ಐಡಿವಿ(IDV) ಕ್ಯಾಲ್ಕುಲೇಟರ್

ಕಾರ್ ಇನ್ಶೂರೆನ್ಸ್ ಪಡೆಯಿರಿ ಹೆಚ್ಚಿನ ಐಡಿವಿ (IDV)ಮೌಲ್ಯದೊಂದಿಗೆ
Happy Couple Standing Beside Car

I agree to the  Terms & Conditions

Don’t have Reg num?
It's a brand new Car

ಕಾರ್ ಇನ್ಶೂರೆನ್ಸ್ ಅಲ್ಲಿ ಐಡಿವಿ (IDV)ಬಗ್ಗೆ ಎಲ್ಲಾ ಮಾಹಿತಿ

ಐಡಿವಿ (IDV)ಕ್ಯಾಲ್ಕುಲೇಟರ್ - ನಿಮ್ಮ ಕಾರಿನ ಐಡಿವಿ (IDV)ಅನ್ನು ಕ್ಯಾಲ್ಕುಲೇಟ್ ಮಾಡಿ

ಐಡಿವಿ (IDV)ಕ್ಯಾಲ್ಕುಲೇಟರ್ ಇನ್ಶೂರೆನ್ಸ್ ಕ್ಯಾಲ್ಕುಲೇಟ್ ಮಾಡುವ ಪ್ರಮುಖ ಸಾಧನಗಳಲ್ಲೊಂದು ಯಾಕೆಂದರೆ ಇದು ನಿಮಗೆ ನಿಮ್ಮ ಕಾರಿನ ಮಾರುಕಟ್ಟೆ ಬೆಲೆ ನಿರ್ಧರಿಸಲು ಸಹಾಯ ಮಾಡುವುದಲ್ಲದೆ ನೀವು ನಿಮ್ಮ ಕಾರ್ ಇನ್ಶೂರೆನ್ಸ್ ಮೇಲೆ ಎಷ್ಟು ಪ್ರೀಮಿಯಮ್ ಕಟ್ಟಬೇಕೆಂದು ನಿರ್ಧರಿಸಲೂ ಸಹಾಯ ಮಾಡುತ್ತದೆ.

ಇದು ಮುಂದಕ್ಕೆ ನಮಗೆ, (ಇನ್ಶೂರರಿಗೆ) ಕ್ಲೈಮ್ಸ್ ಇತ್ಯರ್ಥದ ಸಂದರ್ಭದಲ್ಲಿ,  ಹಾಗಾಗದೇ ಇರಲಿ, ಆದರೆ ನಿಮ್ಮ ಕಾರ್ ಕಳುವಾದಲ್ಲಿ ಅಥವಾ ದುರಸ್ತಿಗೆ ಮೀರುವಷ್ಟು ಹಾನಿಯಾದಲ್ಲಿ ನಿಮಗೆ ಪಾವತಿಸಬೇಕಾದ, ಸೂಕ್ತ ಮೊತ್ತವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ನಿಮ್ಮ ಕಾರಿನ ಬೆಲೆ ಡೆಪ್ರಿಸಿಯೇಷನ್ ಬಗ್ಗೆ ಹೆಚ್ಚು ತಿಳಿಯಿರಿ

ಕಾರಿನ ವಯಸ್ಸು

ಡೆಪ್ರಿಸಿಯೇಷನ್ %

6 ತಿಂಗಳು ಅಥವಾ ಕಡಿಮೆ

5%

6 ತಿಂಗಳಿಂದ 1 ವರ್ಷ

15%

1 ವರ್ಷದಿಂದ 2 ವರ್ಷದವರೆಗೆ

20%

2ವರ್ಷದಿಂದ 3 ವರ್ಷದವರೆಗೆ

30%

3 ವರ್ಷದಿಂದ 4 ವರ್ಷದ ವರೆಗೆ

40%

4 ವರ್ಷದಿಂದ 5 ವರ್ಷದ ವರೆಗೆ

50%

ಉದಾಹರಣೆ : ನಿಮ್ಮ ಕಾರಿನ ವಯಸ್ಸು 6 ತಿಂಗಳು ಅಥವಾ ಕಡಿಮೆ ಆಗಿದ್ದರೆ ಮತ್ತು ಅದರ ಎಕ್ಸ್ - ಶೋರೂಮ್ ಬೆಲೆ ರೂ. 100 ಆಗಿದ್ದರೆ, ಅದರ ಇಳಿತಾಯ ದರ ಕೇವಲ 5% ಆಗಿರುತ್ತದೆ.

ಇದರರ್ಥ ಕಾರಿನ ಖರೀದಿಯ ನಂತರ, ನಿಮ್ಮ ಐಡಿವಿ (IDV)ರೂ.95 ಗೆ ಇಳಿಯುತ್ತದೆ - 6 ತಿಂಗಳಿಂದ 1 ವರ್ಷ ಹಳೆಯ ಕಾರಿಗೆ ರೂ.85, 1 ವರ್ಷದಿಂದ 2 ವರ್ಷ ಹಳೆಯ ಕಾರಿಗೆ ರೂ. 80, 2 ವರ್ಷದಿಂದ 3 ವರ್ಷ ಹಳೆಯ ಕಾರಿಗೆ ರೂ. 70 ಮತ್ತು ಹೀಗೇ ಅದರ  5 ನೇ ವರ್ಷದಲ್ಲಿ ಅದು 50% ಇಳಿತಾಯ ಕಂಡ ನಂತರದ ವರೆಗೆ.

ನಿಮ್ಮ ಕಾರು 5 ವರ್ಷಕ್ಕಿಂತ ಹೆಚ್ಚು ಹಳೆಯದಾಗಿದ್ದರೆ, ಐಡಿವಿ (IDV)ಕಾರಿನ ಸ್ಥಿತಿಯ ಮೇಲೆ ಅವಲಂಬಿಸುತ್ತದೆ - ಉತ್ಪಾದಕರು, ಮಾಡೆಲ್ ಮತ್ತು ಅದರ ಬಿಡಿ ಭಾಗಗಳ ಲಭ್ಯತೆ. 

ಮರು ಮಾರಾಟದ ಸಮಯದಲ್ಲಿ, ನಿಮ್ಮ ಐಡಿವಿ (IDV)ನಿಮ್ಮ ಕಾರಿನ ಮಾರುಕಟ್ಟೆ ಬೆಲೆಯ ಸೂಚಕವಾಗುತ್ತದೆ. ಆದರೆ, ನೀವು ನಿಮ್ಮ ಕಾರನ್ನು ತುಂಬಾ ಚೆನ್ನಾಗಿ ಕಾಪಾಡಿ, ಅದು ಹೊಸದರ ಹಾಗೇ ಹೊಳೆಯುತ್ತಿದರೆ, ನೀವು ಯಾವಾಗಲೂ ನಿಮ್ಮ ಐಡಿವಿ (IDV)ನಿಮಗೆ ನೀಡುವುದಕ್ಕಿಂತ ಹೆಚ್ಚಿನ ಮೌಲ್ಯವನ್ನು ನೀವು ಪಡೆಯಬಹುದು .

ಕೊನೆಯಲ್ಲಿ, ನೀವು ನಿಮ್ಮ ಕಾರಿನ ಮೇಲೆ ಎಷ್ಟು ಪ್ರೀತಿ ತೋರಿದ್ದೀರಿ ಅದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ.

ನಿಮ್ಮ ಕಾರಿನ ಐಡಿವಿ (IDV)ಅನ್ನು ನಿರ್ಧರಿಸುವ ಅಂಶಗಳೇನು?

    • ಕಾರಿನ ವಯಸ್ಸು : ಐಡಿವಿ (IDV)ನಿಮ್ಮ ಕಾರಿನ ಮಾರುಕಟ್ಟೆ ಬೆಲೆಯನ್ನು ಸೂಚಿಸುವ ಕಾರಣ, ಸೂಕ್ತ ಐಡಿವಿ (IDV)ಅನ್ನು ನಿರ್ಧರಿಸಲು ನಿಮ್ಮ ಕಾರಿನ ವಯಸ್ಸು ಬಹಳ ಅಗತ್ಯವಾಗಿದೆ. ನಿಮ್ಮ ಕಾರು ಎಷ್ಟು ಹಳೆಯದೋ ಅದರ ಐಡಿವಿ (IDV)ಅಷ್ಟೇ ಕಡಿಮೆ ಇರುತ್ತದೆ ಮತ್ತು ವೈಸ್ ವರ್ಸಾ.

    • ವಾಹನದ ತಯಾರಿಕೆ ಮೇಕ್ ಮತ್ತು ಮಾಡೆಲ್ : ನಿಮ್ಮ ಕಾರಿನ ತಯಾರಿಕೆ ಮತ್ತು ಮಾಡೆಲ್ ನಿಮ್ಮ ಐಡಿವಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಉದಾಹರಣೆಗೆ : ಒಂದು ಲ್ಯಾಂಬಾರ್ಘಿನಿ ವೆನೆನ್ ನ ಐಡಿವಿ (IDV)ಆಶ್ಟನ್ ಮಾರ್ಟಿನ್ ನ ಐಡಿವಿಗಿಂತ ಹೆಚ್ಚಿರುತ್ತದೆ, ಅದರ ಮೇಕ್ ಮತ್ತು ಮಾಡೆಲ್ ನಲ್ಲಿರುವ ವ್ಯತ್ಯಾಸದ ಕಾರಣ.
    • ನಗರ ನೋಂದಣಿ ವಿವರಗಳು : ನಿಮ್ಮ ಕಾರಿನ ನೋಂದಣಿ ವಿವರಗಳು ನಿಮ್ಮ ಕಾರ್ ನೋಂದಣಿ ಸರ್ಟಿಫಿಕೇಟಿನಲ್ಲಿ ಲಭ್ಯವಿದೆ. ಹಾಗೂ, ನಿಮ್ಮ ಕಾರಿನ ನೊಂದಣಿ ಯಾವ ನಗರದಲ್ಲಿಯಾಗಿದೆ ಅನ್ನುವುದೂ ನಿಮ್ಮ ಐಡಿವಿ (IDV)ಮೇಲೆ ಪರಿಣಾಮ ಬೀರುತ್ತದೆ. ಒಂದು ಮೆಟ್ರೋ ನಗರದಲ್ಲಿ ನಿಮ್ಮ ಕಾರಿನ ಐಡಿವಿ (IDV)ಒಂದು ಟಿಯರ್ - II ನಗರದಲ್ಲಿ ಇದ್ದದ್ದಕ್ಕಿಂತ ಕಡಿಮೆ ಇರಬಹುದು.

    • ಪ್ರಮಾಣಿತ ಇಳಿತಾಯ ( ಇಂಡಿಯನ್ ಮೋಟಾರ್ ಟ್ಯಾರಿಫ್ ನ ಪ್ರಾಕರ) : ನಿಮ್ಮ ಕಾರಿನ ಮೌಲ್ಯ ನೀವು ಅದನ್ನು ಶೋರೂಮಿನಿಂದ ಹೊರಗೆ ಡ್ರೈವ್ ಮಾಡಿದ ತಕ್ಷಣ ಇಳಿತಾಯವಾಗುತ್ತದೆ - ಮತ್ತು ಈ ಇಳಿತಾಯದ ಪ್ರತಿಶತ ಪ್ರತೀ ವರ್ಷ ಹೆಚ್ಚಾಗುತ್ತದೆ. ಇದು ಕೂಡಾ ಕೊನೆಯಲ್ಲಿ ನಿಮ್ಮ ಐಡಿವಿಗೆ ಪರಿಣಾಮ ಬೀರುತ್ತದೆ. ಈ ಟೇಬಲ್ ನಿಮ್ಮ ಕಾರಿನ ವಯಸ್ಸಿಗೆ ಅನುಗುಣವಾಗಿ ಇಳಿತಾಯದ ದರಗಳನ್ನು ತಿಳಿಸುತ್ತದೆ.

ಐಡಿವಿ (IDV)ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಐದು ವರ್ಷದವರಿಗೆ ತಿಳಿಸಿದ ಹಾಗೇ ತಿಳಿಸಿ

ನಾವು ಇನ್ಶೂರೆನ್ಸ್ ಅನ್ನು ಎಷ್ಟು ಸರಳ ಗೊಳಿಸುತ್ತೇವೆ ಎಂದರೆ ಐದು ವರ್ಷದವರೂ ಇದನ್ನು ಅರ್ಥ ಮಾಡಿಕೊಳ್ಳಬಹುದು.

ನಿಮ್ಮ ಬಳಿ ಒಂದು ಬೆಲೆಬಾಳುವ ವಾಚ್ ಇದೆ. ಒಂದು ದಿನ,ನೀವು ಅದನ್ನು ಮಾರಾಟ ಮಾಡಿದರೆ ಎಷ್ಟು ಸಿಗಬಹುದು ಎಂದು ಪರಿಶೀಲಿಸಲು ನಿರ್ಧರಿಸುತ್ತೀರಿ. ನೀವು ಅದನ್ನು ಕೈ ಗಡಿಯಾರದವನ ಬಳಿತೆಗೆದುಕೊಂಡುಹೋಗುತ್ತೀರಿ. ಅವನು ನಿಮ್ಮ ವಾಚನ್ನು ನೋಡಿ, ನಿಮಗೆ ಇದುಗ್ಲಾಸ್, ಮೆಟ್ಟಲ್, ಲೆದರ್ ಮತ್ತು ಸ್ಕ್ರೂ ಗಳಿಂದ ಮಾಡಲಾಗಿದೆ ಎಂದು ವಿವರಿಸುತ್ತಾನೆ.ಆದ್ದರಿಂದ, ಮೊದಲಿಗೆ ಅವನು ಆ ವಸ್ತುಗಳ ಬೆಲೆಯನ್ನು ಕೂಡಿಸುತ್ತಾನೆ. ನಂತರಈ ವಾಚ್ ಎಷ್ಟು ಹಳೆಯದು ಎಂದು ಕೇಳುತ್ತಾನೆ, ನೀವು ಐದು ವರ್ಷ ಎನ್ನುತ್ತೀರಿ. ಅವನು ಅದನ್ನು ಬರೆಯುತ್ತಾನೆ. ಇದಲ್ಲವನ್ನು ಆಧರಿಸಿ ಅವನು ನಿಮಗೆ, ನೀವು ವಾಚನ್ನು ಮಾರಾಟ ಮಾಡಿದರೆ ನಿಮಗೆ ರೂ. 500 ಸಿಗಬಹುದು ಎನ್ನುತ್ತಾನೆ.ಈ ಸಂದರ್ಭದಲ್ಲಿ ಇದು ನಿಮ್ಮ ಐಡಿವಿ (IDV)ಆಗಿದೆ!

ಕಾರ್ ಇನ್ಶೂರೆನ್ಸ್ ನಲ್ಲಿ ಐಡಿವಿಯ ಬಗ್ಗೆ ಹೆಚ್ಚು ಕೇಳಿರುವ ಪ್ರಶ್ನೆಗಳು