ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆಗಿ

ಬನ್ನಿ, ಒಟ್ಟಿಗೆ ಅದ್ಭುತವಾಗೋಣ

ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಎಂದರೆ ನಿರ್ದಿಷ್ಟ ಮೋಟಾರ್ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡಲು ಇನ್ಶೂರೆನ್ಸ್ ಕಂಪನಿಯೊಂದಿಗೆ ಕೆಲಸ ಮಾಡುವವರು. ನೀವು ಮೋಟಾರ್ ಏಜೆಂಟ್ ಅಥವಾ ಪಿ.ಒ.ಎಸ್.ಪಿ.(POSP) ಆಗಿದ್ದರೆ, ಎಲ್ಲ ಮೋಟಾರ್ ವಾಹನ-ಸಂಬಂಧಿತ ಇನ್ಶೂರೆನ್ಸ್ ಯೋಜನೆಗಳಲ್ಲಿ, ಗ್ರಾಹಕರು ತಮ್ಮ ಅವಶ್ಯಕತೆಗಳಿಗನುಗುಣವಾಗಿ ಸರಿಯಾದ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ನೀವು ಸಹಾಯ ಮಾಡುತ್ತೀರಿ.

ಡಿಜಿಟ್ ನೊಂದಿಗೆ, ನೀವು ಕಾರ್, ಬೈಕ್ (ಅಥವಾ 2-ವೀಲರ್) ಮತ್ತು  ಕಮರ್ಷಿಯಲ್ ವೆಹಿಕಲ್ ಪಾಲಿಸಿಗಳನ್ನು ಮಾರಾಟ ಮಾಡಬಹುದು.

ಮೋಟಾರ್ ಇನ್ಶೂರೆನ್ಸ್ ಎಂದರೇನು?

ಕಾರ್, ಟು-ವೀಲರ್ ಅಥವಾ ಆಟೋ, ಟ್ರಕ್‌ನಂತಹ ಕಮರ್ಷಿಯಲ್ ವೆಹಿಕಲ್ ಅನ್ನು ಕವರ್ ಮಾಡಲು ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಬಳಸಬಹುದು. ಮತ್ತು ಇದು ಭಾರತದಲ್ಲಿನ ಎಲ್ಲ ವೆಹಿಕಲ್'ಗಳಿಗೆ ಖಡ್ಡಾಯವಾಗಿದೆ. ಅಪಘಾತಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ನಷ್ಟಗಳು ಮತ್ತು ಹಾನಿಗಳ ವಿರುದ್ಧ ಜನರು ರಕ್ಷಣೆ ಪಡೆಯಲು ಈ ಇನ್ಶೂರೆನ್ಸ್  ಮುಖ್ಯವಾಗಿದೆ.

ಪ್ರಾಥಮಿಕವಾಗಿ ಮೂರು ವಿಧದ ಮೋಟಾರ್ ಇನ್ಶೂರೆನ್ಸ್ ಯೋಜನೆಗಳಿವೆ - ಥರ್ಡ್ ಪಾರ್ಟಿ ಮೋಟಾರ್ ಇನ್ಶೂರೆನ್ಸ್ ಪಾಲಿಸಿ, ಓನ್ ಡ್ಯಾಮೇಜ್ ಮೋಟಾರ್ ಇನ್ಶೂರೆನ್ಸ್ ಪಾಲಿಸಿ ಮತ್ತು ಕಾಂಪ್ರೆಹೆನ್ಸಿವ್ (ಅಥವಾ ಸ್ಟ್ಯಾಂಡರ್ಡ್ ) ಮೋಟಾರ್ ಇನ್ಶೂರೆನ್ಸ್ ಪಾಲಿಸಿ.

  • ಭಾರತದಲ್ಲಿನ ಮೋಟಾರ್ ವೆಹಿಕಲ್ ಆಕ್ಟ್ ನ ಅಡಿಯಲ್ಲಿ  ಥರ್ಡ್ ಪಾರ್ಟಿ ಮೋಟಾರ್ ಇನ್ಶೂರೆನ್ಸ್ ಖಡ್ಡಾಯವಾಗಿದೆ. ಇಲ್ಲದಿದ್ದರೆ ಜನರು ಭಾರಿ ದಂಡಕ್ಕೆ ಹೊಣೆಯಾಗುತ್ತಾರೆ. ವ್ಯಕ್ತಿಯೊಬ್ಬರ ಕಾರ್, ಯಾವುದೇ ಥರ್ಡ್ ಪಾರ್ಟಿಯ ವೆಹಿಕಲ್, ವ್ಯಕ್ತಿ ಅಥವಾ ಆಸ್ತಿಯನ್ನು ಹಾನಿಗೊಳಿಸಿದರೆ, ಅದರಿಂದ ಉಂಟಾಗಬಹುದಾದ ನಷ್ಟದಿಂದ ಅವರ ಪಾಕೆಟ್ ಅನ್ನು ರಕ್ಷಿಸುತ್ತದೆ.
  •  ಎರಡನೆಯದು ಓನ್ ಡ್ಯಾಮೇಜ್ ಇನ್ಶುರೆನ್ಸ್ ಪಾಲಿಸಿ, ಇದು ಕಸ್ಟಮೈಸ್ ಮಾಡಿದ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಹಾನಿ ಮತ್ತು ನಷ್ಟದಿಂದ ತನ್ನನ್ನು ಮತ್ತು ತಮ್ಮ ಸ್ವಂತ ವೆಹಿಕಲ್ ಅನ್ನು ರಕ್ಷಿಸಿಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ.
  •  ಅಂತಿಮವಾಗಿ, ಕಾಂಪ್ರೆಹೆನ್ಸಿವ್ ಮೋಟಾರ್ ಇನ್ಶೂರೆನ್ಸ್ ಇದು, ಥರ್ಡ್ ಪಾರ್ಟಿಯ ಹಾನಿಗಳು ಮತ್ತು ನಷ್ಟಗಳು, ಹಾಗೂ ಸ್ವಂತ ಹಾನಿಗಳ ವಿರುದ್ಧ ಸಂಪೂರ್ಣ ರಕ್ಷಣೆ ನೀಡುತ್ತದೆ. ಇದು ಅಪಘಾತಗಳು, ನೈಸರ್ಗಿಕ ವಿಪತ್ತು, ಬೆಂಕಿ ಅಥವಾ ಕಳ್ಳತನದಂತಹ ಅನಿರೀಕ್ಷಿತ ನಷ್ಟಗಳಿಂದ ರಕ್ಷಣೆಯನ್ನು ನೀಡುತ್ತದೆ.


*ಡಿಸ್ ಕ್ಲೇಮರ್ - ಏಜೆಂಟ್‌ಗಳಿಗೆ ಯಾವುದೇ ನಿರ್ದಿಷ್ಟವಾದ ಕೆಟಗರಿಯಿಲ್ಲ. ನೀವು ಜನರಲ್ ಇನ್ಶೂರೆನ್ಸ್ ಏಜೆಂಟ್ ಆಗಲು ನೋಂದಾಯಿಸಿಕೊಂಡರೆ, ನೀವು ಎಲ್ಲ ಜನರಲ್ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡಬಹುದು.

ಭಾರತದಲ್ಲಿ ಮೋಟಾರ್ ಇನ್ಶೂರೆನ್ಸ್ ಉದ್ಯಮದ ಬಗ್ಗೆಯಿರುವ ಆಸಕ್ತಿದಾಯಕ ಸಂಗತಿಗಳು

1

ಮೋಟಾರ್ ಇನ್ಶೂರೆನ್ಸ್ ಇದು ಭಾರತದಲ್ಲಿನ ನಾನ್-ಲೈಫ್ ಇನ್ಶೂರೆನ್ಸ್ ಮಾರುಕಟ್ಟೆಯ 39.4% ರಷ್ಟಿದೆ. (1)

2

ಭಾರತೀಯ ಕಾರ್ ಇನ್ಶೂರೆನ್ಸ್ ವಲಯದ ಮೌಲ್ಯ Rs70,000 ಕೋಟಿ. (2)

3

ಕಾರ್ ಇನ್ಶೂರೆನ್ಸ್ ಉದ್ಯಮವು 2012 ರಿಂದ 11.3% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.  (3)

ಡಿಜಿಟ್‌ನೊಂದಿಗೆ ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಏಕೆ ಆಗಬೇಕು?

ನೀವು ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಏಕೆ ಆಗಬೇಕು ಮತ್ತು ಡಿಜಿಟ್ ಅನ್ನು ಏಕೆ ನೀವು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಡಿಜಿಟ್‌ ನೊಂದಿಗೆ ನೇರವಾಗಿ ಕೆಲಸ ಮಾಡಿ

ನಮ್ಮ ಪಿ.ಒ.ಎಸ್.ಪಿ. ಪಾಲುದಾರರಾಗಿ, ನೀವು ನಮ್ಮೊಂದಿಗೆ ನೇರವಾಗಿ ಕೆಲಸ ಮಾಡುತ್ತೀರಿ. ಇದರಲ್ಲಿ ಬೇರೆ ಮಧ್ಯವರ್ತಿಗಳೂ ಭಾಗಿಯಾಗಿಲ್ಲ. ಡಿಜಿಟ್, ಇಂದು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಇನ್ಶೂರೆನ್ಸ್ ಕಂಪನಿಯಾಗಿದೆ. ಏಷ್ಯಾದ ಜನರಲ್ ಇನ್ಶೂರೆನ್ಸ್ ಕಂಪನಿ ಆಫ್ ದಿ ಇಯರ್ 2019, ಪ್ರಶಸ್ತಿಯನ್ನು ಪಡೆದಿರುವ ನಾವು ಪ್ರಸ್ತುತ ಕಿರಿಯ ಕಂಪನಿಯಾಗಿದ್ದೇವೆ.

ಇನ್ಶೂರೆನ್ಸ್ ಅನ್ನು ಸರಳಗೊಳಿಸಲಾಗಿದೆ

ಇನ್ಶೂರೆನ್ಸ್ ಅನ್ನು ಸರಳಗೊಳಿಸುವುದನ್ನು ನಾವು ನಂಬುತ್ತೇವೆ. ಅದಕ್ಕಾಗಿಯೇ ನಮ್ಮ ಎಲ್ಲಾ ದಾಖಲೆಗಳು ತುಂಬಾ ಸರಳವಾಗಿದ್ದು, ಕೇವಲ 15 ವರ್ಷ ವಯಸ್ಸಿನವರು ಸಹ ಅವುಗಳನ್ನು ಅರ್ಥಮಾಡಿಕೊಳ್ಳಬಹುದು.

ಸಶಕ್ತ ಬ್ಯಾಕೆಂಡ್ ಬೆಂಬಲ

ಟೆಕ್ನಾಲಜಿ ನಮ್ಮ ಮುಖ್ಯ ಆಧಾರ ಸ್ತಂಭವಾಗಿದೆ. ನಾವು ನಿಮಗೆ ಅರ್ಪಣಾ ಮನೋಭಾವದ ಸಪೋರ್ಟ್ ಟೀಮ್ ಅನ್ನು ನೀಡುತ್ತೇವೆ. ಅಲ್ಲದೇ ಸುಧಾರಿತ ವೆಬ್ ಹಾಗೂ ಮೊಬೈಲ್ ಆಪ್ ಅನ್ನು ಒದಗಿಸುತ್ತೇವೆ. ಅದು ನಿಮ್ಮನ್ನು  24×7 ಮಾರಾಟ ಮಾಡಲು ಅನುಮತಿಸುತ್ತದೆ.

ಫೇಸ್ಬುಕ್'ನಲ್ಲಿ 4.8 ರೇಟಿಂಗ್

ನಮ್ಮ ಗ್ರಾಹಕರು ಪೂರ್ಣ ಸಂತೃಪ್ತಿ ಹೊಂದುವುದರಲ್ಲಿ ನಾವು ನಂಬಿಕೆಯಿಟ್ಟಿದ್ದೇವೆ. ಮತ್ತು ಯಾವುದೇ ಇನ್ಶೂರೆನ್ಸ್ ಕಂಪನಿಗೆ ಅತ್ಯಧಿಕವಾದ 4.8/5 ರ Facebook ರೇಟಿಂಗ್ ಅನ್ನು ನಾವು ಹೊಂದಿದ್ದೇವೆ.

ಸೂಪರ್-ಫಾಸ್ಟ್ ಬೆಳವಣಿಗೆ

ಈ ಅಲ್ಪಾವಧಿಯಲ್ಲಿ, ಮೋಟಾರ್ ಇನ್ಶೂರೆನ್ಸ್ ವಿಭಾಗದಲ್ಲಿ ನಾವು ಈಗಾಗಲೇ 2% ಕ್ಕಿಂತ ಹೆಚ್ಚು ಮಾರುಕಟ್ಟೆ ಶೇರುಗಳನ್ನು (ಹಿಂದಿನ ತ್ರೈಮಾಸಿಕದಲ್ಲಿ) ತಲುಪಿದ್ದೇವೆ.

ಅಧಿಕ ಕ್ಲೇಮ್ ಸೆಟಲ್‌ಮೆಂಟ್ ಅನುಪಾತ

ನಾವು ಖಾಸಗಿ ಕಾರುಗಳಿಗಾಗಿ ಅಧಿಕ ಕ್ಲೇಮ್‌ ಸೆಟಲ್‌ಮೆಂಟ್ ಅನುಪಾತವನ್ನು ಹೊಂದಿದ್ದೇವೆ ಮತ್ತು ಪ್ರೈವೇಟ್ ಕಾರ್ ವಿಭಾಗದಲ್ಲಿ ನಾವು ಪಡೆದಿರುವ ಎಲ್ಲ ಕ್ಲೇಮ್‌ಗಳಲ್ಲಿ 96% ಅನ್ನು ಇತ್ಯರ್ಥಗೊಳಿಸಿದ್ದೇವೆ.

ಕಾಗದರಹಿತ ಪ್ರಕ್ರಿಯೆಗಳು

ನಮ್ಮ ಪ್ರಕ್ರಿಯೆಗಳು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿವೆ. ಪಾಲಿಸಿಯನ್ನು ನೀಡುವುದರಿಂದ ಹಿಡಿದು ಕ್ಲೇಮ್ ನೋಂದಾಯಿಸುವವರೆಗೆ ಎಲ್ಲವೂ ಆನ್‌ಲೈನ್‌ ಮೂಲಕ ನಡೆಯುತ್ತವೆ. ನೀವು ಯಾವುದೇ ದಾಖಲೆಗಳನ್ನು ತುಂಬುವ ಅಗತ್ಯವಿಲ್ಲ. ನಿಮಗೆ ಬೇಕಾಗಿರುವುದು ಕೇವಲ ಸ್ಮಾರ್ಟ್‌ಫೋನ್/ಕಂಪ್ಯೂಟರ್ ಮತ್ತು ಇಂಟರ್ನೆಟ್ ಸಂಪರ್ಕ. ಆದ್ದರಿಂದ, ಈಗ ನೀವು ಮನೆಯಿಂದ ಅಥವಾ ಬೇರೆ ಎಲ್ಲಿಂದಲಾದರೂ ಕೆಲಸ ಮಾಡಬಹುದು!

ವೇಗದ ಕಮಿಷನ್ ಸೆಟಲ್‌ಮೆಂಟ್

ಚಿಂತಿಸಬೇಡಿ, ನಿಮ್ಮ ಹಿಂದೆ ನಾವಿದ್ದೇವೆ! ನಮ್ಮ ಎಲ್ಲಾ ಕಮಿಷನ್‌ಗಳು ತ್ವರಿತವಾಗಿ ಇತ್ಯರ್ಥವಾಗುತ್ತವೆ. ಇನ್ಶೂರೆನ್ಸ್ ಪಾಲಿಸಿ ನೀಡಿದ ಪ್ರತಿ 15 ದಿನಗಳಿಗೊಮ್ಮೆ ನಿಮ್ಮ ಕಮಿಷನ್‌ ಅನ್ನು, ನಿಮ್ಮ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.

How to become a Motor Insurance Agent?

ಇನ್ಶೂರೆನ್ಸ್ ಏಜೆಂಟ್ ಆಗಲು ಸುಲಭವಾದ ಮಾರ್ಗವೆಂದರೆ ನಿಮ್ಮ ಪಿ.ಒ.ಎಸ್.ಪಿ. ಪ್ರಮಾಣೀಕರಣವನ್ನು ಪೂರ್ಣಗೊಳಿಸುವುದು. ಪಿ.ಒ.ಎಸ್.ಪಿ. (ಪಾಯಿಂಟ್ ಆಫ್ ಸೇಲ್ಸ್ ಪರ್ಸನ್)  ಎನ್ನುವುದು, ನಿರ್ದಿಷ್ಟ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ಇನ್ಶೂರೆನ್ಸ್ ಏಜೆಂಟ್‌ರಿಗೆ ನೀಡಲಾದ ಹೆಸರು.

ಪಿ.ಒ.ಎಸ್.ಪಿ.(POSP)   ಆಗಲು, ನೀವು IRDAI ಯಿಂದ ಅಗತ್ಯವಿರುವ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು ಮತ್ತು ನಮ್ಮಿಂದ ಒದಗಿಸಲಾದ ತರಬೇತಿ ಪಡೆಯಬೇಕು. ನಿಮ್ಮ ತರಬೇತಿ ಪ್ರಕ್ರಿಯೆಯನ್ನು ಡಿಜಿಟ್ ನೋಡಿಕೊಳ್ಳುತ್ತದೆ. ಚಿಂತಿಸಬೇಡಿ!

ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆಗಲು ಬೇಕಿರುವ ಅಗತ್ಯಗಳು ಮತ್ತು ಅರ್ಹತೆಗಳು ಯಾವುವು?

ನೀವು ಕಾರ್ ಇನ್ಶೂರೆನ್ಸ್ ಏಜೆಂಟ್ ಆಗುವುದು ಹೇಗೆ ಎಂದು ತಿಳಿಯಲು  ಬಯಸಿದರೆ, ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಕನಿಷ್ಠ 10 ನೇ ತರಗತಿಯವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು ಮತ್ತು ವ್ಯಾಲಿಡ್ ಆಗಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಹೊಂದಿರಬೇಕು.

ನಂತರ IRDAI ನಿರ್ದಿಷ್ಟಪಡಿಸಿದ ಖಡ್ಡಾಯ 15-ಗಂಟೆಗಳ ತರಬೇತಿಯನ್ನು ಪೂರ್ಣಗೊಳಿಸಲು ನಿಮ್ಮನ್ನು ಕೇಳಲಾಗುತ್ತದೆ. ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕಲಿಯಲು ನಾವು ನಿಮಗೆ ಸಹಾಯ ಮಾಡುವುದಾಗಿ ಭರವಸೆ ನೀಡುತ್ತೇವೆ!

ಯಾರು ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆಗಬಹುದು?

ಇನ್ಶೂರೆನ್ಸ್ ಏಜೆಂಟ್ ಆಗಲು ಇರುವ ಏಕೈಕ ಅವಶ್ಯಕತೆಯೆಂದರೆ, ಅಭ್ಯರ್ಥಿಯು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ಆದ್ದರಿಂದ, ಮೂಲತಃ ಈ ಮಾನದಂಡಗಳನ್ನು ಪೂರೈಸುವ ಯಾರಾದರೂ ಇನ್ಶೂರೆನ್ಸ್ ಏಜೆಂಟ್ ಆಗಬಹುದು. ಇದು ಕಾಲೇಜು ವಿದ್ಯಾರ್ಥಿಗಳು, ಮನೆಯಲ್ಲಿಯೇ ಇರುವವರು, ನಿವೃತ್ತರು ಮತ್ತು ವ್ಯಾಪಾರಸ್ಥರು/ಮಹಿಳೆಯರನ್ನು ಒಳಗೊಂಡಿರುತ್ತದೆ.

ಡಿಜಿಟ್ ನೊಂದಿಗೆ ಮೋಟಾರ್ ಇನ್ಶೂರೆನ್ಸ್ ಏಜೆಂಟ್/ಪಿ.ಒ.ಎಸ್.ಪಿ.(POSP) ಆಗುವುದು ಹೇಗೆ?

ಹಂತ 1

ಮೇಲೆ ನೀಡಲಾದ ನಮ್ಮ ಪಿ.ಒ.ಎಸ್.ಪಿ.(POSP) ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಸೈನ್ ಅಪ್ ಮಾಡಿ. ಎಲ್ಲ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಹಂತ 2

ನಮ್ಮೊಂದಿಗೆ ನಿಮ್ಮ 15-ಗಂಟೆಗಳ ತರಬೇತಿಯನ್ನು ಪೂರ್ಣಗೊಳಿಸಿ.

ಹಂತ 3

ಸೂಚಿಸಿರುವ ಪರೀಕ್ಷೆಯನ್ನು ಪೂರ್ಣಗೊಳಿಸಿ.

ಹಂತ 4

ನಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿ, ಅಷ್ಟೆ! ಈಗ ನೀವು ಪ್ರಮಾಣೀಕೃತ ಪಿ.ಒ.ಎಸ್.ಪಿ. ಆಗುತ್ತೀರಿ.

ನೀವು ಎಷ್ಟು ಗಳಿಸಬಹುದು?

 

ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆಗಿ ನಿಮ್ಮ ಆದಾಯವು, ನೀವು ಮಾರಾಟ ಮಾಡುವ ಪಾಲಿಸಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ನೀವು ಮಾರಾಟ ಮಾಡುವ ಪಾಲಿಸಿಗಳ ಸಂಖ್ಯೆಯು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆದವರು ಕಾರ್ , ಬೈಕ್ ಮತ್ತು ಕಮರ್ಷಿಯಲ್ ವೆಹಿಕಲ್'ಗಳಿಗೆ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಬಹುದು.

ಇದರರ್ಥ ನೀವು ಗ್ರಾಹಕರಿಗೆ ಕಾಂಪ್ರೆಹೆನ್ಸಿವ್  ಮತ್ತು ಸ್ಟ್ಯಾಂಡ್ ಲೋನ್ ಪಾಲಿಸಿಗಳನ್ನು ಮಾರಾಟ ಮಾಡಬಹುದು. ಇದಕ್ಕಾಗಿ ನೀವು ಪಡೆಯಬಹುದಾದ ಕಮಿಷನ್ ಚಿತ್ರಣವನ್ನು ಕೆಳಗೆ ನೀಡಲಾಗಿದೆ:

ಪಾಲಿಸಿ ಮತ್ತು ವೆಹಿಕಲ್'ನ ವಿಧಗಳು ವಾಹನದ ವಯಸ್ಸು ಗರಿಷ್ಠ ಕಮಿಷನ್ ದರ
ಕಾಂಪ್ರೆಹೆನ್ಸಿವ್ ಪಾಲಿಸಿ - ಫೋರ್ ವೀಲರ್ಸ್ ಮತ್ತು ಇತರ ರೀತಿಯ ಪ್ರೈವೇಟ್ ಅಥವಾ ಕಮರ್ಷಿಯಲ್ ವೆಹಿಕಲ್ಸ್ 1-3 ವರ್ಷ ಹಳೆಯದು ಓನ್ ಡ್ಯಾಮೇಜ್ ಪ್ರೀಮಿಯಂನ 15%
ಕಾಂಪ್ರೆಹೆನ್ಸಿವ್ ಪಾಲಿಸಿ - ಟು-ವೀಲರ್ಸ್ 1-3 ವರ್ಷ ಹಳೆಯದು ಓನ್ ಡ್ಯಾಮೇಜ್ ಪ್ರೀಮಿಯಂನ 17.5%
ಕಾಂಪ್ರೆಹೆನ್ಸಿವ್ ಪಾಲಿಸಿ - ಫೋರ್ ವೀಲರ್ಸ್ ಮತ್ತು ಇತರ ರೀತಿಯ ಪ್ರೈವೇಟ್ ಅಥವಾ ಕಮರ್ಷಿಯಲ್ ವೆಹಿಕಲ್ಸ್ 4 ವರ್ಷಗಳು ಮತ್ತು ಓನ್ ಡ್ಯಾಮೇಜ್ ಪ್ರೀಮಿಯಂನ 15% + ಥರ್ಡ್ ಪಾರ್ಟಿ ಪ್ರೀಮಿಯಂನ 2.5%
ಕಾಂಪ್ರೆಹೆನ್ಸಿವ್ ಪಾಲಿಸಿ - ಟು-ವೀಲರ್ಸ್ 4 ವರ್ಷಗಳು ಮತ್ತು ಮೇಲ್ಪಟ್ಟದ್ದು ಓನ್ ಡ್ಯಾಮೇಜ್ ಪ್ರೀಮಿಯಂನ 17.5% + ಥರ್ಡ್ ಪಾರ್ಟಿ ಪ್ರೀಮಿಯಂನ 2.5%
ಸ್ಟ್ಯಾಂಡ್ ಲೋನ್ ಥರ್ಡ್ ಪಾರ್ಟಿ ಲೈಬಿಲಿಟಿ ಪಾಲಿಸಿ - ಎಲ್ಲ ರೀತಿಯ ವೆಹಿಕಲ್ಸ್ ಯಾವುದೇ ವಯಸ್ಸು ಪ್ರೀಮಿಯಂನ 2.5%
ಮೂಲ : IRDAI

ನಾನು ಏಕೆ ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆಗಬೇಕು?

ನಿಮ್ಮ ಸ್ವಂತ ಬಾಸ್ ಆಗಿ

ಪಿ.ಒ.ಎಸ್.ಪಿ.(POSP)ಯಾದರೆ ಆಗುವ ಮೊದಲ ಪ್ರಯೋಜನವೆಂದರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡುವ ಸ್ವಾತಂತ್ರ್ಯ ನಿಮಗೆ ಸಿಗುತ್ತದೆ. ನೀವೀಗ ನಿಮ್ಮ ಸ್ವಂತ ಬಾಸ್ ಆಗಬಹುದು!

ಸಮಯದ ನಿರ್ಬಂಧಗಳಿಲ್ಲ!

ನೀವು ಪೂರ್ಣ ಸಮಯ ಕೆಲಸ ಮಾಡಲು ಬಯಸುತ್ತೀರೋ, ಅಥವಾ ಅರೆಕಾಲಿಕ  ಕೆಲಸ ಮಾಡಲು ಬಯಸುತ್ತೀರೋ ಎಂದು ನೀವೇ ನಿರ್ಧರಿಸಬಹುದು ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಸ್ವಂತ ಕೆಲಸದ ಸಮಯವನ್ನು ನೀವು ರಚಿಸಬಹುದು.

ಮನೆಯಿಂದಲೇ ಕೆಲಸ ಮಾಡಿ

ಡಿಜಿಟ್ ಇನ್ಶೂರೆನ್ಸಿನಲ್ಲಿ ನಾವು ಪ್ರಾಥಮಿಕವಾಗಿ ಇನ್ಶೂರೆನ್ಸ್ ಪಾಲಿಸಿಗಳನ್ನು, ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತೇವೆ. ಇದರರ್ಥ, ನೀವು ಪಿ.ಒ.ಎಸ್.ಪಿ. ಯಾಗಿ ಮನೆಯಿಂದಲೇ ಕೆಲಸ ಮಾಡಬಹುದು. ಮತ್ತು ಪಾಲಿಸಿಗಳನ್ನು ಮಾರಾಟ ಮಾಡಲು ಹಾಗೂ ವಿತರಿಸಲು ನಮ್ಮ ಆನ್‌ಲೈನ್ ಪ್ರಕ್ರಿಯೆಗಳನ್ನು ಬಳಸಬಹುದು.

ಕೇವಲ 15 ಗಂಟೆಗಳ ತರಬೇತಿ

ಪಿ.ಒ.ಎಸ್.ಪಿ.(POSP) ಎಂದು ದೃಢೀಕರಿಸಲು, IRDAI ನೀಡುವ 15-ಗಂಟೆಗಳ ಖಡ್ಡಾಯ ತರಬೇತಿಯನ್ನು ಪೂರ್ಣಗೊಳಿಸುವುದು, ಮುಖ್ಯ ಮಾನದಂಡಗಳಲ್ಲಿ ಒಂದಾಗಿದೆ;  ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ದೊಡ್ಡದೇನಲ್ಲ! ನೀವು ಬೋರ್ಡ್‌ನಲ್ಲಿ ಬರಲು 15 ಗಂಟೆಗಳ ಸಮಯದ ಹೂಡಿಕೆಯನ್ನು ತೆಗೆದುಕೊಳ್ಳುತ್ತದೆ!

ಅಧಿಕ ಗಳಿಕೆಯ ಸಾಮರ್ಥ್ಯ

ನಿಮ್ಮ ಗಳಿಕೆಯು ಕೆಲಸ ಮಾಡಿದ ಗಂಟೆಗಳ ಸಂಖ್ಯೆಯನ್ನು ಅವಲಂಬಿಸಿರುವುದಿಲ್ಲ. ಬದಲಿಗೆ ಅದು ನೀವು ನೀಡುವ ಪಾಲಿಸಿಗಳ ಸಂಖ್ಯೆಯನ್ನು ಅವಲಂಬಿಸಿದೆ.

ಶೂನ್ಯ ಹೂಡಿಕೆ

ಸ್ಮಾರ್ಟ್‌ಫೋನ್, ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ಅಗತ್ಯವಿರುವ 15-ಗಂಟೆಗಳ ತರಬೇತಿಯನ್ನು ಹೊರತುಪಡಿಸಿ, ನೀವು ಪಿ.ಒ.ಎಸ್.ಪಿ.(POSP) ಆಗಲು ಬೇರೇನೂ ಬೇಕಿಲ್ಲ. ಆದ್ದರಿಂದ, ನಿಮ್ಮ ಕಡೆಯಿಂದ ಯಾವುದೇ ಹಣಕಾಸಿನ ಹೂಡಿಕೆಯ ಅಗತ್ಯವಿಲ್ಲ, ಆದರೆ ನಿಮಗಿಲ್ಲಿ ಗಳಿಸುವ ಸಾಮರ್ಥ್ಯ, ಅವಕಾಶ  ಅಧಿಕವಾಗಿರುತ್ತವೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪಿ.ಒ.ಎಸ್.ಪಿ.(POSP) ಏಜೆಂಟ್ ಆಗಲು ಇರುವ ಮಾನದಂಡಗಳೇನು?

ನೀವು ಇನ್ಶೂರೆನ್ಸ್ ಏಜೆಂಟ್ ಆಗಲು ಬಯಸಿದರೆ, ನೀವು 18 ವರ್ಷ ಮೇಲ್ಪಟ್ಟವರಾಗಿರಬೇಕು. ಕನಿಷ್ಠ 10ನೇ ತರಗತಿವರೆಗೆ ಶಿಕ್ಷಣ ಮುಗಿಸಿರಬೇಕು. ಮತ್ತು ವ್ಯಾಲಿಡ್ ಆಗಿರುವ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಹೊಂದಿರಬೇಕು.

ನಾನು ಯಾವ ದಾಖಲೆಗಳನ್ನು ಸಲ್ಲಿಸಬೇಕು?

ನೋಂದಣಿಯ ಸಮಯದಲ್ಲಿ ನೀವು ಸಲ್ಲಿಸಬೇಕಾದ ದಾಖಲೆಗಳೆಂದರೆ 10 ನೇ ತರಗತಿ ಅಥವಾ ಅದಕ್ಕಿಂತ ಉನ್ನತ ತರಗತಿಯ ಪಾಸ್ ಪ್ರಮಾಣಪತ್ರ, ನಿಮ್ಮ ಪ್ಯಾನ್ ಕಾರ್ಡ್‌ನ ನಕಲು, ಆಧಾರ್ ಕಾರ್ಡ್ (ಮುಂಭಾಗ ಮತ್ತು ಹಿಂದೆ), ಕ್ಯಾನ್ಸಲ್ಡ್ ಚೆಕ್ (ನಿಮ್ಮ ಹೆಸರಿನೊಂದಿಗೆ) ಮತ್ತು ಭಾವಚಿತ್ರ.

ಪ್ಯಾನ್ ಕಾರ್ಡ್ ಹೊಂದಿರುವವರು ಮತ್ತು ಬ್ಯಾಂಕ್ ಖಾತೆದಾರರು ಒಂದೇ ಆಗಿರಬೇಕೇ?

ಹೌದು, ಪಾವತಿಸಿದ ಎಲ್ಲಾ ಕಮಿಷನ್‌ಗಳು ಟಿಡಿಎಸ್ ಗೆ ಒಳಪಟ್ಟಿರುತ್ತವೆ. ನಿಮ್ಮ ಪ್ಯಾನ್ ಕಾರ್ಡ್‌ನ ಆಧಾರದ ಮೇಲೆ, ಆದಾಯ ತೆರಿಗೆ ಅಧಿಕಾರಿಗಳಿಗೆ ಟಿಡಿಎಸ್ ಅನ್ನು ಕ್ರೆಡಿಟ್ ಮಾಡಲಾಗುತ್ತದೆ.

ನಾನು ಯಾವಾಗ ಮೋಟಾರ್ ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು?

ನೀವು ನಮ್ಮ ಜೊತೆ ನೋಂದಾಯಿಸಿದ ತಕ್ಷಣ, ಪಿ.ಒ.ಎಸ್.ಪಿ.(POSP)  ಪರೀಕ್ಷೆಗಾಗಿ ನಿಮ್ಮ ತರಬೇತಿಯನ್ನು ನೀವು ಪ್ರಾರಂಭಿಸಬಹುದು.

ಪರೀಕ್ಷೆಯನ್ನು ಬರೆದು ಮತ್ತು ಉತ್ತೀರ್ಣರಾದ ನಂತರ, ನೀವು ಇ-ಸರ್ಟಿಫಿಕೇಟ್ ಅನ್ನು ಸ್ವೀಕರಿಸುತ್ತೀರಿ. ಇದಾದ ನಂತರ, ನೀವು ಪಿ.ಒ.ಎಸ್.ಪಿ.(POSP) ಏಜೆಂಟ್ ಆಗಿ ಇನ್ಶೂರೆನ್ಸ್ ಮಾರಾಟ ಮಾಡಲು ಸಿದ್ಧರಾಗುತ್ತೀರಿ.

ಪಿ.ಒ.ಎಸ್. ವ್ಯಕ್ತಿಯೆಂದು ಪ್ರಮಾಣೀಕರಿಸಲು, ಯಾವುದೇ ತರಬೇತಿಯನ್ನು ಪಡೆಯುವುದು ಖಡ್ಡಾಯವೇ?

ಹೌದು, ನೀವು ಪಿ.ಒ.ಎಸ್.ಪಿ.(POSP) ಆಗಲು ತರಬೇತಿಯನ್ನು ಪೂರ್ಣಗೊಳಿಸಲೇಬೇಕು. ಇದು ಇನ್ಶೂರೆನ್ಸಿನ ಮೂಲಭೂತ ವಿಷಯಗಳು, ಪಾಲಿಸಿ ಪ್ರಕಾರಗಳು, ವಿತರಣೆಗಳು, ಕ್ಲೇಮ್ ಪ್ರಕ್ರಿಯೆಗಳು, ನಿಯಮಗಳು ಮತ್ತು ನಿಬಂಧನೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ನಾನು ಡಿಜಿಟ್ ಜೊತೆಗೆ ಪಾಲುದಾರರಾದರೆ, ನಾನು ಯಾವ ಬೆಂಬಲ ಸೇವೆಗಳನ್ನು ಪಡೆಯುತ್ತೇನೆ?

ಎಲ್ಲಾ ಡಿಜಿಟ್‌ನ ಪಾಲುದಾರರಿಗೆ ಸಂಬಂಧ ನಿರ್ವಾಹಕರನ್ನು (Relationship Manager) ನಿಯೋಜಿಸಲಾಗಿರುತ್ತದೆ. ಅವರು ಮಾರ್ಗದರ್ಶನವನ್ನು ನೀಡುತ್ತಾರೆ ಅದರ ಜೊತೆಗೆ ಡಿಜಿಟ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟವಾದ ಪಾಲಿಸಿಗಳಿಗೆ ಸಂಬಂಧಿಸಿದಂತೆ, ಏಜೆಂಟ್‌ಗಳು ಹೊಂದಿರಬಹುದಾದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಏಜೆಂಟ್‌ಗಳು ಯಾವುದೇ ಸಹಾಯಕ್ಕಾಗಿ  partner@godigit.com  ನಲ್ಲಿ ಇ-ಮೇಲ್ ಕಳಿಸುವ ಮೂಲಕ ನಮ್ಮ ಕಸ್ಟಮರ್ ಸಪೋರ್ಟ್ ಟೀಮ್ ಅನ್ನು ಸಹ ಸಂಪರ್ಕಿಸಬಹುದು.

ಪಿ.ಒ.ಎಸ್.ಪಿ.(POSP) ಪ್ರಮಾಣೀಕರಣವನ್ನು ಪೂರ್ಣಗೊಳಿಸಿದ ನಂತರ ನಾನು ನನ್ನ ಜ್ಞಾನವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು?

ಪ್ರಮಾಣೀಕರಣದ ನಂತರ, ನಮ್ಮ ಪಿ.ಒ.ಎಸ್.ಪಿ.(POSP) ಗಳಿಗಾಗಿ ನಾವು ಮತ್ತೊಂದು ವಿಶಾಲ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತೇವೆ.

ಅವರು ನಿಮ್ಮ ಇನ್ಶೂರೆನ್ಸ್ ಜ್ಞಾನವನ್ನು ಹೆಚ್ಚಿಸಲು ಹಾಗೂ ನಿಮ್ಮ ಮಾರಾಟ ಮತ್ತು  ಸೇವಾ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತಾರೆ. ಈ ತರಬೇತಿ ಕಾರ್ಯಕ್ರಮಗಳು ಮತ್ತು ಇವೆಂಟ್'ಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:

  • ಜಟಿಲವಾದ ಪ್ರಕರಣಗಳನ್ನು ನಿರ್ವಹಿಸಲು, ಸುಧಾರಿತ ಇನ್ಶೂರೆನ್ಸ್ ಜ್ಞಾನ.
  • ಇತ್ತೀಚಿನ ಇನ್ಶೂರೆನ್ಸ್ ಉತ್ಪನ್ನಗಳು ಮತ್ತು ಅವುಗಳನ್ನು ಹೇಗೆ ಪಿಚ್ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ
  • ನಿಮ್ಮ ಮಾರಾಟದ ಪ್ರಮಾಣವನ್ನು ಹೆಚ್ಚಿಸಲು ಸಹಾಯವಾಗುವಂತೆ, ವಿವಿಧ ಮಾರಾಟ ತಂತ್ರಗಳನ್ನು ತಮಾಷೆಯಾಗಿ ಮತ್ತು ಆಸಕ್ತಿದಾಯಕ ಮಾರ್ಗಗಳ ಮೂಲಕ ಕಲಿಸಲಾಗುತ್ತದೆ.

ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆಗಲು ನನಗೆ ಮಾರಾಟದ ಅನುಭವ ಬೇಕೇ?

ಮಾರಾಟದ ಅನುಭವವು ಖಂಡಿತವಾಗಿಯೂ ಒಂದು ಪ್ರಯೋಜನವಾಗಿದೆ ಆದರೆ ನೀವು ಅಂತಹ ಅನುಭವವನ್ನು ಹೊಂದಿಲ್ಲದಿದ್ದರೂ ಸಹ, ಆಗಲೂ ನೀವು ಅರ್ಜಿ ಸಲ್ಲಿಸಬಹುದು ಮತ್ತು ಈ ಕ್ಷೇತ್ರದಲ್ಲಿ ನಿಮ್ಮ ವೃತ್ತಿಜೀವನವನ್ನು ನಡೆಸಬಹುದು.

For list of Corporate & Individual Agents,  click here.