ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್
Third-party premium has changed from 1st June. Renew now
I agree to the Terms & Conditions
Third-party premium has changed from 1st June. Renew now
I agree to the Terms & Conditions
ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಎಂದರೆ ಮೋಟಾರ್ ಇನ್ಶೂರೆನ್ಸ್ ನ ಒಂದು ವಿಧ. ಈ ಇನ್ಶೂರೆನ್ಸ್ ನೈಸರ್ಗಿಕ ವಿಪತ್ತು, ಅಪಘಾತಗಳು ಅಥವಾ ಬೆಂಕಿ ಮತ್ತಿತ್ಯಾದಿ ಕಾರಣಗಳಿಂದ ನಿಮ್ಮ ಎಲೆಕ್ಟ್ರಿಕ್ ಕಾರುಗಳಿಗೆ ಉಂಟಾಗಬಹುದಾದ ಡ್ಯಾಮೇಜ್ ಮತ್ತು ನಷ್ಟಗಳಿಂದ ರಕ್ಷಣೆ ಒದಗಿಸುತ್ತದೆ.
ಪರಿಸರದ ಹಿತ ಕಾಪಾಡುವುದರಿಂದ ಮತ್ತು ವೆಚ್ಚ ಕಡಿಮೆ ಆಗುವುದರಿಂದ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ. ಜೊತೆಗೆ ಸಾಮಾನ್ಯ ಕಾರುಗಳಿಗೆ ಇಂಧನವಾಗಿ ಪೆಟ್ರೋಲ್ ಅಥವಾ ಡೀಸೆಲ್ ಅಗತ್ಯವಿದೆ. ಆದರೆ ಈ ಕಾರುಗಳಿಗೆ ಫೋನ್ ಅಥವಾ ಲ್ಯಾಪ್ ಟಾಪ್ ಗಳಂತೆ ವಿದ್ಯುತ್ ಚಾರ್ಜ್ ಮಾಡಿದರೆ ಸಾಕು!
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಬಳಕೆಯಲ್ಲಿಲ್ಲದಿರುವುದರಿಂದ, ನಿಮ್ಮ ಎಲೆಕ್ಟ್ರಿಕ್ ಕಾರ್ ಗೆ ಇನ್ಶೂರೆನ್ಸ್ ಪಾಲಿಸಿ ಪಡೆಯುವುದರಿಂದ ವಿಭಿನ್ನರಾಗಿ ನಿಲ್ಲಬಹುದು.
ನಿಮ್ಮ ಅಮೂಲ್ಯವಾದ ಎಲೆಕ್ಟ್ರಿಕ್ ಕಾರುಗಳಿಗೆ ಏನು ಹಾನಿಯಾಗಬಹುದು ಎಂದು ಅಂದಾಜಿಸುವುದು ಅಸಾಧ್ಯ. ಈ ಮಾದರಿಯ ಕಾರುಗಳು ಹಲವಾರು ಸಂಕೀರ್ಣವಾದ ಟೆಕ್ನಿಕಲ್ ಮತ್ತು ಮೆಕ್ಯಾನಿಕಲ್ ಪಾರ್ಟ್ ಗಳನ್ನು ಹೊಂದಿರುತ್ತವೆ, ಅವುಗಳಿಂದ ಕಾರು ಸುಲಭವಾಗಿ ಚಲಿಸಬಹುದಾದರೂ ಅವುಗಳು ಯಾವುದೇ ಸಮಯದಲ್ಲಿ ತೊಂದರೆ ಕೂಡ ಕೊಡಬಹುದು.
ಆದ್ದರಿಂದ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಇದ್ದರೆ ಅಹಿತಕರ ಘಟನೆಗಳು ಸಂಭವಿಸಿದಾಗ ಎಂದರೆ ಅಪಘಾತ ಡ್ಯಾಮೇಜ್, ಬೆಂಕಿ, ನೈಸರ್ಗಿಕ ವಿಪತ್ತುಗಳು ಅಥವಾ ಕಳ್ಳತನ ಮುಂತಾದ ಸಂದರ್ಭಗಳಲ್ಲಿ ನೆರವಾಗುತ್ತದೆ ಮತ್ತು ಆರ್ಥಿಕ ರಕ್ಷಣೆ ಒದಗಿಸುತ್ತದೆ. ನೀವು ಯಾವುದೇ ಆತಂಕವಿಲ್ಲದೆ ಕಾರು ಚಾಲನೆ ಮಾಡುವಂತೆ ನೋಡಿಕೊಳ್ಳುತ್ತದೆ. ಭಾರತದಲ್ಲಿ ಕನಿಷ್ಠ ಪಕ್ಷ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯ ಎಂಬ ವಿಚಾರ ನೀವು ಮನಸ್ಸಲ್ಲಿ ಇಟ್ಟುಕೊಂಡಿರಬೇಕು.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ. ಹೇಗೆಂದು ತಿಳಿಯಬೇಕೇ...
ಕಿಲೋ ವ್ಯಾಟ್ ಕೆಪಾಸಿಟಿ, ತಯಾರಿಕೆ, ಮಾಡೆಲ್ ಮತ್ತು ವಯಸ್ಸು ಇತ್ಯಾದಿ ಅನೇಕ ಅಂಶಗಳನ್ನು ಆಧರಿಸಿಕೊಂಡು ಖಾಸಗಿ ಎಲೆಕ್ಟ್ರಿಕ್ ಕಾರುಗಳ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ನಿರ್ಧಾರ ಆಗುತ್ತವೆ.
ವೆಹಿಕಲ್ ಕಿಲೋ ವ್ಯಾಟ್ ಕೆಪಾಸಿಟಿ (ಕೆಡಬ್ಲ್ಯೂ- KW) |
ಥರ್ಡ್ ಪಾರ್ಟಿ ಪಾಲಿಸಿಗಳಿಗೆ ಒಂದು ವರ್ಷದ ಪ್ರೀಮಿಯಂ ದರ |
ದೀರ್ಘಾವಧಿಯ ಪಾಲಿಸಿಗಳಿಗೆ ಪ್ರೀಮಿಯಂ* ದರ |
30 ಕೆಡಬ್ಲ್ಯೂ (KW) ಮೀರಬಾರದು |
₹1,780 |
₹5,543 |
30 ಕೆಡಬ್ಲ್ಯೂಗಿಂತ ಹೆಚ್ಚು ಆದರೆ 65 ಕೆಡಬ್ಲ್ಯೂ ಮೀರಬಾರದು |
₹2,904 |
₹9,044 |
65 ಕೆಡಬ್ಲ್ಯೂಗಿಂತ ಹೆಚ್ಚು |
₹6,712 |
₹20,907 |