ಟು ವೀಲರ್ ವೆಹಿಕಲ್ ಇನ್ಶೂರೆನ್ಸ್

ಡಿಜಿಟ್ ಇನ್ಶೂರೆನ್ಸ್ ಗೆ ಬದಲಿಸಿ. 3 ಕೋಟಿ+ ಭಾರತೀಯರ ವಿಶ್ವಾಸನೀಯ
search

I agree to the  Terms & Conditions

It's a brand new bike

ಭಾರತದಲ್ಲಿ ಬೈಕ್/ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಆನ್ಲೈನ್ ನಲ್ಲಿ ಖರೀದಿಸಿ/ರಿನ್ಯೂ ಮಾಡಿ

ಹೀರೋ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್

Bike-insurance-damaged

ಅಪಘಾತಗಳು

ಅಪಘಾತಗಳ ಸಂದರ್ಭಗಳಲ್ಲಿ ಉಂಟಾಗುವ ಸಾಮಾನ್ಯ ಹಾನಿಗಳು

Bike Theft

ಕಳ್ಳತನ

ಅಕಸ್ಮಾತ್ ನಿಮ್ಮ ಬೈಕ್ ಅಥವಾ ಸ್ಕೂಟರ್ ಕಳ್ಳತನವಾದರೆ

Car Got Fire

ಅಗ್ನಿ ದುರಂತ

ಅಗ್ನಿ ದುರಂತದಿಂದ ಉಂಟಾಗುವ ಸಾಮಾನ್ಯ ಹಾನಿಗಳು

Natural Disaster

ಪ್ರಕೃತಿ ವಿಕೋಪಗಳು

ಕೆಲವೊಮ್ಮೆ ನಿಸರ್ಗದ ರೌದ್ರ ರೂಪಗಳಿಂದ ಉಂಟಾಗುವ ಹಾನಿಗಳು

Personal Accident

ವೈಯಕ್ತಿಕ ಹಾನಿ

ನಿಮ್ಮದೇ ಆದ ತಪ್ಪಿನಿಂದ ನೀವೇ ಗಂಭೀರವಾಗಿ ಗಾಯಗೊಳಿಸಿಕೊಂಡ ಸಂದರ್ಭಗಳಿಗೆ

Third Party Losses

ಥರ್ಡ್ ಪಾರ್ಟಿ ಗೆ ಉಂಟಾದ ನಷ್ಟಗಳು

ನಿಮ್ಮ ಬೈಕ್ ನಿಂದ ತೊಂದರೆಗೊಳಗಾದ ಇತರರು ಅಥವಾ ಇತರ ವಸ್ತು

ಡಿಜಿಟ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಜೊತೆಗಿರುವ ಆಡ್-ಆನ್ ಗಳು

ನೀವು ನಿಮ್ಮ ಟು ವೀಲರ್ ವೆಹಿಕಲ್  ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಖರೀದಿಸಬಹುದಾದ ಟು ವೀಲರ್ ವೆಹಿಕಲ್  ಇನ್ಶೂರೆನ್ಸ್ ಆಡ್-ಆನ್ ಗಳು

ಝೀರೋ ಡೆಪ್ರಿಸಿಯೇಷನ್ ಕವರ್

ಇದನ್ನು ನಿಮ್ಮ ಬೈಕ್ ಹಾಗೂ ಅದರ ಭಾಗಗಳಿಗಾಗಿ ಇರುವ ಆಂಟಿ ಏಜಿಂಗ್(ವಯಸ್ಸನ್ನು ಕಡಿಮೆ ಮಾಡುವ)ಕ್ರೀಮ್ ಎಂದು ಭಾವಿಸಿ. ಸಾಮಾನ್ಯವಾಗಿ, ಕ್ಲೈಮ್ ಸಮಯದಲ್ಲಿ ಸೂಕ್ತ ಡೆಪ್ರಿಸಿಯೇಷನ್ ಮೊತ್ತವನ್ನು ಹೆಚ್ಚಾಗಿ ಪರಿಗಣಿಸಲಾಗುತ್ತದೆ. ಆದರೆ, ಒಂದು ಝೀರೋ ಡೆಪ್ರಿಸಿಯೇಷನ್ ಕವರ್, ಡೆಪ್ರಿಸಿಯೇಷನ್ ಅನ್ನು ಪರಿಗಣಿಸದೆಯೇ, ಕ್ಲೈಮ್ ಸಮಯದಲ್ಲಿ ನಿಮಗೆ ರಿಪೇರಿ/ಬದಲಿಕೆಯ ವೆಚ್ಚದ ಸಂಪೂರ್ಣ ಮೌಲ್ಯ ಸಿಗುವುದನ್ನು ಖಚಿತಗೊಳಿಸುತ್ತದೆ.

ರಿಟರ್ನ್ ಟು ಇನ್ವಾಯ್ಸ್(ಬೆಲೆಪಟ್ಟಿ) ಕವರ್

ನಿಮ್ಮ ಬೈಕ್ ಕಳುವಾಗಿದ್ದರೆ ಅಥವಾ ಅದು ದುರಸ್ತಿಗೂ ಮೀರಿ ಹಾನಿಗೊಳಗಾದ ಸಂದರ್ಭ ನಿಮಗೆ ಎದುರಾದರೆ, ಈ ಆಡ್-ಆನ್ ಉಪಯೋಗಕ್ಕೆ ಬರುತ್ತದೆ. ಈ ರಿಟರ್ನ್ ಟು ಇನ್ವಾಯ್ಸ್ ಆಡ್-ಆನ್ ನೊಂದಿಗೆ, ನಾವು, ನಿಮಗಾಗಿ ಅದೇ ಅಥವ ಅಂತಹದ್ದೇ ಬೈಕ್ ಅನ್ನು ಖರೀದಿಸುವ ವೆಚ್ಚವನ್ನು ಕವರ್ ಮಾಡುತ್ತೇವೆ, ಅದರ ರಸ್ತೆ ತೆರಿಗೆ ಹಾಗೂ ನೋಂದಣಿ ಶುಲ್ಕಗಳನ್ನೂ ಸೇರಿಸಿ.

ಎಂಜಿನ್ ಹಾಗೂ ಗೇರ್-ಬಾಕ್ಸ್ ಸುರಕ್ಷತಾ ಕವರ್

ನಿಮ್ಮ ಎಂಜಿನ್ ಅನ್ನು ಬದಲಿಸುವ ವೆಚ್ಚವು ಅದರ ಬೆಲೆಯ ಸುಮಾರು 40% ಆಗಿರುತ್ತದೆ ಎಂದು ನಿಮಗೆ ತಿಳಿದಿದೆಯೇ? ಒಂದು ಸ್ಟಾಂಡರ್ಡ್ ಇನ್ಶೂರೆನ್ಸ್ ಪಾಲಿಸಿಯಲ್ಲಿ, ಅಪಘಾತದ ಸಮಯ ಆದ ಹಾನಿಗಳನ್ನು ಮಾತ್ರ ಕವರ್ ಮಾಡಲಾಗುತ್ತದೆ. ಆದರೆ ಈ ಆಡ್-ಆನ್ ನೊಂದಿಗೆ, ನೀವು ನಿಮ್ಮ ವಾಹನಕ್ಕೆ ಅಪಘಾತದ ನಂತರ ಆಗಬಹುದಾದ ತತ್ಪರಿಣಾಮವಾದ ಹಾನಿಗಳನ್ನು, ನಿಮ್ಮ ವಾಹನದ ಬಾಳಿಗಾಗಿ(ಎಂಜಿನ್ ಹಾಗೂ ಗೇರ್-ಬಾಕ್ಸ್!), ಕವರ್ ಮಾಡಬಹುದು. ಇದು ನೀರು ನಿಲ್ಲುವುದು, ಲ್ಯೂಬ್ರಿಕೇಟಿಂಗ್ ಆಯಿಲ್ ನ ಸೋರಿಕೆ, ಚೌಕಟ್ಟಿಗಾಗುವ ಹಾನಿಗಳಿಂದ ಆಗಬಹುದು.

ಉಪಭೋಗ್ಯ ಕವರ್

ಒಂದು ಉಪಭೋಗ್ಯ ಕವರ್ ನಿಮ್ಮ ಟು ವೀಲರ್ ವಾಹನಕ್ಕೆ ಒಂದು ಹೆಚ್ಚುವರಿ ಕವಚವನ್ನು ಸೇರಿಸುತ್ತದೆ. ಇದು, ಅಪಘಾತದ ಸಮಯದಲ್ಲಿ, ನಿಮ್ಮ ಬೈಕ್ ನ ಎಲ್ಲಾ ಸಣ್ಣಪುಟ್ಟ ಅಗತ್ಯಗಳಾದ ಎಂಜಿನ್ ಆಯಿಲ್ ಗಳು, ಸ್ಕ್ರೂ ಗಳು, ನಟ್ ಹಾಗೂ ಬೋಲ್ಟ್ ಗಳು, ಗ್ರೀಸ್ ಇತ್ಯಾದಿಗಳ ವೆಚ್ಚವನ್ನು ಕವರ್ ಮಾಡುತ್ತದೆ.

ಬ್ರೇಕ್ಡೌನ್ ಅಸಿಸ್ಟೆನ್

ರೋಡ್ಸೈಡ್ ಅಸಿಸ್ಟೆನ್ಸ್ ಆಡ್-ಆನ್, ನಿಮ್ಮ ಟು ವೀಲರ್ ವಾಹನ ಕೆಟ್ಟುನಿಂತ ಸಂದರ್ಭದಲ್ಲಿ ಎಂದೆಂದಿಗೂ ನಿಮ್ಮೊಂದಿಗೆ ಇರುತ್ತೇವೆ ಎಂಬ ವಿಶ್ವಾಸವನ್ನು ನಿಮ್ಮಲ್ಲಿ ಮೂಡಿಸುತ್ತದೆ. ಉತ್ತಮ ವಿಷಯ ಏನಂತೀರಾ? ನಮ್ಮಲ್ಲಿ ಕೇಳಿದ ಸಹಾಯವನ್ನು ನಾವು ಕ್ಲೈಮ್ ಎಂದೂ ಪರಿಗಣಿಸುವುದಿಲ್ಲ.

ಟೈರ್ ರಕ್ಷಣೆ ಕವರ್

ಈ ಆಡ್-ಆನ್ ಕವರ್ ಅನ್ನು ರನ್ ಫ್ಲಾಟ್ ಟೆಕ್ನಾಲಜಿಯನ್ನು ಅಳವಡಿಸಲಾಗಿರುವ ವೆಹಿಕಲುಗಳಿಗೆ ಮಾತ್ರ ನೀಡಲಾಗುತ್ತದೆ. ಇದರ ಭಾಗವಾಗಿ, ಹಾನಿಗೊಳಗಾದ ಟೈರ್‌ಗಳನ್ನು ವಾಹನದಲ್ಲಿ ಬಳಸುತ್ತಿದ್ದ  ಟೈರ್‌ಗಳಿಗೆ ಸಮಾನವಾದ ಅಥವಾ ಹತ್ತಿರವಿರುವ ಟೈರ್‌ಗಳನ್ನು ಬದಲಾಯಿಸುವ ವೆಚ್ಚ, ಕಾರ್ಮಿಕ ಮತ್ತು ವೀಲ್ ಬ್ಯಾಲೆನ್ಸಿಂಗ್ ಶುಲ್ಕಗಳನ್ನು ಮರುಪಾವತಿಸಬಹುದು. ಆದಾಗ್ಯೂ, ಆಡ್-ಆನ್ ಕವರ್ ಅಡಿಯಲ್ಲಿ ಮಾಡಿದ ಕ್ಲೈಮ್‌ಗಳು ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನಿಗದಿಪಡಿಸಲಾದ ಷರತ್ತುಗಳಿಗೆ ಒಳಪಟ್ಟಿರುತ್ತದೆ.

ದೈನಂದಿನ ಸ೦ಚಾರ ಪ್ರಯೋಜನ

ಈ ಆಡ್-ಆನ್ ಕವರ್, ಟು ವೀಲರ್ ವೆಹಿಕಲ್  ರಿಪೇರಿಯಲ್ಲಿರುವ ಅವಧಿಯಲ್ಲಿ ಸಂಭವಿಸುವ ಹೆಚ್ಚುವರಿ ಸಮಯಕ್ಕೆ ಒಳಪಟ್ಟು ನಿಮ್ಮ ಸಾರಿಗೆ ವೆಚ್ಚವನ್ನು ನಿಮಗೆ ಭರಿಸಲಾಗುವುದು. ಆದಾಗ್ಯೂ, ಇನ್ಶೂರೆನ್ಸ್ ಪಾಲಿಸಿಯ 'ಓನ್ ಡ್ಯಾಮೇಜ್' ವಿಭಾಗದ ಅಡಿಯಲ್ಲಿ ಆಕ್ಸಿಡೆಂಟಲ್ ಡ್ಯಾಮೇಜ್ ಕ್ಲೈಮ್ ಅನ್ನು ಸಲ್ಲಿಸಿದ್ದರೆ ಮಾತ್ರ ಇದು ಅನ್ವಯವಾಗುತ್ತದೆ. ಪಾಲಿಸಿ ಹೋಲ್ಡರ್ ಗೆ  ದಿನಕ್ಕೆ ನಿಗದಿತ ಭತ್ಯೆಯ ರೂಪದಲ್ಲಿ ಅಥವಾ ಟ್ಯಾಕ್ಸಿ ಆಪರೇಟರ್‌ಗಳಿಂದ ಕೂಪನ್‌ಗಳ ರೂಪದಲ್ಲಿ ದಿನಕ್ಕೆ ನಿಗದಿತ ಭತ್ಯೆಗೆ ಸಮಾನವಾದ ಮೊತ್ತದಿಂದ ಪರಿಹಾರವನ್ನು ಪಡೆಯಬಹುದು.

ಏನೆಲ್ಲಾ ಕವರ್ ಆಗಿರುವುದಿಲ್ಲ?

ನೀವು ಕ್ಲೈಮ್ ಮಾಡುವಾಗ ಯಾವುದೇ ಆಶ್ಚರ್ಯ ಪಡಬೇಕಾದ ಸಂದರ್ಭ ಸೃಷ್ಟಿಯಾಗಬಾರದು ಎಂದರೆ ನಿಮ್ಮ ಎಲೆಕ್ಟ್ರಿಕ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

 

ಥರ್ಡ್ ಪಾರ್ಟಿ ಪಾಲಿಸಿ ಹೋಲ್ಡರ್ ಗಾಗಿ ಇರುವಾಗ ಸ್ವಂತ ಹಾನಿಗಳು

ಥರ್ಡ್-ಪಾರ್ಟಿ ಅಥವಾ ಲಯಬಿಲಿಟೀಸ್ ಬೈಕ್ ಪಾಲಿಸಿಯ ಸಂದರ್ಭದಲ್ಲಿ, ಸ್ವಂತ ವಾಹನಕ್ಕೆ ಉಂಟಾದ ಹಾನಿಯನ್ನು ಒಳಗೊಂಡಿರುವುದಿಲ್ಲ.

 

ಕುಡಿದು ಅಥವಾ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುವುದು

ನೀವು ಕುಡಿದು ಸವಾರಿ ಮಾಡುತ್ತಿರುವ ಸಂದರ್ಭಗಳಲ್ಲಿ ಅಥವಾ ಮಾನ್ಯವಾದ ಟು ವೀಲರ್ ವಾಹನ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುತ್ತಿದ್ದರೆ, ನಿಮ್ಮ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ನಿಮಗೆ ಕವರ್ ನೀಡುವುದಿಲ್ಲ.

 

ಮಾನ್ಯ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದರೆ

ನೀವು ಕಲಿಯುವವರ ಲೈಸೆನ್ಸ್ ಹೊಂದಿದ್ದು, ಪಿಲಿಯನ್ ಸೀಟಿನಲ್ಲಿ ಮಾನ್ಯವಾದ ಲೈಸೆನ್ಸ್-ಹೋಲ್ಡರ್ ಇಲ್ಲದೆ ನಿಮ್ಮ ಟು ವೀಲರ್ ವಾಹನವನ್ನು ಓಡಿಸುತ್ತಿದ್ದರೆ- ಆ ಸಂದರ್ಭಗಳಲ್ಲಿ ನಿಮ್ಮ ಕ್ಲೈಮ್  ಕವರ್ ಗೆ ಒಳಪಡುವುದಿಲ್ಲ.

 

ಪರಿಣಾಮವಾಗಿ ಉಂಟಾಗುವ ಹಾನಿಗಳು

ಅಪಘಾತದ ನೇರ ಪರಿಣಾಮವಲ್ಲದ ಯಾವುದೇ ಹಾನಿ (ಉದಾ. ಅಪಘಾತದ ನಂತರ, ಹಾನಿಗೊಳಗಾದ ಟು ವೀಲರ್  ವಾಹನವನ್ನು ತಪ್ಪಾಗಿ ಬಳಸಿ ಅದರ ಎಂಜಿನ್ ಹಾನಿಗೊಳಗಾದರೆ, ಅದನ್ನು ಪರಿಣಾಮದ ಹಾನಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಇನ್ಶೂರೆನ್ಸ್ ಕವರ್ ನೀಡಲಾಗುವುದಿಲ್ಲ)

 

ಕೊಡುಗೆ ನಿರ್ಲಕ್ಷ್ಯಗಳು

ಯಾವುದೇ ಕೊಡುಗೆಯ ನಿರ್ಲಕ್ಷ್ಯ (ಉದಾ. ತಯಾರಕರ ಚಾಲನಾ ಕೈಪಿಡಿಯ ಪ್ರಕಾರ ಶಿಫಾರಸು ಮಾಡಲಾಗಿರದ ಪ್ರಕ್ರಿಯೆ ಅಂದರೆ ಪ್ರವಾಹದಲ್ಲಿ ಟು ವೀಲರ್  ವಾಹನವನ್ನು ಚಾಲನೆ ಮಾಡುವುದರಿಂದ ಉಂಟಾಗುವ ಹಾನಿ ಇವುಗಳಿಗೆ ಕವರ್ ನೀಡಲಾಗುವುದಿಲ್ಲ)

 

ಆಡ್-ಆನ್‌ಗಳನ್ನು ಖರೀದಿಸಿಲ್ಲದಿದ್ದರೆ

ಕೆಲವು ಸನ್ನಿವೇಶಗಳನ್ನು ಆಡ್-ಆನ್‌ಗಳು ರಕ್ಷಿಸುತ್ತವೆ. ನೀವು ಅಂತಹ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಅದಕ್ಕೆ ಅನುಗುಣವಾದ ಸಂದರ್ಭಗಳಲ್ಲಿ ಕವರ್ ಪಡೆದುಕೊಳ್ಳಲು ಸಾಧ್ಯವಿಲ್ಲ.

 

ಡಿಜಿಟ್ ನ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

Cashless Repairs

ಕ್ಯಾಶ್ಲೆಸ್ ರಿಪೇರಿಗಳು

ಭಾರತದಾದ್ಯಂತ ನಿಮಗಾಗಿ 4400+ ಕ್ಕೂ ಅಧಿಕ ನಗದು ರಹಿತ ನೆಟ್ವರ್ಕ್ ಗ್ಯಾರೇಜ್ ಗಳು

Smartphone-enabled Self Inspection

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸೆಲ್ಫ್ ಇನ್ಸ್ಪೆಕ್ಷನ್

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸೆಲ್ಫ್ ಇನ್ಸ್ಪೆಕ್ಷನ್ ಪ್ರಕ್ರಿಯೆಯ ಮೂಲಕ ತ್ವರಿತ ಮತ್ತು ಕಾಗದರಹಿತ ಕ್ಲೈಮ್‌ಗಳ ಪ್ರಕ್ರಿಯೆ

Super-fast Claims

ಅತ್ಯಂತ ವೇಗದ ಕ್ಲೈಮ್ ಗಳು

11 ದಿನಗಳ ಅಂತರದಲ್ಲಿ ಬೈಕ್ ವಿಮೆ ಕ್ಲೈಮ್ ಮಾಡಿಕೊಳ್ಳಬಹುದು

Customize your Vehicle IDV

ನಿಮ್ಮ ಗಾಡಿಯ ಐಡಿವಿ(IDV) ಕಸ್ಟಮೈಸ್ ಮಾಡಿ

ನಮ್ಮಲ್ಲಿ, ನಿಮ್ಮ ಆಯ್ಕೆಗೆ ತಕ್ಕಂತೆ ನಿಮ್ಮ ವಾಹನದ ಐಡಿವಿ ಕಸ್ಟಮೈಸ್ ಮಾಡಿಕೊಳ್ಳಬಹುದು!

24*7 Support

24*7 ಬೆಂಬಲ

ರಾಷ್ಟ್ರೀಯ ರಜಾ ದಿನಗಳಲ್ಲಿ ಕೂಡ 24*7 ಕರೆ ಸೌಲಭ್ಯ

ಟೂ ವೀಲರ್ ಇನ್ಶೂರೆನ್ಸ್ ಮಾರ್ಕೆಟ್‌ನ ಸೈಜ್, ಪ್ರದೇಶದ ಪ್ರಕಾರ, 2014ರಿಂದ 2024ರವರೆಗಿನ ವ್ಯಾಲ್ಯೂ ಪ್ರಕಾರ

ಡಿಜಿಟ್ ನ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ನ ಪ್ರಮುಖ ವೈಶಿಷ್ಟ್ಯಗಳು

ಪ್ರಮುಖ ವೈಶಿಷ್ಟ್ಯಗಳು

ಡಿಜಿಟ್ ನ ಲಾಭ

ಪ್ರೀಮಿಯಂ

₹714 ರಿಂದ ಆರಂಭ

ನೋ ಕ್ಲೈಮ್ ಬೋನಸ್

50% ವರೆಗಿನ ರಿಯಾಯಿತಿ

ಕಸ್ಟಮೈಜ್ ಮಾಡಬಹುದಾದ ಆಡ್-ಆನ್ ಗಳು

7 ಆಡ್-ಆನ್ ಗಳು ಲಭ್ಯ

ಕ್ಯಾಶ್ ಲೆಸ್ ರಿಪೇರಿಗಳು

4400+ ಗ್ಯಾರೇಜ್ ಗಳಲ್ಲಿ ಲಭ್ಯ

ಕ್ಲೈಮ್ ಪ್ರಕ್ರಿಯೆ

ಸ್ಮಾರ್ಟ್ಫೋನ್ ಅಳವಡಿಕೆಯ ಕ್ಲೈಮ್ ಪ್ರಕ್ರಿಯೆ. ಆನ್ಲೈನ್ ಆಗಿ 7 ನಿಮಿಷಗಳಲ್ಲಿ ಮಾಡಬಹುದು!

ಸ್ವಂತ ಹಾನಿ ಕವರ್

ಲಭ್ಯವಿದೆ

ಥರ್ಡ್ ಪಾರ್ಟೀಗಾದ ಹಾನಿ

ವೈಯಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ. ಸ್ವತ್ತು/ವಾಹನ ಹಾನಿಗೆ 7.5 ಲಕ್ಷದ ವರೆಗಿನ ಮೊತ್ತ.

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್ ಪಾರ್ಟಿ

ಥರ್ಡ್ ವ್ಯಕ್ತಿ ಬೈಕ್ ಇನ್ಶೂರೆನ್ಸ್  ಬೈಕ್ ವಿಮೆಯ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ; ಇದು ಮೂರನೇ ವ್ಯಕ್ತಿಗೆ, ವಾಹನಕ್ಕೆ ಅಥವಾ ಆಸ್ತಿಗೆ ಉಂಟಾದ ಹಾನಿ ಮತ್ತು ನಷ್ಟಗಳನ್ನು ಮಾತ್ರ ಒಳಗೊಂಡಿರುತ್ತದೆ

 

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಬೈಕ್ ಇನ್ಶೂರೆನ್ಸ್ ನ ಅತ್ಯಮೂಲ್ಯ ವಿಧಗಳಲ್ಲಿ ಒಂದಾಗಿದೆ, ಈ ಬೈಕ್ ಇನ್ಶೂರೆನ್ಸ್ ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳು ಮತ್ತು ನಿಮ್ಮ ಸ್ವಂತ ಬೈಕ್‌ ಗೆ ಸಂಭವಿಸುವ ಹಾನಿ ಎರಡನ್ನೂ ಒಳಗೊಂಡಿರುತ್ತದೆ.

 

ಥರ್ಡ್ ಪಾರ್ಟಿ

ಸಮಗ್ರ

×
×
×
×
×
×

ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಕ್ಲೈಮ್ ಮಾಡುವುದು ಹೇಗೆ?

ನೀವು ನಮ್ಮ ಟು – ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ ಅಥವಾ ನವೀಕರಿಸಿದ ನಂತರ, ನೀವು ಚಿಂತೆ ಇಲ್ಲದೆ ಇರಬಹುದು, ಏಕೆಂದರೆ 3 ಹಂತಗಳ ಸಂಪೂರ್ಣ ಡಿಜಿಟಲ್ ಕ್ಲೈಮ್ ಪ್ರಕ್ರಿಯೆಯನ್ನು ನಾವು ನಿಮಗಾಗಿ ಒದಗಿಸುತ್ತಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರಂ ಭರ್ತಿ ಮಾಡಬೇಕಾದ ಅವಶ್ಯಕತೆ ಇಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸೆಲ್ಫ್ ಇನ್ಸ್ಪೆಕ್ಷನ್ ಮಾಡುವ ಲಿಂಕ್ ಪಡೆಯಿರಿ. ಹಂತ ಹಂತವಾಗಿ ಬರಲಾಗುವ ಮಾರ್ಗದರ್ಶನದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕೆ ಉಂಟಾದ ಹಾನಿಯನ್ನು ಸೆರೆ ಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆಯ್ದುಕೊಳ್ಳಿ ಅಂದರೆ, ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್ಲೆಸ್ ವ್ಯವಹಾರದ ಸೌಲಭ್ಯ ಪಡೆಯಬಹುದು.

ಡಿಜಿಟ್ ಸರಳೀಕರಿಸಿದ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್

Cashless Garages by Digit

ಡಿಜಿಟ್ ನ ಕ್ಯಾಶ್ ಲೆಸ್ ಗ್ಯಾರೇಜ್ ಗಳು

ಭಾರತದಾದ್ಯಂತ 4400+ ಗ್ಯಾರೇಜ್ ಗಳಲ್ಲಿ ಕ್ಯಾಶ್ ಲೆಸ್ ರಿಪೇರಿಗಳನ್ನು ಪಡೆಯಿರಿ

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಗಳು ಎಷ್ಟು ವೇಗವಾಗಿ ಸೆಟಲ್ ಆಗುತ್ತವೆ?

ವಿಮಾ ಕಂಪನಿ ಬದಲಿಸಬೇಕಾದರೆ ನಿಮ್ಮ ತಲೆಯಲ್ಲಿ ಸಹಜವಾಗಿ ಬರುವ ಮೊಟ್ಟ ಮೊದಲ ಪ್ರಶ್ನೆ ಇದು. ನೀವು ಹಾಗೆ ಮಾಡುವುದು ಒಳ್ಳೆಯದು!

ಡಿಜಿಟ್ ನ ಕ್ಲೈಮ್ ರಿಪೋರ್ಟ್ ಕಾರ್ಡ್ ಓದಿ

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳಬೇಕು?

ರಾಜಕುಮಾರ್

ಅತ್ಯುತ್ತಮ ಸೇವೆ. ಎಲ್ಲವೂ ಡಿಜಿಟೈಜ್ ಆಗಿದೆ, ನನಗೆ ನನ್ನ ಹಿಂದಿನ ಸೆಲ್ಲರ್ ನಿಂದ, ಆರ್ ಸಿ ಬದಲಿಸಿದ ನಂತರ, ಇನ್ಶೂರೆನ್ಸ್ ಅನ್ನು ಬದಲಿಸಬೇಕಾಗಿತ್ತು. ನಾನು ಕಛೇರಿಗೆ ಭೇಟಿ ನೀಡದೆಯೇ ಪೂರ್ತಿ ವಿನಿಮಯವೂ ಸುಗಮವಾಗಿ ನಡೆಯಿತು. ಟು ವೀಲರ್ ವೆಹಿಕಲ್  ಇನ್ಶೂರೆನ್ಸ್ ನ ಅಗತ್ಯವಿರುವ ಎಲ್ಲರಿಗೂ ನಾನು ಇವರನ್ನು ಶಿಫಾರಸು ಮಾಡುತ್ತೇನೆ.

ಗೌರವ್ ಯಾದವ್

ಡಿಜಿಟ್ ನಿಂದ ಟು ವೀಲರ್ ವೆಹಿಕಲ್  ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಒಂದು ಉತ್ತಮ ಅನುಭವವಾಗಿತ್ತು. ಪೂನ್ಂ ದೇವಿಯವರ ಸೇವೆಯು ಬಹಳ ವಿನಮ್ರತೆ ಹಾಗೂ ಶೀಘ್ರತೆಯಿಂದ ಕೂಡಿತ್ತು. ನನ್ನ ಪಾಲಿಸಿ ಆದಷ್ಟು ಬೇಗ ನನಗೆ ದೊರೆಯುವ ಹಾಗೆ ಅವರು ಖಚಿತಪಡಿಸಿದರು.

ಸಂದೀಪ್ ಚೌಧರಿ

ಡಿಜಿಟ್ ಇನ್ಶೂರೆನ್ಸ್ ಜೊತೆಗಿನ ಅನುಭವ ಅದ್ಭುತವಾಗಿತ್ತು. ಬೇಕಾಗಿರುವ ಎಲ್ಲಾ ಭಾವಚಿತ್ರಗಳು ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ, 5 ನಿಮಿಷಗಳ ಒಳಗೆಯೇ ನನಗೆ ನನ್ನ ಸೆಟ್ಲ್ಮೆಂಟ್ ಏಜಂಟ್ ನಿಂದ ಕರೆ ಬಂತು. ಆ ಕರೆಯಲ್ಲೇ ಕ್ಲೈಮ್ ಇತ್ಯರ್ಥ ಪೂರ್ಣವಾಯಿತು. ಅಂತಿಮ ಇನ್ವಾಯ್ಸ್ ನೀಡಿದ ಮುಂದಿನ ವ್ಯವಹಾರದ ದಿನವೇ ನನಗೆ ಕ್ಲೈಮ್ ನ ಮೊತ್ತ ದೊರೆಯಿತು.

Show more

ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಲಾಭಗಳು

ನಿಮ್ಮ ಜೇಬನ್ನು ಖಾಲಿಯಾಗದಂತೆ ಸಂರಕ್ಷಿಸಿ

ನಿಮ್ಮ ಬೈಕ್ ಅನ್ನು ಟು ವೀಲರ್ ವೆಹಿಕಲ್  ಇನ್ಶೂರೆನ್ಸ್ ನಿಂದ ಇನ್ಶೂರ್ ಮಾಡುವುದರಿಂದ ನೀವು ಅಪಘಾತ, ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳವು ಇತ್ಯಾದಿಗಳಂತಹ ದುರ್ಘಟನೆಗಳಿಂದ ಉಂಟಾಗಬಲ್ಲ ದುರಾದೃಷ್ಟಕರ ನಷ್ಟಗಳು ಹಾಗೂ ಹಾನಿಗಳಿಂದ ನಿಮ್ಮ ಜೇಬನ್ನು ಸುರಕ್ಷಿತವಾಗಿರಿಸಬಲ್ಲಿರಿ.

ಕವರ್ ಪಡೆದುಕೊಳ್ಳಿ, ಕಾನೂನಾತ್ಮಕವಾಗಿ!

ಮೋಟಾರ್ ವಾಹನ ಅಧಿನಿಯಮದ ಪ್ರಕಾರ, ಕನಿಷ್ಠ ಪಕ್ಷ ಥರ್ಡ್ ಪಾರ್ಟೀ ಬೈಕ್ ಇನ್ಶೂರೆನ್ಸ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಇದಿಲ್ಲದೆ, ನೀವು ಕಾನೂನಾತ್ಮಕವಾಗಿ ಭಾರತೀಯ ರಸ್ತೆಗಳಲ್ಲಿ ವಾಹನ ಚಲಾಯಿಸ ಕೂಡದು! ಆದ್ದರಿಂದಲೇ, ಕಾನೂನಾತ್ಮಕವಾಗಿ ಕವರ್ ಆಗಿರುವುದು ಟು ವೀಲರ್ ವೆಹಿಕಲ್  ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಲಾಭಗಳಲ್ಲಿ ಒಂದಾಗಿದೆ.

ಟ್ರಾಫಿಕ್ ದಂಡಗಳಿಂದ ದೂರವಿರಿ

ಒಂದು ಮೂಲಭೂತ, ಥರ್ಡ್ ಪಾರ್ಟೀ ಬೈಕ್ ಇನ್ಶೂರೆನ್ಸ್ ಕೂಡಾ ಇಲ್ಲದೆ ಭಾರತದಲ್ಲಿ ಬೈಕ್ ಚಲಾಯಿಸುವುದು ಪ್ರಾಥಮಿಕವಾಗಿ ಕಾನೂನುಬಾಹಿರವಾಗಿರುವುದರಿಂದ; ಇದನ್ನು ಹೊಂದದೇ ಇರುವುದು ಭಾರೀ ದಂಡಕ್ಕೆ ಕಾರಣವಾಗಬಹುದು. ನೀವಿದನ್ನು ನಂಬದೇ ಇದ್ದರೂ, ಕೇವಲ ಒಂದು ಬಾರಿ ಇದನ್ನು ಹೊಂದದೇ ಇರುವುದಕ್ಕಾಗಿ ಸಿಕ್ಕಿ ಬೀಳುವುದಕ್ಕಿಂತ, ಬೈಕ್ ಇನ್ಶೂರೆನ್ಸ್ ಅನ್ನು ಹೊಂದಿರುವುದರಿಂದ ನೀವು ಹೆಚ್ಚು ಉಳಿತಾಯ ಮಾಡುತ್ತೀರಿ!

ಆಡ್- ಆನ್ ಗಳಿಂದ ಹೆಚ್ಚಿನ ಕವರೇಜ್ ಪಡೆಯಿರಿ

ನೀವು ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿದಾಗ, ನಿಮಗೆ ಅದನ್ನು, ರಿಟರ್ನ್ ಟು ಇನ್ವಾಯ್ಸ್ ಕವರ್, ಶೂನ್ಯ ಡಿಪ್ರಿಸಿಯೇಶನ್ ಕವರ್, ಬ್ರೇಕ್ಡೌನ್ ಅಸಿಸ್ಟೆನ್ಸ್, ಕನ್ಸ್ಯೂಮೇಬಲ್ ಕವರ್ ಹಾಗೂ ಟಯರ್ ಸುರಕ್ಷತೆಯಂತಹ ಇನ್ನೂ ಹಲವಾರು ಅಗತ್ಯ ಆಡ್-ಆನ್ ಗಳ ಜೊತೆ ಕಸ್ಟಮೈಜ್ ಮಾಡುವ ಸೌಲಭ್ಯ ದೊರೆಯುತ್ತದೆ ಹಾಗೂ ಇದು ನಿಮ್ಮ ಬೈಕಿಗೆ, ಎಲ್ಲಾ ಸಂಭವ ಸಮಸ್ಯೆಗಳಿಂದ ಸಂಪೂರ್ಣ ಸಂರಕ್ಷಣೆಯನ್ನು ನೀಡುತ್ತದೆ!

ಥರ್ಡ್ ಪಾರ್ಟೀ ಸಮಸ್ಯೆಗಳನ್ನು ತಪ್ಪಿಸಿ

ಯಾವುದೇ ರೀತಿಯ ಅಪಘಾತಕ್ಕೆ ಸಿಲುಕಿದ ಸಂದರ್ಭದಲ್ಲಿ ಜನರು ಹೆಚ್ಚು ಹೆದರುವುದು,ಉಂಟಾಗಿರುವ ಹಾನಿಗಳು ಹಾಗೂ ನಷ್ಟಗಳ ಕಾರಣ ಥರ್ಡ್ ಪಾರ್ಟೀ ಗಳೊಂದಿಗೆ ನಡೆಸಬೇಕಾದ ಅಸಂಖ್ಯ ಮಾತಿನ ಚಕಮಕಿಗಳು. ನೀವು ಬೈಕ್ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದಲಿ, ಹೊಡೆತಕ್ಕೊಳಗಾದ ಪಾರ್ಟೀ ಕವರ್ ಆಗಿರುವುದರಿಂದ, ಈ ಸಮಸ್ಯೆಗಳೂ ಕಡಿಮೆಯಾಗುತ್ತವೆ!

ಟೂ-ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ದರಗಳು

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಬೈಕ್‌ನ ಎಂಜಿನ್ ಸಾಮರ್ಥ್ಯದ ಆಧಾರದ ಮೇಲೆ ವಿಧಿಸಲಾಗುತ್ತದೆ. 2019-20 ವರ್ಸಸ್ 2022ರ ಬೆಲೆಗಳನ್ನು ನೋಡೋಣ

ಎಂಜಿನ್ ಕೆಪಾಸಿಟಿ

2019-20ರ ಪ್ರೀಮಿಯಂ ಐಎನ್‌ಆರ್‌ನಲ್ಲಿ

ಹೊಸ 2 ವೀಲರ್ ಟಿಪಿ ದರ (1ನೇ ಜೂನ್ 2022ರಿಂದ ಜಾರಿಗೆ ಬರುವಂತೆ)

75 ಸಿಸಿ ಮೀರಿರದ

₹482

₹538

75ಸಿಸಿ ಮೀರಿರುವ ಆದರೆ 150ಸಿಸಿ ಮೀರದಿರುವ

₹752

₹714

150ಸಿಸಿ ಮೀರಿರುವ ಆದರೆ 350ಸಿಸಿ ಮೀರದಿರುವ

₹1193

₹1366

350 ಸಿಸಿ ಮೀರಿರುವ

₹2323

₹2804

ಹೊಸ ಟೂ-ವೀಲರ್‌ಗಳಿಗೆ ಥರ್ಡ್-ಪಾರ್ಟಿ ಪ್ರೀಮಿಯಂ (5-ವರ್ಷದ ಸಿಂಗಲ್ ಪ್ರೀಮಿಯಂ ಪಾಲಿಸಿ)

ಎಂಜಿನ್ ಕೆಪಾಸಿಟಿ

2019-20ರ ಪ್ರೀಮಿಯಂ ಐಎನ್‌ಆರ್‌ನಲ್ಲಿ

ಹೊಸ 2 ವೀಲರ್ ಟಿಪಿ ದರ (1ನೇ ಜೂನ್ 2022ರಿಂದ ಜಾರಿಗೆ ಬರುವಂತೆ)

75 ಸಿಸಿ ಮೀರಿರದ

₹1,045

₹2,901

75ಸಿಸಿ ಮೀರಿರುವ ಆದರೆ 150ಸಿಸಿ ಮೀರದಿರುವ

₹3,285

₹3,851

150ಸಿಸಿ ಮೀರಿರುವ ಆದರೆ 350ಸಿಸಿ ಮೀರದಿರುವ

₹5,453

₹7,365

350 ಸಿಸಿ ಮೀರಿರುವ

₹13,034

₹15,117

ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಟೂ-ವೀಲರ್ ಪ್ರೀಮಿಯಂಗಳು (1-ವರ್ಷದ ಸಿಂಗಲ್ ಪ್ರೀಮಿಯಂ ಪಾಲಿಸಿ)

ವೆಹಿಕಲ್ ಕಿಲೋವ್ಯಾಟ್ ಕೆಪಾಸಿಟಿ (KW)

2019-20ರ ಪ್ರೀಮಿಯಂ ಐಎನ್‌ಆರ್‌ನಲ್ಲಿ

ಹೊಸ 2 ವೀಲರ್ ಟಿಪಿ ದರ (1ನೇ ಜೂನ್ 2022ರಿಂದ ಜಾರಿಗೆ ಬರುವಂತೆ)

3ಕೆಡಬ್ಲ್ಯೂ(KW) ಮೀರಿರದ

₹410

₹457

3KW ಮೀರಿರುವ ಆದರೆ 7KW ಮೀರಿರದ

₹639

₹609

7KW ಮೀರಿರುವ ಆದರೆ 16KW ಮೀರಿರದ

₹1,014

₹1,161

16KW ಮೀರಿರುವ

₹1,975

₹2,383

ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಟೂ-ವೀಲರ್ ಪ್ರೀಮಿಯಂಗಳು (5-ವರ್ಷದ ಸಿಂಗಲ್ ಪ್ರೀಮಿಯಂ ಪಾಲಿಸಿ)

ವೆಹಿಕಲ್ ಕಿಲೋವ್ಯಾಟ್ ಕೆಪಾಸಿಟಿ (KW)

2019-20ರ ಪ್ರೀಮಿಯಂ ಐಎನ್‌ಆರ್‌ನಲ್ಲಿ

ಹೊಸ 2 ವೀಲರ್ ಟಿಪಿ ದರ (1ನೇ ಜೂನ್ 2022ರಿಂದ ಜಾರಿಗೆ ಬರುವಂತೆ)

3ಕೆಡಬ್ಲ್ಯೂ(KW) ಮೀರಿರದ

₹888

₹2,466

3KW ಮೀರಿರುವ ಆದರೆ 7KW ಮೀರಿರದ

₹2,792

₹3,273

7KW ಮೀರಿರುವ ಆದರೆ 16KW ಮೀರಿರದ

₹4,653

₹6,260

16KW ಮೀರಿರುವ

₹11,079

₹12,849

ಯಾವ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿ ನಿಮಗೆ ಉತ್ತಮ?

ಸರಿಯಾದ ಟೂ ವೀಲರ್ ಇನ್ಶೂರೆನ್ಸ್ ಅನ್ನು ಹೇಗೆ ಆರಿಸುವುದು?

ನಿಮ್ಮ ಐಡಿವಿ(IDV) ಅನ್ನು ಕಸ್ಟಮೈಜ್ ಮಾಡಿ

ಐಡಿವಿ, ಡೆಪ್ರಿಸಿಯೇಷನ್ ಶುಲ್ಕವನ್ನೂ ಸೇರಿಸಲಾದ, ನಿಮ್ಮ ಬೈಕ್ ನ ಮಾರುಕಟ್ಟೆ ಮೌಲ್ಯವಾಗಿದೆ ಹಾಗೂ ಈ ಮೌಲ್ಯವು ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಇದರ ಜೊತೆ , ಕ್ಲೈಮ್ ಸಂದರ್ಭದಲ್ಲಿ ನಿಮಗೆ ಸಿಗುವ ಪರಿಹಾರದ ಮೇಲೂ ಇದು ಪರಿಣಾಮವನ್ನು ಬೀರುತ್ತದೆ. ಆದ್ದರಿಂದ, ನೀವು ನಿಮ್ಮ ಐಡಿವಿ ಅನ್ನು ಸರಿಯಾಗಿ ಉಲ್ಲೇಖಿಸಲು ಮರೆಯಬೇಡಿ. ಡಿಜಿಟ್ ನಲ್ಲಿ, ನಾವು ಪಾರದರ್ಶಕತೆಯಲ್ಲಿ ವಿಶ್ವಾಸ ಹೊಂದಿರುವುದರಿಂದ, ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವ ಆಯ್ಕೆಯನ್ನು ನಿಮಗೇ ನೀಡುತ್ತೇವೆ.

ನಿಮ್ಮ ಬೈಕ್ ಇನ್ಶೂರೆನ್ಸ್ ಕೊಟೇಶನ್ ಗಳನ್ನು ಹೋಲಿಕೆ ಮಾಡಿ

ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಖರೀದಿಸುವ ಪ್ರಮುಖ ಲಾಭವೇನೆಂದರೆ, ನೀವು ವಿಭಿನ್ನ ಬೈಕ್ ಇನ್ಶೂರೆನ್ಸ್ ಕೊಟೇಶನ್ ಗಳ ಹೋಲಿಕೆಯನ್ನು ಮಾಡಬಹುದು. ಇದನ್ನು ನೀವು ಆನ್ಲೈನ್ ಸಂಗ್ರಹಕರ ಮೂಲಕ ಅಥವಾ ವಿಭಿನ್ನ ಇನ್ಶೂರೆನ್ಸ್ ಪ್ರೊವೈಡರ್ ವೆಬ್ಸೈಟ್ ಗಳನ್ನು ಭೇಟಿಮಾಡಿಯೂ ಮಾಡಬಹುದು. ನೀವು ಇದನ್ನು ಮಾಡುವಾಗ ಪ್ರಮುಖ ಅಂಶಗಳಾದ ನಿಮ್ಮ ಐಡಿವಿ, ಲಭ್ಯವಿರುವ ಆಡ್-ಆನ್ ಗಳು, ಸೇವಾ ಲಾಭಗಳು, ಹಾಗೂ ಖಂಡಿತವಾಗಿ ಕ್ಲೈಮ್ ಇತ್ಯರ್ಥದ ಅನುಪಾತ ಹಾಗೂ ಪ್ರಕ್ರಿಯೆಗಳನ್ನು ಹೋಲಿಕೆ ಮಾಡಲು ಮರೆಯದಿರಿ!

ಸೇವಾ ಲಾಭಗಳು

ಒಂದು ಒಳ್ಳೆಯ ಬೈಕ್ ಇನ್ಶೂರೆನ್ಸ್ ಎಂದರೆ ಅದು ಕೇವಲ ಕವರೇಜ್ ಹಾಗೂ ಕ್ಲೈಮ್ ಗಳ ಬಗ್ಗೆ ಆಗಿರದೆ(ಆದರೆ ಖಂಡಿತವಾಗಿಯೂ, ಅದರ ದೊಡ್ಡ ಭಾಗವಾಗಿದೆ!) ಅದು ನಿಮ್ಮ ಸರ್ವಿಸ್ ಪ್ರೊವೈಡರ್ ನಿಂದ ದೊರೆಯುವ ಸೇವಾ ಲಾಭಗಳ ಬಗ್ಗೆಯೂ ಆಗಿದೆ. ಉದಾಹರಣೆಗೆ; ಡಿಜಿಟ್ ನಲ್ಲಿ ನಾವು ರೋಡ್ಸೈಡ್ ಅಸಿಸ್ಟೆನ್ಸ್(ಇದನ್ನು ಕ್ಲೈಮ್ ಎಂದು ಕೂಡಾ ಪರಿಗಣಿಸಲಾಗುವುದಿಲ್ಲ) ನಂತಹ ಸೇವೆಗಳನ್ನು ಒದಗಿಸುತ್ತಿದ್ದು, ಇದು ನಿಮ್ಮ ಅತೀ ಸಣ್ಣ ಸಮಸ್ಯೆಗಳ ಸಮಯದಲ್ಲೂ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ನಿಮಗೆ ವಿಶ್ವಾಸ ಮೂಡಿಸುತ್ತದೆ.

ನಿಮ್ಮ ಕವರೇಜ್ ಅನ್ನು ತಿಳಿಯಿರಿ

ಒಂದು ಒಳ್ಳೆಯ ಬೈಕ್ ಇನ್ಶೂರೆನ್ಸ್ ನಿಮ್ಮ ಅಗತ್ಯದ ವಿವಿಧ ವಿಷಯಗಳಿಗಾಗಿ ನಿಮಗೆ ಕವರ್ ನೀಡುವ ಸಾಮರ್ಥ್ಯವನ್ನು ಹೊಂದಿರಬೇಕು. ಪ್ರೀಮಿಯಂ ಇರುವುದು ಅದಕ್ಕಾಗಿಯೇ! ಆದ್ದರಿಂದ, ನೀವು ಸರಿಯಾದ ಬೈಕ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವಾಗ, ನಿಮಗೆ ಸಿಗುವ ಕವರೇಜ್ ಅನ್ನು ಗಮನಿಸಲು ಮರೆಯದಿರಿ ಹಾಗೂ ನಂತರ ಅದು ಇಷ್ಟು ಬೆಲೆಗೆ ಯೋಗ್ಯವೇ ಎಂದು ನಿರ್ಧರಿಸಿ.

ನೀವು ಅವಶ್ಯವಾಗಿತಿಳಿದುಕೊಳ್ಳಬೇಕಾದ ಟೂ ವೀಲರ್ ಇನ್ಶೂರೆನ್ಸ್ ಪರಿಭಾಷೆಗಳು

ಸರಿಯಾದ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಆರಿಸುವುದು?

ಡಿಜಿಟ್ ನ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಅಥವಾ ರಿನ್ಯೂ ಮಾಡುವುದು ಹೇಗೆ?

ಟೂ ವೀಲರ್ ಇನ್ಶೂರೆನ್ಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು

ಟೂ ವೀಲರ್ ಇನ್ಶೂರೆನ್ಸ್ ಅನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಪದೇಪದೇ ಕೇಳಲಾದ ಪ್ರಶ್ನೆಗಳು