ನಾವು ಈಗಾಗಲೇ ನೋಡಿದಂತೆ, ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್ಗಳು ನಿಮಗಾಗಿ ಒಂದು ಪ್ರಮುಖ ಪ್ರಯೋಜನದೊಂದಿಗೆ ಬರುತ್ತದೆ - ನಿಮ್ಮ ಪ್ರೀಮಿಯಂ ಮೊತ್ತವು ಕಡಿಮೆ ಇರುತ್ತದೆ.
ಆದಾಗ್ಯೂ, ನೀವು ಇದನ್ನು ಆಯ್ಕೆ ಮಾಡಿಕೊಂಡರೆ, ದುರದೃಷ್ಟಕರ ಅಪಘಾತಕ್ಕೆ ನೀವು ಸಿಲುಕಿದರೆ, ದುರಸ್ತಿ ವೆಚ್ಚಕ್ಕಾಗಿ ದೊಡ್ಡ ಮೊತ್ತವನ್ನು ಪಾವತಿಸಲು ನೀವು ಸಿದ್ಧರಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನೀವು ನೆನಪಿನಲ್ಲಿಡಬೇಕು.
ನೀವು ₹25,000 ಮೌಲ್ಯದ ಹಾನಿಗಾಗಿ ಕ್ಲೈಮ್ ಮಾಡುತ್ತಿದ್ದೀರಿ ಎಂದು ಹೇಳೋಣ (ಕಡ್ಡಾಯ ಡಿಡಕ್ಟಿಬಲ್ ಮೊತ್ತವನ್ನು ಕಳೆದ ನಂತರ). ನಿಮ್ಮ ವಾಲಂಟರಿ ಡಿಡಕ್ಟಿಬಲ್ ಅನ್ನು ₹10,000 ಕ್ಕೆ ನಿಗದಿಪಡಿಸಿದ್ದರೆ, ಇನ್ಶೂರೆನ್ಸ್ ಕಂಪನಿಯು ಕೇವಲ ₹15,000 ಮಾತ್ರ ಪಾವತಿಸುತ್ತದೆ ಮತ್ತು ನಿಮ್ಮ ಜೇಬಿನಿಂದ ನೀವು ಉಳಿದ ₹10,000 ಪಾವತಿಸಬೇಕಾಗುತ್ತದೆ.
ಆದರೆ, ನಿಮ್ಮ ವಾಲಂಟರಿ ಡಿಡಕ್ಟಿಬಲ್ ಕೇವಲ ₹ 5,000 ಆಗಿದ್ದರೆ - ಇನ್ಶೂರೆನ್ಸ್ ಕಂಪನಿಯು ₹ 20,000 ಪಾವತಿಸುತ್ತಾರೆ ಮತ್ತು ನೀವು ಕೇವಲ ₹ 5,000 ಬಾಕಿಯನ್ನು ಮಾತ್ರ ಪಾವತಿಸಬೇಕಾಗುತ್ತದೆ. ಆದಾಗ್ಯೂ, ಈ ಎರಡನೇ ಸಂದರ್ಭದಲ್ಲಿ, ನಿಮ್ಮ ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಾಗಿರುತ್ತದೆ.
ಇದು ನಿಮ್ಮ ಪ್ರೀಮಿಯಂನಲ್ಲಿ ನಿಮ್ಮ ಹಣವನ್ನು ಉಳಿಸಬಹುದಾದರೂ, ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್ಗಳನ್ನು ನೀವು ಆಯ್ಕೆ ಮಾಡುವುದು ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ನೀವು ನಿರ್ಧರಿಸಬೇಕು.
ಸಾಮಾನ್ಯವಾಗಿ, ನೀವು ಯಾವುದೇ ಕ್ಲೈಮ್ಗಳನ್ನು ಮಾಡಲು ಕಡಿಮೆ ಅವಕಾಶವಿದೆ ಎಂದು ನಿಮಗೆ ಖಚಿತವಾಗಿದ್ದರೆ, ನಿಮ್ಮ ಪ್ರೀಮಿಯಂನಲ್ಲಿ ಹಣವನ್ನು ಉಳಿಸಲು ಇದು ಉತ್ತಮ ಮಾರ್ಗವಾಗಿದೆ (ಹಾಗೂ ನಂತರದಲ್ಲಿ ಈ ಮೊತ್ತವನ್ನು ನಿಮ್ಮ ಜೇಬಿನಿಂದ ಪಾವತಿಸಿ!)
ನೀವು ಕ್ಲೈಮ್ ಮಾಡಿದರೆ, ನೀವು ನಿಜವಾಗಿಯೂ ನಿಭಾಯಿಸಬಹುದಾದ ಮೊತ್ತಕ್ಕೆ ಮಾತ್ರ ನಿಮ್ಮ ವಾಲಂಟರಿ ಡಿಡಕ್ಟಿಬಲ್ ಮೊತ್ತವನ್ನು ಹೆಚ್ಚಿಸಬೇಕು ಎಂಬುದನ್ನು ಯಾವಾಗಲೂ ನೆನಪಿಡಿ. ಏಕೆಂದರೆ ಈ ಹಂತದಲ್ಲಿ ನೀವು ಹಿಂದೆ ಸರಿಯಲು ಸಾಧ್ಯವಿಲ್ಲ.