ಪಿಎ ಕವರ್ ಹೊಂದಿರುವ ಮೋಟರ್ ಇನ್ಶ್ಯೂರನ್ಸ್

ಪರ್ಸನಲ್ ಆಕ್ಸಿಡೆಂಟ್ ಕವರ್

ಮೋಟಾರು ಇನ್ಶೂರೆನ್ಸ್‌ನಲ್ಲಿ ಪಿಎ ಕವರ್ ಎಂದರೇನು?

ಅಪಘಾತಗಳು ತೀವ್ರವಾದ ಹಾನಿಯನ್ನು ಉಂಟುಮಾಡುವ ಮತ್ತು ದೈಹಿಕ ಗಾಯಗಳನ್ನು ಉಂಟುಮಾಡುತ್ತದೆ ಹಾಗೂ  ಕೆಲವೊಮ್ಮೆ ಜೀವಹಾನಿಗೂ ಸಹ ಕಾರಣವಾಗಬಹುದು. ಆರ್ಥಿಕ ಒತ್ತಡವನ್ನು ತರುವುದಲ್ಲದೆ ಭಾವನಾತ್ಮಕವಾಗಿಯೂ ಕುಸಿಯುವಂತೆ ಮಾಡುವ ಇಂತಹ ಘಟನೆಗಳಿಗೆ ಬಲಿಯಾಗಲು ಯಾರು ತಾನೆ ಬಯಸುತ್ತಾರೆ?

ಇನ್ಶೂರೆನ್ಸ್‌ ಪಾಲಿಸಿಗೆ ಸಂಬಂಧಿಸಿದಂತೆ ಮೋಟಾರು ವಿಮೆಯಾಗಿರಲಿ ಅಥವಾ ಪರ್ಸನಲ್ ಆಕ್ಸಿಡೆಂಟ್ ಕವರ್ ಆಗಿರಲಿ, ಇವು ಆರ್ಥಿಕ ಮತ್ತು ಇತರ ವೈಯಕ್ತಿಕ ನಷ್ಟಗಳಿಂದ ವಿಮಾದಾರರನ್ನು ರಕ್ಷಿಸುತ್ತದೆ. ಮೋಟಾರು ಇನ್ಶೂರೆನ್ಸ್‌ನಲ್ಲಿನ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿ ಕವರ್ ಮಾಲೀಕ-ಚಾಲಕ ಇಬ್ಬರೂ ಪಡೆದುಕೊಳ್ಳಬಹುದಾದ ಸೌಲಭ್ಯವಾಗಿದೆ. ಇದು ನೀವು ಸಮಗ್ರ ಪ್ಯಾಕೇಜ್ ಅಥವಾ ಥರ್ಡ್ ಪಾರ್ಟಿ ಹೊಣೆಗಾರಿಕೆ ನೀತಿಯನ್ನು ಆರಿಸಿಕೊಂಡರೂ, ಮೋಟಾರು ನೀತಿಯ ಅಡಿಯಲ್ಲಿ ವಾಹನದ ಮಾಲೀಕರು ತೆಗೆದುಕೊಳ್ಳಬೇಕಾದ ಕಡ್ಡಾಯ ವಿಸ್ತರಣೆಯಾಗಿದೆ.

ಮೋಟಾರು ಇನ್ಶೂರೆನ್ಸ್‌ ಅಡಿಯಲ್ಲಿ ಕಡ್ಡಾಯ ಪಿಎ ಪಾಲಿಸಿಯನ್ನು ವಾಹನದ ಮಾಲೀಕರ ಹೆಸರಿನಲ್ಲಿ ನೀಡಲಾಗುತ್ತದೆ. ಅವರು ಮಾನ್ಯವಾದ ಚಾಲನಾ ಪರವಾನಗಿಯನ್ನು ಹೊಂದಿದ್ದರೆ ಮಾತ್ರ ಕವರ್‌ಗೆ ಅರ್ಹರಾಗಿರುತ್ತಾರೆ. ನೀವು ಪಿಎ ಕವರ್ ಹೊಂದಿಲ್ಲದಿದ್ದ ಸಂದರ್ಭದಲ್ಲಿ ಅದನ್ನು ನೀವು ಕಾರು ಇನ್ಶೂರೆನ್ಸ್‌ ಅಥವಾ ದ್ವಿಚಕ್ರ ವಾಹನ ಇನ್ಶೂರೆನ್ಸ್‌ಯನ್ನು ಖರೀದಿಸಿದಾಗ ಪಡೆಯಬಹುದು.

ಪರ್ಸನಲ್ ಆಕ್ಸಿಡೆಂಟ್ ಕವರ್ ನಲ್ಲಿ ಏನನ್ನು ಕವರ್ ಮಾಡಲಾಗಿರುತ್ತದೆ?

ಪಿಎ ಕವರ್ ಎಂಬುದು ಮೋಟಾರು ಇನ್ಶೂರೆನ್ಸ್‌ ಪಾಲಿಸಿಯ ಅಡಿಯಲ್ಲಿ ಅಪಘಾತದಿಂದಾಗಿ ದೈಹಿಕ ಗಾಯಗಳು, ಸಾವು ಅಥವಾ ಯಾವುದೇ ಶಾಶ್ವತ ಅಂಗವೈಕಲ್ಯ ಉಂಟಾದ ಸಂದರ್ಭದಲ್ಲಿ ಪರಿಹಾರ ಮೊತ್ತವನ್ನು ಪಾವತಿಸುತ್ತದೆ. IRDA ನಿಂದ ಕವರೇಜ್‌ನ ಮಿತಿಯನ್ನು ರೂ.15 ಲಕ್ಷ ಎಂದು ವ್ಯಾಖ್ಯಾನಿಸಲಾಗಿದೆ. ವಿವಿಧ ಸಂದರ್ಭಗಳಲ್ಲಿ ಪಾವತಿಸಬೇಕಾಗಿರುವ ಪರಿಹಾರದ ಶೇಕಡಾವಾರು ಇಲ್ಲಿದೆ:

ಅಪಘಾತದಿಂದ ಮರಣ ಉಂಟಾದಾಗ - ರಸ್ತೆ ಅಪಘಾತದಿಂದ ಹಠಾತ್ ಮರಣ ಸಂಭವಿಸಿದಲ್ಲಿ ಇನ್ಶೂರೆನ್ಸ್‌ ಕಂಪನಿಯು ಸಂಪೂರ್ಣ ಇನ್ಶೂರೆನ್ಸ್‌ ಮೊತ್ತವನ್ನು ನಾಮಿನಿಗೆ ಪಾವತಿಸುತ್ತದೆ.

ಅಪಘಾತದಿಂದ ಶಾಶ್ವತ ಅಂಗವೈಕಲ್ಯ ಉಂಟಾದಾಗ - ಶಾಶ್ವತ ಒಟ್ಟು ಅಂಗವೈಕಲ್ಯ ಸ್ಥಿತಿಯಲ್ಲಿ, ಪರಿಹಾರವು ಈ ಕೆಳಗಿನಂತಿರುತ್ತದೆ:

ಕವರೇಜ್ ಶೇಕಡಾವಾರು ಪರಿಹಾರ
ಸಾವು 100%
2 ಕೈಕಾಲುಗಳು ಅಥವಾ 2 ಕಣ್ಣು ಅಥವಾ 1 ಕೈಕಾಲು ಅಥವಾ 1 ಕಣ್ಣು ಕಳೆದುಕೊಂಡಾಗ 100%
1 ಕೈ-ಕಾಲು ಅಥವಾ 1 ಕಣ್ಣಿನ ದೃಷ್ಟಿ ಕಳೆದುಕೊಂಡಾಗ 50%
ಶಾಶ್ವತವಾದ ಸಂಪೂರ್ಣ ಅಂಗವೈಕಲ್ಯತೆ ಉಂಟಾದರೆ 100%

ಪರ್ಸನಲ್ ಆಕ್ಸಿಡೆಂಟ್ ಕವರ್ ಏಕೆ ಮುಖ್ಯ?

ಮನುಷ್ಯ ಅಪಾಯವನ್ನು ಗ್ರಹಿಸಿದಾಗ, ಅದರಿಂದ ಪಾರಾಗಲು ಕ್ರಿಯಾ ಯೋಜನೆಯನ್ನು ಸದಾ ಸಿದ್ಧಪಡಿಸಿಕೊಳ್ಳುತ್ತಾನೆ. ದಿನದ ಬಹುತೇಕ ಎಲ್ಲ ಸಮಯದಲ್ಲೂ ವಾಹನ ಓಡಿಸುವಾಗ ಟ್ರಾಫಿಕ್ ದಟ್ಟಣೆ, ಆತುರತೆ ಕಂಡುಬರುವುದರಿಂದ ಸಾಕಷ್ಟು ಡ್ರೈವಿಂಗ್ ಒತ್ತಡ ಮನಸ್ಸಿನ ಮೇಲೆ ಉಂಟಾಗುತ್ತದೆ. ಒಮ್ಮೊಮ್ಮೆ ನಿಮ್ಮ ಯಾವ ತಪ್ಪಿಲ್ಲದಿದ್ದರೂ,  ಇತರರ ಅಚಾತುರ್ಯದಿಂದಾಗಿ ನೀವು ಅಪಘಾತಕ್ಕೊಳಗಾಗಿ ತೀವ್ರ ಹಾನಿಯನ್ನು ಅನುಭವಿಸುವಂತಹ ಕ್ಷಣಗಳು ಸಹ ಸಾಮಾನ್ಯ.

ಉದಾಹರಣೆಗೆ ವೇಗವಾಗಿ ಚಲಿಸುತ್ತಿರುವ ಟ್ರಕ್ ಒಂದು ಕಾರಿನ ಒಂದು ಬದಿಗೆ ಡಿಕ್ಕಿ ಹೊಡೆದಾಗ ಕಾರು ಚಾಲಕನಿಗಾಗಬಹುದಾದ ಹಾನಿಯನ್ನೊಮ್ಮೆ ಕಲ್ಪಿಸಿಕೊಳ್ಳಿ. ಅಪಘಾತದ ತೀವ್ರತೆ ಹೆಚ್ಚಾಗಿರುವುದರಿಂದ ಇದರಲ್ಲಿ ಪ್ರಾಣಹಾನಿಯ ಸಾಧ್ಯತೆಯೂ ಇದೆ! ಇಂತಹ ಅನಿರೀಕ್ಷಿತ ಘಟನೆಗಳು ಪ್ರಾಣಹಾನಿ ಅಥವಾ ಶಾಶ್ವತವಾದ ಅಂಗವೈಕಲ್ಯತೆಗೆ ಕಾರಣವಾಗಬಹುದು. ಇಂತಹ ಘಟನೆಗಳ ಸಂಭವನೀಯತೆಯನ್ನು ನಿರಾಕರಿಸಲಾಗದು ಎಂಬ ಅಂಶವು ನಮಗೆ ತಿಳಿದಿರುವುದರಿಂದ ಪರ್ಸನಲ್ ಆಕ್ಸಿಡೆಂಟ್ ಕವರ್ ತೆಗೆದುಕೊಳ್ಳುವುದು ಅವಶ್ಯಕವಾಗುತ್ತದೆ.

ಮೋಟಾರು ಇನ್ಶೂರೆನ್ಸ್‌ ಅಡಿಯಲ್ಲಿ,  ಎಲ್ಲ ಸಂದರ್ಭಗಳಲ್ಲೂ ಮಾಲಿಕ-ಚಾಲಕನಿಗೆ ಗರಿಷ್ಠ ಆರ್ಥಿಕ ನೆರವು ನೀಡುವುದರಿಂದ ಪರ್ಸನಲ್ ಆಕ್ಸಿಡೆಂಟ್ ಕವರ್ ಎಂಬುದು ಮುಖ್ಯವಾಗುತ್ತದೆ. ಅದರಲ್ಲೂ ವಿಶೇಷವಾಗಿ ವ್ಯಕ್ತಿಯ ಗಳಿಕೆ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾದಾಗ ಇದರ ಪ್ರಾಮುಖ್ಯತೆ ಎದ್ದು ಕಾಣುತ್ತದೆ.

ಪರ್ಸನಲ್ ಆಕ್ಸಿಡೆಂಟ್ ಕವರ್ ಹೊಂದುವುದು ಕಡ್ಡಾಯವೇ?

ಮೋಟಾರು ವಾಹನ ಕಾಯ್ದೆ 1988 ರ ಅಡಿಯಲ್ಲಿ, ಕೇವಲ ಥರ್ಡ್ ಪಾರ್ಟಿಯ ಹೊಣೆಗಾರಿಕೆ ಕವರ್ ಕಡ್ಡಾಯವಾಗಿತ್ತು. ವರದಿ ಮಾಡಲಾದ ಕ್ಲೈಮ್‌ಗಳ ಪ್ರಕಾರದಲ್ಲಿ ದೈಹಿಕ ಗಾಯ ಅಥವಾ ಆಸ್ತಿ ಹಾನಿಗಳದ್ದೇ ಹೆಚ್ಚಾಗಿತ್ತು. TP ಕ್ಲೈಮುಗಳನ್ನು ಹೊರತುಪಡಿಸಿ, ಮಾಲೀಕರು-ಚಾಲಕರ ಪ್ರಕರಣಗಳಿಗೆ ಗಮನಹರಿಸಬೇಕಾದ ಅಗತ್ಯವಿತ್ತು. ತದನಂತರ, ವಾಹನ ಮಾಲೀಕರು ಪರ್ಸನಲ್ ಆಕ್ಸಿಡೆಂಟ್ ಕವರ್ ಖರೀದಿಸುವುದನ್ನು ಕಡ್ಡಾಯಗೊಳಿಸಲಾಯಿತು. ಅಪಘಾತವಾದ ಸಂದರ್ಭದಲ್ಲಿ ಸಂಭವಿಸಬಹುದಾದ ಯಾವುದೇ ನಷ್ಟಗಳು ಮತ್ತು ಗಾಯಗಳಾದಾಗ ಮಾಲೀಕರಿಗೆ ಪ್ರಯೋಜನವನ್ನು ನೀಡುವುದು ಕವರ್‌ನ ಹಿಂದಿನ ಉದ್ದೇಶವಾಗಿತ್ತು.

ಆದರೆ, ಜನವರಿ 2019 ರಿಂದ ಜಾರಿಗೆ ಬರುವಂತೆ, ಮೋಟಾರು ಇನ್ಶೂರೆನ್ಸ್‌ ಪಾಲಿಸಿಯ ಅಡಿಯಲ್ಲಿ ಕಡ್ಡಾಯವಾಗಿ PA ಕವರ್ ಅನ್ನು ಖರೀದಿಸುವ ಈ ವೈಶಿಷ್ಟ್ಯದಲ್ಲಿ ಸ್ವಲ್ಪ ಬದಲಾವಣೆಯನ್ನು ತರಲಾಗಿದೆ. ಬದಲಾವಣೆಯು ಈ ಎರಡು ಷರತ್ತುಗಳನ್ನು ಹೊಂದಿದೆ.:

  • ವಾಹನದ ಮಾಲೀಕರು ರೂ.15 ಲಕ್ಷಗಳ ಇನ್ಶೂರೆನ್ಸ್‌ ಮೊತ್ತದೊಂದಿಗೆ ಸ್ಟ್ಯಾಂಡ್-ಅಲೋನ್ ಅಪಘಾತ ಪಾಲಿಸಿಯನ್ನು ಹೊಂದಿದ್ದರೆ, ಅವರಿಗೆ ಈ ಕವರ್‌ಗಾಗಿ ಮನ್ನಾ ನೀಡಬಹುದು ಎಂದು ಉಲ್ಲೇಖಿಸಲಾಗಿದೆ.
  • ಈ ಕವರ್‌ನ ಅಡಿಯಲ್ಲಿ ತಿದ್ದುಪಡಿಯ ಅನುಸಾರವಾಗಿ ವಾಹನದ ಮಾಲೀಕ-ಚಾಲಕ ತನ್ನ ಅಸ್ತಿತ್ವದಲ್ಲಿರುವ ಕಾರು ಅಥವಾ ದ್ವಿಚಕ್ರ ವಾಹನಕ್ಕೆ ಪಿಎ ಪಾಲಿಸಿಯನ್ನು ಹೊಂದಿದ್ದರೆ, ಹೊಸ ವಾಹನಕ್ಕಾಗಿ ಅದನ್ನು ಮತ್ತೆ ಖರೀದಿಸುವುದು ಮುಖ್ಯವಲ್ಲ ಎಂದು ಸೂಚಿಸಲಾಗಿದೆ. ಪಿಎ ಕವರ್ ಕಡ್ಡಾಯವಾಗಿದೆ ಮತ್ತು ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿ ಅಥವಾ ಥರ್ಡ್ ಪಾರ್ಟಿ ಹೊಣೆಗಾರಿಕೆ ನೀತಿಯೊಂದಿಗೆ ಇದನ್ನು ಸಂಯೋಜಿಸಲಾಗಿದೆ.

ಪರ್ಸನಲ್ ಆಕ್ಸಿಡೆಂಟ್ ಕವರ್ ನ ಪ್ರಯೋಜನಗಳೇನು?

ಜೀವನವು ಅನಿರೀಕ್ಷಿತವಾಗಿರುವಂತೆ ಅಪಘಾತಗಳೂ ಸಹ ಅನಿರೀಕ್ಷಿತ, ಹಾಗಾಗಿ ನಮಗೆ ಪರ್ಸನಲ್ ಆಕ್ಸಿಡೆಂಟ್ ಕವರ್ ನ ಅಗತ್ಯವಿದೆ. ಸ್ಟ್ಯಾಂಡ್ ಅಲೋನ್ ಕವರ್ ಹೊರತುಪಡಿಸಿ, ಒಬ್ಬ ವ್ಯಕ್ತಿಯು ಮೋಟಾರ್ ಪಾಲಿಸಿಯ ಅಡಿಯಲ್ಲಿ ಪಿಎ ಭದ್ರತೆಯನ್ನು ಸಹ ಖರೀದಿಸಬಹುದು. ಇದು ಈ ಕೆಳಗಿನಂತೆ ಕೆಲ ಪ್ರಯೋಜನಗಳೊಂದಿಗೆ ಬರುತ್ತದೆ:

  • ಅಪಘಾತವು ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಿ ಆಗುವ ಆದಾಯದ ನಷ್ಟಕ್ಕೆ ಪಾಲಿಸಿದಾರರಿಗೆ  ಆರ್ಥಿಕ ಬೆಂಬಲ.
  • ಅಪಘಾತದಿಂದ ತಲೆದೋರುವ ಆಸ್ಪತ್ರೆಯ ಬಿಲ್‌ಗಳು, ಔಷಧಗಳು ಮತ್ತು ಚಿಕಿತ್ಸೆಗಳಂತಹ ವೈದ್ಯಕೀಯ         ವೆಚ್ಚಗಳಿಗಾಗಿ ಪಾಲಿಸಿದಾರರಿಗೆ ಹಣಕಾಸಿನ ಬೆಂಬಲ.
  • ಪಾಲಿಸಿದಾರರನ್ನು ಹೊರತುಪಡಿಸಿದರೆ, ಪಿಎ ಪಾಲಿಸಿಯು ಮೃತಪಟ್ಟ ಪಾಲಿಸಿದಾರನ ಇತರೆ ಕುಟುಂಬ ಸದಸ್ಯರಿಗೆ ಪ್ರಯೋಜನವನ್ನು ನೀಡುತ್ತದೆ.

ಕ್ಲೈಮ್ ಮಾಡುವುದು ಹೇಗೆ?

ಪರ್ಸನಲ್ ಆಕ್ಸಿಡೆಂಟ್ ಪಾಲಿಸಿ ಅಡಿಯಲ್ಲಿ ಕ್ಲೈಮ್ ಮಾಡುವುದು - ಮೋಟಾರು ಇನ್ಶೂರೆನ್ಸ್‌ ನ ಒಂದು ಭಾಗವಾಗಿ ಆಯಾ ನಾಲ್ಕು-ಚಕ್ರ ವಾಹನ ಅಥವಾ ದ್ವಿಚಕ್ರ ವಾಹನದ ಮಾಲೀಕ-ಚಾಲಕ ಅಥವಾ ನಾಮಿನಿ ಇದನ್ನು ಕ್ಲೈಮ್ ಮಾಡಬಹುದು. ನಾಮಿನಿ ಅಥವಾ ಬದುಕುಳಿದ ಪಾಲಿಸಿದಾರ ಮಾಲೀಕ ಗರಿಷ್ಠ ಪ್ರಯೋಜನಗಳನ್ನು ಪಡೆಯಬೇಕೆಂಬುದು ಈ ಪಾಲಿಸಿಯ ಗುರಿಯಾಗಿದೆ (ಈಗಗಲೇ ಪಾಲಿಸಿಯಲ್ಲಿ ಉಲ್ಲೇಖಿಸಿದಂತೆ).

ಅಪಘಾತದ ಸಂದರ್ಭದಲ್ಲಿ ಮಾಲೀಕ-ಚಾಲಕ ಗಾಯಗೊಂಡಾಗ  ಪಿಎ ಕವರ್‌ನ ಪ್ರಯೋಜನಗಳನ್ನು ಪಡೆಯಲು, ಮೊದಲಿಗೆ ಕ್ಲೈಮ್ ಅನ್ನು ದಾಖಲಿಸಬೇಕಾಗುತ್ತದೆ. ಈ ಕೆಳಗಿನಂತೆ ಕ್ಲೈಮ್ ಅನ್ನು ದಾಖಲಿಸಬೇಕು:

  • ಘಟನೆ ಮತ್ತು ಅದರಿಂದಾದ ನಷ್ಟದ ಬಗ್ಗೆ ವಿಮಾದಾರರಿಗೆ ತಿಳಿಸಬೇಕು.
  • ಘಟನೆಗೆ ಸಂಬಂಧಿಸಿದಂತೆ FR ನಂತರ FIR ಪ್ರತಿ ಕೇಳಿ. ಇದು ಕ್ಲೈಮ್ ಪ್ರಕ್ರಿಯೆಗೆ ಅಗತ್ಯವಿರುವ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಸಾಧ್ಯವಾದರೆ, ಕ್ಲೈಮ್ ಅನ್ನು ಅನುಮೋದಿಸುವ ಸಾಕ್ಷಿಗಳ ವ್ಯವಸ್ಥೆ ಮಾಡಿ.
  • ಇನ್ಸೂರರ್ ರೊಂದಿಗೆ ಮಾಡಬೇಕಾದ ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡುವಂತಹ ಔಪಚಾರಿಕತೆಗಳನ್ನು ಪೂರ್ಣಗೊಳಿಸಿ, ಕಾರು ಅಪಘಾತದ ಛಾಯಾಚಿತ್ರಗಳನ್ನು ಒದಗಿಸಿ (ಅನ್ವಯಿಸಿದರೆ). Digit ನವರ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ಈ ಎಲ್ಲ ಪ್ರಕ್ರಿಯೆಗಳನ್ನು ನಮ್ಮ ಅಪ್ಲಿಕೇಶನ್‌ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ಪೂರ್ಣಗೊಳಿಸಬಹುದು.
  • ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ ಹಾಗೂ ವಿಮಾದಾರರು ವಿವರಗಳನ್ನು ಪರಿಶೀಲಿಸುವವರೆಗೆ ಕಾಯಿರಿ.

ಪಾಲಿಸಿದಾರ ಮಾಲೀಕ-ಚಾಲಕ ಮರಣ ಹೊಂದಿದ ಸಂದರ್ಭದಲ್ಲಿ, ನಾಮಿನಿಯಾದವರು ಕ್ಲೈಮ್ ಸಲ್ಲಿಸಬಹುದು.ಪಾಲಿಸಿಯ ಪ್ರಕಾರ ಕ್ಲೈಮ್ ಮೊತ್ತವನ್ನು ಅವರಿಗೆ ನೀಡಲಾಗುತ್ತದೆ.

ಮೋಟಾರು ಇನ್ಶೂರೆನ್ಸ್‌ ಅಡಿಯಲ್ಲಿ ಪರ್ಸನಲ್ ಆಕ್ಸಿಡೆಂಟ್ ಕವರ್ ಗೆ ಸಂಬಂಧಿಸಿದಂತೆ ಪ್ರಶ್ನೋತ್ತರಗಳು

ದ್ವಿ-ಚಕ್ರ ವಾಹನಕ್ಕೆ ಪಿಎ ಕಡ್ಡಾಯವೇ?

ಹೌದು, ದ್ವಿ-ಚಕ್ರ ವಾಹನಕ್ಕೆ ಪರ್ಸನಲ್ ಆಕ್ಸಿಡೆಂಟ್ ಕವರ್ ಪಡೆಯುವುದು ಕಡ್ಡಾಯ. ಇದನ್ನು ನಿಮ್ಮ ದ್ವಿ-ಚಕ್ರ ಇನ್ಶೂರನ್ಸ್ ಪಾಲಿಸಿಯೊಂದಿಗೆ ಸಹ ಪಡೆಯಬಹುದು.

ನನ್ನ ಹೆಸರಿನಲ್ಲಿ ಎರಡು ದ್ವಿ-ಚಕ್ರ ವಾಹನಗಳಿವೆ. ಅದಕ್ಕಾಗಿ ನಾನು 2 ಪಿಎ ಗಳನ್ನು ಪಡೆಯಬೇಕೇ?

ಇಲ್ಲ, ಒಬ್ಬರು ಒಂದು ಪರ್ಸನಲ್ ಆಕ್ಸಿಡೆಂಟ್ ಕವರ್ ಹೊಂದಿದ್ದರೆ ಸಾಕು. ಪಿಎ ಕವರ್ ಎಂಬುದು ವೈಯಕ್ತಿಕವಾಗಿ ನಿಮ್ಮೊಂದಿಗೆ ಸಂಬಂಧ ಹೊಂದಿದೆಯೇ ಹೊರತು ನಿಮ್ಮ ವಾಹನದೊಂದಿಗಲ್ಲ..

ನನ್ನ ಹೆಸರಿನಲ್ಲಿ ಒಂದು ಕಾರು ಹಾಗೂ ಒಂದು ಬೈಕ್ ಇದೆ. ಪ್ರತ್ಯೇಕವಾಗಿ ಈ ಎರಡಕ್ಕೂ ನಾನು ಪಿಎ ಹೊಂದಬೇಕಾಗುತ್ತದೆಯೇ ?

ಇಲ್ಲ, ಯಾವುದಾದರೂ ಒಂದಕ್ಕೆ ಪರ್ಸನಲ್ ಆಕ್ಸಿಡೆಂಟ್ ಕವರ್ ಹೊಂದಿದ್ದರೆ ಸಾಕು. ಪಿಎ ಕವರ್ ಎಂಬುದು ವೈಯಕ್ತಿಕವಾಗಿ ನಿಮ್ಮೊಂದಿಗೆ ಸಂಬಂಧ ಹೊಂದಿದೆಯೇ ಹೊರತು ನಿಮ್ಮ ವಾಹನದೊಂದಿಗಲ್ಲ.

ಪಿಎ ಕವರ್ ಕೇವಲ ಮಾಲೀಕ-ಚಾಲಕನಿಗೆ ಮಾತ್ರ ಅನ್ವಯಿಸುತ್ತದೆಯೇ?

ಹೌದು, ಪಿಎ ಕವರ್ ಎಂಬುದು ಕೇವಲ ಮಾಲೀಕ-ಚಾಲಕನಿಗೆ ಮಾತ್ರ ಅನ್ವಯಿಸುತ್ತದೆ.