ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಫಾರ್ಮ್ 15G ಮತ್ತು ಫಾರ್ಮ್ 15H ನಡುವಿನ ವ್ಯತ್ಯಾಸವೇನು?

ಟ್ಯಾಕ್ಸ್‌ ಲಿಮಿಟ್‌ಗಿಂತ ಕೆಳಗಿನ ಒಟ್ಟು ಇನ್‌ಕಮ್‌ ಹೊಂದಿರುವ ವ್ಯಕ್ತಿಗಳು ಫಾರ್ಮ್ 15G ಅಥವಾ ಫಾರ್ಮ್ 15H ಅನ್ನು ಸಬ್‌ಮಿಟ್‌ ಮಾಡುವ ಮೂಲಕ ಇಂಟರೆಸ್ಟ್‌ ಮೇಲಿನ ಟಿಡಿಎಸ್ ಅನ್ನು ಉಳಿಸಬಹುದು. ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್ ಸೆಕ್ಷನ್ 194A ಅಡಿಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ ₹40,000 ಲಿಮಿಟ್ ಅನ್ನು ದಾಟಿದಾಗ ಬ್ಯಾಂಕ್‌ಗಳು ಇಂಟರೆಸ್ಟ್ ಇನ್‌ಕಮ್‌ ಮೇಲೆ ಟಿಡಿಎಸ್‌ ಡಿಡಕ್ಟ್‌ಗೊಳಿಸುತ್ತವೆ. ಸೀನಿಯರ್‌ ಸಿಟಿಜನ್‌ಗಳಿಗೆ ₹50,000 ಅಮೌಂಟ್ ನಿಗದಿಪಡಿಸಲಾಗಿದೆ. ಇಲ್ಲಿ, ಎರಡು ಫಾರ್ಮ್‌ಗಳ ಲಭ್ಯತೆ ಇರುವುದರಿಂದ ವ್ಯಕ್ತಿಗಳಿಗೆ ಯಾವುದು ಅಪ್ಲಿಕೇಬಲ್‌ ಆಗುತ್ತದೆ ಎಂಬ ಗೊಂದಲವನ್ನು ಉಂಟುಮಾಡುತ್ತದೆ.

ಆದುದಿಂದಲೇ ವ್ಯಕ್ತಿಗಳು ಸರಿಯಾದ ಫಾರ್ಮ್ ಅನ್ನು ಆಯ್ಕೆ ಮಾಡುವುದಕ್ಕೆ ನೆರವಾಗಲು 15G ಮತ್ತು 15H ನಡುವಿನ ವ್ಯತ್ಯಾಸದ ಬಗೆಗಿನ ಕಾಂಪ್ರೆಹೆನ್ಸಿವ್ ಜ್ಞಾನವು ಅತ್ಯಗತ್ಯ.

ಆದ್ದರಿಂದ, ಫಾರ್ಮ್ 15G ಮತ್ತು ಫಾರ್ಮ್ 15H ಬಗೆಗಿನ ಸಣ್ಣ ವಿವರಣೆಯೊಂದಿಗೆ ಈ ಚರ್ಚೆಯನ್ನು ಪ್ರಾರಂಭಿಸೋಣ ಮತ್ತು ಅವುಗಳ ವ್ಯತ್ಯಾಸಗಳೊಂದಿಗೆ ಅದನ್ನು ಅನುಸರಿಸೋಣ.

ಫಾರ್ಮ್ 15G ಎಂದರೇನು?

ಫಾರ್ಮ್ 15G ಎಂಬುದು ಟ್ಯಾಕ್ಸ್‌ಪೇಯರ್‌ಗಳು ಮಾಡುವ ಡಿಕ್ಲರೇಷನ್ ಫಾರ್ಮ್ ಆಗಿದ್ದು, ಇದರಲ್ಲಿ ಅವರು ತಮ್ಮ ಇನ್‌ಕಮ್‌ ಕನಿಷ್ಟ ವಿನಾಯಿತಿ ಲಿಮಿಟ್‌ಗಿಂತ ಕಡಿಮೆ ಇರುವುದರಿಂದ ಟಿಡಿಎಸ್‌ ಅನ್ನು ಡಿಡಕ್ಟ್‌ ಮಾಡದಿರಲು ಬ್ಯಾಂಕ್‌ಗೆ ವಿನಂತಿ ಮಾಡುತ್ತಾರೆ.

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್ 1961 ಕೆಲವು ಸಂದರ್ಭಗಳಲ್ಲಿ ಟ್ಯಾಕ್ಸ್ ಲಯಬಿಲಿಟಿ ಮೇಲೆ ಪರಿಹಾರವನ್ನು ಒದಗಿಸುತ್ತದೆ. ಒಬ್ಬ ವ್ಯಕ್ತಿಯು ₹ 2,50,000ಕ್ಕಿಂತ ಕಡಿಮೆ ಟ್ಯಾಕ್ಸೇಬಲ್ ಇನ್‌ಕಮ್‌ ಹೊಂದಿದ್ದರೆ, ಅವರು ಇನ್‌ಕಮ್‌ ಟ್ಯಾಕ್ಸ್ ಅನ್ನು ಪಾವತಿಸಲು ಲಯಬಲ್‌ ಆಗಿರುವುದಿಲ್ಲ.

ಇಲ್ಲಿ, ವ್ಯಕ್ತಿಗಳು ಫಿಕ್ಸ್‌ಡ್‌ ಡೆಪಾಸಿಟ್‌ಗಳ ಮೇಲೆ ಇಂಟರೆಸ್ಟ್ ಅನ್ನು ಗಳಿಸಿದರೆ, ಬ್ಯಾಂಕ್‌ಗಳು ಇಂಟರೆಸ್ಟ್ ಅಮೌಂಟ್ ಅನ್ನು ವ್ಯಕ್ತಿಗಳ ಖಾತೆಗಳಿಗೆ ಜಮಾ ಮಾಡುವ ಮೊದಲು ಟಿಡಿಎಸ್ ಅನ್ನು ಡಿಡಕ್ಟ್ ಮಾಡಬಹುದು. ಆದಾಗ್ಯೂ, ಒಟ್ಟು ಇನ್‌ಕಮ್‌ ₹2,50,000 ಲಿಮಿಟ್ ಅನ್ನು ಮೀರದಿದ್ದರೆ, ವ್ಯಕ್ತಿಗಳು ಫಾರ್ಮ್ 15G ಅನ್ನು ಬಳಸಿಕೊಳ್ಳಬಹುದು ಮತ್ತು ಅಮೌಂಟ್ ₹40,000 ಮೀರಿ ಹೋದರೂ ಇಂಟರೆಸ್ಟ್ ಇನ್‌ಕಮ್‌ ಮೇಲೆ ಟಿಡಿಎಸ್ ಡಿಡಕ್ಷನ್ ಅನ್ನು ತಪ್ಪಿಸಬಹುದು.

ವ್ಯಕ್ತಿಗಳು ಫಾರ್ಮ್ 15G ಅನ್ನು ಸಬ್‌ಮಿಟ್ ಮಾಡಿದರೆ, ಬ್ಯಾಂಕ್‌ಗಳು ಯಾವುದೇ ಟಿಡಿಎಸ್ ಅನ್ನು ಡಿಡಕ್ಟ್ ಮಾಡದ ಕಾರಣ ಅವರು ಸಂಪೂರ್ಣ ಇಂಟರೆಸ್ಟ್ ಇನ್‌ಕಮ್‌ ಅನ್ನು ಗಳಿಸಬಹುದು. ಫಾರ್ಮ್ 15G ಸಬ್‌ಮಿಟ್‌ ಮಾಡಲು, ವ್ಯಕ್ತಿಯ ವಯಸ್ಸು 60 ವರ್ಷಕ್ಕಿಂತ ಕಡಿಮೆ ಇರಬೇಕು.

ಈಗ ನೀವು ಫಾರ್ಮ್ 15G ಬಗ್ಗೆ ತಿಳಿದಿದ್ದೀರಿ, 15G ಮತ್ತು 15H ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಾವು ಫಾರ್ಮ್ 16H ಮೇಲೆ ಗಮನ ಹರಿಸೋಣ.

[మూలం]

ಫಾರ್ಮ್ 15H ಎಂದರೇನು?

ಫಾರ್ಮ್ 15H ನ ಉದ್ದೇಶವು ಸ್ವಲ್ಪ ಫಾರ್ಮ್ 15Gಯ ಉದ್ದೇಶವನ್ನು ಹೋಲುತ್ತದೆ. ಇದರರ್ಥ ವ್ಯಕ್ತಿಗಳು ಆರ್ಥಿಕ ವರ್ಷದಲ್ಲಿ ಫಿಕ್ಸ್‌ಡ್‌ ಡೆಪಾಸಿಟ್‌ಗಳಿಂದ ಗಳಿಸಿದ ಇಂಟರೆಸ್ಟ್‌ ಮೇಲೆ ಟಿಡಿಎಸ್ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು.

ಈ ಫಾರ್ಮ್ ಅನ್ನು ವಿಶೇಷವಾಗಿ 60 ವರ್ಷಗಳನ್ನು ತಲುಪಿದ ವ್ಯಕ್ತಿಗಳಿಗೆ ನಿಗದಿಪಡಿಸಲಾಗಿದೆ. ದಯವಿಟ್ಟು ಗಮನಿಸಿ, ಫಾರ್ಮ್‌ಗಳು ಒಂದು ವರ್ಷದ ವ್ಯಾಲಿಡಿಟಿ ಅನ್ನು ಹೊಂದಿವೆ. ಆದ್ದರಿಂದ, ಫಿಕ್ಸ್‌ಡ್‌ ಡೆಪಾಸಿಟ್‌ಗಳಿಂದ ಉತ್ಪತ್ತಿಯಾಗುವ ಇಂಟರೆಸ್ಟ್ ಮೇಲೆ ಟಿಡಿಎಸ್ ಅನ್ನು ಪಡೆಯಲು, ವ್ಯಕ್ತಿಗಳು ಪ್ರತಿ ಆರ್ಥಿಕ ವರ್ಷದಲ್ಲಿ ಫಾರ್ಮ್ 15H ಅನ್ನು ಸಬ್‌ಮಿಟ್‌ ಮಾಡಬೇಕು.

ಮೇಲೆ ತಿಳಿಸಲಾದ ಎರಡೂ ಫಾರ್ಮ್‌ಗಳ ವ್ಯಾಖ್ಯಾನದ ಸ್ಪಷ್ಟ ಅರ್ಥೈಸುವಿಕೆಯೊಂದಿಗೆ, ನಾವು ಈಗ 15G ಮತ್ತು 15H ಫಾರ್ಮ್‌ಗಳ ವ್ಯತ್ಯಾಸಗಳ ಮೇಲೆ ಗಮನ ಕೇಂದ್ರೀಕರಿಸಬಹುದು.

[మూలం]

ಫಾರ್ಮ್ 15G ಮತ್ತು 15H ನಡುವಿನ ವ್ಯತ್ಯಾಸಗಳು

ಪ್ಯಾರಾಮೀಟರ್‌ಗಳು 

ಫಾರ್ಮ್ 15G ಫಾರ್ಮ್ 15H 
ಅರ್ಹತೆ ವ್ಯಕ್ತಿಗಳು (ಕಂಪನಿ ಅಥವಾ ಸಂಸ್ಥೆಯಲ್ಲ). 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ನಿವಾಸಿಗಳು ಈ ಫಾರ್ಮ್‌ಗೆ ಅರ್ಹರಾಗಿದ್ದಾರೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ನಿವಾಸಿಗಳು ಈ ಫಾರ್ಮ್‌ಗೆ ಅರ್ಹರಾಗಿರುತ್ತಾರೆ.
ಅಗತ್ಯವಿರುವ ಡಾಕ್ಯುಮೆಂಟ್‌ಗಳು ಪ್ಯಾನ್ ಕಾರ್ಡ್ ಪ್ಯಾನ್ ಕಾರ್ಡ್
ಉಪಯೋಗಗಳು ಉದ್ಯೋಗದಾತರ ಪ್ರಾವಿಡೆಂಟ್ ಫಂಡ್ ವಿತ್‌ಡ್ರಾವಲ್‌, ಪೋಸ್ಟ್ ಆಫೀಸ್ ಡೆಪಾಸಿಟ್‌ಗಳ ಇಂಟರೆಸ್ಟ್, ಬ್ಯಾಂಕ್ ಡೆಪಾಸಿಟ್‌ಗಳಿಂದ ಇಂಟರೆಸ್ಟ್ ಇನ್‌ಕಮ್‌, ಬಾಡಿಗೆ ಇನ್‌ಕಮ್‌ನಿಂದ ಇಂಟರೆಸ್ಟ್, ಲೈಫ್ ಇನ್ಶೂರೆನ್ಸ್ ಪಾಲಿಸಿಯಿಂದ ಇಂಟರೆಸ್ಟ್, ಕಾರ್ಪೊರೇಟ್ ಬಾಂಡ್ ಮತ್ತು ಡಿಬೆಂಚರ್‌ಗಳ ಇಂಟರೆಸ್ಟ್ ಮೇಲಿನ ಟಿಡಿಎಸ್ ಅನ್ನು ಡಿಡಕ್ಷನ್ ಮಾಡದಿರಲು ವ್ಯಕ್ತಿಗಳು ಫಾರ್ಮ್ 15G ಅನ್ನು ಬಳಸಬಹುದು. ಫಾರ್ಮ್ 15H ಅನ್ನು ಫಿಕ್ಸ್‌ಡ್‌ ಡೆಪಾಸಿಟ್‌ಗಳಿಂದ, ಕಾರ್ಪೊರೇಟ್ ಬಾಂಡ್‌ಗಳಿಂದ, ಪೋಸ್ಟ್ ಆಫೀಸ್‌ನಿಂದ, ಇಪಿಎಫ್ ವಿತ್‌ಡ್ರಾವಲ್‌ ಮೇಲೆ, ಬಾಡಿಗೆಯಿಂದ ಉತ್ಪತ್ತಿಯಾಗುವ ಇಂಂಟರೆಸ್ಟ್ ಮೇಲೆ ಟಿಡಿಎಸ್ ಅನ್ನು ಡಿಡಕ್ಷನ್‌ ಮಾಡದಿರುವಂತೆ ಕ್ಲೈಮ್ ಮಾಡಲು ಬಳಸಬಹುದು.
ಪ್ರಯೋಜನಗಳು ಈ ಫಾರ್ಮ್ ವ್ಯಕ್ತಿಗಳಿಗೆ (60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ) ಆರ್ಥಿಕ ವರ್ಷದಲ್ಲಿ ಇಂಟರೆಸ್ಟ್‌ ಇನ್‌ಕಮ್‌ನಿಂದ ಟಿಡಿಎಸ್ ಡಿಡಕ್ಷನ್‌ಗಳನ್ನು ಉಳಿಸಲು ಸಹಾಯ ಮಾಡುತ್ತದೆ. [ಅನಿವಾಸಿ-ಭಾರತೀಯರು ಅಥವಾ ಎನ್‌ಐರ್‌ಐಗಳಾಗಿರುವ ವ್ಯಕ್ತಿಗಳು ಪ್ರಯೋಜನಗಳನ್ನು ಕ್ಲೈಮ್ ಮಾಡಲಾಗುವುದಿಲ್ಲ.] ಈ ಫಾರ್ಮ್ ವ್ಯಕ್ತಿಗಳಿಗೆ (60 ವರ್ಷಕ್ಕಿಂತ ಮೇಲ್ಪಟ್ಟವರು) ಆರ್ಥಿಕ ವರ್ಷದಲ್ಲಿ ಇಂಟರೆಸ್ಟ್‌ ಇನ್‌ಕಮ್‌ನಿಂದ ಟಿಡಿಎಸ್‌ ಡಿಡಕ್ಷನ್‌ಗಳನ್ನು ಉಳಿಸಲು ಸಹಾಯ ಮಾಡುತ್ತದೆ.[ಅನಿವಾಸಿ-ಭಾರತೀಯರು ಅಥವಾ ಎನ್‌ಆರ್‌ಐಗಳಾಗಿರುವ ವ್ಯಕ್ತಿಗಳು ಪ್ರಯೋಜನಗಳನ್ನು ಕ್ಲೈಮ್ ಮಾಡಲಾಗುವುದಿಲ್ಲ.]
Benefits
ಇದರ ವಿರುದ್ಧ ನೀಡಲಾಗಿದೆ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಫಿಕ್ಸೆಡ್ ಡೆಪಾಸಿಟ್ ಹೋಲ್ಡರ್‌ಗಳ ವಿರುದ್ಧ ಈ ಫಾರ್ಮ್ ಅನ್ನು ನೀಡಲಾಗುತ್ತದೆ. ಈ ಫಾರ್ಮ್ ಅನ್ನು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಫಿಕ್ಸ್‌ಡ್‌ ಡೆಪಾಸಿಟ್‌ ಹೋಲ್ಡರ್‌ಗಳು ಮತ್ತು ರಿಕರಿಂಗ್‌ ಡೆಪಾಸಿಟ್ ಹೋಲ್ಡರ್‌ಗಳ ವಿರುದ್ಧ ನೀಡಲಾಗುತ್ತದೆ.
ನೀಡುವವರು ಇನ್‌ಕಮ್‌ ಟ್ಯಾಕ್ಸ್‌ ಇಲಾಖೆ ಮತ್ತು ಭಾರತದ ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಫಾರ್ಮ್ 15G ಅನ್ನು ನೀಡುತ್ತವೆ. ಇನ್‌ಕಮ್‌ ಟ್ಯಾಕ್ಸ್‌ ಇಲಾಖೆ ಮತ್ತು ಭಾರತದ ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಫಾರ್ಮ್ 15H ಅನ್ನು ನೀಡುತ್ತವೆ.
ಕಾಲಾವಧಿ ಆರ್ಥಿಕ ವರ್ಷ 2021-22ಗೆ, ಫಾರ್ಮ್‌ನ ವ್ಯಾಲಿಡಿಟಿಯು 1 ಇಡೀ ವರ್ಷಕ್ಕೆ ಅಂದರೆ 2022-23ರವರೆಗೆ ಇರುತ್ತದೆ. ಆರ್ಥಿಕ ವರ್ಷ 2021-22ಗೆ, ಫಾರ್ಮ್‌ನ ವ್ಯಾಲಿಡಿಟಿಯು 1 ಇಡೀ ವರ್ಷಕ್ಕೆ ಅಂದರೆ 2022-23ರವರೆಗೆ ಇರುತ್ತದೆ.
ವೆರಿಫಿಕೇಷನ್ ವ್ಯಾಲಿಡೇಷನ್ ಸ್ಟೇಟಸ್ ಅನ್ನು ಇ-ಫೈಲಿಂಗ್ ಪೋರ್ಟಲ್ ಮೂಲಕ ಮಾಡಬಹುದು. ವ್ಯಾಲಿಡೇಷನ್ ಸ್ಟೇಟಸ್ ಅನ್ನು ಇ-ಫೈಲಿಂಗ್ ಪೋರ್ಟಲ್ ಮೂಲಕ ಮಾಡಬಹುದು.

ಫಾರ್ಮ್ 15Gಗೆ ಒಂದು ವರ್ಷದ ಒಟ್ಟು ಇಂಟರೆಸ್ಟ್ ಇನ್‌ಕಮ್‌ ಆ ವರ್ಷದ ವಿನಾಯಿತಿ ಲಿಮಿಟ್‌ಗಿಂತ ಕಡಿಮೆಯಿರಬೇಕು. 2021-22ರ ಆರ್ಥಿಕ ವರ್ಷಕ್ಕೆ (ಮೌಲ್ಯಮಾಪನ ವರ್ಷ 2022-23) ಆ ಅಮೌಂಟ್ ₹2.5 ಲಕ್ಷ.

ಫಾರ್ಮ್ 15G ಮತ್ತು ಫಾರ್ಮ್ 15H ನಡುವಿನ ವ್ಯತ್ಯಾಸದ ಬಗ್ಗೆ ಆಶ್ಚರ್ಯ ಪಡುವ ವ್ಯಕ್ತಿಗಳು ಈಗ ಮೇಲೆ ತಿಳಿಸಿದ ತುಣುಕಿನಿಂದ ವಿವರವಾದ ಉತ್ತರವನ್ನು ಪಡೆಯಬಹುದು. ಆದ್ದರಿಂದ, ಅವರು ತಮ್ಮ ವಯಸ್ಸಿಗೆ ಅನುಗುಣವಾಗಿ ಫಾರ್ಮ್ ಸಂಖ್ಯೆಯನ್ನು ಸುಲಭವಾಗಿ ಗುರುತಿಸಬಹುದು ಮತ್ತು ಇಂಟರೆಸ್ಟ್ ಇನ್‌ಕಮ್‌ ಮೇಲೆ ಡಿಡಕ್ಷನ್ ಮಾಡದಿಲು ಕ್ಲೈಮ್ ಮಾಡಬಹುದು.

[ಮೂಲ 1]

[ಮೂಲ 2]

[ಮೂಲ 3]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಕಂಪನಿ ಅಥವಾ ಸಂಸ್ಥೆಯು ಇಂಟರೆಸ್ಟ್ ಮೇಲಿನ ಟಿಡಿಎಸ್ ಡಿಡಕ್ಷನ್‌ಗೆ ಅಪ್ಲೈ ಮಾಡಬಹುದೇ ಮತ್ತು ಫಾರ್ಮ್ 15G ಸಬ್‌ಮಿಟ್ ಮಾಡಬಹುದೇ?

ಇಲ್ಲ, ಕಂಪನಿ ಅಥವಾ ಸಂಸ್ಥೆಯು ಇಂಟರೆಸ್ಟ್ ಮೇಲಿನ ಟಿಡಿಎಸ್‌ ಡಿಡಕ್ಷನ್‌ಗೆ ಅಪ್ಲೈ ಮಾಡಲು ಮತ್ತು ಫಾರ್ಮ್ 15G ಅನ್ನು ಸಬ್‌ಮಿಟ್‌ ಮಾಡಲು ಸಾಧ್ಯವಿಲ್ಲ.

ಹಿಂದೂ ಅವಿಭಕ್ತ ಕುಟುಂಬಕ್ಕೆ (ಹೆಚ್‌ಯುಎಫ್‌) ಫಾರ್ಮ್ 15H ಲಭ್ಯವಿದೆಯೇ?

ಇಲ್ಲ, ಹಿಂದೂ ಅವಿಭಕ್ತ ಕುಟುಂಬಕ್ಕೆ (ಹೆಚ್‌ಯುಎಫ್‌) ಫಾರ್ಮ್ 15H ಲಭ್ಯವಿಲ್ಲ.

ಭಾರತದ ಅನಿವಾಸಿಗಳು ಫಾರ್ಮ್ 15G ಮತ್ತು 15Hನ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದೇ?

ಇಲ್ಲ, ಭಾರತದ ಅನಿವಾಸಿಗಳು ಫಾರ್ಮ್ 15G ಮತ್ತು 15H ಪ್ರಯೋಜನಗಳನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ.