ಬೈಕ್ ಇನ್ಶೂರೆನ್ಸ್ ಅನ್ನು ಹೋಲಿಕೆ ಮಾಡಿ

ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ ಮತ್ತು ಹೋಲಿಕೆ ಮಾಡಿ
solo Bike riding Image
search

I agree to the  Terms & Conditions

It's a brand new bike

Continue with

-

(Incl 18% GST)

ಟು-ವೀಲರ್ ಇನ್ಶೂರೆನ್ಸ್ ಅನ್ನು ಏಕೆ ಹೋಲಿಸಬೇಕು?

ನೀವು ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಹೋಲಿಸಬೇಕು?

ಇನ್ಶೂರೆನ್ಸ್ ಪೂರೈಕೆದಾರರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ

ನೀವು ಇನ್ಶೂರೆನ್ಸ್ ಕಂಪನಿಗಳನ್ನು ಅವುಗಳ ವಿಶ್ವಾಸಾರ್ಹತೆಯ ಆಧಾರದ ಮೇಲೆ ಹೋಲಿಸಬಹುದು ಮತ್ತು ಅವುಗಳನ್ನು ಶ್ರೇಣೀಕರಿಸಬಹುದು. ನೀವು ಜನರ ವಿಮರ್ಶೆಗಳನ್ನು ಹುಡುಕಬಹುದು ಮತ್ತು ಯಾವ ಕಂಪನಿಗಳು ತಾವು ನೀಡುತ್ತಿರುವ ಸೇವೆಯಲ್ಲಿ ಉತ್ತಮವಾಗಿವೆ ಮತ್ತು ಕ್ಲೇಮ್‌ಗಳನ್ನು ಇತ್ಯರ್ಥಪಡಿಸುವಲ್ಲಿ  ಉತ್ತಮವಾಗಿವೆ ಎಂಬುದನ್ನು ತಿಳಿದುಕೊಳ್ಳಬಹುದು. ನಂತರ ಅತ್ಯುತ್ತಮ  ಇನ್ಶೂರೆನ್ಸ್ ಕಂಪನಿಯನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ.

ನಿಮ್ಮ ಪಾಲಿಸಿ ನಿಯಮಗಳನ್ನು ತಿಳಿದುಕೊಳ್ಳಿ

ನಿಮ್ಮ ಪಾಲಿಸಿಯನ್ನು ಸ್ವತಃ ನಿಮ್ಮಷ್ಟಕ್ಕೆ ನೀವೇ ಅರ್ಥಮಾಡಿಕೊಂಡಾಗ, ನೀವು ಯಾವುದೇ ತಜ್ಞರು ಅಥವಾ ಇನ್ಶೂರೆನ್ಸ್ ಏಜೆಂಟ್ ಅನ್ನು ಅವಲಂಬಿಸಬೇಕಾಗಿರುವುದಿಲ್ಲ. ಪಾಲಿಸಿಯು ಏನನ್ನು ಒಳಗೊಂಡಿದೆ ಮತ್ತು ಏನನ್ನು ಒಳಗೊಂಡಿಲ್ಲ ಎಂಬುದರ ಕುರಿತು ನಿಮಗೆ ಸಂಪೂರ್ಣ ಮಾಹಿತಿ ನೀಡಿದಾಗ, ನೀವು ನಿಮ್ಮದೇ ಆದ ನಿಷ್ಪಕ್ಷಪಾತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನೀವು ಹಲವಾರು ಇನ್ಶೂರೆನ್ಸ್ ಕಂಪನಿಗಳ ಪಾಲಿಸಿಗಳನ್ನು ಅಧ್ಯಯನ ಮಾಡಿದರೆ ಹಾಗೂ ಹೋಲಿಕೆ ಮಾಡಿದರೆ ಮಾತ್ರ ನಿಮಗೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ.

ಕ್ಲೇಮ್ ಪ್ರಕ್ರಿಯೆಯಲ್ಲಿ ಹೊಂದಾಣಿಕೆಯ ಬಗ್ಗೆ ತಿಳಿದಿರಲಿ

ವಿವಿಧ ಪಾಲಿಸಿಗಳ ಸರಿಯಾದ ಸಂಶೋಧನೆ ಮತ್ತು ಹೋಲಿಕೆಯು, ನಿಮಗೆ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿಗಳ ಕ್ಲೇಮ್ ಪ್ರಕ್ರಿಯೆಗಳ ಬಗ್ಗೆ ತಿಳಿಸುತ್ತದೆ. ನಿಜವಾದ ಕ್ಲೇಮ್‌ ಸಂಗ್ರಹಿಸಿದ ನಂತರ ನೀವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ  ತಿಳಿದುಕೊಳ್ಳುತ್ತೀರಿ. ನಂತರ ನಿಮಗೆ ಹೆಚ್ಚು ಹೊಂದಿಕೆಯಾಗುವಂತಹ ಪಾಲಿಸಿಯೊಂದಿಗೆ ನೀವು ಮುಂದುವರೆಯುತ್ತೀರಿ.

ಕೈಗೆಟುಕುವ ಡೀಲ್ ಅನ್ನು ಹುಡುಕಿ

ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿಗಳು ನೀಡುವ ಡೀಲ್‌ಗಳನ್ನು ನೀವು ಪರಿಶೀಲಿಸಬಹುದು. ವಿವಿಧ ಕಂಪನಿಗಳು ಒದಗಿಸುವ ಕವರೇಜ್ ವಿರುದ್ಧದ ಪ್ರೀಮಿಯಂಗಳನ್ನು ಪರಿಶೀಲಿಸುವುದರಿಂದ, ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.

ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಪಡೆದುಕೊಳ್ಳಿ

ಕೆಲವು ಇನ್ಶೂರೆನ್ಸ್ ಕಂಪನಿಗಳು ತಮ್ಮ ಕೆಲವು ಬೈಕ್ ಇನ್ಶೂರೆನ್ಸ್ ಯೋಜನೆಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡುತ್ತಿರಬಹುದು. ಆದ್ದರಿಂದ ಒಂದುವೇಳೆ ನೀವು ಸಂಶೋಧನೆ ಮತ್ತು ಹೋಲಿಕೆ ಮಾಡಲು ಅಲಕ್ಷಿಸಿದರೆ, ಇಂತಹ ರಿಯಾಯಿತಿಗಳಿಂದ ನೀವು ತಪ್ಪಿಸಿಕೊಳ್ಳುವಿರಿ. ನೀವು ಖಂಡಿತವಾಗಿಯೂ ರಿಯಾಯಿತಿಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ!

ಬೈಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಸುವಾಗ ನೀವು ಪರಿಗಣಿಸಬೇಕಾದ ಅಂಶಗಳು

ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಹೋಲಿಸುವುದು?

ಆನ್‌ಲೈನ್‌ನಲ್ಲಿ ಟು-ವೀಲರ್ ಇನ್ಶೂರೆನ್ಸ್ ಅನ್ನು ಹೋಲಿಕೆ ಮಾಡಿ

ಆಫ್‌ಲೈನ್‌ನಲ್ಲಿ ಟು-ವೀಲರ್ ಇನ್ಶೂರೆನ್ಸ್ ಅನ್ನು ಹೋಲಿಕೆ ಮಾಡಿ

ನಿಮ್ಮ ಡ್ರಾಯಿಂಗ್ ರೂಮಿನ ಸೌಕರ್ಯದಲ್ಲಿ ನಿಮ್ಮ ಲ್ಯಾಪ್‌ಟಾಪ್ ತೆರೆಯಿರಿ. ಪಾಲಿಸಿಗಳನ್ನು ಹೋಲಿಕೆ ಮಾಡುವ ವೆಬ್‌ಸೈಟ್‌ಗಳಿಗೆ ಲಾಗ್ ಇನ್ ಆಗಿರಿ ಮತ್ತು ನೀವು ಸಿದ್ಧರಾಗುತ್ತೀರಿ.

ನಿಮ್ಮ ಪ್ರದೇಶದ ಹೆಸರಾಂತ ಹಾಗೂ ಉತ್ತಮ ಮೊತ್ತದಲ್ಲಿ, ಸರಿಯಾದ ಪಾಲಿಸಿಗಳನ್ನು ನೀಡುವ ಸ್ವತಂತ್ರ ಇನ್ಶೂರೆನ್ಸ್ ಏಜೆಂಟ್ (ಬ್ರೋಕರ್) ಅನ್ನು ಭೇಟಿ ಮಾಡಿ

ನಿಮ್ಮ ಬೈಕ್‌ನ ವಿವರಗಳನ್ನು ನೀವೇ ಭರ್ತಿ ಮಾಡಿ. ಅಗತ್ಯವಿದ್ದರೆ ವಿಶೇಷಣಗಳು, ಐಡಿವಿ, ಆಡ್-ಆನ್‌ಗಳನ್ನು ಸೇರಿಸಿ.

ನಿಮ್ಮ ಬೈಕ್‌ನ ಎಲ್ಲಾ ವಿವರಗಳನ್ನು ಏಜೆಂಟ್‌ಗೆ ನೀಡಿರಿ. ಇದರಿಂದ ಏಜೆಂಟ್ ನಿಮಗೆ ಸೂಕ್ತವಾದ ಪಾಲಿಸಿಗಳನ್ನು ಒದಗಿಸಲು ಮಾಹಿತಿಯನ್ನು ಪ್ರಕ್ರಿಯೆಗೊಳಿಸಬಹುದು.

ಹೊಸ ಯುಗದ ಫಿನ್‌ಟೆಕ್ ಕಂಪನಿಗಳು ನೀವು ನಿರ್ದಿಷ್ಟಪಡಿಸಿದ ವಿವರಗಳ ಪ್ರಕಾರ, ಪಾಲಿಸಿಗಳು ಮತ್ತು ದರಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ.

ಬ್ರೋಕರ್ ತನ್ನ ಸಂಶೋಧನೆಯನ್ನು ಮಾಡಿದ ನಂತರ ವಿವಿಧ ಕಂಪನಿಗಳ ಉಲ್ಲೇಖಗಳನ್ನು (quotes) ನೀಡುತ್ತಾನೆ.

ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಅನ್ನು ಹೋಲಿಸುವ ಪ್ರಯೋಜನಗಳು

ಸಮಯವನ್ನು ಉಳಿಸುತ್ತದೆ

ಬೈಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಸುವ ಅನುಕೂಲತೆಯ ಅಂಶವೇ ಪ್ರಮುಖ ಪ್ರಯೋಜನವಾಗಿದೆ. ನಿಮ್ಮ ವಿವರಗಳನ್ನು ಸಿದ್ಧವಾಗಿಟ್ಟುಕೊಂಡು, ನೀವು ಆನ್‌ಲೈನ್‌ನಲ್ಲಿ ಉಚಿತ ಉಲ್ಲೇಖಗಳನ್ನು (quotes) ಪಡೆಯಬಹುದು ಮತ್ತು ವಿಭಿನ್ನ ಪಾಲಿಸಿಗಳನ್ನು ಹೋಲಿಸಬಹುದು, ಅದು ಖಂಡಿತವಾಗಿಯೂ ನಿಮ್ಮ ಅಮೂಲ್ಯ ಸಮಯವನ್ನು ಉಳಿಸುತ್ತದೆ.

ಸುಲಭ ವಿಧಾನ

ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಹೋಲಿಸಲು ಅನುಸರಿಸಬೇಕಾದ ಪ್ರಕ್ರಿಯೆಯು ಸರಳವಾಗಿದೆ. ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಸುವುದರಿಂದ, ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಪಾಲಿಸಿಯನ್ನು ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ನಿಮಗೆ ಸಿಗುತ್ತದೆ.  ಇದರಿಂದ ನಿಮ್ಮ ಸ್ವಂತ ಸಮಯದಲ್ಲಿ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ನೀವು ಹೆಚ್ಚಿನ ಸಂಶೋಧನೆಯನ್ನು ಮಾಡಬಹುದು.

ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಪಾಲಿಸಿಯನ್ನು ಆಯ್ಕೆಮಾಡುವ ವಿಷಯ ಬಂದಾಗ, ನಾವೆಲ್ಲರೂ ವಿಭಿನ್ನ ಅವಶ್ಯಕತೆಗಳನ್ನು ಹೊಂದಿದ್ದೇವೆ. ಪ್ರೀಮಿಯಂ ಕ್ಯಾಲ್ಕುಲೇಟರ್‌ನಂತಹ ಪರಿಕರಗಳ (tools) ಆಕ್ಸೆಸ್'ನೊಂದಿಗೆ , ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಸುವುದು ನಿಮ್ಮಲ್ಲಿರುವ DIY ವ್ಯಕ್ತಿಯನ್ನು "ಹೌದು!" ಎನ್ನುವಂತೆ ಮಾಡುತ್ತದೆ. ನೀವು ಬಯಸಿದಲ್ಲಿ ರಾತ್ರಿ 2 ಗಂಟೆಯ ಸಮಯದಲ್ಲೂ ನಿಮ್ಮ ಪ್ರೀಮಿಯಂ ಅನ್ನು ಲೆಕ್ಕ ಹಾಕಬಹುದು!

ಸುಲಭ ಮತ್ತು ಪ್ರಭಾವವಿಲ್ಲದ ನಿರ್ಧಾರ-ಮಾಡುವಿಕೆ

ಇನ್ಶೂರೆನ್ಸ್ ಬ್ರೋಕರ್ ಅನ್ನು ಮುಖತಃ ಭೇಟಿ ಮಾಡುವುದನ್ನು ಹೋಲಿಸಿದರೆ,  ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಅನ್ನು ಹೋಲಿಸುವುದು  ನಿಮಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ. ಸರಿಯಾದ ಕವರೇಜ್ ಅನ್ನು ಆಯ್ಕೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ ಮತ್ತು ನಿಮ್ಮ ಪಾಲಿಸಿಗಾಗಿ ವಿಭಿನ್ನ ಆಡ್-ಆನ್‌ಗಳನ್ನು ಮಿಕ್ಸ್ ಅಂಡ್ ಮ್ಯಾಚ್ ಮಾಡಲು ಇಂಟರ್ನೆಟ್ ಅತ್ಯುತ್ತಮ ಸ್ಥಳವಾಗಿದೆ.

ಬೈಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಸುವಾಗ ನೆನಪಿಡಬೇಕಾದ ಚೆಕ್ ಲಿಸ್ಟ್

  • ಇನ್ಶೂರೆನ್ಸ್ ಕಂಪನಿಯ ವಿಶ್ವಾಸಾರ್ಹತೆ  - ಇಂದು ಡಜನ್‌ಗಟ್ಟಲೇ ಇನ್ಶೂರೆನ್ಸ್ ಕಂಪನಿಗಳು ಮಾರುಕಟ್ಟೆಯಲ್ಲಿ ಇವೆ. ಆದರೆ ಇನ್ಶೂರೆನ್ಸ್ ಕಂಪನಿಗಳ ಹಿನ್ನೆಲೆಯನ್ನು ಪರಿಶೀಲಿಸಲು, ಸ್ವಲ್ಪ ಸಮಯ ನೀಡುವುದು ಅತ್ಯಗತ್ಯ. ಕಂಪನಿಯ ಕ್ಲೇಮ್ ಇತ್ಯರ್ಥದ ಅನುಪಾತವನ್ನು ಖಚಿತಪಡಿಸಿಕೊಳ್ಳಲು, ನೀವು ಆನ್‌ಲೈನ್‌ನಲ್ಲಿ ಅದಕ್ಕೆ ಸಂಬಂಧಿಸಿದ ವಿಮರ್ಶೆಗಳನ್ನು ನೋಡಬಹುದು.

  • ನೀವು ಏನು ಪಾವತಿಸುವಿರಿ - ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್‌ಗಳು, ನೀವು ಕವರೇಜ್‌ಗಾಗಿ ಪಾವತಿಸುವ ಮೊತ್ತದ ಶ್ರೇಣಿಯ ಮೇಲೆ ಬೆಳಕು ಚೆಲ್ಲುತ್ತವೆ. ನೀವು ವಿವರಗಳನ್ನು ಭರ್ತಿ ಮಾಡಿ ಮತ್ತು ಬಟನ್ ಒತ್ತಿದರೆ, ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವು ಪಾಪ್ಅಪ್ ಆಗುತ್ತದೆ. ಆಡ್-ಆನ್‌ಗಳ ಬೆಲೆಯನ್ನು ನೋಡಿ ಮತ್ತು ಒಳಗೊಂಡಿರುವ ನಿಜವಾದ ಅಪಾಯಗಳೊಂದಿಗೆ ಅದನ್ನು ತುಲನೆ ಮಾಡಿ.

  • ನಿಮ್ಮ ಅಗತ್ಯಗಳ ಸ್ಪಷ್ಟತೆ - ಪಾಲಿಸಿ ಖರೀದಿದಾರರಾಗಿ, ನೀವು ಬೈಕ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಂಡಾಗ, ನಿಮಗೆ ಯಾವ ರೀತಿಯ ಆಡ್-ಆನ್‌ಗಳು ಬೇಕಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ನಿಮ್ಮ ವಿಶೇಷ ಅಧಿಕಾರವಾಗಿದೆ. ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಲು, ಸರಿಯಾದ ಆಡ್-ಆನ್‌ಗಳೊಂದಿಗೆ ಸರಿಯಾದ ಪಾಲಿಸಿಯಲ್ಲಿ ಮುಂದುವರಿಯುವ ಮೊದಲು ಸ್ಪಷ್ಟತೆ ಇರಬೇಕಾದುದು ಮುಖ್ಯವಾಗಿದೆ.

  • ಎರಡೂ ಡಿಡಕ್ಟಿಬಲ್ಸ್- ಇದು ಜೂಜು, ಆದ್ದರಿಂದ ನಿಮ್ಮ ಕಾರ್ಡ್‌ಗಳನ್ನು ಸರಿಯಾಗಿ ಪ್ಲೇ ಮಾಡಿ. ಇತರವುಗಳ ಮೇಲೆ ನೀವು ಕವರ್ ಮಾಡಲು ಬಯಸುವ ನಿರ್ದಿಷ್ಟ ಅಪಾಯಗಳು ನಿಮಗೆ ಮಾತ್ರ ತಿಳಿದಿರುತ್ತದೆ. ಕಡಿಮೆ ಅಪಾಯದ ಕವರ್ ಆಯ್ಕೆಗಳಿಗಾಗಿ, ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್ಸ್ ಆರಿಸುವುದರಿಂದ, ನಿಮ್ಮ ಪ್ರೀಮಿಯಂ ಮೇಲಿನ ಹೊರೆ ಕಡಿಮೆಯಾಗುತ್ತದೆ.