ಕಾಂಪ್ರೆಹೆನ್ಸಿವ್ ಮೋಟಾರ್ ಇನ್ಶೂರೆನ್ಸ್

ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ

ವಾಹನವನ್ನು ಚಾಲನೆ ಮಾಡುವುದು ಸೌಕರ್ಯ ಮತ್ತು ಅನುಕೂಲವನ್ನು ಒಳಗೊಂಡಿರುವ ಕಾರಣದಿಂದ. ಆದರೆ ಕೆಲವೊಮ್ಮೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಓಡಿಸುವುದರಿಂದ ಅನಿರೀಕ್ಷಿತ ಅಪಘಾತಗಳು ಸಂಭವಿಸಬಹುದು. ಅಂತಹ ಘಟನೆಗಳಿಗಾಗಿ, ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಖರೀದಿಸುವುದು ಮುಂದೆ ಉಂಟಾಗಬಹುದಾದ ಘಟನೆಗಳಿಗೆ ಕವರ್  ಒದಗಿಸಲು ಮೊದಲೇ ಯೋಜನೆ ರೂಪಿಸಿಕೊಂಡಂತೆ.

ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಎಂದರೇನು?

ವಾಹನ ಮತ್ತು ಥರ್ಡ್ ಪಾರ್ಟಿಗೆ (ದೈಹಿಕ ಗಾಯ ಅಥವಾ ಆಸ್ತಿ ಹಾನಿಗೆ) ಉಂಟಾದ ಆಕಸ್ಮಿಕ ಹಾನಿಯ ಸಮಯದಲ್ಲಿ ಮಾಲೀಕರ ಆರ್ಥಿಕ ಮೊತ್ತವನ್ನು ಪಾವತಿಸುವ ಇನ್ಶೂರೆನ್ಸ್ ಪಾಲಿಸಿಯನ್ನು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಎಂದು ಕರೆಯಲಾಗುತ್ತದೆ.

ಇನ್ಶೂರೆನ್ಸ್ ಗಾಗಿ ಮಾರುಕಟ್ಟೆಯ ಬೇಡಿಕೆಯನ್ನು ತರ್ಕಬದ್ಧಗೊಳಿಸಲು, ನಿಯಂತ್ರಕ ಐ.ಆರ್.ಡಿ.ಎ(IRDA) ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪರಿಚಯಿಸಿತು. ಇದು ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿ ಮತ್ತು ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿಯಾಗಿ ಲಭ್ಯವಿದೆ.

ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಹೊಂದುವುದು ಇವುಗಳಿಗೆ ಒಂದು ರಕ್ಷಣೆಯ ಭರವಸೆಯಾಗಿದೆ:

a) ವಾಹನದ ಸ್ವಂತ ಹಾನಿ.

b) ಅಪಘಾತದಲ್ಲಿ ಒಳಗೊಂಡಿರುವ ಯಾವುದೇ ಥರ್ಡ್ ಪಾರ್ಟಿಯ ಹೊಣೆಗಾರಿಕೆ.

ಯಾವುದೇ ದುರ್ಘಟನೆಯ ಸಂದರ್ಭದಲ್ಲಿ, ಸಾವು ಸಂಭವಿಸಿದಾಗ ಪರಿಹಾರ ಸಿಗದ ಹೊರತು ರಿಪೇರಿಗಾಗಿ ಕ್ಲೈಮ್ ಅನ್ನು ಇತ್ಯರ್ಥಗೊಳಿಸುವ ಜವಾಬ್ದಾರಿ ಇನ್ಶೂರೆನ್ಸ್ ಕಂಪನಿಯ ಮೇಲಿರುತ್ತದೆ. ರಸ್ತೆ ಅಪಘಾತದಿಂದ ಮರಣ ಸಂಭವಿಸಿದಲ್ಲಿ, ವ್ಯಕ್ತಿಯ ನಾಮಿನಿಗೆ MACT ನಿಂದ ಪರಿಹಾರವನ್ನು ನೀಡಲಾಗುತ್ತದೆ. ಕಾಂಪ್ರೆಹೆನ್ಸಿವ್ ಕವರ್  ಎಂದರೆ ಒಬ್ಬರು ತಮ್ಮ ವಾಹನಕ್ಕಾಗಿ ಖರೀದಿಸಬಹುದಾದ ಗರಿಷ್ಠ ಕವರ್  ಆಗಿದೆ.

ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ನಲ್ಲಿ ಯಾವುದಕ್ಕೆಲ್ಲಾ ಕವರ್ ಪಡೆದುಕೊಳ್ಳಬಹುದು?

ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ನಂತೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಖರೀದಿಸುವುದು ಕಡ್ಡಾಯವೇನಲ್ಲ. ವಾಹನ ಮಾಲೀಕರು ತಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಯನ್ನು ರಕ್ಷಿಸಲು ಬಯಸಿದರೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಕವರ್ ಖರೀದಿಸಬಹುದು. ಇದು ಮಾಲೀಕರ ಸ್ವಂತ ಆಯ್ಕೆಯಾಗಿದೆ.

ಅಪಘಾತದ ಪ್ರಮಾಣ ಮತ್ತು ಹಾನಿಯ ಪ್ರಮಾಣ ತುಂಬಾ ದೊಡ್ಡದಾಗಿರಬಹುದು. ಇದರಿಂದ ರಿಪೇರಿಗೆ ಸಾಕಷ್ಟು ಹಣ ಖರ್ಚಾಗಬಹುದು. ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಇವುಗಳಿಗೆ ಕವರ್  ನೀಡುತ್ತದೆ:

  •  ವಾಹನ : ಕಾರಿಗೆ ಹಾನಿ ಉಂಟಾದ ಸಂದರ್ಭದಲ್ಲಿ ರಿಪೇರಿ ವೆಚ್ಚದ ರೂಪದಲ್ಲಿ ಉಂಟಾಗುವ ಖರ್ಚು ಕಾಂಪ್ರೆಹೆನ್ಸಿವ್ ಮೋಟಾರು ಪಾಲಿಸಿಯಿಂದ ಭರಿಸಲ್ಪಡುತ್ತದೆ. ಅಪಘಾತದಿಂದ ಈ ರೀತಿಯ ನಷ್ಟ ಉಂಟಾಗಬಹುದು. ಗ್ಲಾಸ್ ಡ್ಯಾಮೇಜ್ ಮತ್ತು ವಿಂಡ್ ಷೀಲ್ಡ್ ಡ್ಯಾಮೇಜ್ ನಂತಹ ಇತರ ಕೆಲವು ರೀತಿಯ ನಷ್ಟಗಳು ಯಾವುದೇ ಹೊರಗಿನ ವಿಚಾರಗಳಿಂದ ಆಗಬಹುದು. ಉದಾಹರಣೆಗೆ ಪ್ರಾಣಿಗಳಿಂದ ಕಾರಿನ ಗ್ಲಾಸ್ ಹೊಡೆಯುವುದು ಹಾಗು ಇದೇ ರೀತಿಯ ಇನ್ನು ಕೆಲವು ಸಂದರ್ಭಗಳು ಕಾರು ನೋಡಲು ಕೊಳಕಾಗಿ ಕಾಣುವ ಹಾಗೆ ಮಾಡಬಹುದು. ಆದರೆ ಚಿಂತೆ ಮಾಡುವ ಅಗತ್ಯವಿಲ್ಲ, ಈ ಯೋಜನೆಯ ಅಡಿಯಲ್ಲಿ ಇಂತಹ ಕವರ್  ಮೊದಲೇ ಒಳಗೊಂಡಿದೆ!
  • ಥರ್ಡ್ ಪಾರ್ಟಿ ಹೊಣೆಗಾರಿಕೆ ಕವರ್ : ಇದು ಕಾಂಪ್ರೆಹೆನ್ಸಿವ್ ಕವರ್ ನ  ಕಡ್ಡಾಯ ಭಾಗವಾಗಿದೆ. ಥರ್ಡ್ ಪಾರ್ಟಿ ಲಯಬಿಲಿಟಿಯು ಥರ್ಡ್ ಪಾರ್ಟಿಗೆ ಉಂಟಾದ ಗಾಯ ಅಥವಾ ಇನ್ಶೂರೆನ್ಸ್ ಮಾಡಿದ ಕಾರಿನ ಕಾರಣದಿಂದ ಆಸ್ತಿಗೆ ಉಂಟಾದ ಹಾನಿಯನ್ನು ಒಳಗೊಂಡಿರುತ್ತದೆ.
  • ವೈಯಕ್ತಿಕ ಅಪಘಾತಕ್ಕೆ ಕವರ್ : 2 ಲಕ್ಷ ರೂಗಳ ಮಿತಿಯಿಂದ 15 ಲಕ್ಷ ರೂಗಳವರೆಗೆ ಹೆಚ್ಚಿಸಲಾದ ಮಾಲೀಕರು-ಚಾಲಕರನ್ನು ರಕ್ಷಿಸುವ ಕಡ್ಡಾಯ ಕವರ್
  • ಕಾರು ಕಳ್ಳತನ : ಎಲ್ಲಾ ಭದ್ರತೆಯನ್ನು ಕೈಗೊಂಡರೂ, ಅಕಸ್ಮಾತ್ ನಿಮ್ಮ ಕಾರು ಕಳೆದು ಹೋಗಬಹುದು ಅಥವಾ ರಿಪೇರಿ ಸಾಧ್ಯವಿಲ್ಲದ ಹಾಗೆ ಹಾನಿಗೊಳಗಾಗಬಹುದು. ನಿಮ್ಮ ಕಾರು ಮತ್ತು ಪಾಲಿಸಿಯ ಇನ್ಶೂರೆನ್ಸ್ ಮೊತ್ತದ ಆಧಾರದ ಮೇಲೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಅದನ್ನು ಸರಿದೂಗಿಸುತ್ತದೆ.
  • ನೈಸರ್ಗಿಕ ವಿಕೋಪಗಳು : ಬೆಂಕಿ, ಗಲಭೆಗಳು ಮತ್ತು ಸ್ಫೋಟಗಳು, ಮರಗಳು ಮತ್ತು ಇತರ ವಸ್ತುಗಳು, ಕಲ್ಲು ಅಥವಾ ಬಂಡೆಗಳು ಅಥವಾ ಇನ್ನಾವುದಾದರೂ ವಸ್ತುಗಳು ಕಾರುಗಳ ಮೇಲೆ ಬೀಳುವುದು, ಚಂಡಮಾರುತ, ಪ್ರವಾಹ, ಆಲಿಕಲ್ಲು, ಗಾಳಿ ಮತ್ತು ಭೂಕಂಪಗಳಂತಹ ಕೆಲವು ವಿಪತ್ತುಗಳ ಕಾರಣದಿಂದ ಕಾರು ಮುಂದೆ ಪ್ರಯೋಜನಕ್ಕೆ ಬರದಂತೆ ಹಾನಿಗೊಳಗಾಗಬಹುದು.
  • ಆಡ್-ಆನ್ ಕವರ್ ಗಳು : ಹೆಚ್ಚುವರಿ ಪ್ರೀಮಿಯಂ ಪಾವತಿಯ ನಂತರ ಕೆಲವು ಆಡ್-ಆನ್ ಕವರ್ ಗಳನ್ನು ಮೂಲ ಕವರ್ ಗೆ ಸೇರಿಸಬಹುದು. ಅಂತಹ ಕವರ್ ಗಳಿಗೆ ಉದಾಹರಣೆಗಳೆಂದರೆ ಝೀರೋ ಡೆಪ್ರಿಸಿಯೇಷನ್ ಕವರ್ , ರಸ್ತೆಬದಿಯ ಸಹಾಯ, ಇಂಜಿನ್ ಕವರ್ , ಪ್ರಯಾಣಿಕರ ಕವರ್ ಮತ್ತು ಇತರವುಗಳು ಸೇರಿರುತ್ತವೆ.

ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಮತ್ತು ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿಗೆ ಇರುವ ವ್ಯತ್ಯಾಸಗಳು

ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್
ಕವರ್ ಇದು ವಾಹನಕ್ಕೆ, ದೈಹಿಕ ಗಾಯ ಅಥವಾ ಆಸ್ತಿ ಹಾನಿಗಾಗಿ ಥರ್ಡ್ ಪಾರ್ಟಿಯ ಹೊಣೆಗಾರಿಕೆಗೆ ಕವರ್ ನೀಡುತ್ತದೆ. ಥರ್ಡ್ ಪಾರ್ಟಿಯ ದೇಹಕ್ಕೆ ಉಂಟಾದ ಗಾಯ ಅಥವಾ ಕೇವಲ ಅವರ ಆಸ್ತಿ ಹಾನಿಯ ಕಾರಣ ಉದ್ಭವಿಸಬಹುದಾದ ಯಾವುದೇ ಹೊಣೆಗಾರಿಕೆ ವಿರುದ್ಧ ಇದು ಕವರ್ ನೀಡುತ್ತದೆ.
ವಾಹನಗಳು ಯಾವ ಹೊಸ ಅಥವಾ ಕೆಲವು ವರ್ಷಗಳ ಹಳೆಯ ವಾಹನಕ್ಕೆ ರಿಪೇರಿ ವೆಚ್ಚವನ್ನು ನಿರ್ವಹಿಸಲಾಗುವುದಿಲ್ಲ, ಅಂತಹ ವಾಹನಗಳಿಗೆ ಕಾಂಪ್ರೆಹೆನ್ಸಿವ್ ಕವರ್ ಅಗತ್ಯವಿದೆ. ರಸ್ತೆ ಅಪಘಾತ ಅಥವಾ ದುರ್ಘಟನೆಯ ನಂತರ ಈ ರಿಪೇರಿ ಅಗತ್ಯವಿರುತ್ತದೆ. 10 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಮಾಲೀಕರಿಂದಲೇ ನಿರ್ವಹಿಸಲ್ಪಡುವ ರಿಪೇರಿ ಖರ್ಚಿಗೆ ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಮಾತ್ರ ಅಗತ್ಯವಿದೆ. ಏಕೆಂದರೆ ಇಂತಹ ವಾಹನಗಳಿಗೆ ರಿಪೇರಿ ಖರ್ಚು ಹೆಚ್ಚೇನೂ ಇರುವುದಿಲ್ಲ.
ಇನ್ಶೂರೆನ್ಸ್ ವೆಚ್ಚ ಕಾಂಪ್ರೆಹೆನ್ಸಿವ್ ಕವರ್ ದುಬಾರಿ ಪಾಲಿಸಿಯಾಗಿದೆ. ಏಕೆಂದರೆ ಇದು ಉಂಟಾದ ಗಾಯಗಳು, ಸಂಭವಿಸಿದ ಹಾನಿ ಮತ್ತು ಕಳ್ಳತನದ ವಿರುದ್ಧ ವ್ಯಾಪಕ ಕವರ್ ನೀಡುತ್ತದೆ. ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಗೆ ಹೋಲಿಸಿದರೆ ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಅಗ್ಗವಾಗಿದೆ.
ದರ ವಿವಿಧ ಇನ್ಶೂರೆನ್ಸ್ ನೀಡುವ ದರಗಳು ಮತ್ತು ರಿಯಾಯಿತಿಗಳನ್ನು ಅವಲಂಬಿಸಿರುವುದರಿಂದ ಕಾಂಪ್ರೆಹೆನ್ಸಿವ್ ಕವರ್ ಬೆಲೆ ಬದಲಾಗುತ್ತದೆ. ಥರ್ಡ್ ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ಅಡಿಯಲ್ಲಿ ದರವನ್ನು ನಿಯಂತ್ರಕರಿಂದ ನಿಗದಿಪಡಿಸಲಾಗಿದೆ.

ಕಾಂಪ್ರೆಹೆನ್ಸಿವ್ ಪಾಲಿಸಿ ಖರೀದಿಸುವ ಅನುಕೂಲತೆಗಳು

ಹಣಕಾಸಿನ ಹೊಣೆಗಾರಿಕೆಗಳನ್ನು ದೂರವಿಡುವ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಲು, ನಿಮ್ಮ ವಾಹನಕ್ಕೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಉತ್ತಮವಾಗಿದೆ. ಇದು ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ ಏಕೆಂದರೆ:

  • ವಾಹನದ ಸ್ವಂತ ಹಾನಿಗೆ ಕವರ್  ಸಿಗುತ್ತದೆ : ಕಾಂಪ್ರೆಹೆನ್ಸಿವ್ ಕವರ್ ಅಡಿಯಲ್ಲಿ, ಅಕಸ್ಮಾತ್ ಸಂಭವಿಸುವ ದುರ್ಘಟನೆಗಳಿಂದ ಉಂಟಾಗುವ ತನ್ನದೇ ಆದ ಹಾನಿಗಾಗಿ ವಾಹನವನ್ನು ಕವರ್  ಮಾಡಲಾಗುತ್ತದೆ. ಒಂದು ಸನ್ನಿವೇಶದಲ್ಲಿ ನಿಮ್ಮ ಕಾರನ್ನು ರಸ್ತೆಯ ಮಧ್ಯದಲ್ಲಿ ಒಂದು ಮರಕ್ಕೆ ಡಿಕ್ಕಿ ಹೊಡೆಯುತ್ತೀರಿ ಎಂದುಕೊಳ್ಳೋಣ. ಈಗ ಕಾರಿಗೆ ವಿಪರೀತ ಹಾನಿಯಾಗಿದೆ ಮತ್ತು ರಿಪೇರಿಯ ಅಗತ್ಯವಿದೆ. ಈ ಸಂದರ್ಭದಲ್ಲಿ ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ನಿಮಗಾಗಿ ಅದನ್ನು ಸರಿಪಡಿಸುತ್ತದೆ.
  • ದೈಹಿಕ ಗಾಯ ಮತ್ತು ಆಸ್ತಿ ಹಾನಿ ಎರಡೂ ಸೇರಿದಂತೆ ಥರ್ಡ್ ಪಾರ್ಟಿ ಹೊಣೆಗಾರಿಕೆಯನ್ನು ಸಹ ಒಳಗೊಂಡಿದೆ : ಪಾಲಿಸಿ ಹೊಂದಿರುವವರು ತಮ್ಮ ತಪ್ಪಿನಿಂದ ಅಪಘಾತದ ಮೂಲಕ ಬೇರೊಬ್ಬರಿಗೆ ದೈಹಿಕ ಗಾಯ ಮತ್ತು ಆಸ್ತಿ ಹಾನಿಯನ್ನು ಉಂಟು ಮಾಡಿದ್ದಾರೆ ಎಂದು ಭಾವಿಸಿದಾಗ ಬರುವಂತಹ ಹೊಣೆಗಾರಿಕೆ ವೆಚ್ಚಗಳನ್ನು ಇದು ಒಳಗೊಂಡಿರುತ್ತದೆ. ಉದಾಹರಣೆಗೆ ನೋಡುವುದಾದರೆ, ಹೀಗೊಂದು ಸನ್ನಿವೇಶದಲ್ಲಿ, ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ನೀವು ಸಮತೋಲನ ಕಳೆದುಕೊಂಡು ರಸ್ತೆ ದಾಟುತ್ತಿರುವ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ಆ ವ್ಯಕ್ತಿಗೆ ಗಾಯಗಳಾಗಿವೆ ಮತ್ತು ಅದು ನಿಮ್ಮ ತಪ್ಪು. ಅಲ್ಲಿ ನೀವು ಖರ್ಚು ಮಾಡಿದ ವೆಚ್ಚಗಳನ್ನು ಕಾಂಪ್ರೆಹೆನ್ಸಿವ್ ಪಾಲಿಸಿ ಅಡಿಯಲ್ಲಿ ಪಡೆದುಕೊಳ್ಳಬಹುದು.
  • ಆಡ್-ಆನ್ ಕವರ್ ಗಳ ನಿಬಂಧನೆಯನ್ನು ಹೊಂದಿದೆ : ಕೆಲವು ಹೆಚ್ಚುವರಿ ಕವರ್ ಯನ್ನು ಕಡ್ಡಾಯವಾಗಿ ಖರೀದಿಸಬೇಕು. ಝೀರೋ ಡಿಪ್ರಿಸಿಯೇಷನ್ , ಎಂಜಿನ್ ಕವರ್  ಇತ್ಯಾದಿಗಳನ್ನು ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿಯ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ. ಮಳೆ ನೀರು ತುಂಬಿದ ರಸ್ತೆಯಲ್ಲಿ ನೀವು ಗಾಡಿ ಓಡಿಸಬೇಕಾದ ಪರಿಸ್ಥಿತಿಯ ಬಗ್ಗೆ ಆಲೋಚಿಸಿ. ಈ ಸಂದರ್ಭದಲ್ಲಿ ಅಪ್ಪಿ ತಪ್ಪಿ ನಿಮ್ಮ ಕಾರಿನ ಎಂಜಿನ್ ಜಾಮ್ ಆಗಿ ಕೆಟ್ಟು ಹೋಯಿತು ಎಂದುಕೊಳ್ಳೋಣ. ನೀವು ಮೊದಲೇ ಎಂಜಿನ್ ಪ್ರೊಟೆಕ್ಷನ್ ಪ್ಲಾನ್ ಅನ್ನು ಆಡ್-ಆನ್ ಆಗಿ ಖರೀದಿಸಿದ್ದರೆ, ಖಚಿತವಾಗಿ ನೀವು ಈ ಸಂದರ್ಭದಲ್ಲಿ ಎಂಜಿನ್ ಗೆ ತಗುಲುವ ರಿಪೇರಿ ವೆಚ್ಚವನ್ನು ಮರುಪಡೆಯಬಹುದು.

ಇತ್ತೀಚೆಗೆ ರೆಗ್ಯುಲೇಟರ್ ಐ.ಆರ್.ಡಿ.ಎ(IRDA) ಮಾಲೀಕರ-ಚಾಲಕರ ಕಡ್ಡಾಯ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಯನ್ನು ಸೇರಿಸುವ ಮೂಲಕ ಮೋಟಾರು ಪಾಲಿಸಿ ಅಡಿಯಲ್ಲಿ ಕವರ್ ಹೆಚ್ಚಿಸಿದೆ. ಈ ವೈಯಕ್ತಿಕ ಅಪಘಾತ ಕವರ್  ಕನಿಷ್ಠ ಮಿತಿ ರೂ.15 ಲಕ್ಷ ಆಗಿದೆ.