ಡಿಜಿಟ್ ಪಾರ್ಟ್ನರ್ ಆಗಿ
35,000+ ಪಾರ್ಟ್ನರ್‌ಗಳು ಡಿಜಿಟ್‌ನೊಂದಿಗೆ 674 ಕೋಟಿ+ ಗಳಿಸಿದ್ದಾರೆ.

ಇನ್ಶೂರೆನ್ಸ್ ಪಿ.ಓ.ಎಸ್.ಪಿ(POSP) ಆಗುವುದರ ಪ್ರಯೋಜನಗಳು

Source: deccanherald

ಇಂದು, ಈ ಅನಿಶ್ಚಿತ ಪ್ರಪಂಚದಲ್ಲಿ, ಬಹಳಷ್ಟು ಜನರು ಹೆಚ್ಚುವರಿ ಆದಾಯ ನೀಡುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇದು ಪರ್ಯಾಯ ವೃತ್ತಿ ಆಯ್ಕೆಯನ್ನು ಹುಡುಕುತ್ತಿರುವುದಾಗಲೀ ಅಥವಾ ಪಾರ್ಟ್-ಅಪ್ ಉದ್ಯೋಗಗಳನ್ನು ತೆಗೆದುಕೊಳ್ಳುತ್ತಿರುವುದಾಗಲಿ, ಇದಕ್ಕೊಂದು ಉತ್ತಮ ಮಾರ್ಗವೆಂದರೆ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪಿ.ಓ.ಎಸ್.ಪಿ (ಪಾಯಿಂಟ್ ಆಫ್ ಸೇಲ್ಸ್‌ಪರ್ಸನ್) ಆಗಿ ಮಾರಾಟ ಮಾಡುವುದು.

ಪಿ.ಓ.ಎಸ್.ಪಿ ಎನ್ನುವುದು ಇನ್ಶೂರೆನ್ಸ್ ಕಂಪನಿಗಳೊಂದಿಗೆ ಅಥವಾ ಬ್ರೋಕರ್‌ಗಳೊಂದಿಗೆ ನೇರವಾಗಿ ಇನ್ಶೂರೆನ್ಸ್ ಪಾಲಿಸಿಗಳನ್ನು ಗ್ರಾಹಕರಿಗೆ ಮಾರಾಟ ಮಾಡಲು ಕೆಲಸ ಮಾಡುವ ಒಂದು ರೀತಿಯ ಇನ್ಶೂರೆನ್ಸ್ ಏಜೆಂಟ್.

ಪಿ.ಓ.ಎಸ್.ಪಿ (POSP) ಆಗಲು ಇರುವ ಅವಶ್ಯಕತೆಗಳು ಯಾವುವು?

ವ್ಯಕ್ತಿಯೊಬ್ಬರು ಮೂಲಭೂತ ಮಾನದಂಡಗಳನ್ನು ಪೂರೈಸುವವರೆಗೆ (18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವವರು), ಅವರು ನಿಗದಿತ ತರಬೇತಿ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳಬೇಕು, ಆನ್‌ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಮತ್ತು ಲೈಫ್ ಇನ್ಶೂರೆನ್ಸ್ ಮತ್ತು ಜನರಲ್ ಇನ್ಶೂರೆನ್ಸ್ ವಿಭಾಗಗಳು (ಮೋಟಾರ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್, ಟ್ರಾವೆಲ್ ಇನ್ಶೂರೆನ್ಸ್, ಮುಂತಾದವು ಸೇರಿದಂತೆ) ಎರಡರಲ್ಲೂ ಪಾಲಿಸಿಗಳನ್ನು ಮಾರಾಟ ಮಾಡಲು ಪಿ.ಓ.ಎಸ್.ಪಿ ಎಂದು ಸರ್ಟಿಫೈಡ್ ಆಗಿರಬೇಕು.

ಇನ್ಶೂರೆನ್ಸ್ ಪಿ.ಓ.ಎಸ್.ಪಿ ಆಗುವುದರ ಟಾಪ್ 10 ಪ್ರಯೋಜನಗಳು.

1. ಪಿ.ಓ.ಎಸ್.ಪಿ(POSP) ಆಗುವುದು ಸುಲಭ

ನಾವು ಮೇಲೆ ಹೇಳಿದಂತೆ, ಕೆಲವು ಮಾನದಂಡಗಳನ್ನು ಪೂರೈಸುವ ಯಾರಾದರೂ ಸರಿ, ಅವರು ಪಿ.ಓ.ಎಸ್.ಪಿ ಆಗಬಹುದು. ಇದರರ್ಥ ನೀವು ಕನಿಷ್ಟ 18 ವರ್ಷ ವಯಸ್ಸಿನವರಾಗಿರಬೇಕು, 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು, ಮಾನ್ಯವಾಗಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೊತೆಗೆ, ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಅನ್ನು ಹೊಂದಿರಬೇಕು.

ಮತ್ತು ನೀವು ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡುವುದು ಮತ್ತು ವಿತರಣೆ ಮಾಡುವುದರಿಂದ, ಈ ಉದ್ಯೋಗಕ್ಕಾಗಿ ನಿಮಗೆ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮತ್ತು ಉತ್ತಮ ಇಂಟರ್ನೆಟ್ ಕನೆಕ್ಷನ್ ಬೇಕಾಗುತ್ತದೆ. ಇದು ಕಾಲೇಜು ವಿದ್ಯಾರ್ಥಿಗಳು, ಫ್ರೆಶರ್‌ಗಳು ಮತ್ತು ಇನ್ನೂ ಹೆಚ್ಚಿನ ಕೆಲಸದ ಅನುಭವ ಇರದವರಿಗೆ ಸರಿಯಾದ ಕೆಲಸವಾಗಿದೆ.

2. ಯಾವುದೇ ನಿರ್ದಿಷ್ಟ ಸಮಯಗಳಿಲ್ಲ

ಪಿ.ಓ.ಎಸ್.ಪಿ ಆಗಿ, ನೀವು ನಿಮಗೆ ಸರಿಹೊಂದುವ ಕೆಲಸದ ಸಮಯವನ್ನು ಆರಿಸಿಕೊಳ್ಳಬಹುದು. ಇದಕ್ಕಾಗಿ 9-5 ರವರೆಗೆ, ಆಫೀಸಿನಲ್ಲಿ ಡೆಸ್ಕ್ ಬಳಿಯೇ ಕುಳಿತುಕೊಳ್ಳುವ ಅಗತ್ಯವಿಲ್ಲ. ನಿಮ್ಮ ಸ್ವಂತ ಅನುಕೂಲಕ್ಕೆ ತಕ್ಕಂತೆ, ನಿಮ್ಮ ಕೆಲಸದ ಸಮಯವನ್ನು ನೀವೇ ಸುಲಭವಾಗಿ ಆಯ್ಕೆ ಮಾಡಬಹುದು ಮತ್ತು ಹೊಂದಿಸಿಕೊಳ್ಳಬಹುದು. ಮತ್ತು, ನೀವು ಫುಲ್-ಟೈಮ್ ಅಥವಾ ಪಾರ್ಟ್-ಟೈಮ್ ಕೆಲಸ ಮಾಡಲು ಬಯಸುತ್ತೀರಾ ಎಂಬುದನ್ನು ಸಹ ನೀವೇ ನಿರ್ಧರಿಸಬಹುದು. ಇದು ಪಾರ್ಟ್-ಟೈಮ್ ಆದಾಯದ ಮೂಲವಾಗಿದ್ದು, ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ನಿವೃತ್ತರಿಗೆ ಸರಿಯಾಗಿದೆ.

.

3. ನೀವು ಮನೆಯಿಂದಲೇ ಕೆಲಸ ಮಾಡಬಹುದು

ಪಾಲಿಸಿಗಳನ್ನು ಮಾರಾಟ ಮಾಡಲು ಪಿ.ಓ.ಎಸ್.ಪಿ ಗಳು ಆನ್‌ಲೈನ್ ಪ್ರಕ್ರಿಯೆಗಳನ್ನು ಬಳಸಬಹುದಾದ್ದರಿಂದ, ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ಅವರು ಬೇರೆಲ್ಲಿಯೂ ಪ್ರಯಾಣಿಸುವ ಅಗತ್ಯವಿಲ್ಲ. ಮತ್ತು ನೀವು ಫೋನ್ ಮೂಲಕವೂ ಗ್ರಾಹಕರನ್ನು ಸಂಪರ್ಕಿಸಬಹುದು ಮತ್ತು ಇಂಟರ್ನೆಟ್ ಮೂಲಕ ಪಾಲಿಸಿಗಳನ್ನು ಮಾರಾಟ ಮಾಡಬಹುದು ಅದರರ್ಥ ನೀವು ಸುಲಭವಾಗಿ ಮನೆಯಿಂದಲೇ ಕೆಲಸ ಮಾಡಬಹುದು, ಅಥವಾ ನೀವು ಬಯಸುವ ಎಲ್ಲಿಂದಾದರೂ ಸಹ ಕೆಲಸ ಮಾಡಬಹುದು.

4. ನಿಮ್ಮ ಸ್ವಂತ ಬಾಸ್ ನೀವೇ ಆಗಿ

ಪಿ.ಓ.ಎಸ್.ಪಿ ಸ್ವತಃ ತಮಗಾಗಿ ಕೆಲಸ ಮಾಡಲು ಸಾಧ್ಯವಾಗಿಸಿಕೊಳ್ಳುತ್ತಾರೆ. ಇದರರ್ಥ ನೀವು ನಿಮ್ಮ ಸ್ವಂತ ವೇಳಾಪಟ್ಟಿ, ನಿಮ್ಮ ಸ್ವಂತ ಗುರಿಗಳನ್ನು ಹೊಂದಿಸಬಹುದು ಮತ್ತು ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಲು ನೀವು ಎಷ್ಟು ಸಮಯ ಮತ್ತು ಶ್ರಮವನ್ನು ಹೂಡಿಕೆ ಮಾಡಲು ಬಯಸುತ್ತೀರಿ ಎಂಬುದನ್ನು ಸಹ ನೀವೇ ನಿರ್ಧರಿಸಬಹುದು. ಹೀಗಾಗಿ, ನಿಮ್ಮ ಸ್ವಂತ ಬಾಸ್ ಆಗುವ ಮೂಲಕ ನಿಮ್ಮ ಅಗತ್ಯತೆ ಮತ್ತು ಅನುಕೂಲಕ್ಕೆ ತಕ್ಕಂತೆ ನೀವು ಕೆಲಸ ಮಾಡಲು ಸಾಧ್ಯವಾಗುತ್ತದೆ.

5. ಸ್ಥಿರವಾದ ಆದಾಯವನ್ನು ಪಡೆಯಿರಿ

ಪಿ.ಓ.ಎಸ್.ಪಿ ಗಳು ನಿಯಂತ್ರಕ ಸಂಸ್ಥೆ (ಐ.ಆರ್.ಡಿ.ಎ ಐ) ನಿಂದ ನಿಗದಿಪಡಿಸಲಾದ ಪೂರ್ವ-ನಿರ್ಧರಿತ ಮತ್ತು ಸ್ಥಿರವಾದ ಕಮಿಷನ್‌ಗಳನ್ನು ಗಳಿಸುತ್ತಾರೆ. ವಾಸ್ತವದಲ್ಲಿ, ಉತ್ತಮ ಗ್ರಾಹಕರ ಸಂಪರ್ಕವನ್ನು ಹೊಂದಲು ಕೆಲವು ಆರಂಭಿಕ ಪ್ರಯತ್ನಗಳೊಂದಿಗೆ, ನಿಮ್ಮ ಕಡೆಯಿಂದ ಕನಿಷ್ಠ ಶ್ರಮವಹಿಸಿ ನಿರ್ವಹಿಸಬಹುದಾದ, ಪಾಲಿಸಿ ನವೀಕರಣಗಳ ಮೂಲಕ ನೀವು ನಿರಂತರವಾಗಿ ಆದಾಯ ಬರುವಂತೆ ಮಾಡಿಕೊಳ್ಳಬಹುದು. ಆದ್ದರಿಂದ, ಸಮಯ ಕಳೆದಂತೆ, ನೀವು ಸ್ಥಿರವಾದ ಆದಾಯವನ್ನೂ ಪಡೆಯುತ್ತೀರಿ. ಯಾವುದೇ ಹೆಚ್ಚುವರಿ ಪ್ರಯತ್ನವು ನಿಮ್ಮ ಆದಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

6. ಹೆಚ್ಚಿನ ಆದಾಯವನ್ನು ಗಳಿಸುವ ಸಾಮರ್ಥ್ಯ

ಪಿ.ಓ.ಎಸ್.ಪಿ ಗಾಗಿ, ನಿಮ್ಮ ಗಳಿಕೆಯು ನೀವು ಕೆಲಸ ಮಾಡುವ ಗಂಟೆಗಳ ಸಂಖ್ಯೆಯನ್ನು ಆಧರಿಸಿರುವುದಿಲ್ಲ. ಬದಲಿಗೆ, ನೀವು ನೀಡುವ ಪಾಲಿಸಿಗಳ ಸಂಖ್ಯೆಯನ್ನು ಆಧರಿಸಿರುತ್ತದೆ. ಯಾವುದೇ ಸ್ಥಿರವಾದ ಆದಾಯವಾಗಲಿ ಅಥವಾ ಯಾವುದೇ ಗರಿಷ್ಠ ಮಿತಿಯಾಗಲಿ ಇರುವುದಿಲ್ಲ. ಹೀಗಾಗಿ, ಹೆಚ್ಚಿನ ಗಳಿಕೆಗೆ ಇಲ್ಲಿ ಸಾಕಷ್ಟು ಅವಕಾಶವಿದೆ. ನಿಮ್ಮ ಆದಾಯವು ಕಮಿಷನ್ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಮತ್ತು ನೀವು ಮಾರಾಟ ಮಾಡುವ ಪಾಲಿಸಿಗಳ ಸಂಖ್ಯೆ ಹಾಗೂ ನೀವು ಪಡೆಯುವ ನವೀಕರಣಗಳ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ, ನೀವು ಹೆಚ್ಚು ಪಾಲಿಸಿಗಳನ್ನು ಮಾರಾಟ ಮಾಡಿದಷ್ಟು, ನೀವು ಪಿ.ಓ.ಎಸ್.ಪಿ ಆಗಿ ಹೆಚ್ಚು-ಹೆಚ್ಚು ಗಳಿಸಬಹುದು.

7. ಶೂನ್ಯ ಹೂಡಿಕೆಯ ಅಗತ್ಯವಿದೆ

ಪಿ.ಓ.ಎಸ್.ಪಿ ಯಾಗಿ ಕೆಲಸ ಪ್ರಾರಂಭಿಸಲು ಯಾವುದೇ ಹಣಕಾಸಿನ ಹೂಡಿಕೆ ಅಥವಾ ಪಾವತಿಯನ್ನು ಮಾಡುವ ಅಗತ್ಯವಿಲ್ಲ. ನಿಮ್ಮ ಸಮಯ ಮತ್ತು ಶ್ರಮ ಮಾತ್ರವೇ ನಿಮ್ಮ ನಿಜವಾದ ಹೂಡಿಕೆ. ಮತ್ತು ಅದರ ಹೊರತಾಗಿ ನಿಮಗೆ ಅಗತ್ಯವಾಗಿ ಬೇಕಾಗಿರುವುದು ಸ್ಮಾರ್ಟ್‌ಫೋನ್, ಕಂಪ್ಯೂಟರ್ ಮತ್ತು ಉತ್ತಮ ಇಂಟರ್ನೆಟ್ ಕನೆಕ್ಷನ್.

ನೀವು ವ್ಯಾಪಾರದಲ್ಲಿ ಯಾವುದೇ ಹಣಕಾಸು ಹೂಡಿಕೆ ಮಾಡುತ್ತಿಲ್ಲವಾದ್ದರಿಂದ, ಹೆಚ್ಚಿನ ವಿತ್ತೀಯ ಆದಾಯವನ್ನು ಗಳಿಸಲು ಹೆಚ್ಚು ಸಾಮರ್ಥ್ಯವಿದೆ.

8. ನೀವು ಉದ್ಯಮದ ಎಕ್ಸ್‌ಪರ್ಟ್‌ಗಳಿಂದ ಕಲಿಯಬಹುದು

ನೀವು ಪಿ.ಓ.ಎಸ್.ಪಿ ಅಥವಾ ಇನ್ಶೂರೆನ್ಸ್ ಏಜೆಂಟ್ ಆಗಿ ತರಬೇತಿ ಮತ್ತು ಕೆಲಸ ಮಾಡುವಾಗ, ಉದ್ಯಮದ ಎಕ್ಸ್‌ಪರ್ಟ್‌ಗಳ ತರಬೇತಿಯ ಮೂಲಕ ನೀವು ಇನ್ನಷ್ಟು ಕಲಿಯಲು, ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ ಪಡೆಯುತ್ತೀರಿ. ಇತ್ತೀಚಿನ ವರ್ಷಗಳಲ್ಲಿ ಇನ್ಶೂರೆನ್ಸ್ ಅನ್ನು ಪಡೆಯುವ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿರುವುದರಿಂದ, ಬಹಳಷ್ಟು ಇನ್ಶೂರೆನ್ಸ್ ಕಂಪನಿಗಳು ಮತ್ತು ಮಧ್ಯವರ್ತಿಗಳು, ಈ ಬೇಡಿಕೆಯನ್ನು ಪೂರೈಸಲು ಪಿ.ಓ.ಎಸ್.ಪಿ ಗಳತ್ತ ಮುಖ ಮಾಡುತ್ತಿದ್ದಾರೆ. ಅಂದರೆ ಇಂಡಸ್ಟ್ರಿಯಲ್ಲಿಯೂ ಇದಕ್ಕೆ ಸಾಕಷ್ಟು ಅವಕಾಶಗಳಿವೆ.

9. ಜನರಿಗೆ ಸಹಾಯ ಮಾಡಲು ಇದು ವಿಭಿನ್ನ ಮಾರ್ಗವಾಗಿದೆ

ಪಿ.ಓ.ಎಸ್.ಪಿ ಆಗಿರುವುದರಿಂದ, ನೀವು ಜನರ ಜೀವನದ ಮೇಲೆ ಉತ್ತಮ ಧನಾತ್ಮಕ ಪ್ರಭಾವವನ್ನು ಬೀರಬಹುದು. ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ತಮ್ಮ ಮಕ್ಕಳನ್ನು ನೋಡಿಕೊಳ್ಳಲು, ನಿವೃತ್ತಿಗಾಗಿ ಪ್ಲ್ಯಾನ್ ಮಾಡಲು ಮತ್ತು ಇತ್ಯಾದಿಗಳಿಗೆ ನೀವು ಸಹಾಯ ಮಾಡಬಹುದು. ಏಕೆಂದರೆ ನೀವು ಗ್ರಾಹಕರಿಗೆ ಸೂಕ್ತವಾದ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಿದಾಗ, ಅವರಿಗೆ ಮತ್ತು ಅವರ ಕುಟುಂಬಕ್ಕೆ, ನೀವು ಹೆಚ್ಚಿನ ಆರ್ಥಿಕ ಮತ್ತು ವೈದ್ಯಕೀಯ ಭದ್ರತೆಯನ್ನು ಒದಗಿಸಲು ಸಹಾಯ ಮಾಡುತ್ತೀರಿ.

ಅದು ಲೈಫ್ ಇನ್ಶೂರೆನ್ಸ್ ಆಗಿರಲಿ, ಹೋಮ್ ಇನ್ಶೂರೆನ್ಸ್ ಆಗಿರಲಿ, ಮೋಟಾರ್ ಇನ್ಶೂರೆನ್ಸ್ ಆಗಿರಲಿ, ಹೆಲ್ತ್ ಇನ್ಶೂರೆನ್ಸ್ ಆಗಿರಲಿ ಅಥವಾ ಇತರ ಯಾವುದೇ ಪಾಲಿಸಿಯಾಗಿರಲಿ, ಇವುಗಳಿಂದ ಜನರು ಮನೆಯಲ್ಲಿ ಬೆಂಕಿಸ್ಫೋಟವಾದಾಗ, ಕುಟುಂಬದಲ್ಲಿ ಸಾವುಗಳುಂಟಾದಾಗ, ಅನಾರೋಗ್ಯಕ್ಕೆ ತುತ್ತಾದ ಮಕ್ಕಳಿಗೆ ವೈದ್ಯಕೀಯ ಸಹಾಯ ಪಡೆಯುವಾಗ ಹಾಗೂ ಇನ್ನೂ ಮುಂತಾದ ವಿಪತ್ತುಗಳ ವಿರುದ್ಧ ರಕ್ಷಣೆಯನ್ನು ಹೊಂದಿರುತ್ತಾರೆ. ಇದು ಪ್ರಮುಖವಾದ ಮತ್ತು ಅರ್ಥಪೂರ್ಣವಾದ ಕೆಲಸವಾಗಿದೆ.

10. ಪ್ರಶಸ್ತಿಗಳನ್ನು ಗೆಲ್ಲುವ ಮತ್ತು ಮನ್ನಣೆಯನ್ನು ಪಡೆಯವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ

ಪಿ.ಓ.ಎಸ್.ಪಿ ಮತ್ತು ಇನ್ಶೂರೆನ್ಸ್ ಏಜೆಂಟ್ ಆಗಿ, ನೀವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆಯಲು ಅವಕಾಶವನ್ನು ಪಡೆಯುತ್ತೀರಿ. ಉದಾಹರಣೆಗೆ, ನೀವು 'ಏಷ್ಯಾದ ವಿಶ್ವಾಸಾರ್ಹ ಲೈಫ್ ಇನ್ಶೂರೆನ್ಸ್ ಏಜೆಂಟ್‌ಗಳು ಮತ್ತು ಸಲಹೆಗಾರರು' ಮುಂತಾದ ಪ್ರಶಸ್ತಿಗಳಿಗೆ ಅರ್ಹತೆ ಪಡೆಯಬಹುದು ಮತ್ತು ಆ ಮೂಲಕ ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆಯಬಹುದು.

ಪಿ.ಓ.ಎಸ್.ಪಿ (POSP) ಆಗಲು ಉತ್ತಮ ಕಂಪನಿಯನ್ನು ಹೇಗೆ ಆಯ್ಕೆ ಮಾಡುವುದು?

ಪಿ.ಓ.ಎಸ್.ಪಿ ಆಗಿ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡುವುದಕ್ಕಾಗಿ, ನೀವು ಸಹಿ ಮಾಡಲು ಯೋಜಿಸಿರುವ ಇನ್ಶೂರೆನ್ಸ್ ಕಂಪನಿಯನ್ನು ಅಥವಾ ಮಧ್ಯವರ್ತಿಯನ್ನು ಸರಿಯಾಗಿ ಪರಿಶೀಲಿಸಿ. ಗಮನಿಸಬೇಕಾದ ಕೆಲವು ವಿಷಯಗಳೆಂದರೆ: 

  • ಕಂಪನಿಯು ವ್ಯಾಪಕ ಶ್ರೇಣಿಯ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತದೆ. ಉದಾಹರಣೆಗೆ, ಹೆಲ್ತ್, ಮೋಟಾರ್, ಟ್ರಾವೆಲ್, ಹೋಮ್, ಕಮರ್ಷಿಯಲ್ ಇತ್ಯಾದಿ.

  • ಯಾವುದೇ ಮಧ್ಯವರ್ತಿಗಳಿಲ್ಲದೆ ನೀವು ನೇರವಾಗಿ ಕಂಪನಿಯೊಂದಿಗೆ ಕೆಲಸ ಮಾಡುತ್ತೀರಿ.

  • ನೀವು ಆನ್‌ಬೋರ್ಡ್ ಮಾಡಿರುವ ಗ್ರಾಹಕರು ತಮ್ಮ ಪಾಲಿಸಿಯನ್ನು ನವೀಕರಿಸಿದಾಗಲೂ ಸಹ ನೀವು ಕಮಿಷನ್ ಗಳಿಸಬಹುದು.

  • ಕಂಪನಿಯು ಯಾವುದೇ ಪೇಪರ್‌ವರ್ಕ್ ಇರದ ಅಥವಾ ತೊಂದರೆಗಳಿಲ್ಲದ ಆನ್‌ಲೈನ್ ಪ್ರಕ್ರಿಯೆಗಳನ್ನು ನೀಡುತ್ತದೆ.

  • ನೀವು ಮಾರಾಟ ಮಾಡುವ ಪಾಲಿಸಿಗಳಿಗೆ, ಕಂಪನಿಯು ತಕ್ಷಣವೇ ಕಮಿಷನ್‌ಗಳನ್ನು ಪಾವತಿಸುತ್ತದೆ.

  • ಕಂಪನಿಯು, ನಿಮ್ಮ ಸಹಾಯಕ್ಕಾಗಿ ಅತ್ಯುತ್ತಮ ಬ್ಯಾಕೆಂಡ್ ಸಪೋರ್ಟ್ ಟೀಮ್ ಅನ್ನು ಹೊಂದಿದೆ.

ಡಿಜಿಟ್ ಇನ್ಶೂರೆನ್ಸ್ ಸೇರಿದಂತೆ ಈ ಮಾನದಂಡಗಳಿಗೆ ಹೊಂದಿಕೆಯಾಗುವ ಅನೇಕ ಇನ್ಶೂರೆನ್ಸ್ ಕಂಪನಿಗಳು, ಮಧ್ಯವರ್ತಿಗಳು ಮತ್ತು ದಲ್ಲಾಳಿಗಳು ಇದ್ದಾರೆ. ನೀವು ಸೇರುವ ಮೊದಲು ಅವುಗಳ ಬಗ್ಗೆ ತಿಳಿದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ!

ಹೀಗಾಗಿ, ನಿಮಗೆ ಸರಿಹೊಂದುವ ಸಮಯಗಳು, ಟನ್‌ಗಟ್ಟಲೆ ಅವಕಾಶಗಳು ಮತ್ತು ಆರ್ಥಿಕವಾಗಿ ಸ್ಥಿರವಾದ ಭವಿಷ್ಯ ನಿರ್ಮಿಸಲು ಜನರಿಗೆ ಸಹಾಯ ಮಾಡುವ ಸಾಮರ್ಥ್ಯವಿರುವ ಕೆಲಸಕ್ಕಾಗಿ ಹುಡುಕುತ್ತಿದ್ದರೆ, ಬಹುಶಃ ಇನ್ಶೂರೆನ್ಸ್ ಪಿ.ಓ.ಎಸ್.ಪಿ ಆಗುವುದು ನಿಮಗೆ ಸೂಕ್ತವಾಗಬಹುದು. ಮತ್ತು, ಇದರ ಬೆಸ್ಟ್ ಪಾರ್ಟ್ ಏನೂ ಗೊತ್ತೇ? ಈ ವೃತ್ತಿಜೀವನದ ಎಲ್ಲಾ ಸಾಮರ್ಥ್ಯಗಳನ್ನು ಒಮ್ಮೆ ನೀವು ಅರಿತುಕೊಂಡರೆ, ನಂತರ ಇದನ್ನು ಪ್ರಾರಂಭಿಸುವುದು ತುಂಬಾ ಸುಲಭ.

ನೀವು ಮಾಡಬೇಕಿರುವುದು ಇಷ್ಟೇ, ಜನರಲ್/ಲೈಫ್ ಇನ್ಸೂರೆನ್ಸ್ ಲೈಸೆನ್ಸ್ ಪಡೆಯಲು ಐ.ಆರ್.ಡಿ.ಎ.ಐ ನೀಡುವ 15-ಗಂಟೆಗಳ ಕಡ್ಡಾಯ ತರಬೇತಿಯನ್ನು ಪೂರ್ಣಗೊಳಿಸುವುದು. ಮತ್ತು, ನೀವೇನಾದರೂ ಕಂಪನಿ ಅಥವಾ ಇನ್ಶೂರೆನ್ಸ್ ಮಧ್ಯವರ್ತಿ ಮೂಲಕ ರಿಜಿಸ್ಟರ್ ಮಾಡಿದ್ದರೆ, ಈ ತರಬೇತಿಯನ್ನು ಸಾಮಾನ್ಯವಾಗಿ ಇನ್ಸೂರೆನ್ಸ್ ಕಂಪನಿಯಿಂದಲೇ ನಿಮಗೆ ನೀಡಲಾಗುತ್ತದೆ. ಒಮ್ಮೆ ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ನೀವು ಕೆಲಸ ಪ್ರಾರಂಭಿಸಲು ಸಿದ್ಧರಾಗುವಿರಿ - ನೀವು ಪಿ.ಓ.ಎಸ್.ಪಿ ಲೈಸೆನ್ಸ್ ಅನ್ನು ಪಡೆಯುತ್ತೀರಿ ಮತ್ತು ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ (ಪಿ.ಓ.ಎಸ್.ಪಿ ಮಾರ್ಗಸೂಚಿಗಳ ಪ್ರಕಾರ).

ಪದೇ ಪದೇ ಕೇಳಲಾದ ಪ್ರಶ್ನೆಗಳು

ಯಾರು ಪಿ.ಓ.ಎಸ್.ಪಿ (POSP) ಆಗಬಹುದು?

ಮೂಲಭೂತ ಮಾನದಂಡಗಳನ್ನು ಪೂರೈಸುವ ಯಾರಾದರೂ (18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ನೇ ತರಗತಿಯಲ್ಲಿ ಉತ್ತೀರ್ಣರಾದವರು) ಪಿ.ಓ.ಎಸ್.ಪಿ ಆಗಬಹುದು. ಹೀಗಾಗಿ, ಫ್ರೆಶರ್‌ಗಳಿಗೆ ಇದು ಸರಿಯಾದ ಅವಕಾಶವಾಗಿದೆ. ಮತ್ತು, ನೀವು ಈ ಕೆಲಸವನ್ನು ಪಾರ್ಟ್-ಟೈಮ್ ಆಗಿಯೂ ಮಾಡಬಹುದಾದ್ದರಿಂದ, ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು, ನಿವೃತ್ತರು ಮತ್ತು ಈಗಾಗಲೇ ಉದ್ಯೋಗವನ್ನು ಹೊಂದಿದ್ದರೂ ಸಹ, ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಪಿ.ಓ.ಎಸ್.ಪಿ (POSP) ಆಗಿ ನೀವು ಎಷ್ಟು ಹಣವನ್ನು ಗಳಿಸಬಹುದು?

ಪಿ.ಓ.ಎಸ್.ಪಿ ಆಗಿ, ನಿಮ್ಮ ಗಳಿಕೆಯು ನೀವು ಕೆಲಸ ಮಾಡುವ ಗಂಟೆಗಳ ಸಂಖ್ಯೆಯನ್ನು ಅವಲಂಬಿಸಿರುವುದಿಲ್ಲ ಬದಲಾಗಿ ನೀವು ನೀಡುವ ಪಾಲಿಸಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಯಾವುದೇ ಸ್ಥಿರವಾದ ಆದಾಯ ಮತ್ತು ಗರಿಷ್ಠ ಮಿತಿ ಇಲ್ಲದಿರುವುದರಿಂದ, ಹೆಚ್ಚಿನ ಗಳಿಕೆಗೆ ಇಲ್ಲಿ ಸಾಕಷ್ಟು ಅವಕಾಶವಿದೆ. ಮುಖ್ಯವಾಗಿ, ನೀವು ಹೆಚ್ಚು ಪಾಲಿಸಿಗಳನ್ನು ಮಾರಾಟ ಮಾಡಿದಷ್ಟು, ನೀವು ಹೆಚ್ಚು ನವೀಕರಣಗಳನ್ನು ಪಡೆಯುತ್ತೀರಿ. ಅದರರ್ಥ ನೀವು ಪಿ.ಓ.ಎಸ್.ಪಿ ಯಾಗಿ ಹೆಚ್ಚು ಗಳಿಸಬಹುದು.

ಪಿ.ಓ.ಎಸ್.ಪಿ(POSP) ಆಗಿ ರಿಜಿಸ್ಟರ್ ಮಾಡಲು ನಾನು ಯಾವ ಡಾಕ್ಯುಮೆಂಟುಗಳನ್ನು ಸಲ್ಲಿಸಬೇಕು?

ಪಿ.ಓ.ಎಸ್.ಪಿ ಆಗಿ ರಿಜಿಸ್ಟರ್ ಮಾಡಲು, ನಿಮಗೆ ಈ ಕೆಳಗಿನ ಡಾಕ್ಯುಮೆಂಟುಗಳು ಬೇಕಾಗುತ್ತವೆ:

  • ನಿಮ್ಮ 10ನೇ ತರಗತಿ (ಅಥವಾ ಅದಕ್ಕೂ ಮೇಲಿನ) ಯ ಉತ್ತೀರ್ಣ ಪ್ರಮಾಣಪತ್ರದ ಪ್ರತಿ
  • ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನ ಪ್ರತಿ (ಮುಂಭಾಗ ಮತ್ತು ಹಿಂಭಾಗ)
  • ನಿಮ್ಮ ಹೆಸರಿರುವ ಒಂದು ಕ್ಯಾನ್ಸಲ್ಡ್ ಚೆಕ್ 
  • ಒಂದು ಫೋಟೋ

ಪಿ.ಓ.ಎಸ್.ಪಿ(POSP) ಯು ಯಾವ ಉತ್ಪನ್ನಗಳನ್ನು ಮಾರಾಟ ಮಾಡಬಹುದು?

ತಮ್ಮ ಕೆಲಸ ಮಾಡುವ ಕಂಪನಿಯನ್ನು ಅವಲಂಬಿಸಿ, ಪಿ.ಓ.ಎಸ್.ಪಿ ಯು ಹಲವಾರು ಇನ್ಶೂರೆನ್ಸ್ ವಿಭಾಗಗಳಿಂದ, ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಬಹುದು. ಇವುಗಳಲ್ಲಿ ಲೈಫ್ ಇನ್ಶೂರೆನ್ಸ್, ಟರ್ಮ್ ಇನ್ಶೂರೆನ್ಸ್, ಮೋಟಾರ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್, ಟ್ರಾವೆಲ್ ಇನ್ಶೂರೆನ್ಸ್ ಮುಂತಾದವು ಸೇರಿವೆ.

ನೀವು ಯಾವಾಗ ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು?

ಒಮ್ಮೆ ನೀವು ಇನ್ಶೂರೆನ್ಸ್ ಕಂಪನಿ ಅಥವಾ ಬ್ರೋಕರ್‌ನೊಂದಿಗೆ ರಿಜಿಸ್ಟರ್ ಮಾಡಿದ ನಂತರ, ನೀವು 15 ಗಂಟೆಗಳ ಕಡ್ಡಾಯ ತರಬೇತಿಯನ್ನು ಪೂರ್ಣಗೊಳಿಸಬಹುದು ಮತ್ತು ಅಗತ್ಯವಿರುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ನಂತರ ನೀವು ಇ-ಸರ್ಟಿಫಿಕೇಟ್ ಅನ್ನು ಪಡೆಯುತ್ತೀರಿ ಮತ್ತು ನೀವು ಪಿ.ಓ.ಎಸ್.ಪಿ ಏಜೆಂಟ್ ಆಗಿ ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು.