Third-party premium has changed from 1st June. Renew now
I agree to the Terms & Conditions
Third-party premium has changed from 1st June. Renew now
I agree to the Terms & Conditions
ನೀವು ಪಡೆದುಕೊಂಡಿರುವ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನಿಗದಿತ ಪ್ರೀಮಿಯಂ ಕಟ್ಟಿ ಸುಸ್ತಾಗಿದ್ದೀರಾ? ನಿಮ್ಮ ಉತ್ತರ ಹೌದು ಎಂದಾದರೆ ನಿಮಗೊಂದು ಸಿಹಿ ಸುದ್ದಿ ಇದೆ. ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ ಡಿಎ ಐ) ಸಾಮಾನ್ಯ ಇನ್ಶೂರೆನ್ಸ್ ಪೂರೈಕೆದಾರರಿಗೆ ಓನ್ ಡ್ಯಾಮೇಜ್ ಮೋಟಾರ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಟೆಕ್ನಾಲಜಿ ಆಧರಿತ ಆ್ಯಡ್-ಆನ್ ಕವರ್ ಗಳನ್ನು ಪರಿಚಯಿಸಲು ಅನುಮತಿ ನೀಡಿದೆ.
ಐಆರ್ಡಿಎಐ (IRDAI) ಘೋಷಣೆ ಪ್ರಕಾರ ಸಾಮಾನ್ಯ ಇನ್ಶೂರೆನ್ಸ್ ಪೂರೈಕೆದಾರರು ಮೋಟಾರ್ ಓನ್ ಡ್ಯಾಮೇಜ್ ಕವರ್ ಗಳಿಗೆ ಟೆಕ್ನಲಾಜಿ ಆಧರಿತ ಪರಿಕಲ್ಪನೆಗಳಾದ- 'ಪೇ ಆ್ಯಸ್ ಯು ಡ್ರೈವ್' ಆ್ಯಡ್ ಆನ್ ಕವರ್ ಅನ್ನು ಪರಿಚಯಿಸಬಹುದು.
'ಪೇ ಆ್ಯಸ್ ಯು ಡ್ರೈವ್' ಆ್ಯಡ್-ಆನ್ ಕವರ್ ಸೌಲಭ್ಯವು ಪಾಲಿಸಿದಾರರಿಗೆ ಮೂಲ ಪಾಲಿಸಿ ಪ್ರಕಾರ ಪಾವತಿಸಬೇಕಾದ ಓನ್ ಡ್ಯಾಮೇಜ್ ಕವರ್ ಪ್ರೀಮಿಯಂನಲ್ಲಿ ಡಿಸ್ಕೌಂಟ್ ಪಡೆಯುವ ಅರ್ಹತೆ ಒದಗಿಸುತ್ತದೆ. ಈ ಆ್ಯಡ್-ಆನ್ ಕವರ್ ಆಯ್ಕೆ ಮಾಡಿಕೊಳ್ಳುವ ಮೂಲಕ ನೀವು ಆಯ್ಕೆ ಮಾಡಿದ ಯೋಜನೆಯ ಪ್ರಕಾರ ನಿರ್ದಿಷ್ಟ ಸಂಖ್ಯೆಯ ಕಿಲೋ ಮೀಟರ್ ಗಳ ದೂರವನ್ನು ನಿಮ್ಮ ವಾಹನ ಕ್ರಮಿಸುತ್ತದೆ ಎಂಬುದನ್ನು ನೀವು ಘೋಷಿಸಿ ದೃಢೀಕರಿಸುತ್ತೀರಿ.
ಪಾಲಿಸಿ ಹೋಲ್ಡರ್ ಆತ/ಆಕೆ ಎಷ್ಟು ಕಿಮೀ ದೂರ ವಾಹನ ಚಲಾಯಿಸಿದ್ದಾರೆ ಎಂಬ ಆಧಾರದ ಮೇಲೆ ಇನ್ಶೂರೆನ್ಸ್ ಪಾಲಿಸಿಯಲ್ಲಿ ಪಾವತಿಸಬೇಕಾದ ಪ್ರೀಮಿಯಂ ನಿರ್ಧಾರವಾಗುತ್ತದೆ.
ತನ್ನ ಗ್ರಾಹಕರಿಗೆ ಆ್ಯಡ್-ಆನ್ ಕವರ್ ಒದಗಿಸುವ ಭಾರತದ ಮೊತ್ತ ಮೊದಲ ವಿಮಾ ಪೂರೈಕೆದಾರ ಎಂಬ ಕೀರ್ತಿಗೆ ಡಿಜಿಟ್ ಇನ್ಶೂರೆನ್ಸ್ ಪಾತ್ರವಾಗಿದೆ. ಪ್ರತೀವರ್ಷ ಸರಾಸರಿ 15,000 ಕಿಮೀಗಿಂತ ಕಡಿಮೆ ವಾಹನ ಚಲಾಯಿಸುವವರು ಈ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ. ನಾವು 25 ಶೇಕಡಾವರೆಗೂ ಡಿಸ್ಕೌಂಟ್ ನೀಡುತ್ತೇವೆ; ಆದರೆ ಇದು ನೀವು ಆರಿಸಿಕೊಂಡಿರುವ ವಾರ್ಷಿಕ ಕಿಲೋ ಮೀಟರ್ ಸ್ಲ್ಯಾಬ್ ಮತ್ತು ಓಡೋಮೀಟರ್ ಮಾಪನವನ್ನು ಅವಲಂಬಿಸಿರುತ್ತದೆ.
'ಪೇ ಆ್ಯಸ್ ಯು ಡ್ರೈವ್' ಕಾರ್ಯನಿರ್ವಹಣೆಯು ಸಾಮಾನ್ಯ ಕಾರ್ ಇನ್ಶೂರೆನ್ಸ್ ಪಾಲಿಸಿಗಳಿಗಿಂತ ಸ್ವಲ್ಪ ಭಿನ್ನವಾಗಿ ಇರುತ್ತದೆ, ಆದರೆ ಒದಗಿಸುವ ಕವರೇಜ್ ಗಳಲ್ಲಿ ಮಾತ್ರ ಯಾವುದೇ ವ್ಯತ್ಯಾಸ ಇರುವುದಿಲ್ಲ. ಮೂಲ ಪಾಲಿಸಿಯ ಓನ್ ಡ್ಯಾಮೇಜ್- ಸೆಕ್ಷನ್ Iರ ವ್ಯಾಲಿಡಿಟಿಯ ಆಧಾರದಲ್ಲಿ ಮೂಲ ವ್ಯತ್ಯಾಸ ಇರುತ್ತದೆ. ಸೆಕ್ಷನ್ Iರ ಪ್ರಕಾರ ಕವರೇಜ್- ಪಾಲಿಸಿ ಹೋಲ್ಡರ್ ಆರಿಸಿಕೊಂಡ ಯೋಜನೆಯಲ್ಲಿ ನಮೂದಿಸಿದ ಕಿಲೋ ಮೀಟರ್ ವರೆಗೆ ತಲುಪಿದರೆ (ಅದೇನೆಂದರೆ ಪಾಲಿಸಿಯ ಆರಂಭದಲ್ಲಿ ಇದ್ದ ಕಿಲೋ ಮೀಟರ್ ಗಳ ಸಂಖ್ಯೆ + ಪಾಲಿಸಿದಾರರು ಪಾಲಿಸಿ ಅವಧಿಯಲ್ಲಿ ಡ್ರೈವ್ ಮಾಡುತ್ತೇವೆ ಎಂದು ಒಪ್ಪಿಕೊಂಡ ಕಿಮೀಗಳ ಸಂಖ್ಯೆ) ಅಥವಾ ಆರಂಭದಲ್ಲಿ ಮೂಲ ಪಾಲಿಸಿಯ ಪಾಲಿಸಿ ಶೆಡ್ಯೂಲ್ ನಲ್ಲಿ ನಮೂದಿಸಿರುವ ಪಾಲಿಸಿ ಅವಧಿಯ ಅಂತ್ಯ ದಿನಾಂಕ ಮುಕ್ತಾಯಗೊಂಡರೆ, ಯಾವುದು ಮೊದಲು ಸಾಧ್ಯವಾಗುವುದೋ ಅದರ ಆಧಾರದಲ್ಲಿ ಮೂಲ ಪಾಲಿಸಿಯ ಓನ್ ಡ್ಯಾಮೇಜ್ ಸೆಕ್ಷನ್ ನ ಗರಿಷ್ಠ ಕವರೇಜ್ ಲಭ್ಯವಾಗುತ್ತದೆ.
ಈ ವಿಚಾರ ಕುರಿತು ಗಮನ ಹರಿಸೋಣ -
ಕಾರು ಯೂಸೇಜ್ ಘೋಷಣೆ – ಇನ್ಶೂರೆನ್ಸ್ ಪೂರೈಕೆದಾರರು ಒದಗಿಸಿದ ಯೂಸೇಜ್ ಸ್ಲ್ಯಾಬ್ ನ ಆಧಾರದಲ್ಲಿ ಪಾಲಿಸಿ ಅವಧಿಯಲ್ಲಿನ ಕಾರಿನ ಬಳಕೆಯನ್ನು (ಕಿಲೋ ಮೀಟರ್ ಪ್ರಕಾರ) ಪಾಲಿಸಿ ಹೋಲ್ಡರ್ ಮೊದಲೇ ಘೋಷಿಸುವ ಅಗತ್ಯವಿದೆ.
ವಿಧಿಸಲಾಗಿರುವ ಪ್ರೀಮಿಯಂ – ಪಾಲಿಸಿ ಅವಧಿಯಲ್ಲಿ ಕಾರು ಎಷ್ಟು ಕಿಲೋ ಮೀಟರ್ ದೂರವನ್ನು ಕ್ರಮಿಸಿದೆ ಎಂಬ ಆಧಾರದಲ್ಲಿ ಮೂಲ ಪಾಲಿಸಿಯಲ್ಲಿರುವ ಓನ್ ಡ್ಯಾಮೇಜ್ ಪ್ರೀಮಿಯಂನಲ್ಲಿ ಸೂಕ್ತವಾದ ಡಿಸ್ಕೌಂಟ್ ಯನ್ನು ನೀಡಲಾಗುತ್ತದೆ.
ಸೆಕ್ಷನ್ Iರ ಪ್ರಕಾರ ಕವರೇಜ್ - ಪಾಲಿಸಿ ಹೋಲ್ಡರ್ ಆರಿಸಿಕೊಂಡಿರುವ ಯೋಜನೆ ಪ್ರಕಾರ ನಮೂದಿಸಲಾದ ಕಿಲೋ ಮೀಟರ್ ದೂರವನ್ನು ಕ್ರಮಿಸಿದರೆ ಮೂಲ ಪಾಲಿಸಿಯ ಓನ್ ಡ್ಯಾಮೇಜ್ ಸೆಕ್ಷನ್ ಗರಿಷ್ಠ ಹಂತ ಪಡೆಯಬಹುದು
ಈ ಕೆಳಗೆ ನಮೂದಿಸಿದವುಗಳು ಪೇ ಆ್ಯಸ್ ಯು ಡ್ರೈವ್ (ಪಿಎವೈಡಿ) ಆ್ಯಡ್-ಆನ್ ಕವರ್ ನ ವೈಶಿಷ್ಟ್ಯಗಳು:
ಪಾಲಿಸಿಯ ಅವಧಿ ಒಂದು ವರ್ಷ.
ಕ್ರಮಸಿದ ಕಿಮೀಗಳ ಯೂಸೇಜ್ ಸ್ಲ್ಯಾಬ್ ಆಧಾರದಲ್ಲಿ ಪಾಲಿಸಿಯ ಓನ್ ಡ್ಯಾಮೇಜ್ ಪ್ರೀಮಿಯಂ ನಿರ್ಧರಿಸಲಾಗುತ್ತದೆ.
ಪಾಲಿಸಿ ಹೋಲ್ಡರ್ ಅವರ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಶೇ.25ರಷ್ಟು ಡಿಸ್ಕೌಂಟ್ ಪಡೆಯಲು ಅರ್ಹರಾಗಿರುತ್ತಾರೆ.
ಪಾಲಿಸಿ ಹೋಲ್ಡರ್ ಆ್ಯಡ್-ಆನ್ ಕವರ್ ಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಕಾರ್ ಇನ್ಶೂರೆನ್ಸ್ ಕವರ್ ಅನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು.
ಟೆಕ್ನಲಾಜಿ ಆಧರಿತ ಆ್ಯಡ್-ಆನ್ ಕವರ್ ಗಳನ್ನು ಕಾರ್ಯಗತಗೊಳಿಸಿದಾಗಿನಿಂದ ಪರ್ಸನಲೈಸ್ಡ್ ಬೆಲೆಗಳುಳ್ಳ ಮೋಟಾರ್ ಇನ್ಶೂರೆನ್ಸ್ ಪಾಲಿಸಿಗಳು ದೊರೆಯುತ್ತಿವೆ, ಯಾಕೆಂದರೆ ಪಾಲಿಸಿಗೂ ವಿಮಾದಾರರ ಡ್ರೈವಿಂಗ್ ಅಂತರ, ಮೈಲೇಜ್, ಡ್ರೈವಿಂಗ್ ಶೈಲಿ , ಸುರಕ್ಷಿತ/ ಅಸುರಕ್ಷಿತ ಡ್ರೈವಿಂಗ್ ಇತ್ಯಾದಿ ಅಂಶಗಳಿಗೆ ಹತ್ತಿರದ ಸಂಬಂಧವಿದೆ. ಪಾಲಿಸಿ ಹೋಲ್ಡರ್ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಭಾರಿ ಅನ್ನಿಸುವ ಪ್ರೀಮಿಯಂ ಪಾವತಿ ಮಾಡಲು ಸಿಗದ ಹಾಗೆ 'ಪೇ ಆ್ಯಸ್ ಯು ಡ್ರೈವ್' ಮಾದರಿ ನೋಡಿಕೊಳ್ಳುತ್ತದೆ.
ಸೆಕ್ಷನ್ Iರ ಪ್ರಕಾರ ಒಂದು ವೇಳೆ ಪಾಲಿಸಿ ಹೋಲ್ಡರ್ ಮೂಲ ಪಾಲಿಸಿಯಲ್ಲಿ ನಮೂದಿಸಿದ ಕಿಲೋ ಮಿತಿಯನ್ನು ಮೀರಿದರೆ ಟಾಪ್ ಅಪ್ ಕಿಲೋ ಮೀಟರ್ ಗಳನ್ನು ಸೇರಿಸಿಕೊಳ್ಳುವ ಮೂಲಕ ಕವರೇಜ್ ಮಿತಿ ಹೆಚ್ಚಿಸಿಕೊಳ್ಳಬಹುದು. ಪಾಲಿಸಿ ಹೋಲ್ಡರ್ ಹೆಚ್ಚಿನ ಕಿಲೋ ಮೀಟರ್ ಬಳಕೆ ಸ್ಲ್ಯಾಬ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಸಾಂಪ್ರದಾಯಿಕ ಓನ್- ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಗೆ ವರ್ಗಾಯಿಸಬಹುದು.