ನಿಮ್ಮ ವಾಹನದೊಳಗೆ ಸಿ ಎನ್ ಜಿ ಕಿಟ್ ಅನ್ನು ಸೇರಿಸುವುದು ಅಥವಾ ಮೊದಲೇ ಫಿಟ್ ಆಗಿರುವ ಸಿ ಎನ್ ಜಿ ವಾಹನವನ್ನು ಖರೀದಿಸುವುದನ್ನು ಹೆಚ್ಚಾಗಿ ಏರುತ್ತಿರುವ ಇಂಧನ ಬೆಲೆಗೆ ಪರಿಹಾರ ಎಂದು ಕಾಣಲಾಗುತ್ತಿದೆ.
ಆದರೆ ಸಿ ಎನ್ ಜಿ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದನ್ನು ಹೊರತುಪಡಿಸಿ, ನಿಮ್ಮ ಕಾರನ್ನು ಸಿ ಎನ್ ಜಿ ಮೇಲೆ ಓಡುವಂತೆ ಮಾರ್ಪಾಡು ಮಾಡುವ ಮೊದಲು, ನಿಮಗೆ ಕೆಲವು ಮುನ್ನೆಚ್ಚರಿಕೆಯ ವಿಷಯಗಳು ತಿಳಿದಿರಬೇಕು:
ಇಂಧನದ ಲಭ್ಯತೆ
ನೀವು ಸಿ ಎನ್ ಜಿ ಗೆ ಬದಲಾಗುವ ನಿರ್ಧಾರ ತೆಗೆದುಕೊಳ್ಳುವ ಮೊದಲು, ನಿಮ್ಮ ಪ್ರದೇಶದಲ್ಲಿ ಸಿ ಎನ್ ಜಿ ಇಂಧನದ ಲಭ್ಯತೆಯನ್ನು ಪರಿಶೀಲಿಸಲು ಮರೆಯಬೇಡಿ, ಅಂದರೆ ಹತ್ತಿರದ ಸಿ ಎನ್ ಜಿ ಸ್ಟೇಶನ್ ತಲುಪಲು ನೀವು ಎಷ್ಟು ದೂರ ಹೋಗಬೇಕಾಗುತ್ತದೆ ಎಂದು. ಮೂಲತಃ, ನಿಮ್ಮ ಇಂಧನವನ್ನು ಭರಿಸಲು ಅದಕ್ಕಿಂತಲೂ ಹೆಚ್ಚಿನ ಇಂಧನ ಬಳಕೆಯಾಗದಂತೆ ಪರಿಶೀಲಿಸಿ!
ಬೆಲೆ ವಿರುದ್ಧ ಸಾಮರ್ಥ್ಯ
ಸಿ ಎನ್ ಜಿ ವಾಹನಗಳು ಹೆಚ್ಚು ಇಂಧನ ಶಕ್ತಿಯನ್ನು ಹೊಂದಿವೆ, ಆದರೆ ವಾಸ್ತವವಾಗಿ ಪೆಟ್ರೋಲ್ ಎಂಜಿನ್ ಗೆ ಹೋಲಿಸಿದರೆ, ನಿಮ್ಮ ವಾಹನದ ಸಾಮರ್ಥ್ಯ ಕಡಿಮೆಯಾಗುತ್ತದೆ.
ಸಿ ಎನ್ ಜಿ ಯೊಂದಿಗೆ ಕಾರನ್ನು ಓಡಿಸುವುದರಿಂದ ನಿಮಗೆ ಹೆಚ್ಚಿನ ಇಂಧನ ಶಕ್ತಿ ದೊರೆಯುತ್ತದೆ, ಆದರೆ ಒಂದು ಮುಖ್ಯ ನಷ್ಟವೇನೆಂದರೆ ಕಾರಿನ ಸಾಮರ್ಥ್ಯವು ಕುಗ್ಗುತ್ತದೆ.
ನಿಮ್ಮ ಪೆಟ್ರೋಲ್ ಎಂಜಿನ್ ಗೆ ಹೋಲಿಸಿದರೆ, ಥ್ರಾಟ್ಲ್ ಪ್ರತಿಕ್ರಿಯೆ ಸ್ವಲ್ಪ ಕಡಿಮೆಯಾಗುತ್ತದೆ; ನಿಮಗೆ ಒಂದು ಸಿ ಎನ್ ಜಿ ಇರುವ ಎಂಜಿನ್ ನಿಂದ ಅದೇ ಪಂಚ್ ದೊರೆಯುವುದಿಲ್ಲ. ಹಾಗೂ, ನೀವು ನಿಮ್ಮ ಕಾರನ್ನು ಹೆಚ್ಚು ನಿಯಮಿತವಾಗಿ ಸರ್ವಿಸಿಂಗ್ ಗೆ ನೀಡಬೇಕಾಗುತ್ತದೆ.
ಇದಕ್ಕೆ ಕಾರಣ, ಇಂಧನವು ವಾಲ್ವ್ ಹಾಗೂ ಸಿಲಿಂಡರ್ ಗೆ ಲೂಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ, ಆದರೆ ಸಿ ಎನ್ ಜಿ ಹಾಗೆ ಮಾಡುವುದಿಲ್ಲ. ಇದರಿಂದ ಇದು ಬೇಗನೇ ತುಕ್ಕು ಹಿಡಿಯುತ್ತದೆ.
ಬಾಹ್ಯ ಅಥವಾ ಆಂತರಿಕ ಸಿ ಎನ್ ಜಿ (CNG) ಕಿಟ್ ಗಳು
ನಿಮ್ಮ ವಾಹನಕ್ಕೆ ಸಿ ಎನ್ ಜಿ ಅನ್ನು ಅಳವಡಿಸುವ ಎರಡು ವಿಧಾನಗಳಿವೆ - ಒಂದು ಹಳೆಯ ಕಾರಿಗೆ ಇದನ್ನು ಸೇರಿಸುವುದು ಅಥವಾ ಮೊದಲೇ ಫಿಟ್ ಆಗಿರುವ ವಾಹನವನ್ನು ಖರೀದಿಸುವುದು. ಆದರೆ ಉತ್ತಮ ಯಾವುದು? ನಿಮ್ಮ ಸ್ವಂತ ವಾಹನಕ್ಕೆ ಹೊಸ ಸಿ ಎನ್ ಜಿ ಕಿಟ್ ಅನ್ನು ಅಳವಡಿಸುವುದು ಅಗ್ಗವಾಗಿ ಕಂಡುಬಂದರೂ, ನೀವು ಹೊಂದಾಣಿಕೆಯನ್ನು ಪರಿಶೀಲಿಸಬೇಕಾಗುತ್ತದೆ. ನಮ್ಮ ಶಿಫಾರಸು ಏನೆಂದರೆ ನೀವು ಫ್ಯಾಕ್ಟರಿ ಫಿಟ್ ಆಗಿರುವ ಸಿ ಎನ್ ಜಿ ಕಿಟ್ ಅನ್ನು ಪಡೆಯಿರಿ, ಏಕೆಂದರೆ ಇವು ವಾರಂಟಿಯೊಂದಿಗೆ ಹಾಗೂ ಹೆಚ್ಚಿನ ವೆಚ್ಚಕ್ಕೆ ಕಾರಣವಾಗುವ ನಿಯಮಿತ ಸರ್ವಿಸಿಂಗ್ ನ ಆಯ್ಕೆಗಳೊಂದಿಗೆ ಬರುತ್ತದೆ.
ನಿರ್ವಹಣೆಯ ವೆಚ್ಚ
ಸಿ ಎನ್ ಜಿ ವಾಹನಗಳಿಗೆ ಸಾಕಷ್ಟು ನಿರ್ವಹಣೆಯ ಅಗತ್ಯವಿರುತ್ತದೆ, ವಿಶೇಷವಾಗಿ ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ. ಲೀಕೇಜ್, ಇನ್ಸುಲೇಷನ್ ಕಳೆದುಕೊಂಡ ವಯರ್ ಇಂತಹ ವಿಷಯಗಳನ್ನು ತಪ್ಪಿಸಲು ನೀವು ನಿಮ್ಮ ವಾಹನದ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಬೇಕಾಗುತ್ತದೆ.