ಇದು ಮಾನವನ ಸ್ವಭಾವ. ನಾವೆಲ್ಲರೂ ನಾವು ಇಷ್ಟಪಡುವ ವಸ್ತುಗಳನ್ನು ರಕ್ಷಿಸಲು ಬಯಸುತ್ತೇವೆ. ವಿಶೇಷವಾಗಿ ಇದು ನಿಮ್ಮ ಟು-ವೀಲರ್ ವೆಹಿಕಲ್ ಆಗಿದ್ದರೆ ಮತ್ತು ಇನ್ನೂ ವಿಶೇಷವಾಗಿ ನೀವು ಅದನ್ನು ಖರೀದಿಸಿ ಸ್ವಲ್ಪ ಸಮಯ ಕಳೆದಿದ್ದರೆ! ನಮಗೆ ಪ್ರಿಯವಾದ ವಿಷಯಗಳು ಯಾವಾಗಲೂ ಹೊಸದರಂತೆ ಇರುವುದನ್ನು ಖಚಿತಪಡಿಸಿಕೊಳ್ಳಲು, ಏನಾದರೂ ಉಪಾಯಗಳಿದ್ದರೆ ಊಹಿಸಿ.
ಹೌದು! ಮ್ಯಾಜಿಕ್ ಎನ್ನುವುದು ಅಸ್ತಿತ್ವದಲ್ಲಿಲ್ಲ. ಆದರೆ ಕಾಂಪ್ರ್ಹೆನ್ಸಿವ್ ಬೈಕ್ ಇನ್ಶೂರೆನ್ಸಿನಲ್ಲಿ, ನಾವು ಝೀರೋ ಡೆಪ್ರಿಸಿಯೇಷನ್ ಕವರ್ ಎಂದು ಕರೆಯಲ್ಪಡುವ ಕೆಲವೊಂದನ್ನು ಹೊಂದಿದ್ದೇವೆ ಮತ್ತು ಅಂತಹದ್ದು ಏನನ್ನಾದರೂ ಮಾಡುವ ಗುರಿಯನ್ನು ಹೊಂದಿದ್ದೇವೆ. ನಿಮ್ಮ ಬೈಕ್ ಅನ್ನು ನೀವು ಪಡೆದುಕೊಂಡಾಗ ಹೇಗಿತ್ತೋ, ಹಾಗೇ ಹೊಸದರಂತೆ, ಉತ್ತಮವಾಗಿ ಇರಿಸಿಕೊಳ್ಳಲು. ನಿಮ್ಮ ಬೈಕ್ನ ಸ್ವಂತ ಆಂಟಿ ಏಜಿಂಗ್ ಕ್ರೀಮ್ ಬಗ್ಗೆ ಯೋಚಿಸಿ. ಅದು ಸಿಗುವುದಿಲ್ಲವೇ? ನಿರೀಕ್ಷಿಸಿ, ನಾವು ವಿವರಿಸುತ್ತೇವೆ.
ಝೀರೋ ಡೆಪ್ರಿಸಿಯೇಷನ್ ಬೈಕ್ ಇನ್ಶೂರೆನ್ಸ್ ಎಂದರೇನು?
ಝೀರೋ ಡೆಪ್ರಿಸಿಯೇಷನ್ ಎಂದರೇನು ಎಂದು ವಿವರಿಸುವ ಮೊದಲು, ಡೆಪ್ರಿಸಿಯೇಷನ್ ಎಂದರೆ ಏನು ಎಂದು ತಿಳಿಯೋಣ. ಡೆಪ್ರಿಸಿಯೇಷನ್ ಎಂದರೆ ನಿಮ್ಮ ಬೈಕ್ ಹಳೆಯದಾಗುತ್ತಿದ್ದಂತೆ ಅದರ ಮೌಲ್ಯ ಕಡಿಮೆಯಾಗುವುದು. ಆದ್ದರಿಂದ, ನಿಮ್ಮ ಬೈಕ್, ಹೊಸದಾಗಿದ್ದಾಗ 1 ಲಕ್ಷ ರೂಗಳಷ್ಟು ಮೌಲ್ಯದ್ದಾಗಿದ್ದರೆ, ಈಗ ಅದರ ಮೌಲ್ಯ 50,000, ರೂಗಳು. ಉಳಿದ 50,000 ರೂಗಳು ನಿಮ್ಮ ಬೈಕ್ ಅನುಭವಿಸಿದ ಡೆಪ್ರಿಸಿಯೇಷನ್ ಆಗಿದೆ.
ಡೆಪ್ರಿಸಿಯೇಷನ್ ಎಂದರೆ ನಿಮ್ಮ ಬೈಕ್ ಹಳೆಯದಾಗುತ್ತಿದ್ದಂತೆ ಅದರ ಮೌಲ್ಯ ಕಡಿಮೆಯಾಗುವುದು. ಆದ್ದರಿಂದ, ನಿಮ್ಮ ಬೈಕ್, ಹೊಸದಾಗಿದ್ದಾಗ 1 ಲಕ್ಷ ರೂಗಳಷ್ಟು ಮೌಲ್ಯದ್ದಾಗಿದ್ದರೆ, ಈಗ ಅದರ ಮೌಲ್ಯ 50,000, ರೂಗಳು. ಉಳಿದ 50,000 ರೂಗಳು ನಿಮ್ಮ ಬೈಕ್ ಅನುಭವಿಸಿದ ಡೆಪ್ರಿಸಿಯೇಷನ್ ಆಗಿದೆ.
ಆದರೆ ನಿಮ್ಮ ಬೈಕ್ಗೆ ನೀವು ಝೀರೋ ಡೆಪ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ಇನ್ಶೂರೆನ್ಸ್ ಕಂಪನಿಯು, ಡೆಪ್ರಿಸಿಯೇಷನ್'ಗಾಗಿ ಏನನ್ನೂ (ಝೀರೋ) ಕಡಿತಗೊಳಿಸದೆ, ಬದಲಾಯಿಸಬೇಕಾದ ಭಾಗಗಳ ಸಂಪೂರ್ಣ ವೆಚ್ಚವನ್ನು ಪಾವತಿಸುತ್ತದೆ. ಸರಳವಾಗಿ ಹೇಳುವುದಾದರೆ, ಝೀರೋ ಡೆಪ್ರಿಸಿಯೇಷನ್ ಕವರ್ ಅನ್ನು ಹೊಂದುವುದು ಎಂದರೆ ನಿಮ್ಮ ಇನ್ಶೂರೆನ್ಸ್ ಸಂಸ್ಥೆಯ ದೃಷ್ಟಿಯಲ್ಲಿ, ನಿಮ್ಮ ಬೈಕ್ ಹೊಸದರಂತೆಯೇ ಉಳಿಯುತ್ತದೆ.
ಪರಿಶೀಲಿಸಿ: ವಿಭಿನ್ನ ಆಡ್-ಆನ್ಗಳೊಂದಿಗೆ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಲು, ಬೈಕ್ ಇನ್ಶುರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸಿ