Premium Starting ₹395
24x7 Missed Call Facility
ಜನರಲ್
ಜನರಲ್ ಪ್ರಾಡಕ್ಟ್ಸ್
ಸರಳ ಮತ್ತು ಪಾರದರ್ಶಕ! ನಿಮ್ಮ ಎಲ್ಲಾ ವಿಮಾ ಅಗತ್ಯಗಳಿಗೆ ಹೊಂದುವ ನೀತಿಗಳು.
37K+ Reviews
7K+ Reviews
Scan to download
ಲೈಫ್
ಲೈಫ್ ಇನ್ಶುರನ್ಸ್ ಪ್ರಾಡಕ್ಟ್ಸ್
ಡಿಜಿಟ್ ಲೈಫ್ ಇಲ್ಲಿ ಇದೆ! ನಿಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಉಳಿಸಲು ಮತ್ತು ಸುರಕ್ಷಿತಗೊಳಿಸಲು ಅತ್ಯಂತ ಸರಳವಾದ ರೀತಿಯಲ್ಲಿ ಸಹಾಯ ಮಾಡಲು.
37K+ Reviews
7K+ Reviews
Scan to download
ಕ್ಲೇಮ್ಸ್
ಕ್ಲೇಮ್ಸ್
ನಾವು ನಿಮ್ಮ ಜೊತೆ ಇರುತ್ತೇವೆ! ಯಾವಾಗ ಬೇಕಾದರೂ, ಹೇಗೇ ಬೇಕಾದರೂ ನೀವು ನಮ್ಮನ್ನು ಅಗತ್ಯವಿದ್ದಾಗ.
37K+ Reviews
7K+ Reviews
Scan to download
ರಿಸೋರ್ಸಸ್
ರಿಸೋರ್ಸಸ್
ನಿಮ್ಮ ಜೀವನದಲ್ಲಿ ಡಿಜಿಟ್ನ ಸರಳತೆಯನ್ನು ಅನುಭವಿಸಲು ಇನ್ನೂ ಹೆಚ್ಚು ಕಾರಣಗಳು!
37K+ Reviews
7K+ Reviews
Scan to download
37K+ Reviews
7K+ Reviews
ನಮ್ಮ ವಾಟ್ಸಾಪ್ ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗದು. ಇದು ಕೇವಲ ಚಾಟ್ಗಾಗಿ ಮಾತ್ರವಾದ ಸಂಖ್ಯೆ.
Enter your Mobile Number to get Download Link on WhatsApp.
You can also Scan this QR Code and Download the App.
Premium Starting ₹395
24x7 Missed Call Facility
ಹವೆಯಲ್ಲಿ ರೋಮಾಂಚನ, ವಿನೋದ ಮತ್ತು ಸಂತೋಷವನ್ನು ಕಂಡುಕೊಳ್ಳುವ ಸ್ಥಳವನ್ನು ನೀವು ಹುಡುಕುತ್ತಿರುವಿರಾ? ಹಾಗಾದರೆ ಸಿಂಗಾಪುರ ನೀವು ಪರಿಗಣಿಸಬಹುದಾದ ಒಂದು ಆಯ್ಕೆಯಾಗಿದೆ!
ಅದರ ನೈಟ್-ಲೈಫ್ ಮತ್ತು ಅದ್ಭುತವಾದ ಹಸಿರು ಅಭಯಾರಣ್ಯಗಳಿಗೆ ಪ್ರಸಿದ್ಧವಾಗಿರುವ ಸಿಂಗಾಪುರದಲ್ಲಿ ಟೂರಿಸ್ಟ್ ಗಳಿಗೆ ಅನ್ವೇಷಿಸಲು ಮತ್ತು ಅನುಭವಿಸಲು ಸಾಕಷ್ಟು ವಿಷಯಗಳಿವೆ. ಸಿಂಗಾಪುರ ಚಾಂಗಿ ವಿಮಾನ ನಿಲ್ದಾಣವು ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಮತ್ತು ಇದು ಸ್ವತಃ ಪ್ರಪಂಚದಾದ್ಯಂತದ ಟೂರಿಸ್ಟ್ ಗಳು ಮತ್ತು ಸಂಚಾರಿ ಪ್ರಯಾಣಿಕರಿಗೆ ಒಂದು ಆಕರ್ಷಣೆಯಾಗಿದೆ.
ಕುಟುಂಬಗಳು, ಏಕಾಂಗಿ ಪ್ರಯಾಣಿಕರು ಮತ್ತು ಯುವ ಪ್ರಯಾಣಿಕರನ್ನು ಸಮಾನವಾಗಿ ಆಕರ್ಷಿಸುವ ಇದೊಂದು ಭವ್ಯವಾದ ಸ್ಥಳವಾಗಿದೆ. ಅದರ ಕೆಲವು ಪ್ರಸಿದ್ಧ ಆಕರ್ಷಣೆಗಳಲ್ಲಿ ಸಿಂಗಾಪುರ್ ಶಾಪಿಂಗ್ ಫೆಸ್ಟಿವಲ್, ಒಳಾಂಗಣ ಸ್ಕೈಡೈವಿಂಗ್ ಗಾಗಿ ವಿಶ್ವದ ಅತಿದೊಡ್ಡ ವಿಂಡ್ ಟನಲ್, ಕ್ರೀಡಾ ಚಟುವಟಿಕೆಗಳು ಮತ್ತು ಕುಖ್ಯಾತ ಮತ್ತು ಕಲಾ ಪ್ರೇಮಿಗಳ ಸ್ವರ್ಗವಾದ ನ್ಯಾಷನಲ್ ಆರ್ಟ್ ಮ್ಯೂಸಿಯಂ ಸೇರಿವೆ! ನಾವು ಅದರ ಇತರ ಆಕರ್ಷಣೆಗಳು ಮತ್ತು ಸುದೀರ್ಘ ಪ್ರಯಾಣದ ವಿವರಗಳನ್ನು ಆಳವಾಗಿ ತಿಳಿಯುವ ಮೊದಲು, ಎಲ್ಲಕ್ಕಿಂತ ಪ್ರಮುಖವಾದ ವಿಷಯಕ್ಕೆ ಬರೋಣ, ವೀಸಾ!
ಪ್ರಪಂಚದಾದ್ಯಂತದ ಹಲವಾರು ಸ್ಥಳಗಳಿಗೆ ಪ್ರಯಾಣಿಸಲು ಭಾರತೀಯ ನಾಗರಿಕರಿಗೆ ಒಂದು ಅನುಮೋದಿತ ವೀಸಾ ಅಗತ್ಯವಿದೆ, ಸಿಂಗಾಪುರ ಕೂಡ ಅವುಗಳಲ್ಲಿ ಒಂದಾಗಿದೆ!
ಹೌದು, ಭಾರತೀಯರಿಗೆ ಸಿಂಗಾಪುರಕ್ಕೆ ವೀಸಾ ಅಗತ್ಯವಿದೆ ಆದಾಗ್ಯೂ, ಸಿಂಗಾಪುರಕ್ಕೆ ಪ್ರಯಾಣಿಸುವ ಟೂರಿಸ್ಟ್ ಗಳಲ್ಲಿ ಆಗಿರುವ ಬಿರುಸಿನ ಹೆಚ್ಚಳವು ಇದರ ಪ್ರಕ್ರಿಯೆಯನ್ನು ಹೆಚ್ಚು ಸುಲಭ ಮತ್ತು ತ್ವರಿತಗೊಳಿಸಿದೆ.
ರಾಯಭಾರ ಕಚೇರಿಯಿಂದ ನೀಡಲಾದ ಟೂರಿಸ್ಟ್ ವೀಸಾ ಟೂರಿಸ್ಟ್ ಗಳಿಗೆ ಗರಿಷ್ಠ 30 ದಿನಗಳ ಕಾಲ ಉಳಿಯಲು ಅನುಮತಿ ನೀಡುತ್ತದೆ ಮತ್ತು 2 ವರ್ಷಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದು ಮಲ್ಟಿಪಲ್ ಎಂಟ್ರಿ ಪರ್ಮಿಟ್ ಆಗಿದೆ ಅಂದರೆ ನೀವು ಪ್ರತಿ ಬಾರಿ ಸಿಂಗಾಪುರಕ್ಕೆ ಪ್ರಯಾಣಿಸಿದಾಗ, ನೀವು ವೀಸಾಕ್ಕೆ ಅಪ್ಲಿಕೇಶನ್ ಸಲ್ಲಿಸಬೇಕಾಗಿಲ್ಲ!
ವೀಸಾ ಅಪ್ರುವಲ್ ಕೆಲವು ಮೂಲಭೂತ ಷರತ್ತುಗಳನ್ನು ಆಧರಿಸಿದೆ, ಅವು ಈ ರೀತಿ ಇವೆ:
ಸಿಂಗಾಪುರಕ್ಕೆ ಆಗಮಿಸಿದ ದಿನಾಂಕದಿಂದ ಭಾರತೀಯ ನಾಗರಿಕರು ಹೊಂದಿರಬೇಕಾದ 6 ತಿಂಗಳ ಮಾನ್ಯತೆ ಇರುವ ಒಂದು ವ್ಯಾಲಿಡ್ ಪಾಸ್ಪೋರ್ಟ್.
ಈ ದೇಶದಲ್ಲಿ ತಂಗಿರುವ ಅವಧಿಯಲ್ಲಿ ಪಾಸ್ಪೋರ್ಟ್ ಹೊಂದಿರುವವರ ಬ್ಯಾಂಕ್ ಅಕೌಂಟ್ ನಲ್ಲಿ ಸಾಕಷ್ಟು ಹಣ.
ಇಲ್ಲ, ಸಿಂಗಾಪುರದಲ್ಲಿ ಆಗಮನದ ಮೇಲೆ ವೀಸಾ ಆಯ್ಕೆಯು ಭಾರತೀಯ ನಾಗರಿಕರಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ಈ ದೇಶಕ್ಕೆ ಭೇಟಿ ನೀಡಲು ಮೊದಲೇ ಅನುಮೋದಿತ ವೀಸಾ ಅಗತ್ಯವಿದೆ. ಆದಾಗ್ಯೂ, ಒಂದು ಮೂರನೇ ದೇಶದಿಂದ ಅಥವಾ ಅಲ್ಲಿಗೆ ವಿಮಾನದಲ್ಲಿ ಪ್ರಯಾಣಿಸುವ ಭಾರತೀಯರು 96-ಗಂಟೆಗಳ ವೀಸಾ ಉಚಿತ ಸಾರಿಗೆ ಸೌಲಭ್ಯ (ವೀಸಾ ಫ್ರೀ ಟ್ರಾನ್ಸಿಟ್ ಫೆಸಿಲಿಟಿ -ವಿ.ಎಫ್.ಟಿ.ಎಫ್) ಗೆ ಅರ್ಹರಾಗಬಹುದು.
ಪ್ರತಿಯೊಂದು ದೇಶವೂ ವೀಸಾ ಪ್ರಕ್ರಿಯೆಗೆ ತನ್ನದೇ ಆದ ನಿಯಮಗಳನ್ನು ಹೊಂದಿದೆ. ವೀಸಾ ಅಪ್ಲಿಕೇಶನ್ ಗಾಗಿ ನಿಮ್ಮ ಅಪ್ರುವಲ್ ಪಡೆಯಲು ರುಜುವಾತುಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಸಿಂಗಾಪುರದ ಸಂದರ್ಭದಲ್ಲಿ, ನೀವು ಈ ರೀತಿಯ ಡಾಕ್ಯುಮೆಂಟ್ಗಳನ್ನು ಹೊಂದಿರಬೇಕು:
ಭಾರತೀಯ ಪಾಸ್ಪೋರ್ಟ್, ಸಿಂಗಾಪುರಕ್ಕೆ ಪ್ರವೇಶಿಸುವ ನಿರೀಕ್ಷಿತ ದಿನಾಂಕದಿಂದ ಕನಿಷ್ಠ 6 ತಿಂಗಳವರೆಗೆ ವ್ಯಾಲಿಡ್ ಆಗಿರುತ್ತದೆ.
ನೀವು ಹಳೆಯ ಪಾಸ್ಪೋರ್ಟ್ ಹೊಂದಿದ್ದರೆ, ಅದನ್ನು ಸಹ ಲಗತ್ತಿಸಿ.
35ಮಿಮೀ X45ಮಿಮೀ ಆಯಾಮದ 2 ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋಗಳು 80% ಮುಖದ ಕ್ಲೋಸ್ ಅಪ್, ಮ್ಯಾಟ್ ಫಿನಿಶ್ ಮತ್ತು ಬಿಳಿ ಹಿನ್ನೆಲೆಯೊಂದಿಗೆ. ನೀವು ಧರಿಸಿರುವ ಟಾಪ್ ನ ಬಣ್ಣವು ಬಿಳಿ ಬಣ್ಣಕ್ಕೆ ವ್ಯತಿರಿಕ್ತವಾಗಿರಬೇಕು. ಒಂದು ಫೋಟೋ ಅನ್ನು ಪಾಸ್ಪೋರ್ಟ್ನಲ್ಲಿ ಗ್ಲೂ ಸಹಾಯದೊಂದಿಗೆ ಅಂಟಿಸಬೇಕು ಮತ್ತು ಅಡ್ಡಲಾಗಿ ಸಹಿ ಮಾಡಬೇಕು. ಎರಡನೇ ಫೋಟೋ ವೀಸಾ ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಹೋಗುತ್ತದೆ.
ಒಳ ಮತ್ತು ಹೊರ ಪ್ರಯಾಣಕ್ಕಾಗಿ ಏರ್ ಟಿಕೆಟ್ಗಳು.
ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್.
ವೀಸಾ ಅಪ್ಲಿಕೇಶನ್ ಫಾರ್ಮ್-14 ಎ.
ಸಿಂಗಾಪುರಕ್ಕೆ ನಿಮ್ಮ ಭೇಟಿಯ ಉದ್ದೇಶದ ವಿವರಗಳನ್ನು ಒಳಗೊಂಡ ಕವರ್ ಲೆಟರ್.
ಭಾರತೀಯ ನಾಗರಿಕರಿಗೆ ವೀಸಾ ಪ್ರಕ್ರಿಯೆ ಶುಲ್ಕವು ಪ್ರತಿ ವ್ಯಕ್ತಿಗೆ 30 ಎಸ್.ಜಿ.ಡಿ ಆಗಿದೆ. ಈ ಶುಲ್ಕವನ್ನು ಎಲ್ಲಾ ಸಂದರ್ಭಗಳಲ್ಲಿ ರಿಫಂಡ್ ಮಾಡಲಾಗುವುದಿಲ್ಲ ಮತ್ತು ನೀವು ರಾಯಭಾರ ಕಚೇರಿಯ ಮೂಲಕ ಹೋದರೆ ಇದು ಅನ್ವಯಿಸುತ್ತದೆ. ಇದನ್ನು ಹೊರತುಪಡಿಸಿ, ನಿಮಗಾಗಿ ವೀಸಾವನ್ನು ಪಡೆಯುವ ಕೆಲವು ಏಜೆಂಟ್ಗಳಿದ್ದಾರೆ ಆದರೆ ಅವರು ಅದಕ್ಕಾಗಿ ಶುಲ್ಕವನ್ನು ವಿಧಿಸುತ್ತಾರೆ.
ಭಾರತದಿಂದ ಸಿಂಗಾಪುರ ಟೂರಿಸ್ಟ್ ವೀಸಾಗೆ ಅಪ್ಲಿಕೇಶನ್ ಸಲ್ಲಿಸುವ ವಿಧಾನವು ಸರಳವಾಗಿದೆ ಮತ್ತು ಇದು ಈ ರೀತಿ ಇದೆ:
ಸಿಂಗಾಪುರ ಟೂರಿಸ್ಟ್ ವೀಸಾ ಫಾರ್ಮ್ (14-ಎ) ಅನ್ನು ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಿ ಮತ್ತು ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
ನಿಮ್ಮ ಪಾಸ್ಪೋರ್ಟ್ ನಿರ್ದಿಷ್ಟಪಡಿಸಿರುವಂತೆ ವ್ಯಾಲಿಡಿಟಿ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ವೀಸಾ ಅಪ್ಲಿಕೇಶನ್ ನೊಂದಿಗೆ ಲಗತ್ತಿಸಬೇಕಾದ ವಿಮಾನ ಟಿಕೆಟ್ಗಳನ್ನು ನೀವು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಕಾರಣ, ದಿನಾಂಕ ಮತ್ತು ಪ್ರಯಾಣದ ಸ್ಥಳಗಳನ್ನು ತಿಳಿಸುವ ಅಪ್ಲಿಕೇಶನ್ ದಾರರಿಂದ ಕವರಿಂಗ್ ಲೆಟರ್. ಪತ್ರವನ್ನು "ಎಂಬೆಸ್ಸಿ ಆಫ್ ಸಿಂಗಾಪೂರ್" ಗೆ ಸಂಬೋಧಿಸಬೇಕು.
ವಿಶೇಷವಾಗಿ ನೀವು ಮೊದಲ ಬಾರಿಗೆ ಪ್ರಯಾಣಿಸುವವರಾಗಿದ್ದರೆ ಕಳೆದ 3 ವರ್ಷಗಳ ಇನ್ಕಮ್ ಟ್ಯಾಕ್ಸ್ ಪೇಪರ್ಗಳು ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಸಲ್ಲಿಸಿ.
ಅಡ್ರೆಸ್ ಪ್ರೂಫ್ ಅನ್ನು ನೀಡಿ. ನೀವು ವಾಸಿಸುವ ಸ್ಥಳವು ಪಾಸ್ಪೋರ್ಟ್ನಲ್ಲಿ ನಮೂದಿಸಲಾದ ವಿಳಾಸಕ್ಕಿಂತ ಬೇರೆ ವಿಳಾಸವನ್ನು ಹೊಂದಿದ್ದರೆ, ಎರಡಕ್ಕೂ ಪುರಾವೆಗಳು ಬೇಕಾಗುತ್ತವೆ.
ಸಿಂಗಾಪುರದಲ್ಲಿ ಕನ್ಫರ್ಮೇಶನ್ ಇರುವ ಹೋಟೆಲ್ಗಳ ಬುಕಿಂಗ್ ಅನ್ನು ಲಗತ್ತಿಸಿ.
ನೀವು ಎಲ್ಲಾ ಡಾಕ್ಯುಮೆಂಟ್ಗಳನ್ನು ವೈಯಕ್ತಿಕವಾಗಿ ಅಥವಾ ಆನ್ಲೈನ್ನಲ್ಲಿ ಸಲ್ಲಿಸಿದ ನಂತರ, ವೀಸಾಕ್ಕಾಗಿ ಶುಲ್ಕವನ್ನು ಪಾವತಿಸಿ.
ನಂತರ ನೀವು ವೀಸಾ ಪ್ರಕ್ರಿಯೆಗಾಗಿ ಮತ್ತು ನೀವು ಯಾವುದೇ ಕನ್ಫರ್ಮೇಶನ್ ಅನ್ನು ಸ್ವೀಕರಿಸುವವರೆಗೆ ಕಾಯಬಹುದು. ಒಮ್ಮೆ ನೀವು ವೀಸಾವನ್ನು ಸ್ವೀಕರಿಸಿದಾಗ, ಸಿಂಗಾಪುರ ಅಷ್ಟೇನು ದೂರವಿಲ್ಲ.
ಸಿಂಗಾಪುರ ಟೂರಿಸ್ಟ್ ವೀಸಾ ಪಡೆಯಲು ಸುಮಾರು 3-4 ದಿನಗಳು ಬೇಕಾಗುತ್ತವೆ. ಆದರೆ ಬುದ್ಧಿವಂತರಾಗಿರಿ ಮತ್ತು ಕನಿಷ್ಠ 7 ದಿನಗಳ ಮೊದಲು ಅಪ್ಲಿಕೇಶನ್ ಸಲ್ಲಿಸಿ, ಅವೆಲ್ಲವನ್ನೂ ಕೆಲಸದ ದಿನಗಳು ಎಂದು ಪರಿಗಣಿಸಿ, ನಂತರ ಪ್ರಯಾಣಿಸಿ.
ನೀವು ಏಜೆಂಟ್ ಮೂಲಕ ಅಪ್ಲಿಕೇಶನ್ ಸಲ್ಲಿಸಿದರೆ, ವೀಸಾ ಪ್ರಕ್ರಿಯೆಯ ಸಮಯವನ್ನು ತ್ವರಿತಗೊಳಿಸಬಹುದು ಆದರೆ ಅವರು ತಮ್ಮ ಸೇವೆಗಳಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಾರೆ.
ನೀವು ಹಾಲಿಡೇಗಾಗಿ ವಿದೇಶಕ್ಕೆ ಪ್ರಯಾಣಿಸುವಾಗ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುವ ಪ್ರಶ್ನೆಯು ನಿರ್ವಿವಾದವಾಗಿರಬೇಕು. ಖಂಡಿತವಾಗಿಯೂ, ನೀವು ಸ್ವಲ್ಪ ವಿಶ್ರಾಂತಿ ಮತ್ತು ಸಂತೋಷವನ್ನು ಬಯಸುವಾಗ ನಿಮಗೆ ಯಾವುದೇ ರೀತಿಯ ಗೊಂದಲವಾಗಬಾರದು. ನಿಮ್ಮ ಸಿಂಗಾಪುರ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ನೀವು ಸಂಪೂರ್ಣವಾಗಿ ಕ್ಲೂಲೆಸ್ ಆಗಿ ಸಹಾಯವನ್ನು ಬಯಸುವ ಸಂದರ್ಭಗಳಲ್ಲಿ ನಿಮ್ಮನ್ನು ರಕ್ಷಿಸುತ್ತದೆ. ಟ್ರಾವೆಲ್ ಪಾಲಿಸಿಯು ನಿಮಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಇಲ್ಲಿ ನೀಡಲಾಗಿದೆ:
ವೈದ್ಯಕೀಯ ತುರ್ತುಸ್ಥಿತಿಗಳು ಅಥವಾ ಅಪಘಾತಗಳು ಸಂಭವಿಸುವ ಮೊದಲು ಯಾವತ್ತೂ ಬಾಗಿಲು ತಟ್ಟಿ ತಿಳಿಸುವುದಿಲ್ಲ. ನೀವು ಟ್ರಿಪ್ ಆನಂದಿಸುತ್ತಿದ್ದು ನಿಮಗೆ ವೈದ್ಯಕೀಯ ಸಹಾಯದ ಅಗತ್ಯ ಬೀಳುತ್ತದೆ ಎಂದು ಕಲ್ಪಿಸಿಕೊಳ್ಳಿ. ನೀವು ಹೋಟೆಲ್ ಜಿಮ್ನಲ್ಲಿದ್ದೀರಿ ಮತ್ತು ನೀವು ಟ್ರೆಡ್ಮಿಲ್ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ, ನೀವು ಜಾರಿ ಬಿದ್ದಿದ್ದೀರಿ. ಇದು ನಿಮಗೆ ಸ್ವಲ್ಪ ಮೊಣಕೈ ಗಾಯ, ನೋವು ಮತ್ತು ಸ್ವಲ್ಪ ರಕ್ತಸ್ರಾವವನ್ನು ಉಂಟುಮಾಡಿದೆ. ಟ್ರಾವೆಲ್ ಪಾಲಿಸಿಯು ಇನ್ಶೂರರ್ ಗೆ ಕವರ್ ಆಗಿರುವ ಯಾವುದೇ ರೋಗಗಳಿಗೆ ಹತ್ತಿರದ ಸೌಲಭ್ಯದಿಂದ ತಕ್ಷಣದ ವೈದ್ಯಕೀಯ ಪರಿಹಾರವನ್ನು ವ್ಯವಸ್ಥೆ ಮಾಡಲು ಅನುಮತಿಸುತ್ತದೆ.
ನಿಮ್ಮ ಬೆಲೆಬಾಳುವ ವಸ್ತುಗಳು ಅಥವಾ ನೀವು ಜೊತೆಯಲ್ಲಿ ತೆಗೆದುಕೊಂಡು ಹೋದ ಪಾಸ್ಪೋರ್ಟ್ನಂತಹ ಇತರ ವಸ್ತುಗಳನ್ನು ನೀವು ಕಳೆದುಕೊಳ್ಳಬಹುದು. ಪ್ಲೇ ಝೋನ್ ನ ಒಂದು ರೈಡ್ ನಲ್ಲಿ, ನೀವು ಅರಿವಿಲ್ಲದೆ ಅದನ್ನು ಕೆಳಗೆ ಬೀಳಿಸಿದ್ದೀರಿ. ನಿಮ್ಮ ಟ್ರಾವೆಲ್ ಪಾಲಿಸಿ ಈ ಸಂದರ್ಭದಲ್ಲಿ ಕಾಂಪನ್ಸೇಶನ್ ವ್ಯವಸ್ಥೆಯನ್ನು ಮಾಡುತ್ತದೆ.
ಒಬ್ಬ ಪ್ರಯಾಣಿಕನಿಗೆ ಮೊದಲಿನಿಂದಲೇ ಹೃದಯದ ಕಾಯಿಲೆ ಇದೆ ಎಂದು ಊಹಿಸಿ. ಮತ್ತು ಸಿಂಗಾಪುರಕ್ಕೆ ಅವರ ಭೇಟಿಯ ಸಮಯದಲ್ಲಿ, ನೋವು ಭಾಗಶಃ ಪಾರ್ಶ್ವವಾಯುವಿನೊಂದಿಗೆ ಅಸ್ವಸ್ಥತೆಯನ್ನು ಉಂಟುಮಾಡಿತು, ಇದಕ್ಕೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಆ ವ್ಯಕ್ತಿಯು ತುರ್ತು ವೈದ್ಯಕೀಯ ಸ್ಥಳಾಂತರಿಸುವಿಕೆಯೊಂದಿಗೆ ಮನೆಗೆ ಮರಳಲು ಬಯಸುವರು. ಟ್ರಾವೆಲ್ ಪಾಲಿಸಿಯು ಇದಕ್ಕೂ ಸಹ ಪಾಲಿಸಿಹೋಲ್ಡರ್ ಅನ್ನು ಕವರ್ ಮಾಡುತ್ತದೆ.
ಒಂದು ಕುಟುಂಬದ ಟ್ರಿಪ್ ಪ್ರಾರಂಭಾವಾಗುವ ಮೊದಲೇ, ಒಬ್ಬ ವ್ಯಕ್ತಿಗೆ ದೀರ್ಘಕಾಲದ ಕಾಯಿಲೆ ಇರುವುದು ಪತ್ತೆಯಾಗಿ, ಅವರನ್ನು ಪ್ರಯಾಣವನ್ನು ತೆಗೆದುಕೊಳ್ಳದಂತೆ ಮಾಡಿತು. ಸದ್ಯಕ್ಕೆ ಟ್ರಿಪ್ ಅನ್ನು ಮುಂದೂಡಬೇಕು ಮತ್ತು ಟಿಕೆಟ್ಗಳನ್ನು ಕ್ಯಾನ್ಸಲ್ ಮಾಡಬೇಕು ಎಂದು ಕುಟುಂಬದ ಎಲ್ಲರೂ ಬಯಸಿದ್ದರು. ಅಂತಹ ಸಂದರ್ಭದಲ್ಲಿ, ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಪಾಲಿಸಿಹೋಲ್ಡರ್ ಗಳಿಗೆ ಟಿಕೆಟ್ ಕ್ಯಾನ್ಸಲೇಶನ್ ನ ವೆಚ್ಚವನ್ನು ರಿಕವರ್ ಮಾಡಲು ಸಹಾಯ ಮಾಡುತ್ತದೆ.
ಇವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ:
ಪಾಲಿಸಿಯ ಕವರ್ ವ್ಯಾಪ್ತಿಯನ್ನು ಪ್ರಯಾಣಿಕರು ತಿಳಿದಿರಬೇಕು, ಆಗ ಮಾತ್ರ ಅವರು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಟ್ರಾವೆಲ್ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಲ್ಲ ಆದರೆ ನೀವು ಭಾರತೀಯ ಪ್ರದೇಶಗಳನ್ನು ತೊರೆಯುವ ಮೊದಲು ಇದನ್ನು ಹೊಂದುವುದು ಒಂದು ಉತ್ತಮ ಆಯ್ಕೆಯಾಗಿದೆ.
ನೀವು ಕನಿಷ್ಟ 30 ದಿನಗಳ ಮುಂಚಿತವಾಗಿ ವೀಸಾಗೆ ಅಪ್ಲಿಕೇಶನ್ ಸಲ್ಲಿಸಲು ಶಿಫಾರಸು ಮಾಡಲಾಗಿದೆ. ನಿಮ್ಮ ನಿದರ್ಶನದಲ್ಲಿ, ನೀವು ಫೆಬ್ರವರಿ ಅಂತ್ಯದೊಳಗೆ ಅಪ್ಲಿಕೇಶನ್ ಸಲ್ಲಿಸಬೇಕು.
ನೀವು ಕನಿಷ್ಟ 30 ದಿನಗಳ ಮುಂಚಿತವಾಗಿ ವೀಸಾಗೆ ಅಪ್ಲಿಕೇಶನ್ ಸಲ್ಲಿಸಲು ಶಿಫಾರಸು ಮಾಡಲಾಗಿದೆ. ನಿಮ್ಮ ನಿದರ್ಶನದಲ್ಲಿ, ನೀವು ಫೆಬ್ರವರಿ ಅಂತ್ಯದೊಳಗೆ ಅಪ್ಲಿಕೇಶನ್ ಸಲ್ಲಿಸಬೇಕು.
ಇದು ಸಂಭವಿಸಿದಲ್ಲಿ ನೀವು ತಕ್ಷಣ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಲಾಸ್ಟ್ ಪ್ರಾಪರ್ಟಿ ರಿಪೋರ್ಟ್ ನ ಪ್ರತಿಗಾಗಿ ಕೇಳಿ, ಇದನ್ನು ನಂತರ ಪಾಸ್ಪೋರ್ಟ್ ರಿನೀವಲ್ ಪ್ರಕ್ರಿಯೆಯಲ್ಲಿ ನಿಮ್ಮಲ್ಲಿ ಕೇಳಲಾಗುತ್ತದೆ. ನಿಮ್ಮ ಪಾಸ್ಪೋರ್ಟ್ನ ರಿನೀವಲ್ ಗಾಗಿ ರಿಇಂಬರ್ಸ್ಮೆಂಟ್ ಕ್ಲೈಮ್ ಮಾಡುವಾಗ ಸಹ ಈ ಡಾಕ್ಯುಮೆಂಟ್ ಮುಖ್ಯವಾಗಿದೆ.
ಇದು ಸಂಭವಿಸಿದಲ್ಲಿ ನೀವು ತಕ್ಷಣ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಲಾಸ್ಟ್ ಪ್ರಾಪರ್ಟಿ ರಿಪೋರ್ಟ್ ನ ಪ್ರತಿಗಾಗಿ ಕೇಳಿ, ಇದನ್ನು ನಂತರ ಪಾಸ್ಪೋರ್ಟ್ ರಿನೀವಲ್ ಪ್ರಕ್ರಿಯೆಯಲ್ಲಿ ನಿಮ್ಮಲ್ಲಿ ಕೇಳಲಾಗುತ್ತದೆ. ನಿಮ್ಮ ಪಾಸ್ಪೋರ್ಟ್ನ ರಿನೀವಲ್ ಗಾಗಿ ರಿಇಂಬರ್ಸ್ಮೆಂಟ್ ಕ್ಲೈಮ್ ಮಾಡುವಾಗ ಸಹ ಈ ಡಾಕ್ಯುಮೆಂಟ್ ಮುಖ್ಯವಾಗಿದೆ.
ಇಲ್ಲ, ದುರದೃಷ್ಟವಶಾತ್, ಪ್ರಸ್ತುತ ನಿಯಮಗಳ ಪ್ರಕಾರ ರಿಫಂಡ್ ಯಾವುದೇ ಅವಕಾಶಗಳಿಲ್ಲ. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ, ಅವುಗಳನ್ನು ಯಾವುದೇ ಸಂದರ್ಭದಲ್ಲೂ ಹಿಂತಿರುಗಿಸಲಾಗುವುದಿಲ್ಲ.
ಇಲ್ಲ, ದುರದೃಷ್ಟವಶಾತ್, ಪ್ರಸ್ತುತ ನಿಯಮಗಳ ಪ್ರಕಾರ ರಿಫಂಡ್ ಯಾವುದೇ ಅವಕಾಶಗಳಿಲ್ಲ. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ, ಅವುಗಳನ್ನು ಯಾವುದೇ ಸಂದರ್ಭದಲ್ಲೂ ಹಿಂತಿರುಗಿಸಲಾಗುವುದಿಲ್ಲ.
ಇಲ್ಲ, ಸದ್ಯಕ್ಕೆ ವೀಸಾ ಆನ್ ಅರೈವಲ್ ಗಳಿಗೆ ಯಾವುದೇ ಅವಕಾಶವಿಲ್ಲ. ಸ್ಟ್ಯಾಂಡರ್ಡ್ ವೀಸಾ ಅಥವಾ ಇ-ವೀಸಾಗಾಗಿ ನೀವು ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕು.
ಇಲ್ಲ, ಸದ್ಯಕ್ಕೆ ವೀಸಾ ಆನ್ ಅರೈವಲ್ ಗಳಿಗೆ ಯಾವುದೇ ಅವಕಾಶವಿಲ್ಲ. ಸ್ಟ್ಯಾಂಡರ್ಡ್ ವೀಸಾ ಅಥವಾ ಇ-ವೀಸಾಗಾಗಿ ನೀವು ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕು.
ನೀವು ಸಿಂಗಾಪುರಕ್ಕೆ ಏಕೆ ಭೇಟಿ ನೀಡಲು ಬಯಸುತ್ತೀರಿ ಎಂಬ ವಿವರಗಳನ್ನು ಒಳಗೊಂಡಿರುವ ಕವರ್ ಲೆಟರ್ ಇಲ್ಲದೆ ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯು ಅಪೂರ್ಣವಾಗಿರುತ್ತದೆ. ದಯವಿಟ್ಟು ಸಮಗ್ರವಾಗಿರಿ.
ನೀವು ಸಿಂಗಾಪುರಕ್ಕೆ ಏಕೆ ಭೇಟಿ ನೀಡಲು ಬಯಸುತ್ತೀರಿ ಎಂಬ ವಿವರಗಳನ್ನು ಒಳಗೊಂಡಿರುವ ಕವರ್ ಲೆಟರ್ ಇಲ್ಲದೆ ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯು ಅಪೂರ್ಣವಾಗಿರುತ್ತದೆ. ದಯವಿಟ್ಟು ಸಮಗ್ರವಾಗಿರಿ.