ಡಿಜಿಟ್ ನ ಟು-ವೀಲರ್ಗಳ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನ ಅಪಾಯಗಳನ್ನು ಒಳಗೊಂಡಿದೆ:
ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳು ಅಥವಾ ನಷ್ಟಗಳು - ನಮ್ಮ ಜೀವನದಲ್ಲಿ ಭೂಕಂಪ, ಚಂಡಮಾರುತ, ಪ್ರವಾಹ ಮುಂತಾದ ನೈಸರ್ಗಿಕ ವಿಕೋಪಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದು ಮತ್ತು ಅವು ನಮ್ಮ ಜೀವ ಮತ್ತು ಆಸ್ತಿಗೆ ಅಪಾರ ಹಾನಿಯನ್ನುಂಟುಮಾಡಬಹುದು. ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಗಳು ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ಎಲ್ಲಾ ಹಾನಿಗಳ ವಿರುದ್ಧ ಆರ್ಥಿಕವಾಗಿ ನಿಮ್ಮನ್ನು ರಕ್ಷಿಸುತ್ತವೆ.
ಮಾನವ ನಿರ್ಮಿತ ವಿಪತ್ತುಗಳಿಂದ ಉಂಟಾಗುವ ಹಾನಿಗಳು ಅಥವಾ ನಷ್ಟಗಳು - ನೈಸರ್ಗಿಕ ವಿಪತ್ತುಗಳ ಹೊರತಾಗಿ ನಿಮ್ಮ ಬೈಕ್, ದರೋಡೆ, ಕಳ್ಳತನ, ಗಲಭೆಗಳು ಅಥವಾ ಯಾವುದೇ ದುರದೃಷ್ಟಕರ ಮಾನವ ನಿರ್ಮಿತ ನೈಸರ್ಗಿಕ ವಿಕೋಪಗಳಿಂದ ದೊಡ್ಡ ಹಾನಿಯನ್ನು ಸಹ ಅನುಭವಿಸಬಹುದು.
ಡಿಜಿಟ್ನ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಗಳು ಇಂತಹ ಮಾನವ ನಿರ್ಮಿತ ವಿಪತ್ತುಗಳಿಂದ ಉಂಟಾಗುವ ಎಲ್ಲಾ ಹಾನಿಗಳ ವಿರುದ್ಧ ನಿಮಗೆ ಹಣಕಾಸಿನ ಸಂಪೂರ್ಣ ರಕ್ಷಣೆಯನ್ನು ನೀಡುತ್ತದೆ.
ಅಪಘಾತದ ಕಾರಣದಿಂದ ಉಂಟಾಗುವ ಸಂಪೂರ್ಣ ಅಥವಾ ಭಾಗಶಃ ಅಂಗವೈಕಲ್ಯ - ಅಪಘಾತಗಳು ಜೀವನದ ದೊಡ್ಡ ದುರದೃಷ್ಟಗಳಲ್ಲಿ ಒಂದಾಗಿದೆ. ಇದು ಯಾವುದೇ ಆತಂಕಕಾರಿ ಮುನ್ಸೂಚನೆ ನೀಡದೆ, ಯಾವುದೇ ಸಮಯದಲ್ಲಿ ಸಂಭವಿಸಬಹುದು. ಬೈಕ್ ಸವಾರನು ಅಪಘಾತವನ್ನು ಎದುರಿಸಿದಾಗ, ಅವನು ಭಾಗಶಃ ಅಥವಾ ಸಂಪೂರ್ಣ ಅಂಗವೈಕಲ್ಯದಿಂದ ಬಳಲಬಹುದು.
ಭಾಗಶಃ ಅಂಗವೈಕಲ್ಯದ ಉದಾಹರಣೆಗಳೆಂದರೆ ಚಲನೆಯ ತಾತ್ಕಾಲಿಕ ನಷ್ಟ, ದೇಹದ ಕೆಲವು ಭಾಗಗಳ ಅಸಮರ್ಥತೆ, ಇತ್ಯಾದಿ. ಸಂಪೂರ್ಣ ಅಂಗವೈಕಲ್ಯಕ್ಕೆ ಕೆಲವು ಉಧಾಹರಣೆಗಳು ಎಂದರೆ ದೃಷ್ಟಿ ನಷ್ಟ, ನಡೆಯಲು ಸಂಪೂರ್ಣ ವಿಫಲರಾಗುವುದು ಇತ್ಯಾದಿಗಳು. ಟು-ವೀಲರ್ ಇನ್ಶೂರೆನ್ಸ್ ಈ ಎಲ್ಲಾ ನಷ್ಟಗಳನ್ನು ಕವರ್ ಮಾಡುತ್ತದೆ. ಮತ್ತು ನಿಮಗೆ ಚಿಕಿತ್ಸಾ ವೆಚ್ಚವನ್ನು ಒದಗಿಸುತ್ತದೆ.
ಪಾಲಿಸಿದಾರನ ಸಾವು - ಒಂದು ದೊಡ್ಡ ಅಪಘಾತವು ಪಾಲಿಸಿದಾರನ ಸಾವಿಗೆ ಕಾರಣವಾಗಬಹುದು ಅಥವಾ ಅಪಘಾತದ ಸಮಯದಲ್ಲಿ ಬೈಕ್ ಚಲಾಯಿಸುತ್ತಿದ್ದ ಯಾವುದೇ ಥರ್ಡ್ ಪಾರ್ಟಿಯ ಸಾವಿಗೆ ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿ, ಬೈಕ್ ಇನ್ಶೂರೆನ್ಸ್ ಕಂಪನಿಯು, ಪಾಲಿಸಿದಾರನು ಪಿಎ ಕವರ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ ಪಾಲಿಸಿದಾರನ ನಾಮಿನಿಗಳಿಗೆ ಗಣನೀಯ ಪರಿಹಾರವನ್ನು ನೀಡುತ್ತದೆ.
ಇವು, ಡಿಜಿಟ್ನ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯು ಒಳಗೊಳ್ಳುವ ಕೆಲ ಪ್ರಮುಖ ವಿಷಯಗಳಾಗಿವೆ. ಭಾರತೀಯ ರಸ್ತೆಗಳಲ್ಲಿ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದಿಲ್ಲ ಎಂಬುದೇನೋ ನಿಜ, ಆದ್ದರಿಂದ ಟು-ವೀಲರ್ಗಳನ್ನು ಓಡಿಸುವಾಗ ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ. ವಾಸ್ತವವಾಗಿ, ಟು-ವೀಲರ್ಗಳನ್ನು ಓಡಿಸುವುದು, ರಸ್ತೆಯಲ್ಲಿ ಕಾರನ್ನು ಓಡಿಸುವುದಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ನೀವು ಬೈಕ್ ಓಡಿಸುವಾಗ ನೀವು ಹೊರಗಿರುತ್ತೀರಿ, ಕಾರು ಚಾಲನೆ ಮಾಡುವವರು ಕಾರಿನೊಳಗೆ ಕುಳಿತುಕೊಂಡಿರುತ್ತಾರೆ ಇದರಿಂದಾಗಿ ನೀವು ಹೆಚ್ಚು ಅಪಾಯಕ್ಕೆ ಒಳಗಾಗುತ್ತೀರಿ. ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಡಿಜಿಟ್ನ ಮೂಲಕ ನೀಡಲಾಗುವ ಇನ್ಶೂರೆನ್ಸ್ ಆಗಿದ್ದು, ಇದು ಸ್ವಯಂ-ದೈಹಿಕ ಗಾಯ, ವಾಹನದ ಒಟ್ಟು ಅಥವಾ ಭಾಗಶಃ ಹಾನಿ, ಸವಾರನ ಒಟ್ಟು ಅಥವಾ ಭಾಗಶಃ ಅಂಗವೈಕಲ್ಯ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಗಾಗಿ ನಿಮಗೆ ದೊಡ್ಡ ಮಟ್ಟದ ರಿಸ್ಕ್ ಕವರೇಜನ್ನು ನೀಡುತ್ತದೆ.
ಕಾನೂನು ಪಾಲನೆಗಳು, ಒಳಗೊಂಡಿರುವ ಅಪಾಯದ ಅಂಶ ಮತ್ತು ವೆಚ್ಚ-ಉಳಿತಾಯಗಳು - ಈ ಪ್ರಶ್ನೆಗೆ ಸಾಕಷ್ಟು ಉತ್ತರಿಸಲು ಸಾಕಷ್ಟು ಕಾರಣಗಳು - ಭಾರತದಲ್ಲಿ ಬೈಕ್ ಇನ್ಶೂರೆನ್ಸ್ ಏಕೆ ಕಡ್ಡಾಯವಾಗಿದೆ. ಬೈಕ್ ಇನ್ಶೂರೆನ್ಸಿನ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡ ನಂತರ, ನೀವು ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ? ನಿಮ್ಮ ಟು-ವೀಲರ್ಗೆ ನೀವು ಇನ್ನೂ ಇನ್ಶೂರೆನ್ಸ್ ಕವರ್ ಅನ್ನು ಪಡೆಯದಿದ್ದರೆ, ಈಗಲೇ ನಿಮ್ಮ ಬೈಕಿಗೆ ಇನ್ಶೂರೆನ್ಸ್ ಖರೀದಿ ಮಾಡಿ!