ಬಂಪರ್ ಟು ಬಂಪರ್ ಕವರ್ ನಿಮ್ಮ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಸ್ವಲ್ಪ ಹೆಚ್ಚುವರಿ ಪ್ರೀಮಿಯಮ್ ಪಾವತಿಯೊಂದಿಗೆ ನಿಮಗೆ ಆಡ್ ಆನ್ ಆಗಿ ಲಭ್ಯವಿದೆ. ಮೊಟ್ಟಮೊದಲು ಬಂಪರ್ ಟು ಬಂಪರ್ ಕವರ್ ಎಂದರೇನು ಎಂದು ತಿಳಿಯೋಣ.
ಸಾಮಾನ್ಯ ಶಬ್ದಗಳಲ್ಲಿ ಹೇಳಬೇಕೆಂದರೆ ಇದೊಂದು ಕಾರ್ ಇನ್ಶೂರೆನ್ಸ್ ಆಡ್ - ಆನ್ ಆಗಿದೆ ಹಾಗೂ ಇದು ನಿಮ್ಮ ಕಾರಿನ ಕೆಲವು ಹಾನಿಗಳಾದ ಎಂಜಿನ್ ಹಾನಿ, ಟಯರ್ ಗಳು, ಬ್ಯಾಟರಿ, ಗಾಜು ಇವುಗಳನ್ನು ಹೊರತುಪಡಿಸಿ, ನಿಮ್ಮ ಕಾರಿನ ಪ್ರತೀ ಇಂಚನ್ನೂ ಕವರ್ ಮಾಡುತ್ತದೆ. ಇದು ನಿಮ್ಮ ಕಾರನ್ನು ಸಂರಕ್ಷಿಸುವ ಸೂಪರ್ ಹೀರೋ ಆಗಿದ್ದು ದುರಾದೃಷ್ಟಕರ ಅಪಘಾತಗಳ ಸಮಯದಲ್ಲಿ ನಿಮ್ಮ ಕಾರಿಗಾದ ಹಾನಿಯ ಮೇಲೆ 100% ಕವರೇಜ್ ನೀಡುತ್ತದೆ, ನಿಮ್ಮ ಸಾಧಾರಣ ಕಾರ್ ಇನ್ಶೂರೆನ್ಸ್ ಪಾಲಿಸಿ ತರಹ ಅಲ್ಲ.
ಇದನ್ನು ಝೀರೋ ಡಿಪ್ರಿಸಿಯೇಷನ್ ಅಥವಾ ನಿಲ್ ಡಿಪ್ರಿಸಿಯೇಷನ್ ಕಾರ್ ಇನ್ಶೂರೆನ್ಸ್ ಎಂದೂ ಕರೆಯಲಾಗುತ್ತದೆ. ಯಾಕೆಂದರೆ ಇದು ನಿಮ್ಮ ಇನ್ಶೂರೆನ್ಸ್ ಕವರ್ ನಿಂದ ಕಾರಿನ ಡಿಪ್ರಿಸಿಯೇಷನ್ ಅನ್ನು ಹೊರಗಿಟ್ಟು ನಿಮಗೆ ಸಂಪೂರ್ಣ ಕವರೇಜ್ ನೀಡುತ್ತದೆ.
ಈ ಕವರ್ ಅನ್ನು ಭಾರತದಲ್ಲಿ 2009 ರಲ್ಲಿ ಪರಿಚಯಿಸಲಾಯಿತು, ಆ ದಿನದಿಂದ ಇದು ಕಾರು ಮಾಲೀಕರಿಗೆ, ವಿಶೇಷವಾಗಿ ಕೆಳಗಡೆ ಉಲ್ಲೇಖಿಸಲಾದವರಿಗೆ, ಒಂದು ವರವಾಗಿ ಪರಿಣಮಿಸಿದೆ:
- ಹೊಸ ಕಾರು ಮಾಲಕ ಅಥವಾ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರು ಹೊಂದಿದವರಿಗೆ
- ಹೊಸ ಹಾಗೂ ಅನುಭವ ರಹಿತ ಚಾಲಕರಿಗೆ
- ದುಬಾರಿ ಬಿಡಿಭಾಗಗಳನ್ನು ಹೊಂದಿದ ಐಷಾರಾಮಿ ಸೂಪರ್ ಕಾರುಗಳ ಮಾಲೀಕರಿಗೆ
- ಹೆಚ್ಚಾಗಿ ಅಪಘಾತವಾಗುವ ಪ್ರದೇಶದಲ್ಲಿ ನೆಲೆಸಿರುವ/ ಅದರ ಹತ್ತಿರವಿರುವ ಮಾಲೀಕರಿಗೆ
- ತಮ್ಮ ಕಾರಿನ ಸಣ್ಣ ಪುಟ್ಟ ಡೇಂಟ್ ಗಳ ಹಾಗೂ ಉಬ್ಬುಗಳ ಬಗ್ಗೆ ಚಿಂತಿಸುವವರಿಗೆ
ಇದು ತಮ್ಮ ಕಾರಿನ ಸಣ್ಣ ಪುಟ್ಟ ಡೇಂಟ್ ಗಳ ಹಾಗೂ ಉಬ್ಬುಗಳ ಬಗ್ಗೆ ಚಿಂತಿಸುವ ಹೊಸ್ ಕಾರು ಮಾಲೀಕರಲ್ಲಿ ಅಥವಾ ದುಬಾರಿ ಹಾಗೂ ಅಪರೂಪದ ಬಿಡಿಭಾಗಗಳನ್ನು ಹೊಂದಿದ ಐಷಾರಾಮಿ ಸೂಪರ್ ಕಾರುಗಳ ಮಾಲೀಕರಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇಂತಹ ಮಾಲೀಕರಲ್ಲಿ 100% ಕವರೇಜ್ ಗಾಗಿ ಹೆಚ್ಚುವರಿ ಪ್ರೀಮಿಯಮ್ ಪಾವತಿಸಲು ಹೇಳಿದರೆ, ಅವರಿಗೆ ಈ ಮೊತ್ತವು ತಮ್ಮ ಕಾರಿನ ಸಂರಕ್ಷಣೆಯ ಮುಂದೆ ಕ್ಷುಲ್ಲಕ ಎನಿಸುತ್ತದೆ.
ಬಳಕೆ : ಬಂಪರ್ ಟು ಬಂಪರ್ ಕವರ್ ಹೊಂದಿರುವ ಕಾರ್ ಇನ್ಶೂರೆನ್ಸ್ ಪ್ರೀಮಿಯಮ್ ಕ್ಯಾಲ್ಕುಲೇಟ್ ಮಾಡುವ ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್