ನಗದುರಹಿತ ಕ್ಲೈಮ್ ಗಳು 100% ನಗದುರಹಿತವಾಗಿರುವುದಿಲ್ಲ ಎಂಬುವುದು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ. ಡಿಡಕ್ಟಿಬಲ್ಸ್(ಕಡಿತಗಳು) ಹಾಗೂ ಡಿಪ್ರಿಸಿಯೇಷನ್ ರೂಪದಲ್ಲಿ ನೀವು ಕ್ಲೈಮ್ ಮೊತ್ತದ ಸಣ್ಣ ಭಾಗವನ್ನು ಪಾವತಿಸಬೇಕಾಗುತ್ತದೆ, ಯಾಕೆಂದರೆ ಇವುಗಳನ್ನು ನಿಮ್ಮ ಇನ್ಶೂರರ್ ಕವರ್ ಮಾಡುವುದಿಲ್ಲ.
ಡಿಪ್ರಿಸಿಯೇಷನ್
ಡಿಪ್ರಿಸಿಯೇಷನ್ ಎಂದರೆ ಹಲವು ವರ್ಷಗಳ ಬಳಕೆಯಿಂದಾಗಿ ನಿಮ್ಮ ಕಾರು ಹಾಗೂ ಅದರ ಭಾಗಗಳಲ್ಲಿ ಉಂಟಾದ ಸವೆತದ ಕಾರಣ ನಿಮ್ಮ ಕಾರಿನ ಮೌಲ್ಯದ ಕುಸಿತ.
ವಾಸ್ತವದಲ್ಲಿ, ನಿಮ್ಮ ಹೊಚ್ಚಹೊಸ ಕಾರು ಶೋರೂಂ ನಿಂದ ಹೊರ ಬಂದ ಮರುಕ್ಷಣವೇ, ಅದರ ಮೌಲ್ಯದಲ್ಲಿ 5%! ಡಿಪ್ರಿಯೇಷನ್ ಆಗಿದೆ ಎನ್ನಲಾಗುತ್ತದೆ!
ನೀವು ಕ್ಲೈಮ್ ಫೈಲ್ ಮಾಡಿದಾಗ, ಇನ್ಶೂರರ್ ಸಾಮಾನ್ಯವಾಗಿ ಪಾವತಿ ಮಾಡುವ ಮುಂಚೆ ಡಿಪ್ರಿಸಿಯೇಷನ್ ದರವನ್ನು ಕಡಿತ ಮಾಡುತ್ತಾರೆ.
ಕಾರು ಇನ್ಶೂರೆನ್ಸ್ ನಲ್ಲಿ ಎರಡು ರೀತಿಯ ಡಿಪ್ರಿಸಿಯೇಷನ್ ಗಳಿವೆ -ಸಂಪೂರ್ಣ ಕಾರಿನ ಡಿಪ್ರಿಸಿಯೇಷನ್ ಹಾಗೂ ಕಾರಿನ ಬಿಡಿ ಭಾಗಗಳ ಮತ್ತು ಇತರ ವಿವಿಧ ಭಾಗಗಳ ಡಿಪ್ರಿಸಿಯೇಷನ್. ಡಿಪ್ರಿಸಿಯೇಷನ್ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಬೇಕು ಎನ್ನುವುದಕ್ಕೆ ಐ ಆರ್ ಡಿ ಎ ಐ ಕೆಲವು ನಿಯಮಗಳನ್ನು ಮುಂದಿಟ್ಟಿದೆ.
ಭಾಗಶಃ ಹಾನಿಯಾಗಿರುವ ಎಂದರೆ ಸಣ್ಣ ಪುಟ್ಟ ವಾಹನ ಹಾನಿಯಾದ ಸಂದರ್ಭದಲ್ಲಿ, ಕ್ಲೈಮ್ ಸಮಯದಲ್ಲಿ ಕಾರಿನ ಭಾಗಗಳ ಡಿಪ್ರಿಸಿಯೇಷನ್ ಅನ್ನು ಪರಿಗಣಿಸಲಾಗುವುದಿಲ್ಲ. ಈ ಕೆಳಗಡೆ ನೀಡಿದಂತೆ ಕಾರಿನ ಭಾಗಗಳ ಡಿಪ್ರಿಸಿಯೇಷನ್ ದರ ವಿಭಿನ್ನವಾಗಿರುತ್ತದೆ:
- ಹೆಚ್ಚು ಸವೆತವಿರುವ ಭಾಗಗಳು - ರಬ್ಬರ್ ಭಾಗಗಳು, ಪ್ಲಾಸ್ಟಿಕ್ ಭಾಗಗಳು, ಬ್ಯಾಟರಿ, ಟ್ಯೂಬ್ಸ್ ಮತ್ತು ಟಯರ್ ಗಳು, ಇತ್ಯಾದಿ - 50%
- ಫೈಬರ್ ಗ್ಲಾಸ್ ಭಾಗಗಳು - 30%
- ಮೆಟ್ಯಾಲಿಕ್ ಭಾಗಗಳು - 0% to 50%, ವಾಹನದ ವಯಸ್ಸನ್ನು ಅವಲಂಬಿಸಿದೆ.
ಸಂಪೂರ್ಣ ನಷ್ಟದ ಸಂದರ್ಭ ಎದುರಾದಲ್ಲಿ, ಉದಾಹರಣೆಗೆ ಕಳವು, ಆಗ ವಾಹನದ ಡಿಪ್ರಿಸಿಯೇಷನ್ ನ ಮಹತ್ವ ತಿಳಿಯುತ್ತದೆ. ಇದು ನಿಮ್ಮ ಕಾರಿನ ವಯಸ್ಸಿನ ಮೇಲೆ ಆಧರಿತವಾಗಿದೆ.
(ಡಿಡಕ್ಟಿಬಲ್ಸ್) ಕಡಿತಗಳು
ಡಿಡಕ್ಟಿಬಲ್ಸ್ ಎಂದರೆ ಇನ್ಶೂರರ್ ಉಳಿದ ಪಾವತಿ ಮಾಡುವ ಮುಂಚೆ ನೀವು ನಿಮ್ಮ ಜೇಬಿನಿಂದಲೇ ಪಾವತಿಸಬೇಕಾದ ಇನ್ಶೂರ್ಡ್ ವೆಚ್ಚದ ಒಂದು ಭಾಗವಾಗಿದೆ.
ಕಾರು ಇನ್ಶೂರೆನ್ಸ್ ನಲ್ಲಿ, ಹೆಚ್ಚಾಗಿ ಕ್ಲೈಮ್ ಆಧಾರದ ಪ್ರಕಾರ ಈ ಡಿಡಕ್ಟಿಬಲ್ ಗಳು ಅನ್ವಯಿಸುತ್ತವೆ. ಅಂದರೆ, ನೀವು ₹15,000 ವೆಚ್ಚದ ಹಾನಿಗೆ ಕ್ಲೈಮ್ ಫೈಲ್ ಮಾಡಿದರೆ ಹಾಗೂ ಡಿಡಕ್ಟಿಬಲ್ ಗಳು ₹1,000 ಆಗಿದ್ದರೆ - ಇನ್ಶೂರರ್ ನಿಮ್ಮ ಕಾರು ರಿಪೇರಿಗಾಗಿ ₹14,000 ಪಾವತಿಸುತ್ತಾರೆ.
ಡಿಡಕ್ಟಿಬಲ್ ಗಳು ಎರಡು ಪ್ರಕಾರದ್ದಾಗಿರುತ್ತವೆ -ಕಂಪಲ್ಸರಿ ಡಿಡಕ್ಟಿಬಲ್ಸ್ ಹಾಗೂ ವಾಲಂಟರಿ ಡಿಡಕ್ಟಿಬಲ್ಸ್.
ನೀವು ಕಾರು ಇನ್ಶೂರೆನ್ಸ್ ಪಾಲಿಸಿ ಕೊಳ್ಳುವಾಗಲೇ ಎಷ್ಟು ಪಾವತಿಸಲು ಬಯಸುತ್ತೀರಿ ಎಂದು ನಿರ್ಧರಿಸಬೇಕಾಗುತ್ತದೆ, ಹಾಗೂ ಇದನ್ನೇ ಪ್ರತೀ ಕ್ಲೈಮ್ ಗೆ ಅನ್ವಯಿಸಲಾಗುತ್ತದೆ.
ನಿಮ್ಮ ಇನ್ಶೂರರ್, ಒಟ್ಟು ವಾಲಂಟರಿ ಮತ್ತು ಕಡ್ಡಾಯ ಡಿಡಕ್ಟಿಬಲ್ ಕ್ಕಿಂತ ಹೆಚ್ಚಾಗಿರುವ ಕ್ಲೈಮ್ ನ ಒಂದು ಭಾಗವನ್ನಷ್ಟೇ ಪಾವತಿ ಮಾಡುತ್ತಾರೆ.
ಕಂಪಲ್ಸರಿ(ಕಡ್ಡಾಯ)ಡಿಡಕ್ಟಿಬಲ್ - ಈ ತರಹದ ಡಿಡಕ್ಟಿಬಲ್ ನಲ್ಲಿ, ಪಾಲಿಸಿದಾರನಿಗೆ ಮೋಟಾರ್ ಇನ್ಶೂರೆನ್ಸ್ ಕ್ಲೈಮ್ ನ ಒಂದು ಭಾಗವನ್ನು ಪಾವತಿಸಲೇಬೇಕಾಗುತ್ತದೆ.
ಐ ಆರ್ ಡಿ ಎ ಐ ನಿಭಂದನೆಗಳ ಪ್ರಕಾರ, ಕಾರು ಇನ್ಶೂರೆನ್ಸ್ ನ ಈ ಕಡ್ದಾಯ ಡಿಡಕ್ಟಿಬಲ್ ನ ಫಿಕ್ಸ್ಡ್ ಮೊತ್ತವನ್ನು ಕಾರು ಎಂಜಿನ್ ನ ಕ್ಯೂಬಿಕ್ ಸಾಮರ್ಥ್ಯದ ಮೇಲೆ ಆಧರಿಸಲಾಗುತ್ತದೆ. ಪ್ರಸ್ತುತವಾಗಿ, ಇದನ್ನು ಹೀಗೆ ಸೆಟ್ ಮಾಡಲಾಗಿದೆ :
- 1,500 ಸಿಸಿ ವರೆಗೆ - ರೂ.1,000
- 1,500 ಸಿಸಿ ಕ್ಕಿಂತ ಹೆಚ್ಚು - ರೂ.2,000
ವಾಲಂಟರಿ(ಸ್ವ ಇಚ್ಛೆಯ) ಡಿಡಕ್ಟಿಬಲ್ - ವಾಲಂಟರಿ ಡಿಡಕ್ಟಿಬಲ್ ಎಂದರೆ ಸಾಮನ್ಯವಾಗಿ ಇನ್ಶೂರರ್ ಪಾವತಿ ಮಾಡಬಹುದಾದ ಮೊತ್ತವನ್ನು, ನೀವೇ ನಿಮ್ಮ ಜೇಬಿನಿಂದ ಪಾವತಿಸುವ ಆಯ್ಕೆ ಮಾಡುತ್ತೀರಿ.
ನೀವು ನಿಮ್ಮ ಇನ್ಶೂರೆನ್ಸ್ ಕವರ್ ನಲ್ಲಿ ವಾಲಂಟರಿ ಡಿಡಕ್ಟಿಬಲ್ ನ ಆಯ್ಕೆ ಮಾಡಿದರೆ, ಇದು ನಿಮ್ಮ ಕಾರು ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆಗೊಳುಸುತ್ತದೆ, ಯಾಕೆಂದರೆ ಇದರಿಂದ ಇನ್ಶೂರರ್ ಗೆ ಅಪಾಯ ಕಡಿಮೆ ಇರುತ್ತದೆ.
ಆದರೆ, ಇದರರ್ಥ ಏನಾಗುತ್ತದೆಂದರೆ ನಿಮ್ಮ ಕಾರಿಗೆ ಯಾವುದೇ ಹಾನಿಯಾದ ಸಂದರ್ಭದಲ್ಲಿ ಹೆಚ್ಚು ಹಣವನ್ನು ನೀವೇ ಪಾವತಿಸಬೇಕಾಗುತ್ತದೆ( ಇದು ನಿಮ್ಮ ಇತರ ಖರ್ಚುಗಳ ಮೇಲೆ ಪರಿಣಾಮ ಬೀರಬಹುದು) ಆದ್ದರಿಂದ ಇದನ್ನು ಪರಿಗಣಿಸಲು ಮರೆಯದಿರಿ.