ನಿಮ್ಮ ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ (comprehensive two wheeler insurance policy) ಮೊದಲ ನವೀಕರಣದ ನಂತರ ಮಾತ್ರವೇ ನಿಮ್ಮ ನೋ ಕ್ಲೈಮ್ ಬೋನಸ್ ಪ್ರಾರಂಭ ಆಗುತ್ತದೆ. (ಗಮನಿಸಿ, ಎನ್.ಸಿ.ಬಿ(NCB)ನಿಮ್ಮ ಪ್ರೀಮಿಯಂನ ಸ್ವಂತ ಡ್ಯಾಮೇಜ್ ಕಾಂಪೊನೆಂಟ್ಗೆ ಅನ್ವಯಿಸುತ್ತದೆ. ಇದು ಐಡಿವಿ(IDV)ಅಥವಾ ಬೈಕ್ನ ಇನ್ಶೂರೆನ್ಸ್ ಘೋಷಿತ ಮೌಲ್ಯವನ್ನು ಆಧರಿಸಿ ಲೆಕ್ಕಹಾಕಿದ ಪ್ರೀಮಿಯಂ, ಬೈಕಿನ ಸವೆತ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ. ಬೋನಸ್, ಥರ್ಡ್ ಪಾರ್ಟಿ ಕವರ್ ಪ್ರೀಮಿಯಂಗೆ ಅನ್ವಯಿಸುವುದಿಲ್ಲ)
ನೀವು ಮೊದಲ ಕ್ಲೇಮ್-ಫ್ರೀ ವರ್ಷದ ನಂತರ, ನಿಮ್ಮ ಪ್ರೀಮಿಯಂನಲ್ಲಿ 20% ರಿಯಾಯಿತಿಯನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ. ಪ್ರತಿ ವರ್ಷ ಪಾಲಿಸಿ ನವೀಕರಣದ ಸಮಯದಲ್ಲಿ, ರಿಯಾಯಿತಿಯು 5-10% ರಷ್ಟು ಹೆಚ್ಚಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರತಿ ವರ್ಷವೂ ನೀವು ಕ್ಲೈಮ್ ಮಾಡದಿದ್ದಲ್ಲಿ, ರಿಯಾಯಿತಿಯು ಸಂಗ್ರಹವಾಗುತ್ತದೆ. ಬಹುತೇಕವಾಗಿ ಪಾಲಿಸಿದಾರರ ಉತ್ತಮ ನಡವಳಿಕೆಯ ಪ್ರತಿಫಲವು ಉತ್ತಮವಾಗುತ್ತಲೇ ಇರುತ್ತದೆ.
ಉದಾಹರಣೆಗೆ, ನೀವು ಮೊದಲ ಪಾಲಿಸಿ ವರ್ಷದ ಕೊನೆಯಲ್ಲಿ 20% ಎನ್.ಸಿ.ಬಿ(NCB)ಪಡೆದಿದ್ದರೆ ಮತ್ತು ಎರಡನೇ ವರ್ಷದಲ್ಲಿ ನೀವು ಕ್ಲೈಮ್ ಮಾಡದಿದ್ದರೆ, ನಿಮ್ಮ ಪ್ರೀಮಿಯಂ ಮೇಲಿನ ರಿಯಾಯಿತಿಯು 25-30% ವರೆಗೆ ಹೆಚ್ಚಾಗುತ್ತದೆ, 30-35%ರಷ್ಟು ನಂತರದ ವರ್ಷದಲ್ಲಿ, ಮತ್ತು ಹೀಗೆಯೇ ಸಾಗುತ್ತದೆ. ಈ ರೀತಿಯಾಗಿ, ನೀವು 5 ವರ್ಷಗಳಲ್ಲಿ ನಿಮ್ಮ ಪ್ರೀಮಿಯಂನಲ್ಲಿ 50% ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಪರಿಶೀಲಿಸಿ: ಎನ್.ಸಿ.ಬಿ(NCB)ರಿಯಾಯಿತಿಯೊಂದಿಗೆ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಪಡೆಯಲು ಬೈಕ್ ಇನ್ಶುರೆನ್ಸ್ ಕ್ಯಾಲ್ಕುಲೇಟರ್ ಬಳಸಿ.