ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಪೆನ್ಶನರ್‌ಗಳು, ನಿವೃತ್ತ ಸರ್ಕಾರಿ ನೌಕರರು ಮತ್ತು ಸೀನಿಯರ್ ಸಿಟಿಜನ್‌ಗಳು ಐಟಿಆರ್ (ITR) ಫೈಲ್ ಮಾಡುವುದು ಹೇಗೆ?

ಅವರು ಆಯ್ಕೆ ಮಾಡಿದ ಇನ್ಕಮ್ ಟ್ಯಾಕ್ಸ್ ರೆಜಿಮ್ ಪ್ರಕಾರ ಮೂಲ ವಿನಾಯಿತಿ ಲಿಮಿಟ್‌ನ ಮೇಲೆ ವಾರ್ಷಿಕ ಇನ್ಕಮ್ ಅನ್ನು ಹೊಂದಿರುವ ಎಲ್ಲಾ ವ್ಯಕ್ತಿಗಳು ಇನ್ಕಮ್ ಟ್ಯಾಕ್ಸ್ ಪಾವತಿಸಲು ಜವಾಬ್ದಾರರಾಗಿದ್ದಾರೆ. ಆದಾಗ್ಯೂ, ಪೆನ್ಶನರ್‌ಗಳು ಮತ್ತು ಸೀನಿಯರ್ ಸಿಟಿಜನ್‌ಗಳಿಗೆ ಈ ಕೇಸ್ ವಿಭಿನ್ನವಾಗಿದೆ; ಅವರು ಒಂದು ನಿರ್ದಿಷ್ಟ ವಿನಾಯಿತಿಯನ್ನು ಆನಂದಿಸುತ್ತಾರೆ. ಈ ಆರ್ಟಿಕಲ್‌ನಲ್ಲಿ, ಪೆನ್ಶನರ್‌ಗಳು ಮತ್ತು ಸೀನಿಯರ್ ಸಿಟಿಜನ್‌ಗಳು ಐಟಿಆರ್ ಅನ್ನು ಹೇಗೆ ಫೈಲ್ ಮಾಡಬೇಕು ಎಂಬುದರ ಕುರಿತು ನಾವು ವಿವರವಾಗಿ ಮಾತನಾಡೋಣ.

ಪೆನ್ಶನರ್‌ಗಳು ಮತ್ತು ನಿವೃತ್ತ ಸರ್ಕಾರಿ ನೌಕರರಿಗೆ ಐಟಿಆರ್

ಐಟಿ ಆ್ಯಕ್ಟ್‌ನ ಪ್ರಕಾರ, ಸರ್ಕಾರಿ ಅಥವಾ ಖಾಸಗಿ ಮಾಜಿ ನೌಕರರ ಪೆನ್ಷನ್ ಇನ್ಕಮ್ "ಸ್ಯಾಲರಿಯಿಂದ ಇನ್ಕಮ್" ಶೀರ್ಷಿಕೆಯಡಿಯಲ್ಲಿ ಬರುತ್ತದೆ, ಆದರೆ ಫ್ಯಾಮಿಲಿ ಪೆನ್ಷನ್ "ಇತರ ಮೂಲಗಳಿಂದ ಇನ್ಕಮ್" ಶೀರ್ಷಿಕೆಯಡಿ ಬರುತ್ತದೆ. ಸೀನಿಯರ್ ಸಿಟಿಜನ್‌ಗಳಿಗೆ, ಟ್ಯಾಕ್ಸ್ ಪೇಯರ್‌ಗಳ ಅರ್ಹ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳ ಪ್ರಕಾರ ಎರಡಕ್ಕೂ ಟ್ಯಾಕ್ಸ್ ವಿಧಿಸಲಾಗುತ್ತದೆ. 

ನಿಮ್ಮ ಇನ್ಕಮ್, ಮೂಲ ವಿನಾಯಿತಿ ಲಿಮಿಟ್‌ಗಿಂತ ಕಡಿಮೆಯಿದ್ದರೆ, ನೀವು ಯಾವುದೇ ಟ್ಯಾಕ್ಸ್‌ಗಳನ್ನು ಪಾವತಿಸಬೇಕಾಗಿಲ್ಲ. ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24 ಕ್ಕಾಗಿ ಮೂಲ ವಿನಾಯಿತಿ ಲಿಮಿಟ್‌ಗಳನ್ನು ಚೆಕ್ ಮಾಡಿ.

ಟ್ಯಾಕ್ಸ್ ಪೇಯರ್‌ಗಳ ವಯಸ್ಸು ಇನ್ಕಮ್‌ನ ಮೊತ್ತ 
(ಹಳೆಯ ಟ್ಯಾಕ್ಸ್ ರೆಜಿಮ್ - ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24) 
ಇನ್ಕಮ್‌ನ ಮೊತ್ತ 
(ಹೊಸ ಟ್ಯಾಕ್ಸ್ ರೆಜಿಮ್ - ಹಣಕಾಸು ವರ್ಷ 2022-23) 
ಇನ್ಕಮ್‌ನ ಮೊತ್ತ 
(ಹೊಸ ಟ್ಯಾಕ್ಸ್ ರೆಜಿಮ್ - ಹಣಕಾಸು ವರ್ಷ 2023-24) 
60 ರಿಂದ 80 ವರ್ಷಗಳ ನಡುವಿನವರು  ₹3,00,000  ₹2,50,000  ₹3,00,000 
80 ವರ್ಷಕ್ಕಿಂತ ಮೇಲ್ಪಟ್ಟವರು  ₹5,00,000  ₹2,50,000  ₹3,00,000 

ಪೆನ್ಶನರ್‌ಗಳಿಗಾಗಿ ಆನ್‌ಲೈನ್‌ನಲ್ಲಿ ಐಟಿಆರ್ (ITR) ಅನ್ನು ಫೈಲ್ ಮಾಡುವುದು ಹೇಗೆ?

ಪೆನ್ಶನರ್‌ಗಳಿಗೆ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಹೇಗೆ ಫೈಲ್ ಮಾಡುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಕೆಳಗಿನ ITR-1 (ಸಹಜ್) ಫಾರ್ಮ್‌ನ ಭಾಗಗಳಲ್ಲಿ ನೀವು ನಿಖರವಾದ ವಿವರಗಳನ್ನು ನೀಡಬೇಕಾಗುತ್ತದೆ ಎಂಬುದನ್ನು ತಿಳಿಯಿರಿ-

ಭಾಗ ಎ

ಫೈಲಿಂಗ್ ಮಾಡುವ ವ್ಯಕ್ತಿಯ ಎಲ್ಲಾ ವೈಯುಕ್ತಿಕ ವಿವರಗಳಾದ ಜನ್ಮ ದಿನಾಂಕ, ಹೆಸರು, ಇತ್ಯಾದಿಗಳನ್ನು ಸರಿಯಾಗಿ ಭರ್ತಿ ಮಾಡಬೇಕಾಗುತ್ತದೆ.

ಭಾಗ ಬಿ

ನಿವೃತ್ತ ಸರ್ಕಾರಿ ನೌಕರರಿಗೆ ಐಟಿಆರ್ ಅನ್ನು ಹೇಗೆ ಫೈಲ್ ಮಾಡುವುದು ಎಂಬ ಪ್ರಕ್ರಿಯೆಯ ಮುಂದಿನ ಹಂತವು ಟೋಟಲ್ ಗ್ರಾಸ್ ಇನ್ಕಮ್‌ನ ಅಕೌಂಟ್‌ಗಳನ್ನು ಒದಗಿಸುವುದನ್ನು ಒಳಗೊಂಡಿರುತ್ತದೆ. ಒದಗಿಸಿದ ಮಾಹಿತಿಯು ಫಾರ್ಮ್ 16 ಮತ್ತು ಫಾರ್ಮ್ 12BA ನೊಂದಿಗೆ ಟ್ಯಾಲಿ ಆಗಬೇಕು.

ಭಾಗ ಸಿ

ಟ್ಯಾಕ್ಸೇಬಲ್ ಇನ್ಕಮ್‌ನಿಂದ ಫಾರ್ಮ್ 16 ರಲ್ಲಿ ಪಡೆದ ಎಲ್ಲಾ ಡಿಡಕ್ಷನ್‌ಗಳ ನಿಖರವಾದ ಮಾಹಿತಿಯನ್ನು ಜನರು ಒದಗಿಸಬೇಕಾಗುತ್ತದೆ.

ಭಾಗ ಡಿ

ಈ ಭಾಗದಲ್ಲಿ ನಿಮ್ಮ ಟ್ಯಾಕ್ಸ್ ಸ್ಟೇಟಸ್ ಮತ್ತು ಸರಿಯಾದ ಟ್ಯಾಕ್ಸ್ ಮೊತ್ತವನ್ನು ಒದಗಿಸಿ. ನಮೂದಿಸಬೇಕಾದ ಇತರ ವಿವರಗಳು- 

  • ಎಲ್ಲಾ ಆ್ಯಕ್ಟಿವ್ ಮತ್ತು ಆಪರೇಟಿವ್ ಅಕೌಂಟ್‌ಗಳ ವಿವರಗಳು ಅವುಗಳ ಐ.ಎಫ್.ಎಸ್.ಸಿ ಕೋಡ್‌ಗಳೊಂದಿಗೆ.

  • ನೀಡಲಾದ ವಿವರಗಳ ವೆರಿಫಿಕೇಶನ್.

  • ಅಡ್ವಾನ್ಸ್ಡ್ ಟ್ಯಾಕ್ಸ್ ಮತ್ತು ಟ್ಯಾಕ್ಸ್ ಸ್ವಯಂ ಮೌಲ್ಯಮಾಪನಕ್ಕಾಗಿ ಪೇಮೆಂಟ್ ವಿವರಗಳು.

  • ಸ್ಯಾಲರಿಯಿಂದ ಟಿಡಿಎಸ್ 

ಪೆನ್ಶನರ್‌ಗಳಿಗೆ ನೀವು ಆನ್‌ಲೈನ್‌ನಲ್ಲಿ ಐಟಿಆರ್ ಅನ್ನು ಈ ರೀತಿ ಫೈಲ್ ಮಾಡಬಹುದು. 

ಈ ಎಲ್ಲಾ ವಿವರಗಳ ಮಾಹಿತಿಯನ್ನು ನಿಖರವಾಗಿ ಒದಗಿಸಿದ ನಂತರ, ಪೆನ್ಶನರ್‌ಗಳು ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನ ಆಫೀಷಿಯಲ್ ವೆಬ್‌ಸೈಟ್‌ಗೆ ಹೋಗಿ ಇ-ಫೈಲಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಾಗುತ್ತದೆ. ಇ-ಫೈಲಿಂಗ್ ಮಾಡಿದ ನಂತರ, ಅವರು ಐಟಿಆರ್ V ಅನ್ನು ಸ್ವೀಕರಿಸುತ್ತಾರೆ ಅಥವಾ ಡೌನ್‌ಲೋಡ್ ಮಾಡಬೇಕಾಗುತ್ತದೆ. ಅದನ್ನು ಅವರು ರಿಟರ್ನ್‌ಗಳನ್ನು ಫೈಲ್ ಮಾಡಿದ ದಿನಾಂಕದಿಂದ 30 ದಿನಗಳಲ್ಲಿ ಸಿಪಿಸಿ ಗೆ ಕಳುಹಿಸಬೇಕಾಗುತ್ತದೆ. 

ಪೆನ್ಶನರ್‌ಗಳಿಗೆ ಅನ್ವಯವಾಗುವ ಐಟಿಆರ್ (ITR) ಫಾರ್ಮ್

ಒಟ್ಟು ₹50 ಲಕ್ಷಕ್ಕಿಂತ ಕಡಿಮೆ ಇನ್ಕಮ್ ಹೊಂದಿರುವ ಪೆನ್ಶನರ್‌ಗಳು ITR-1 (ಸಹಜ್) ಅನ್ನು ಫೈಲ್ ಮಾಡಬೇಕಾಗುತ್ತದೆ. ಇದು ಫ್ಯಾಮಿಲಿ ಪೆನ್ಶನರ್‌ಗಳಿಗೂ ಅನ್ವಯಿಸುತ್ತದೆ.

ಐಟಿಆರ್-2 ಪೆನ್ಶನರ್‌ಗಳು, ಪೆನ್ಷನ್ ಅಥವಾ ಸ್ಯಾಲರಿಯಿಂದ, ಓನ್ಡ್ ಪ್ರಾಪರ್ಟಿ ಅಥವಾ ಮನೆಯಿಂದ ಅಥವಾ ಇತರ ಮೂಲಗಳಿಂದ ಇನ್ಕಮ್ ಅನ್ನು ಹೊಂದಿದ್ದರೆ, ಅಂತಹವರಿಗೆ ಅನ್ವಯಿಸುತ್ತದೆ. ಈ ಐಟಿಆರ್ ಫಾರ್ಮ್, ಕ್ಯಾಪಿಟಲ್ ಗೇನ್ ಅನ್ನು ಹೊಂದಿರುವ ಪೆನ್ಶನರ್‌ಗಳಿಗೂ ಸಹ ಅರ್ಹವಾಗಿದೆ. 

ಪೆನ್ಶನರ್‌ಗಳು ಬಿಸಿನೆಸ್ ಅಥವಾ ಪ್ರೊಫೆಷನ್‌ನಿಂದ ಇನ್ಕಮ್ ಅನ್ನು ಹೊಂದಿದ್ದರೆ, ಅವರು ಐಟಿಆರ್-3 ಅಥವಾ ಐಟಿಆರ್-4 ಅನ್ನು ಫೈಲ್ ಮಾಡಬೇಕು.

[ಮೂಲ]

ಪೆನ್ಶನರ್‌ಗಳಿಗೆ ಟ್ಯಾಕ್ಸೇಶನ್ ನಿಯಮಗಳು

ಪೆನ್ಷನ್ ಆ್ಯಕ್ಟ್‌ನ ಸೆಕ್ಷನ್ 11 ಮತ್ತು ಸಿಪಿಸಿ ರಾಜ್ಯಗಳ ಸೆಕ್ಷನ್ 60, ಪೆನ್ಷನ್‌ಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ. ನಿರ್ದಿಷ್ಟವಾಗಿ ಈ ಕೆಟಗರಿ ಅಡಿಯಲ್ಲಿ ಅರ್ಹತೆ ಪಡೆದ ವ್ಯಕ್ತಿಗಳನ್ನು ಮಾತ್ರ ಪೆನ್ಶನರ್‌ಗಳು ಎಂದು ಕರೆಯಬಹುದು. 

ಪೆನ್ಷನ್ ಇನ್ಕಮ್‌ಗಾಗಿ ಐಟಿಆರ್ ಅನ್ನು ಫೈಲ್ ಮಾಡುವ ಮೊದಲು ಗಮನಿಸಬೇಕಾದ ಕೆಲವು ಪ್ರಮುಖ ವಿಷಯಗಳನ್ನು ಕೆಳಗೆ ನೀಡಲಾಗಿದೆ: 

  • ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ "ಸ್ಯಾಲರಿಯಿಂದ ಇನ್ಕಮ್" ಶೀರ್ಷಿಕೆಯಡಿಯಲ್ಲಿ ಅನ್‌ಕಮ್ಯೂಟೆಡ್ ಪೆನ್ಷನ್‌ಗಳಿಗೆ (ಪ್ರತಿ ತಿಂಗಳು ಸ್ವೀಕರಿಸುವ) ಟ್ಯಾಕ್ಸ್ ವಿಧಿಸಲಾಗುತ್ತದೆ. 

  • ಸರ್ಕಾರಿ ನೌಕರರ ಕಮ್ಯೂಟೆಡ್ ಪೆನ್ಷನ್‌ಗಳಿಗೆ (ಒಟ್ಟಾರೆಯಾಗಿ ಸ್ವೀಕರಿಸಲಾದ) ಸಂಪೂರ್ಣವಾಗಿ ಟ್ಯಾಕ್ಸ್ ವಿನಾಯಿತಿ ಇದೆ. 

  • ಸರ್ಕಾರೇತರ ನೌಕರರ ಕಮ್ಯುಟೆಡ್ ಪೆನ್ಷನ್‌, ಅವರ ಗ್ರಾಚ್ಯುಟಿಗೆ ಒಳಪಟ್ಟು ಭಾಗಶಃ ಟ್ಯಾಕ್ಸ್ ವಿನಾಯಿತಿಯನ್ನು ಹೊಂದಿದೆ: 

  • ಗ್ರಾಚ್ಯುಟಿಯನ್ನು ಸ್ವೀಕರಿಸಿದರೆ - ಪಡೆದ ಒಟ್ಟು ಪೆನ್ಷನ್‌ನ 1/3 ಟ್ಯಾಕ್ಸ್ ವಿನಾಯಿತಿ ಮತ್ತು ಉಳಿದವುಗಳಿಗೆ ಸ್ಯಾಲರಿಯ ಟ್ಯಾಕ್ಸ್ ವಿಧಿಸಲಾಗುತ್ತದೆ. 

  • ಗ್ರಾಚ್ಯುಟಿಯನ್ನು ಸ್ವೀಕರಿಸದಿದ್ದರೆ - ಪಡೆದ ಒಟ್ಟು ಪೆನ್ಷನ್‌ನ 1/2 ಟ್ಯಾಕ್ಸ್ ವಿನಾಯಿತಿಯಾಗಿದೆ. 

ಕುಟುಂಬದ ಸದಸ್ಯರಿಂದ ಪಡೆದ ಪೆನ್ಷನ್‌ಗೆ

ಈ ಪೆನ್ಷನ್‌ಗೆ 'ಇತರ ಮೂಲಗಳಿಂದ ಇನ್ಕಮ್ ಎಂಬ ಶೀರ್ಷಿಕೆಯಡಿಯಲ್ಲಿ ಟ್ಯಾಕ್ಸ್ ವಿಧಿಸಲಾಗುತ್ತದೆ ಮತ್ತು ಅನ್ವಯವಾಗುವ ಟ್ಯಾಕ್ಸ್ ನಿಯಮಗಳು ಈ ಕೆಳಗಿನಂತಿವೆ: 

  • ಕಮ್ಯುಟೆಡ್ ಪೆನ್ಷನ್‌, ಟ್ಯಾಕ್ಸ್‌ಗೆ ಒಳಪಡುವುದಿಲ್ಲ. 

  • ಕುಟುಂಬದ ಸದಸ್ಯರು ಪಡೆಯುವ ಅನ್‌ಕಮ್ಯೂಟೆಡ್ ಪೆನ್ಷನ್‌ಗೆ ₹15,000 ಅಥವಾ ಅನ್‌ಕಮ್ಯೂಟೆಡ್ ಪೆನ್ಷನ್‌ನ 1/3 ರಷ್ಟು ಟ್ಯಾಕ್ಸ್ ವಿನಾಯಿತಿ ಇದೆ. 2023ರ ಬಜೆಟ್ ಪ್ರಕಾರ ಹೊಸ ಇನ್ಕಮ್ ಟ್ಯಾಕ್ಸ್ ರೆಜಿಮ್ ಮತ್ತು ಹಳೆಯ ಟ್ಯಾಕ್ಸ್ ರೆಜಿಮ್‌ನ ಅಡಿಯಲ್ಲಿ, ಯಾವುದು ಕಡಿಮೆಯೋ, ಅದು. 

ಪಿಂಚಣಿ ಪೆನ್ಷನ್‌ಗಾಗಿ ಟಿಡಿಎಸ್

ಹೆಚ್ಚಿನ ಪೆನ್ಶನರ್‌ಗಳು ತಮ್ಮ ಸ್ಯಾಲರಿಯನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಮಾನ್ಯವಾಗಿ, ಟಿಡಿಎಸ್ ಅನ್ನು ಡಿಡಕ್ಟ್ ಮಾಡಿದ ನಂತರ ತಮ್ಮ ಬ್ಯಾಂಕ್ ಅಕೌಂಟ್‌ಗಳಲ್ಲಿ ಪಡೆಯುತ್ತಾರೆ. ಬಜೆಟ್ 2019 ರ ಪ್ರಸ್ತಾವಿತ ಚೇಂಜಸ್‌ಗಳ ಆಧಾರದ ಮೇಲೆ, ಟಿಡಿಎಸ್ ವಿನಾಯಿತಿಯನ್ನು ₹10,000 ರಿಂದ ₹40,000 ಕ್ಕೆ ಹೆಚ್ಚಿಸಲಾಗಿದೆ. ಇದರರ್ಥ ನಿಮ್ಮ ಗಳಿಕೆಯು ₹40,000 ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ನೀವು ಟಿಡಿಎಸ್ ವಿನಾಯಿತಿಯನ್ನು ಪಡೆಯಬಹುದು.

ಕುಟುಂಬದ ಸದಸ್ಯರಿಂದ ಪಡೆದ ಪೆನ್ಷನ್‌ಗೆ ಟಿಡಿಎಸ್‌ನ ಟ್ಯಾಕ್ಸ್ ವಿಧಿಸಲಾಗುವುದಿಲ್ಲ, ಏಕೆಂದರೆ ಇದು "ಇತರ ಮೂಲಗಳಿಂದ ಇನ್ಕಮ್" ಎಂಬ ಶೀರ್ಷಿಕೆಯ ಅಡಿಯಲ್ಲಿ ಬರುತ್ತದೆ.

ಐಟಿ ಫೈಲಿಂಗ್ ಸುಲಭ ಮತ್ತು ಆನ್‌ಲೈನ್‌ನಲ್ಲಿ ಇರುವುದರಿಂದ, ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ಗಳು ತಮ್ಮ ವಿನಾಯಿತಿಗಳೊಂದಿಗೆ ಪೆನ್ಶನರ್‌ಗಳಿಗೆ ಒಂದು ಹೆಜ್ಜೆ ಹತ್ತಿರವಾಗುತ್ತದೆ. ಪೆನ್ಶನರ್‌ಗಳು ತಮ್ಮ ಕೆಲಸವನ್ನು ಸುಲಭಗೊಳಿಸಲು ಪೆನ್ನು ಮತ್ತು ಪೇಪರ್‌ಗಳ ಮೇಲೆ ತಮ್ಮ ಟ್ಯಾಕ್ಸ್‌ಗಳನ್ನು ಫೈಲ್ ಮಾಡುವ ಮೂಲಕ ಸಹಾಯವನ್ನು ಆನಂದಿಸಬಹುದು.

ಸೀನಿಯರ್ ಸಿಟಿಜನ್‌ಗಳಿಗೆ ಐಟಿಆರ್ (ITR)

ಫೈನಾನ್ಸ್ ಆ್ಯಕ್ಟ್ 2021, ಐಟಿ ಆ್ಯಕ್ಟ್ 1961 ರ ಅಡಿಯಲ್ಲಿ ಹೊಸ ಸೆಕ್ಷನ್ 194P ಅನ್ನು ಪರಿಚಯಿಸಿದೆ, ಅದರ ಪ್ರಕಾರ 75 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ. ಇದು ಏಪ್ರಿಲ್ 1, 2021 ರಿಂದ ಜಾರಿಗೆ ಬರುತ್ತದೆ. 

ಆದಾಗ್ಯೂ, ಐಟಿಆರ್ ಫೈಲ್ ಮಾಡುವುದರಿಂದ ವಿನಾಯಿತಿ ಪಡೆದಿರುವ 75 ವರ್ಷಕ್ಕಿಂತ ಮೇಲ್ಪಟ್ಟ ಸೀನಿಯರ್ ಸಿಟಿಜನ್‌ಗಳು ಈ ಕೆಳಗಿನ ಕಂಡೀಶನ್‌ಗಳನ್ನು ಪೂರೈಸಬೇಕು: 

  • ಹಿಂದಿನ ಹಣಕಾಸು ವರ್ಷದ ಅವಧಿಯಲ್ಲಿ, ವ್ಯಕ್ತಿಯು ಭಾರತದ ನಿವಾಸಿಯಾಗಿರಬೇಕು. 

  • ಇನ್ಕಮ್‌ನ ಮೂಲವು ಒಂದೇ ಬ್ಯಾಂಕಿನಿಂದ, ಪೆನ್ಷನ್ ಮತ್ತು ಸೇವಿಂಗ್ಸ್ ಅಕೌಂಟ್‌ಗಳ ಮೇಲಿನ ಬಡ್ಡಿಯಿಂದ ಮಾತ್ರ ಇರಬೇಕು. 

  • ಇನ್ಕಮ್‌ನ ಏಕೈಕ ಮೂಲ ಪೆನ್ಷನ್ ಮತ್ತು ಸಂಚಿತ ಬಡ್ಡಿಯಾಗಿದೆ ಎಂದು ಬ್ಯಾಂಕ್‌ಗೆ ಡಿಕ್ಲರೇಷನ್ ನೀಡಬೇಕಾಗಿದೆ. ಈ ಡಿಕ್ಲರೇಷನ್ ಇನ್ಕಮ್ ಟ್ಯಾಕ್ಸ್ ಕಾನೂನಿನ ಸೆಕ್ಷನ್ 87A ಅಡಿಯಲ್ಲಿ ಅನುಮತಿಸಲಾದ ಚಾಪ್ಟರ್ VI-A ಡಿಡಕ್ಷನ್‌ಗಳು ಮತ್ತು ರಿಬೇಟ್‌ಗಳ ವಿವರಗಳನ್ನು ಸಹ ಹೊಂದಿರುತ್ತದೆ. 

  • ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸಿದ ಬ್ಯಾಂಕ್‌ಗೆ ಡಿಕ್ಲರೇಷನ್ ಅನ್ನು ಸಬ್ಮಿಟ್ ಮಾಡಬೇಕು. ಡಿಕ್ಲರೇಷನ್‌ನಲ್ಲಿ ತಿಳಿಸಿದಂತೆ, ಚಾಪ್ಟರ್ VI-A ಅಡಿಯಲ್ಲಿ ಡಿಡಕ್ಷನ್‌ಗಳನ್ನು ಪರಿಗಣಿಸಿದ ನಂತರ ಮತ್ತು ಸೆಕ್ಷನ್ 87A ಅಡಿಯಲ್ಲಿ ರಿಬೇಟ್‌ಗಳನ್ನು ಪರಿಗಣಿಸಿದ ನಂತರ, 75 ವರ್ಷಗಳಲ್ಲಿ ಸೀನಿಯರ್ ಸಿಟಿಜನ್‌ಗಳ ಟಿಡಿಎಸ್ ಡಿಡಕ್ಷನ್‌ಗಳಿಗೆ ಈ ಬ್ಯಾಂಕ್‌ಗಳು ಜವಾಬ್ದಾರರಾಗಿರುತ್ತವೆ. 

ಆದಾಗ್ಯೂ, 60 ಮತ್ತು 75 ವರ್ಷಗಳ ನಡುವಿನ ಸಿಟಿಜನ್‌ಗಳು, ಐಟಿಆರ್-1 ಅಥವಾ ಐಟಿಆರ್-2 ಅಥವಾ ಐಟಿಆರ್-4 ಫಾರ್ಮ್‌ಗಳನ್ನು ಆಧರಿಸಿ ತಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗಳನ್ನು ಫೈಲ್ ಮಾಡಬೇಕಾಗುತ್ತದೆ.

[ಮೂಲ]

ಸೀನಿಯರ್ ಸಿಟಿಜನ್‌ಗಳಿಗಾಗಿ ಐಟಿಆರ್ (ITR) ಫಾರ್ಮ್

ಸೀನಿಯರ್ ಸಿಟಿಜನ್‌ಗಳು ತಮ್ಮ ಅರ್ಹತೆಯ ಆಧಾರದ ಮೇಲೆ ಕೆಳಗಿನ ಯಾವುದೇ ಐಟಿಆರ್ ಫಾರ್ಮ್‌ಗಳನ್ನು ಫೈಲ್ ಮಾಡಬಹುದು; ಆದಾಗ್ಯೂ, ಅತ್ಯಂತ ಸಾಮಾನ್ಯವಾದ ಫಾರ್ಮ್ ಎಂದರೆ ಅದು ಐಟಿಆರ್-1 ಆಗಿದೆ.

ಐಟಿಆರ್ ಫಾರ್ಮ್ ಅರ್ಹತೆ

ಐಟಿಆರ್-1 (ಸಹಜ್)

₹5 ಲಕ್ಷಗಳವರೆಗಿನ ಸ್ಯಾಲರಿ ಅಥವಾ ಪೆನ್ಷನ್ ಇನ್ಕಮ್

ಮನೆ ಅಥವಾ ಸ್ವಂತ ಪ್ರಾಪರ್ಟಿಯಿಂದ ಇನ್ಕಮ್

ಇತರ ಯಾವುದೇ ಮೂಲದಿಂದ ಬಂದ ಇನ್ಕಮ್

₹5000 ವರೆಗಿನ ಕೃಷಿ ಇನ್ಕಮ್

ಐಟಿಆರ್-2

ಸ್ಯಾಲರಿ ಅಥವಾ ಪೆನ್ಷನ್ ಇನ್ಕಮ್

ಸ್ವಂತ ಪ್ರಾಪರ್ಟಿ ಅಥವಾ ಮನೆಯಿಂದ ಇನ್ಕಮ್

ಕ್ಯಾಪಿಟಲ್ ಗೇನ್ 

ಇತರೆ ಮೂಲಗಳಿಂದ ಬಂದ ಆದಾಯ

ರಿಬೇಟ್ ಸ್ಕೀಮ್

ಸಂಗಾತಿಯ ಕಂಬೈನ್ಡ್ ಇನ್ಕಮ್

ಐಟಿಆರ್-3

ಬಿಸಿನೆಸ್ ಅಥವಾ ಪ್ರೊಫೆಷನ್ ಲಾಭದಿಂದ ಬರುವ ಇನ್ಕಮ್

ಐಟಿಆರ್-4

ಐಟಿಆರ್-4 ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು ಮತ್ತು ಸಂಸ್ಥೆಗಳಿಗೆ (ಎಲ್.ಎಲ್.ಪಿ ಅನ್ನು ಹೊರತುಪಡಿಸಿ) ₹ 50 ಲಕ್ಷಗಳವರೆಗಿನ ಒಟ್ಟು ಇನ್ಕಮ್ ಅನ್ನು ಹೊಂದಿರುವ ಮತ್ತು 44AD, 44ADA ಅಥವಾ 44AE ಸೆಕ್ಷನ್‌ಗಳ ಅಡಿಯಲ್ಲಿ ಕ್ಯಾಲ್ಕುಲೇಟ್ ಮಾಡಲಾದ ಬಿಸಿನೆಸ್ ಮತ್ತು ಪ್ರೊಫೆಷನ್‌ನಿಂದ ಇನ್ಕಮ್ ಅನ್ನು ಪಡೆಯುವ ನಿವಾಸಿ

ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡುವುದು ಹೇಗೆ?

ಸೀನಿಯರ್ ಸಿಟಿಜನ್‌ಗಳು ಮೇಲಿನ ಟೇಬಲ್‌ನಲ್ಲಿ ತಿಳಿಸಲಾದ ಐಟಿಆರ್ ಫಾರ್ಮ್‌ಗಳ ಅಡಿಯಲ್ಲಿ ತಮ್ಮ ಇನ್ಕಮ್ ಟ್ಯಾಕ್ಸ್ ಅನ್ನು ಆನ್‌ಲೈನ್‌ನಲ್ಲಿ ಫೈಲ್ ಮಾಡಬೇಕು. ಫಾರ್ಮ್ ಅನ್ನು ಭರ್ತಿ ಮಾಡಲು ಆಫ್‌ಲೈನ್ ವಿಧಾನ ಲಭ್ಯವಿದೆ, ಆದರೆ ಇದು 80 ವರ್ಷಕ್ಕಿಂತ ಮೇಲ್ಪಟ್ಟ ಸೀನಿಯರ್ ಸಿಟಿಜನ್‌ಗಳಿಗೆ ಮಾತ್ರ ಲಭ್ಯವಿದೆ.

ಸೀನಿಯರ್ ಸಿಟಿಜನ್‌ಗಳಿಗೆ ಆನ್‌ಲೈನ್ ಐಟಿಆರ್ (ITR) ಫೈಲಿಂಗ್

ಸೀನಿಯರ್ ಸಿಟಿಜನ್‌ಗಳು ಸರ್ಕಾರವು ಒದಗಿಸಿದ ಆನ್‌ಲೈನ್ ಪೋರ್ಟಲ್ ಮೂಲಕ ಅನುಗುಣವಾದ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅದಕ್ಕಾಗಿ ಕೆಲವು ಹಂತಗಳು ಇಲ್ಲಿವೆ.

  • ಹಂತ 1: ಮೊದಲು, ನೀವು ಐಟಿಆರ್ ಗಾಗಿ ಸರ್ಕಾರಿ ಪೋರ್ಟಲ್‌ಗೆ ಭೇಟಿ ನೀಡಬೇಕು. 

  • ಹಂತ 2: ನಿಮ್ಮ ಪ್ಯಾನ್ ಕಾರ್ಡ್, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಬಳಸಿ ಲಾಗ್ ಇನ್ ಮಾಡಿ. 

  • ಹಂತ 3: "ಇ-ಫೈಲ್" ಟ್ಯಾಬ್‌ಗೆ ಹೋಗಿ ಮತ್ತು "ಇನ್ಕಮ್ ಟ್ಯಾಕ್ಸ್ ರಿಟರ್ನ್" ಅನ್ನು ಆಯ್ಕೆಮಾಡಿ. 

  • ಹಂತ 4: ಇನ್ಕಮ್ ಟ್ಯಾಕ್ಸ್ ರಿಟರ್ನ್ ಪೇಜಿನಲ್ಲಿ, ನೀವು ಈ ಕೆಳಗಿನ ಎ) ಮೌಲ್ಯಮಾಪನ ವರ್ಷ ಬಿ) ಐಟಿಆರ್ ಫಾರ್ಮ್ ನಂಬರ್ ಸಿ) ಸಬ್‌ಮಿಶನ್ ಮೋಡ್ ಅನ್ನು "ಆನ್‌ಲೈನ್‌ನಲ್ಲಿ ತಯಾರಿಸಿ ಮತ್ತು ಸಬ್ಮಿಟ್ ಮಾಡಿ" ಎಂದು ಡಿ) ಫೈಲಿಂಗ್ ವಿಧವನ್ನು "ಒರಿಜಿನಲ್/ರಿವೈಸ್ಡ್ ರಿಟರ್ನ್" ಎಂದು ಭರ್ತಿ ಮಾಡಬೇಕಾಗುತ್ತದೆ.

  • ಹಂತ 5: ನಿಮ್ಮನ್ನು ಐಟಿಆರ್ ಫಾರ್ಮ್‌ಗೆ ರಿಡೈರೆಕ್ಟ್ ಮಾಡಲಾಗುತ್ತದೆ. ಅಲ್ಲಿ ನೀವು ಎಲ್ಲಾ ವಿವರಗಳನ್ನು ಭರ್ತಿ ಮಾಡಬಹುದು. 

  • ಹಂತ 6: ಒಮ್ಮೆ ನೀವು ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ನೀವು ವೆರಿಫಿಕೇಶನ್ ಆಯ್ಕೆಯನ್ನು ಆರಿಸಿಕೊಳ್ಳಬಹುದು. 

  • ಹಂತ 7: ನೀವು ಫಾರ್ಮ್ ಅನ್ನು ಹೇಗೆ ವೆರಿಫೈ ಮಾಡಬೇಕೆಂದು ಆಯ್ಕೆ ಮಾಡಿದ ನಂತರ, ಸಬ್ಮಿಟ್ ಮಾಡಿ ಮತ್ತು ಅದನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಿ.

ಸೀನಿಯರ್ ಸಿಟಿಜನ್‌ಗಳಿಗೆ ಆಫ್‌ಲೈನ್ ಐಟಿಆರ್ (ITR) ಫೈಲಿಂಗ್

80 ವರ್ಷಕ್ಕಿಂತ ಮೇಲ್ಪಟ್ಟ ಸೀನಿಯರ್ ಸಿಟಿಜನ್‌ಗಳು ಅಥವಾ ಸೂಪರ್ ಸೀನಿಯರ್ ಸಿಟಿಜನ್‌ಗಳು ತಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಅನ್ನು ನಗರ ಅಥವಾ ಪ್ರದೇಶದ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ಗೆ ಎಲ್ಲಾ ಅಗತ್ಯ ಡಾಕ್ಯುಮೆಂಟುಗಳನ್ನು ಸಬ್ಮಿಟ್ ಮಾಡುವ ಮೂಲಕ ಫೈಲ್ ಮಾಡಬಹುದು. ಈ ಆಫ್‌ಲೈನ್ ಆಯ್ಕೆಯು ಈ ಜನರಿಗೆ ಮಾತ್ರ ಲಭ್ಯವಿರುತ್ತದೆ.

[ಮೂಲ]

ಸೀನಿಯರ್ ಸಿಟಿಜನ್‌ಗಳಿಗೆ ಐಟಿಆರ್ (ITR) ಫೈಲ್ ಮಾಡಲು ಅಗತ್ಯವಿರುವ ಡಾಕ್ಯುಮೆಂಟುಗಳು

ಸೀನಿಯರ್ ಸಿಟಿಜನ್‌ಗಳು ತಮ್ಮ ಐಟಿಆರ್ ಫಾರ್ಮ್‌ಗಳನ್ನು ಫೈಲ್ ಮಾಡಲು ಅಗತ್ಯವಾದ ಡಾಕ್ಯುಮೆಂಟುಗಳು ಈ ಕೆಳಗಿನಂತಿವೆ:

  • ಪ್ಯಾನ್ ಕಾರ್ಡ್ 

  • ಆಧಾರ್ ಕಾರ್ಡ್

  • ಬ್ಯಾಂಕ್ ಪಾಸ್‌ಬುಕ್ 

  • ಕ್ಯಾಪಿಟಲ್ ಗೇನ್ಸ್ ಸ್ಟೇಟ್‌ಮೆಂಟ್‌

  • ಪ್ರಾಪರ್ಟಿಗೆ ಸಂಬಂಧಿಸಿದ ಡಾಕ್ಯುಮೆಂಟುಗಳು

ಸೀನಿಯರ್ ಸಿಟಿಜನ್‌ಗಳಿಗೆ ಐಟಿಆರ್ (ITR) ಅನ್ನು ಹಿಂದಿನ ವರ್ಷಗಳಿಗೆ ಫೈಲ್ ಮಾಡಬಹುದೇ?

ಹೌದು, ಹಿಂದಿನ ವರ್ಷಗಳಿಗೆ ಸೀನಿಯರ್ ಸಿಟಿಜನ್‌ಗಳು ಐಟಿಆರ್ ಫೈಲ್ ಮಾಡಲು ಸಾಧ್ಯವಿದೆ. ನೀವು ಅದನ್ನು ಮೂರು ವರ್ಷಗಳ ಮಿತಿಮೀರದವರೆಗೆ ಫೈಲ್ ಮಾಡಬಹುದು.

ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡಲು ಲಾಸ್ಟ್ ಡೇಟ್

ಡೆಡ್‌ಲೈನ್ ಮೊದಲು ಐಟಿಆರ್ ಅನ್ನು ಫೈಲ್ ಮಾಡದಿರುವುದಕ್ಕೆ ಹಾಕುವ ಪೆನಲ್ಟಿಯನ್ನು ತಪ್ಪಿಸಲು, ಹಣಕಾಸು ವರ್ಷ 2022-23 (ಮೌಲ್ಯಮಾಪನ ವರ್ಷ 2023-24) ಗಾಗಿ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲು ಈ ಪ್ರಮುಖ ಡೇಟ್‌ಗಳನ್ನು ನೆನಪಿಡಿ:

ಕೆಟಗರಿ ಟ್ಯಾಕ್ಸ್ ಫೈಲಿಂಗ್‌ಗೆ ಡ್ಯೂ ಡೇಟ್ - ಹಣಕಾಸು ವರ್ಷ 2022-23
ವೈಯಕ್ತಿಕ, ಹಿಂದೂ ಅವಿಭಜಿತ ಕುಟುಂಬ 31ನೇ ಜುಲೈ 2023
ರಿವೈಸ್ಡ್ ಐಟಿಆರ್ 31ನೇ ಡಿಸೆಂಬರ್ 2023
ತಡವಾದ/ಲೇಟ್ ಐಟಿಆರ್ 31ನೇ ಡಿಸೆಂಬರ್ 2023

ಕೊನೆಯಲ್ಲಿ, ಸೆಲ್ಫ್-ಎಂಪ್ಲಾಯ್ಡ್ ವ್ಯಕ್ತಿಗಳು, ಸೀನಿಯರ್ ಸಿಟಿಜನ್‌ಗಳು ಮತ್ತು ಕಂಪನಿಗಳಿಗಾಗಿ, ಐಟಿಆರ್ ಫೈಲಿಂಗ್ ಅನ್ನು ಮೇಲೆ ಚರ್ಚಿಸಲಾಗಿದೆ. ನಿಮ್ಮ ಐಟಿಆರ್ ಫಾರ್ಮ್ ಅನ್ನು ಫೈಲ್ ಮಾಡುವ ಪ್ರಕ್ರಿಯೆಯು, ಮೊದಲು ನೀವು ಯಾವ ಫಾರ್ಮ್ ಅನ್ನು ಭರ್ತಿ ಮಾಡಲು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮೇಲೆ ತಿಳಿಸಲಾದ ವಿವಿಧ ಕ್ರೈಟೀರಿಯಗಳ ಆಧಾರದ ಮೇಲೆ ನಿಮ್ಮ ಇನ್ಕಮ್ ಅನ್ನು ನೀವು ಬಹಿರಂಗಪಡಿಸಬಹುದು. 

ಆದ್ದರಿಂದ, ಈಗಲೇ ತ್ವರೆ ಮಾಡಿ ಮತ್ತು ಆ ಇನ್ಕಮ್ ಟ್ಯಾಕ್ಸ್ ಫಾರ್ಮ್ ಅನ್ನು ಭರ್ತಿ ಮಾಡಿ!

ಪೆನ್ಶನರ್‌ಗಳು, ನಿವೃತ್ತ ಸರ್ಕಾರಿ ನೌಕರರು ಮತ್ತು ಸೀನಿಯರ್ ಸಿಟಿಜನ್‌ಗಳಿಗೆ, ಐಟಿಆರ್ (ITR) ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಪೆನ್ಶನರ್‌ಗಳಿಗೆ ವಿನಾಯಿತಿ ಮೊತ್ತ ಎಷ್ಟು?

ನೀವು 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನಿಮ್ಮ ಟ್ಯಾಕ್ಸೇಬಲ್ ಸ್ಲ್ಯಾಬ್ ₹ 3 ಲಕ್ಷದಿಂದ ಪ್ರಾರಂಭವಾಗುತ್ತದೆ, ಆದರೆ ನೀವು 80 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನಿಮ್ಮ ಟ್ಯಾಕ್ಸೇಬಲ್ ಸ್ಲ್ಯಾಬ್ ಹಳೆಯ ರೆಜಿಮ್‌ನ ಅಡಿಯಲ್ಲಿ ₹ 5 ಲಕ್ಷಗಳಿಂದ ಪ್ರಾರಂಭವಾಗುತ್ತದೆ. 

ಪೆನ್ಶನರ್‌ಗಳು ತಮ್ಮ ವೆರಿಫಿಕೇಶನ್‌ಗಾಗಿ ಎಷ್ಟು ಸಮಯವನ್ನು ಪಡೆಯುತ್ತಾರೆ?

ಐಟಿಆರ್ ನ ಇ-ಫೈಲಿಂಗ್ ವೆರಿಫಿಕೇಶನ್‌ಗಾಗಿ ಎಲ್ಲಾ ವ್ಯಕ್ತಿಗಳು ಒಂದೇ ಸಮಯವನ್ನು ಪಡೆಯುತ್ತಾರೆ, ಅದು 30 ದಿನಗಳಾಗಿವೆ. 

[ಮೂಲ]

ನಿವೃತ್ತ ಸರ್ಕಾರಿ ಉದ್ಯೋಗಿ ಯಾವ ಫಾರ್ಮ್ ಅನ್ನು ಭರ್ತಿ ಮಾಡಬೇಕು?

ನಿವೃತ್ತ ಸರ್ಕಾರಿ ನೌಕರನು ಒಂದೇ ಮನೆಯನ್ನು ಹೊಂದಿದ್ದರೆ ಐಟಿಆರ್-1 ಅನ್ನು ಭರ್ತಿ ಮಾಡಬೇಕು ಮತ್ತು ಪೆನ್ಷನ್ ಅವನ / ಅವಳ ಇನ್ಕಮ್‌ನ ಏಕೈಕ ಮಾರ್ಗವಾಗಿರಬೇಕು.

ಸೀನಿಯರ್ ಸಿಟಿಜನ್‌ಗಳಿಗೆ ಗರಿಷ್ಠ ಟ್ಯಾಕ್ಸ್ ಫ್ರೀ ಇನ್ಕಮ್ ಎಷ್ಟು?

ಸೀನಿಯರ್ ಸಿಟಿಜನ್‌ಗಳಿಗೆ ಅವರ ಇನ್ಕಮ್ ₹3 ಲಕ್ಷಗಳವರೆಗೆ ಇದ್ದರೆ, ಹಳೆಯ ಟ್ಯಾಕ್ಸ್ ರೆಜಿಮ್‌ನ ಅಡಿಯಲ್ಲಿ ಟ್ಯಾಕ್ಸ್ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳು, ₹5 ಲಕ್ಷಗಳವರೆಗಿನ ಟ್ಯಾಕ್ಸ್ ಸ್ಲ್ಯಾಬ್ ಅನ್ನು ಪಡೆಯಬಹುದು. ಹೊಸ ಟ್ಯಾಕ್ಸ್ ರೆಜಿಮ್‌ನ ಅಡಿಯಲ್ಲಿ, ಅವರು ಹಣಕಾಸು ವರ್ಷ 2022-23 ಕ್ಕೆ ₹2.5 ಲಕ್ಷಗಳವರೆಗೆ ಮತ್ತು ಹಣಕಾಸು ವರ್ಷ 2023-24 ಕ್ಕೆ ₹3 ಲಕ್ಷಗಳವರೆಗಿನ ವಿನಾಯಿತಿಯನ್ನು ಪಡೆಯಬಹುದು.

ಸೀನಿಯರ್ ಸೀನಿಯರ್ ಸಿಟಿಜನ್‌ಗಳು ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬೇಕೇ?

ಬಿಸಿನೆಸ್ ಅಥವಾ ಪ್ರೊಫೆಷನ್‌ನಿಂದ ಯಾವುದೇ ಇನ್ಕಮ್ ಅನ್ನು ಹೊಂದಿರದ, 60 ವರ್ಷಕ್ಕಿಂತ ಮೇಲ್ಪಟ್ಟ ರೆಸಿಡೆಂಟ್ ಸೀನಿಯರ್ ಸಿಟಿಜನ್‌ಗಳು ಅಡ್ವಾನ್ಸ್ ಟ್ಯಾಕ್ಸ್ ಅನ್ನು ಪಾವತಿಸಬೇಕಿಲ್ಲ.