ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಆನ್‌ಲೈನ್

ಎರಡು ನಿಮಿಷಗಳಲ್ಲಿ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸಿ.
Happy Couple Standing Beside Car

I agree to the  Terms & Conditions

Don’t have Reg num?
It's a brand new Car

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಎಂದರೇನು?

ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಬೆಲೆ

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್‌ಗಿಂತ, ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಭಿನ್ನವಾಗಿದೆ. ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ನಿಮ್ಮ ಇಂಜಿನ್ ಸಿಸಿ ಮೇಲೆ ಮಾತ್ರ ಅವಲಂಬಿತವಾಗಿದೆ ಮತ್ತು ಆಯಾ ಪ್ರೀಮಿಯಂಗಳು IRDAI ಮೂಲಕ ಪೂರ್ವನಿರ್ಧರಿತವಾಗಿರುತ್ತವೆ.

ಪ್ರೈವೇಟ್ ಕಾರುಗಳು, ಎಂಜಿನ್ ಕೆಪಾಸಿಟಿಯೊಂದಿಗೆ

ಪ್ರೀಮಿಯಂ ರೇಟ್

1000cc ಮೀರದಂತೆ

₹2,072

1000cc ಮೀರುವಂತೆ, ಅದರೆ 1500cc ಮೀರದಂತೆ

₹3,221

1500cc ಮೀರುವಂತೆ

₹7,890

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್‌ನಲ್ಲಿ ಏನು ಒಳಗೊಂಡಿದೆ?

ಮೂರನೇ ವ್ಯಕ್ತಿಗೆ ವೈಯಕ್ತಿಕ ಹಾನಿ

ಮೂರನೇ ವ್ಯಕ್ತಿಗೆ ವೈಯಕ್ತಿಕ ಹಾನಿ

ಮೂರನೇ ವ್ಯಕ್ತಿಗೆ (ಥರ್ಡ್ ಪಾರ್ಟಿ ) ನಿಮ್ಮ ಕಾರಿನಿಂದ ಸಂಭವಿಸಿದ ಯಾವುದೇ ಫಿಸಿಕಲ್ ಇಂಜ್ಯೂರಿಗಳು ಅಥವಾ ದುರದೃಷ್ಟವಶಾತ್ ಮೂರನೇ ವ್ಯಕ್ತಿಗೆ ಸಾವು ಸಂಭವಿಸಿದ್ದಲ್ಲಿ , ಆ ದುರದೃಷ್ಟಕರ ಸಂದರ್ಭಗಳಲ್ಲಿ ಉಂಟಾಗುವ ಎಲ್ಲ ವೆಚ್ಚಗಳು ಮತ್ತು ನಷ್ಟಗಳಿಗೆ ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ರಕ್ಷಣೆ ನೀಡುತ್ತದೆ.

ಮೂರನೇ ವ್ಯಕ್ತಿಯ ಆಸ್ತಿ/ವಾಹನಕ್ಕೆ ಹಾನಿ

ಮೂರನೇ ವ್ಯಕ್ತಿಯ ಆಸ್ತಿ/ವಾಹನಕ್ಕೆ ಹಾನಿ

ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ನಿಮ್ಮ ಕಾರು ಬೇರೆಯವರ ವಾಹನ, ಮನೆ ಅಥವಾ ಆಸ್ತಿಯನ್ನು 7.5 ಲಕ್ಷದವರೆಗೆ ಹಾನಿಗೊಳಿಸಿದರೆ, ಆ ಸಂದರ್ಭದಲ್ಲಿ ಇದು ನಿಮಗೆ ರಕ್ಷಣೆ ನೀಡುತ್ತದೆ.

ಮಾಲೀಕರು-ಚಾಲಕರಿಗೆ ಪರ್ಸನಲ್ ಆಕ್ಸಿಡೆಂಟ್  ಕವರ್

ಮಾಲೀಕರು-ಚಾಲಕರಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್

ನೀವು ಈಗಾಗಲೇ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಹೊಂದಿಲ್ಲದಿದ್ದರೆ, ಅಪಘಾತದ ಸನ್ನಿವೇಶದಲ್ಲಿ , ನೀವು ದೈಹಿಕವಾಗಿ ಗಾಯಗೊಂಡರೆ ಅದರಿಂದ ಉಂಟಾಗುವ ನಷ್ಟದಿಂದ ನಿಮ್ಮನ್ನು ರಕ್ಷಿಸಲು ಈ ಕವರ್ ಅನ್ನು ನಿಮ್ಮ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್‌ನಲ್ಲಿ ಸೇರಿಸಿಕೊಳ್ಳಬಹುದು.

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್‌ನಲ್ಲಿ ಏನನ್ನು ಒಳಗೊಂಡಿಲ್ಲ?

ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಒಳಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯ, ಅದರಿಂದ ನೀವು ಕ್ಲೇಮ್ ಮಾಡುವ ಸಂದರ್ಭದಲ್ಲಿ ಯಾವುದೇ ಅಚ್ಚರಿ ಪಡುವುದಿಲ್ಲ . ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

ಸ್ವಂತ ಹಾನಿಗಳು

ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಸ್ವಂತ ಕಾರಿಗೆ ಆಗುವ ಹಾನಿಯನ್ನು ಒಳಗೊಂಡಿರುವುದಿಲ್ಲ.

ಕುಡಿದು ವಾಹನ ಚಾಲನೆ ಅಥವಾ ಲೈಸನ್ಸ್ ಇಲ್ಲದೆ

ನೀವು ಕುಡಿದು ಚಾಲನೆ ಮಾಡುತ್ತಿರುವಾಗ ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ  ಫೋರ್ ವೀಲರ್ ವೆಹಿಕಲ್  ಚಾಲನೆ ಮಾಡಿದರೆ ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್  ನಿಮಗೆ ರಕ್ಷಣೆ ನೀಡುವುದಿಲ್ಲ.

ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದೇ ಚಾಲನೆ ಮಾಡಿದರೆ.

ನೀವು ಕಲಿಯುವವರ ಲೈಸೆನ್ಸ್ ಹೊಂದಿದ್ದರೆ ಮತ್ತು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್-ಹೋಲ್ಡರ್ ಇಲ್ಲದೆ ಚಾಲನೆ ಮಾಡುತ್ತಿದ್ದರೆ - ಆ ಸಂದರ್ಭಗಳಲ್ಲಿ ನೀವು ಕ್ಲೇಮ್ ಮಾಡಲು ಆಗುವುದಿಲ್ಲ.

ಡಿಜಿಟ್ನ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸಿನ ಪ್ರಮುಖ ಲಕ್ಷಣಗಳು

ಪ್ರಮುಖ ಲಕ್ಷಣಗಳು

ಡಿಜಿಟ್ ನ ಪ್ರಯೋಜನಗಳು

ಪ್ರೀಮಿಯಂ

₹2072/-ರಿಂದ ಪ್ರಾರಂಭ

ಖರೀದಿಸುವ ಪ್ರಕ್ರಿಯೆ

ಸ್ಮಾರ್ಟ್ ಫೋನ್-ಸಕ್ರಿಯಗೊಳಿಸಲಾದ ಪ್ರಕ್ರಿಯೆ. ಕೇವಲ ಐದು ನಿಮಿಷಗಳಲ್ಲಿ ಮಾಡಬಹುದು.

ಕ್ಲೇಮ್ ಸೆಟಲ್ ಮೆಂಟ್

ಪ್ರೈವೇಟ್ ಕಾರುಗಳ 96% ಕ್ಲೇಮ್ಸ್ಗಳನ್ನು ಇತ್ಯರ್ಥಗೊಳಿಸಲಾಗಿದೆ

ಥರ್ಡ್ ಪಾರ್ಟಿಗೆ ಪರ್ಸನಲ್ ಹಾನಿ

ಅನ್ ಲಿಮಿಟೆಡ್ ಹೊಣೆಗಾರಿಕೆ

ಥರ್ಡ್ ಪಾರ್ಟಿಗೆ ಆಸ್ತಿ ಹಾನಿ

₹7.5 ಲಕ್ಷಗಳವರೆಗೆ

ಪರ್ಸನಲ್ ಆಕ್ಸಿಡೆಂಟ್ ಕವರ್

₹15 ಲಕ್ಷಗಳವರೆಗೆ

ಪರ್ಸನಲ್ ಆಕ್ಸಿಡೆಂಟ್ ಕವರ್ ಪ್ರೀಮಿಯಂ

₹220/-

ಥರ್ಡ್ ಪಾರ್ಟಿ ಕಾರು ಇನ್ಶೂರೆನ್ಸಿಗಾಗಿ ಕ್ಲೈಮ್ ಮಾಡುವುದು ಹೇಗೆ?

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?

ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ!

ಡಿಜಿಟ್ ನ ಕ್ಲೇಮ್‌ಗಳ ವರದಿ ಕಾರ್ಡ್ ಅನ್ನು ಓದಿ

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ

ರವಿ ಮಿಶ್ರಾ

ಟೀಮ್ ಗೋ ಡಿಜಿಟ್ , ನಿಮ್ಮ ಬೆಂಬಲ ಮತ್ತು ತ್ವರಿತ ಪ್ರತಿಕ್ರಿಯೆಯನ್ನು ನಿಜವಾಗಿಯೂ ಪ್ರಶಂಸಿಸುತ್ತೇವೆ. ವಾಸ್ತವವಾಗಿ ನನ್ನ ಕಾರಿಗೆ ಮೋಟಾರ್ ಸೈಕಲ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಹಿಂಬದಿಯ ಬಂಪರ್, ಟ್ರಂಕ್ ಮತ್ತು ಟೈಲ್ ಲೈಟ್ ಮುರಿದು ಬಿದ್ದಿದೆ. ಅವರು ತ್ವರಿತವಾಗಿ ಪ್ರತಿಕ್ರಿಯೆಯನ್ನು ನೀಡುತ್ತಾರೆ ಮತ್ತು ಕೆಲಸಗಳು ಸುಲಭವಾಗಿ, ನಗದುರಹಿತವಾಗಿ  ಹಾಗೂ ಪೇಪರ್‌ಲೆಸ್ ನಡೆಯುತ್ತವೆ. ಗುಡ್ ಜಾಬ್ ಗೆಳೆಯ.

ದೀಪಕ್ ಕೋಟ್ಯಾನ್

ಅತ್ಯುತ್ತಮ ಸೇವೆ.  ಇದು ಪೇಪರ್‌ಲೆಸ್ ಕ್ಲೇಮ್ ರಿಜಿಸ್ಟರ್ ಮತ್ತು ಸೆಟಲ್‌ಮೆಂಟ್ ಆಗಿತ್ತು. ಧನ್ಯವಾದಗಳು, ಶ್ರೀ ಅರವಿಂದ್ ರೆಡ್ಡಿ ಮತ್ತು ತಂಡ, ನಿಮ್ಮ ಬೆಂಬಲ ಮತ್ತು ತ್ವರಿತ ಪ್ರತಿಕ್ರಿಯೆಗಾಗಿ. ಅವರ ವೃತ್ತಿಪರತೆ ಮತ್ತು ಬದ್ಧತೆಗಾಗಿ ಗೋ ಡಿಜಿಟ್  ಕಾರ್ ಇನ್ಶೂರೆನ್ಸ್ ಅನ್ನು  ಹೆಚ್ಚು ರೆಕಮೆಂಡ್ ಮಾಡುತ್ತೇನೆ.

ತ್ರಿಶಾಂತ್ ವರ್ಮಾ

ಇದು ಎರಡನೇ ಸಲ, ನಾನು ನನ್ನ ಕಾರ್ ಪಾಲಿಸಿಯನ್ನು ಡಿಜಿಟ್  ಮೂಲಕ ರಿನೀವ್ ಮಾಡಿಸಿದ್ದೇನೆ . ಡಿಜಿಟ್ ಎಕ್ಸಿಕ್ಯೂಟಿವ್ ಗೋಕುಲ್ ಅಯ್ಯಂಗಾರ್ ಅವರು ನನ್ನನ್ನು ತೃಪ್ತಿಪಡಿಸಲು ಮತ್ತು ಅತ್ಯುತ್ತಮ ಕೊಡುಗೆ ನೀಡಲು ಎಲ್ಲ ಪ್ರಯತ್ನಗಳನ್ನು ಮಾಡಿದರು. ನಾನು ವರ್ಷವಿಡೀ ಅದೇ ಬೆಂಬಲ ಮತ್ತು ಸೇವೆಯನ್ನು ಪಡೆಯುತ್ತೇನೆ ಎಂದು ಭಾವಿಸುತ್ತೇನೆ.

Show more

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರಯೋಜನಗಳು

ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ

ತಂತ್ರಜ್ಞಾನಕ್ಕೆ ಧನ್ಯವಾದಗಳು, ಆನ್‌ಲೈನ್‌ನಲ್ಲಿ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಲು ನಿಮಗೆ ಕೆಲವೇ ನಿಮಿಷಗಳು ಬೇಕಾಗುತ್ತವೆ . ನಿಮಗೆ ಬೇಕಾಗಿರುವುದು ಕೇವಲ ನಿಮ್ಮ ಬೇಸಿಕ್ ಕಾರ್ ವಿವರಗಳು (ಕಾರ್ ರಿಜಿಸ್ಟ್ರೇಷನ್ ನಂಬರ್/ಕಾರ್ ತಯಾರಿಕೆ ಮತ್ತು ಮಾಡೆಲ್ ) ಮತ್ತು ಐಡಿ ಪ್ರೂಫ್ (ಆಧಾರ್/ಪ್ಯಾನ್) ಮತ್ತು ನಿಮ್ಮ ಪಾಲಿಸಿಯನ್ನು ನಿಮಗೆ ಇಮೇಲ್ ಮಾಡಲಾಗುತ್ತದೆ!

ಪರ್ಸನಲ್ ಹಾನಿಯ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವ್ಯಕ್ತಿಯನ್ನು ರಕ್ಷಣೆ ಮಾಡುತ್ತದೆ

ದುರದೃಷ್ಟಕರ ಸಂದರ್ಭದಲ್ಲಿ ಚಾಲನೆ ಮಾಡುವಾಗ, ನೀವು ಅಪಘಾತಕ್ಕೀಡಾಗುತ್ತೀರಿ ಮತ್ತು ದೈಹಿಕವಾಗಿ ಯಾರನ್ನಾದರೂ ನೋಯಿಸಿದರೆ ಅಥವಾ ಇನ್ನೂ ಕೆಟ್ಟ ಸಂದರ್ಭದಲ್ಲಿ- ಒಬ್ಬರ ಸಾವಿಗೆ ಕಾರಣವಾದರೆ, ಈ ಸಂದರ್ಭದಲ್ಲಿ, ನಿಮ್ಮ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ ಲಿಮಿಟೆಡ್ ಹೊಣೆಗಾರಿಕೆಯ ನಷ್ಟವನ್ನು ಒಳಗೊಳ್ಳುತ್ತದೆ.

ಮೂರನೇ ವ್ಯಕ್ತಿಯ ಆಸ್ತಿ ಅಥವಾ ವಾಹನದ ಹಾನಿಯನ್ನು ಕವರ್ ಮಾಡುತ್ತದೆ.

ಒಂದುವೇಳೆ ನೀವು ಒಬ್ಬರ ಆಸ್ತಿ ಅಥವಾ ವಾಹನವನ್ನು ಹಾನಿಗೊಳಿಸಿದರೆ, ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅವರ ನಷ್ಟಕ್ಕೆ 7.5 ಲಕ್ಷ ರೂಗಳವರೆಗೆ  ರಕ್ಷಣೆ ನೀಡುತ್ತದೆ!

ಯಾವುದೇ ದೈಹಿಕ ಗಾಯಗಳ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುತ್ತದೆ

ನೀವು ಈಗಾಗಲೇ ಯಾವುದೇ ಇತರ ಪಾಲಿಸಿಯಿಂದ (ಉದಾಹರಣೆಗೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ) ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಹೊಂದಿಲ್ಲದಿದ್ದರೆ, ಥರ್ಡ್ ಪಾರ್ಟಿ  ಕಾರ್ ಇನ್ಶೂರೆನ್ಸ್ ಅದನ್ನು ಆಯ್ಕೆ ಮಾಡಲು ನಿಮಗೆ ಅನುಮತಿಸುತ್ತದೆ. ಆದ್ದರಿಂದ, ನೀವು ಅಪಘಾತಕ್ಕೆ ಸಿಲುಕಿ  ಶಾಶ್ವತ ಅಂಗವೈಕಲ್ಯ ಹೊಂದಿದರೆ ಅಥವಾ ಅಪಘಾತದಿಂದ ಸಾವು ಸಂಭವಿಸಿದರೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅದನ್ನು ಕವರ್ ಮಾಡುತ್ತದೆ.

ಅನಿರೀಕ್ಷಿತ ನಷ್ಟಗಳಿಂದ ನಿಮ್ಮನ್ನು ರಕ್ಷಿಸುತ್ತದೆ

ರಸ್ತೆಯಲ್ಲಿ ಹಲವಾರು ಕಾರುಗಳು ಓಡಾಡುವುದರಿಂದ ಮತ್ತು ಟ್ರಾಫಿಕ್ ಪ್ರಮಾಣದಿಂದ- ತಪ್ಪುಗಳು ಸಂಭವಿಸುತ್ತವೆ. ನಿಮ್ಮ ತಪ್ಪಿರುವಾಗ ಮತ್ತು ನಿಮ್ಮ ಕಾರು ಯಾರಿಗಾದರೂ ಹಾನಿ ಮಾಡಿದಾಗ ಅಥವಾ ಅವರ ವಾಹನ/ಆಸ್ತಿಗೆ ಹಾನಿ ಮಾಡಿದಾಗ- ಅಂತಹ ಹಾನಿಗಳಿಗೆ ಪಾವತಿಸುವ ವೆಚ್ಚವನ್ನು ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯಿಂದ ಭರಿಸಲಾಗುವುದು ಆದ್ದರಿಂದ ನೀವು ಅನಿರೀಕ್ಷಿತ ನಷ್ಟಗಳನ್ನು ಭರಿಸಬೇಕಾಗಿಲ್ಲ.

ಕಾನೂನುಬದ್ಧವಾಗಿ ಚಾಲನೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ

ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ಪ್ರತಿಯೊಬ್ಬ ಕಾರು ಮಾಲೀಕರು ಕನಿಷ್ಠ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಹೊಂದಿರಬೇಕು. ನಿಮ್ಮ ಕಾರನ್ನು  ನೀವು ಮತ್ತಷ್ಟು ರಕ್ಷಿಸಲು  ಬಯಸಿದರೆ, ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಗೆ ಸಹ ಆಯ್ದುಕೊಳ್ಳಬಹುದು. ಇದು ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಮತ್ತು ನಿಮ್ಮ ಸ್ವಂತ ಕಾರಿನ ರಕ್ಷಣೆಯನ್ನು ಒಳಗೊಂಡಿರುತ್ತದೆ.

ಟ್ರಾಫಿಕ್ ಪೆನಲ್ಟಿಗಳು ಮತ್ತು ದಂಡಗಳಿಂದ ನಿಮ್ಮನ್ನು ರಕ್ಷಿಸುತ್ತದೆ

ಒಂದುವೇಳೆ ಕನಿಷ್ಠ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಇಲ್ಲದೆ ನೀವು ರಸ್ತೆಯಲ್ಲಿ ಕಂಡುಬಂದರೆ, ನೀವು  2,000ರೂಗಳ ದಂಡ ಮತ್ತು/ಅಥವಾ ಮೂರು ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತೀರಿ.

ಥರ್ಡ್ ಪಾರ್ಟಿ ಇನ್ಸೂರೆನ್ಸಿನ ಅನಾನುಕೂಲಗಳು

ಸ್ವಂತ ಹಾನಿಯನ್ನು ಕವರ್ ಮಾಡುವುದಿಲ್ಲ

ದುರದೃಷ್ಟವಶಾತ್, ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ನಿಮ್ಮ ಸ್ವಂತ ಕಾರಿಗೆ ಆಗುವ ಹಾನಿ ಮತ್ತು ನಷ್ಟಗಳಿಗೆ ರಕ್ಷಣೆ ನೀಡುವುದಿಲ್ಲ.

ನೈಸರ್ಗಿಕ ವಿಕೋಪಗಳಿಗೆ ರಕ್ಷಣೆ ನೀಡುವುದಿಲ್ಲ

ಯಾವುದೇ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಉಂಟಾದ ನಿಮ್ಮ ಕಾರ್ /ವಾಹನ ಹಾನಿಯನ್ನು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಒಳಗೊಂಡಿರುವುದಿಲ್ಲ.

ಯಾವುದೇ ಕಸ್ಟಮೈಸ್ ಮಾಡಿದ ಯೋಜನೆಗಳಿಲ್ಲ

ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ನಿಮ್ಮ ನಾಲ್ಕು-ಚಕ್ರದ  ವಾಹನಗಳಿಗೆ ಲಭ್ಯವಿರುವ ಮೂಲಭೂತ ಯೋಜನೆಯಾಗಿದೆ ಮತ್ತು  ಹೆಚ್ಚುವರಿ ಪ್ರಯೋಜನಗಳು ಹಾಗೂ ಕವರ್‌ಗಳೊಂದಿಗೆ ಕಸ್ಟಮೈಸ್ ಮಾಡಲು ಸಾಧ್ಯವಿಲ್ಲ. ಆದಾಗ್ಯೂ, ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಜೊತೆಗೆ ಹಾಗೆ ಮಾಡಬಹುದು.

ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಯೋಜನೆಗಳ ವಿಧಗಳು

car-quarter-circle-chart

ಥರ್ಡ್ ಪಾರ್ಟಿ

ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್, ಕಾರ್ ಇನ್ಶೂರೆನ್ಸಿನ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ; ಇದರಲ್ಲಿ ಥರ್ಡ್ ಪಾರ್ಟಿಯ ವ್ಯಕ್ತಿ, ವಾಹನ ಅಥವಾ ಆಸ್ತಿಗೆ ಉಂಟಾದ ಹಾನಿ ಮತ್ತು ನಷ್ಟಗಳನ್ನು ಮಾತ್ರ ಕವರ್ ಮಾಡಲಾಗುತ್ತದೆ.

car-full-circle-chart

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಎನ್ನುವುದು ಕಾರ್ ಇನ್ಸೂರೆನ್ಸಿನ ಅತ್ಯಂತ ಮೌಲ್ಯಯುತ ವಿಧಗಳಲ್ಲಿ ಒಂದಾಗಿದೆ. ಇದು ನಿಮ್ಮ ಸ್ವಂತ ಕಾರಿಗೆ ಥರ್ಡ್ ಪಾರ್ಟಿಯ ಹೊಣೆಗಾರಿಕೆ ಮತ್ತು ಹಾನಿ ಎರಡನ್ನೂ ಒಳಗೊಂಡಿದೆ.

ಥರ್ಡ್ ಪಾರ್ಟಿ

ಕಾಂಪ್ರೆಹೆನ್ಸಿವ್

×
×
×
×
×
×
×

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಗೆ ಸಂಬಂಧಿಸಿದ ಪದೇ ಪದೇ ಕೇಳಲಾದ ಪ್ರಶ್ನೆಗಳು