Thank you for sharing your details with us!

ಫಿಡೆಲಿಟಿ ಇನ್ಶೂರೆನ್ಸ್ ಎಂದರೇನು?

ನಿಮಗೆ ಫಿಡೆಲಿಟಿ ಇನ್ಶೂರೆನ್ಸ್ ಕವರ್ ಏಕೆ ಬೇಕು?

1
ಕೇವಲ 2013 ರಲ್ಲಿಯೇ ಭಾರತೀಯ ರಿಟೇಲ್ ಬಿಸಿನೆಸ್ ಸುಮಾರು ₹ 9,300 ಕೋಟಿಗಳನ್ನು ಅಂಗಡಿ ಕಳ್ಳತನ ಮತ್ತು ಕಳ್ಳತನದಿಂದ ಕಳೆದುಕೊಂಡಿದೆ. (1)
2
ಕನಿಷ್ಠ 68% ಬಿಸಿನೆಸ್‌ಗಳು ಭಾರತದಲ್ಲಿ ಕಳ್ಳತನ ಅಥವಾ ವಂಚನೆಯ ಕೆಲವು ರೀತಿಯ ಘಟನೆಗಳನ್ನು ಎದುರಿಸಿವೆ. (2)
3
ಎಂಪ್ಲಾಯೀಗಳ ವಂಚನೆಗೆ ಬಿಸಿನೆಸ್‌ಗಳು ತಮ್ಮ ವಾರ್ಷಿಕ ಆದಾಯದ 5% ನಷ್ಟು ಕಳೆದುಕೊಳ್ಳುತ್ತವೆ. (3)

ಫಿಡೆಲಿಟಿ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ಫಿಡೆಲಿಟಿ ಇನ್ಶೂರೆನ್ಸ್ ಪಡೆಯುವುದರಿಂದ, ಅದು ನಿಮ್ಮ ಬಿಸಿನೆಸ್ ಅನ್ನು ಈ ಕೆಳಗಿನ ಸಂದರ್ಭಗಳಲ್ಲಿ ರಕ್ಷಿಸುತ್ತದೆ…

ಕಳ್ಳತನ

ಕಳ್ಳತನ

ಇದರರ್ಥ ಎಂಪ್ಲಾಯೀಗಳು ನಿಮ್ಮ ಬಿಸಿನೆಸ್‌ನ ಯಾವುದೇ ಆಸ್ತಿಗಳಿಗೆ ಮಾಡಿದ ಯಾವುದೇ ಕಳ್ಳತನದ ವಿರುದ್ಧ ಈ ಪಾಲಿಸಿಯು ನಿಮ್ಮ ಬಿಸಿನೆಸ್ ಅನ್ನು ಕವರ್ ಮಾಡುತ್ತದೆ. ಉದಾಹರಣೆಗೆ, ಕನ್ಸ್ಟ್ರಕ್ಷನ್ ಸ್ಥಳದಲ್ಲಿ ಒಬ್ಬ ವರ್ಕರ್ ಕೆಲವು ಟೂಲ್‌ಗಳನ್ನು ಕದ್ದು, ಅವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದರೆ.

ದುರುಪಯೋಗ

ದುರುಪಯೋಗ

ಕೆಲವು ಎಂಪ್ಲಾಯೀಗಳು ಕಂಪನಿಯ ಹಣವನ್ನು ಮೂಲ ಉದ್ದೇಶಕ್ಕಿಂತ ಬೇರೆ ಉದ್ದೇಶಕ್ಕಾಗಿ ಬಳಸಿದರೆ, ಪಾಲಿಸಿಯು ನಿಮ್ಮ ಬಿಸಿನೆಸ್ ಅನ್ನು ಕವರ್ ಮಾಡುತ್ತದೆ. ಉದಾಹರಣೆಗೆ, ಯಾರಾದರೂ ಕೆಲವು ಚಟುವಟಿಕೆಗಳಿಗಾಗಿ ನಕಲಿ ಬಿಲ್ ಅಥವಾ ರಸೀದಿಯನ್ನು ರಚಿಸಿ, ಆ ಪಾವತಿಸಿದ ಹಣವನ್ನು ತಮ್ಮ ವೈಯಕ್ತಿಕ ವೆಚ್ಚಗಳಿಗಾಗಿ ಬಳಸಿದರೆ.

ಫೋರ್ಜರಿ

ಫೋರ್ಜರಿ

ಎಂಪ್ಲಾಯೀಯು ನಕಲಿ ಅಥವಾ ಬದಲಾವಣೆ ಮಾಡುವ ಕೃತ್ಯಗಳನ್ನು ಎಸಗಿದ್ದರೂ ಸಹ, ಈ ಇನ್ಶೂರೆನ್ಸ್ ನಿಮ್ಮನ್ನು ಕವರ್ ಮಾಡುತ್ತದೆ. ಉದಾಹರಣೆಗೆ, ನಿಮಗಾಗಿ ಕೆಲಸ ಮಾಡುವ ಯಾರಾದರೂ ಚೆಕ್ ಅಥವಾ ಡಾಕ್ಯುಮೆಂಟ್‌ನಲ್ಲಿ ನಿಮ್ಮ ಸಹಿಯನ್ನು ಫೋರ್ಜರಿ ಮಾಡಿದರೆ.

ಗ್ರಾಹಕರು/ಕ್ಲೈಂಟ್‌ಗಳಿಂದ ಕಳ್ಳತನ

ಗ್ರಾಹಕರು/ಕ್ಲೈಂಟ್‌ಗಳಿಂದ ಕಳ್ಳತನ

ನಿಮ್ಮ ಎಂಪ್ಲಾಯೀಗಳಲ್ಲಿ ಯಾರಾದರೂ, ಗ್ರಾಹಕರಿಂದ ಅಥವಾ ಕ್ಲೈಂಟ್‌ನಿಂದ ಹಣ ಅಥವಾ ಪ್ರಾಪರ್ಟಿಯನ್ನು ಕದ್ದಿರುವುದು ಕಂಡುಬಂದರೆ ನಿಮ್ಮನ್ನು ಕವರ್ ಮಾಡಲಾಗುತ್ತದೆ. ಉದಾಹರಣೆಗೆ, ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಕಂಪನಿಯ ಎಂಪ್ಲಾಯೀಯು, ಬಾಡಿಗೆದಾರರಿಂದ ಹೆಚ್ಚುವರಿ ಬಾಡಿಗೆಯನ್ನು ಸಂಗ್ರಹಿಸಿ, ಅದರಲ್ಲಿ ಹೆಚ್ಚುವರಿ ಹಣವನ್ನು ಜೇಬಿಗಿಳಿಸಿಕೊಂಡರೆ.

ಏನನ್ನು ಕವರ್ ಮಾಡುವುದಿಲ್ಲ?

ನಾವು ಪಾರದರ್ಶಕತೆಯಲ್ಲಿ ನಂಬಿಕೆ ಇಟ್ಟಿರುವ ಕಾರಣ, ಕವರ್ ಮಾಡಲಾಗದ ಕೆಲವು ಸನ್ನಿವೇಶಗಳನ್ನು ನಾವಿಲ್ಲಿ ತಿಳಿಸಿದ್ದೇವೆ.

ಆರ್ಥಿಕ ನಷ್ಟವು ಭಾರತದ ಹೊರಗೆ ಉಂಟಾದರೆ.

ನೀವು ಒಬ್ಬ ನಿರ್ದಿಷ್ಟ ಎಂಪ್ಲಾಯೀಯು ಮಾಡಿದ ಹಿಂದಿನ ವಂಚನೆ ಅಥವಾ ಅಪ್ರಾಮಾಣಿಕತೆಯನ್ನು ಕಂಡುಹಿಡಿದ ನಂತರ, ಅವರ ವಿರುದ್ಧ ಮಾಡಲಾದ ಒಂದಕ್ಕಿಂತ ಹೆಚ್ಚಿನ ಕ್ಲೈಮ್.

ಕಾನ್ಸಿಕ್ವೆನ್ಷಿಯಲ್ ಅಥವಾ ಪರೋಕ್ಷ ನಷ್ಟಗಳು ಅಥವಾ ಡ್ಯಾಮೇಜುಗಳು (ಕಡಿಮೆಯಾದ ಲಾಭಗಳು, ಕೆಲವು ಅವಕಾಶಗಳ ನಷ್ಟ ಅಥವಾ ನಿಮ್ಮ ಬಿಸಿನೆಸ್‌ಗೆ ಅಡ್ಡಿ).

ಎಂಪ್ಲಾಯೀಯನ್ನು ವಜಾಗೊಳಿಸಿದ 12 ತಿಂಗಳ ನಂತರ ಪತ್ತೆಯಾದ ಯಾವುದೇ ನಷ್ಟಗಳು.

ನೀವು (ಎಂಪ್ಲಾಯರ್) ತಪಾಸಣೆ ಮತ್ತು ಮುನ್ನೆಚ್ಚರಿಕೆಗಳ ಒಪ್ಪಿಗೆಯ ಸಿಸ್ಟಮ್ ಅನ್ನು ಗಮನಿಸದೇ ಇರುವ ಸಂದರ್ಭಗಳಲ್ಲಿ.

ವಂಚನೆ ಅಥವಾ ಅಪ್ರಾಮಾಣಿಕತೆಯಿಂದ ಉಂಟಾಗದ ಆದರೆ ಸ್ಟಾಕ್-ಟೇಕಿಂಗ್ ಕೊರತೆ, ಟ್ರೇಡಿಂಗ್ ನಷ್ಟಗಳಂತಹ ವಿಷಯಗಳಿಂದಾಗುವ ಯಾವುದೇ ನಷ್ಟಗಳು.

ಫಿಡೆಲಿಟಿ ಇನ್ಶೂರೆನ್ಸ್ ಅನ್ನು ಪಡೆಯುವ ಪ್ರಯೋಜನಗಳು ಯಾವುವು?

ನಿಮ್ಮ ಎಂಪ್ಲಾಯೀಗಳು ಮಾಡಿದ ಯಾವುದೇ ಫಂಡ್‌ನ ಕಳ್ಳತನ ಮತ್ತು ಇತರ ಅಪ್ರಾಮಾಣಿಕ ಕೃತ್ಯಗಳ ವಿರುದ್ಧ ನೀವು ಆರ್ಥಿಕವಾಗಿ ರಕ್ಷಿಸಲ್ಪಡುತ್ತೀರಿ.
ಇದು ಸಂಪೂರ್ಣ ಬಿಸಿನೆಸ್ ಮತ್ತು ಇತರ ಎಂಪ್ಲಾಯೀಗಳ ಮೇಲೆ ಪರಿಣಾಮ ಬೀರುವ ಕೆಲವು ಕೆಟ್ಟ ಜನರಿಂದ ನಿಮ್ಮ ಕಂಪನಿಯನ್ನು ರಕ್ಷಿಸುತ್ತದೆ.
ಎಂಪ್ಲಾಯೀಯ ಅಪ್ರಾಮಾಣಿಕತೆಯಿಂದ ಉಂಟಾದ ಗ್ರಾಹಕರ ಪ್ರಾಪರ್ಟಿ ನಷ್ಟವನ್ನು ನೀವು ಎದುರಿಸಿದರೆ, ನಿಮ್ಮ ಬಿಸಿನೆಸ್ ಅನ್ನು ಕವರ್ ಮಾಡಲಾಗುತ್ತದೆ.
ಪ್ರಾಪರ್ಟಿ ಅಥವಾ ಸ್ಟಾಕ್ ಸರ್ಟಿಫಿಕಟ್‌ನಂತಹ ನಿಮ್ಮ ಯಾವುದೇ ಬಿಸಿನೆಸ್ ಆಸ್ತಿಗಳನ್ನು ನೀವು ಕಳೆದುಕೊಂಡರೂ ಸಹ, ನಿಮ್ಮನ್ನು ಕವರ್ ಮಾಡಲಾಗುತ್ತದೆ.
ನಿಮ್ಮ ಬಿಸಿನೆಸ್‌ನ ನಿರ್ದಿಷ್ಟ ಅಗತ್ಯಗಳನ್ನು ಆಧರಿಸಿ ನಿಮ್ಮ ಪಾಲಿಸಿಯ ವ್ಯಾಪ್ತಿಯನ್ನು ನೀವು ಕಸ್ಟಮೈಸ್ ಮಾಡಬಹುದು.

ಫಿಡೆಲಿಟಿ ಇನ್ಶೂರೆನ್ಸ್‌ನ ವಿಧಗಳು ಯಾವುವು?

ಫಿಡೆಲಿಟಿ ಇನ್ಶೂರೆನ್ಸ್‌ನ ಅಗತ್ಯವಿರುವ ಬಿಸಿನೆಸ್‌ಗಳ ವಿಧಗಳು

ಜನರನ್ನು ನೇಮಿಸಿಕೊಳ್ಳುವ ಯಾವುದೇ ಸಂಸ್ಥೆಯು, ಅವರೆಲ್ಲರೂ ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ಪ್ರಾಮಾಣಿಕವಾಗಿರುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿಯೇ ಫಿಡೆಲಿಟಿ ಇನ್ಶೂರೆನ್ಸ್‌ ಅನ್ನು ಪಡೆಯುವುದು ನಿಮ್ಮ ಬಿಸಿನೆಸ್‌ಗೆ ಒಳ್ಳೆಯದು. ವಿಶೇಷವಾಗಿ ಅದು ಈ ಕೆಳಗಿನಂತಿದ್ದರೆ: 

ಇದು ಬಹಳಷ್ಟು ಸಣ್ಣ ಕ್ಯಾಶ್‌ನೊಂದಿಗೆ ಡೀಲ್ ಮಾಡುತ್ತಿದ್ದರೆ.

ಇದು ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳು ಹಾಗೂ ಅನೇಕ ಸ್ಟೋರ್‌ಗಳನ್ನು ಅಥವಾ ಥಿಯೇಟರ್‌ಗಳನ್ನು ಒಳಗೊಂಡಿರಬಹುದು.

ನಿಮ್ಮ ಬಿಸಿನೆಸ್ ಬಹಳಷ್ಟು ಸರಕುಗಳು ಅಥವಾ ಪ್ರಾಡಕ್ಟ್‌ಗಳನ್ನು ಹೊಂದಿದ್ದರೆ.

ಶಾಪ್‌ಗಳು ಮತ್ತು ಬೋಟಿಕ್‌ಗಳಂತಹ ರಿಟೇಲ್ ಬಿಸಿನೆಸ್‌ಗಳು ಕೆಲವು ಉದಾಹರಣೆಗಳಾಗಿವೆ.

ನೀವು ಬಹಳಷ್ಟು ವೆಂಡರ್‌ಗಳು, ಕ್ಲೈಂಟ್‌ಗಳು ಮತ್ತು ಗ್ರಾಹಕರೊಂದಿಗೆ ಡೀಲ್ ಮಾಡುತ್ತಿದ್ದರೆ.

ಉದಾಹರಣೆಗೆ ಈವೆಂಟ್ ಪ್ಲ್ಯಾನರ್‌ಗಳು, ಮಾರ್ಕೆಟಿಂಗ್ ಸಂಸ್ಥೆಗಳು ಅಥವಾ ಪಿಆರ್ ಏಜೆನ್ಸಿಗಳು.

ಇದು ಗ್ರಾಹಕರಿಂದ ಯಾವುದೇ ಪರ್ಸನಲ್ ಮಾಹಿತಿಯನ್ನು ಕಲೆಕ್ಟ್ ಮಾಡುತ್ತದೆ.

ಅಂದರೆ ಅಡ್ವರ್ಟೈಸರ್‌ಗಳು ಅಥವಾ ಆನ್‌ಲೈನ್ ಸ್ಟೋರ್‌ಗಳು ಇತ್ಯಾದಿ.

ಫಿಡೆಲಿಟಿ ಇನ್ಶೂರೆನ್ಸ್‌ಗೆ ಎಷ್ಟು ವೆಚ್ಚವಾಗುತ್ತದೆ?

ಸರಿಯಾದ ಫಿಡೆಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಹೇಗೆ?

  • ಸರಿಯಾದ ರೀತಿಯ ಪ್ಲ್ಯಾನ್ ಅನ್ನು ಆಯ್ಕೆಮಾಡಿ  - ನಿಮ್ಮ ಬಿಸಿನೆಸ್‌ನ ಸ್ವರೂಪ ಮತ್ತು ಎಂಪ್ಲಾಯೀಗಳ ಸಂಖ್ಯೆ ಮತ್ತು ಅವರ ಜವಾಬ್ದಾರಿಗಳನ್ನು ಪರಿಗಣಿಸಿ. ಹಾಗೂ ನಿಮಗೆ ಮತ್ತು ನಿಮ್ಮ ಬಿಸಿನೆಸ್‌ಗಾಗಿ ಉತ್ತಮವೆನಿಸುವ ಪ್ಲ್ಯಾನ್ ಅನ್ನು ಆಯ್ಕೆ ಮಾಡಿ.
  • ಸರಿಯಾದ ಕವರೇಜನ್ನು ಪಡೆಯಿರಿ  - ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಎಲ್ಲಾ ಎಂಪ್ಲಾಯೀಗಳಿಗೆ ಮತ್ತು ನಿಮ್ಮ ಬಿಸಿನೆಸ್‌ಗೆ ಯಾವುದೇ ಅಪಾಯಗಳನ್ನು ನೀಡುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ವಿಭಿನ್ನ ಪಾಲಿಸಿಗಳನ್ನು ಹೋಲಿಕೆ ಮಾಡಿ  - ವಿವಿಧ ಫಿಡೆಲಿಟಿ ಇನ್ಶೂರೆನ್ಸ್ ಪಾಲಿಸಿಗಳನ್ನು ನೋಡಿ ಮತ್ತು ನಿಮ್ಮ ಬಿಸಿನೆಸ್‌ಗೆ ಉತ್ತಮವೆನಿಸುವ ಪಾಲಿಸಿಯೊಂದನ್ನು ಹುಡುಕಿ. ನೆನಪಿಡಿ, ಕೆಲವೊಮ್ಮೆ ಕಡಿಮೆ ಪ್ರೀಮಿಯಂ ಹೊಂದಿರುವ ಪಾಲಿಸಿಯು ಉತ್ತಮ ಆಯ್ಕೆಯಾಗಿರುವುದಿಲ್ಲ ಏಕೆಂದರೆ ಅದು ನಿಮಗೆ ಸರಿಯಾದ ಕವರೇಜನ್ನು ನೀಡದಿರಬಹುದು, ಆದ್ದರಿಂದ ಕೈಗೆಟುಕುವ ಬೆಲೆಯಲ್ಲಿ ಪಾಲಿಸಿಯೊಂದನ್ನು ಹುಡುಕಲು ವಿಭಿನ್ನ ಪಾಲಿಸಿಗಳ ಫೀಚರ್‌ಗಳು ಮತ್ತು ಪ್ರೀಮಿಯಂಗಳನ್ನು ಹೋಲಿಕೆ ಮಾಡಿ.
  • ಸರಿಯಾದ ಸಮ್ ಇನ್ಶೂರ್ಡ್ ಅನ್ನು ಆಯ್ಕೆ ಮಾಡಿ  - ನೀವು ಫಿಡೆಲಿಟಿ ಪಾಲಿಸಿಯನ್ನು ಆಯ್ಕೆ ಮಾಡುವಾಗ, ನಿಮ್ಮ ಬಿಸಿನೆಸ್‌ನ ಸ್ವರೂಪ ಮತ್ತು ನಿಮ್ಮ ಎಂಪ್ಲಾಯೀಗಳ ಸಂಖ್ಯೆ ಹಾಗೂ ಸ್ಥಾನಗಳ ಆಧಾರದ ಮೇಲೆ, ನಿಮ್ಮ ಇನ್ಶೂರೆನ್ಸ್ ಮೊತ್ತವನ್ನು ಕಸ್ಟಮೈಸ್ ಮಾಡಲು ನಿಮಗೆ ಅನುಮತಿಸುವ ಪಾಲಿಸಿಯನ್ನು ಹುಡುಕಲು ಪ್ರಯತ್ನಿಸಿ.
  • ಸುಲಭವಾದ ಕ್ಲೈಮ್ ಪ್ರಕ್ರಿಯೆ  - ಯಾವುದೇ ಇನ್ಶೂರೆನ್ಸ್ ಪಾಲಿಸಿಯ ಪ್ರಮುಖ ಭಾಗವೆಂದರೆ ಕ್ಲೈಮ್‌ಗಳು, ಆದ್ದರಿಂದ ಸುಲಭವಾದ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವ ಕಂಪನಿಯನ್ನು ನೋಡಿ, ಏಕೆಂದರೆ ಇದು ಘಟನೆಯೊಂದು ಸಂಭವಿಸಿದ ನಂತರ, ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ಬಹಳಷ್ಟು ತೊಂದರೆಗಳಿಂದ ಉಳಿಸಬಹುದು.
  • ಹೆಚ್ಚುವರಿ ಸರ್ವೀಸ್ ಪ್ರಯೋಜನಗಳು  - ಸಾಕಷ್ಟು ಇನ್ಶೂರೆನ್ಸ್ ಕಂಪನಿಗಳು 24X7 ಕಸ್ಟಮರ್ ಅಸಿಸ್ಟೆನ್ಸ್, ಬಳಸಲು ಸುಲಭವಾದ ಮೊಬೈಲ್ ಆ್ಯಪ್‌ಗಳು ಮುಂತಾದ ಹೆಚ್ಚಿನ ಪ್ರಯೋಜನಗಳನ್ನು ಸಹ ನೀಡುತ್ತವೆ.

ಫಿಡೆಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವ ಮೊದಲು ನೆನಪಿಡಬೇಕಾದ ವಿಷಯಗಳು

ಭಾರತದಲ್ಲಿ ಫಿಡೆಲಿಟಿ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು