ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಕ್ರೆಡಿಟ್ ಸ್ಕೋರ್ - ವಿಧಗಳು, ಮಹತ್ವ ಹಾಗೂ ಪ್ರಯೋಜನಗಳು

Source: Housing

ಕ್ರೆಡಿಟ್ ಸ್ಕೋರ್ ಎಂದರೇನು?

ಕ್ರೆಡಿಟ್ ಸ್ಕೋರ್, ಸಾಲದಾತರು ಮತ್ತು ಹಣಕಾಸಿನ ಸಂಸ್ಥೆಗಳು ನಿರ್ಧರಿಸುವಂತಹ, ಒಂದು ಸಂಖ್ಯೆಯಾಗಿದೆ. ಇದನ್ನು ಒಬ್ಬ ವ್ಯಕ್ತಿಯ "ಕ್ರೆಡಿಟ್ ಅರ್ಹತೆ" ಅಥವಾ ಒಂದು ಸಾಲ, ಋಣ, ಅಥವಾ ಅಡಮಾನವನ್ನು ತೀರಿಸುವ ಸಾಮರ್ಥ್ಯವನ್ನು ಪ್ರದರ್ಶಿಸಲು ಬಳಸಲಾಗುತ್ತದೆ.

ಭಾರತದಲ್ಲಿ, ಈ ಕ್ರೆಡಿಟ್ ಸ್ಕೋರ್ ಅನ್ನು ತಯಾರಿಸಲು ನಾಲ್ಕು ಕ್ರೆಡಿಟ್ ಬ್ಯೂರೋಗಳು ಇವೆ - ಟ್ರಾನ್ಸ್ಯೂನಿಯನ್ ಸಿಬಿಲ್, ಎಕ್ಸ್‌ಪೀರಿಯನ್, ಕ್ರಿಫ್ ಹೈಮಾರ್ಕ್, ಹಾಗೂ ಈಕ್ವಿಫ್ಯಾಕ್ಸ್.

ಕ್ರೆಡಿಟ್ ಸ್ಕೋರ್ ಹೇಗೆ ಕೆಲಸ ಮಾಡುತ್ತದೆ?

ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಅನ್ನು, ಅವರ ಮರುಪಾವತಿಯ ವೈಯಕ್ತಿಕ ಇತಿಹಾಸ, ಕ್ರೆಡಿಟ್ ಫೈಲ್ ಗಳು, ಸಾಲದ ಇತಿಹಾಸ ಮುಂತಾದವುಗಳ ಆಧಾರದ ಮೇಲೆ, 300-900(900 ಗರಿಷ್ಠ ಸಾಧ್ಯ ಸ್ಕೋರ್ ಆಗಿದೆ)ಮಧ್ಯದ ಮೂರು-ಅಂಕಿಯ ಸಂಖ್ಯೆಯನ್ನು ಬಳಸಿ ವ್ಯಕ್ತಪಡಿಸಲಾಗುತ್ತದೆ.

ನೀವು ಸಾಲಕ್ಕಾಗಿ ಅಪ್ಲಿಕೇಶನ್ ಸಲ್ಲಿಸುವಾಗ, ಬ್ಯಾಂಕ್ ಹಾಗೂ ಇತರ ಸಾಲ ನೀಡುವ ಸಂಸ್ಥೆಗಳು ನಿಮ್ಮ ಕ್ರೆಡಿಟ್ ಅಪಾಯವನ್ನು ನಿರ್ಧರಿಸಲು, ಈ ಸಂಖೆಯನ್ನು ಪರಿಶೀಲಿಸುತ್ತಾರೆ. ಇದು ನೀವು ಸರಿಯಾದ ಸಮಯದಲ್ಲಿ ತಮ್ಮ ಬಿಲ್ ಗಳನ್ನು ಪಾವತಿಸುವ ಸಾಧ್ಯತೆಯನ್ನು ಪ್ರದರ್ಶಿಸುತ್ತದೆ ಹಾಗೂ ನಿಮ್ಮ ಸಾಲ ಅನುಮೋದಿತವಾಗುವುದೋ ಇಲ್ಲವೋ ಎಂಬುವುದನ್ನು ನಿರ್ಧರಿಸಬಹುದು.

ನಿಮ್ಮ ಕ್ರೆಡಿಟ್ ಸ್ಕೋರ್ ನಿಮಗೆ ಅನುಮೊದಿತವಾಗಬಲ್ಲ ಸಾಲದ ಮೊತ್ತದ ಮೇಲೆ ಮಾತ್ರವಲ್ಲದೆ, ಅದರ ಬಡ್ಡಿ ದರದ ಮೇಲೂ ಪರಿಣಾಮ ಬೀರಿವುದು. ನಿಮ್ಮ ಕ್ರೆಡಿಟ್ ಸ್ಕೋರ್ ತೀರಾ ಕಡಿಮೆ ಇದ್ದರೆ, ಸಾಲದಾತರು ನಿಮ್ಮ ಸಾಲದ ಅಪ್ಲಿಕೇಶನ್ ಅನ್ನು ತಿರಸ್ಕರಿಸಲೂಬಹುದು.

ನಿಮ್ಮ ಸ್ಕೋರ್ ಅನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ?

ನಾವು ಈಗಾಗಲೇ ಹೇಳಿರುವ ಹಾಗೆ, ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ 300-900(900 ಗರಿಷ್ಠ ಸಾಧ್ಯ ಸ್ಕೋರ್ ಆಗಿದೆ)ಮಧ್ಯದ ಒಂದು ಸಂಖ್ಯೆಯಾಗಿದೆ. ಸಣ್ಣ ಉದ್ಯಮಗಳು ಕೂಡಾ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರಬಹುದು, ಹಾಗೂ ಇದನ್ನು 0 ಇಂದ 300 ರ ವ್ಯಾಪ್ತಿಯಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ.

ಕ್ರೆಡಿಟ್ ಸ್ಕೋರ್ ಅನ್ನು ಒಂದು ಆಲ್ಗಾರಿದ್ಮ್ ಅಥವಾ ಕ್ರಮಾವಳಿಯ ಮೂಲಕ ಲೆಕ್ಕಾಚಾರ ಮಾಡಲಾಗುತ್ತದೆ. ಇದು ನಿಮ್ಮ ಪಾವತಿಯ ಇತಿಹಾಸ, ನಿಮ್ಮ ಸಾಲದ ಮೊತ್ತ, ಹಾಗೂ ನಿಮ್ಮ ಕ್ರೆಡಿಟ್ ಇತಿಹಾಸದ ಅವಧಿಯಂತಹ ಮಾಹಿತಿಯನ್ನು ಬಳಸುತ್ತದೆ. ಇಲ್ಲಿ ಪರಿಗಣಿಸಲಾಗುವ ಅಂಶಗಳು ಈ ರೀತಿ ಇವೆ:

  • ಪಾವತಿಯ ಇತಿಹಾಸ
  • ಸಾಲದ ಬಳಕೆ
  • ಕ್ರೆಡಿಟ್ ಅವಧಿ
  • ಹೊಸ ಕ್ರೆಡಿಟ್ ವಿಚಾರಣೆಗಳು
  • ಕ್ರೆಡಿಟ್ ಮಿಕ್ಸ್

ಭಾರತದಲ್ಲಿ ಕ್ರೆಡಿಟ್ ಸ್ಕೋರ್ ಗಳ ಬಗ್ಗೆ ತಿಳಿಯಬೇಕಾದದ್ದು ಏನಿದೆ?

ಭಾರತದಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​​ಬಿಐ) ನಾಲ್ಕು ಪರವಾನಗಿ ಪಡೆದ ಕ್ರೆಡಿಟ್ ಮಾಹಿತಿ ಕಂಪೆನಿಗಳನ್ನು ಹೊಂದಿದೆ:

  • ಟ್ರಾನ್ಸ್ಯೂನಿಯನ್ ಕ್ರೆಡಿಟ್ ಮಾಹಿತಿ ಬ್ಯೂರೋ (ಇಂಡಿಯಾ) ಲಿಮಿಟೆಡ್ (ಸಿಬಿಲ್) - ಇದು ಭಾರತದ ಮೊದಲ ಕ್ರೆಡಿಟ್ ಮಾಹಿತಿ ಕಂಪನಿಗಳಲ್ಲಿ ಒಂದಾಗಿದೆ ಹಾಗೂ ಇದರ ಕ್ರೆಡಿಟ್ ಸ್ಕೋರ್(ಜನಪ್ರಿಯವಾಗಿ ಸಿಬಿಲ್ ಸ್ಕೋರ್ ಎಂದು ಕರೆಯಲ್ಪಡುತ್ತದೆ) ನ ವ್ಯಾಪ್ತಿ 300 ಮತ್ತು 900 ರ ಮಧ್ಯೆ ಇರುತ್ತದೆ.
  • ಕ್ರಿಫ್ ಹೈಮಾರ್ಕ್ - ಈ ಸಂಪೂರ್ಣ-ಸೇವಾ ಕ್ರೆಡಿಟ್ ಮಾಹಿತಿ ಬ್ಯೂರೋವನ್ನು 2007 ರಲ್ಲಿ ಸ್ಥಾಪಿಸಲಾಯಿತು. ಕ್ರಿಫ್ ಕ್ರೆಡಿಟ್ ಸ್ಕೋರ್ ನ ವ್ಯಾಪ್ತಿಯು 300 ಮತ್ತು 900 ರ ಮಧ್ಯೆ ಇರುತ್ತದೆ.
  • ಎಕ್ಸ್‌ಪೀರಿಯನ್ - ಈ ಬಹುರಾಷ್ಟ್ರೀಯ ಕ್ರೆಡಿಟ್ ರಿಪೋರ್ಟಿಂಗ್ ಕಂಪನಿಯನ್ನು ಭಾರತದಲ್ಲಿ 2010 ರಲ್ಲಿ ಸ್ಥಾಪಿಸಲಾಯಿತು. ಎಕ್ಸ್‌ಪೀರಿಯನ್ ನ ಕ್ರೆಡಿಟ್ ಸ್ಕೋರ್ ಗಳು 300 ಮತ್ತು 850 ರ ವ್ಯಾಪ್ತಿಯಲ್ಲಿರುತ್ತವೆ.
  • ಈಕ್ವಿಫ್ಯಾಕ್ಸ್ - ಈ ಕ್ರೆಡಿಟ್ ಮಾಹಿತಿ ಕಂಪೆನಿಯು ಈಕ್ವಿಫ್ಯಾಕ್ಸ್ ಇಂಕ್. ಯುಎಸ್ಎ ಮತ್ತು ಭಾರತದ ಅಗ್ರಸ್ಥಾನೀಯ ಹಣಕಾಸಿನ ಸಂಸ್ಥೆಗಳ ಜೊತೆಗಿನ ಜಂಟಿ ಉದ್ಯಮವಾಗಿದೆ. ಈಕ್ವಿಫ್ಯಾಕ್ಸ್ ನ ಕ್ರೆಡಿಟ್ ಸ್ಕೋರ್ ಗಳು 300 ಮತ್ತು 850 ರ ವ್ಯಾಪ್ತಿಯಲ್ಲಿರುತ್ತವೆ.

ನಿಮ್ಮ ಸಾಲದ ಅಪ್ಲಿಕೇಶನ್ ನ ಮೌಲ್ಯಮಾಪನದ ಸಂದರ್ಭದಲ್ಲಿ, ಬ್ಯಾಂಕ್ ಹಾಗೂ ಹಣಕಾಸಿನ ಸಂಸ್ಥೆಗಳು ಈ ಅಧಿಕೃತ ಕ್ರೆಡಿಟ್ ಬ್ಯೂರೋಗಳೊಂದಿಗೆ ವಿಚಾರಿಸಿ, ನಿಮ್ಮ ಹಾಗೂ ನಿಮ್ಮ ಉದ್ಯಮದ ಕ್ರೆಡಿಟ್ ಇತಿಹಾಸದ ಬಗ್ಗೆ ಒಂದು ಸಂಕ್ಷಿಪ್ತವಾದ ಕ್ರೆಡಿಟ್ ರಿಪೋರ್ಟ್ ಅನ್ನು ಪಡೆಯಬಹುದಾಗಿದೆ.

ಒಂದು ಒಳ್ಳೆಯ ಕ್ರೆಡಿಟ್ ಸ್ಕೋರ್ ಎಂದರೇನು?

 

ಕ್ರೆಡಿಟ್ ಸ್ಕೋರ್ ಲೆಕ್ಕಾಚಾರ ಮಾಡುವಾಗ ಬೇರೆ ಬೇರೆ ಕ್ರೆಡಿಟ್ ಬ್ಯೂರೋಗಳು ಭಿನ್ನವಾದ ಸ್ಕೋರಿಂಗ್ ಮಾದರಿಗಳನ್ನು ಬಳಸುತ್ತವೆ, ಹೀಗಾಗಿ ಯಾವ ಕ್ರೆಡಿಟ್ ಬ್ಯೂರೋ ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ತಯಾರಿಸುತ್ತದೆ ಎಂಬ ಆಧಾರದ ಮೇಲೆ ನಿಮ್ಮ ಕ್ರೆಡಿಟ್ ಸ್ಕೋರ್ ನಲ್ಲಿ ಬದಲಾವಣೆಗಳಾಗಬಹುದು. ಸಾಮಾನ್ಯವಾಗಿ, ಕ್ರೆಡಿಟ್ ಸ್ಕೋರ್ ವ್ಯಾಪ್ತಿಗಳು ಈ ರೀತಿ ಇವೆ:

300-579 ಕಳಪೆ
580-669 ಸಾಧಾರಣ
670-739 ಒಳ್ಳೆಯ
740-799 ಉತ್ತಮ
800-850 ಅತ್ಯುತ್ತಮ

ಸಾಮಾನ್ಯವಾಗಿ 700-750 ರ ಕ್ರೆಡಿಟ್ ಸ್ಕೋರ್ ಅನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ.

ಅದಾಗ್ಯೂ, ಪ್ರತೀ ಸಾಲದಾತ ಸಂಸ್ಥೆಯು ಅದರದ್ದೇ ಆದ ಸ್ವಂತ ಅಪಾಯದ ಶ್ರೇಣೀಕರಣ ವನ್ನು ಹೊಂದಿರುತ್ತದೆ. ಉದಾರಹರಣೆಗೆ, ಒಂದು ಬ್ಯಾಂಕ್ 700 ಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಿದರೂ, ಮತ್ತೊಂದು ಬ್ಯಾಂಕ್ 750 ಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಬಹುದು. ಸಾಮಾನ್ಯವಾಗಿ, ಹೆಚ್ಚಿನ ಸಂದರ್ಭಗಳಲ್ಲಿ 750 ರಿಂದ 800 ರ ಸ್ಕೋರ್ ಅನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಲಾಗುವುದು.

ನಿಮಗೆ ಒಂದು ಒಳ್ಳೆಯ ಕ್ರೆಡಿಟ್ ಸ್ಕೋರ್ ಏಕೆ ಅಗತ್ಯವಾಗುತ್ತದೆ?

ಬ್ಯಾಂಕ್ ಹಾಗೂ ಇತರ ಸಾಲದಾತ ಸಂಸ್ಥೆಗಳು, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಬಳಸಿ ನೀವು ಕ್ರೆಡಿಟ್ ಅನುಮೋದನೆಗಳಿಗೆ ಎಷ್ಟು ಅರ್ಹರು ಎಂದು ನಿರ್ಣಯಿಸುವುದರಿಂದ, ನೀವು ಒಂದು ಒಳ್ಳೆಯ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುವುದು ಬಹಳ ಮುಖ್ಯವಾಗುತ್ತದೆ.

ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ನೀವು ಈ ಹಿಂದೆ ಜವಾಬ್ದಾರಿಯುತ ಕ್ರೆಡಿಟ್ ವರ್ತನೆಯನ್ನು ಪ್ರದರ್ಶಿಸಿದ್ದೀರಿ ಎಂದರ್ಥ. ಇದು ನಿಮ್ಮ ಸಾಲ ಹಾಗೂ ಇತರ ಕ್ರೆಡಿಟ್ ಮನವಿಗಳನ್ನು ಹೆಚ್ಚಿನ ವಿಶ್ವಾಸದೊಂದಿಗೆ ಅನುಮೋದಿಸಲು ನಿಮ್ಮ ಸಂಭಾವ್ಯ ಸಾಲದಾತರಿಗೆ ಸಹಾಯ ಮಾಡುತ್ತದೆ. ಇದರೊಂದಿಗೆ ನಿಮಗೆ ಕಡಿಮೆ ಬಡ್ಡಿ ದರ, ಸುಧಾರಿತ ಮರುಪಾವತಿ ನಿಯಮಗಳು, ಮತ್ತು ಶೀಘ್ರ ಸಾಲ ಅನುಮೋದನೆ ಪ್ರಕ್ರಿಯೆಯಂತಹ ಪ್ರಯೋಜನಗಳೂ ದೊರೆಯುತ್ತವೆ.

ವಿಭಿನ್ನ ಸಾಲದಾತರು ನಿಮ್ಮ ಕ್ರೆಡಿಟ್ ಸ್ಕೋರ್ ನ ಭಿನ್ನವಾದ ಅಂಶಗಳಿಗೆ ಮಹತ್ವ ನೀಡಬಹುದು, ಉದಾಹರಣೆಗೆ ನಿಮ್ಮ ಆದಾಯ ಅಥವಾ ನಿಮ್ಮ ಪಾವತಿ ಇತಿಹಾಸ.

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದು ಹೇಗೆ?

ಭಾರತೀಯ ರಿಸರ್ವ್ ಬ್ಯಾಂಕ್, ಎಲ್ಲಾ ನಾಲ್ಕು ಪರವಾನಗಿ ಪಡೆದ ಕ್ರೆಡಿಟ್ ಮಾಹಿತಿ ಕಂಪೆನಿಗಳಿಗೆ ನಿಮಗಾಗಿ ಆನ್ಲೈನ್ ಕ್ರೆಡಿಟ್ ಸ್ಕೋರ್ ಪರಿಶೀಲಿಸುವ ಸೌಲಭ್ಯ ನೀಡುವುದನ್ನು, ಹಾಗೂ ಪ್ರತೀ ವರ್ಷ ಒಂದು ಉಚಿತ ಕ್ರೆಡಿಟ್ ಸ್ಕೋರ್ ರಿಪೋರ್ಟ್ ಅನ್ನು ಒದಗಿಸುವುದನ್ನು ಕಡ್ಡಾಯಗೊಳಿಸಿದೆ.

ಅದನ್ನು ಉಚಿತವಾಗಿ ಪರಿಶೀಲಿಸುವ ವಿಧಾನ ಈ ರೀತಿ ಇದೆ:

  • ಹಂತ 1: ಕ್ರೆಡಿಟ್ ರೇಟಿಂಗ್ ಕಂಪೆನಿಯ ವೆಬ್ಸೈಟ್, ಉದಾಹರಣೆಗೆ ಸಿಬಿಲ್ ವೆಬ್ಸೈಟ್,ಅಥವಾ ಕ್ರಿಫ್ ಹೈಮಾರ್ಕ್ ವೆಬ್ಸೈಟ್ಗೆ ಭೇಟಿ ನೀಡಿ
  • ಹಂತ 2: ನಿಮ್ಮ ಲಾಗಿನ್ ಗುರುತುಗಳೊಂದಿಗೆ ಲಾಗಿನ್ ಮಾಡಿ, ಅಥವಾ ನಿಮ್ಮ ಮಾಹಿತಿಯನ್ನು(ನಿಮ್ಮ ಹೆಸರು, ಸಂಪರ್ಕ ಸಂಖ್ಯೆ, ಮತ್ತು ಈ-ಮೇಲ್ ವಿಳಾಸದಂತೆ) ಬಳಸಿ ಒಂದು ಅಕೌಂಟ್ ಅನ್ನು ರಚಿಸಿ.
  • ಹಂತ 3: ಪಾನ್ ಸಂಖ್ಯೆ ಅಥವಾ ಯುಐಡಿ ಅನ್ನು ಒಳಗೊಂಡ ನಿಮ್ಮ ವಿವರಗಳೊಂದಿಗೆ, ನೀಡಲಾದ ಫಾರ್ಮ್ ಅನ್ನು ಭರ್ತಿ ಮಾಡಿ
  • ಹಂತ 4: ಈ ಪ್ರಕ್ರಿಯೆಯು ಪೂರ್ಣವಾದ ನಂತರ, ಫಾರ್ಮ್ ಅನ್ನು ಸಲ್ಲಿಸಿ
  • ಹಂತ 5: ನಂತರ, ನಿಮ್ಮ ನೋಂದಾಯಿತ ಈ-ಮೇಲ್ ವಿಳಾಸಕ್ಕೆ ಒಂದು ಈ-ಮೇಲ್ ದೊರೆಯುವುದು ಹಾಗೂ ಇದನ್ನು ಬಳಸಿ ನೀವು ನಿಮ್ಮ ಗುರುತನ್ನು ಪರಿಶೀಲಿಸಬಹುದು.
  • ಹೆಜ್ಜೆ 6: ಒಮ್ಮೆ ಪರಿಶೀಲನೆಯಾದ ನಂತರ, ನಿಮಗೆ ನಿಮ್ಮ ಸಾಲಗಳ ಮತ್ತು ಕ್ರೆಡಿಟ್ ಕಾರ್ಡ್ ಗಳ ಬಗ್ಗೆ ಕೆಲವು ಆವಶ್ಯಕ ಹೆಚ್ಚುವರಿ ಮಾಹಿತಿಯನ್ನು ಕೇಳಲಾಗುವುದು,
  • ಹೆಜ್ಜೆ 7: ಇದಾದ ಬಳಿಕ, ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ನಿಮ್ಮ ನೊಂದಾಯಿತ ಈ-ಮೇಲ್ ಐಡಿ ಗೆ ಕಳಿಸಲಾಗುವುದು.

ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ನೋಡಲು ಬಯಸಿದರೆ, ಕೆಲ ಕ್ರೆಡಿಟ್ ಬ್ಯುರೋಗಳು ಪಾವತಿ ಇರುವ ಮಾಸಿಕ ವರದಿಗಳೊಂದಿಗೆ ನಿಮಗೆ ಆ ಅವಕಾಶವನ್ನು ನೀಡುತ್ತವೆ. ಇದಲ್ಲದೆ, ಸಾಲ ಅಥವಾ ಕ್ರೆಡಿಟ್ ಕಾರ್ಡ್ ಗೆ ಅಪ್ಲಿಕೇಶನ್ ಸಲ್ಲಿಸುವುದಕ್ಕಿಂತ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದು ಒಂದು ಉತ್ತಮ ಕ್ರಮವಾಗಿದೆ.

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮಗೊಳಿಸುವುದು ಹೇಗೆ?

ಕಳಪೆ ಸ್ಕೋರ್ ಗಳನ್ನು ತಪ್ಪಿಸಿ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಿರುವುದನ್ನು ದೃಢಪಡಿಸಲು, ಯಾವ ಅಂಶಗಳು ಅದರ ಮೇಲೆ ಪರಿಣಾಮ ಬೀರುತ್ತವೆ ಎಂದು ತಿಳಿದಿರುವುದು ಮುಖ್ಯವಾಗುತ್ತದೆ. ಇದರಲ್ಲಿ, ತಡವಾದ ಪಾವತಿ ಅಥವಾ ಪಾವತಿಗಳ ತಪ್ಪಿಸುವಿಕೆ ಅಥವಾ ಹೆಚ್ಚಿನ ಸಾಲದ ಬಳಕೆ(ಅಥವಾ ಅತಿಯಾಗಿ ಕ್ರೆಡಿಟ್ ಕಾರ್ಡ್ ಮಿತಿಯನ್ನು ಬಳಸುವುದು) ಗಳಂತಹ ಕೆಲಸಗಳಿಂದ ದೂರವಿರುವುದು ಸೇರಿದೆ. 

ಕ್ರೆಡಿಟ್ ಸ್ಕೋರ್ ಅನ್ನು ಉತ್ತಮಗೊಳಿಸುವ ಕೆಲ ವಿಧಾನಗಳು ಈ ರೀತಿ ಇವೆ:

  • ನಿಮ್ಮ ಮಾಸಿಕ ಕಂತುಗಳನ್ನು (ಇಎಂಐಗಳನ್ನು) ಮತ್ತು ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಸರಿಯಾದ ಸಮಯದಲ್ಲಿ ಪಾವತಿಸಿ.
  • ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಅತಿಯಾಗಿ ಬಳಸಬೇಡಿ, ಹಾಗೂ ನಿಮ್ಮ ಸಾಲದ ಬಳಕೆಯ ಅನುಪಾತವನ್ನು(ಸಿಯುಆರ್) 30 ಪ್ರತಿಶತದೊಳಗೆ ಇರಿಸಿ.
  • ಅಲ್ಪಾವಧಿಯಲ್ಲಿ ಹಲವು ಸಾಲಗಳಿಗೆ ಅಥವಾ ಕ್ರೆಡಿಟ್ ಕಾರ್ಡ್ ಗಳಿಗೆ ಅಪ್ಲಿಕೇಶನ್ ಸಲ್ಲಿಸುವುದನ್ನು ತಪ್ಪಿಸಿ.
  • ನೀವು ಏನನ್ನು ನಿರೀಕ್ಷಿಸಬಹುದು ಎಂದು ನಿಖರವಾಗಿ ತಿಳಿದಿರಲು ಆಗಾಗ ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ಪರಿಶೀಲಿಸುತ್ತಿರಿ.
  • ಅತ್ಯಗತ್ಯವಾಗಿರುವವರೆಗೂ, ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್ ಗಳನ್ನು ರದ್ದುಗೊಳಿಸಬೇಡಿ, ಕಾರಣ ನೀವು ನಿಮ್ಮ ಬಿಲ್ ಗಳನ್ನು ಸರಿಯಾದ ಸಮಯದಲ್ಲಿ ಪಾವತಿಸುತ್ತಿದ್ದೀರಿ ಎಂಬ ವಿಶ್ವಾಸವನ್ನು ನಿಮ್ಮ ಹಳೆಯ ಕಾರ್ಡ್ ಗಳು ಸಾಲದಾತರಿಗೆ ನೀಡುತ್ತದೆ.

ಕ್ರೆಡಿಟ್ ಸ್ಕೋರ್, ನಿಮ್ಮ ಋಣ, ಕ್ರೆಡಿಟ್ ಕಾರ್ಡ್ ಬಿಲ್ , ಅಥವಾ ಸಾಲವನ್ನು, ಅಂದರೆ., ನಿಮ್ಮ "ಕ್ರೆಡಿಟ್ ರಿಸ್ಕ್ " ಅನ್ನು, ಮರುಪಾವತಿಸುವ ಸಾಮರ್ಥ್ಯದ ಮೌಲ್ಯಮಾಪನವನ್ನು ಮಾಡುವ ಒಂದು ಸಂಖ್ಯೆಯಾಗಿದೆ.

ಒಂದು ಉತ್ತಮ ಕ್ರೆಡಿಟ್ ಸ್ಕೋರ್ ನಿಮಗೆ ಕಡಿಮೆ ಬಡ್ಡಿ ದರದಂತಹ ಹಲವು ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುವುದು. ಇನ್ನೊಂದೆಡೆ, ಒಂದು ಕಳಪೆ ಕ್ರೆಡಿಟ್ ಸ್ಕೋರ್ (ಇದು ತಪ್ಪಿದ ಪಾವತಿ, ಕ್ರೆಡಿಟ್ ಕಾರ್ಡ್ ಮಿತಿಯ ಅತಿಯಾದ ಬಳಕೆಯಂತಹ ಅಂಶಗಳ ಪರಿಣಾಮವಾಗಿರುತ್ತದೆ) ಹೊಂದಿರುವುದರಿಂದ ನಿಮ್ಮ ಸಾಲದ ಅರ್ಜಿಯು ತಿರಸ್ಕೃತವಾಗಬಹುದು.

ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿರಿಸಿ, ಅಗತ್ಯ ಬಿದ್ದಾಗವೆಲ್ಲಾ ಈ ಕ್ರೆಡಿಟ್ ಅವಕಾಶಗಳನ್ನು ಪಡೆಯುವ ಸಾಧ್ಯತೆಗಳನ್ನು ಖಚಿತಪಡಿಸಬಹುದು.