ಡಿಜಿಟ್ ಪಾರ್ಟ್ನರ್ ಆಗಿ
35,000+ ಪಾರ್ಟ್ನರ್‌ಗಳು ಡಿಜಿಟ್‌ನೊಂದಿಗೆ 674 ಕೋಟಿ+ ಗಳಿಸಿದ್ದಾರೆ.

ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಹಣ ಗಳಿಸುವುದು ಹೇಗೆ?

Source: pexels

ಹಿರಿಯ ನಾಗರಿಕರು ಮತ್ತು ನಿವೃತ್ತರು ಸಾಮಾನ್ಯವಾಗಿ ತಮ್ಮ ಸ್ವಂತ ಮನೆಯ ಸೌಕರ್ಯದಿಂದಲೇ ಏನನ್ನಾದರೂ ಮಾಡಲು ಬಯಸುತ್ತಾರೆ. ಮತ್ತು ಅವರು ಇಂತಹದನ್ನು ಮಾಡಬಹುದು ಅಲ್ಲದೇ ಮನೆಯಿಂದಲೇ ಕೆಲಸ ಮಾಡುವಮೂಲಕ ಸ್ವಲ್ಪ ಹೆಚ್ಚುವರಿ ಹಣವನ್ನು ಗಳಿಸುವ ಅವಕಾಶವನ್ನು ಪಡೆಯಬಹುದು. ಹವ್ಯಾಸಗಳು ಅಥವಾ ಹಿಂದಿನ ಕೆಲಸದ ಅನುಭವದಿಂದ ನಿಮಗೆ ಈಗಾಗಲೇ ತಿಳಿದಿರುವ ಸ್ಕಿಲ್‌ಗಳನ್ನು ಬಳಸಿಕೊಂಡು ಸುಲಭವಾಗಿ ಹಣ ಗಳಿಸುವ ಉದ್ಯಮವನ್ನಾಗಿ ಮಾಡಬಹುದು.

ಹಿರಿಯ ನಾಗರಿಕರಿಗಾಗಿ ಮನೆಯಿಂದಲೇ ಹಣ ಗಳಿಸಲು ಕೆಲವು ಮಾರ್ಗಗಳು ಇಲ್ಲಿವೆ

1. ಇನ್ಶೂರೆನ್ಸ್ ಪಿ.ಓ.ಎಸ್.ಪಿ(POSP) ಆಗಿ

ಹಿರಿಯ ನಾಗರಿಕರಿಗೆ ಹಣ ಗಳಿಸುವ ಒಂದು ಮಾರ್ಗವೆಂದರೆ ಪಿ.ಓ.ಎಸ್.ಪಿ ಅಥವಾ ಪಾಯಿಂಟ್ ಆಫ್ ಸೇಲ್ಸ್‌ಪರ್ಸನ್ ಆಗುವುದು. ಪಿ.ಓ.ಎಸ್.ಪಿ ಎಂದರೆ ಇನ್ಶೂರೆನ್ಸ್ ಕಂಪನಿಗಾಗಿ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡುವ ಇನ್ಶೂರೆನ್ಸ್ ಏಜೆಂಟ್. ನಿಮಗೆ ಬೇಕಿರುವುದು ಮಾರಾಟ ಮಾಡುವ ಆತ್ಮವಿಶ್ವಾಸ, ಸ್ಮಾರ್ಟ್‌ಫೋನ್ ಮತ್ತು ಉತ್ತಮ ಇಂಟರ್ನೆಟ್ ಕನೆಕ್ಷನ್. ಆಮೇಲೆ ನೀವು ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಸೈನ್ ಅಪ್ ಮಾಡಬಹುದು ಮತ್ತು ಇನ್ಶೂರೆನ್ಸ್ ಪಿ.ಓ.ಎಸ್.ಪಿ ಆಗಬಹುದು.

  • ಯಾವುದಾದರೂ ಅವಶ್ಯಕತೆಗಳಿವೆಯೇ? - ಪಿ.ಓ.ಎಸ್.ಪಿ ಆಗಲು, ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇವುಗಳನ್ನು ಪೂರೈಸಿದ ನಂತರ, ನೀವು ಐ.ಆರ್.ಡಿ.ಎ.ಐ ನೀಡುವ 15-ಗಂಟೆಗಳ ಕಡ್ಡಾಯ ತರಬೇತಿಯನ್ನು ಪೂರ್ಣಗೊಳಿಸಬಹುದು ಮತ್ತು ನಿಮ್ಮ ಲೈಸೆನ್ಸ್ ಅನ್ನು ಪಡೆಯಬಹುದು.

  • ನೀವು ಎಷ್ಟು ಸಂಪಾದಿಸಬಹುದು? - ಪಿ.ಓ.ಎಸ್.ಪಿ ಆಗಿ, ನೀವು ಎಷ್ಟು ಪಾಲಿಸಿಗಳನ್ನು ಮಾರಾಟ ಮಾಡುತ್ತೀರೋ ಅದರ ಕಮಿಷನ್‌ನ ಮೇಲೆ ನಿಮ್ಮ ಆದಾಯವು ಅವಲಂಬಿತವಾಗಿರುತ್ತದೆ. ಆದ್ದರಿಂದ, ನೀವು ಹೆಚ್ಚು ಮಾರಾಟ ಮಾಡಿದಷ್ಟು ನೀವು ಹೆಚ್ಚು ಗಳಿಸಬಹುದು.

2. ಟ್ಯೂಟರಿಂಗ್ ತರಗತಿಗಳನ್ನು ನಡೆಸುವುದು

ನೀವು ನಿರ್ದಿಷ್ಟ ವಿಷಯದಲ್ಲಿ ಸಾಕಷ್ಟು ಜ್ಞಾನವನ್ನು ಹೊಂದಿದ್ದರೆ ಅಥವಾ ನೀವು ನಿರ್ದಿಷ್ಟ ವೃತ್ತಿಯಿಂದ ನಿವೃತ್ತರಾಗಿದ್ದರೆ, ಈ ವಿಷಯಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನೀವು ಸುಲಭವಾಗಿ ಬೋಧಕರಾಗಬಹುದು. ನೀವು ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಇತಿಹಾಸದಿಂದ ಹಿಡಿದು ಸಂಗೀತ ಅಥವಾ ಕ್ರಾಫ್ಟ್ ಯಾವ ವಿಷಯವನ್ನಾದರೂ ಕಲಿಸಬಹುದು.

ಟ್ಯೂಟರ್ ಆಗಲು, ನೀವು ಉಡೆಮಿ, ಅಥವಾ ಕೋರ್ಸ್ಎರಾ ನಂತಹ ಆನ್‌ಲೈನ್ ಟ್ಯೂಟರಿಂಗ್ ಪ್ಲಾಟ್‌ಫಾರ್ಮ್‌ನೊಂದಿಗೆ ಸೈನ್ ಅಪ್ ಮಾಡಬಹುದು ಅಥವಾ ನಿಮ್ಮ ಸಾಮಾಜಿಕ ವಲಯಗಳಲ್ಲಿ ಟ್ಯುಟರಿಂಗ್ ತರಗತಿಗಳ ಅಗತ್ಯವಿರುವ ಜನರನ್ನು ಹುಡುಕಲು ನೀವು ಫೇಸ್ಬುಕ್ ಮತ್ತು ವಾಟ್ಸಾಪ್ ಅನ್ನು ಬಳಸಿಕೊಳ್ಳಬಹುದು.

  • ಯಾವುದಾದರೂ ಅವಶ್ಯಕತೆಗಳಿವೆಯೇ? - ಬೋಧಕರಾಗಿ ಕೆಲಸ ಮಾಡಲು, ನೀವು ಕೆಲವು ಟ್ಯುಟರಿಂಗ್ ಕೌಶಲ್ಯಗಳನ್ನು ಕಲಿಯಬೇಕಾಗುತ್ತದೆ ಮತ್ತು ನೀವು ಕಲಿಸಲು ಬಯಸುವ ವಿಷಯಗಳ ಪಠ್ಯಕ್ರಮಗಳೊಂದಿಗೆ ಸರಿಯಾಗಿ ತಯಾರಾಗಿ. 

  • ನೀವು ಎಷ್ಟು ಸಂಪಾದಿಸಬಹುದು? - ಬೋಧಕರಿಗೆ, ನಿಮ್ಮ ಗಂಟೆಯ ದರವು ನಿಮಗಿರುವ ಪರಿಣಿತಿ ಮತ್ತು ನೀವು ಕಲಿಸುವ ವಿಷಯದ ಮೇಲೆ ಬದಲಾಗುತ್ತದೆ*, ಆದರೆ ಸಾಮಾನ್ಯವಾಗಿ, ನೀವು ಗಂಟೆಗೆ ₹200–500 ವರೆಗೆ ಗಳಿಸಬಹುದು.

ಗಮನಿಸಿ: ಸಾಮಾನ್ಯವಾಗಿ ಜನರು, ವಿಜ್ಞಾನ, ಎಂಜಿನಿಯರಿಂಗ್, ಗಣಿತ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬೋಧನೆಗಾಗಿ ಹೆಚ್ಚು ಗಮನಹರಿಸುತ್ತಾರೆ.

3. ವೃತ್ತಿಪರರು ಮತ್ತು ಕಂಪನಿಗಳಿಗೆ ಕನ್ಸಲ್ಟೆಂಟ್ ಆಗಿರಿ

ನಿಮಗೆ ಸಾಕಷ್ಟು ಕೆಲಸದ ಅನುಭವವಿದ್ದರೆ ಅಥವಾ ವ್ಯಾಪಾರ / ಇತರ ಕ್ಷೇತ್ರಗಳ ಬಗ್ಗೆ ತಿಳಿದಿದ್ದರೆ, ನೀವು ಕನ್ಸಲ್ಟೆಂಟ್ ಆಗಿ ವೃತ್ತಿಪರರಿಗೆ ಮತ್ತು ಕಂಪನಿಗಳಿಗೆ ನಿಮ್ಮ ಜ್ಞಾನವನ್ನು ಮಾರಾಟ ಮಾಡಬಹುದು. ನೀವು ಹೆಲ್ತ್ ಕೇರ್, ಬಿಸಿನೆಸ್, ಐಟಿ ಮತ್ತು ಹೆಚ್ಚಿನವುಗಳಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರೆ, ಆಗ ನೀವು ಅಪ್‌ವರ್ಕ್, ಲಿಂಕ್ಡ್‌ಇನ್ ಇತ್ಯಾದಿ ಸೈಟ್‌ಗಳನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಕ್ಲೈಂಟ್‌ಗಳನ್ನು ಹುಡುಕಬಹುದು.

ಈ ರೀತಿಯ ರಿಮೋಟ್ ಕನ್ಸಲ್ಟಿಂಗ್ ಉದ್ಯೋಗಗಳು ಪಾರ್ಟ್-ಟೈಮ್ ಅಥವಾ ಫುಲ್-ಟೈಮ್ ಆಗಿರಬಹುದು ಅಥವಾ ಕಾಂಟ್ರಾಕ್ಟ್ ಆಧಾರದ ಮೇಲೂ ಆಗಿರಬಹುದು ಮತ್ತು ಸಾಮಾನ್ಯವಾಗಿ ನಿಮ್ಮ ಅನುಕೂಲಕ್ಕೆ ಹೊಂದಿಕೊಳ್ಳುತ್ತವೆ.

  • ಯಾವುದಾದರೂ ಅವಶ್ಯಕತೆಗಳಿವೆಯೇ? - ಕನ್ಸಲ್ಟೆಂಟ್ ಕೆಲಸವನ್ನು ಹುಡುಕಲು, ನಿಮ್ಮ ಕೌಶಲ್ಯ ಮತ್ತು ಅನುಭವವನ್ನು ನೀವು ಮಾರುಕಟ್ಟೆಗೆ ತರುವ ಅಗತ್ಯವಿದೆ.

  • ನೀವು ಎಷ್ಟು ಸಂಪಾದಿಸಬಹುದು? - ನಿಮ್ಮ ಅನುಭವ ಮತ್ತು ಕಾರ್ಯಕ್ಷೇತ್ರವನ್ನು ಆಧರಿಸಿ, ನೀವು ಹೆಚ್ಚು ಆದಾಯ ನೀಡುವ ಕನ್ಸಲ್ಟೆನ್ಸಿ ಉದ್ಯೋಗಗಳನ್ನು ಸುಲಭವಾಗಿ ಹುಡುಕಬಹುದು.

4. ಫುಡ್ ಡೆಲಿವರಿ ಸರ್ವೀಸ್ ಅನ್ನು ಪ್ರಾರಂಭಿಸಿ

ನೀವು ಕುಕಿಂಗ್ ಅಥವಾ ಬೇಕಿಂಗ್ ಅನ್ನು ಆನಂದಿಸುತ್ತಿದ್ದರೆ, ಹಿರಿಯ ನಾಗರಿಕರು ಫುಡ್ ಡೆಲಿವರಿ ಸರ್ವೀಸ್ ಅನ್ನು ಪ್ರಾರಂಭಿಸುವ ಮೂಲಕ ಮನೆಯಿಂದಲೇ ಹಣ ಗಳಿಸಬಹುದು. ನೀವು ದಿನನಿತ್ಯದ ಪ್ಯಾಕೆಜ್ಡ್ ಊಟದಿಂದ ಹಿಡಿದು ಬೇಕ್ ಮಾಡಿದ ವಸ್ತುಗಳು, ಪ್ರತ್ಯೇಕ ಊಟಗಳು ಮತ್ತು ಪಾರ್ಟಿಗಳಿಗೆ ಒದಗಿಸುವ ಕೇಟರಿಂಗ್ ಸೇರಿದಂತೆ ಎಲ್ಲವನ್ನೂ ಮಾರಾಟ ಮಾಡಬಹುದು.

ನೀವು ಝೊಮ್ಯಾಟೊ ಮತ್ತು ಸ್ವಿಗ್ಗಿ ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಆಹಾರವನ್ನು ಮಾರಾಟ ಮಾಡಬಹುದು. ಅಲ್ಲದೇ ಸೋಷಿಯಲ್ ಮೀಡಿಯಾದ ಮೂಲಕ ಅಥವಾ ಫೇಸ್‌ಬುಕ್ / ವಾಟ್ಸಾಪ್ ನಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಮೂಲಕ ಡೆಲಿವರಿ ಸರ್ವೀಸ್ ಅನ್ನು ಬಳಸಿಕೊಂಡು ನಿಮ್ಮ ಉತ್ಪನ್ನಗಳನ್ನು ನೇರವಾಗಿ ಅವರಿಗೆ ಮಾರಾಟ ಮಾಡಬಹುದು.

  • ಯಾವುದಾದರೂ ಅವಶ್ಯಕತೆಗಳಿವೆಯೇ? - ನಿಮಗೆ ಅಗತ್ಯವಿರುವ ಅಡುಗೆ ಪದಾರ್ಥಗಳೊಂದಿಗೆ ನೀವೇ ಸರಬರಾಜು ಮಾಡಬೇಕಾಗುತ್ತದೆ, ಜೊತೆಗೆ ವಿಶ್ವಾಸಾರ್ಹ ಡೆಲಿವರಿ ಸರ್ವೀಸ್ ಅನ್ನು ನೀಡಬೇಕಾಗುತ್ತದೆ.

  • ನೀವು ಎಷ್ಟು ಸಂಪಾದಿಸಬಹುದು? - ನಿಮ್ಮ ಆದಾಯವು ನೀವು ಮಾರಾಟ ಮಾಡುವ ಆಹಾರದ ಪ್ರಕಾರವನ್ನು ಅವಲಂಬಿಸಿರುತ್ತದೆ (ಉದಾ., ಪೂರ್ಣ ಊಟ, ಸಿಹಿತಿಂಡಿಗಳು, ತಿಂಡಿಗಳು, ಇತ್ಯಾದಿ) ಮತ್ತು ನಿಮಗಿರುವ ಗ್ರಾಹಕರ ಸಂಖ್ಯೆಯನ್ನು ಅವಲಂಬಿಸಿರುತ್ತದೆ.

5. ನಿಮ್ಮ ಮನೆಯಲ್ಲಿ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿ

ಹಿರಿಯ ನಾಗರಿಕರು ಮನೆಯಿಂದಲೇ ಸುಲಭವಾಗಿ ಹಣ ಗಳಿಸುವ ಇನ್ನೊಂದು ಮಾರ್ಗವೆಂದರೆ ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಹೊಲಿಗೆ, ಕಲೆ ಮತ್ತು ಕ್ರಾಫ್ಟ್ ಉತ್ಪನ್ನಗಳ ತಯಾರಿಸುವುದು. ಇದಕ್ಕಾಗಿ ತಮ್ಮ ಕೌಶಲ್ಯಗಳನ್ನು ಬಳಸುವುದು. ಇದು ಪೇಂಟಿಂಗ್‌ಗಳು, ಕ್ವಿಲ್ಟ್‌ಗಳು, ಪರಿಮಳಯುಕ್ತ ಮೇಣದಬತ್ತಿಗಳು, ವಾಲ್ ಹ್ಯಾಂಗಿಂಗ್‌ಗಳು, ಟೇಬಲ್ ಮ್ಯಾಟ್‌ಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಒಳಗೊಂಡಿರುತ್ತದೆ.

ನಿಮ್ಮ ಮನೆಯಲ್ಲಿ ತಯಾರಾದ ವಸ್ತುಗಳ ಮಾರಾಟಕ್ಕಾಗಿ ಹೆಚ್ಚಿನ ಅವಕಾಶಗಳನ್ನು ಪಡೆಯಲು ನೀವು ಇಟ್ಸಿ, ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್, ಅಮೆಜಾನ್ ಮತ್ತು ಇಬೇ ನಂತಹ ಸೈಟ್‌ಗಳನ್ನು ಬಳಸಬಹುದು. ಅಥವಾ ನಿಮ್ಮ ವಸ್ತುಗಳಿಗೆ ಜಾಹೀರಾತು ನೀಡಲು ಮತ್ತು ಗ್ರಾಹಕರನ್ನು ಆಕರ್ಷಿಸಲು ನೀವು ಮತ್ತೊಮ್ಮೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ನಂತಹ ಸೋಷಿಯಲ್ ಮೀಡಿಯಾಗಳತ್ತ ಮುಖ ಮಾಡಬಹುದು.

  • ಯಾವುದಾದರೂ ಅವಶ್ಯಕತೆಗಳಿವೆಯೇ? - ನಿಮಗೆ ಬೇಕಿರುವುದು, ನಿಮ್ಮ ಉತ್ಪನ್ನಗಳಿಗೆ ಅಗತ್ಯವಿರುವ ಬಣ್ಣಗಳು, ಸೂಜಿಗಳು, ದಾರಗಳು ಅಥವಾ ಇತರ ಕರಕುಶಲ ವಸ್ತುಗಳಿಗೆ ಕಚ್ಚಾ ವಸ್ತುಗಳು.

  • ನೀವು ಎಷ್ಟು ಸಂಪಾದಿಸಬಹುದು? - ನೀವು ಆದಾಯವು ನೀವು ಯಾವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೀರಿ ಮತ್ತು ಎಷ್ಟು ಮಾರಾಟ ಮಾಡುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಮೊದಲೇ ಹೇಳಿ ತಯಾರು ಮಾಡಿಸುವ ಉತ್ಪನ್ನಗಳನ್ನು ನೀವು ಅಧಿಕ ಬೆಲೆಗೆ ಹೊಂದಿಸಬಹುದು.

ನಾವು ಮೇಲೆ ತಿಳಿಸಿದಂತೆ, ನಿವೃತ್ತಿ ಹೊಂದಿದವರು ಮತ್ತು ಹಿರಿಯ ನಾಗರಿಕರಿಗೆ ಸಾಕಷ್ಟು ಉದ್ಯೋಗಗಳು ಅವರ ಅನುಕೂಲತೆಗೆ ಹೊಂದಿಕೊಳ್ಳುವ ಸಮಯದೊಂದಿಗೆ ಬರುತ್ತವೆ. ಪ್ರತಿದಿನವೂ ಕಚೇರಿಗೆ ಹೋಗದೆಯೇ ಹಿರಿಯ ನಾಗರಿಕರಿಗೆ ಹಣ ಗಳಿಸಲು ಮಾರ್ಗಗಳು ಸಹಾಯ ಮಾಡುತ್ತವೆ.

ಹಿರಿಯ ನಾಗರಿಕರಿಗಾಗಿ ಇರುವ ಈ ಹಣ ಗಳಿಸುವ ಸಲಹೆಗಳು ಅವರಿಂದ ವಿವಿಧ ರೀತಿಯ ಕೌಶಲ್ಯ, ಸಮಯ ಹಾಗೂ ಶ್ರಮವನ್ನು ಬಯಸುತ್ತವೆ ಮತ್ತು ವಿವಿಧ ರೀತಿಯ ಗಳಿಕ್ಕೆಯ ಸಾಮರ್ಥ್ಯವನ್ನು ಸಹ ನೀಡುತ್ತವೆ. ಆದ್ದರಿಂದ ಇವುಗಳಲ್ಲಿ ನೀವು ನಿಮಗೆ ಸೂಕ್ತವಾದ ಕೆಲಸವನ್ನು ಕಂಡುಕೊಳ್ಳುವ ಸಾಧ್ಯತೆಯಿದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಆನ್‌ಲೈನ್‌ನಲ್ಲಿ ಹಿರಿಯ ನಾಗರಿಕರಿಗೆ ಯಾವ ರೀತಿಯ ಉದ್ಯೋಗಗಳು ಲಭ್ಯವಿವೆ?

ಎಲ್ಲಾ ವಯಸ್ಸಿನವರಿಗೆ, ಎಲ್ಲಾ ಹಿನ್ನೆಲೆಯವರಿಗೆ ಮತ್ತು ವಿವಿಧ ರೀತಿಯ ಕೌಶಲ್ಯವುಳ್ಳ ಜನರಿಗೆ ಆನ್‌ಲೈನ್‌ನಲ್ಲಿ ಅನೇಕ ರೀತಿಯ ಉದ್ಯೋಗಗಳು ಲಭ್ಯವಿದೆ. ನೀವು ಕೆಲಸ ಮಾಡಲು ಬಯಸುವ ಸೈಟ್‌ಗಳಿಗಾಗಿ ನೋಡಿ ಅಥವಾ ಲಿಂಕ್ಡ್‌ಇನ್‌ನಂತಹ ಜಾಬ್ ಅಗ್ರಿಗೇಟರ್ ಸೈಟ್‌ಗಳಿಗೆ ಹೋಗಿ, ಅಲ್ಲಿ ನೀವು ಫ್ರೀಲ್ಯಾನ್ಸರ್ ಕೆಲಸ, ಪಾರ್ಟ್-ಟೈಮ್ ಉದ್ಯೋಗಗಳು ಅಥವಾ ಫುಲ್-ಟೈಮ್ ಉದ್ಯೋಗಗಳನ್ನು ಹುಡುಕಬಹುದು.

ಆನ್‌ಲೈನ್‌ನಲ್ಲಿ ಉದ್ಯೋಗ/ವ್ಯಾಪಾರವನ್ನು ಪ್ರಾರಂಭಿಸಲು ನಿಮಗೆ ಅನುಭವ ಇರಬೇಕೇ?

ಇದು ನೀವು ಯಾವ ರೀತಿಯ ಉದ್ಯೋಗ/ವ್ಯಾಪಾರವನ್ನು ಮಾಡಲು ಬಯಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕಂಪನಿಗಳು ಮತ್ತು ವೆಬ್‌ಸೈಟ್‌ಗಳು ಕನ್ಸಲ್ಟೆನ್ಸಿ ಅಥವಾ ಬೋಧನೆಯಂತಹ ಉದ್ಯೋಗಗಳಿಗೆ ಹೆಚ್ಚಿನ ಅನುಭವ ಹೊಂದಿರುವವರಿಗೆ ಆದ್ಯತೆ ನೀಡುತ್ತವೆ. ನೀವು ಮನೆಯಲ್ಲಿ ತಯಾರಿಸಿದ ಆಹಾರ ಅಥವಾ ವಸ್ತುಗಳನ್ನು ಮಾರಾಟ ಮಾಡಲು ಅಥವಾ ಪಿ.ಓ.ಎಸ್.ಪಿ ಆಗಲು ಪ್ಲ್ಯಾನ್ ಮಾಡುತ್ತಿದ್ದರೆ, ಅವುಗಳಿಗೆ ಯಾವುದೇ ಉದ್ಯೋಗ ಅನುಭವದ ಅಗತ್ಯವಿಲ್ಲ.

ಮನೆಯಿಂದ ಆನ್‌ಲೈನ್‌ನಲ್ಲಿ ಕೆಲಸ ಮಾಡಲು ಯಾವುದಾದರೂ ಹೂಡಿಕೆಯ ಅಗತ್ಯವಿದೆಯೇ?

ಈ ಹೆಚ್ಚಿನ ಉದ್ಯೋಗಗಳಿಗೆ ಉತ್ತಮ ವೇಗದ ಇಂಟರ್ನೆಟ್ ಕನೆಕ್ಷನ್‌ನ ಹೊರತಾಗಿ ಮತ್ತಾವುದೇ ಹೂಡಿಕೆಯ ಅಗತ್ಯವಿರುವುದಿಲ್ಲ. ಆದಾಗ್ಯೂ, ನೀವು ವಸ್ತುಗಳನ್ನು ಮಾರಾಟ ಮಾಡಲು ಸರಬರಾಜು ಅಥವಾ ಪದಾರ್ಥಗಳ ಮೇಲೆ ಹೂಡಿಕೆ ಮಾಡಬೇಕಾಗಬಹುದು. ಆದರೆ ಕೆಲವು ವೆಬ್‌ಸೈಟ್‌ಗಳು ಫ್ರೀಲ್ಯಾನ್ಸರ್, ಟ್ಯೂಟರ್ ತರಗತಿಗಳು ಇತ್ಯಾದಿಗಳನ್ನು ನೀಡುತ್ತವೆ, ಅವುಗಳಿಗೆ ನೀವು ರಿಜಿಸ್ಟರ್ ಮಾಡಲು ಸಣ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.