ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ರಿನೀವ್ ಮಾಡಿ.

ನೀವು ಕ್ವಾರಂಟೈನ್ ಮಾಡುತ್ತಿದ್ದರೂ ಸಹ ನಿಮ್ಮ ಪಾಲಿಸಿಯ ಅವಧಿ ಮುಗಿಯುವ ಮೊದಲು ನಿಮ್ಮ ಕಾರ್ ಮತ್ತು ಬೈಕ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಿ.

ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅನೇಕರು ಮನೆಯಲ್ಲಿಯೇ ಇರುವುದರಿಂದ, ವಾಹನಗಳು ಸಹಜವಾಗಿ ನಿಷ್ಕ್ರಿಯವಾಗಿವೆ ಅಲ್ಲದೇ ಪ್ರತಿದಿನ ಅತಿಯಾದ ಧೂಳು ವಾಹನಗಳ ಮೇಲೆ ಕೂರುತ್ತಿದೆ.

ಈ ಪರಿಸ್ಥಿತಿಯಲ್ಲಿ, ವಾಹನವನ್ನು ಬಳಸದೇ ಇರುವಾಗ ಅದು ಹಾನಿಗೊಳಗಾಗುವುದಿಲ್ಲ ಮತ್ತು ಮೋಟಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನೀವು ಹೇಳಬಹುದು.

ಆದರೆ ನಿಮ್ಮ ಅಂದುಕೊಂಡಿದ್ದು ತಪ್ಪಿರಬಹುದು. ಕಾರುಗಳು ಮತ್ತು ಬೈಕುಗಳು ಕೇವಲ ಗ್ಯಾರೇಜ್‌ನಲ್ಲಿ ನಿಂತರೂ ಸಹ, ಅವು ಎದುರಿಸಬಹುದಾದ ಅನೇಕ ಇತರ ಸಮಸ್ಯೆಗಳಿವೆ. ಅದಕ್ಕಾಗಿಯೇ ನಿಮ್ಮ ಪಾಲಿಸಿಯ ಅವಧಿ ಮುಗಿಯುವ ಮೊದಲು ನಿಮ್ಮ ಕಾರ್ ಮತ್ತು ಬೈಕ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಿಸುವುದು ತುಂಬಾ ಅತ್ಯಗತ್ಯ.

ಇನ್ನಷ್ಟು ತಿಳಿಯಿರಿ:

ಲಾಕ್‌ಡೌನ್ ಸಮಯದಲ್ಲಿ ನಿಮ್ಮ ವಾಹನಕ್ಕೆ ಯಾವ ಹಾನಿಯಾಗಬಹುದು?

ಲಾಕ್‌ಡೌನ್ ಸಮಯದಲ್ಲಿ ನಿಷ್ಕ್ರಿಯವಾಗಿದ್ದರೂ ಸಹ ನಿಮ್ಮ ಕಾರ್ ಅಥವಾ ಬೈಕ್ ಮೇಲೆ ಪರಿಣಾಮ ಬೀರುವ ಹಲವು ವಿಷಯಗಳಿವೆ. ಮತ್ತು ಒಳ್ಳೆಯ ಸುದ್ದಿ ಎಂದರೆ ಇವುಗಳಲ್ಲಿ ಹೆಚ್ಚಿನವು ನಿಮ್ಮ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯಿಂದ ಕವರ್ ಆಗುತ್ತವೆ. 

ಆದಾಗ್ಯೂ, ನಿಮ್ಮ ಪಾಲಿಸಿಯನ್ನು ಸಮಯಕ್ಕೆ ಸರಿಯಾಗಿ ರಿನೀವ್ ಮಾಡಲು ನೀವು ನೆನಪಿಸಿಕೊಂಡರೆ ಮಾತ್ರ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನಿಮಗೆ ಸಹಾಯವನ್ನು ಒದಗಿಸಬಹುದು. ಒಂದುವೇಳೆ ನೀವು ಪಾಲಿಸಿಯನ್ನು ರಿನೀವ್ ಮಾಡದಿದ್ದರೆ ಏನಾಗಬಹುದು ಎಂಬುದು ಇಲ್ಲಿದೆ:

ಕಳ್ಳತನ

ಒಂದು ಮುಂಜಾನೆ ನೀವು ಎದ್ದಾಗ, ಹಿಂದಿನ ರಾತ್ರಿ ನಿಮ್ಮ ಪ್ರೀತಿಯ ಕಾರ್ ಅಥವಾ ಬೈಕ್ ನಿಂತಿದ್ದ ಖಾಲಿ ಸ್ಥಳವನ್ನು ನೋಡಬಹುದು. ಭಾರತದಲ್ಲಿ ವಾಹನ ಕಳ್ಳತನ ತುಂಬಾ ಸಾಮಾನ್ಯ ವಿಷಯವಾಗಿದೆ.

ವಿಧ್ವಂಸಕತೆ

ಇದು ಉದ್ದೇಶಪೂರ್ವಕವಾಗಿಯೋ ಅಥವಾ ಅಕಸ್ಮಾತ್ ಆಗಿ ವಿಧ್ವಂಸಕವಾಗಿರಬಹುದು ಅಥವಾ ಹಾನಿಗೊಳಗಾಗಿರಬಹುದು. ಉದಾಹರಣೆಗೆ, ಹತ್ತಿರದಲ್ಲಿ ಚೆಂಡಿನೊಂದಿಗೆ ಆಡುವ ಮಕ್ಕಳು. ಅಂತಹ ಹಾನಿಗಳನ್ನು ರಿಪೇರಿ ಮಾಡುವುದು ಸ್ವಲ್ಪ ದುಬಾರಿಯಾಗುತ್ತದೆ.

ನೈಸರ್ಗಿಕ ವಿಕೋಪಗಳು

ಸಾಮಾನ್ಯವಾಗಿ ಭೂಕುಸಿತಗಳು, ಭೂಕಂಪಗಳು ಮತ್ತು ಪ್ರವಾಹಗಳಂತಹ ನೈಸರ್ಗಿಕ ವಿಕೋಪಗಳು ಉಂಟಾಗುವ ಪ್ರದೇಶಗಳಲ್ಲಿ ವಾಹನಕ್ಕೆ ಗಂಭೀರ ಹಾನಿಯುಂಟಾಗುತ್ತವೆ.

ಆದರೆ ನೀವು ಅಂತಹ ಪ್ರದೇಶದಲ್ಲಿ ವಾಸಿಸದಿದ್ದರೂ ಸಹ, ಮರದಿಂದ ಬೀಳುವ ಚಿಕ್ಕದೊಂದು ಕೊಂಬೆಯು ನಿಮ್ಮ ವಾಹನವನ್ನು ಹಾನಿಗೊಳಿಸಬಹುದು.

ನಿಮ್ಮ ಪಾಲಿಸಿ ಅವಧಿ ಮುಗಿಯುವ ಮೊದಲು ನೀವು ಕಾರ್ ಮತ್ತು ಬೈಕ್ ಇನ್ಶೂರೆನ್ಸ್ ಅನ್ನು ಏಕೆ ರಿನೀವ್ ಮಾಡಬೇಕು?

ನಾವು ಹೇಳಿದಂತೆ ನೀವು ನಿಮ್ಮ ಇನ್ಶೂರೆನ್ಸ್ ಅನ್ನು ಸಮಯಕ್ಕೆ ಸರಿಯಾಗಿ ರಿನೀವ್ ಮಾಡಿಸದಿದ್ದರೆ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಕ್ಲೈಮ್ ಅನ್ನು ಗೌರವಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಈ ರೀತಿಯ ಹಾನಿ ಸಂಭವಿಸಿದಾಗ ನೀವು ಎಲ್ಲಾ ವೆಚ್ಚಗಳನ್ನು ಪಾವತಿಸಬೇಕಾಗುತ್ತದೆ. ಹಾಗೂ ಇತರ ಕಾರಣಗಳೆಂದರೆ:

ಕ್ಲೈಮ್ ನಿರಾಕರಣೆ ಇಲ್ಲ

ಇನ್ಶೂರೆನ್ಸ್ ಕಂಪನಿಯು ಪರಿಶೀಲಿಸುವ ಮೊದಲ ವಿಷಯವೆಂದರೆ ನಿಮ್ಮ ಕಾರ್ ಮತ್ತು ಬೈಕ್ ಇನ್ಶೂರೆನ್ಸ್ ಪಾಲಿಸಿಯ ಅವಧಿ. ಅದರ ಅವಧಿ ಮುಗಿದ ನಂತರ ನೀವು ಕ್ಲೈಮ್ ಅನ್ನು ಮಾಡಿದರೆ, ಆಗ ಇನ್ಶೂರೆನ್ಸ್ ಕಂಪನಿಯು ಅದನ್ನು ಯಾವುದೇ ತನಿಖೆಯಿಲ್ಲದೆ ತಿರಸ್ಕರಿಸುತ್ತದೆ.

ನಿಮ್ಮ ನೋ ಕ್ಲೈಮ್ ಬೋನಸ್ ಸೈಕಲ್ ಸುರಕ್ಷಿತವಾಗಿರುತ್ತದೆ

ಮೋಟಾರ್ ಇನ್ಶೂರೆನ್ಸ್ ಕಂಪನಿಗಳು ಸಾಮಾನ್ಯವಾಗಿ ನೀವು ಯಾವುದೇ ಕ್ಲೈಮ್‌ಗಳನ್ನು ಮಾಡದ ಪಾಲಿಸಿ ವರ್ಷಗಳಿಗೆ ಬೋನಸ್ ಅನ್ನು ನೀಡುತ್ತವೆ. ಆದರೆ ಅದರ ಪ್ರಯೋಜನವನ್ನು ಪಡೆಯಬೇಕಾದರೆ ನೀವು ನಿಮ್ಮ ಪಾಲಿಸಿಯನ್ನು ಸಮಯಕ್ಕೆ ಸರಿಯಾಗಿ ರಿನೀವ್ ಮಾಡಿಸುತ್ತಿರಬೇಕು. ಇಲ್ಲದಿದ್ದರೆ ನೀವು ನಿಮ್ಮ ಎನ್‌ಸಿಬಿಯನ್ನು ಕಳೆದುಕೊಳ್ಳುತ್ತೀರಿ ಮತ್ತು ಇದರಿಂದ ರಿಯಾಯಿತಿಯನ್ನು ಸಹ ಕಳೆದುಕೊಳ್ಳುತ್ತೀರಿ!

ತಪಾಸಣೆ ಅಗತ್ಯವಿಲ್ಲ

ನಿಮ್ಮ ಮೋಟಾರ್ ಇನ್ಶೂರೆನ್ಸ್  ಪಾಲಿಸಿಯನ್ನು ನೀವು ಸಮಯಕ್ಕೆ ಸರಿಯಾಗಿ ರಿನೀವ್ ಮಾಡಬೇಕೆಂದರೆ, ಅದನ್ನು ಕೆಲವೇ ನಿಮಿಷಗಳಲ್ಲಿ ಮಾಡಬಹುದು. ಆದಾಗ್ಯೂ, ಹಿಂದಿನ ಪಾಲಿಸಿಯ ಮುಕ್ತಾಯ ದಿನಾಂಕದ ನಂತರ ನೀವು ರಿನೀವ್ ಮಾಡಿದರೆ, ಇನ್ಶೂರೆನ್ಸ್ ಕಂಪನಿಯವರು ಬಂದು ನಿಮ್ಮ ವಾಹನವನ್ನು ಈ ಮೊದಲೇ ಅಸ್ತಿತ್ವದಲ್ಲಿರುವ ಹಾನಿಯನ್ನು ಪರೀಕ್ಷಿಸಲು ಒತ್ತಾಯಿಸಬಹುದು, ಅದು ನಿಮ್ಮನ್ನು ಇನ್ನಷ್ಟು ಹಣಕಾಸಿನ ಹೊಣೆಗಾರಿಕೆಗಳಿಗೆ ಒಡ್ಡಬಹುದು

ಪ್ರೀಮಿಯಂನಲ್ಲಿ ಯಾವುದೇ ಹೆಚ್ಚಳವಿಲ್ಲ

ಸಮಯಕ್ಕೆ ಸರಿಯಾಗಿ ನಿಮ್ಮ ಪಾಲಿಸಿಯನ್ನು ರಿನೀವ್ ಮಾಡಿಸದಿರುವುದು ಎಂದರೆ ನೀವು ಹೊಸ ಮೋಟಾರ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಬೇಕು. ಅದು ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ರಿನೀವ್ ಮಾಡಿಸುವುದಕ್ಕಿಂತ ಹೆಚ್ಚು ವೆಚ್ಚದಾಯಕವಾಗಿರುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಡಿಜಿಟ್‌ನೊಂದಿಗೆ ಮೋಟಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡುವುದು ಹೇಗೆ?

ಅಸ್ತಿತ್ವದಲ್ಲಿರುವ ಕಾರ್ ಇನ್ಶೂರೆನ್ಸ್ ಅನ್ನು ಡಿಜಿಟ್‌ನೊಂದಿಗೆ ತ್ವರಿತ ಮತ್ತು ಸರಳ ಸ್ಮಾರ್ಟ್‌ಫೋನ್-ಸಕ್ರಿಯ ಪ್ರಕ್ರಿಯೆಗಳೊಂದಿಗೆ ಆನ್‌ಲೈನ್‌ನಲ್ಲಿ ರಿನೀವ್ ಮಾಡಬಹುದು.

"ರಿನೀವ್ ಡಿಜಿಟ್ ಪಾಲಿಸಿ" ಬಟನ್ ಅನ್ನು ಕ್ಲಿಕ್ ಮಾಡಿ ಅಥವಾ ಮುಂದುವರಿಸಲು ನಿಮ್ಮ ಕಾರ್ ಸಂಖ್ಯೆಯನ್ನು ನಮೂದಿಸಿ. ನಂತರ ನೀವು 'ಒನ್ ಟೈಮ್ ಪಾಸ್ವರ್ಡ್'  ಮೂಲಕ ಲಾಗಿನ್ ಮಾಡಬೇಕಾಗುತ್ತದೆ ಮತ್ತು ಸರಳವಾದ ಪ್ರಕ್ರಿಯೆಯನ್ನು ಅನುಸರಿಸಬೇಕು.

ನಿಮ್ಮ ವೆಹಿಕಲ್ ಇನ್ಶೂರೆನ್ಸ್ ರಿನೀವಲ್'ಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?

ನಿಮ್ಮ ಹಳೆಯ ಕಾರ್ ಇನ್ಶೂರೆನ್ಸ್  ಪಾಲಿಸಿಯು ನಮ್ಮ ಬಳಿ ಇದೆಯೇ, ಇಲ್ಲವೇ ಎಂಬುದು ಮುಖ್ಯವಲ್ಲ, ಕಾರ್ ಇನ್ಶೂರೆನ್ಸ್ ರಿನೀವಲ್'ಗಾಗಿ ಡಿಜಿಟ್ ಅನ್ನು ಆಯ್ಕೆ ಮಾಡುವುದು ಸುಲಭ ಮತ್ತು ತೊಂದರೆ-ಮುಕ್ತವಾಗಿದೆ ಮತ್ತು ಆನ್‌ಲೈನ್‌ನಲ್ಲಿ ಇದನ್ನು ಕೆಲವೇ ನಿಮಿಷಗಳಲ್ಲಿ ಮಾಡಬಹುದು

ಲಾಕ್‌ಡೌನ್ ಮುಗಿದ ನಂತರ ನನ್ನ ಕಾರ್ ಅಥವಾ ಬೈಕ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ನಾನು ಹೇಗೆ ಖಚಿತಪಡಿಸಿಕೊಳ್ಳಬಹುದು?

ನಿಯಮಿತವಾಗಿ ಇಂಜಿನ್ ಅನ್ನು ಫೈರಿಂಗ್ ಮಾಡುವ ಮೂಲಕ ನಿಮ್ಮ ಕಾರ್ ಅಥವಾ ಬೈಕ್ ಉತ್ತಮ ಸ್ಥಿತಿಯಲ್ಲಿದೆ ಎಂದು ನೀವು ಖಚಿತಪಡಿಸಿಕೊಳ್ಳಬಹುದು. ವಾರದಲ್ಲಿ ಎರಡು ಬಾರಿಯಾದರೂ ಹೀಗೆ ಮಾಡುವುದರಿಂದ ಬ್ಯಾಟರಿ ಹಾಳಾಗುವುದನ್ನು ತಪ್ಪಿಸಬಹುದು.

ಕೊರೊನಾವೈರಸ್ ಲಾಕ್‌ಡೌನ್ ಸಮಯದಲ್ಲಿ ನನ್ನ ಕಾರ್ ಇನ್ಶೂರೆನ್ಸ್ ರದ್ದಾದರೆ ನಾನು ಏನು ಮಾಡಬೇಕು?

ಕೊರೊನಾವೈರಸ್ ಲಾಕ್‌ಡೌನ್ ಸಮಯದಲ್ಲಿ ನಿಮ್ಮ ಕಾರ್ ಅಥವಾ ಬೈಕ್ ಇನ್ಶೂರೆನ್ಸ್ ಪಾಲಿಸಿಯು ರದ್ದಾದರೆ, ತಕ್ಷಣವೇ ನಿಮ್ಮ ಕಾರ್ ಇನ್ಶೂರೆನ್ಸ್  ಕಂಪನಿಯನ್ನು ಸಂಪರ್ಕಿಸಿ ಮತ್ತು ರಿನೀವಲ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಆನ್‌ಲೈನ್‌ನಲ್ಲಿ ಪಾಲಿಸಿಯನ್ನು ರಿನೀವ್ ಮಾಡುವುದು ಉತ್ತಮ ವಿಧಾನವಾಗಿದೆ, ಏಕೆಂದರೆ ಇದು ಸಂಪರ್ಕ-ಮುಕ್ತ ಪ್ರಕ್ರಿಯೆಯಾಗಿದೆ