ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್

2 ನಿಮಿಷಗಳಲ್ಲಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಿ.

I agree to the  Terms & Conditions

Don’t have Reg num?
It's a brand new Car

ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸುವುದು ಹೇಗೆ?

Digit ಅವರ ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಕಾರಿಗೆ ಸರಿಯಾದ ಇನ್ಶೂರೆನ್ಸ್ ಪಡೆಯುವುದು ಹೇಗೆಂದು ಈ ಕೆಳಗಿನ ಹಂತಗಳ ಮೂಲಕ ಸರಳವಾಗಿ ತಿಳಿಯಿರಿ!

ಹಂತ 1

ನಿಮ್ಮ ಕಾರಿನ ಮೇಕ್, ಮಾಡಲ್, ವೇರಿಯಂಟ್, ನೊಂದಣಿ ದಿನಾಂಕ ಮತ್ತು ನಗರದ ಮಾಹಿತಿಗಳನ್ನು ತುಂಬಿ.

ಹಂತ 2

"ಗೆಟ್ ಕೋಟ್" ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ಲ್ಯಾನ್ ಆಯ್ಕೆ ಮಾಡಿ.

ಹಂತ 3

ಥರ್ಡ್ ಪಾರ್ಟಿ ಹೊಣೆಗಾರಿಕೆ ಅಥವಾ ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಆಯ್ಕೆ ಮಾಡಿ.

ಹಂತ 4

ನಿಮ್ಮ ಕಡೆಯ ಇನ್ಶೂರೆನ್ಸ್ ಪಾಲಿಸಿ ಕುರಿತು ತಿಳಿಸಿ - ಅವಧಿ ಪೂರ್ಣಗೊಂಡ ದಿನಾಂಕ, ಮಾಡಲಾದ ಕ್ಲೈಮುಗಳು ಹಾಗೂ ಗಳಿಸಿದ ಕ್ಲೈಮ್ ಬೋನಸ್.

ಹಂತ 5

ಈಗ ಲೋಡ್ ಆದ ಪುಟದ ಕೆಳಗಿನ ಬಲಬದಿಯಲ್ಲಿ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನೋಡಬಹುದು.

ಹಂತ 6

ನೀವು ಸ್ಟ್ಯಾಂಡರ್ಡ್/ಕಾಂಪ್ರೆಹೆನ್ಸಿವ್ ಪ್ಲ್ಯಾನ್ ಆಯ್ಕೆ ಮಾಡಿದ್ದಲ್ಲಿ, ಐಡಿವಿ ಸೆಟ್ ಮಾಡಿ, ನಂತರ ಝೀರೋ ಡೆಪ್ರಿಸಿಯೇಷನ್, ರಿಟರ್ನ್ ಟು ಇನ್ವಾಯ್ಸ್, ಗೇರ್ ಆಂಡ್ ಇಂಜಿನ್ ಪ್ರೊಟೆಕ್ಷನ್ ಹಾಗೂ ಇನ್ನೂ ಅನೇಕ ಆಡ್-ಆನ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮಗೆ ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡಿಕೊಳ್ಳಬಹುದು.

ಹಂತ 7

ಈಗ ನಿಮ್ಮ ಬಲಬದಿಯಲ್ಲಿ ಲೆಕ್ಕ ಹಾಕಲಾದ ಅಂತಿಮವಾದ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ನೋಡಬಹುದು.

ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ನಿಂದಾಗುವ ಲಾಭಗಳು

  • ಸರಿಯಾದ  ಐಡಿವಿ (ಇನ್ಶ್ಯೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ)- ನಿಮ್ಮ ಕಾರಿನ ಮೇಕ್, ಮಾಡಲ್, ಮತ್ತು ಅದರ ಏಜ್ ಗಳಿಗನುಸಾರವಾಗಿ ಸೂಕ್ತವಾಗಿರುವ ಐಡಿವಿ ಯನ್ನು ನೀವು ಹೊಂದಿಸಿಕೊಳ್ಳಬಹುದು. ಸೂಕ್ತವಾದ ಐಡಿವಿ ಹೊಂದುವ ಮುಖ್ಯ ಉಪಯೋಗವೆಂದರೆ, ಒಂದು ವೇಳೆ ನಿಮಗೆ ಕಾರಿನ ಒಟ್ಟಾರೆ ನಷ್ಟ ಅಥವಾ ನಿಮ್ಮ ಕಾರ್ ಕಳುವಾದ ಸಂದರ್ಭದಲ್ಲಿ ಮಾರುಕಟ್ಟೆಯ ದರವನ್ನೇ ನೀವು ಪಡೆಯುವುದರಿಂದ ನಿಮಗೆ ಯಾವ ನಷ್ಟವೂ ಉಂಟಾಗಲಾರದು.

  • ಸರಿಯಾದ ಆಡ್-ಆನ್ ಗಳು- ಸೂಕ್ತವಾದ ಆಡ್-ಆನ್ ಗಳನ್ನು ಹೊಂದಿರುವ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದೆಂದರೆ, ನಿಮ್ಮನ್ನು ನೀವು ಕೊಡೆ ಹಿಡಿದುಕೊಂಡು ಮಳೆ ನೀರಿನಲ್ಲಿ ನೆನೆಯದಂತೆ ಮಾಡಿಕೊಳ್ಳುವುದು. ಆದರೆ ಬಹುತೇಕ ಜನರು ಪ್ರೀಮಿಯಂ ಮೊತ್ತ ಹೆಚ್ಚಾಗುವ ಕಾರಣಗಳಿಂದಾಗಿ ಆಡ್-ಆನ್ ಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆ, ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಮೂಲಕ ನೀವು ವಿವಿಧ ಕಾರ್ ಇನ್ಶೂರೆನ್ಸ್ ಆಡಾನ್ ಗಳನ್ನು ಸೇರಿಸಿ, ಪ್ರೀಮಿಯಂಗಳಲ್ಲಾಗುವ ವ್ಯತ್ಯಾಸಗಳನ್ನು ಪರಿಶೀಲಿಸಿ ನಿಮಗೆ ಸೂಕ್ತ ಎನಿಸಬಹುದಾದ ಆಡಾನ್ ಗಳ ಮಿಶ್ರಣವನ್ನು ಪಡೆದುಕೊಳ್ಳಬಹುದು.
  • ಸರಿಯಾದ ಪ್ರೀಮಿಯಂ- ಖಂಡಿತವಾಗಿಯೂ ನೀವು ಇದರ ಲೆಕ್ಕ ಹಾಕುವಿಕೆಗಾಗಿಯೇ ಆದ್ಯತೆಯ ಮೇರೆಗೆ ಕ್ಯಾಲ್ಕುಲೇಟರ್ ಬಳಸುತ್ತೀರಿ ಎಂಬುದು ನಮಗೆ ಗೊತ್ತು. ಈ ಕ್ಯಾಲ್ಕುಲೇಟರ್ ಬಳಸಿ ನೀವು ವಿವಿಧ ಬಗೆಯ ಕಾರ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಹೋಲಿಸಿಕೊಂಡು ನಿಮಗೆ ಸೂಕ್ತವಾದ ಪ್ರೀಮಿಯಂ ಪ್ಲ್ಯಾನ್ ಅನ್ನು ಪಡೆಯಬಹುದು.

ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸುವುದು ಏಕೆ ಮುಖ್ಯ?

ಯಾವುದಾದರೂ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪಡೆಯುವುದೇ ಅಥವಾ ನೀವೇ ಸ್ವತಃ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕ ಹಾಕಿ ನಿಮಗೆ ಸೂಕ್ತವಾದ ಪ್ಲ್ಯಾನ್ ಪಡೆಯುವುದೇ ಎಂಬ ಗೊಂದಲದಲ್ಲಿರುವಿರಾ? ಹಾಗಾದರೆ, ಈ ಕೆಳಗಿನ ಕಾರಣಗಳಿಗಾಗಿ ಎರಡನೆಯದ್ದನ್ನು ಪಾಲಿಸಿ ಹಾಗೂ ಭಾರತದಲ್ಲಿ ಅದಕ್ಕಾಗಿ ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸಿ.

ಪರಿಣಾಮಕಾರಿ ವೆಚ್ಚ, ನಿಮ್ಮ ಹಣ ಉಳಿಸುತ್ತದೆ

ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್, ಮೊದಲ ಹಂತದಲ್ಲೇ ನೀವು ವಿವಿಧ ಬಗೆಯ ಕಾರ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಲೆಕ್ಕ ಹಾಕಿ ಹೋಲಿಸಿಕೊಂಡು ನಿಮಗೆ ವೆಚ್ಚದಾಯಕವಾದಂತಹ ನಿಮ್ಮ ಹಣ ಉಳಿಸುವಂತಹ ಕಾರ್ ಇನ್ಶೂರೆನ್ಸ್ ಪಡೆಯಲು ನೆರವಾಗುತ್ತದೆ.

ಕಾರ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಕಡಿತ

ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸುವಾಗ ಹೇಗೆ ಕೆಲವು ಅಂಶಗಳು ಪ್ರೀಮಿಯಂಗಳ ಏರಿಳಿತಕ್ಕೆ ಕಾರಣವಾಗುತ್ತವೆ ಎಂಬುದನ್ನು ನೀವು ಗಮನಿಸಬಹುದು. ಇದಕ್ಕನುಸಾರವಾಗಿ ನೀವು ವಿವಿಧ ಆಯ್ಕೆಗಳನ್ನು ಪ್ರಯತ್ನಿಸಿ ನಿಮಗೆ ಸೂಕ್ತವಾದುದನ್ನು ಆಯ್ಕೆ ಮಾಡಬಹುದು!

ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ

ಅಂತಿಮವಾಗಿ ಹೇಳಬೇಕೆಂದರೆ ಅದು ನಿಮ್ಮ ಸ್ವಂತ ಕಾರ್. ಕನಿಷ್ಠ ಪಕ್ಷ ಅದರ ಭದ್ರತೆಗಾಗಿ ನೀವು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ನೀವು ಈ ನಿಟ್ಟಿನಲ್ಲಿ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಅವಲೋಕಿಸಿ ನಿಮಗೆ ಸರಿಯಾದಂತಹ ಇನ್ಶೂರೆನ್ಸ್ ಪ್ರೀಮಿಯಂ ಪಡೆದುಕೊಳ್ಳುವಂತೆ ಸಹಾಯ ಮಾಡುತ್ತದೆ.

ಹೊಸ ಮತ್ತು ಹಳೆಯ ಕಾರುಗಳ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕಹಾಕಿ

ಭಾರತದಲ್ಲಿರುವ ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರಕಾರಗಳು

car-quarter-circle-chart

ಥರ್ಡ್ ಪಾರ್ಟಿ

ಥರ್ಡ್ ಪಾರ್ಟಿ ಕಾರ್ ವಿಮೆಯು ಕಾರ್ ವಿಮೆಯ ಪ್ರಕಾರಗಳಲ್ಲಿ ಬಹು ಸಾಮಾನ್ಯವಾದ ವಿಮೆಯಾಗಿದೆ; ಇದರಲ್ಲಿ ಕೇವಲ ಥರ್ಡ್ ಪಾರ್ಟಿ ವ್ಯಕ್ತಿ, ವಾಹನ ಅಥವಾ ಆಸ್ತಿಗೆ ಆದ ಹಾನಿ ಮತ್ತು ನಷ್ಟಗಳನ್ನು ಕವರ್ ಮಾಡಲಾಗುತ್ತದೆ.

car-full-circle-chart

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಕಾರ್ ವಿಮೆಯು ಬಹು ಮೌಲ್ಯಯುತವಾದ ಕಾರ್ ಇನ್ಶೂರೆನ್ಸ್ ಪ್ರಕಾರವಾಗಿದ್ದು ಇದರಲ್ಲಿ ಥರ್ಡ್ ಪಾರ್ಟಿ ಹೊಣೆಗಾರಿಕೆ ಹಾಗೂ ನಿಮ್ಮ ಕಾರಿಗೆ ಉಂಟಾಗುವ ನಷ್ಟ ಎರಡನ್ನೂ ಕವರ್ ಮಾಡಲಾಗುತ್ತದೆ.

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ನಿಮ್ಮ ಕಾರಿಗೆ 360-ಡಿಗ್ರಿ ವ್ಯಾಪ್ತಿಯನ್ನು ನೀಡುವ ಒಂದು ರೀತಿಯ ಇನ್ಶೂರೆನ್ಸ್ ಯೋಜನೆಯಾಗಿದೆ. ಮೂರನೇ ವ್ಯಕ್ತಿಗಳಿಗೆ ಉಂಟಾದ ನಷ್ಟದಿಂದ ನಿಮ್ಮನ್ನು ರಕ್ಷಿಸುವುದರಿಂದ ಹಿಡಿದು ನಿಮ್ಮ ಸ್ವಂತ ಹಾನಿಯನ್ನು ಸರಿದೂಗಿಸುವವರೆಗೆ ಮತ್ತು ಆಡ್-ಆನ್ ಕವರ್‌ಗಳ ವ್ಯಾಪ್ತಿಯನ್ನು ಅನುಮತಿಸುವವರೆಗೆ, ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ನಿಮ್ಮ ಅನುಕೂಲತೆಗಳನ್ನು ಅನುಮತಿಸುವ ಏಕೈಕ ರೀತಿಯ ಕಾರ್ ಇನ್ಶೂರೆನ್ಸ್ ಯೋಜನೆಯಾಗಿದೆ. ಇಂತಹ ಸಂದರ್ಭದಲ್ಲಿ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ನಿಮ್ಮಉಪಯೋಗಕ್ಕೆ ಬರುತ್ತದೆ, ಏಕೆಂದರೆ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ವಿವಿಧ ಆಡ್-ಆನ್‌ಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನೀವು ಇದರ ಮೂಲಕ ತಿಳಿದು - ನಿಮ್ಮ ನಿರ್ಧಾರವನ್ನು ಹೆಚ್ಚು ಸರಳ ಮತ್ತು ನೇರವಾಗಿರುವಂತೆ ಮಾಡುತ್ತದೆ.

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂನ ಪ್ರಮುಖ ಅಂಶಗಳ ಕುರಿತು ಇನ್ನಷ್ಟು ಓದಿ.

ಸ್ವಂತ ಹಾನಿಗಳು

ಇದು ಎಲ್ಲಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಒಳಗೊಂಡಿರುವ ಕವರ್ ಆಗಿದ್ದು ನಿಮ್ಮ ಸ್ವಂತ ಕಾರಿಗೆ ಉಂಟಾಗುವ ಹಾನಿಗಳಿಂದಾಗುವ ನಷ್ಟಗಳ ಕವರ್ ಮಾಡುತ್ತದೆ. ಉದಾಹರಣೆಗೆ ಅಪಘಾತ ಅಥವಾ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ. ನಿಮ್ಮ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಭರಿಸಬೇಕಾದ ವೆಚ್ಚವು ನಿಮ್ಮ ಕಾರಿನ ತಯಾರಿಕೆ, ಮಾದರಿ ಮತ್ತು ಆಯುಷ್ಯವನ್ನು ಮತ್ತು ನೀವು ಅದನ್ನು ಓಡಿಸುವ ನಗರಳಿಂದ ನಿರ್ಧರಿಸಲ್ಪಡುತ್ತದೆ.

ಥರ್ಡ್ ಪಾರ್ಟಿಗೆ ಆಗುವ ಹಾನಿಗಳು

ಇದು ಕಾನೂನಿನ ಪ್ರಕಾರ ಕಡ್ಡಾಯವಾಗಿದ್ದು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿ ಮತ್ತು ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿ ಎರಡರಲ್ಲೂ ಒಳಗೊಂಡಿರುತ್ತದೆ. ನಿಮ್ಮ ಕಾರ್ ಮೂರನೇ ವ್ಯಕ್ತಿ, ವಾಹನ ಅಥವಾ ಆಸ್ತಿಗೆ ಉಂಟುಮಾಡಬಹುದಾದ ಹಾನಿ ಮತ್ತು ನಷ್ಟಗಳಿಗೆ ಇದು ರಕ್ಷಣೆ ನೀಡುತ್ತದೆ. ಇದಕ್ಕೆ ಪರಿಹಾರವು IRDAI ನಿಂದ ಪೂರ್ವನಿರ್ಧರಿತವಾಗಿದೆ ಮತ್ತು ಇದು ಎಲ್ಲಾ ಪಾಲಿಸಿಗಳಲ್ಲಿ ಒಂದೇ ಆಗಿರುತ್ತದೆ.

ಇನ್ಶ್ಯುರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV)

ಐಡಿವಿ ಎಂಬುದು ನಿಮ್ಮ ಕಾರಿನ ಡೆಪ್ರಿಶಿಯೇಷನ್ ಸೇರಿದಂತೆ ಮಾರುಕಟ್ಟೆ ಮೌಲ್ಯವಾಗಿದೆ. ನಿಮ್ಮ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವನ್ನು ನಿರ್ಧರಿಸುವಲ್ಲಿ ನಿಮ್ಮ ಐಡಿವಿ ಪ್ರಮುಖ ಪಾತ್ರ ವಹಿಸುತ್ತದೆ. Digit ನೊಂದಿಗೆ, ನೀವು ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಬಹುದು ಮತ್ತು ಅದು ನಿಮ್ಮ ಪ್ರೀಮಿಯಂ ಮೊತ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬಹುದು.

ಆಡ್-ಆನ್ ಕವರ್ ಗಳು

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯ ಉತ್ತಮ ಭಾಗವೆಂದರೆ ನಿಮ್ಮ ಕಾರಿಗೆ ಉತ್ತಮ ರಕ್ಷಣೆ ನೀಡಲು ನೀವು ನಿಮ್ಮ ಪಾಲಿಸಿಗೆ ಹೆಚ್ಚುವರಿ ಕವರ್‌ಗಳನ್ನು ಸೇರಿಸಬಹುದು. ಆಡ್-ಆನ್‌ಗಳ ಪ್ರಕಾರ ಮತ್ತು ಅವುಗಳ ಸಂಖ್ಯೆ ನಿಮ್ಮ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ.

ಕಡಿತಗಳು

ಕಡಿತಗಳು, ಕ್ಲೈಮುಗಳ ಸಮಯದಲ್ಲಿ ನೀವು ಪಾವತಿಸುವ ಹಣದ ಮೊತ್ತವಾಗಿದೆ. ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ, ನಿಮಗೆ ಯಾವುದು ಕಾರ್ಯಸಾಧ್ಯವೋ ಅದನ್ನು ನೀವು ಆರಿಸಿಕೊಳ್ಳಬಹುದು. ನೀವು ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ಆರಿಸಿಕೊಂಡಷ್ಟೂ, ನಿಮ್ಮ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆಯಾಗುತ್ತದೆ ಹಾಗೂ ಶೇಕಡಾವಾರು ಪ್ರಮಾಣ ಕಡಿಮೆ ಇದ್ದರೆ  ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಾಗಿರುತ್ತದೆ.

ನೋ ಕ್ಲೈಮ್ ಬೋನಸ್

ನಿಮ್ಮ ನೋ ಕ್ಲೈಮ್ ಬೋನಸ್ ನೀವು ಹೊಂದಿರುವ ಕ್ಲೈಮ್ ಉಚಿತ ವರ್ಷಗಳ ಸಂಖ್ಯೆಯನ್ನು ಆಧರಿಸಿದೆ, ನಿಮ್ಮ ಮೊದಲ ಕ್ಲೈಮ್ ಉಚಿತ ವರ್ಷದಲ್ಲಿ 20% ರಿಂದ ಪ್ರಾರಂಭವಾಗುತ್ತದೆ. ಆದ್ದರಿಂದ, ನೀವು ಹೆಚ್ಚಿನ ಮಟ್ಟದ ನೋ ಕ್ಲೈಮ್ ಬೋನಸ್ ಹೊಂದಿದ್ದರೆ, ನಿಮ್ಮ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಇರುತ್ತದೆ ಮತ್ತು ನೀವು ಕಡಿಮೆ ಮಟ್ಟದ ನೋ ಕ್ಲೈಮ್ ಬೋನಸ್ ಹೊಂದಿದ್ದರೆ, ನಿಮ್ಮ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಾಗಿರುತ್ತದೆ.

ನಿಮ್ಮ ಕಾರಿನ ಮೇಕ್ ಮತ್ತು ಮಾಡಲ್

ನೀವು ಹೊಂದಿರುವ ಕಾರ್ ನಿಮ್ಮ ಪ್ರೀಮಿಯಂ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ, ಏಕೆಂದರೆ ಪ್ರತಿಯೊಂದು ಕಾರ್ ಅದರದ್ದೆ ಆದ ಎಂಜಿನ್, ಸಿಸಿ, ಇತರೆ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ.  ಅಂತಿಮವಾಗಿ, ಪ್ರತಿ ಕಾರ್ ತನ್ನದೇ ಆದ ಅಪಾಯದ ಸಾಧ್ಯತೆಗಳೊಂದಿಗೆ ಬರುತ್ತದೆ ಮತ್ತು ಆದ್ದರಿಂದ ಪ್ರೀಮಿಯಂ ಅದಕ್ಕೆ ಅನುಗುಣವಾಗಿ ಭಿನ್ನವಾಗಿರುತ್ತದೆ.

ಮಾಲೀಕ-ಚಾಲಕನಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್

ಕಾನೂನಿನ ಪ್ರಕಾರ ಕಡ್ಡಾಯವಾಗಿ, ಪರ್ಸನಲ್ ಆಕ್ಸಿಡೆಂಟ್ ಕವರ್ (PA ಕವರ್) ಅನ್ನು ನಿಮ್ಮ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಸೇರಿಸಲಾಗಿರುತ್ತದೆ (ಈಗಾಗಲೇ ಸೇರಿಸದಿದ್ದಲ್ಲಿ).

ನಿಮ್ಮ ಕಾರಿನ ಏಜ್

ಸರಳವಾಗಿ ಹೇಳುವುದಾದರೆ- ನಿಮ್ಮ ಕಾರ್ ಹಳೆಯದಾಗಿದ್ದರೆ, ನಿಮ್ಮ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅಗ್ಗವಾಗಿರುತ್ತದೆ ಮತ್ತು ವೈಸ್-ವರ್ಸಾ.

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಕಾನೂನಿನ ಪ್ರಕಾರ ಅತ್ಯಂತ ಮೂಲಭೂತವಾದ ಇನ್ಶೂರೆನ್ಸ್ . ನಿಮ್ಮ ಕಾರ್ ಯಾರಾದರೂ ವ್ಯಕ್ತಿಗೆ ಗುದ್ದಿದರೆ, ಆಸ್ತಿ ಅಥವಾ ವಾಹನಕ್ಕೆ ಹಾನಿಯುಂಟು ಮಾಡುವಂತಹ ಥರ್ಡ್ ಪಾರ್ಟಿ ನಷ್ಟಗಳಿಗೆ ಮಾತ್ರ ಇದು ರಕ್ಷಣೆ ನೀಡುತ್ತದೆ.

ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂನ ಪ್ರಮುಖ ಅಂಶಗಳ ಕುರಿತು ಇನ್ನಷ್ಟು ಓದಿ.

ನಿಮ್ಮ ಕಾರಿನ ಸಿಸಿ

ಸಿಸಿ ಎಂಬುದು ನಿಮ್ಮ ಕಾರಿನ ಎಂಜಿನ್ ಗಿರುವ ಸಾಮರ್ಥ್ಯವನ್ನು ಸೂಚಿಸುತ್ತದೆ, ಇದು ನಿಮ್ಮ ಕಾರಿನ ವೇಗ ಮತ್ತು ಅಪಾಯಕ್ಕೀಡಾಗಬಹುದಾದ ಸಾಧ್ಯತೆಯನ್ನು ನಿರ್ಧರಿಸುತ್ತದೆ. ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ನಲ್ಲಿ, ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನಿಮ್ಮ ಕಾರಿನ ಸಿಸಿ ಎಷ್ಟು ಹೆಚ್ಚಿದೆ ಅಥವಾ ಕಡಿಮೆಯಿದೆ ಎಂಬುದು  ನೇರವಾಗಿ ಪರಿಣಾಮ ಬೀರುತ್ತದೆ.

ಮಾಲೀಕ-ಚಾಲಕನಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್

ನೀವು ಈಗಾಗಲೇ ಪರ್ಸನಲ್ ಆಕ್ಸಿಡೆಂಟ್ ಕವರ್ ಹೊಂದಿಲ್ಲದಿದ್ದರೆ, ಇದನ್ನು ನಿಮ್ಮ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಗೆ ಸೇರಿಸುವುದು ಕಡ್ಡಾಯವಾಗಿದೆ, ಈ ಸಂದರ್ಭದಲ್ಲಿ ನಿಮ್ಮ ಥರ್ಡ್ ಪಾರ್ಟಿಯ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವು ಸಣ್ಣ ಅಂತರದಿಂದ ಹೆಚ್ಚಾಗಬಹುದು.

ಥರ್ಡ್ ಪಾರ್ಟಿ ಹಾನಿಗಳು

ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಕೇವಲ ಥರ್ಡ್-ಪಾರ್ಟಿ ಹಾನಿಗಳಿಗೆ ಮಾತ್ರ ರಕ್ಷಣೆ ನೀಡುತ್ತದೆಯಾದ್ದರಿಂದ, ನಿಮ್ಮ ಪ್ರೀಮಿಯಂ ಬೆಲೆಯನ್ನು ಲೆಕ್ಕಾಚಾರ ಮಾಡುವಾಗ ನಿಮ್ಮ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವೇ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ.

ಭಾರತದಲ್ಲಿ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ದರಗಳು

ಪ್ರೈವೆಟ್ ಕಾರುಗಳು ಹಾಗೂ ಎಂಜಿನ್ ಸಾಮರ್ಥ್ಯ

ಪ್ರೀಮಿಯಂ ದರ

1000ಸಿಸಿ ಮೀರದ

₹2,094

1000ಸಿಸಿ ಮೀರಿದ ಆದರೆ 1500ಸಿಸಿ ಮೀರದ

₹3,416

1500ಸಿಸಿ ಮೀರಿದ

₹7,897

ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆಯಾಗಿಸಲು ಸಲಹೆಗಳು

ಈ ಕೆಳಗಿನ ಅಂಶಗಳ ಮೂಲಕ ನೀವು ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆಗೊಳಿಸಬಹುದಾಗಿದೆ:

ನಿಮ್ಮ ಸ್ವಯಂಪ್ರೇರಿತ ಕಡಿತಗೊಳಿಸುವಿಕೆಯನ್ನು ಹೆಚ್ಚಿಸಿ

ನೀವು 4-5 ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ಕ್ಲೈಮ್‌ಗಳನ್ನು ಹೊಂದಿಲ್ಲದಿದ್ದರೆ, ನಿಮ್ಮ ಸ್ವಯಂಪ್ರೇರಿತ ಕಡಿತಗೊಳಿಸುವಿಕೆಯನ್ನು ಹೆಚ್ಚಿಸುವ ಮತ್ತು ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುವತ್ತ ನೀವು ಗಮನಹರಿಸಬಹುದು.

ಸಂಬಂಧಿತ ಆಡ್-ಆನ್‌ಗಳನ್ನು ಆಯ್ಕೆಮಾಡಿ

ನಿಮ್ಮ ಕಾರಿಗೆ ಹೆಚ್ಚುವರಿ ರಕ್ಷಣೆಯ ಕವಚ ನೀಡಲು ಆಡ್-ಆನ್‌ಗಳು ಉತ್ತಮ ಮಾರ್ಗವಾಗಿದೆ, ಆದರೆ ಇದು ನಿಮ್ಮ ಪ್ರೀಮಿಯಂ ಅನ್ನು ಹೆಚ್ಚಿಸುತ್ತದೆ. ಆದ್ದರಿಂದ, ನಿಮಗೆ ಮತ್ತು ನಿಮ್ಮ ಕಾರಿಗೆ ಸಂಬಂಧಿಸಿದ ಆಡ್-ಆನ್‌ಗಳನ್ನು ಮಾತ್ರ ಆರಿಸಿಕೊಳ್ಳುವುದು ಉತ್ತಮ ಅಭ್ಯಾಸವಾಗಿದೆ.

ನಿಮ್ಮ ಇನ್ಶೂರೆನ್ಸ್ ಕಂಪನಿಯೊಂದಿಗೆ ಮಾತನಾಡಿ

ನೀವು ಅಗ್ಗದ ಕಾರ್ ಇನ್ಶೂರೆನ್ಸ್ ಕೋಟ್ ಪಡೆಯುತ್ತಿಲ್ಲ ಎಂದು ನೀವು ಭಾವಿಸಿದರೆ, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ಆಸಕ್ತಿ ಹೊಂದಿರುವ ಇನ್ಶೂರೆನ್ಸ್ ಕಂಪನಿಗೆ ಒಮ್ಮೆ ಕರೆ ಮಾಡಿ ಮಾತನಾಡುವುದು ಖಂಡಿತ ಕೆಟ್ಟ ಆಲೋಚನೆಯಲ್ಲ.

ಸಮಯಕ್ಕೆ ಸರಿಯಾಗಿ ನಿಮ್ಮ ಪಾಲಿಸಿಯನ್ನು ನವೀಕರಿಸಿ

ಮುಕ್ತಾಯ ದಿನಾಂಕಕ್ಕೆ ಮುಂಚೆಯೇ ಯಾವಾಗಲೂ ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸಿ. ಇದು ನಿಮ್ಮ ಕಾರಿನ ಪೂರ್ವ-ತಪಾಸಣಾ ಪ್ರಕ್ರಿಯೆಗೆ ತಗುಲುವ ಸಮಯವನ್ನು ಹೋಗಲಾಡಿಸುವುದರ ಜೊತೆಗೆ ನಿಮ್ಮ ನೋ ಕ್ಲೈಮ್ ಬೋನಸ್ ಅನ್ನು ಸೇರಿಸುವ ಮೂಲಕ ರಿಯಾಯಿತಿಯನ್ನು ದೊರಕುವುದನ್ನು ಖಚಿತಪಡಿಸುತ್ತದೆ.

ಉತ್ತಮ ಚಾಲನಾ ದಾಖಲೆ ಕಾಪಾಡಿಕೊಳ್ಳಿ

ಖಂಡಿತ ಇದು ಸ್ಪಷ್ಟವಾದ, ಆದರೆ ಮುಖ್ಯವಾದ ಮಾತು. ರಸ್ತೆಯಲ್ಲಿ ಸುರಕ್ಷಿತವಾಗಿರುವುದರ ಹೊರತಾಗಿ, ವೇಗ-ಮಿತಿಗಳಲ್ಲಿ ಎಚ್ಚರಿಕೆಯ ಚಾಲನೆಯು ಅಪಘಾತಗಳನ್ನು ತಪ್ಪಿಸುತ್ತದೆ ಮತ್ತು ನೀವು ಪ್ರತಿ ವರ್ಷ ನೋ ಕ್ಲೈಮ್ ಬೋನಸ್ ಪಡೆಯುವುದನ್ನು ಖಾತರಿಪಡಿಸಿಕೊಳ್ಳಿ.

ನೀವು ಡಿಜಿಟ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನಾವು ನಮ್ಮ ಗ್ರಾಹಕರನ್ನು ಗಣ್ಯರಂತೆ ನೋಡುತ್ತೇವೆ, ಹೇಗೆ ಎಂದು ತಿಳಿಯಿರಿ...

ನಗದುರಹಿತ ರಿಪೇರಿಗಳು

ಭಾರತದಾದ್ಯಂತ ನೀವು ಆರಿಸಿಕೊಳ್ಳಲು ಅನುಕೂಲವಾಗುವಂತೆ 6000+ ನಗದುರಹಿತ ಗ್ಯಾರೇಜುಗಳ ಬೃಹತ್ ಜಾಲ

ಮನೆ ಬಾಗಿಲಿನವರೆಗೂ ಪಿಕಪ್ ಮತ್ತು ರಿಪೇರ್

6 ತಿಂಗಳ ರಿಪೇರಿ ವಾರಂಟಿಯೊಂದಿಗೆ ಮನೆ ಬಾಗಿಲಿನವರೆಗೂ ಪಿಕಪ್, ರಿಪೇರ್ ಮತ್ತು ಡ್ರಾಪ್ - ನಮ್ಮ ನೆಟ್ವರ್ಕ್ ಗ್ಯಾರೇಜುಗಳಲ್ಲಿ

ಸ್ಮಾರ್ಟ್ ಫೋನ್ ಮೂಲಕ ಸಕ್ರಿಯಗೊಳಿಸಲಾದ ಸೆಲ್ಫ್ ಇನ್ಸ್ಪೆಕ್ಷನ್

ನಿಮ್ಮ ಫೋನಿನಲ್ಲಿ ಆದ ಹಾನಿಯನ್ನು ಕೇವಲ ಕ್ಲಿಕ್ ಮಾಡಿ ಸಾಕು

ಸೂಪರ್ ಫಾಸ್ಟ್ ಕ್ಲೈಮುಗಳು

ಪ್ರೈವೆಟ್ ಕಾರುಗಳಿಗೆ ಸಂಬಂಧಿಸಿದಂತೆ ನಾವು 96% ಕ್ಲೈಮುಗಳನ್ನು ಸೆಟಲ್ ಮಾಡಿದ್ದೇವೆ!

Customize your Vehicle IDV

ನಿಮ್ಮ ವಾಹನದ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿಕೊಳ್ಳಿ

ನಮ್ಮ ಜೊತೆ, ನಿಮ್ಮಿಷ್ಟದ ಅನುಸಾರ ನಿಮ್ಮ ವಾಹನದ ಐಡಿವಿ ಅನ್ನು ಕಸ್ಟಮೈಸ್ ಮಾಡಿಕೊಳ್ಳಿ!

24*7 ಸಪೋರ್ಟ್

24*7 ಕರೆ ಸೌಲಭ್ಯ, ರಾಷ್ಟ್ರೀಯ ರಜಾದಿನಗಳಲ್ಲೂ ಸಹ

ಡಿಜಿಟ್ ನ ಕಾರ್ ಇನ್ಶೂರೆನ್ಸ್ ನ ಪ್ರಮುಖ ವೈಶಿಷ್ಟ್ಯಗಳು

ಪ್ರಮುಖ ವೈಶಿಷ್ಟ್ಯಗಳು

ಡಿಜಿಟ್ ಲಾಭ

ಪ್ರೀಮಿಯಂ

₹2,094 ರಿಂದ ಆರಂಭ

ನೋ ಕ್ಲೈಮ್ ಬೋನಸ್

50% ವರೆಗೂ ವಿನಾಯಿತಿ

ಕಸ್ಟಮೈಸ್ ಮಾಡಬಹುದಾದ ಆಡ್-ಆನ್ ಗಳು

10 ಆಡ್-ಆನ್ ಗಳು ಲಭ್ಯ

ನಗದುರಹಿತ ರಿಪೇರಿಗಳು

6000+ ಗ್ಯಾರೇಜುಗಳಲ್ಲಿ ಲಭ್ಯ

ಕ್ಲೈಮ್ ಪ್ರಕ್ರಿಯೆ

ಸ್ಮಾರ್ಟ್ ಫೋನ್ ಚಾಲಿತ ಕ್ಲೈಮ್ ಪ್ರಕ್ರಿಯೆ. ಆನ್ಲೈನ್ ಮೂಲಕ 7 ನಿಮಿಷಗಳಲ್ಲೇ ಮಾಡಬಹುದು!

ಸ್ವಂತ ಹಾನಿಗೆ ಕವರ್

ಲಭ್ಯ

ಥರ್ಡ್ ಪಾರ್ಟಿಗೆ ಆದ ಹಾನಿ

ವೈಯಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ, ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷದವರೆಗೆ

ಕಾರ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಹೇಗೆ ಸಲ್ಲಿಸುವುದು?

ನಮ್ಮ ಕಾರ್ ಇನ್ಶೂರೆನ್ಸ್ ಯೋಜನೆಯನ್ನು ನೀವು ಖರೀದಿಸಿದ ನಂತರ ಅಥವಾ ನವೀಕರಿಸಿದ ನಂತರ, ನೀವು ಚಿಂತಾ ಮುಕ್ತರಾಗಿ. ಏಕೆಂದರೆ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಪಡೆಯಿರಿ. ಮಾರ್ಗಸೂಚಿಯ ಪ್ರಕಾರ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕಾದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಮರುಪಾವತಿ ಅಥವಾ ನಗದುರಹಿತ ಇವುಗಳಲ್ಲಿ ಯಾವುದಾದರೊಂದು ರಿಪೇರಿ ವಿಧಾನವನ್ನು ಆಯ್ಕೆ ಮಾಡಿ.

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮುಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?

ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ನಿಜಕ್ಕೂ ಇದು ಒಳ್ಳೆಯ ಸಂಗತಿಯೆ ಸರಿ!

ಡಿಜಿಟ್ ಕ್ಲೈಮುಗಳ ರಿಪೋರ್ಟ್ ಕಾರ್ಡ್ ಓದಿ

ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಗೆ ಸಂಬಂಧಿಸಿದಂತೆ ಪ್ರಶ್ನೋತ್ತರಗಳು