂದ ಯುನಿಟ್ ಅನ್ನು ಮರುಖರೀದಿ ಮಾಡುವುದರಿಂದ ಪೇಮೆಂಟ್ 194F 20%
ಅನಿವಾಸಿ ಕ್ರೀಡಾಪಟುಗೆ ಪೇಮೆಂಟ್ 194E 20%
ಸ್ಥಿರ ಆಸ್ತಿಯ ಮೇಲಿನ ಪರಿಹಾರದ ಪೇಮೆಂಟ್ 194LB 5%
ನ್ಯಾಷನಲ್ ಸೇವಿಂಗ್ಸ್ ಸ್ಕೀಮ್ (ಎನ್‌ಎಸ್‌ಎಸ್‌) ಅಡಿಯಲ್ಲಿ ಒಬ್ಬ ವ್ಯಕ್ತಿಗೆ ಪೇಮೆಂಟ್ 194EE 10%
ಬಿಸಿನೆಸ್‌ನಿಂದ ಬರಬೇಕಾದ ಇಂಟರೆಸ್ಟ್‌ 194LBA(2) 5%
ಬಿಸಿನೆಸ್ ಟ್ರಸ್ಟ್‌ನಿಂದ ಎಸ್‌ಪಿವಿಯಿಂದ ಪಡೆದ ಡಿವಿಡೆಂಡ್ 194LBA(2 10%
ಇನ್‌ವೆಸ್ಟ್‌ಮೆಂಟ್‌ ಫಂಡ್‌ನಿಂದ ಯುನಿಟ್ ಹೋಲ್ಡರ್‌ಗಳಿಗೆ ಇನ್‌ಕಮ್‌ 194LB 30%
ಬಾಡಿಗೆ ಇನ್‌ಕಮ್‌, ಅಥವಾ ಬಿಸಿನೆಸ್ ಟ್ರಸ್ಟ್ ಒಡೆತನದ ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಇನ್‌ಕಮ್‌ 194LBA(3) 30%
ಭಾರತೀಯ ಕಂಪನಿ ವಿದೇಶಿ ಕರೆನ್ಸಿಯಲ್ಲಿ ಎರವಲು ಪಡೆದ ಲೋನ್ ಇಂಟರೆಸ್ಟ್ 194LC 5%
ಐಎಫ್‌ಎಸ್‌ಸಿಯಲ್ಲಿ ಪಟ್ಟಿ ಮಾಡಲಾದ ದೀರ್ಘಾವಧಿಯ ಬಾಂಡ್‌ಗಳ ವಿರುದ್ಧ ಪಾವತಿಸಬೇಕಾದ ಇಂಟರೆಸ್ಟ್‌) 194LC 4%
ಭದ್ರತೆ ಫಂಡ್‌ನಲ್ಲಿನ ಇನ್‌ವೆಸ್ಟ್‌ಮೆಂಟ್‌ನಿಂದ ಇನ್‌ಕಮ್‌ 194LBC 30%
ವಿದೇಶಿ ಇನ್‌ವೆಸ್ಟರ್‌ಗೆ ಬಾಂಡ್ ಮೇಲಿನ ಇಂಟರೆಸ್ಟ್ ಪೇಮೆಂಟ್ 194LD 5%
ಕಡಲಾಚೆಯ ಫಂಡ್ ಘಟಕಗಳಿಂದ ಇನ್‌ಕಮ್‌ 196B 10%
ವಿದೇಶಿ ಕರೆನ್ಸಿ ಬಾಂಡ್‌ಗಳು ಅಥವಾ ಭಾರತೀಯ ಕಂಪನಿಯ ಜಿಡಿಆರ್‌ನಿಂದ ಇನ್‌ಕಮ್‌ 196C 10%
ಎಲ್‌ಟಿಸಿಜಿ ಮೂಲಕ ಬರುವ ಯಾವುದೇ ಇನ್‌ಕಮ್ 195 15%
ಎನ್‌ಆರ್‌ಐಗೆ ಯಾವುದೇ ಇತರ ಮೊತ್ತದ ಪೇಮೆಂಟ್‌ಗೆ ಇರುವ ಮಾರ್ಗಗಳು- ಸೆಕ್ಷನ್ 112A ಅಡಿಯಲ್ಲಿ ಎಲ್‌ಟಿಸಿಜಿ, ಸೆಕ್ಷನ್ 111A ಅಡಿಯಲ್ಲಿ ಎಸ್‌ಟಿಸಿಜಿ, ಸೆಕ್ಷನ್ 112(1)(c)(iii) ಅಡಿಯಲ್ಲಿ ಎಲ್‌ಟಿಸಿಜಿ, ಕೈಗಾರಿಕಾ ನೀತಿಯ ಒಪ್ಪಂದಕ್ಕಾಗಿ ಭಾರತ ಸರ್ಕಾರಕ್ಕೆ ಪಾವತಿಸಬೇಕಾದ ಗೌರವಧನ, ಕೈಗಾರಿಕಾ ಪಾಲಿಸಿಗೆ ಸಂಬಂಧಿಸಿ ಭಾರತ ಸರ್ಕಾರಕ್ಕೆ ಸಲ್ಲಿಸಬೇಕಾದ ತಾಂತ್ರಿಕ ಶುಲ್ಕಗಳು. 195 10%
ಎನ್‌ಆರ್‌ಐಗೆ ಯಾವುದೇ ಇತರ ಮೊತ್ತದ ಪೇಮೆಂಟ್‌ಗೆ ಇರುವ ಮಾರ್ಗಗಳು- ಎನ್‌ಆರ್‌ಐ ಮಾಡಿದ ಇನ್‌ವೆಸ್ಟ್‌ಮೆಂಟ್‌, 115E ಸೆಕ್ಷನ್‌ನಲ್ಲಿ ಉಲ್ಲೇಖಿಸಲಾದ ಎಲ್‌ಟಿಸಿಜಿ, ವಿದೇಶಿ ಕರೆನ್ಸಿಯಲ್ಲಿ ಭಾರತೀಯ ಸರ್ಕಾರದಿಂದ ಎರವಲು ಪಡೆದ ಮೊತ್ತಕ್ಕೆ ಪಾವತಿಸಬೇಕಾದ ಇನ್‌ಕಮ್‌, ಕೈಗಾರಿಕಾ ನೀತಿಗೆ ಸಂಬಂಧಿಸಿದ ವಿಷಯಗಳ ಕುರಿತಾದ ಒಪ್ಪಂದದ ಅನುಸಾರವಾಗಿ ಸರ್ಕಾರ ಅಥವಾ ಭಾರತೀಯ ಕನ್ಸರ್ನ್‌ನಿಂದ ಭಾರತೀಯ ಕನ್ಸರ್ನ್‌ಗೆ ಪಾವತಿಸಬೇಕಾದ ಗೌರವಧನ, ಸೆಕ್ಷನ್ 115Aನಲ್ಲಿ ಉಲ್ಲೇಖಿಸಲಾದ ಕಾಪಿರೈಟ್‌ಗಾಗಿ ಭಾರತೀಯ ಸರ್ಕಾರಕ್ಕೆ ಅಥವಾ ಸರ್ಕಾರದಿಂದ ಪಾವತಿಸಬೇಕಾದ ಗೌರವಧನ. 195 20%
ಎನ್‌ಆರ್‌ಐಗೆ ಸಂಬಂಧಿಸಿದ ಯಾವುದೇ ಇತರ ಇನ್‌ಕಮ್‌ 195 30%

ಭಾರತೀಯ ಮತ್ತು ಭಾರತೀಯರಲ್ಲದ ನಿವಾಸಿಗಳನ್ನು ಹೊರತುಪಡಿಸಿ, ಕಂಪನಿಗಳು ನಿರ್ದಿಷ್ಟ ಮೊತ್ತದ ಟಿಡಿಎಸ್‌ ಅನ್ನು ಪಾವತಿಸಲು ಬದ್ಧವಾಗಿರುತ್ತವೆ. ಆದ್ದರಿಂದ, ನಾವು ದೇಶೀಯ ಮತ್ತು ದೇಶೀಯವಲ್ಲದ ವರ್ಗಗಳ ಪ್ರಕಾರವಾಗಿಯೇ ಸಂಸ್ಥೆಗಳಿಗೆ ಟಿಡಿಎಸ್‌ ದರವನ್ನು ಪ್ರತ್ಯೇಕಿಸಿದ್ದೇವೆ.

ದೇಶೀಯ ಕಂಪನಿಗಳಿಗೆ ಟಿಡಿಎಸ್‌ ದರಗಳು ಅಪ್ಲಿಕೇಬಲ್‌ ಆಗುತ್ತವೆ

ದೇಶೀಯ ಕಂಪನಿಗಳಿಗೆ ಟಿಡಿಎಸ್‌ ದರಗಳನ್ನು ಪಟ್ಟಿಮಾಡಲಾದ ಟೇಬಲ್ ಇಲ್ಲಿದೆ.

ಪೇಮೆಂಟ್ ಸ್ವರೂಪ 

ಸೆಕ್ಷನ್  ಕಂಪನಿಗೆ ಟಿಡಿಎಸ್ ದರ (ದೇಶೀಯ) 
ಇಪಿಎಫ್‌ನಿಂದ ಅವಧಿಪೂರ್ವ ವಿತ್‌ಡ್ರಾವಲ್‌ 192 10%
ಭದ್ರತೆಗಳ ಮೇಲಿನ ಇಂಟರೆಸ್ಟ್ 193 10%
ಇಂಟರೆಸ್ಟ್ ರೂಪದಲ್ಲಿ ಇನ್‌ಕಮ್‌ 194A 10%
ಯಾವುದೇ ಡಿವಿಡೆಂಡ್ ಪೇಮೆಂಟ್ 194 10%
ಕಾಂಟ್ರಾಕ್ಟರ್ ಅಥವಾ ಸಬ್-ಕಾಂಟ್ರಾಕ್ಟರ್‌ಗೆ ಪೇಮೆಂಟ್- ವ್ಯಕ್ತಿಗಳು/ಹೆಚ್‌ಯುಎಫ್‌ 194C 1%
ಕಾಂಟ್ರಾಕ್ಟರ್ ಅಥವಾ ಸಬ್-ಕಾಂಟ್ರಾಕ್ಟರ್‌ಗೆ ಪೇಮೆಂಟ್- ಇತರರು 194C 2%
ಲಾಟರಿ ಗೆಲುವುಗಳ ಮೂಲಕ ಇನ್‌ಕಮ್‌ 194B 30%
ಕುದುರೆ ರೇಸ್ ಗೆಲುವಿನಿಂದ ಇನ್‌ಕಮ್‌ 194BB 30%
ಲೈಫ್ ಇನ್ಶೂರೆನ್ಸ್ ಪಾಲಿಸಿಗೆ ಸಂಬಂಧಿಸಿದಂತೆ ಪೇಮೆಂಟ್ 194DA 5%
ಇನ್ಶೂರೆನ್ಸ್ ಕಮಿಷನ್ 194D 5%
ಯುಟಿಐ ಅಥವಾ ಮ್ಯೂಚುವಲ್ ಫಂಡ್ ಮೂಲಕ ಯುನಿಟ್ ಮರುಖರೀದಿಯಿಂದ ಪೇಮೆಂಟ್ 194F 20%
ಬ್ರೋಕರೇಜ್ 194H 5%
ನ್ಯಾಷನಲ್ ಸೇವಿಂಗ್ಸ್ ಸ್ಕೀಮ್ (ಎನ್‌ಎಸ್‌ಎಸ್‌) ಅಡಿಯಲ್ಲಿ ಒಬ್ಬ ವ್ಯಕ್ತಿಗೆ ಪೇಮೆಂಟ್ 194EE 10%
ಲಾಟರಿ ಟಿಕೆಟ್ ಮಾರಾಟದ ಮೇಲಿನ ಕಮಿಷನ್‌ನಂತಹ ಪೇಮೆಂಟ್‌ಗಳು 194G 5%
ಪ್ಲಾಂಟ್ ಮತ್ತು ಮಷೀನರಿ ಮೇಲೆ ಬಾಡಿಗೆ 194-I 2%
ಭೂಮಿ, ಕಟ್ಟಡ, ಪೀಠೋಪಕರಣ ಅಥವಾ ಫಿಟ್ಟಿಂಗ್ ಮೇಲೆ ಬಾಡಿಗೆ 194-I 10%
ಕಮಿಷನ್‌ನಿಂದ ನಿರ್ದೇಶಕರಿಗೆ ಶುಲ್ಕ, ವೃತ್ತಿಪರ ಸೇವೆಗಳು ಮತ್ತು ಬಿಸಿನೆಸ್ ಚಟುವಟಿಕೆಯ ಕೊರತೆ 194J 10%
ಹೆಚ್‌ಯುಎಫ್‌ ಅಥವಾ ವ್ಯಕ್ತಿಗೆ ಜಂಟಿ ಅಭಿವೃದ್ಧಿ ಒಪ್ಪಂದಗಳ ಅಡಿಯಲ್ಲಿ ವಿತ್ತೀಯ ಪರಿಗಣನೆ 194-IC 10%
ಕೃಷಿ ಭೂಮಿಯನ್ನು ಹೊರತುಪಡಿಸಿ ಸ್ಥಿರ ಆಸ್ತಿಯನ್ನು ಟ್ರಾನ್ಸ್‌ಫರ್‌ ಮಾಡಲು ಪೇಮೆಂಟ್ 194-IA 1%
ಸರಕುಗಳ ಒಟ್ಟು ಮೌಲ್ಯವು ₹ 50 ಲಕ್ಷಗಳನ್ನು ಮೀರಿದಾಗ ಸರಕುಗಳನ್ನು ಖರೀದಿಸಲು ನಿವಾಸಿಗಳಿಗೆ ಪೇಮೆಂಟ್‌ಗಳು 194Q 0.10%
ಸೆಕ್ಷನ್ 10(23D) ಪ್ರಕಾರ ಮ್ಯೂಚುವಲ್ ಫಂಡ್‌ಗಳ ವಿರುದ್ಧ ಇನ್‌ಕಮ್‌ ಪೇಮೆಂಟ್‌ 194K 10%
ಯುನಿಟ್ ಹೋಲ್ಡರ್‌ಗೆ ಇನ್‌ವೆಸ್ಟ್‌ಮೆಂಟ್‌ ಫಂಡ್‌ ವಿರುದ್ಧ ಪಾವತಿಸಿದ ಇನ್‌ಕಮ್‌ 194LBB 10%
ಕೆಲವು ಸ್ಥಿರ ಆಸ್ತಿಯನ್ನು ಪಡೆಯುವುದರ ಮೇಲಿನ ಪೇಮೆಂಟ್ 194LA 10%
ಕ್ಯಾಶ್ ವಿತ್‌ಡ್ರಾವಲ್‌ 194N 2%
ಬಿಸಿನೆಸ್‌ ಟ್ರಸ್ಟ್‌ನಿಂದ ಅದರ ಯುನಿಟ್‌ ಹೋಲ್ಡರ್‌ಗೆ ವಿತರಿಸಿದ ಇನ್‌ಕಮ್‌ 194LBA(1) 10%
ಭದ್ರತೆ ಫಂಡ್‌ನಲ್ಲಿನ ಇನ್‌ವೆಸ್ಟ್‌ಮೆಂಟ್‌ನಿಂದ ಇನ್‌ಕಮ್‌ 194LBC 10%
ಲಿಮಿಟ್ ₹50 ಲಕ್ಷಗಳಾಗಿದ್ದಾಗ ವ್ಯಕ್ತಿ/ಹೆಚ್‌ಯುಎಫ್‌ರಿಂದ ಪೇಮೆಂಟ್‌ಗಳು 194M 5%

ಭಾರತೀಯ ಮತ್ತು ಭಾರತೀಯರಲ್ಲದ ನಿವಾಸಿಗಳನ್ನು ಹೊರತುಪಡಿಸಿ, ಕಂಪನಿಗಳು ನಿರ್ದಿಷ್ಟ ಮೊತ್ತದ ಟಿಡಿಎಸ್‌ ಅನ್ನು ಪಾವತಿಸಲು ಬದ್ಧವಾಗಿರುತ್ತವೆ. ಆದ್ದರಿಂದ, ನಾವು ದೇಶೀಯ ಮತ್ತು ದೇಶೀಯವಲ್ಲದ ವರ್ಗಗಳ ಪ್ರಕಾರವಾಗಿಯೇ ಸಂಸ್ಥೆಗಳಿಗೆ ಟಿಡಿಎಸ್‌ ದರವನ್ನು ಪ್ರತ್ಯೇಕಿಸಿದ್ದೇವೆ.

[ಮೂಲ]

ದೇಶೀಯವಲ್ಲದ ಕಂಪನಿಗಳಿಗೆ ಟಿಡಿಎಸ್(TDS ) ದರಗಳು

ದೇಶೀಯವಲ್ಲದ ಪ್ರೈವೇಟ್ ಲಿಮಿಟೆಡ್ ಕಂಪನಿಗಳಿಗೆ ಟಿಡಿಎಸ್ ದರವನ್ನು ವಿವರಿಸುವ ಟೇಬಲ್ ಇಲ್ಲಿದೆ.

ಪೇಮೆಂಟ್ ಸ್ವರೂಪ 

ಸೆಕ್ಷನ್  ಟಿಡಿಎಸ್ ದರ 
ಲಾಟರಿ ಗೆಲುವುಗಳ ಮೂಲಕ ಇನ್‌ಕಮ್‌ 194B 30%
ಕುದುರೆ ರೇಸ್ ಗೆಲುವಿನಿಂದ ಇನ್‌ಕಮ್‌ 194BB 30%
ಅನಿವಾಸಿ ಕ್ರೀಡಾಪಟುಗೆ ಪೇಮೆಂಟ್ 194E 20%
ಕಮಿಷನ್‌ನಂತಹ ಪೇಮೆಂಟ್‌ಗಳು 194G 5%
ಸ್ಥಿರ ಪ್ರಾಪರ್ಟಿಯ ಖರೀದಿಯ ಮೇಲಿನ ಪೇಮೆಂಟ್ 194LB 5%
ಬಿಸಿನೆಸ್‌ನಿಂದ ಬರಬೇಕಾದ ಇಂಟರೆಸ್ಟ್‌ 194LBA(2) 5%
ಬಿಸಿನೆಸ್ ಟ್ರಸ್ಟ್‌ನಿಂದ ಎಸ್‌ಪಿವಿಯಿಂದ ಪಡೆದ ಡಿವಿಡೆಂಡ್ 194LBA(2) 10%
ಬಾಡಿಗೆ ಇನ್‌ಕಮ್‌, ಅಥವಾ ಬಿಸಿನೆಸ್ ಟ್ರಸ್ಟ್ ಒಡೆತನದ ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಇನ್‌ಕಮ್‌ 194LBA(3) 30%
ಇನ್‌ವೆಸ್ಟ್‌ಮೆಂಟ್‌ ಫಂಡ್‌ನಿಂದ ಯುನಿಟ್ ಹೋಲ್ಡರ್‌ಗಳಿಗೆ ಇನ್‌ಕಮ್‌ 194LBB 30%
ಭದ್ರತೆ ಫಂಡ್‌ನಲ್ಲಿನ ಇನ್‌ವೆಸ್ಟ್‌ಮೆಂಟ್‌ನಿಂದ ಇನ್‌ಕಮ್‌ 194LBC 30%
ವಿದೇಶಿ ಕರೆನ್ಸಿಯಲ್ಲಿ ಭಾರತೀಯ ಕಂಪನಿಯಿಂದ ಎರವಲು ಪಡೆದ ಲೋನ್ ಮೇಲಿನ ಇಂಟರೆಸ್ಟ್‌ 194LC 5%
ಐಎಫ್‌ಎಸ್‌ಸಿಯಲ್ಲಿ ಪಟ್ಟಿ ಮಾಡಲಾದ ದೀರ್ಘಾವಧಿಯ ಬಾಂಡ್‌ಗಳ ವಿರುದ್ಧ ಪಾವತಿಸಬೇಕಾದ ಇಂಟರೆಸ್ಟ್‌ 194LC 4%
ವಿದೇಶಿ ಇನ್‌ವೆಸ್ಟರ್‌ಗಳ ಬಾಂಡ್ ಮೇಲಿನ ಇಂಟರೆಸ್ಟ್‌ ಪೇಮೆಂಟ್ 194LD 5%
ವಿದೇಶಿ ಕರೆನ್ಸಿ ಬಾಂಡ್‌ಗಳಿಂದ ಬಂದ ಇನ್‌ಕಮ್‌ (ಎಲ್‌ಟಿಸಿಜಿ ಸೇರಿದಂತೆ). 196C 10%
ಕಡಲಾಚೆಯ ಫಂಡ್ ಘಟಕಗಳಿಂದ ಇನ್‌ಕಮ್‌ (ಎಲ್‌ಟಿಸಿಜಿ ಸೇರಿದಂತೆ). 196B 10%

ಪೇಮೆಂಟ್ ಸ್ವರೂಪ  

ಸೆಕ್ಷನ್   ಟಿಡಿಎಸ್ ದರ  
ಸೆಕ್ಷನ್ 111A ಅಡಿಯಲ್ಲಿ ಎಸ್‌ಟಿಸಿಜಿ ಮೂಲಕ ಇನ್‌ಕಮ್‌ 195 15%
ಕೈಗಾರಿಕಾ ಪಾಲಿಸಿಗೆ ಸಂಬಂಧಿಸಿದ ವಿಷಯಗಳ ಮೇಲಿನ ಅಗ್ರಿಮೆಂಟ್ ಅನುಸರಿಸುತ್ತಾ ಇಂಡಿಯನ್‌ ಕನ್ಸರ್ನ್‌ ಅಥವಾ ಸರ್ಕಾರದಿಂದ ಇಂಡಿಯನ್‌ ಕನ್ಸರ್ನ್‌ಗೆ ಪಾವತಿಸಬೇಕಾದ ಗೌರವ ಧನದ ಗಳಿಕೆಗಳು 195 10%
ಸೆಕ್ಷನ್ 112A ಶಿಫಾರಸುಗಳ ಪ್ರಕಾರ ದೀರ್ಘಾವಧಿಯ ಬಂಡವಾಳ ಲಾಭದಿಂದ ಉಂಟಾಗುವ ಇನ್‌ಕಮ್‌ 195 10%
ಯಾವುದೇ ಇತರ ಮೂಲದಿಂದ ಬರುವ ಇನ್‌ಕಮ್‌ನಿಂದ ಅನಿವಾಸಿ ಕಂಪನಿಗೆ ಯಾವುದೇ ಇತರ ಅಮೌಂಟ್‌ನ ಪೇಮೆಂಟ್ 195 40%
ಇವುಗಳಿಂದ ಪೇಮೆಂಟ್‌ - ಸೆಕ್ಷನ್ 112(1)(c)(iii) ಅಡಿಯಲ್ಲಿ ಎಲ್‌ಟಿಸಿಜಿ ಮೂಲಕ ಬಂದ ಇನ್‌ಕಮ್‌ನಂತಹ ಯಾವುದೇ ಇತರ ಅಮೌಂಟ್, ತಾಂತ್ರಿಕ ಸೇವೆಗಳಿಗಾಗಿ ಸರ್ಕಾರ ಅಥವಾ ಭಾರತೀಯ ಸಂಸ್ಥೆಯು ಪಾವತಿಸಬೇಕಾದ ಶುಲ್ಕದ ಪ್ರಕಾರ ಗಳಿಸಿದ ಇನ್‌ಕಮ್‌, ಕೆಲವು ಷರತ್ತುಗಳಿಗೆ ಒಳಪಟ್ಟು ಸರ್ಕಾರ ಅಥವಾ ಭಾರತೀಯ ಸಂಸ್ಥೆಯಿಂದ ಪಾವತಿಸಬೇಕಾದ ರಾಯಲ್ಟಿ ಮೂಲಕ ಉಂಟಾಗುವ ಇನ್‌ಕಮ್‌. 195 10%

ಈ ಕೋಷ್ಟಕಗಳನ್ನು ಅನುಸರಿಸುವುದರಿಂದ ನಿರ್ದಿಷ್ಟ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಟಿಡಿಎಸ್‌ ದರಗಳಲ್ಲಿನ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಆಗುತ್ತದೆ.

ಕ್ಯಾಲ್ಕುಲೇಷನ್ ತುಂಬಾ ಜಟಿಲವಾಗಿರುವುದರಿಂದ, ಸಂಪೂರ್ಣ ಪ್ರೊಸೆಸ್ ಅನ್ನು ಸುಗಮಗೊಳಿಸಲು ಆನ್‌ಲೈನ್ ಟಿಡಿಎಸ್ ಕ್ಯಾಲ್ಕುಲೇಟರ್‌ಗಳನ್ನು ಬಳಸಲು ನಾವು ಸಲಹೆ ನೀಡುತ್ತೇವೆ.

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಸೆಕ್ಯುರಿಟಿಗಳ ಮೇಲಿನ ಇಂಟರೆಸ್ಟ್ ಮೇಲೆ ಏನು ಟಿಡಿಎಸ್(TDS) ದರಗಳು ಅಪ್ಲಿಕೇಬಲ್ ಆಗುತ್ತವೆ?

ಸೆಕ್ಯುರಿಟಿಗಳ ಮೇಲಿನ ಬಡ್ಡಿಗೆ ಅಪ್ಲಿಕೇಬಲ್ ಆಗುವ ಟಿಡಿಎಸ್ ದರವು 10% ಆಗಿದೆ.

2021ರಲ್ಲಿ ಸ್ಯಾಲರಿ ಅಲ್ಲದ ಪೇಮೆಂಟ್‌ಗಳಿಗೆ ಹೊಸ ಟಿಡಿಎಸ್(TDS ) ದರಗಳು ಅಪ್ಲಿಕೇಬಲ್‌ ಆಗುತ್ತವೆಯೇ?

ಹೌದು, ಆರ್ಥಿಕ ವರ್ಷ 2021-22ರಲ್ಲಿ ಸ್ಯಾಲರಿ ಅಲ್ಲದ ಪೇಮೆಂಟ್‌ಗಳಿಗೆ ಹೊಸ ಟಿಡಿಎಸ್‌ ದರಗಳು ಅಪ್ಲಿಕೇಬಲ್‌ ಆಗುತ್ತವೆ.