ಕಾಂಪ್ರೆಹೆನ್ಸಿವ್ vs ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್

ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಕೋಟ್ ಪಡೆಯಿರಿ
search

I agree to the  Terms & Conditions

It's a brand new bike

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸವೇನು?

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸ

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್

ಏನಿದು?

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಯು, ಥರ್ಡ್ ಪಾರ್ಟಿ ಲೈಬಿಲಿಟಿ ಇನ್ಶೂರೆನ್ಸ್ ಮತ್ತು ಓನ್-ಡ್ಯಾಮೇಜ್ ಕವರ್ ಎರಡರ ಸಂಯೋಜನೆಯೊಂದಿಗೆ ಎಲ್ಲ ಆಡ್ಸ್ ವಿರುದ್ಧ ನಿಮಗೆ ಸಂಪೂರ್ಣ ಕವರೇಜ್ ಅನ್ನು ನೀಡುತ್ತದೆ!

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್, ಥರ್ಡ್-ಪಾರ್ಟಿಗೆ ಉಂಟಾಗುವ ಹಾನಿಗಳಿಗೆ ರಕ್ಷಣೆ ನೀಡುವ ಖಡ್ಡಾಯ ಪಾಲಿಸಿಯಾಗಿದೆ. ಇದು ಮೋಟಾರ್ ವೆಹಿಕಲ್ಸ್ ಆಕ್ಟ್, 1988 ರ ಪ್ರಕಾರ ಭಾರತದಲ್ಲಿ ಕಾನೂನಿನ್ವಯ ಖಡ್ಡಾಯವಾಗಿದೆ.

ಕವರೇಜ್ ವಿವರ

ಈ ಪಾಲಿಸಿಯು ವ್ಯಾಪಕ ಕವರೇಜ್ ಅನ್ನು ನೀಡುತ್ತದೆ. ಪಾಲಿಸಿಯು, ನಿಮ್ಮ ಬೈಕ್‌ಗೆ ಕಳ್ಳತನ, ನಷ್ಟ ಮತ್ತು ಹಾನಿಯ ವಿರುದ್ಧ ರಕ್ಷಣೆ ನೀಡುತ್ತದೆ. ಇದು ನಿಮ್ಮ ಬೈಕ್‌ಗೆ ಹಾಗೂ ಇನ್ನೊಬ್ಬ ವ್ಯಕ್ತಿಯ ವಾಹನ ಅಥವಾ ಆಸ್ತಿಗೆ ಉಂಟಾದ ಎಲ್ಲಾ ರೀತಿಯ ಹಾನಿಗಳ ವಿರುದ್ಧ ವಿತ್ತೀಯ (monetary) ಬೆಂಬಲವನ್ನು ನೀಡುತ್ತದೆ.

ಈ ಪಾಲಿಸಿಯು ಸೀಮಿತ ವ್ಯಾಪ್ತಿಯನ್ನು ನೀಡುತ್ತದೆ. ಥರ್ಡ್-ಪಾರ್ಟಿ ಲೈಬಿಲಿಟಿ ಬೈಕ್ ಇನ್ಶೂರೆನ್ಸ್ ಎನ್ನುವುದು ಥರ್ಡ್ ಪಾರ್ಟಿಯ ಹಾನಿ/ನಷ್ಟದಿಂದ ಮಾತ್ರ ನಿಮ್ಮನ್ನು ರಕ್ಷಿಸುತ್ತದೆ.

ಆಡ್-ಆನ್‌ಗಳು

ಈ ಪಾಲಿಸಿಯೊಂದಿಗೆ, ಝೀರೋ ಡೆಪ್ರಿಸಿಯೇಷನ್ ಕವರ್, ರಿಟರ್ನ್ ಟು ಇನ್‌ವಾಯ್ಸ್ ಕವರ್‌, ರಸ್ತೆಬದಿಯ ಸಹಾಯ ಮತ್ತು ಇತರ ಕನ್ಸ್ಯೂಮೇಬಲ್ ಕವರ್‌ನಂತಹ ಪ್ರಯೋಜನಕಾರಿ ಆಡ್-ಆನ್‌ಗಳನ್ನು ನೀವು ಆರಿಸಿಕೊಳ್ಳಬಹುದು

ಈ ಪಾಲಿಸಿಯು, ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಮಾತ್ರ ಒದಗಿಸುತ್ತದೆ.

ನೀವು ಏನನ್ನು ಖರೀದಿಸಬೇಕು?

ಆಡ್-ಆನ್‌ಗಳ ಜೊತೆಗೆ ನಿಮ್ಮ ಬೈಕ್‌ಗೆ ಸಂಪೂರ್ಣ ಕವರೇಜ್ ಅಗತ್ಯವಿದ್ದಲ್ಲಿ ಈ ಪಾಲಿಸಿಯನ್ನು ಶಿಫಾರಸ್ಸು ಮಾಡಲಾಗಿದೆ.

ಒಂದುವೇಳೆ ನೀವು ನಿಮ್ಮ ಬೈಕ್ ಅನ್ನು ಅಪರೂಪಕ್ಕೆ ಓಡಿಸುತ್ತಿದ್ದರೆ, ಅಥವಾ ಅದು ಈಗಾಗಲೇ ತುಂಬಾ ಹಳೆಯದಾಗಿದ್ದರೆ ಈ ಪಾಲಿಸಿಯನ್ನು ಶಿಫಾರಸ್ಸು ಮಾಡಲಾಗಿದೆ .

ಪ್ರೀಮಿಯಂ ಬೆಲೆ

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಥರ್ಡ್ ಪಾರ್ಟಿ ಇನ್ಶೂರೆನ್ಸಿಗಿಂತ ಹೆಚ್ಚಾಗಿರುತ್ತದೆ.

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಕಡಿಮೆ ವೆಚ್ಚದ್ದಾಗಿದೆ.

 

ಕಾಂಪ್ರೆಹೆನ್ಸಿವ್  ಮತ್ತು ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ:

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಎಂದರೇನು?

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸಿನ ಪ್ರಯೋಜನಗಳು

ನಿಮ್ಮ ಬೈಕ್‌ನ ಹಾನಿಗಳನ್ನು ಕವರ್ ಮಾಡುತ್ತದೆ

ಜನರು ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಆಯ್ಕೆ ಮಾಡಿಕೊಳ್ಳಲು #1 ಕಾರಣವೆಂದರೆ ಅದು ಒಬ್ಬರ ಸ್ವಂತ ಬೈಕ್‌ನ ಹಾನಿ ಮತ್ತು ನಷ್ಟಗಳಿಗೆ ರಕ್ಷಣೆ ನೀಡುತ್ತದೆ. ಹೀಗಾಗಿ ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ಈ ಪಾಲಿಸಿಯು ನಿಮ್ಮನ್ನು ಟನ್‌ಗಳಷ್ಟು ಹಣದ ತೊಂದರೆಯಿಂದ ಉಳಿಸುತ್ತದೆ!

ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ

ಥರ್ಡ್-ಪಾರ್ಟಿ ಕವರ್‌ನಂತೆ, ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಕೂಡ ನಿಮ್ಮ ಬೈಕ್ ಅನ್ನು ಥರ್ಡ್ ಪಾರ್ಟಿ ಸಂಬಂಧಿತ ಹೊಣೆಗಾರಿಕೆಗಳಿಂದ ಮತ್ತು ನಷ್ಟಗಳಿಂದ ರಕ್ಷಿಸುತ್ತದೆ. ಉದಾಹರಣೆಗೆ; ನಿಮ್ಮ ಬೈಕ್ ಬೇರೊಬ್ಬರ ಕಾರಿಗೆ ಢಿಕ್ಕಿ ಹೊಡೆದರೆ, ನಿಮ್ಮ ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ನಿಮ್ಮನ್ನು ರಕ್ಷಿಸುತ್ತದೆ!

ನಿಮ್ಮ ಐಡಿವಿ (IDV) ಅನ್ನು ನೀವೇ ಕಸ್ಟಮೈಸ್ ಮಾಡುವ ಆಯ್ಕೆ!

ನೀವು ಡಿಜಿಟ್‌ನೊಂದಿಗೆ ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಲು ಆಯ್ಕೆ ಮಾಡಿದಾಗ, ನಿಮ್ಮ ಬೈಕ್‌ನ ಐಡಿವಿ (IDV)  ಅಥವಾ ನಿಮ್ಮ ಬೈಕ್‌ನ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ನಾವು ನಿಮಗೇ ನೀಡುತ್ತೇವೆ ಏಕೆಂದರೆ ನಿಮ್ಮ ಬೈಕ್ ಅನ್ನು ಎಲ್ಲರಿಗಿಂತ ಸರಿಯಾಗಿ ನೀವು ತಿಳಿದಿರುತ್ತೀರಿ ಎಂದು ಎಂದು ನಾವು ನಂಬುತ್ತೇವೆ!

ನೈಸರ್ಗಿಕ ವಿಕೋಪಗಳ ಸಮಯದಲ್ಲಿ ರಕ್ಷಣೆ

ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್, ಅಪಘಾತಗಳು ಮತ್ತು ಘರ್ಷಣೆಗಳ ಸಮಯದಲ್ಲಿ ಉಂಟಾಗುವ ಹಾನಿಗಳಿಂದ ನಿಮ್ಮ ಬೈಕ್ ಅನ್ನು ರಕ್ಷಿಸುವುದಲ್ಲದೆ, ಪ್ರವಾಹ, ಚಂಡಮಾರುತ ಮತ್ತು ಮುಂತಾದ ನೈಸರ್ಗಿಕ ವಿಕೋಪದಿಂದ ಉಂಟಾಗುವ ಯಾವುದೇ ಹಾನಿಗಳಿಂದಲೂ ನಿಮ್ಮ ಬೈಕ್ ಅನ್ನು ರಕ್ಷಿಸುತ್ತದೆ.

ಬೈಕ್ ಕಳ್ಳತನಕ್ಕೆ ಪರಿಹಾರ

ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸಿನ ಮತ್ತೊಂದು ದೊಡ್ಡ ಪ್ರಯೋಜನವೆಂದರೆ, ದುರದೃಷ್ಟಕರ ಸಂದರ್ಭದಲ್ಲಿ ನಿಮ್ಮ ಬೈಕ್ ಕಳ್ಳತನವಾದರೆ , ನಿಮ್ಮ ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್, ಅದರ ನಷ್ಟವನ್ನು ಸರಿದೂಗಿಸುತ್ತದೆ. ಹೆಚ್ಚುವರಿಯಾಗಿ, ನೀವು ರಿಟರ್ನ್ ಟು ಇನ್‌ವಾಯ್ಸ್ ಕವರ್‌ ಅನ್ನು ಆಯ್ಕೆಮಾಡಿದರೆ, ಕೊನೆಯ ಇನ್‌ವಾಯ್ಸ್ ಮೌಲ್ಯದ ಪ್ರಕಾರ, ನಿಮಗೆ ರಸ್ತೆ ತೆರಿಗೆಯೊಂದಿಗೆ ಪರಿಹಾರವನ್ನು ನೀಡಲಾಗುತ್ತದೆ.

ವೆಚ್ಚ ಪರಿಣಾಮಕಾರಿ ಆಯ್ಕೆ

ಮೇಲ್ನೋಟಕ್ಕೆ, ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಹೆಚ್ಚು ದುಬಾರಿ ಎಂದು  ಭಾವಿಸಬಹುದು. ಆದರೆ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸಿಗೆ ಹೋಲಿಸಿದರೆ ಇದು ಹೆಚ್ಚು ವೆಚ್ಚ ಪರಿಣಾಮಕಾರಿಯಾಗಿದೆ. ಇದಲ್ಲದೆ, ಮನುಷ್ಯರಾದ ನಾವು ಬೇರೆಯವರಿಗಿಂತ ನಮ್ಮ ಸ್ವಂತ ಬೈಕ್‌ಗೆ ಆಗುವ ಹಾನಿಯ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತೇವೆ, ಅಲ್ಲವೇ?

ವೈಯಕ್ತಿಕ ಹಾನಿಗಳಿಗೂ ಕವರ್!

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಮತ್ತು ಕಾಂಪ್ರಹೆನ್ಸಿವ್ ಬೈಕ್ ಇನ್ಶೂರೆನ್ಸ್ ಇವೆರಡು, ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ವೈಯಕ್ತಿಕ ಹಾನಿಗಳ ವಿರುದ್ಧ ಕವರ್ ಮಾಡಲು ಸಹ ಬಳಸಬಹುದು! ನೀವು ಟು-ವೀಲರ್ ಅನ್ನು ಹೊಂದಿರುವುದರಿಂದ, ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ನಿಮ್ಮ ಬೈಕ್ ಇನ್ಶೂರೆನ್ಸಿನ ಭಾಗವಾಗಿ ಹೊಂದುವುದು ಅತೀ ಮುಖ್ಯವಾಗಿದೆ. (ಮತ್ತು ಕಾನೂನಿನ ಮೂಲಕ ಖಡ್ಡಾಯವಾಗಿದೆ).

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಎಂದರೇನು?

ಥರ್ಡ್-ಪಾರ್ಟಿ ಬೈಕ್‌ ಇನ್ಶೂರೆನ್ಸಿನ ಪ್ರಯೋಜನಗಳು

ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಕವರ್ ಮಾಡುತ್ತವೆ

ಈ ಬೈಕ್ ಇನ್ಶೂರೆನ್ಸಿನ ಮುಖ್ಯ ಉದ್ದೇಶವು ಯಾವುದೇ ಥರ್ಡ್ ಪಾರ್ಟಿ ಸಂಬಂಧಿತ ನಷ್ಟಗಳು ಮತ್ತು ಹಾನಿಗಳಿಂದ ನಿಮ್ಮನ್ನು ರಕ್ಷಿಸುವುದಾಗಿದೆ ಮತ್ತು ಅದನ್ನು ಒದಗಿಸುವುದಾಗಿದೆ.

ಕಾನೂನಿನ ಅನ್ವಯ ನಿಮ್ಮನ್ನು ಕವರ್ ಮಾಡುತ್ತದೆ

ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ರಸ್ತೆಯಲ್ಲಿ ಕಾನೂನುಬದ್ಧವಾಗಿ ವಾಹನ ಚಾಲನೆ ಮಾಡಲು ನಿಮಗೆ ಕನಿಷ್ಠ ಥರ್ಡ್ ಪಾರ್ಟಿ ಪಾಲಿಸಿಯ ಅಗತ್ಯವಿದೆ. ಪಾಲಿಸಿಯನ್ನು ಹೊಂದಿಲ್ಲದಿದ್ದರೆ, ನೀವು ಭಾರೀ ಟ್ರಾಫಿಕ್ ದಂಡಕ್ಕೆ ಹೊಣೆಗಾರರಾಗಬಹುದು!

ದಂಡದಿಂದ ನಿಮ್ಮ ಪಾಕೆಟ್ ಅನ್ನು ರಕ್ಷಿಸುತ್ತದೆ

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್‌ನಂತಹ ಕನಿಷ್ಠ ಇನ್ಶೂರೆನ್ಸ್ ಅನ್ನು ಖರೀದಿಸುವ ವೆಚ್ಚವು, ನಿಮ್ಮ ಜೇಬಿಗೆ ಹಾನಿ ಮಾಡುವ ಟ್ರಾಫಿಕ್ ಪೆನಾಲ್ಟಿಗಳಿಗಿಂತಲೂ ಅಗ್ಗವಾಗಿದೆ! ಮೇಲೆ ತಿಳಿಸಿದಂತೆ, ಕನಿಷ್ಠ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಹೊಂದುವುದರಿಂದ ಅದು ನಿಮ್ಮ ಜೇಬನ್ನು ದಂಡಗಳಿಂದ ರಕ್ಷಿಸುತ್ತದೆ.

ನೀವು ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್‌ಗೆ ಏಕೆ ಅಪ್‌ಗ್ರೇಡ್ ಆಗಬೇಕು?

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮೊದಲು ನೀವು ಪರಿಗಣಿಸಬೇಕಾದ ಅಂಶಗಳು