OD ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ತಾಂತ್ರಿಕವಾಗಿ ಹೇಳುವುದಾದರೆ, OD ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದು ಇಲ್ಲಿದೆ:
IDV × [ಪ್ರೀಮಿಯಂ ದರ (ಇನ್ಶೂರೆನ್ಸ್ ಕಂಪನಿಯಿಂದ ನಿರ್ಧಾರಿಸಲಾದ ದರ )] [ಆಡ್-ಆನ್ (ಉದಾ ಎಕ್ಸ್ಟ್ರಾ ಕವರೇಜ್ )] - [ಡಿಸ್ಕೌಂಟ್ & ಬೆನಿಫಿಟ್ಸ್ (. ಉದಾ ನೋ ಕ್ಲೇಮ್ ಬೋನಸ್(NCB)]
ನಿಮ್ಮ OD ಪ್ರೀಮಿಯಂ ಅನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಸಲಹೆಗಳು
ವಾಲಂಟರಿ ಕಡಿತಗಳನ್ನು ಹೆಚ್ಚಿಸಿ: ಕ್ಲೇಮ್ಗಳನ್ನು ಇತ್ಯರ್ಥಗೊಳಿಸುವ ಸಮಯದಲ್ಲಿ ನೀವು ಪಾವತಿಸಲು ಆಯ್ಕೆಮಾಡಿದ ಕ್ಲೇಮ್ಗಳ ಶೇಕಡಾವಾರು ಪ್ರಮಾಣವನ್ನು ವಾಲಂಟರಿ ಕಡಿತಗಳು ಸೂಚಿಸುತ್ತವೆ. ನಿಮಗೆ ಸಾಧ್ಯವಾದರೆ, ನಿಮ್ಮ OD ಪ್ರೀಮಿಯಂ ಅನ್ನು ನೇರವಾಗಿ ಕಡಿಮೆ ಮಾಡಲು, ವಾಲಂಟರಿ ಕಡಿತಗಳನ್ನು ಹೆಚ್ಚಿಸುವ ಆಯ್ಕೆಯನ್ನು ಮಾಡಬಹುದು.
ಸರಿಯಾದ ಐ.ಡಿ.ವಿ (IDV) ಅನ್ನು ಘೋಷಿಸಿ: ನಿಮ್ಮ OD ಕವರ್ ಅನ್ನು ನೀವು ಡಿಜಿಟ್ನೊಂದಿಗೆ ಖರೀದಿಸಿದಾಗ, ನಿಮಗಾಗಿ ಸ್ವಯಂಚಾಲಿತವಾಗಿ ಮಾಡುವ ಬದಲು ನಿಮ್ಮ IDV ಅನ್ನು ಕಸ್ಟಮೈಸ್ ಮಾಡುವ ಅವಕಾಶವನ್ನು ನಾವು ನಿಮಗೇ ನೀಡುತ್ತೇವೆ. ಇದರೊಂದಿಗೆ, ಸರಿಯಾದ IDV ಹೇಳಲಾಗಿದೆಯೇ ಎಂದು ನೀವು ಖಚಿತಪಡಿಸಿಕೊಳ್ಳಬಹುದು. ಏಕೆಂದರೆ ಇದು ನಿಮ್ಮ OD ಪ್ರೀಮಿಯಂ ಮತ್ತು ಕ್ಲೇಮ್ಗಳ ಸಮಯದಲ್ಲಿ ನೀವು ಸ್ವೀಕರಿಸಬಹುದಾದ ಹಣದ ಮೊತ್ತ, ಎರಡನ್ನೂ ನಿರ್ಧರಿಸುತ್ತದೆ.
ನಿಮ್ಮ ಎನ್.ಸಿ.ಬಿ (NCB) ಅನ್ನು ವರ್ಗಾಯಿಸಲು ಮರೆಯಬೇಡಿ: ಮೊದಲೇ ಹೇಳಿದಂತೆ, ನಿಮ್ಮ ನೋ ಕ್ಲೇಮ್ ಬೋನಸ್ನೊಂದಿಗೆ, OD ಪ್ರೀಮಿಯಂನಲ್ಲಿ ನೀವು ರಿಯಾಯಿತಿಯನ್ನು ಪಡೆಯಬಹುದು. ಆದ್ದರಿಂದ, ನಿಮ್ಮ OD ಪಾಲಿಸಿಯನ್ನು ಖರೀದಿಸುವಾಗ ನೀವು ಅದನ್ನು ವರ್ಗಾಯಿಸುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.