ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

24X7 ರೋಡ್ಸೈಡ್ ಅಸಿಸ್ಟೆನ್ಸ್ ಎಂದರೇನು?

ರೋಡ್ಸೈಡ್ ಅಸಿಸ್ಟೆನ್ಸ್ ಅಥವಾ ಬ್ರೇಕ್ ಡೌನ್ ಕವರ್, ನೀವು ನಿಮ್ಮ ಕಾಂಪ್ರೆಹೆನ್ಸಿವ್  ಕಾರು ಇನ್ಶೂರೆನ್ಸ್ ಅಥವಾ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಜೊತೆ ಆಯ್ಕೆ ಮಾಡಬಹುದಾದ ಆಡ್-ಆನ್ ಕವರ್ ಆಗಿದೆ, ಹಾಗೂ ಇದು ರೋಡ್ಸೈಡ್ ಅಸಿಸ್ಟೆನ್ಸ್(ರಸ್ತೆಬದಿ ನೆರವು) ಬೇಕಾಗುವ ಸಮಯದಲ್ಲಿ ನಿಮಗೆ ಸಹಾಯ ಮಾಡುತ್ತದೆ, ಅಂದರೆ ನೀವು ರಸ್ತೆಬದಿಯಲ್ಲಿ ಸಿಕ್ಕಿಹಾಕಿಕೊಂಡಿರುವಾಗ ಇದು ನಿಮಗೆ ನೆರವಾಗುತ್ತದೆ.

ಅದು ಸಣ್ಣ ಅವಘಡ ಇರಲಿ ಅಥವಾ ಚಪ್ಪಟೆ ಟಯರ್ ಇರಲಿ, 24x7 ರೋಡ್ಸೈಡ್ ಅಸ್ಸಿಸ್ಟೆನ್ಸ್ ನಿಮಗೆ ಇಂತಹ ಸಮಸ್ಯೆಗಳ ಸಮಯದಲ್ಲಿ ಸಹಾಯ ಮಾಡುತ್ತದೆ, ಹಾಗೂ ಇದನ್ನು ಕ್ಲೈಮ್ ಅಂದೂ ಪರಿಗಣಿಸಲಾಗುವುದಿಲ್ಲ

ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ನ ಬೆಲೆ ಎಷ್ಟು?

ನಿಮ್ಮ ಪ್ರೀಮಿಯಂ ನಲ್ಲಿ ಒಂದು ನಿರ್ಧಾರಿತ ಕನಿಷ್ಟ ಸೇರ್ಪಡೆಯಿಂದ ನಿಮ್ಮ ಸಮಗ್ರ ಕಾರು ಇನ್ಶೂರೆನ್ಸ್ ಅಥವಾಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗೆ ಈ ರೋಡ್ಸೈಡ್ ಅಥವಾ ಬ್ರೇಕ್ಡೌನ್ ಅಸಿಸ್ಟೆನ್ಸ್ ಕವರ್ ಅನ್ನು ಸೇರಿಸಬಹುದು. ಡಿಜಿಟ್ ನಲ್ಲಿ, ಒಂದು ಕಾರಿಗೆ ನೀವು ಹೆಚ್ಚುವರಿ ರೂ 102 ತೆರಬೇಕಾಗುತ್ತದೆ, ಹಾಗೂ ಟು ವೀಲರ್ ವೆಹಿಕಲ್ ಗೆ ಈ ದರವು ರೂ 40 ಆಗಿದೆ.

ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ಹೇಗೆ ಕೆಲಸ ಮಾಡುತ್ತದೆ?

ನೀವು ನಿಮ್ಮ ಡಿಜಿಟ್ ಕಾರು ಹಾಗೂ ಬೈಕ್ ಇನ್ಶೂರೆನ್ಸ್ ಯೋಜನೆಗಳಲ್ಲಿ ರೋಡ್ಸೈಡ್/ಬ್ರೇಕ್ಡೌನ್ ಅಸಿಸ್ಟೆನ್ಸ್ ಕವರ್ ಅನ್ನು ಈಗಾಗಲೇ ಆಯ್ಕೆ ಮಾಡಿದ್ದರೆ, ಅಗತ್ಯದ ಸಮಯದಲ್ಲಿ ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ಅನ್ನು ಬಳಸುವುದು ಸರಳವಾಗಿದೆ!

ಸಮಸ್ಯೆಯ ಸಂದರ್ಭದಲ್ಲಿ(ಸೇವೆ ಬೇಕಾಗಿರುವಾಗ) ನೀವು ಮಾಡಬೇಕಾದದ್ದು ಇಷ್ಟೇ; 1800-103-4448  ಗೆ ಕರೆ ಮಾಡಿ ಹಾಗೂ ನಿಮ್ಮ ಪಾಲಿಸಿ ವಿವರವನ್ನು ಸಿದ್ಧವಾಗಿಟ್ಟುಕೊಳ್ಳಿ, ನಾವು ತಕ್ಷಣವೇ ಅಲ್ಲಿರುತ್ತೇವೆ.

ಡಿಜಿಟ್ ನಲ್ಲಿ, ರೋಡ್ಸೈಡ್ ಅಸಿಸ್ಟೆನ್ಸ್ ಕವರ್ 24x7 ಸೇವೆಯನ್ನು ಒಳಗೊಂಡಿದೆ ಹಾಗೂ ಅನುಕೂಲಕರ ಮತ್ತು ಮಜೂರಿ ವೆಚ್ಚಗಳನ್ನೂ ನೋಡಿಕೊಳ್ಳುತ್ತದೆ. ನಾವು ನಿಮ್ಮ ನಗರದಿಂದ 500 ಕಿಮೀ ಗಳ ವರೆಗೆ ನಿಮಗೆ ಸೇವೆಯನ್ನು ಒದಗಿಸುತ್ತೇವೆ(ಉಳಿದ ಕಂಪನಿಗಳ ಹಾಗೆ ಕೇವಲ 100 ಕಿಮೀ ಗಳಲ್ಲ).

ಆರ್ ಎಸ್ ಎ ಕವರ್ ನಲ್ಲಿ ಏನೆಲ್ಲಾ ಕವರ್ ಆಗಿದೆ - ವಿವರಗಳ ಕಡೆ ಹೋಗೋಣ

ನಿಮ್ಮ ಕಾರು ಅಥವಾ ಬೈಕ್ ಇನ್ಶೂರೆನ್ಸ್ ನಲ್ಲಿರುವ ಆರ್ ಎಸ್ ಎ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ ಎಂಬುವುದರ ಸಾರಾಂಶವನ್ನು ನಾವು ಈಗಾಗಲೇ ನಿಮಗೆ ನೀಡಿದ್ದೇವೆ.ಆದರೆ, ನಿಮ್ಮ ಕವರೇಜ್ ನಲ್ಲಿ ಸೇರ್ಪಡೆಯಾಗಿರುವ ವಿವರಗಳನ್ನೂ ತಿಳಿದುಕೊಳ್ಳುವುದು ಮುಖ್ಯ, ಇದರಿಂದ ನೀವು ರೋಡ್ಸೈಡ್/ಬ್ರೇಕ್ಡೌನ್ ಅಸಿಸ್ಟೆನ್ಸ್ ಕವರ್ ನ ಲಾಭಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.

ಬ್ಯಾಟರಿ ದೋಷ

ಬ್ಯಾಟರಿ ಸಮಸ್ಯೆಗಳಿಂದ ನಿಮ್ಮ ಕಾರು ಅಥವಾ ಟು ವೀಲರ್ ವೆಹಿಕಲ್  ಕೆಟ್ಟುನಿಲ್ಲುವ ಸಮಯಗಳಿಗೆ ಇದನ್ನು ಮೀಸಲಿಡಲಾಗಿದೆ.ಇಂತಹ ಸಂದರ್ಭದಲ್ಲಿ, ನಿಮ್ಮ ಆರ್ ಎಸ್ ಎ ಕವರ್ ನಿಮ್ಮ ಜೊತೆ ಇರುತ್ತದೆ, ಅನುಕೂಲಕರ ಹಾಗೂ ಮಜೂರಿ ವೆಚ್ಚಗಳ ಪಾವತಿಯ ಸಮಯವನ್ನೂ ಸೇರಿ.

ಹೆಚ್ಚುವರಿ ಕೀಗಳು

ಇದು ನಿಮಗೆ ಇಷ್ಟವಾಗಲಿ ಬಿಡಲಿ, ಜನರು ಅವರ ಕಾರು ಕೀಗಳನ್ನು ಅವರು ಅಂದುಕೊಂಡದ್ದಕ್ಕಿಂತ ಹೆಚ್ಚು ಬಾರಿ ಕಳೆದು ಹಾಕುತ್ತಾರೆ!ಕೀ ಇಲ್ಲದೆ ಏನು ಮಾಡಬೇಕೆಂದು ತೋಚದಿರುವ ಇಂತಹ ಗೊಂದಲಮಯ ಸಂದರ್ಭದಲ್ಲಿ, ನಿಮ್ಮ ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ನಿಮಗಾಗಿ ಹೆಚ್ಚುವರಿ ಕೀಗಳ ಪಿಕಪ್ ಹಾಗೂ ಡೆಲಿವರಿಯ ವ್ಯವಸ್ಥೆಯನ್ನು ಮಾಡುತ್ತದೆ, ಅಥವಾ ಆ ಸಮಯದಲ್ಲಿ ತಂತ್ರಜ್ಞರ ಸಹಾಯದಿಂದ ನಿಮ್ಮ ಕಾರನ್ನು ಅನ್ಲಾಕ್ ಮಾಡಲೂ ಸಹಾಯ ಮಾಡುತ್ತದೆ.

ಚಪ್ಪಟೆ ಟಯರ್

ಜೀವನದಲ್ಲಿ ಒಮ್ಮೆಯಾದರೂ ನಮಗೆ ಟಯರ್ ಚಪ್ಪಟೆಯಾದ ಪರಿಸ್ಥಿತಿ ಎದುರಾಗಿರುತ್ತದೆ!ನೀವು ಚಪ್ಪಟೆ ಟಯರ್ ನಿಂದಾಗಿ ನಿಮ್ಮ ಕಾರಿನ ಜೊತೆ ಅಸಹಾಯಕವಾಗಿ ಸಿಕ್ಕಿಬಿದ್ದಿದ್ದು, ಸುತ್ತಮುತ್ತ ನೆರವಿಗೂ ಯಾರೂ ಇಲ್ಲ. ಹೀಗಿರುವಾಗ, ನಿಮ್ಮ ರೋಡ್ಸೈಡ್ ಅಸಿಸ್ಟೆನ್ಸ್ ಕವರ್, ನಿಮಗಾಗಿ ಬೇಕಾದ ತಂತ್ರಜ್ಞರ ವ್ಯವಸ್ಥೆ ಮಾಡಿ ನಿಮ್ಮ ಟಯರ್ ಅನ್ನು ಬದಲಿಸಿ ಬಿಡಿ ಟಯರ್ ಅನ್ನು ಸಿಕ್ಕಿಸಲು ಸಹಾಯ ಮಾಡುತ್ತದೆ.

ಸಣ್ಣಪುಟ್ಟ ರಿಪೇರಿಗಳು

ಹಲವು ಬಾರಿ, ಕೆಲ ಕಾರಣಗಳಿಂದ ನೀವು ನಿಮ್ಮ ಕಾರು ಅಥವಾ ಬೈಕ್ ಯಾಕೆ ಸ್ಟಾರ್ಟ್ ಆಗುತ್ತಿಲ್ಲ ಎಂದು ಬೆರಗಾಗಿರಬಹುದು! ಇಂತಹ ದುರಾದೃಷ್ಟಕರ ಸಂದರ್ಭಗಳಲ್ಲಿ ನಿಮ್ಮ ರೋಡ್ಸೈಡ್ ಅಸಿಸ್ಟೆನ್ಸ್ ಕವರ್, ನಿಮಗೆ ಅಗತ್ಯವಿರುವ ರಿಪೇರಿಗಳನ್ನು ಒದಗಿಸಿ ಸಹಾಯ ಮಾಡುತ್ತದೆ.

ಟೋವಿಂಗ್ ಸೌಲಭ್ಯ

ವಾಹನವನ್ನು ಸ್ಥಳದಲ್ಲೇ ರಿಪೇರಿ ಮಾಡಲಾಗದ ಕೆಲವು ಗಂಭೀರ ಸಂದರ್ಭಗಳಲ್ಲಿ ಅದನ್ನು ಸರ್ವಿಸಿಂಗಿಗಾಗಿ ವರ್ಕ್ಷಾಪ್ ಅಥವಾ ಗ್ಯಾರೇಜ್ ಗೆ ಕಳಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ, ನಿಮ್ಮ ರೋಡ್ಸೈಡ್ ಆಸಿಸ್ಟೆನ್ಸ್ ಕವರ್, ನಿಮಗೆ ಅಗತ್ಯವಿರುವ ಟೋವಿಂಗ್ ಸೌಲಭ್ಯವನ್ನು ಒದಗಿಸುವಲ್ಲಿ ನಿಮಗೆ ಲಾಭದಾಯಕವಾಗಿ ಪರಿಣಮಿಸುತ್ತದೆ.

ಸಂಬಂಧಿಕರಿಗೆ ತುರ್ತು ಸಂದೇಶ ರವಾನೆ

ನಿಮ್ಮ ಸಂಬಂಧಿಕರಿಗೆ ತುರ್ತು ಸಂದೇಶ ರವಾನೆ ಮಾಡಬೇಕಾಗುವ ದುರಾದೃಷ್ಟಕರ ಸಂದರ್ಭಗಳನ್ನು ನಾವು ನೋಡಿಕೊಳ್ಳುತ್ತೇವೆ.

ವೈದ್ಯಕೀಯ ಹೊಂದಾಣಿಕೆ

ಒಂದು ದುರಾದೃಷ್ಟಕರ ಅಪಘಾತದಲ್ಲಿ, ನಿಮ್ಮ ವಾಹನ ಮಾತ್ರವಲ್ಲದೆ ನೀವು ಕೂಡಾ ನಡುರಸ್ತೆಯಲ್ಲಿ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದರೆ, ನಿಮ್ಮ ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ನಿಮಗಾಗಿ ಅಗತ್ಯ ವೈದ್ಯಕೀಯ ಆರೈಕೆಗಳನ್ನು ಒದಗಿಸುವ ಸಲುವಾಗಿ ಹತ್ತಿರದ ವೈದ್ಯಕೀಯ ಕೇಂದ್ರದೊಂದಿಕೆ ಸಂಪರ್ಕ ಹೊಂದಲು ನಿಮಗೆ ಸಹಾಯ ಮಾಡುತ್ತದೆ.

ಇಂಧನ ನೆರವು

ಇದು ಯಾರಿಗೂ ಆಗಬಹುದು! ನಿಮಗೆ ಅರಿವಾಗುವ ಮೊದಲೇ, ನಿಮ್ಮ ಇಂಧನದ ಟ್ಯಾಂಕ್ ಖಾಲಿಯಾಗಿರುತ್ತದೆ! ಇಂತಹ ಸಂದರ್ಭದಲ್ಲಿ, ನಿಮ್ಮ ಕವರ್, 5 ಲೀ ವರೆಗಿನ ಇಂಧನದ ವ್ಯವಸ್ಥೆ ಮಾಡಿ ನಿಮ್ಮ ವಾಹನ ನಿಂತಿರುವ ಸ್ಥಳಕ್ಕೇ ಬಂದು, ನಿಮಗೆ ಸಹಾಯ ಮಾಡುತ್ತದೆ.

ರೋಡ್ಸೈಡ್ ಅಸಿಸ್ಟೆನ್ಸ್ ನಲ್ಲಿ ನೀವು ನೆನಪಿಟ್ಟುಕೊಳ್ಳಬೇಕಾದ ಹೊರಪಡಿಸುವಿಕೆ ಹಾಗೂ ಇತರ ವಿಷಯಗಳು

ನಾವು ನಮ್ಮ ಷರತ್ತು ಹಾಗೂ ನಿಯಮಗಳ ಬಗ್ಗೆ ಬಹಳ ಪ್ರಾಮಾಣಿಕವಾಗಿರುತ್ತೇವೆ ಏಕೆಂದರೆ ಕ್ಲೈಮ್ ಸಂದರ್ಭದಲ್ಲಿ, ನೀವು ಆಶ್ಚರ್ಯಕ್ಕೊಳಗಾಗಬಾರದು. ಡಿಜಿಟ್ ನ ರೋಡ್ಸೈಡ್ ಅಸಿಸ್ಟೆನ್ಸ್ ಗೆ ಸಂಬಂಧಿಸಿದ, ನೀವು ನೆನಪಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳು ಇಲ್ಲಿವೆ:

  • ನಾವು ನಮ್ಮ ರೋಡ್ಸೈಡ್ ಅಸಿಸ್ಟೆನ್ಸ್ ಅನ್ನು ಕ್ಲೈಮ್ ಎಂದು ಪರಿಗಣಿಸದೇ ಇದ್ದರೂ, ನೀವು ಈ ಕವರ್ ಅನ್ನು,  ಒಂದು ಪಾಲಿಸಿ ವರ್ಷದಲ್ಲಿ, ಗರಿಷ್ಠ ಎಂದರೆ 4 ಬಾರಿ ಉಪಯೋಗಿಸಬಹುದು.
  • ನೀವು ನಿಮ್ಮ ಪಾಲಿಸಿ ಅವಧಿಯಲ್ಲಿ 2 ಬಾರಿಯ ವರೆಗೆ ಇಂಧನ ನೆರವನ್ನು ಪಡೆಯಬಹುದು
  • ರೋಡ್ಸೈಡ್ ಅಸಿಸ್ಟೆನ್ಸ್ ಅನ್ನು ಯಾವತ್ತಿದ್ದರೂ ಬೇರೆ ಆಯ್ಕೆಗಳೇ ಇಲ್ಲದಾಗ ಉಪಯೋಗಿಸಬೇಕು. ಉದಾಹರಣೆಗೆ; ನಿಮ್ಮ ವಾಹನವನ್ನು ಯಾವ ತೊಂದರೆಗಳಿಲ್ಲದೆಯೇ ಹತ್ತಿರದ ವರ್ಕ್ಷಾಪ್ ಅಥವಾ ಡೀಲರ್ ನ ಬಳಿ ಸುರಕ್ಷಿತವಾಗಿ ತಲುಪಿಸುವ ವ್ಯವಸ್ಥೆ ಇದ್ದರೆ, ಅಂತಹ ಸಂದರ್ಭದಲ್ಲಿ ರೋಡ್ಸೈಡ್ ಅಸಿಸ್ಟೆನ್ಸ್ ನಿಮಗೆ ಅನ್ವಯಿಸುವುದಿಲ್ಲ.
  • ನಿಮ್ಮ ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ರಿಪೇರಿ ಹಾಗೂ ಮಜೂರಿ ವೆಚ್ಚಗಳನ್ನೂ ಕವರ್ ಮಾಡುತ್ತದೆ; ಆದರೆ ಅಪಘಾತ ಸಂಭವಿಸಿದ ಸ್ಥಳದಲ್ಲಿ 45 ನಿಮಿಷಗಳಷ್ಟು ರೋಡ್ಸೈಡ್ ಅಸಿಸ್ಟೆನ್ಸ್ ಮಾತ್ರ ದೊರೆಯುತ್ತದೆ. 
  • ಎಲ್ಲಾ ಕಾರು ಹಾಗೂ ಬೈಕ್ ಕ್ಲೈಮ್ ಗಳ ಹಾಗೆಯೇ, ನೀವು ಪಾನಮತ್ತರಾಗಿ ಅಥವಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಿದರೆ ನಿಮಗೆ ಕವರ್ ನೀಡಲಾಗುವುದಿಲ್ಲ.

ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ಅನ್ನು ಯಾರು ಪಡೆಯಬೇಕು?

ನಿಮ್ಮ ಬಳಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರು ಅಥವಾ ಬೈಕ್ ಇದ್ದರೆ, ನೀವು ಖಂಡಿತವಾಗಿಯೂ ನಿಮ್ಮ ಸಮಗ್ರ ಕಾರು ಅಥವಾ ಬೈಕ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ರೋಡ್ಸೈಡ್ ಅಸಿಸ್ಟೆನ್ಸ್ ಅನ್ನು ಆಯ್ಕೆ ಮಾಡಬೇಕು, ಇದರಿಂದಾಗಿ ನಿಮ್ಮ ಹೊಚ್ಚ ಹೊಸ ವಾಹನದ ನಿರ್ವಹಣೆ ಉತ್ತಮವಾಗಿರುತ್ತದೆ ಹಾಗೂ ಎಲ್ಲಾ ಸಂದರ್ಭಗಳಲ್ಲೂ ಸುರಕ್ಷಿತವಾಗಿರುತ್ತದೆ.

ನೀವು ಹೆಚ್ಚು ಪ್ರಯಾಣ ಮಾಡುವವರಾಗಿದ್ದರೆ, 24x7 ರೋಡ್ಸೈಡ್ ಅಸಿಸ್ಟೆನ್ಸ್ ಅನ್ನು ಆಯ್ಕೆ ಮಾಡುವುದು ಒಳ್ಳೆಯ ಉಪಾಯವಾಗಿದೆ. ನಿಮ್ಮ ಹಲವು ಪ್ರಯಾಣಗಳಲ್ಲಿ ಯಾವುದಾದರೂ ಒಂದಕ್ಕೆ ನಿಮಗೆ ಯಾವಾಗ ಸಹಾಯದ ಅಗತ್ಯ ಬೀಳುವುದು ಎಂದು ಹೇಳುವುದು ಅಸಾಧ್ಯ!

ಕೆಲವರು ಸಣ್ಣಪುಟ್ಟ ಅವಘಡಗಳನ್ನು ತಾವೇ ನಿರ್ವಹಿಸುತ್ತಾರೆ ಆದರೆ ಕೆಲವರಿಗೆ ಇದು ಸಾಧ್ಯವಿಲ್ಲ! ಆದ್ದರಿಂದ, ನಿಮಗೆ, ನಿಮ್ಮ ಕಾರು ಅಥವಾ ಬೈಕಿಗಾದ ಹಾನಿಗಾಗಿ, ಸಣ್ಣ ರಿಪೇರಿಗಳನ್ನು ಮಾಡಿಸುವ ಬಗ್ಗೆ ಊಹಿಸಲೂ ಸಾಧ್ಯವಾಗದಿದ್ದರೆ, ನಿಮ್ಮ ವಾಹನಕ್ಕಾಗಿ ನೀವು ಆಯ್ಕೆ ಮಾಡಿದ ರೋಡ್ಸೈಡ್ ಅಸಿಸ್ಟೆನ್ಸ್ ಆಡ್ ಆನ್ ಕವರ್ ನಿಮಗೆ ಆಪ್ತರಕ್ಷಕನಾಗಿ ಪರಿಣಮಿಸಬಹುದು!

ಮೋಟಾರ್ ಇನ್ಶೂರೆನ್ಸ್ ನಲ್ಲಿ 24X7 ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ರೋಡ್ಸೈಡ್ ಅಸಿಸ್ಟೆನ್ಸ್ ಖರೀದಿಸುವುದು ಯೋಗ್ಯವೇ?

ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ನ ಹಲವು ಲಾಭಗಳನ್ನು ಪರಿಗಣಿಸಿದರೆ, ಇದನ್ನು ಕೊಳ್ಳುವುದು ಯೋಗ್ಯವೇ ಆಗುತ್ತದೆ ಏಕೆಂದರೆ, ಯಾವಾಗ ಈ ಸೇವೆಯ ಅಗತ್ಯ ಬೀಳುವುದೆಂದು ಹೇಳಲು ಅಸಾಧ್ಯ!

ನನ್ನ ಕಾರಿಗಾಗಿ ರೋಡ್ಸೈಡ್ ಅಸಿಸ್ಟೆನ್ಸ್ ಖರೀದಿಸಲು ನನಗೆ ಎಷ್ಟು ಖರ್ಚಾಗುವುದು?

ನಿಮ್ಮ ಕಾರು ಇನ್ಶೂರೆನ್ಸ್ ಪ್ರೀಮಿಯಂ ನಲ್ಲಿ ರೋಡ್ಸೈಡ್/ಬ್ರೇಕ್ಡೌನ್ ಅಸಿಸ್ಟೆನ್ಸ್ ಕವರ್ ಅನ್ನು ಸೇರಿಸಲು ನೀವು ಹೆಚ್ಚುವರಿ ರೂ 102 ಗಳನ್ನು ನೀಡಬೇಕಾಗುತ್ತದೆ.

ನನ್ನ ಟು ವೀಲರ್ ವೆಹಿಕಲ್ ಗಾಗಿ ರೋಡ್ಸೈಡ್ ಅಸಿಸ್ಟೆನ್ಸ್ ಖರೀದಿಸಲು ನನಗೆ ಎಷ್ಟು ಖರ್ಚಾಗುವುದು?

ಡಿಜಿಟ್ ನಲ್ಲಿ, ನೀವು ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ಅನ್ನು ಆಯ್ಕೆ ಮಾಡಿದರೆ ನಿಮ್ಮ ಪ್ರೀಮಿಯಂ ಜೊತೆ ಹೆಚ್ಚುವರಿಯಾಗಿ ನೀವು ಕನಿಷ್ಟ ನಿರ್ಧಾರಿತ ಶುಲ್ಕವಾದ ರೂ 40 ಅನ್ನು ತೆರಬೇಕಾಗುತ್ತದೆ.

ನಾನು ರೋಡ್ಸೈಡ್ ಅಸಿಸ್ಟೆನ್ಸ್ ಕ್ಲೈಮ್ ಮಾಡಿದರೆ ಇದು ನನ್ನ ನೋ ಕ್ಲೈಮ್ ಬೋನಸ್ ಮೇಲೆ ಪರಿಣಾಮ ಬೀರುತ್ತದೆಯೆ?

ಇಲ್ಲ! ಸಿಹಿ ಸುದ್ದಿಯೇನೆಂದರೆ ನೀವು ರೋಡ್ಸೈಡ್ ಅಸಿಸ್ಟೆನ್ಸ್ ನಿಂದ ಲಾಭ ಪಡೆದಿದ್ದರೂ ಸಹ ಇದು ಕ್ಲೈಮ್ ಆಗಿ ಎಣಿಕೆಯಾಗದಿರುವ ಏಕೈಕ ಕವರ್ ಆಗಿದೆ, ಹಾಗೂ ಒಂದು ಪಾಲಿಸಿ ವರ್ಷದಲ್ಲಿ ನೀವು ಇತರ ಯಾವುದೇ ಕ್ಲೈಮ್ ಮಾಡದಿದ್ದರೆ, ನಿಮ್ಮ ನೋ ಕ್ಲೈಮ್ ಬೋನಸ್ ಸುರಕ್ಷಿತವಾಗಿರುತ್ತದೆ.

ರೋಡ್ಸೈಡ್ ಅಸಿಸ್ಟೆನ್ಸ್ ಕಾರುಗಳನ್ನು ಅನ್ಲಾಕ್ ಮಾಡಲು ಸಹಾಯ ಮಾಡುತ್ತದೆಯೇ?

ಹೌದು, ನೀವು ನಿಮ್ಮ ಕಾರಿನ ಕೀಗಳನ್ನು ಕಳೆದುಕೊಂಡಿದ್ದು ನಿಮ್ಮ ಸ್ವಂತ ಕಾರಿನಿಂದ ಲಾಕ್ ಔಟ್ ಆಗಿದ್ದರೆ, ರೋಡ್ಸೈಡ್ ಅಸಿಸ್ಟೆನ್ಸ್ ಕವರ್ ನಿಮಗೆ ಬಿಡಿ ಕೀ ಅನ್ನು ನೀಡಿ ಸಹಾಯ ಮಾಡುತ್ತದೆ ಹಾಗೂ ಕೆಲವು ಸಂದರ್ಭಗಳಲ್ಲಿ ತಂತ್ರಜ್ಞರ ಸಹಾಯದಿಂದ ಕಾರನ್ನು ಅನ್ಲಾಕ್ ಮಾಡಲೂ ಸಹಾಯ ಮಾಡುತ್ತದೆ, ಭದ್ರತೆಯ ಉದ್ದೇಶಗಳಿಗಾಗಿ,ನೀವು ನಿಮ್ಮ ಮಾನ್ಯ ಐಡಿ ಸಾಕ್ಷಿ ನೀಡಿದರೆ ಮಾತ್ರ.

ನನಗೆ ರೋಡ್ಸೈಡ್ ಅಸಿಸ್ಟೆನ್ಸ್ ಖರೀದಿಸಬೇಕಾಗಿದೆ. ನಾನು ಆರ್ ಎಸ್ ಎ ಕವರ್ ನಲ್ಲಿ ಏನನ್ನು ನೋಡಬೇಕು?

  • ಸಂಪರ್ಕದ ಸರಳತೆ (Ease of contact) : ನೀವು ನಿಮ್ಮ ಕಾರಿನೊಂದಿಗೆ ನಡುರಸ್ತೆಯಲ್ಲಿ ತೊಂದರೆಗೊಳಗಾದರೆ,ನಿಮ್ಮ ಇನ್ಶೂರರ್ ಜೊತೆ ಸುಲಭವಾಗಿ ಸಂಪರ್ಕ ಹೊಂದಲು ಬಯಸುತ್ತೀರಿ. ಆದ್ದರಿಂದ, ನೀವು ನಿಮ್ಮ ಇನ್ಶೂರರ್ ಜೊತೆ ಎಷ್ಟು ಸುಲಭವಾಗಿ ಸಂಪರ್ಕ ಬೆಳೆಸಬಹುದೆಂಬುವುದು ನೀವು ತಿಳಿದುಕೊಳ್ಳಬೇಕಾದ ವಿಷಯಗಳಲ್ಲೊಂದು.
  • ಸಮಯ (Timings): ಸಮಸ್ಯೆಗಳು ಹೇಳಿ ಬರುವುದಿಲ್ಲ! ಆದ್ದರಿಂದ, ನೀವು ಖಚಿತಪಡಿಸಬೇಕಾದ ಇನ್ನೊಂದು ವಿಷಯ ಏನಂದರೆ, ನಿಮ್ಮ ರೋಡ್ಸೈಡ್ ಅಸಿಸ್ಟೆನ್ಸ್ 24x7 ಸೇವೆ ಹೊಂದಿದೆಯೋ ಇಲ್ಲವೋ ಎಂದು!
  • ಕವರೇಜ್ (Coverage) : ಕೊನೆಯಲ್ಲಿ, ನಿಮ್ಮ ರೋಡ್ಸೈಡ್ ಅಸಿಸ್ಟೆನ್ಸ್ ನಿಮಗೆ ಯೋಗ್ಯವಾದ ಲಾಭಗಳನ್ನು ಹಾಗೂ ಕವರೇಜ್ ಅನ್ನು ನೀಡಬೇಕು. ಆದ್ದರಿಂದ, ಇದರಲ್ಲಿ ದೊರೆಯುವ ಕವರೇಜ್ ಲಾಭಗಳು ಯಾವುವು ಹಾಗೂ ಅವು ನಿಮಗೆ ಹೇಗೆ ಉಪಯುಕ್ತ ಎಂದು ತಿಳಿಯಲು ಮರೆಯಬೇ.
  • ಸೇವಾ ಲಾಭಗಳು (Service Benefits) : ಕೆಲವು ಇನ್ಶೂರರ್ ಗಳು ಮೂಲ ಕವರೇಜ್ ಗಿಂತಲೂ ಹೆಚ್ಚಿನ ಲಾಭಗಳನ್ನು ನೀಡುತ್ತಾರೆ. ವಿವಿಧ ಇನ್ಶೂರರ್ ಗಳು ಯಾವ ಲಾಭಗಳನ್ನು ನೀಡುತ್ತಾರೆ ಎಂದು ತಿಳಿದು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಿ.