ಹೆಸರೇ ಸೂಚಿಸುವಂತೆ, ಓನ್ ಡ್ಯಾಮೇಜ್ ಇನ್ಶುರೆನ್ಸ್ ಎನ್ನುವುದು ಕಸ್ಟಮೈಸ್ ಮಾಡಿದ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ನಿಮ್ಮ ವಾಹನಕ್ಕೆ ನಿಮ್ಮಿಂದಾಗುವ ಹಾನಿಗಳಿಂದ ನಿಮ್ಮನ್ನು ಮತ್ತು ನಿಮ್ಮ ಇನ್ಶೂರೆನ್ಸ್ ಮಾಡಿದ ವಾಹನವನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ, ಅಂದರೆ ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿ ಮತ್ತು ನಷ್ಟಗಳಿಂದ ನಿಮ್ಮ ವಾಹನವನ್ನು ರಕ್ಷಿಸುತ್ತದೆ.
ನೋಡಲು ತಮಾಷೆಯಾಗಿರುವ ಆದರೆ ನೈಜ ಉದಾಹರಣೆಯನ್ನು ತೆಗೆದುಕೊಳ್ಳೋಣ;ನಿಮ್ಮ ಕಾರನ್ನು ಅದರ ಸಾಮಾನ್ಯವಾಗಿ ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸಲಾಗಿದೆ ಎಂದುಕೊಳ್ಳಿ ಹಾಗೇ ಇದ್ದಕ್ಕಿದ್ದಂತೆ, ಪಕ್ಕದ ಮರದ ಕೊಂಬೆ ನಿಮ್ಮ ಕಾರಿನ ಮೇಲೆ ಬಿದ್ದರೆ, ಅಥವಾ ಇನ್ನೂ ಕೆಟ್ಟದಾಗಿ ನಿಮ್ಮ ಪಕ್ಕದವರ ಕ್ರಿಕೆಟ್ ಚೆಂಡು ಕಾರಿನ ಕಿಟಕಿಯ ಮೇಲೆ ಬಿದ್ದುಬಿಟ್ಟರೆ, ಅಂತಿಮವಾಗಿ, ತೆಂಗಿನಕಾಯಿ ಬೀಳುತ್ತದೆ!
ಕಥೆಯೇನೋ ತಮಾಷೆಯಾಗಿದೆ. ಆದರೆ ಅವಲೋಕಿಸಿ ನೋಡಿದರೆ ನಿಜ ಜೀವನದಲ್ಲಿ ಇದರಿಂದ ಭಾರೀ ನಷ್ಟ ಉಂಟಾಗುತ್ತದೆ! ಇಂತಹ ಸಂದರ್ಭಗಳಲ್ಲಿ, ಓ.ಡಿ (OD) ಇನ್ಶೂರೆನ್ಸ್, ಈ ರೀತಿಯ ನಷ್ಟದಿಂದ ಉಂಟಾಗುವ ತೊಂದರೆಯಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತದೆ.
ಇದರ ಬಗ್ಗೆ ಇನ್ನಷ್ಟು ತಿಳಿಯಿರಿ:
ಓನ್ ಡ್ಯಾಮೇಜ್ ಇನ್ಶೂರೆನ್ಸ್ ಅನ್ನು ಖರೀದಿಸಲು ಯಾರು ಅರ್ಹರು?
ಸೆಪ್ಟೆಂಬರ್ 2019ರಿಂದ ಅನ್ವಯವಾಗುವಂತೆ, ಇನ್ಶೂರೆನ್ಸ್ ಕಂಪನಿಗಳು ಈಗ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅಥವಾ ಬೈಕ್ ಇನ್ಶೂರೆನ್ಸ್ ಅನ್ನು ಹೊಂದಿರುವ ಕಾರುಗಳಿಗೆ ಮತ್ತು ದ್ವಿಚಕ್ರ ವಾಹನಗಳಿಗೆ ಸ್ವತಂತ್ರ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡಬಹುದು.
ಉದಾಹರಣೆಗೆ; ಅನೇಕ ಕಾರು ಅಥವಾ ಬೈಕ್ ಮಾಲೀಕರು ತಮ್ಮ ವಾಹನವನ್ನು ಖರೀದಿಸುವ ಸಮಯದಲ್ಲಿ ಲಾಂಗ್ ಟರ್ಮ್ ಥರ್ಡ್-ಪಾರ್ಟಿ ಪಾಲಿಸಿಗಳನ್ನು ಖರೀದಿಸಿರುತ್ತಾರೆ.(ವಿಶೇಷವಾಗಿ ಮಾರ್ಚ್ 2019 ರಲ್ಲಿ ಇವುಗಳನ್ನು ಪಡೆದವರು) ಅವರು ಈಗ ಓನ್ ಡ್ಯಾಮೇಜ್ ನಷ್ಟವನ್ನು ಸರಿದೂಗಿಸಲು ಸ್ವತಂತ್ರ ಓ.ಡಿ (OD) ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳಬಹುದು.
ಸೂಚನೆ : ನೀವು ಓ.ಡಿ (OD) ಇನ್ಶೂರೆನ್ಸ್ ಅನ್ನು ಖರೀದಿಸಿದಾಗ, ನೀವು ಈಗಾಗಲೇ ಮಾನ್ಯ ಮಾಡಲಾದ ಥರ್ಡ್ ಪಾರ್ಟಿ ಪಾಲಿಸಿಯನ್ನು (ಭಾರತೀಯ ಮೋಟಾರು ಕಾನೂನುಗಳಿಂದ ಕಾನೂನುಬದ್ಧಗೊಳಿಸಿರುವಂತೆ) ಹೊಂದಿರುವಿರಿ ಎಂದು ಪರೋಕ್ಷವಾಗಿ ದೃಢೀಕರಿಸುತ್ತೀರಿ. ಇದು ಡಿಜಿಟ್ ಇನ್ಶೂರೆನ್ಸ್ ಕಂಪನಿಯದಾಗಿರಬಹುದು ಅಥವಾ ಬೇರೆ ಇನ್ಶೂರೆನ್ಸ್ ಕಂಪನಿಯವರದೂ ಆಗಿರಬಹುದು.