ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಕ್ರೆಡಿಟ್ ಸ್ಕೋರ್ ಅನ್ನು ಆನ್‌ಲೈನ್‌ ಆಗಿ ಪರಿಶೀಲಿಸುವುದು ಹೇಗೆ?

Source: slideshare

ಕ್ರೆಡಿಟ್ ಸ್ಕೋರ್ 300 ಮತ್ತು 900 ಮಧ್ಯದ ಮೂರು ಡಿಜಿಟ್ ನ ಸಂಖ್ಯೆಯಾಗಿದೆ. ಒಬ್ಬ ವ್ಯಕ್ತಿಯ ಅಥವಾ ವ್ಯವಹಾರದ "ಕ್ರೆಡಿಟ್ ಅರ್ಹತೆ"ಯನ್ನು ಅಳೆಯಲು ಇದನ್ನು ಬ್ಯಾಂಕ್ ಹಾಗೂ ಇತರ ಸಾಲದಾತ ಸಂಸ್ಥೆಗಳಲ್ಲಿ ಬಳಸಲಾಗುತ್ತದೆ. ಇದು ಒಬ್ಬ ವ್ಯಕ್ತಿಯು ಸಾಲ ಅಥವಾ ಋಣ ರೂಪದಲ್ಲಿ ಪಡೆದ ಕ್ರೆಡಿಟ್ ಅನ್ನು ಮರುಪಾವತಿಸುವ ಅವರ ಅರ್ಹತೆಯನ್ನು ಉಲ್ಲೇಖಿಸುತ್ತದೆ.

ಒಂದು ಒಳ್ಳೆಯ ಕ್ರೆಡಿಟ್ ಸ್ಕೋರ್ ಮಹತ್ವಪೂರ್ಣವಾಗಿದೆ, ಏಕೆಂದರೆ ಇದು ಸಂಭಾವ್ಯ ಸಾಲದಾತರಿಗೆ ನೀವು ಮನವಿ ಸಲ್ಲಿಸಿರುವ ಸಾಲ ಅಥವಾ ಇತರ ಕ್ರೆಡಿಟ್ ಗಳಿಗೆ ಅನುಮೋದನೆಯನ್ನು ನೀಡಲು ಹೆಚ್ಚಿನ ಭರವಸೆಯನ್ನು ನೀಡುತ್ತದೆ.

ಭಾರತದಲ್ಲಿ, ಈ ಕ್ರೆಡಿಟ್ ಸ್ಕೋರ್ ಅನ್ನು ಲೆಕ್ಕಾಚಾರ ಮಾಡುವ ನಾಲ್ಕು ಕ್ರೆಡಿಟ್ ಮಾಹಿತಿ ಬ್ಯೂರೋಗಳಿವೆ - ಟ್ರಾನ್ಸ್‌ಯೂನಿಯನ್ ಸಿಬಿಲ್, ಎಕ್ಸ್‌ಪೀರಿಯನ್, ಕ್ರಿಫ್ ಹೈಮಾರ್ಕ್ ಮತ್ತು ಈಕ್ವಿಫ್ಯಾಕ್ಸ್. ಭಾರತೀಯ ರಿಸರ್ವ್ ಬ್ಯಾಂಕ್ ಈ ನಾಲ್ಕು ಕಂಪನಿಗಳಿಗೆ ಆನ್‌ಲೈನ್‌ ಆಗಿ ಕ್ರೆಡಿಟ್ ಸ್ಕೋರ್‌ಗಳನ್ನು ಸುಲಭವಾಗಿ ಪರಿಶೀಲಿಸುವ ಅನುಕೂಲವನ್ನು ಒದಗಿಸುವುದನ್ನು ಕಡ್ಡಾಯಗೊಳಿಸಿದೆ. ಅವರು ಪ್ರತಿ ವರ್ಷವೂ ಒಂದು ಉಚಿತ ಕ್ರೆಡಿಟ್ ಸ್ಕೋರ್ ವರದಿಯನ್ನು ಒದಗಿಸಬೇಕಾಗುತ್ತದೆ.

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉಚಿತವಾಗಿ ಪರಿಶೀಲಿಸಲು ವಿವಿಧ ಮಾರ್ಗಗಳು

1. ನೇರವಾಗಿ ಕ್ರೆಡಿಟ್ ಬ್ಯೂರೋ ವೆಬ್‌ಸೈಟ್‌ಗಳಿಂದ

ಮೇಲೆ ಹೇಳಿರುವಂತೆ, ಕ್ರೆಡಿಟ್ ಮಾಹಿತಿ ಬ್ಯೂರೋಗಳು ಒಂದು ಉಚಿತ ಕ್ರೆಡಿಟ್ ಸ್ಕೋರ್ ಪರಿಶೀಲನೆಯನ್ನು ಅನುಮತಿಸುತ್ತದೆ. ಕ್ರೆಡಿಟ್ ಬ್ಯೂರೋದ ವೆಬ್‌ಸೈಟ್ ಮೂಲಕ ಇದನ್ನು ಸುಲಭವಾಗಿ ಮಾಡಬಹುದಾಗಿದೆ.

ಈ ಹಂತಗಳನ್ನು ಅನುಸರಿಸಬೇಕಾಗುತ್ತದೆ:

  • ಹಂತ 1: ಕ್ರೆಡಿಟ್ ರೇಟಿಂಗ್ ಕಂಪೆನಿಯ ವೆಬ್‌ಸೈಟ್ ಗೆ ಭೇಟಿ ನೀಡಿ, ಉದಾಹರಣೆಗೆ ಸಿಬಿಲ್ ವೆಬ್‌ಸೈಟ್,ಅಥವಾ ಕ್ರಿಫ್ ಹೈಮಾರ್ಕ್ ವೆಬ್‌ಸೈಟ್

  • ಹಂತ 2: ನಿಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಲಾಗಿನ್ ಮಾಡಿ ಅಥವಾ ಹೊಸ ಖಾತೆಯನ್ನು ರಚಿಸಿ. ಇದನ್ನು ಮಾಡಲು, ನಿಮ್ಮ ಹೆಸರು, ಸಂಪರ್ಕ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನೀವು ಬಳಸಬೇಕಾಗುತ್ತದೆ.

  • ಹಂತ 3: ನಿಮ್ಮ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್‌ನಂತಹ ಐಡಿ ಪುರಾವೆಯನ್ನು ಸಹ ನೀವು ಲಗತ್ತಿಸಬೇಕಾಗುತ್ತದೆ

  • ಹಂತ 4: ಇದು ಪೂರ್ಣಗೊಂಡ ನಂತರ ಫಾರ್ಮ್ ಅನ್ನು ಸಲ್ಲಿಸಿ.

  • ಹಂತ 5: ನಂತರ ನೀವು ನಿಮ್ಮ ನಿಮ್ಮ ಗುರುತನ್ನು ಪರಿಶೀಲಿಸಲು ನಿಮ್ಮ ನೋಂದಾಯಿತ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಗೆ ಒಟಿಪಿ ಅನ್ನು ಸ್ವೀಕರಿಸಬೇಕು.

  • ಹಂತ 6: ಒಮ್ಮೆ ಪರಿಶೀಲಿಸಿದ ನಂತರ, ನೀವು ಲಾಗ್ ಇನ್ ಮಾಡಬಹುದು ಮತ್ತು ಡ್ಯಾಶ್‌ಬೋರ್ಡ್‌ಗೆ ಹೋಗಬಹುದು.

  • ಹಂತ 7: ನಿಮ್ಮ ಸಾಲಗಳ ಮತ್ತು ಕ್ರೆಡಿಟ್ ಕಾರ್ಡ್‌ಗಳ ಕುರಿತು ಪ್ರಶ್ನೆಗಳಂತಹ ಹೆಚ್ಚುವರಿ ಮಾಹಿತಿಯ ಅಗತ್ಯವಿರಬಹುದು. 

  • ಹಂತ 8: ಇದು ಪೂರ್ಣಗೊಂಡ ನಂತರ, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸ್ಕ್ರೀನ್ ಮೇಲೆ ವೀಕ್ಷಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ನಿಮ್ಮ ಸಂಪೂರ್ಣ ಕ್ರೆಡಿಟ್ ವರದಿಯನ್ನು ನಿಮ್ಮ ನೋಂದಾಯಿತ ಈ ಮೇಲ್ ಐಡಿ ಗೆ ತಲುಪಿಸಲಾಗುತ್ತದೆ.

ಈ ರೀತಿಯ ಉಚಿತ ಅಕೌಂಟ್ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ವರ್ಷಕ್ಕೊಮ್ಮೆ ಮಾತ್ರ ಪರಿಶೀಲಿಸಲು ನಿಮಗೆ ಅನುಮತಿ ನೀಡುತ್ತದೆ ಎಂಬುದನ್ನು ನೆನಪಿಡಿ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೀವು ಒಂದಕ್ಕಿಂತ ಹೆಚ್ಚು ಬಾರಿ ಪರಿಶೀಲಿಸಲು ಬಯಸಿದರೆ, ನೀವು ಪಾವತಿಸಿದ ಖಾತೆ ಅಥವಾ ಪಾವತಿಸಿದ ಮಾಸಿಕ ವರದಿಗಳೊಂದಿಗೆ ಹಾಗೆ ಮಾಡಬಹುದಾಗಿದೆ.

2. ನಿಮ್ಮ ಬ್ಯಾಂಕ್ ನಿಂದ

ಹಲವಾರು ಬ್ಯಾಂಕ್‌ಗಳು ಗ್ರಾಹಕರಿಗೆ ತಮ್ಮ ವೆಬ್‌ಸೈಟ್‌ಗಳ ಮೂಲಕ ವರ್ಷಕ್ಕೊಮ್ಮೆ ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉಚಿತವಾಗಿ ಪರಿಶೀಲಿಸಲು ಅವಕಾಶ ನೀಡುತ್ತವೆ. ನಿಮ್ಮ ಬ್ಯಾಂಕ್ ಈ ಸೌಲಭ್ಯವನ್ನು ಒದಗಿಸುತ್ತದೆಯೇ ಎಂದು ಅವರಲ್ಲಿ ನೀವು ಕೇಳಬಹುದು.

ಇದು ಲಭ್ಯವಿದ್ದರೆ, ನಿಮ್ಮ ಬ್ಯಾಂಕಿನ ನೆಟ್‌ಬ್ಯಾಂಕಿಂಗ್ ವೆಬ್‌ಸೈಟ್‌ನಲ್ಲಿ ಅಥವಾ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೀವು ಈ ವೈಶಿಷ್ಟ್ಯವನ್ನು ಕಾಣಬಹುದು.

3. ಥರ್ಡ್ ಪಾರ್ಟಿ ಆಪ್ ಗಳನ್ನು ಬಳಸುವುದು

ನೋಂದಾಯಿತ ಬಳಕೆದಾರರು ತಮ್ಮ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಅನ್ನು ಉಚಿತವಾಗಿ ಪರಿಶೀಲಿಸಲು ಅನುಮತಿಸುವ ಕೆಲವು ಅಪ್ಲಿಕೇಶನ್‌ಗಳಿವೆ. ಈ ಅಪ್ಲಿಕೇಶನ್‌ಗಳ ಪಾವತಿಸಿದ ಆವೃತ್ತಿಗಳು ನಿಮ್ಮ ಕ್ರೆಡಿಟ್ ಪ್ರೊಫೈಲ್‌ನಲ್ಲಿಯ ಬದಲಾವಣೆಗಳ ಮೇಲ್ವಿಚಾರಣೆ ಮಾಡಲು, ದೈನಂದಿನ ನವೀಕರಣಗಳನ್ನು ಪಡೆಯಲು ಮತ್ತು ಹೆಚ್ಚಿನ ಚಟುವಟಿಕೆಗಳನ್ನು ಸಹ ನಿಮಗೆ ಅನುಮತಿಸುತ್ತದೆ.

ಇಂತಹ ಕೆಲವು ಅಪ್ಲಿಕೇಶನ್ ಗಳು ಇಲ್ಲಿವೆ:

  •  ಸಿಬಿಲ್ - ಸಿಬಿಲ್ ಆಪ್ ನಾಲ್ಕು ಪ್ರಮುಖ ಕ್ರೆಡಿಟ್ ಬ್ಯೂರೋಗಳಲ್ಲಿ ಒಂದರಿಂದ ಬರುತ್ತದೆ. ಇದು ನಿಮ್ಮ ಸಿಬಿಲ್ ಸ್ಕೋರ್ ಮತ್ತು ಕ್ರೆಡಿಟ್ ವರದಿಯನ್ನು ಪ್ರತಿ 24 ಗಂಟೆಗಳಿಗೊಮ್ಮೆ ಪರಿಶೀಲಿಸಲು ಅನುಮತಿಸುತ್ತದೆ, ಜೊತೆಗೆ ನಿಮ್ಮ ಕ್ರೆಡಿಟ್ ಪ್ರೊಫೈಲ್‌ ನಲ್ಲಾದ ಬದಲಾವಣೆಗಳ, ನಿಮಗೆ ಅನುಗುಣವಾದ ಸಾಲದ ಕೊಡುಗೆಗಳು ಮತ್ತು ಹೆಚ್ಚಿನವುಗಳ ಬಗ್ಗೆ ಎಚ್ಚರಿಕೆಗಳನ್ನು ಪಡೆಯುತ್ತದೆ. 

  • ಎಕ್ಸ್‌ಪೀರಿಯನ್ - ಪ್ರಮುಖ ಕ್ರೆಡಿಟ್ ಬ್ಯೂರೋದ ಮತ್ತೊಂದು ಅಪ್ಲಿಕೇಶನ್ ಆದ ಎಕ್ಸ್‌ಪೀರಿಯನ್ ಆಪ್ ನಿಯಮಿತ ಕ್ರೆಡಿಟ್ ರಿಪೋರ್ಟ್ ನವೀಕರಣಗಳನ್ನು ಮತ್ತು ಎಚ್ಚರಿಕೆಯುಳ್ಳ ಕ್ರೆಡಿಟ್ ಮೇಲ್ವಿಚಾರಣೆಯನ್ನು ಒದಗಿಸುತ್ತದೆ. 

  • ಮಿಂಟ್ - ಮಿಂಟ್ ಅಪ್ಲಿಕೇಶನ್ ಬಳಕೆದಾರರು ತಮ್ಮ ಹಣಕಾಸುಗಳನ್ನು ಟ್ರ್ಯಾಕ್ ಮಾಡುವಂತೆ ಅನುಮತಿಸುತ್ತದೆ, ಜೊತೆಗೆ ಕ್ರೆಡಿಟ್ ಸ್ಕೋರ್ ವಿಶ್ಲೇಷಣೆ ಮತ್ತು ಕ್ರೆಡಿಟ್ ಎಚ್ಚರಿಕೆಗಳನ್ನು ಒದಗಿಸುತ್ತದೆ. ಈ ಸ್ಕೋರ್ ಗಳು ಈಕ್ವಿಫ್ಯಾಕ್ಸ್ ಸ್ಕೋರ್ ಗಳನ್ನು ಆಧರಿಸಿವೆ. 

  • ವನ್ಸ್ಕೊರ್ - ವನ್ಸ್ಕೊರ್ ಆಪ್ ಸಿಬಿಲ್ ಮತ್ತು ಎಕ್ಸ್‌ಪೀರಿಯನ್‌ನಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಲು ನಿಮಗೆ ಅನುಮತಿಸುತ್ತದೆ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಸಲಹೆಗಳನ್ನು ನೀಡುತ್ತದೆ ಮತ್ತು ಬದಲಾವಣೆಗಳ ಕುರಿತು ಎಚ್ಚರಿಕೆಗಳನ್ನು ನೀಡುತ್ತದೆ.

  • ಇಂಡಿಯಾಲೆಂಡ್ಸ್ - ಇಂಡಿಯಾಲೆಂಡ್ಸ್ ಭಾರತದ ಮೊದಲ ಕ್ರೆಡಿಟ್ ಸ್ಕೋರ್ ಮತ್ತು ವಿಶ್ಲೇಷಕ ಅಪ್ಲಿಕೇಶನ್ ಗಳಲ್ಲಿ ಒಂದಾಗಿತ್ತು. ಈ ಆಪ್ ನಿಮಗೆ ಉಚಿತವಾಗಿ ಕ್ರೆಡಿಟ್ ಸ್ಕೋರ್ ಪಡೆಯಲು ಸಹಾಯ ಮಾಡುತ್ತದೆ.

  • ಕ್ರೆಡಿಟ್ ಮಂತ್ರಿ -  ಕ್ರೆಡಿಟ್ ಮಂತ್ರಿ ಕ್ರೆಡಿಟ್ ವಿಶ್ಲೇಷಣೆ ಮತ್ತು ಉಚಿತ ಕ್ರೆಡಿಟ್ ಸ್ಕೋರ್ ಅನ್ನು ನಿಮಗೆ ಒದಗಿಸುವ ಒಂದು ಅಪ್ಲಿಕೇಶನ್ ಆಗಿದೆ.

  • ಕ್ರೆಡಿಟ್ ಸ್ಮಾರ್ಟ್ - ಕ್ರೆಡಿಟ್ ಸ್ಮಾರ್ಟ್ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಲೆಕ್ಕಾಚಾರ ಮಾಡುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದ್ದು, ದೈನಂದಿನ ನವೀಕರಣಗಳು, ಹಣಕಾಸು ಭದ್ರತೆಗಳ ಮಾಹಿತಿ ಮತ್ತು ಹೆಚ್ಚಿನದನ್ನು ಒದಗಿಸುತ್ತದೆ.

  • ಇಟಿಮನಿ -ಇಟಿಮನಿ ಅಪ್ಲಿಕೇಶನ್ ಬಳಕೆದಾರರು ತಮ್ಮ ಸ್ಕೋರ್ ಅನ್ನು ತಿಳಿದುಕೊಳ್ಳಲು, ಅದನ್ನು ಸುಧಾರಿಸುವ ಒಳನೋಟಗಳನ್ನು ಪಡೆಯಲು ಮತ್ತು ನಿಮ್ಮ ಸ್ಕೋರ್‌ಗೆ ಹೊಂದಿಕೆಯಾಗುವ ಸೂಕ್ತವಾದ ಸಾಲದ ಕೊಡುಗೆಗಳನ್ನು ಸಹ ನೀಡುತ್ತದೆ.

ನಿಮ್ಮ ವ್ಯವಹಾರಕ್ಕಾಗಿ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದು ಹೇಗೆ?

ವ್ಯಕ್ತಿಗಳಿಗೆ 300-900 ವರೆಗಿನ ಕ್ರೆಡಿಟ್ ಸ್ಕೋರ್‌ಗಳನ್ನು ನಿಗದಿಪಡಿಸಿರುವ ಹಾಗೆ, ಭಾರತದಲ್ಲಿ, ವ್ಯವಹಾರಗಳಿಗೆ ಮತ್ತು ಕಂಪನಿಗಳಿಗೆ 1 ರಿಂದ 10 ರವರೆಗಿನ ಅಂತದ್ದೇ ಆದ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ,1 ಅತ್ಯುತ್ತಮ ಸಂಭವನೀಯ ಶ್ರೇಣಿಯಾಗಿದೆ, ಆದರೆ 10 ಅತ್ಯಂತ ಕೆಟ್ಟದಾಗಿದೆ. ಆದಾಗ್ಯೂ, 1-4 ರ ನಡುವಿನ ಯಾವುದೇ ಶ್ರೇಣಿಯನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ.

ಮತ್ತು ವ್ಯಕ್ತಿಗಳು ತಮ್ಮ ಕ್ರೆಡಿಟ್ ಸ್ಕೋರ್‌ಗಳನ್ನು ಪರಿಶೀಲಿಸುವ ರೀತಿಯಲ್ಲಿ, ಕಂಪನಿಗಳು ತಮ್ಮ ಕಂಪನಿ ಕ್ರೆಡಿಟ್ ವರದಿಯನ್ನು (ಸಿಸಿಆರ್ ) ಪರಿಶೀಲಿಸಬಹುದಾಗಿದೆ. ಈ ವರದಿಗಳನ್ನು ಸಾಮಾನ್ಯವಾಗಿ ಉಚಿತವಾಗಿ ನೀಡಲಾಗುವುದಿಲ್ಲ, ಇದಕ್ಕೆ ಸಣ್ಣ ಶುಲ್ಕದ ಅಗತ್ಯವಿರುತ್ತದೆ ಎಂಬುದನ್ನು ಗಮನಿಸಿ.

ಸಿಬಿಲ್ ವೆಬ್‌ಸೈಟ್ ಮೂಲಕ ಸಿಸಿಆರ್ ಅನ್ನು ಪರಿಶೀಲಿಸಲು ಅನುಸರಿಸಬೇಕಾದ ಹಂತಗಳು ಇಲ್ಲಿವೆ:

  • ಹಂತ 1:ಸಿಬಿಲ್ ವೆಬ್‌ಸೈಟ್‌ನಂತಹ ಕ್ರೆಡಿಟ್ ರೇಟಿಂಗ್ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ.

  • ಹಂತ 2: ಕಾನೂನು ಸಂವಿಧಾನ, ನೋಂದಾಯಿತ ವಿಳಾಸ ಮತ್ತು ಕಂಪನಿಯ ಸಂಪರ್ಕ ವಿವರಗಳು ಮತ್ತು ಸಿಸಿಆರ್ ಅನ್ನು ವಿನಂತಿಸುವ ಅರ್ಜಿದಾರರ ಹೆಸರು ಮತ್ತು ವಿವರಗಳು ಮತ್ತು ಯಾವುದೇ ಹೆಚ್ಚುವರಿ ಮಾಹಿತಿಯೊಂದಿಗೆ ಒದಗಿಸಿದ ಫಾರ್ಮ್ ಅನ್ನು ಭರ್ತಿ ಮಾಡಿ.

  • ಹಂತ 3: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಅಗತ್ಯವಿರುವ ಪಾವತಿಯನ್ನು ಮಾಡಿ.

  • ಹಂತ 4: ಇದು ಪೂರ್ಣಗೊಂಡ ನಂತರ, ಮುಂದಿನ ಹಂತಗಳನ್ನು ಪ್ರವೇಶಿಸಲು ಮತ್ತು ಟ್ರ್ಯಾಕ್ ಮಾಡಲು ಬಳಸಬಹುದಾದ ಅನನ್ಯ ನೋಂದಣಿ ಐಡಿ ಮತ್ತು ವಹಿವಾಟು ಐಡಿ ಅನ್ನು ನಿಮಗೆ ನಿಯೋಜಿಸಲಾಗುತ್ತದೆ.

  • ಹಂತ 5: ನಿಮ್ಮ ಕೆವೈಸಿ ಡಾಕ್ಯುಮೆಂಟುಗಳನ್ನು ಅಪ್‌ಲೋಡ್ ಮಾಡುವುದು ನೀವು ಮಾಡಬೇಕಾದ ಮುಂದಿನ ಕೆಲಸವಾಗಿದೆ.

  • ಹಂತ 6: ಇದು ಪೂರ್ಣಗೊಂಡ ನಂತರ, ನಿಮ್ಮ ನೋಂದಾಯಿತ ಈಮೇಲ್-ಐಡಿಗೆ ನೀವು ಸಿಸಿಆರ್ ಮತ್ತು ಸಿಬಿಲ್ ಶ್ರೇಯಾಂಕವನ್ನು ಸ್ವೀಕರಿಸುತ್ತೀರಿ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ನಿಮ್ಮ ಕ್ರೆಡಿಟ್ ಸ್ಕೋರ್ ನ ಅರ್ಥವೇನು?

ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಕ್ರೆಡಿಟ್ ಅರ್ಹತೆಯ ಮಟ್ಟವನ್ನು ಅಳೆಯುತ್ತದೆ. ಮೂಲಭೂತವಾಗಿ, ಇದು ಬ್ಯಾಂಕ್‌ಗಳು ಮತ್ತು ಸಾಲದಾತ ಸಂಸ್ಥೆಗಳಿಗೆ, ಒಬ್ಬ ವ್ಯಕ್ತಿಯು ಸಾಲಗಳು ಮತ್ತು ಇತರ ಕ್ರೆಡಿಟ್‌ಗಳಲ್ಲಿ ಬೆಪಾವತಿ ಮಾಡುವ ಸಂಭವನೀಯತೆಯನ್ನು ಹೇಳುತ್ತದೆ. ನಿಮ್ಮ ಕ್ರೆಡಿಟ್ ಇತಿಹಾಸ, ಪಾವತಿ ಇತಿಹಾಸ, ಕ್ರೆಡಿಟ್ ಬಳಕೆ ಇತ್ಯಾದಿಗಳನ್ನು ಬಳಸಿಕೊಂಡು ಇದನ್ನು ಲೆಕ್ಕಹಾಕಲಾಗುತ್ತದೆ.

ಸಾಮಾನ್ಯವಾಗಿ, ಹೆಚ್ಚಿನ ಕ್ರೆಡಿಟ್ ಸ್ಕೋರ್ ಬೇಪಾವತಿಯ ಕಡಿಮೆ ಸಂಭವನೀಯತೆಯನ್ನು ಸೂಚಿಸುತ್ತದೆ, ಆದರೆ ಕಡಿಮೆ ಕ್ರೆಡಿಟ್ ಸ್ಕೋರ್ ಬೇಪಾವತಿಯ ಹೆಚ್ಚಿನ ಸಂಭವನೀಯತೆಯನ್ನು ಪ್ರತಿಬಿಂಬಿಸುತ್ತದೆ.

ಒಳ್ಳೆಯ ಕ್ರೆಡಿಟ್ ಸ್ಕೋರ್ ಮತ್ತು ಕಳಪೆ ಕ್ರೆಡಿಟ್ ಸ್ಕೋರ್ ಎಂದರೇನು?

ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ನ ವ್ಯಾಪ್ತಿಯು 300 – 900 ಮಧ್ಯೆ ಇರುತ್ತದೆ. ಸ್ಕೋರ್ ಹೆಚ್ಚಾದಂತೆ ವ್ಯಕ್ತಿಯ ಕ್ರೆಡಿಟ್ ಅರ್ಹತೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ

  • 300-579 - ಕಳಪೆ
  • 580-669 – ಸಾಧಾರಣ
  • 670-739 – ಒಳ್ಳೆಯ
  • 740-799 – ಉತ್ತಮ
  • 800-850 – ಅತ್ಯುತ್ತಮ

700-750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಸಾಮಾನ್ಯವಾಗಿ ಒಳ್ಳೆಯ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ, ಆದರೆ 300 ರಿಂದ 550 ರ ನಡುವಿನ ಸ್ಕೋರ್ ಅನ್ನು ಕಳಪೆ ಎಂದು ಪರಿಗಣಿಸಲಾಗುತ್ತದೆ.

ಅವರ ಕ್ರೆಡಿಟ್ ಸ್ಕೋರ್ ಅನ್ನು ಯಾರು ಪರಿಶೀಲಿಸಬಹುದು?

ಯಾರಾದರೂ ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಬಹುದು. ಹಾಗೆ ಮಾಡಲು ನಿಮಗೆ ಬೇಕಾಗಿರುವುದು ಪ್ಯಾನ್ ಕಾರ್ಡ್ ಸಂಖ್ಯೆ (ಅಥವಾ ಅಂತದ್ದೇ ಆದ ಐಡಿ ಪುರಾವೆ). ಆದಾಗ್ಯೂ, ನೀವು ಹಿಂದೆ ಕ್ರೆಡಿಟ್‌ಗಾಗಿ ಅರ್ಜಿ ಸಲ್ಲಿಸದಿದ್ದರೆ, ನೀವು ಕ್ರೆಡಿಟ್ ಇತಿಹಾಸವನ್ನು ಹೊಂದಿರುವುದಿಲ್ಲ ಮತ್ತು ಆದ್ದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಅಥವಾ ನಗಣ್ಯವಾಗಿ ರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಸಾಲಕ್ಕಾಗಿ ಅಥವಾ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದು ಉತ್ತಮ ಕ್ರಮವಾಗಿದೆ.

ಕ್ರೆಡಿಟ್ ರಿಪೋರ್ಟ್ ಮತ್ತು ಕ್ರೆಡಿಟ್ ಸ್ಕೋರ್ ಮಧ್ಯೆ ಇರುವ ವ್ಯತ್ಯಾಸವೇನು?

ಕ್ರೆಡಿಟ್ ವರದಿ (ಕ್ರೆಡಿಟ್ ಮಾಹಿತಿ ವರದಿ ಅಥವಾ ಸಿಐಆರ್ ಎಂದೂ ಕರೆಯುತ್ತಾರೆ) ಸಾಲಗಳು ಮತ್ತು ಮರುಪಾವತಿಗಳ ವಿವರಗಳೊಂದಿಗಿನ ನಿಮ್ಮ ಕ್ರೆಡಿಟ್ ಇತಿಹಾಸವನ್ನು ಪಟ್ಟಿ ಮಾಡುವ ಡಾಕ್ಯುಮೆಂಟ್ ಆಗಿದೆ. ಕ್ರೆಡಿಟ್ ಸ್ಕೋರ್ 300-900 ನಡುವಿನ ಮೂರು-ಡಿಜಿಟ್ ಸಂಖ್ಯೆಯಾಗಿದೆ (900 ಗರಿಷ್ಠ ಸಾಧ್ಯ ಸ್ಕೋರ್ ಆಗಿದೆ) ಇದನ್ನು ಈ ಡೇಟಾ ಮತ್ತು ಇತರ ಅಸ್ತಿತ ಅಂಶಗಳನ್ನು ಬಳಸಿಕೊಂಡು ಲೆಕ್ಕಾಚಾರ ಮಾಡಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಇಲ್ಲದೆಯೇ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೀವು ಪರಿಶೀಲಿಸಬಹುದೇ?

ಹೌದು, ನೀವು ಎಂದಿಗೂ ಕ್ರೆಡಿಟ್ ಕಾರ್ಡ್ ಹೊಂದಿಲ್ಲದಿದ್ದರೂ ಸಹ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಲು ಸಾಧ್ಯವಿದೆ. ಆದರೆ, ನೀವು ಹಿಂದೆ ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸದಿದ್ದರೆ, ನೀವು ಕ್ರೆಡಿಟ್ ಇತಿಹಾಸವನ್ನು ಹೊಂದಿರುವುದಿಲ್ಲ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಅಥವಾ ನಗಣ್ಯವಾಗಿರುತ್ತದೆ ಎಂಬುದನ್ನು ನೆನಪಿಡಿ.

ನಿಮ್ಮ ಕ್ರೆಡಿಟ್ ವರದಿಯನ್ನು ಯಾರೆಲ್ಲಾ ವೀಕ್ಷಿಸಬಹುದು?

ಒಬ್ಬ ವ್ಯಕ್ತಿಯ ಕ್ರೆಡಿಟ್ ವರದಿಯನ್ನು ಅವರು, ಹಾಗೆಯೇ ಸಾಲದಾತರು ಮತ್ತು ಯಾವುದೇ ಸರ್ಕಾರಿ ಮಾನ್ಯತೆ ಪಡೆದ ನಿಯಂತ್ರಕ ಸಂಸ್ಥೆಗಳು ಪ್ರವೇಶಿಸಬಹುದಾಗಿದೆ.