ನೀವು ಕಾಂಪ್ರೆಹೆನ್ಸಿವ್ ಪಾಲಿಸಿ, ಸ್ಟ್ಯಾಂಡ್ಲೋನ್ ಓನ್ ಡ್ಯಾಮೇಜ್ ಪಾಲಿಸಿ ಅಥವಾ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೂ ಸಹ, ನೀವು ವೈಯಕ್ತಿಕ ವಸ್ತುಗಳ ನಷ್ಟದ ಆ್ಯಡ್-ಆನ್ ಕವರ್ ಅನ್ನು ಖರೀದಿಸದ ಹೊರತು, ಕಳ್ಳತನವಾದಾಗ ವೆಹಿಕಲ್ನಲ್ಲಿದ್ದ ವೈಯಕ್ತಿಕ ವಸ್ತುಗಳನ್ನು ಕವರ್ ಮಾಡಲಾಗುವುದಿಲ್ಲ.
*ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಪ್ರಕಾರ ಭಾರತದಲ್ಲಿ ಕನಿಷ್ಠ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಹೊಂದುವುದು ಕಡ್ಡಾಯವಾಗಿದೆ.
ಇದು ನಿಖರವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು, ಎರಡು ಸಂದರ್ಭಗಳನ್ನು ಗಮನಿಸೋಣ:
ನಿಮ್ಮ ಕಾರನ್ನು ಕಳ್ಳತನ ಮಾಡಲಾಗಿದೆ (ಅದರಲ್ಲಿದ್ದ ನಿಮ್ಮ ವೈಯಕ್ತಿಕ ವಸ್ತುಗಳೊಂದಿಗೆ)
ನೀವು ಚಲನಚಿತ್ರ ನೋಡುವುದಕ್ಕಾಗಿ ಹೊರಗೆ ಹೋಗಿರುತ್ತೀರಿ ಮತ್ತು ನಿಮ್ಮ ಕಾರ್ ಅನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದೀರಿ ಎಂದುಕೊಳ್ಳೋಣ. ಶೋ ಮುಗಿದ ನಂತರ, ನೀವು ಹೊರಬಂದು ಸುತ್ತಲೂ ನೋಡುತ್ತೀರಿ, ನಿಮ್ಮ ಕಾರ್ ಕಾಣೆಯಾಗಿದೆ ಎಂಬುದು ನಿಮಗೆ ನಂತರದಲ್ಲಿ ತಿಳಿಯುತ್ತದೆ. ವಾಸ್ತವವಾಗಿ, ನಿಮ್ಮ ಕಾರನ್ನು ಕಳ್ಳತನ ಮಾಡಲಾಗಿರುತ್ತದೆ! 😱 😱
ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ವೆಹಿಕಲ್ನ ಕಳ್ಳತನದ ಸಂದರ್ಭದಲ್ಲಿ ನೀವು ಕವರ್ ಆಗುತ್ತೀರಿ. ಆದಾಗ್ಯೂ ನೀವು ತಕ್ಷಣ ಪೊಲೀಸರಿಗೆ ಹಾಗೂ ನಿಮ್ಮ ಇನ್ಶೂರೆನ್ಸ್ ಕಂಪನಿಗೆ ವಿಷಯ ತಿಳಿಸಬೇಕಾಗುತ್ತದೆ. ನಿಮ್ಮ ಕಾರನ್ನು ಒಟ್ಟು ನಷ್ಟವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ, ನಿಮ್ಮ ಕಾರಿನ ಐಡಿವಿ (ಘೋಷಿತ ಇನ್ಶೂರೆನ್ಸ್ ಮೌಲ್ಯ) ಅನ್ನು ಕ್ಲೈಮ್ ಮೊತ್ತವಾಗಿ ನೀವು ಸ್ವೀಕರಿಸುತ್ತೀರಿ.
ಆದರೆ ನಿಮ್ಮ ಕಾರಿನೊಳಗೆ ಇದ್ದ ನಿಮ್ಮ ವೈಯಕ್ತಿಕ ವಸ್ತುಗಳ ಗತಿಯೇನು? ದುರದೃಷ್ಟವಶಾತ್, ನೀವು ಬೇಸಿಕ್ ಕಾಂಪ್ರೆಹೆನ್ಸಿವ್ ಪಾಲಿಸಿಯನ್ನು ಹೊಂದಿದ್ದರೆ, ಅದು ನಿಮ್ಮ ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುವುದಿಲ್ಲ.
ಆದಾಗ್ಯೂ, ನೀವು ವೈಯಕ್ತಿಕ ವಸ್ತುಗಳ ನಷ್ಟದ ಆ್ಯಡ್-ಆನ್ ಕವರ್ ಅನ್ನು ಆಯ್ಕೆ ಮಾಡಬಹುದು. ಇದರೊಂದಿಗೆ, ಕಳ್ಳತನದ ಸಮಯದಲ್ಲಿ ನಿಮ್ಮ ಕಾರಿನಲ್ಲಿದ್ದ ಯಾವುದೇ ವೈಯಕ್ತಿಕ ವಸ್ತುಗಳ ನಷ್ಟಕ್ಕೆ ನಿಮ್ಮ ಇನ್ಶೂರೆನ್ಸ್ ಕಂಪನಿಯು ಪರಿಹಾರದೊಂದಿಗೆ ನಿಮಗೆ ಸಹಾಯ ಮಾಡುತ್ತಾರೆ.
ನಿಮ್ಮ ಕಾರಿನಿಂದ ನಿಮ್ಮ ವೈಯಕ್ತಿಕ ವಸ್ತುಗಳನ್ನು ಮಾತ್ರ ಕಳ್ಳತನ ಮಾಡಿದ್ದರೆ
ಈಗ ಈ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ: ನೀವು ನಿಮ್ಮ ಕಾರಲ್ಲಿ ಹೊರಗಡೆ ಹೋದಾಗ, ರಸ್ತೆಯ ಬದಿಯಲ್ಲಿ ನಿಲ್ಲಿಸಿ ಬಟ್ಟೆ ಮತ್ತು ಪಾದರಕ್ಷೆಗಳಂತಹ ನಿಮ್ಮ ವೈಯಕ್ತಿಕ ವಸ್ತುಗಳನ್ನು ಒಳಗೆ ಬಿಟ್ಟು ಕೆಲವು ತರಕಾರಿಗಳನ್ನು ಖರೀದಿಸಲು ಹೋಗುತ್ತೀರಿ. ಆದರೆ ನೀವು ಹಿಂತಿರುಗಿದಾಗ, ಓಹ್! ಕಾರಿಗೆ ನುಗ್ಗಿ ಯಾರೋ ನಿಮ್ಮ ವಸ್ತುಗಳನ್ನು ಕಳುವಾಗಿದೆ ಎಂದು ನೀವು ಅರ್ಥಮಾಡಿಕೊಳ್ಳುತ್ತಿರಿ! 😞 😞
ಈ ಸಂದರ್ಭದಲ್ಲಿ, ನೀವು ಬೇಸಿಕ್ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ಅಥವಾ ಓನ್ ಡ್ಯಾಮೇಜ್ ಪಾಲಿಸಿಯನ್ನು ಹೊಂದಿದ್ದರೆ, ಮುರಿದ ಬಾಗಿಲುಗಳು ಅಥವಾ ಒಡೆದ ಕಿಟಕಿಗಳಂತಹ ನಿಮ್ಮ ಕಾರಿನ ಯಾವುದೇ ಹಾನಿಗಳಿಗೆ, ರಿಪೇರಿ ಮತ್ತು ರಿಪ್ಲೇಸ್ಮೆಂಟ್ ವೆಚ್ಚವನ್ನು ಇದು ಕವರ್ ಮಾಡುತ್ತದೆ. ಆದರೆ, ಇದು ಕಳುವಾದ ವಸ್ತುಗಳನ್ನು ಕವರ್ ಮಾಡುವುದಿಲ್ಲ.
ಮತ್ತೊಮ್ಮೆ ಹೇಳುತ್ತಿದ್ದೇವೆ, ಇದಕ್ಕಾಗಿ ನೀವು ವೈಯಕ್ತಿಕ ವಸ್ತುಗಳ ನಷ್ಟದ ಆ್ಯಡ್-ಆನ್ ಕವರ್ ಅನ್ನು ಹೊಂದಿರಲೇಬೇಕು.