1. ನಿಮಗೆ ಸಕಾರಾತ್ಮಕ ರಿವಾರ್ಡ್ಸ್ ನೀಡುತ್ತದೆ(Gives you positive rewards) : ಎನ್ ಸಿ ಬಿ ಎಂದರೆ ಬೇರೇನೂ ಅಲ್ಲ, ನೀವು ಒಳ್ಳೆಯ ಮತ್ತು ಜವಾಬ್ದಾರಿಯುತ ಚಾಲಕ ಹಾಗೂ ಕಾರು ಮಾಲಕನಾಗಿದ್ದಕ್ಕೆ ನಿಮಗೆ ಸಿಗುವ ರಿವಾರ್ಡ್ ಆಗಿದೆ.
2. ನಿಮ್ಮೊಂದಿಗೆ ಸಂಪರ್ಕ ನಿಮ್ಮ ಕಾರಿನೊಂದಿಗೆ ಅಲ್ಲ(Connected to you and not your car) : ಎನ್ ಸಿ ಬಿ ಯ ಸಂಪರ್ಕ ವೈಯಕ್ತಿಕವಾಗಿ ನಿಮ್ಮೊಂದಿಗೆ ಇದೆ, ನಿಮ್ಮ ಗಾಡಿಯೊಂದಿಗೆ ಅಲ್ಲ. ಅಂದರೆ, ನಿಮ್ಮ ಬಳಿ ಯವುದೇ ಕಾರ್ ಇರಲಿ, ನೀವು ಪ್ರತೀ ವರ್ಷ ಅವಧಿಗೆ ಮುನ್ನ ನಿಮ್ಮ ಕಾರ್ ಪಾಲಿಸಿಗಳನ್ನು ರಿನ್ಯೂ ಮಾಡುತ್ತಿದ್ದರೆ, ನೀವು ನಿಮ್ಮ ಕಾರ್ ಇನ್ಶೂರೆನ್ಸ್ ನ ನೋ ಕ್ಲೈಮ್ ಬೋನಸ್ ಇಂದ ಲಾಭಗಳನ್ನು ಪಡೆಯುತ್ತಾ ಇರುತ್ತೀರಿ.
3. ಕಾರ್ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ಉಳಿತಾಯ ಮಾಡಿರಿ(Save on car insurance premium) : ಎಲ್ಲರೂ ಇಷ್ಟಪಡುವ ಲಾಭ!ರಿಯಾಯಿತಿಗಳು! ನೋ ಕ್ಲೈಮ್ ಬೋನಸ್ ನಿಂದ ವಾರ್ಷಿಕವಾಗಿ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ಕನಿಷ್ಟ 20% ಉಳಿತಾಯವನ್ನು ಮಾಡುತ್ತೀರಿ.
4. ಸುಲಭ ವರ್ಗಾವಣೆ(Easily Transferable) : ನೀವು ನಿಮ್ಮ ಇನ್ಶೂರರ್ ಅಥವಾ ಕಾರನ್ನು ಬದಲಿಸುತ್ತಿರುವ ಸಂದರ್ಭದಲ್ಲಿ, ನಿಮ್ಮ ಎನ್ ಸಿ ಬಿ ಯ ವರ್ಗಾವಣೆಯ ಕ್ರಿಯೆ ಸರಳ ಮತ್ತು ಸಮಸ್ಯೆ ರಹಿತವಾಗಿದೆ. ನೀವು ಖಚಿತ ಮಾಡಬೇಕಾದದ್ದು ಇಷ್ಟೇ, ನಿಮ್ಮ ಪ್ರಸ್ತುತ ಪಾಲಿಸಿಯನ್ನು ಅದರ ಅವಧಿ ಪೂರ್ಣವಾಗುವ ಮೊದಲೇ ವರ್ಗಾಯಿಸುವುದು.