ಕೇಸ್ 1: ನೀವು ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದರೆ - ಐಷಾರಾಮಿ ಕಾರನ್ನು ಖರೀದಿಸುವುದು ಹೆಚ್ಚಿನ ಓನರ್ಗಳಿಗೆ ಒನ್-ಟೈಮ್ ಡೀಲ್ ಆಗಿದೆ. ಹೀಗಾಗಿ, ಥರ್ಡ್ ಪಾರ್ಟಿ ಲಯಬಿಲಿಟಿ ಮತ್ತು ಓನ್ ಡ್ಯಾಮೇಜ್ ಎರಡನ್ನೂ ಕವರ್ ಮಾಡಲು ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್‌ನೊಂದಿಗೆ ಅದನ್ನು ರಕ್ಷಿಸಬೇಕು. ಐಷಾರಾಮಿ ಕಾರ್‌ಗಳಿಗೆ ಸೂಕ್ತವಾದ ಆ್ಯಡ್-ಆನ್‌ಗಳು ಸಹ ಅಗತ್ಯ.
ಅದರ ದುಬಾರಿ ಭಾಗಗಳನ್ನು ರಿಪೇರಿ/ರಿಪ್ಲೇಸ್ ಮಾಡುವ ಸಂಪೂರ್ಣ ಮೌಲ್ಯವನ್ನು ಪಡೆಯಲು ನೀವು ಝೀರೋ ಡೆಪ್ರಿಸಿಯೇಶನ್ ಕವರ್ ಅನ್ನು ಪಡೆಯಬಹುದು. ರಿಟರ್ನ್ ಟು ಇನ್‌ವಾಯ್ಸ್ ಕವರ್ ಎನ್ನುವುದು ಐಷಾರಾಮಿ ಕಾರ್‌ಗಳಿಗೆ ಉಪಯುಕ್ತವಾಗಿರುತ್ತದೆ. ಏಕೆಂದರೆ ಕಳ್ಳತನ ಅಥವಾ ಒಟ್ಟು ನಷ್ಟದ ಸಂದರ್ಭದಲ್ಲಿ ಇದು ನಿಮ್ಮ ಕಾರ್‌ನ ಓರಿಜಿನಲ್ ಇನ್‌ವಾಯ್ಸ್ ಮೌಲ್ಯವನ್ನು ನೀವು ಸ್ವೀಕರಿಸುತ್ತೀರಿ ಎಂಬುದನ್ನು ಖಚಿತಪಡಿಸುತ್ತದೆ.
ಐಷಾರಾಮಿ ಕಾರ್‌ಗೆ ಎಂಜಿನ್ ಪ್ರೊಟೆಕ್ಷನ್ ಕವರ್ ಅತ್ಯಗತ್ಯವಾಗಿದೆ ಏಕೆಂದರೆ ಇದು ನಿಮ್ಮ ಕಾರ್‌ನ ದುಬಾರಿ ಅಂಶವಾಗಿದೆ ಮತ್ತು ಈ ಕವರ್ ಎಲ್ಲಾ ಎಂಜಿನ್ ಮತ್ತು ಗೇರ್‌ಬಾಕ್ಸ್ ರಿಪೇರಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೆ, ಲೂಬ್ರಿಕಂಟ್ಗಳು, ಆಯಿಲ್ಗಳು, ನಟ್ಸ್, ಬೋಲ್ಟ್‌ಗಳು, ಸ್ಕ್ರೂಗಳು, ವಾಷರ್ಗಳು, ಗ್ರೀಸ್ ಇತ್ಯಾದಿಗಳ ರಿಪ್ಲೇಸ್ಮೆಂಟ್ ವೆಚ್ಚವನ್ನು ಕವರ್ ಮಾಡಲು ಕನ್ಸ್ಯುಮೇಬಲ್ ಕವರ್ ಅನ್ನು ಪಡೆಯುವುದು ಉತ್ತಮ.
ಕೇಸ್ 2: ನೀವು ಪ್ರತಿದಿನ ಓಡಿಸುವ 7 ವರ್ಷದ ಕಾರನ್ನು ಹೊಂದಿದ್ದರೆ - ನೀವು 7 ವರ್ಷ ಹಳೆಯದಾದ ಕಾರನ್ನು ಹೊಂದಿದ್ದರೆ ಹೆಚ್ಚಿನ ಕಾರ್ ಓನರ್ಗಳು ಕಾರ್ ಇನ್ಶೂರೆನ್ಸ್‌ನ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸುತ್ತಾರೆ; ಆದಾಗ್ಯೂ, ಕಾನೂನು ದೃಷ್ಟಿಯಿಂದ ಕನಿಷ್ಠ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ನಿಮ್ಮ ಕಾರ್ ಈಗಾಗಲೇ 7 ವರ್ಷ ಹಳೆಯದಾಗಿರುವುದರಿಂದ, ಅಪಘಾತಗಳು, ಕಳ್ಳತನ, ಬೆಂಕಿ, ನೈಸರ್ಗಿಕ ವಿಕೋಪಗಳು ಇತ್ಯಾದಿಗಳ ಸಂದರ್ಭದಲ್ಲಿ ನಿಮ್ಮ ಕಾರ್‌ನ ರಿಪೇರಿಗಾಗಿ ಅಥವಾ ರಿಪ್ಲೇಸ್ಮೆಂಟ್ಗಾಗಿ ಕವರೇಜ್ ಪಡೆಯಲು ಓನ್-ಡ್ಯಾಮೇಜ್ ಕವರ್ ಅನ್ನು ಖರೀದಿಸಲು ಸಲಹೆ ನೀಡಲಾಗುತ್ತದೆ.
ಅಲ್ಲದೆ, ರೋಡ್ಸೈಡ್ ಅಸಿಸ್ಟೆನ್ಸ್ ಆ್ಯಡ್-ಆನ್ನಂತಹ ಆ್ಯಡ್-ಆನ್‌ಗಳೊಂದಿಗೆ ಕಾಂಪ್ರೆಹೆನ್ಸಿವ್ ಕವರ್ ಅನ್ನು ಪಡೆಯುವುದರಿಂದ ನಿಮ್ಮ ಕಾರ್ ಕೆಟ್ಟುಹೋದರೆ, ಟೈರ್ ಫ್ಲ್ಯಾಟ್ ಆಗಿದ್ದರೆ ಅಥವಾ ಕಾರನ್ನು ಎಳೆಯುವ ಅಗತ್ಯವಿದ್ದಲ್ಲಿ ಲಾಂಗ್ ರೋಡ್ ಟ್ರಿಪ್ನಲ್ಲಿ ನಿಮ್ಮನ್ನು ರಕ್ಷಿಸುತ್ತದೆ.
ಕೇಸ್ 3: ಅಪರೂಪವಾಗಿ ರಸ್ತೆಗಿಳಿಯುವ ನಿಮ್ಮ ಅಜ್ಜನ ಕಾರನ್ನು ನೀವು ಸಂರಕ್ಷಿಸಿದ್ದರೆ, - ಜನರು ಕೆಲವು ವಸ್ತುಗಳನ್ನು ಸುಮ್ಮನೆ ಭಾವನಾತ್ಮಕ ಮೌಲ್ಯಕ್ಕಾಗಿ ಮಾತ್ರ ನಿಮ್ಮ ಕುಟುಂಬದಲ್ಲಿ ತಲೆಮಾರುಗಳವರೆಗೆ ಇರಿಸಿಕೊಳ್ಳುತ್ತಾರೆ. ಅದು ಅಪರೂಪವಾಗಿ ಬಳಸುವಂತದ್ದಾಗಿರಬಹುದು, ಆದರೆ ಕಾನೂನು ಅವಶ್ಯಕತೆಗಳ ಪ್ರಕಾರ ನೀವು ಅದಕ್ಕಾಗಿ ಕನಿಷ್ಠ ಥರ್ಡ್ ಪಾರ್ಟಿ ಕವರೇಜ್ ಪಾಲಿಸಿಯ ಮೂಲಕ ಇನ್ಶೂರೆನ್ಸ್ ಅನ್ನು ಪಡೆಯಬೇಕಿದೆ. ನೀವು ಆ ಕಾರನ್ನು ಓಡಿಸದ ಕಾರಣ, ನೀವು ಇತರ ಆ್ಯಡ್-ಆನ್‌ಗಳನ್ನು ಖರೀದಿಸುವುದನ್ನು ಬಿಡಬಹುದು.