ಡಿಜಿಟ್ ಪಾರ್ಟ್ನರ್ ಆಗಿರಿ
35,000+ ಪಾರ್ಟ್ನರ್‌ಗಳು ಡಿಜಿಟ್‌ನೊಂದಿಗೆ 674 ಕೋಟಿ+ ಗಳಿಸಿದ್ದಾರೆ.

ಗೃಹಿಣಿಯರು ಮನೆಯಲ್ಲಿಯೇ ಹಣ ಗಳಿಸುವುದು ಹೇಗೆ?

Source: ayoti

ಗೃಹಿಣಿಯರು ಮನೆಯ ವ್ಯವಸ್ಥಾಪಕರಾಗಿ, ಮನೆ ಮತ್ತು ಕುಟುಂಬವನ್ನು ನೋಡಿಕೊಳ್ಳುವ ಕೆಲವು ಮುಖ್ಯ ಕೆಲಸಗಳನ್ನು ಮಾಡುತ್ತಾರೆ ಎಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಮತ್ತು ಇಂತಹ ಸವಾಲಿನ ಕೆಲಸಕ್ಕೆ ಗೃಹಿಣಿಯರಿಗೆ ಒಂದು ದಿನವೂ ರಜೆ ಇಲ್ಲ. 

ಆದಾಗ್ಯೂ, ನೀವು ಒಬ್ಬ ಗೃಹಿಣಿಯಾಗಿದ್ದರೆ, ಮನೆಯಿಂದಲೇ ಕೆಲಸ ಮಾಡುವ ತಾಯಿಯಾಗಿದ್ದರೆ, ನೀವು ಇನ್ನೂ ಸ್ವಲ್ಪ ಹೆಚ್ಚಿನದನ್ನು ಮಾಡಲು ಬಯಸುತ್ತೀರಿ ಅಲ್ಲದೇ ಸ್ವಲ್ಪ ಹಣ ಗಳಿಸುವ ಅವಕಾಶವನ್ನು ಸಹ ಪಡೆಯಬಹುದೆಂದು ನೀವು ಭಾವಿಸಬಹುದು.

ಅದೃಷ್ಟವಶಾತ್, ಗೃಹಿಣಿಯರು ಮನೆಯಿಂದಲೇ ಮಾಡಬಹುದಾದ ಹಲವಾರು ಕೆಲಸಗಳಿದ್ದು, ಇವು ನಿಮ್ಮ ದೈನಂದಿನ ಕೆಲಸಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜೊತೆಗೆ ಇವು ಸರಳವಾಗಿದ್ದು, ಗೃಹಿಣಿಯರ ಅನುಕೂಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮತ್ತು ಯಾವುದೇ ಹೂಡಿಕೆಯ ಅಗತ್ಯವಿಲ್ಲದ ಕೆಲಸಗಳಾಗಿವೆ.

ಗೃಹಿಣಿಯರು ಮನೆಯಲ್ಲಿಯೇ ಹಣ ಗಳಿಸುವ ಪ್ರಮುಖ ಮಾರ್ಗಗಳು ಇಲ್ಲಿವೆ

1. ಇನ್ಶೂರೆನ್ಸ್ ಪಿ.ಓ.ಎಸ್.ಪಿ ಆಗಿ

ಪಿ.ಓ.ಎಸ್.ಪಿ (ಅಥವಾ ಪಾಯಿಂಟ್ ಆಫ್ ಸೇಲ್ಸ್ ಪರ್ಸನ್) ಎಂದರೆ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಕ್ತಿ. ಗ್ರಾಹಕರಿಗೆ ಅವರ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ, ತಮ್ಮ ಪಾಲಿಸಿಗಳನ್ನು ಮಾರಾಟ ಮಾಡಲು ಇನ್ಶೂರೆನ್ಸ್ ಕಂಪನಿಗಳೊಂದಿಗೆ ಕೆಲಸ ಮಾಡುವ ಇನ್ಶೂರೆನ್ಸ್ ಏಜೆಂಟ್‌ಗಳು.

  • ಯಾವುದೇ ಹೂಡಿಕೆ ಅಥವಾ ಅವಶ್ಯಕತೆ ಇದೆಯೇ? - ಇನ್ಶೂರೆನ್ಸ್ ಏಜೆಂಟ್ ಆಗಲು, ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ನೀವು ಈ ಅವಶ್ಯಕತೆಗಳನ್ನು ಪೂರೈಸಿದರೆ, ನಿಮ್ಮ ಲೈಸೆನ್ಸ್ ಪಡೆಯಲು ಐ.ಆರ್.ಡಿ.ಎ.ಐ ನೀಡುವ 15-ಗಂಟೆಗಳ ಕಡ್ಡಾಯ ತರಬೇತಿಯನ್ನು ಸಹ ನೀವು ಪೂರ್ಣಗೊಳಿಸಬೇಕಾಗುತ್ತದೆ.

  • ನೀವು ಎಷ್ಟು ಸಂಪಾದಿಸಬಹುದು? - ನಿಮ್ಮ ಆದಾಯವು ಕಮಿಷನ್‌ಗಳನ್ನು ಆಧರಿಸಿರುತ್ತದೆ, ಹೀಗಾಗಿ ನೀವು ಎಷ್ಟು ಗಳಿಸುತ್ತೀರಿ ಎಂಬುದು ನೀವು ಮಾರಾಟ ಮಾಡುವ ಪಾಲಿಸಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ನೀವು ಹೆಚ್ಚು ಮಾರಾಟ ಮಾಡಿದಷ್ಟು, ನಿಮ್ಮ ಆದಾಯವು ಹೆಚ್ಚಾಗುತ್ತದೆ.

  • ಮೂಲಭೂತವಾಗಿ, ಸ್ಮಾರ್ಟ್‌ಫೋನ್ ಮತ್ತು ಉತ್ತಮ ಇಂಟರ್ನೆಟ್ ಸಂಪರ್ಕ ಇರುವವರೆಗೆ, ಮಾರಾಟ ಮಾಡುವ ಆತ್ಮವಿಶ್ವಾಸ ಹೊಂದಿರುವ ಯಾರಾದರೂ ಪಿ.ಓ.ಎಸ್.ಪಿ ಏಜೆಂಟ್ ಆಗಬಹುದು.

2. ಮನೆಯಲ್ಲಿ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿ

ಮನೆಯಿಂದಲೇ ಸುಲಭವಾಗಿ ಹಣ ಗಳಿಸುವ ಇನ್ನೊಂದು ವಿಧಾನವೆಂದರೆ ಮನೆಯಲ್ಲಿ ತಯಾರಿಸಿದ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು. ಇದು ಬೇಯಿಸಿದ ಪದಾರ್ಥಗಳು, ಆರೋಗ್ಯಕರ ತಿಂಡಿಗಳು, ಪರಿಮಳಯುಕ್ತ ಮೇಣದಬತ್ತಿಗಳು, ವಾಲ್ ಹ್ಯಾಂಗಿಂಗ್‌ಗಳು, ಟೇಬಲ್ ಮ್ಯಾಟ್‌ಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಒಳಗೊಂಡಿರುತ್ತದೆ. ನೀವು ಕಲೆ ಮತ್ತು ಕರಕುಶಲತೆಯಲ್ಲಿ ಅಥವಾ ಅಡುಗೆಯಲ್ಲಿ ವಿಶೇಷ ಕೌಶಲ್ಯಗಳನ್ನು ಹೊಂದಿದ್ದರೆ, ನೀವು ಇಟ್ಸಿ, ಅಮೆಜಾನ್, ಫ್ಲಿಪ್ಕಾರ್ಟ್, ಅಥವಾ ಆಜಿಯೋ ನಂತಹ ಸೈಟ್‌ಗಳಲ್ಲಿ ಸುಲಭವಾಗಿ ನಿಮ್ಮನ್ನು ನೀವೇ 'ಸೆಲ್ಲರ್' ಎಂದು ರಿಜಿಸ್ಟರ್ ಮಾಡಿಕೊಳ್ಳಬಹುದು.

ಅಥವಾ, ನೀವು ಸೋಷಿಯಲ್ ಮೀಡಿಯಾದಲ್ಲಿ ಸೆಕೆಂಡರಿ ಡೆಲಿವರಿ ಸರ್ವೀಸ್ ಅನ್ನು ಬಳಸಿಕೊಂಡು, ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಬಳಗಕ್ಕೆ ನಿಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಬಹುದು.

  • ಯಾವುದಾದರೂ ಹೂಡಿಕೆ ಅಥವಾ ಅವಶ್ಯಕತೆ ಇದೆಯೇ? - ನಿಮ್ಮ ಉತ್ಪನ್ನಗಳಿಗಾಗಿ, ಅಡುಗೆ ಪದಾರ್ಥಗಳು ಅಥವಾ ಕರಕುಶಲ ವಸ್ತುಗಳಂತಹ ಕಚ್ಚಾ ಸಾಮಗ್ರಿಗಳ ಮೇಲೆ ನೀವು ಹೂಡಿಕೆ ಮಾಡಬೇಕಾಗುತ್ತದೆ.

  • ನೀವು ಎಷ್ಟು ಸಂಪಾದಿಸಬಹುದು? - ನಿಮ್ಮ ಆದಾಯವು ನೀವು ಮಾರಾಟ ಮಾಡುವ ಉತ್ಪನ್ನಗಳು, ನಿಮ್ಮ ಮಾರ್ಕೆಟಿಂಗ್ ಕೌಶಲ್ಯಗಳು ಮತ್ತು ನೀವು ಆಯ್ಕೆಮಾಡುವ ಸೆಲ್ಲಿಂಗ್ ಪಾರ್ಟ್ನರ್ ಸೈಟ್ ಅನ್ನು ಅವಲಂಬಿಸಿರುತ್ತವೆ. ಮತ್ತು, ನಿಮ್ಮ ಉತ್ಪನ್ನಗಳಿಗೆ ನೀವು ಹೆಚ್ಚಿನ ಬೆಲೆಯನ್ನು ಹೊಂದಿಸಬಹುದು.

3. ಅನುವಾದದ ಉದ್ಯೋಗಗಳತ್ತ ಮುಖಮಾಡಿ

ಗೃಹಿಣಿಯರಿಗೆ ಅನೇಕ ಭಾಷೆಗಳು ಗೊತ್ತಿದ್ದರೆ, ಹಣ ಸಂಪಾದಿಸಲು ಅವರಿಗೊಂದು ಸರಳ ಉಪಾಯವಿದೆ, ಅದುವೇ ಅನುವಾದ ಮಾಡುವ ಕೆಲಸ. ಡಾಕ್ಯುಮೆಂಟುಗಳು, ವಾಯ್ಸ್ ಮೇಲ್‌ಗಳು, ಪೇಪರ್‌ಗಳು, ಸಬ್ ಟೈಟಲ್ ಮತ್ತು ಮುಂತಾದವುಗಳನ್ನು ಅನುವಾದಿಸಲು ಜನರಿಗೆ ಸಾಕಷ್ಟು ಬೇಡಿಕೆಯಿದೆ. ಇದಕ್ಕಾಗಿ ನೀವು ಟ್ರಾನ್ಸ್ಲೇಷನ್ ಏಜೆನ್ಸಿಗಳು ಅಥವಾ ಫ್ರೀಲ್ಯಾನ್ಸ್ ಇಂಡಿಯಾ, ಅಪ್‌ವರ್ಕ್ ಅಥವಾ ಟ್ರೂಲಾನ್ಸರ್‌ನಂತಹ ಸ್ವತಂತ್ರ ಪೋರ್ಟಲ್‌ಗಳೊಂದಿಗೆ ಸಂಪರ್ಕ ಹೊಂದಬಹುದು.

  • ಯಾವುದಾದರೂ ಹೂಡಿಕೆ ಅಥವಾ ಅವಶ್ಯಕತೆ ಇದೆಯೇ? - ಹೆಚ್ಚು ಹೂಡಿಕೆ ಇಲ್ಲ ಹಾಗೂ ಸಾಮಾನ್ಯವಾಗಿ ಯಾವುದೇ ನಿರ್ದಿಷ್ಟ ಶಿಕ್ಷಣದ ಅಗತ್ಯವಿಲ್ಲ.

  • ನೀವು ಎಷ್ಟು ಸಂಪಾದಿಸಬಹುದು? – ನಿಮ್ಮ ಆದಾಯವು ನಿಮಗೆ ತಿಳಿದಿರುವ ಭಾಷೆಗಳ ಸಂಖ್ಯೆಗೆ ಅನುಗುಣವಾಗಿರುತ್ತದೆ. ಹೆಚ್ಚುವರಿಯಾಗಿ, ನೀವು ಪ್ರತಿ ಪದಗಳ ಆಧಾರದಲ್ಲಿ ಹಣ ಪಡೆಯುವವರಾದರೆ, ಭಾಷೆಯ ಆಧಾರದ ಮೇಲೆ ನೀವು ಪ್ರತಿ ಪದಕ್ಕೆ ₹1 ರಿಂದ ₹4 ರವರೆಗೆ ಪಡೆಯಬಹುದು.

  • ನೀವು ವಿದೇಶಿ ಭಾಷೆ (ಫ್ರೆಂಚ್, ರಷ್ಯನ್, ಸ್ಪ್ಯಾನಿಷ್, ಅಥವಾ ಜಪಾನೀಸ್ ನಂತಹ) ತಿಳಿದಿದ್ದರೆ ಮತ್ತು ಅದಕ್ಕಾಗಿ ಪ್ರಮಾಣಪತ್ರವನ್ನು ಹೊಂದಿದ್ದರೆ, ನೀವು ಯಾವಾಗಲೂ ಹೆಚ್ಚು ಗಳಿಸಬಹುಸು ಎಂಬುದು ನೆನಪಿರಲಿ.

4. ಬ್ಲಾಗ್ ಅನ್ನು ಪ್ರಾರಂಭಿಸಿ

ಮನೆಯಿಂದಲೇ ಹಣ ಗಳಿಸುವ ಅತ್ಯಂತ ಜನಪ್ರಿಯ ವಿಧಾನವೆಂದರೆ ಅದುವೇ ಬ್ಲಾಗ್ ಅನ್ನು ಪ್ರಾರಂಭಿಸುವುದು. ಯಾರು ಬೇಕಾದರೂ ಬ್ಲಾಗರ್ ಆಗಬಹುದು, ನಿಮಗೆ ಬೇಕಾಗಿರುವುದು ನಿಮ್ಮ ಆಸಕ್ತಿಯ ವಿಷಯಗಳಾದ ಪ್ರವಾಸ, ಆರ್ಟ್ ಮತ್ತು ಕ್ರಾಫ್ಟ್, ಆಹಾರ, ಪುಸ್ತಕಗಳು, ಮೇಕಪ್ ಇತ್ಯಾದಿಗಳು. 

ನೀವು ವರ್ಡ್‌ಪ್ರೆಸ್, ವೀಬ್ಲಿ, ಮೀಡಿಯಮ್, ಅಥವಾ ಬ್ಲಾಗರ್ ನಂತಹ ಬ್ಲಾಗಿಂಗ್ ಸೈಟ್‌ಗಳಲ್ಲಿ ಸೈನ್ ಅಪ್ ಮಾಡಬಹುದು. ನಂತರ, ನೀವು ಮಾಡಬೇಕಾಗಿರುವುದು ಈ ಆಸಕ್ತಿದಾಯ ವಿಷಯಗಳ ಬಗ್ಗೆ ಬರೆಯುವುದು. ನಿಮ್ಮ ಬ್ಲಾಗ್ ಪ್ರಾರಂಭವಾದ ನಂತರ ಸ್ವಲ್ಪ ಜನಪ್ರಿಯತೆಯನ್ನು ಪಡೆದ ಮೇಲೆ, ನೀವು ಜಾಹೀರಾತುಗಳ ಮೂಲಕ ಆದಾಯವನ್ನು ಗಳಿಸಬಹುದು.

ಹೆಚ್ಚುವರಿಯಾಗಿ, ನೀವು ನಿಮ್ಮ ಬ್ಲಾಗ್‌ನಲ್ಲಿ ಪಿಡಿಎಫ್ ಗಳು, ಪ್ರಿಂಟೆಬಲ್‌ಗಳು, ಇ-ಪುಸ್ತಕಗಳನ್ನು ಸಹ ಮಾರಾಟ ಮಾಡಬಹುದು, ವಿಶೇಷವಾಗಿ ನೀವು ಕಿಚನ್ ರೆಸಿಪಿಗಳನ್ನು ಅಥವಾ ಕ್ರಾಫ್ಟ್ ಐಡಿಯಾಗಳಂತಹ ವಿಷಯಗಳನ್ನು ಶೇರ್ ಮಾಡಬಹುದು.

  • ಯಾವುದಾದರೂ ಹೂಡಿಕೆ ಅಥವಾ ಅವಶ್ಯಕತೆ ಇದೆಯೇ? - ನೀವು ನಿರ್ದಿಷ್ಟ ಡೊಮೇನ್ ಹೆಸರನ್ನು ಖರೀದಿಸಲು ಇಚ್ಛಿಸದ ಹೊರತು, ಇದು ಹೆಚ್ಚಿನ ಹೂಡಿಕೆಯನ್ನು ಒಳಗೊಂಡಿರುವುದಿಲ್ಲ. ಆದಾಗ್ಯೂ, ಸರ್ಚ್ ಇಂಜಿನ್ ಆಪ್ಟಿಮೈಸೇಶನ್ (ಅಥವಾ ಎಸ್‌ಇಒ) ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುವುದು ನಿಮಗೆ ಪ್ರಯೋಜನಕಾರಿಯಾಗಿದೆ, ಇದರಿಂದ ನಿಮ್ಮ ಸೈಟ್ ಹೆಚ್ಚು ಕಾಣಿಸುತ್ತದೆ.

  • ನೀವು ಎಷ್ಟು ಸಂಪಾದಿಸಬಹುದು? - ನಿಮ್ಮ ಗಳಿಕೆಯು ನಿಮ್ಮ ಸೈಟ್‌ನ ಜನಪ್ರಿಯತೆ, ನಿಮ್ಮ ಕೆಲಸ ಮತ್ತು ಓದುಗರನ್ನು ಅವಲಂಬಿಸಿರುತ್ತದೆ. ಸಾಕಷ್ಟು ಜನಪ್ರಿಯ ಸೈಟ್‌ನೊಂದಿಗೆ, 2″x2″ ಜಾಹೀರಾತು ಸ್ಥಳಕ್ಕಾಗಿ, ನೀವು ತಿಂಗಳಿಗೆ ₹2,000-15,000 ವರೆಗೆ ಗಳಿಸಬಹುದು.

5. ಯುಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸಿ

ನೀವು ಬರವಣಿಗೆಯ ಅಭಿಮಾನಿಯಲ್ಲದಿದ್ದರೂ ಸಹ ಹೊರ ಜಗತ್ತಿನೊಂದಿಗೆ ಹಂಚಿಕೊಳ್ಳಲು ನಿಮಗೆ ಆಸಕ್ತಿಯಿದ್ದರೆ, ಆಗ ನೀವು ಯುಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸಲು ಯೋಚಿಸಬಹುದು. ಬ್ಲಾಗ್‌ನಂತೆ, ನೀವು ಕಿಚನ್ ರೆಸಿಪಿಗಳಿಂದ ಹಿಡಿದು ಡ್ಯಾನ್ಸ್ ಅಥವಾ ಆರ್ಟ್ ಟ್ಯುಟೋರಿಯಲ್‌ಗಳವರೆಗೆ ಯುಟ್ಯೂಬ್ ನಲ್ಲಿ ಯಾವುದೇ ರೀತಿಯ ವಿಷಯವನ್ನು ಹಂಚಿಕೊಳ್ಳಬಹುದು. ನೀವು ಯಾವುದೇ ವಿಶೇಷ ಸೈಟ್‌ಗಳಿಗೆ ಸೈನ್ ಅಪ್ ಮಾಡುವ ಅಗತ್ಯವಿಲ್ಲ, ನಿಮಗೆ ಬೇಕಾಗಿರುವುದು ಕೇವಲ ಒಂದು ಇಮೇಲ್ ಅಡ್ರೆಸ್ ಮತ್ತು ಯುಟ್ಯೂಬ್ ಅಕೌಂಟ್. ಹಾಗೂ ಬ್ಲಾಗ್‌ನಂತೆ, ನೀವು ಜಾಹೀರಾತುಗಳ ಮೂಲಕ ಆದಾಯವನ್ನು ಗಳಿಸಬಹುದು.

ಜಾಹೀರಾತುಗಳಿಂದ ಬರುವ ಆದಾಯದ ಹೊರತಾಗಿಯೂ ನೀವು ಅಧಿಕ ಫಾಲೋವರ್‌ಗಳನ್ನು ಹೊಂದಿದರೆ, ನಿಮ್ಮ ವೀಡಿಯೊದಲ್ಲಿ ನೀವು ಪ್ರಚಾರ ಮಾಡಬಹುದಾದ ಬ್ರ್ಯಾಂಡ್‌ಗಳೊಂದಿಗೆ, ಪೇಯ್ಡ್ ಪಾರ್ಟ್ನರ್‌ಶಿಪ್ ಡೀಲ್‌ಗಳ ಮೂಲಕ ಹೆಚ್ಚುವರಿ ಆದಾಯವನ್ನು ಸಹ ನೀವು ಪಡೆಯಬಹುದು.

  • ಯಾವುದಾದರೂ ಹೂಡಿಕೆ ಅಥವಾ ಅವಶ್ಯಕತೆ ಇದೆಯೇ? - ನಿಮಗೆ ಅಗತ್ಯವಿರುವ ಯಾವುದೇ ವಸ್ತುಗಳ ಅಥವಾ ಪೂರೈಕೆಗಳ ಹೊರತಾಗಿ, ಬೇರಾವುದೇ ಹೂಡಿಕೆಯನ್ನು ಇದು ಒಳಗೊಂಡಿಲ್ಲ.

  • ನೀವು ಎಷ್ಟು ಸಂಪಾದಿಸಬಹುದು? - ನಿಮ್ಮ ಗಳಿಕೆಯು ನಿಮ್ಮ ನೋಡುಗರ ಸಂಖ್ಯೆಯನ್ನು ಅವಲಂಬಿಸಿರುತ್ತದೆ; ಸರಾಸರಿ, ನೀವು ಪ್ರತಿ ವೀಡಿಯೊಗೆ 10ಸಾವಿರ ವೀಕ್ಷಣೆಗಾಗಿ ₹200 ರಿಂದ ₹500 ಗಳಿಸಬಹುದು ಮತ್ತು ಇದು ವೀಕ್ಷಣೆಗಳ ಸಂಖ್ಯೆಯೊಂದಿಗೆ ಹೆಚ್ಚಾಗುತ್ತದೆ.

6. ಟ್ರಾವೆಲ್ ಏಜೆಂಟ್ ಅಥವಾ ಪ್ಲ್ಯಾನರ್ ಆಗಿ

ಗೃಹಿಣಿಯರಿಗೆ ಹೆಚ್ಚು ಕಡೆಗಣಿಸಲ್ಪಟ್ಟ ಉದ್ಯೋಗವೆಂದರೆ ಮನೆಯಿಂದಲೇ ಟ್ರಾವೆಲ್ ಏಜೆಂಟ್ ಆಗಿ ಕೆಲಸ ಮಾಡುವುದು. ಇಂದಿನ ದಿನಗಳಲ್ಲಿ ಪ್ರಯಾಣದ ವ್ಯವಸ್ಥೆ ಮಾಡುವುದು ಮತ್ತು ಟಿಕೆಟ್‌ಗಳನ್ನು ಬುಕ್ ಮಾಡುವುದು ಎಲ್ಲವನ್ನೂ ಆನ್‌ಲೈನ್‌ನಲ್ಲಿ ಮಾಡಬಹುದು, ಆದರೆ ಅದು ಬಿಡುವಿಲ್ಲದವರಿಗೆ ಅಥವಾ ಇಂಟರ್ನೆಟ್‌ನ ಪರಿಚಯವಿಲ್ಲದವರಿಗೆ ದೊಡ್ಡ ತೊಂದರೆಯಾಗಬಹುದು. ಇದು ಟ್ರಾವೆಲ್ ಏಜೆಂಟ್‌ಗಳು ಮತ್ತು ಪ್ಲ್ಯಾನರ್‌ಗಳಿಗೆ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ.

ನೀವು ಅಪ್‌ವರ್ಕ್, ಅವಂತ್‌ಸ್ಟೇ, ಅಥವಾ ಹಾಪರ್‌ನಂತಹ ಸೈಟ್‌ನೊಂದಿಗೆ ಕೆಲಸ ಮಾಡಲು ಸೈನ್ ಅಪ್ ಮಾಡಬಹುದು ಅಥವಾ ನೀವು ಸೆಲ್ಫ್-ಎಂಪ್ಲಾಯ್ಡ್ ಟ್ರಾವೆಲ್ ಏಜೆಂಟ್ ಆಗಿಯೂ ಕೆಲಸ ಮಾಡಬಹುದು.

  • ಯಾವುದಾದರೂ ಹೂಡಿಕೆ ಅಥವಾ ಅವಶ್ಯಕತೆ ಇದೆಯೇ? - ಯಾವುದೇ ಹೂಡಿಕೆ ಅಥವಾ ಅವಶ್ಯಕತೆ ಇಲ್ಲ, ಆದರೂ ಅಗ್ಗದ ವಿಮಾನಗಳು, ಅಗ್ಗದ ಹೋಟೆಲ್ ಬುಕಿಂಗ್ ಮತ್ತು ಇತರ ಉತ್ತಮ ಟ್ರಾವೆಲ್ ಡೀಲ್‌ಗಳನ್ನು ಕಂಡುಹಿಡಿಯುವುದು ಹೇಗೆಂದು ನೀವು ತಿಳಿದಿರಬೇಕು.

  • ನೀವು ಎಷ್ಟು ಸಂಪಾದಿಸಬಹುದು? - ನೀವು ಎಷ್ಟು ಸಂಪಾದಿಸುತ್ತೀರಿ ಎಂಬುದು ನಿಮ್ಮ ಗ್ರಾಹಕರು, ನೀವು ಕೆಲಸ ಮಾಡುವ ಕಂಪನಿ ಅಥವಾ ನೀವು ವ್ಯವಹರಿಸುವ ರಜಾದಿನಗಳ ವಿಧಗಳನ್ನು ಅವಲಂಬಿಸಿರುತ್ತದೆ (ಉದಾಹರಣೆಗೆ, ಲಕ್ಷುರಿ ವೆಕೇಶನ್ಸ್, ಫ್ಯಾಮಿಲಿ ಟ್ರಿಪ್, ಇತ್ಯಾದಿ).

ಯಾವುದೇ ಹೂಡಿಕೆಯಿಲ್ಲದೆ ಆನ್‌ಲೈನ್‌ನಲ್ಲಿ ಹಣ ಗಳಿಸುವುದು ಹೇಗೆ ಎಂದು ಹುಡುಕುತ್ತಿರುವ ಗೃಹಿಣಿಯರಿಗೆ, ತಂತ್ರಜ್ಞಾನ ಎನ್ನುವುದು ಹಿಂದೆಂದಿಗಿಂತಲೂ ಸುಲಭವಾಗಿದೆ. ಈ ಕೆಲಸ ನೋಡುವುದಕ್ಕಿಂತ ಸುಲಭವಾಗಿದೆ. ಅಲ್ಲದೇ, ಈ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಹಾಗೂ ಮನೆಯಲ್ಲಿ ಕುಳಿತು ಸ್ವಲ್ಪ ಹಣವನ್ನು ಗಳಿಸಲು ನಿಮಗೆ ಸ್ವಲ್ಪ ಬಿಡುವಿನ ಸಮಯ ಬೇಕಾಗುತ್ತದೆ.

ಪದೇಪದೇ ಕೇಳಲಾದ ಪ್ರಶ್ನೆಗಳು

ಗೃಹಿಣಿಯರು ಪಾರ್ಟ್-ಟೈಮ್ ಕೆಲಸ ಏಕೆ ಮಾಡಬೇಕು?

ಗೃಹಿಣಿಯರು ಈಗಾಗಲೇ ಪ್ರಪಂಚದಲ್ಲೇ ಅತ್ಯಂತ ಕಷ್ಟಕರವಾದ ಕೆಲಸವನ್ನು ನಿರ್ವಹಿಸುತ್ತಿದ್ದು, ಮನೆ ಮತ್ತು ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದಾಗ್ಯೂ, ಪಾರ್ಟ್-ಟೈಮ್ ಕೆಲಸವನ್ನು ಮಾಡುವುದು ಅವರಿಗೆ ಸ್ವಲ್ಪ ಹಣವನ್ನು ಗಳಿಸಲು ಸಹಾಯ ಮಾಡುವುದಲ್ಲದೇ, ಅವರಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ತೃಪ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ.

ಗೃಹಿಣಿಯರು ಮತ್ತು ಮನೆಯಲ್ಲಿಯೇ ಇರುವ ಪೋಷಕರಿಗಾಗಿ ಮನೆಯಿಂದಲೇ ಮಾಡಬಹುದಾದ ಸರಿಯಾದ ಕೆಲಸವನ್ನು ಆಯ್ಕೆ ಮಾಡುವುದು ಹೇಗೆ?

ಮನೆಯಲ್ಲಿಯೇ ಇರುವ ಪೋಷಕರು ಮತ್ತು ಗೃಹಿಣಿಯರಿಗೆ ಸಾಕಷ್ಟು ವೃತ್ತಿ ಆಯ್ಕೆಗಳಿವೆ. ಉತ್ತಮ ಆಯ್ಕೆಗಳೆಂದರೆ ಮನೆಯಿಂದ ಮಾಡುವ ಕೆಲಸ, ಕರಿಯರ್ ಗ್ಯಾಪ್‌ನ ನಂತರ ಪ್ರಾರಂಭಿಸುವ ಕೆಲಸ ಅಥವಾ ಪಾರ್ಟ್-ಟೈಮ್ ಆಧಾರದ ಮೇಲೆ ಮಾಡಬಹುದಾದ ಕೆಲಸ.

ಆನ್‌ಲೈನ್ ಉದ್ಯೋಗ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಅನುಭವದ ಅಗತ್ಯವಿದೆಯೇ?

ಇದು ನೀವು ಮಾಡಲು ಬಯಸುವ ಕೆಲಸದ ವಿಧಗಳನ್ನು ಅವಲಂಬಿಸಿರುತ್ತದೆ. ಉದ್ಯೋಗವು, ಯಾವುದಾದರೂ ಪ್ರವೇಶದ ಅವಶ್ಯಕತೆಗಳನ್ನು ಹೊಂದಿದೆಯೇ ಎಂದು ಪರಿಶೀಲಿಸಿ. ಆದಾಗ್ಯೂ, ನೀವು ಮನೆಯಲ್ಲಿ ತಯಾರಿಸಿದ ಆಹಾರ ಅಥವಾ ವಸ್ತುಗಳನ್ನು ಮಾರಾಟ ಮಾಡುವ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುತ್ತಿದ್ದರೆ, ನಿಮಗೆ ಬೇಕಾಗಿರುವುದು ಕೇವಲ ಹೆಚ್ಚಿನ ಸ್ಪೀಡ್‌ನ ಇಂಟರ್ನೆಟ್ ಕನೆಕ್ಷನ್, ಪ್ರಮೋಷನ್‌ಗಾಗಿ ಉತ್ತಮ ಮಾರ್ಕೆಟಿಂಗ್ ಸ್ಕಿಲ್‌ಗಳು ಮತ್ತು ನಿಮ್ಮ ಕೆಲಸದ ಉತ್ಸಾಹ.

ಆನ್‌ಲೈನ್‌ನಲ್ಲಿ ಉದ್ಯೋಗ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ದೊಡ್ಡ ಹೂಡಿಕೆಯ ಅಗತ್ಯವಿದೆಯೇ?

ನೀವು ಆನ್‌ಲೈನ್‌ನಲ್ಲಿ ಮಾಡಲು ಬಯಸುವ ಕೆಲಸಕ್ಕೆ ಅಗತ್ಯವಿರುವ ಹೂಡಿಕೆಯು, ಕೆಲಸ ಯಾವುದೆಂಬುದನ್ನು ಅವಲಂಬಿಸಿ ಬದಲಾಗುತ್ತದೆ. ಉದಾಹರಣೆಗೆ, ಪಿ.ಓ.ಎಸ್.ಪಿ ಆಗಲು ಹೆಚ್ಚಿನ ಹೂಡಿಕೆಯ ಅಗತ್ಯವಿರುವುದಿಲ್ಲ, ಆದರೆ ಕೆಲವು ಬೇರೆ ವ್ಯವಹಾರಗಳಿಗೆ ಹೂಡಿಕೆಯು ತಿಂಗಳಿಗೆ ಶೂನ್ಯದಿಂದ ಹಿಡಿದು ₹5000 ವರೆಗೆ ಬದಲಾಗಬಹುದು.