ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಐಟಿಆರ್ ಅನ್ನು ಆನ್‌ಲೈನ್‌ನಲ್ಲಿ ಫೈಲ್ ಮಾಡುವುದು ಹೇಗೆ?

ನಿಮ್ಮ ವಾರ್ಷಿಕ ಇನ್‌ಕಮ್‌ ₹2,50,000 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಅನ್ನು ಸಕಾಲದಲ್ಲಿ ಫೈಲ್ ಮಾಡುವುದು ಕಡ್ಡಾಯವಾಗುತ್ತದೆ. ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯು ಸಂಪೂರ್ಣ ಪ್ರೊಸೆಸ್ ಅನ್ನು ಆನ್‌ಲೈನ್‌ ಮಾಡಿದೆ ಆದ್ದರಿಂದ ನೀವು ಅದನ್ನು ನೀವೇ ಮಾಡಬಹುದು, ಕಂಪ್ಲಯನ್ಸ್ ವೆಚ್ಚವನ್ನು ಉಳಿಸಬಹುದು.

ಈ ಲೇಖನದಲ್ಲಿ, ಆನ್‌ಲೈನ್‌ನಲ್ಲಿ ಐಟಿಆರ್ ಅನ್ನು ಫೈಲ್ ಮಾಡುವುದು ಹೇಗೆ ಎಂಬುದರ ಕುರಿತು ನಾವು ಕಲಿಯಲಿದ್ದೇವೆ.

ಐಟಿಆರ್ ಅನ್ನು ಆನ್‌ಲೈನ್‌ನಲ್ಲಿ ಫೈಲ್ ಮಾಡುವ ಮಾರ್ಗಗಳು

ನಿಮ್ಮ ಟ್ಯಾಕ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಫೈಲ್ ಮಾಡಲು, ನೀವು ಮೊದಲು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು ಅಥವಾ ಸೈನ್ ಇನ್ ಮಾಡಬೇಕಾಗುತ್ತದೆ.

ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಾಗಿನ್/ರಿಜಿಸ್ಟರ್ ಮಾಡಲು ಕ್ರಮಗಳು.

  • https://www.incometax.gov.in/iec/foportal/ ಗೆ ಭೇಟಿ ನೀಡಿ
  • ನಿಮ್ಮ ಐಟಿಆರ್ ಫೈಲ್ ಮಾಡಲು ಲಾಗ್ ಇನ್ ಆಗಿ ಅಥವಾ ಸೈನ್ ಇನ್ ಮಾಡಿ. ನೀವು ಈಗಾಗಲೇ ಖಾತೆಯನ್ನು ಹೊಂದಿದ್ದರೆ, 'ಲಾಗಿನ್ ಹಿಯರ್' ಮೇಲೆ ಕ್ಲಿಕ್ ಮಾಡಿ. ನಿಮ್ಮ ಐಟಿಆರ್ ಅನ್ನು ನೀವು ಮೊದಲ ಬಾರಿಗೆ ಇ-ಫೈಲಿಂಗ್ ಮಾಡುತ್ತಿದ್ದರೆ, ನೀವೇ ರಿಜಿಸ್ಟರ್‌ ಯುವರ್‌ಸೆಲ್ಫ್‌ ಬಟನ್ ಕ್ಲಿಕ್ ಮಾಡಿ.
  • ಸರಿಯಾದ ಯೂಸರ್ ವಿಧವನ್ನು ಕ್ಲಿಕ್ ಮಾಡಿ. ಲಭ್ಯವಿರುವ ಆಯ್ಕೆಗಳಲ್ಲಿ ಹೆಚ್‌ಯುಎಫ್‌, ವೈಯಕ್ತಿಕ, ವ್ಯಕ್ತಿಯನ್ನು ಹೊರತುಪಡಿಸಿ ವೈಯಕ್ತಿಕ/ಹೆಚ್‌ಯುಎಫ್‌, ಚಾರ್ಟರ್ಡ್ ಅಕೌಂಟೆಂಟ್‌ಗಳು, ಬಾಹ್ಯ ಏಜೆನ್ಸಿ, ಥರ್ಡ್-ಪಾರ್ಟಿ ಸಾಫ್ಟ್‌ವೇರ್ ಯುಟಿಲಿಟಿ ಡೆವಲಪರ್, ಟ್ಯಾಕ್ಸ್ ಡಿಡಕ್ಟರ್ ಮತ್ತು ಸಂಗ್ರಾಹಕ ಒಳಗೊಂಡಿವೆ.
  • ಸಬ್‌ಮಿಟ್‌ ಕ್ಲಿಕ್ ಮಾಡುವ ಮೊದಲು ಪ್ರಸ್ತುತ ವಿಳಾಸ, ಶಾಶ್ವತ ವಿಳಾಸ ಮತ್ತು ಕ್ಯಾಪ್ಚಾ ಕೋಡ್‌ನಂತಹ ವಿವರಗಳನ್ನು ಸರಿಯಾಗಿ ನಮೂದಿಸಿ.
  • ನಿಮ್ಮ ಮೂಲ ವಿವರಗಳನ್ನು ಭರ್ತಿ ಮಾಡಿ. ನಿಮ್ಮ ಹೆಸರು, ಪ್ಯಾನ್, ಜನನ ದಿನಾಂಕ ಮತ್ತು ಸಂಪರ್ಕ ವಿವರಗಳಂತಹ ಮಾಹಿತಿಯನ್ನು ಕೇಳಲಾಗುತ್ತದೆ. ಸೈನ್ ಇನ್ ಮಾಡಲು ನಿಮ್ಮ ಯೂಸರ್ ಐಡಿಯಾಗಿ ನಿಮ್ಮ ಪ್ಯಾನ್ ಅನ್ನು ನೀವು ಬಳಸಬೇಕಾಗುತ್ತದೆ.
  • ಖಾತೆಯನ್ನು ಸಕ್ರಿಯಗೊಳಿಸಲು ನೀವು ಮೇಲ್‌ನಲ್ಲಿ ಸ್ವೀಕರಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ.

ಪೋರ್ಟಲ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ಗಳನ್ನು ಇ-ಫೈಲ್ ಮಾಡಲು ಹಂತಗಳು

ಆನ್‌ಲೈನ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫೈಲ್ ಮಾಡಲು ಹಂತಗಳು ಇಲ್ಲಿದೆ.

  • ಐಟಿ ಕಾನೂನುಗಳ ಆಧಾರದ ಮೇಲೆ ಪಾವತಿಸಬೇಕಾದ ಐಟಿ ಲಯಬಿಲಿಟಿಯನ್ನು ಕ್ಯಾಲ್ಕುಲೇಟ್ ಮಾಡಿ.
  • ಫಾರ್ಮ್ 26AS ಜೊತೆಗೆ ಮೌಲ್ಯಮಾಪನ ವರ್ಷದ ನಿಮ್ಮ ತ್ರೈಮಾಸಿಕ ಟಿಡಿಎಸ್ ಪೇಮೆಂಟ್‌ನ ಸಾರಾಂಶವನ್ನು ಒದಗಿಸಿ.
  • ಐಟಿ ಇಲಾಖೆಯ ವ್ಯಾಖ್ಯಾನಗಳ ಆಧಾರದ ಮೇಲೆ ನೀವು ಅಡಿಯಲ್ಲಿ ಬರುವ ಕೆಟಗರಿಯನ್ನು ನಿರ್ಧರಿಸಿ. ಅದಕ್ಕೆ ಅನುಗುಣವಾಗಿ ನಿಮ್ಮ ಐಟಿಆರ್ ಅನ್ನು ಆಯ್ಕೆ ಮಾಡಿ.
  • https://www.incometax.gov.in/iec/foportal/ ಗೆ ಭೇಟಿ ನೀಡಿ
  • ಡೌನ್‌ಲೋಡ್ ವಿಭಾಗಕ್ಕೆ ಹೋಗಿ ಮತ್ತು 'ಐಟಿ ರಿಟರ್ನ್ ಪ್ರಿಪರೇಷನ್ ಸಾಫ್ಟ್‌ವೇರ್' ಅನ್ನು ಕ್ಲಿಕ್ ಮಾಡಿ.
  • ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿ ಮತ್ತು ಆಫ್‌ಲೈನ್ ಯುಟಿಲಿಟಿಯನ್ನು ಡೌನ್‌ಲೋಡ್ ಮಾಡಿ. ನೀವು ಆಯ್ಕೆ ಮಾಡಲು ಎರಡು ಡೌನ್‌ಲೋಡ್ ಆಯ್ಕೆಗಳನ್ನು ಪಡೆಯುತ್ತೀರಿ - ಎಂಎಸ್‌ ಎಕ್ಸೆಲ್ ಅಥವಾ ಜಾವಾ ಯುಟಿಲಿಟಿ ಫೈಲ್.
  • ಫೈಲ್ ಅನ್ನು ಡೌನ್‌ಲೋಡ್ ಮಾಡಿದ ನಂತರ ನಿಮ್ಮ ಮೌಲ್ಯಮಾಪನ ಮಾಡಿದ ಇನ್‌ಕಮ್‌, ಪಾವತಿಸಬೇಕಾದ ಟ್ಯಾಕ್ಸ್ ಮತ್ತು ರಿಫಂಡ್‌ಗಳ ಬಗ್ಗೆ ಸಂಬಂಧಿತ ಮಾಹಿತಿಯನ್ನು ಭರ್ತಿ ಮಾಡಿ.
  • ಎಲ್ಲಾ ಕಡ್ಡಾಯ ಫೀಲ್ಡ್ ಗಳನ್ನು ಭರ್ತಿ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು 'ವ್ಯಾಲಿಡೇಟ್' ಕ್ಲಿಕ್ ಮಾಡಿ.
  • ನೀವು ವ್ಯಾಲಿಡೇಟ್ ಮಾಡಿದ ನಂತರ, ನಿಮ್ಮ ಫೈಲ್ ಅನ್ನು ಎಕ್ಸ್‌ಎಂಎಲ್‌ ಫೈಲ್ ಆಗಿ ಪರಿವರ್ತಿಸಲು 'ಜನರಲ್‌ ಎಕ್ಸ್‌ಎಂಎಲ್' ಬಟನ್ ಅನ್ನು ಆಯ್ಕೆ ಮಾಡಿ.
  • ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಐಟಿಆರ್ ಇ-ಫೈಲಿಂಗ್ ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ.
  • ಮುಖ್ಯ ಮೆನುವಿನಿಂದ, ಇ-ಫೈಲ್ ಆಯ್ಕೆಗೆ ಹೋಗಿ. ಡ್ರಾಪ್-ಡೌನ್ ಕಾಣಿಸಿಕೊಳ್ಳಲು ನಿಮ್ಮ ಕರ್ಸರ್ ಅನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ. ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಆಯ್ಕೆಯನ್ನು ಆರಿಸಿ.
  • ಪ್ಯಾನ್, ಐಟಿಆರ್ ಫಾರ್ಮ್ ಸಂಖ್ಯೆ, ಮೌಲ್ಯಮಾಪನ ವರ್ಷ ಮತ್ತು ಸಬ್‌ಮಿಷನ್ ಮೋಡ್‌ನಂತಹ ಸಂಬಂಧಿತ ಮಾಹಿತಿಯೊಂದಿಗೆ ಎಲ್ಲಾ ಫೀಲ್ಡ್ ಗಳನ್ನು ಭರ್ತಿ ಮಾಡಿ. ಸಬ್‌ಮಿಷನ್ ಮೋಡ್ ಮೇಲೆ ಕ್ಲಿಕ್ ಮಾಡಿ; ಡ್ರಾಪ್-ಡೌನ್ ಕಾಣಿಸುತ್ತದೆ. ಅಪ್‌ಲೋಡ್ ಎಕ್ಸ್‌ಎಂಎಲ್‌ ಆಯ್ಕೆಯನ್ನು ಆರಿಸಿ.
  • ಮುಂದುವರಿಸು ಬಟನ್ ಕ್ಲಿಕ್ ಮಾಡುವ ಮೂಲಕ ನೀವು ಈಗಷ್ಟೇ ಭರ್ತಿ ಮಾಡಿದ ನಿಮ್ಮ ಎಕ್ಸ್‌ಎಂಎಲ್‌ ಫೈಲ್ ಅನ್ನು ಅಪ್‌ಲೋಡ್ ಮಾಡಿ.
  • ಪಟ್ಟಿಯಿಂದ ವೆರಿಫಿಕೇಷನ್ ಮೋಡ್ ಅನ್ನು ಆಯ್ಕೆಮಾಡಿ ಮತ್ತು ಸಬ್‌ಮಿಟ್ ಮಾಡಿ. ನೀವು ಇವಿಸಿ, ಆಧಾರ್ ಓಟಿಪಿ, ಇತ್ಯಾದಿ ಆಯ್ಕೆಗಳಿಂದ ಆಯ್ಕೆ ಮಾಡಬಹುದು.

ಈ ಮೂಲಕ ನೀವು ಆನ್‌ಲೈನ್‌ನಲ್ಲಿ ಐಟಿಆರ್ ಪಡೆಯಬಹುದು.

ಐಟಿಆರ್ ಫೈಲ್ ಮಾಡುವಾಗ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಐಟಿಆರ್ ಅನ್ನು ಆನ್‌ಲೈನ್‌ನಲ್ಲಿ ಫೈಲ್ ಮಾಡುವುದು ಹೇಗೆ ಎಂಬುದನ್ನು ಈಗ ನೀವು ಅರ್ಥಮಾಡಿಕೊಂಡಿದ್ದೀರಿ, ಯಶಸ್ವಿ ಫೈಲಿಂಗ್‌ಗಾಗಿ ನಿಮಗೆ ಬೇಕಾಗಬಹುದಾದ ಡಾಕ್ಯುಮೆಂಟ್‌ಗಳು ಇಲ್ಲಿವೆ-

ಐಟಿಆರ್ ಅನ್ನು ಆನ್‌ಲೈನ್‌ನಲ್ಲಿ ಫೈಲ್ ಮಾಡುವ ಪ್ರಯೋಜನಗಳು

ನಿಮ್ಮ ಐಟಿಆರ್ ಅನ್ನು ಆನ್‌ಲೈನ್‌ನಲ್ಲಿ ಫೈಲ್ ಮಾಡುವುದು ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ. ಅವುಗಳನ್ನು ನೋಡೋಣ-

  • ಪ್ರಾಂಪ್ಟ್ ಪ್ರೊಸೆಸಿಂಗ್ - ನಿಮ್ಮ ಐಟಿಆರ್ ಅನ್ನು ಫೈಲ್ ಮಾಡುವುದಕ್ಕಾಗಿ ರಚಿತವಾದ ಸ್ವೀಕೃತಿಯು ತ್ವರಿತವಾಗಿರುತ್ತದೆ. ನೀವು ಕಾಗದದ ಮೇಲೆ ನಿಮ್ಮ ರಿಟರ್ನ್‌ಗಳನ್ನು ಫೈಲ್ ಮಾಡುವುದಕ್ಕಿಂತ ವೇಗವಾಗಿ ರಿಫಂಡ್‌ಗಳನ್ನು ಸಹ ನೀವು ಪಡೆಯುತ್ತೀರಿ.
  • ಹೆಚ್ಚಿನ ನಿಖರತೆ - ಫೈಲಿಂಗ್ ಸಾಫ್ಟ್‌ವೇರ್ ವ್ಯಾಲಿಡೇಷನ್‌ಗಳೊಂದಿಗೆ ಬಿಲ್ಟ್-ಇನ್ ಆಗಿದೆ ಮತ್ತು ತಡೆರಹಿತ ಎಲೆಕ್ಟ್ರಾನಿಕ್ ಸಂಪರ್ಕವು ದೋಷಗಳ ಸಾಧ್ಯತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಪೇಪರ್ ಫೈಲಿಂಗ್ ಈ ದೋಷಗಳನ್ನು ಗುರುತಿಸಲು ಸಾಧ್ಯವಿಲ್ಲ. ಇದಲ್ಲದೆ, ಡೇಟಾವನ್ನು ಪೇಪರ್ ಫೈಲಿಂಗ್‌ನಿಂದ ಎಲೆಕ್ಟ್ರಾನಿಕ್ ಸಿಸ್ಟಮ್‌ಗೆ ಟ್ರಾನ್ಸ್‌ಫರ್‌ ಮಾಡುವಾಗ, ಅಂತಹ ಡೇಟಾವನ್ನು ನಮೂದಿಸುವ ವ್ಯಕ್ತಿಯು ಸಹ ದೋಷವನ್ನು ಮಾಡಬಹುದು.
  • ಆ್ಯಕ್ಸೆಸ್ ಸುಲಭ - ಇ-ಫೈಲಿಂಗ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿರುವಂತೆ ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ಮಾಡಬಹುದು. ಆದ್ದರಿಂದ, ನಿಮ್ಮ ಆರಾಮದಾಯಕವಾಗಿ ಮನೆಯಿಂದಲೂ ನೀವು ಇದನ್ನು ಮಾಡಬಹುದು.
  • ಕಾನ್ಫಿಡೆನ್ಷಿಯಲ್ - ನಿಮ್ಮ ಡೇಟಾಗೆ ಇತರ ಜನರಿಗೆ ಆ್ಯಕ್ಸೆಸ್ ಸಿಗದಂತೆ ಆನ್‌ಲೈನ್ ಫೈಲಿಂಗ್ ಉತ್ತಮ ಸುರಕ್ಷತೆ ಮತ್ತು ಸೆಕ್ಯುರಿಟಿಯನ್ನು ನೀಡುತ್ತದೆ.
  • ಇತಿಹಾಸ - ರಿಟರ್ನ್ ಫೈಲ್ ಮಾಡುವಾಗ ನಿಮ್ಮ ಹಳೆಯ ಡಾಕ್ಯುಮೆಂಟ್‌ಗಳಿಗೆ ನೀವು ಸುಲಭವಾಗಿ ಆ್ಯಕ್ಸೆಸ್ ಪಡೆಯಬಹುದು. ಈ ಡೇಟಾವನ್ನು ಸುರಕ್ಷಿತವಾಗಿ ಇರಿಸಲಾಗುತ್ತದೆ.
  • ರಶೀದಿಯ ಪುರಾವೆ - ನೀವು ತಕ್ಷಣ ಫೈಲಿಂಗ್ ಮಾಡುವ ದೃಢೀಕರಣವನ್ನು ಪಡೆಯುತ್ತೀರಿ ಮತ್ತು ಅದನ್ನು ನಿಮ್ಮ ರಿಜಿಸ್ಟರ್‌ಡ್‌ ಮೇಲ್ ಐಡಿಯಲ್ಲಿ ಮೇಲ್ ಮೂಲಕ ನಿಮಗೆ ಕಳುಹಿಸಲಾಗುತ್ತದೆ.
  • ಸುಲಭ ಫಂಡ್ ಟ್ರಾನ್ಸ್‌ಫರ್‌ - ನೀವು ಫೈಲ್ ನೌ ಮತ್ತು ಪೇ ಲೇಟರ್ ಆಯ್ಕೆಯನ್ನು ಪಡೆಯುತ್ತೀರಿ. ನಿಮ್ಮ ಖಾತೆಯಿಂದ ನಿಮ್ಮ ಟ್ಯಾಕ್ಸ್‌ಗಳನ್ನು ಡೆಬಿಟ್ ಮಾಡುವ ದಿನವನ್ನು ಸಹ ನೀವು ಆಯ್ಕೆ ಮಾಡಬಹುದು.

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೇಗೆ ಸಬ್‌ಮಿಟ್‌ ಮಾಡಬೇಕು ಎಂಬುದನ್ನು ಕಲಿತ ನಂತರ ನೀವು ತಿಳಿದುಕೊಳ್ಳಬೇಕಾದ ಕೆಲವು ಪ್ರಯೋಜನಗಳು ಇವು.

ಫೈಲ್ ಮಾಡಲಾದ ಐಟಿಆರ್‌ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಕ್ರಮಗಳು

ನಿಮ್ಮ ಹುಡುಕಾಟವು ಕೇವಲ ಆನ್‌ಲೈನ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಅನ್ನು ಹೇಗೆ ಫೈಲ್ ಮಾಡುವುದು ಎಂಬುದರೊಂದಿಗೆ ಕೊನೆಗೊಳ್ಳುವುದಿಲ್ಲ. ನೀವು ಅದನ್ನು ವೆರಿಫೈ ಮಾಡುವ ಅಗತ್ಯವಿದೆ. ಹಂತಗಳು ಇಲ್ಲಿವೆ -

  • ಇನ್‌ಕಮ್‌ ಟ್ಯಾಕ್ಸ್‌ ಭಾರತದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಲಾಗ್ ಇನ್ ಆಗಿ.
  • 'ಇ-ಫಿಲ್ಲಿಂಗ್' ಮತ್ತು ನಂತರ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್' ಆಯ್ಕೆಮಾಡಿ ಮತ್ತು ನಂತರ ನಿಮ್ಮ ಇ-ಫೈಲ್ ಮಾಡಿದ ಟ್ಯಾಕ್ಸ್ ರಿಟರ್ನ್ಸ್ ಅನ್ನು ವೀಕ್ಷಿಸಲು ಆಯ್ಕೆ ಮಾಡಿ.
  • ನಿಮ್ಮ ಐಟಿಆರ್-ವಿ ಅನ್ನು ಡೌನ್‌ಲೋಡ್ ಮಾಡಲು ಸ್ವೀಕೃತಿ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಅನ್ನು ನೀವು ಇ-ವೆರಿಫೈ ಮಾಡಬಹುದು.
  • ಡೌನ್‌ಲೋಡ್ ಪ್ರೊಸೆಸ್ ಅನ್ನು ಪ್ರಾರಂಭಿಸಲು 'ಐಟಿಆರ್-ವಿ/ಅಕ್‌ನಾಲೆಡ್ಜ್‌ಮೆಂಟ್' ಆಯ್ಕೆಮಾಡಿ.
  • ಸ್ವೀಕೃತಿ ನೀಡಿದ 30 ದಿನಗಳೊಳಗೆ ಸಿಪಿಸಿ ಬೆಂಗಳೂರಿಗೆ ಡಾಕ್ಯುಮೆಂಟ್ ಅನ್ನು ಪ್ರಿಂಟ್ ಮಾಡಿ, ಸಹಿ ಮಾಡಿ ಮತ್ತು ಕಳುಹಿಸಿ.

ಮೇಲಿನ ಹಂತಗಳನ್ನು ಅನುಸರಿಸಿದರೆ ಆನ್‌ಲೈನ್‌ನಲ್ಲಿ ಐಟಿಆರ್ ಫೈಲಿಂಗ್ ಮಾಡುವುದು ಹೇಗೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ದೊರಕುತ್ತದೆ.

[ಮೂಲ]

ನಿಮ್ಮ ರಿಫಂಡ್ ಸ್ಟೇಟಸ್ ಅನ್ನು ಚೆಕ್ ಮಾಡಿ

ನಿಮ್ಮ ರಿಫಂಡ್ ನಿರ್ಧರವಾದ ಬಳಿಕ, ನೀವು ಇದನ್ನು ಇಲ್ಲಿ ಚೆಕ್ ಮಾಡಬಹುದು -

ಇನ್‌ಕಮ್‌ ಟ್ಯಾಕ್ಸ್‌ ಇ-ಫೈಲಿಂಗ್ ಪೋರ್ಟಲ್

  • ಇನ್‌ಕಮ್‌ ಟ್ಯಾಕ್ಸ್‌ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ
  • ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಹಾಕಿದ ನಂತರ, ಕ್ಯಾಪ್ಚಾವನ್ನು ನಮೂದಿಸಿ ಮತ್ತು ನಂತರ ಲಾಗಿನ್ ಕ್ಲಿಕ್ ಮಾಡಿ ನಿಮ್ಮ ಖಾತೆಗೆ ಲಾಗ್ ಇನ್ ಆಗಿ.
  • “ವ್ಯೂ ಫೈಲ್ಡ್‌ ರಿಟರ್ನ್ಸ್/ಫಾರ್ಮ್ಸ್‌” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಸೂಕ್ತವಾದ ಆಯ್ಕೆ ಬಾಕ್ಸ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಅನ್ನು ಆರಿಸಿ ಮತ್ತು ನಂತರ ಸಂಬಂಧಿತ ಮೌಲ್ಯಮಾಪನ ವರ್ಷವನ್ನು ಹುಡುಕಿ.
  • ಇತ್ತೀಚಿನ ಇನ್‌ಕಮ್‌ ಟ್ಯಾಕ್ಸ್‌ ಸ್ಟೇಟಸ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.

ಎನ್‌ಎಸ್‌ಡಿಎಲ್‌ ಪೋರ್ಟಲ್

  • ನಿಮ್ಮ ರಿಫಂಡ್ ಸ್ಟೇಟಸ್ ಅನ್ನು ಚೆಕ್ ಮಾಡಲು ಎನ್‌ಎಸ್‌ಡಿಎಲ್‌ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನಿಮ್ಮ ಪ್ಯಾನ್, ಆರ್ಥಿಕ ವರ್ಷ ಮತ್ತು ಕ್ಯಾಪ್ಚಾ ನಮೂದಿಸಿ, ನಂತರ ಸಬ್‌ಮಿಟ್‌ ಕ್ಲಿಕ್ ಮಾಡಿ. ನಿಮ್ಮ ರಿಫಂಡ್ ಸ್ಟೇಟಸ್ ಅನ್ನು ಪ್ರದರ್ಶಿಸುವ ಪೇಜಿಗೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.

ಆನ್‌ಲೈನ್‌ನಲ್ಲಿ ಐಟಿ ರಿಟರ್ನ್‌ಗಳನ್ನು ಹೇಗೆ ಫೈಲ್ ಮಾಡಬೇಕು ಎಂಬುದರ ಕುರಿತು ಈಗ ನಮಗೆ ಸ್ಪಷ್ಟವಾದ ಕಲ್ಪನೆ ಇದೆ, ನೀವು ಅದನ್ನು ಶ್ರದ್ಧೆಯಿಂದ ಮತ್ತು ಸಮಯಕ್ಕೆ ಸರಿಯಾಗಿ ಮಾಡಬೇಕು.

ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ರಿಫಂಡ್ ಅನ್ನು ನಾನು ಯಾವಾಗಿನ ತನಕ ಕ್ಲೈಮ್ ಮಾಡಬಹುದು?

ನಿಮ್ಮ ರಿಟರ್ನ್ಸ್ ಫೈಲ್ ಮಾಡಿದರೆ ಮಾತ್ರ ನಿಮ್ಮ ರಿಫಂಡ್ ಅನ್ನು ನೀವು ಕ್ಲೈಮ್ ಮಾಡಬಹುದು. ರಿಟರ್ನ್ಸ್ ಮತ್ತು ಕ್ಲೈಮ್ ರಿಫಂಡ್‌ಗಳ ಸಮಯದ ಲಿಮಿಟ್ ಒಂದೇ ಆಗಿರುತ್ತದೆ. ರಿಟರ್ನ್ ಫೈಲ್ ಮಾಡಲು ಕೊನೆಯ ದಿನಾಂಕವು ಸಾಮಾನ್ಯವಾಗಿ ಮುಂದಿನ ಆರ್ಥಿಕ ವರ್ಷದ ಜುಲೈನ ಕೊನೆಯ ದಿನ ಆಗಿರುತ್ತದೆ.

ನನ್ನ ಐಟಿ ರಿಫಂಡ್ ಏಕೆ ವಿಳಂಬವಾಗಿದೆ?

ಮ್ಯಾನ್ಯುವಲ್ ಫೈಲಿಂಗ್, ಅಘೋಷಿತ ಇನ್‌ಕಮ್‌ ಇತ್ಯಾದಿಗಳು ಐಟಿ ರಿಫಂಡ್‌ಗಳು ವಿಳಂಬವಾಗಲು ವಿವಿಧ ಕಾರಣವಾಗಿರಬಹುದು.

ನಾನು ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ?

ನಿಮ್ಮ ಇನ್‌ಕಮ್‌ ₹5 ಲಕ್ಷಕ್ಕಿಂತ ಹೆಚ್ಚಿದ್ದರೆ, ನೀವು ಐಟಿಆರ್ ಅನ್ನು ಫೈಲ್ ಮಾಡದಿದ್ದರೆ ₹10000 ಪೆನಲ್ಟಿ ವಿಧಿಸಲ್ಪಡುತ್ತದೆ. ಇನ್‌ಕಮ್‌ ಕೆಳಗೆ, ಐಟಿಆರ್ ಅನ್ನು ಫೈಲ್ ಮಾಡದಿದ್ದುದಕ್ಕಾಗಿ ನೀವು ಪಾವತಿಸುವ ಪೆನಲ್ಟಿ ₹1000 ಆಗಿದೆ. ಉದ್ದೇಶಪೂರ್ವಕ ಟ್ಯಾಕ್ಸ್ ವಂಚನೆಯು ಜೈಲು ಶಿಕ್ಷೆಗೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಐಟಿಆರ್ ಫೈಲ್ ಮಾಡದಿರಲು ನಿಮಗೆ ನಿಜವಾದ ಕಾರಣವಿದ್ದರೆ ವಿನಾಯಿತಿಗಳನ್ನು ಮಾಡಬಹುದು.