‘15G ಫಾರ್ಮ್ ಅನ್ನು ಹೇಗೆ ಭರ್ತಿ ಮಾಡುವುದು’ ಎಂಬ ನಿಮ್ಮ ಹುಡುಕಾಟವನ್ನು ಇಲ್ಲಿಗೆ ಕೊನೆಗೊಳಿಸಿ ಮತ್ತು ಕೆಳಗೆ ತಿಳಿಸಲಾದ ಸರಳ ಹಂತಗಳನ್ನು ಅನುಸರಿಸಿ:
ಆನ್ಲೈನ್ ಪ್ರಕ್ರಿಯೆ
ಫಾರ್ಮ್ 15G ಅನ್ನು ಆನ್ಲೈನ್ನಲ್ಲಿ ಸಬ್ಮಿಟ್ ಮಾಡಲು ನಿಮ್ಮ ಬ್ಯಾಂಕ್ ನಿಮಗೆ ಅನುಮತಿ ನೀಡಿದರೆ, ನೀವು ಅದನ್ನು ನೇರವಾಗಿ ಆನ್ಲೈನ್ನಲ್ಲಿ ಸಬ್ಮಿಟ್ ಮಾಡಬಹುದು. ಈ ಸರಳ ಹಂತ-ವಾರು ಗೈಡ್ ಅನ್ನು ಅನುಸರಿಸಿ:
- ಹಂತ 1: ನಿಮ್ಮ ಬ್ಯಾಂಕ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ನಿಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ನೊಂದಿಗೆ ಲಾಗ್ ಇನ್ ಆಗಿ.
- ಹಂತ 2: ಆನ್ಲೈನ್ ಫಿಕ್ಸೆಡ್ ಡೆಪಾಸಿಟ್ ಟ್ಯಾಬ್ ಆಯ್ಕೆಮಾಡಿ. ಇದು ನಿಮ್ಮ ಫಿಕ್ಸ್ಡ್ ಅಕೌಂಟ್ ವಿವರಗಳನ್ನು ಒಳಗೊಂಡಿರುವ ಮತ್ತೊಂದು ಪುಟಕ್ಕೆ ಮರುನಿರ್ದೇಶಿಸುತ್ತದೆ.
- ಹಂತ 3: ಫಾರ್ಮ್ 15G ಅನ್ನು ರಚಿಸಿ. ಆನ್ಲೈನ್ ಫಾರ್ಮ್ ತೆರೆಯಲು ಅದರ ಮೇಲೆ ಕ್ಲಿಕ್ ಮಾಡಿ.
- ಹಂತ 4: ನೀವು ಪ್ರಸ್ತುತ ಫಿಕ್ಸ್ಡ್ ಡೆಪಾಸಿಟ್ ಹೊಂದಿರುವ ನಿಮ್ಮ ಬ್ಯಾಂಕ್ ಶಾಖೆಯ ವಿವರಗಳೊಂದಿಗೆ ನಿಮ್ಮ ಹೆಸರು, ಇನ್ಕಮ್ ಟ್ಯಾಕ್ಸ್ ಸ್ಟೇಟಸ್ ಮತ್ತು ಇತರ ಸಂಬಂಧಿತ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ.
- ಹಂತ 5: ನಿಮ್ಮ ಇನ್ಕಮ್ ವಿವರಗಳನ್ನು ಬರೆಯಿರಿ ಮತ್ತು ಆನ್ಲೈನ್ನಲ್ಲಿ ಸಬ್ಮಿಟ್ ಮಾಡುವ ಮೊದಲು ಎಲ್ಲಾ ವಿವರಗಳನ್ನು ಚೆಕ್ ಮಾಡಿ.
ಆಫ್ಲೈನ್ ಪ್ರಕ್ರಿಯೆ
ಹಂತ 1: 15G ಫಾರ್ಮ್ ಅನ್ನು ಡೌನ್ಲೋಡ್ ಮಾಡಿ.
ಹಂತ 2: ಫಾರ್ಮ್ ಎರಡು ಸೆಕ್ಷನ್ ಗಳನ್ನು ಹೊಂದಿದೆ. ಭಾಗ 1 ರಲ್ಲಿ, ಭರ್ತಿ ಮಾಡಿ:
- ಟ್ಯಾಕ್ಸ್ ಪೇಯರ್ ಹೆಸರು
- ಪಾನ್ ಕಾರ್ಡ್ ವಿವರಗಳು
- ಇನ್ಕಮ್ ಟ್ಯಾಕ್ಸ್ ಸ್ಟೇಟಸ್ (ನೀವು ಒಬ್ಬ ವ್ಯಕ್ತಿಯಾಗಿರಬಹುದು ಅಥವಾ ಹೆಚ್ಯುಎಫ್ಅಥವಾ ಏಓಪಿಯಿಂದ ಬರುತ್ತಿರುವವರಾಗಿರಬಹುದು)
- ಹಿಂದಿನ ವರ್ಷ (ಇಲ್ಲಿ, ಹಿಂದಿನ ವರ್ಷ ಎಂದರೆ ನಿಮ್ಮ ಟ್ಯಾಕ್ಸ್ ಡಿಡಕ್ಷನ್ ಅನ್ನು ಕ್ಲೈಮ್ ಮಾಡುವ ಕಳೆದ ಹಣಕಾಸು ವರ್ಷ)
- ವಸತಿ ಸ್ಥಿತಿ (ಪಟ್ಟಣ, ನಗರ, ರಾಜ್ಯ, ಫ್ಲಾಟ್ ಸಂಖ್ಯೆ ಇತ್ಯಾದಿ)
- ಸಂಪರ್ಕ ವಿವರಗಳು (ಇಮೇಲ್ ವಿಳಾಸ ಮತ್ತು ಫೋನ್ ಸಂಖ್ಯೆ)
- 1961ರ ಇನ್ಕಮ್ ಟ್ಯಾಕ್ಸ್ ಕಾಯಿದೆಯ ಅಡಿಯಲ್ಲಿ ನೀವು ಅಸೆಸ್ ಆಗಿದ್ದೀರಾ ಎಂದು ನಮೂದಿಸಲು ಸರಿಯಾದ ಬಾಕ್ಸ್ನಲ್ಲಿ ಟಿಕ್ ಮಾಡಿ.
- ನಿಮ್ಮ ಅಂದಾಜು ಇನ್ಕಮ್
- ಹಿಂದಿನ ಹಣಕಾಸು ವರ್ಷದಲ್ಲಿ ನೀವು 15G ಫಾರ್ಮ್ ಅನ್ನು ಹೊರತುಪಡಿಸಿ ಇತರ ಫಾರ್ಮ್ಗಳನ್ನು ಭರ್ತಿ ಮಾಡಿದ್ದರೆ ಉಲ್ಲೇಖಿಸಿ
- ನೀವು ಭರ್ತಿ ಮಾಡುತ್ತಿರುವ ಈ ಫಾರ್ಮ್ನಲ್ಲಿ ನಿಮ್ಮ ಇನ್ಕಮ್ ವಿವರಗಳನ್ನು ಭರ್ತಿ ಮಾಡಿ. ಬರೆಯಬೇಕಾದ ವಿವರಗಳೆಂದರೆ
- ಇನ್ವೆಸ್ಟ್ಮೆಂಟ್ ಖಾತೆಯ ಐಡೆಂಟಿಫಿಕೇಷನ್ ನಂಬರ್
- ಇನ್ಕಮ್ನ ಸ್ವರೂಪ
- ಟ್ಯಾಕ್ಸ್ ಡಿಡಕ್ಟಿಬಲ್ ಸೆಕ್ಷನ್
- ಇನ್ಕಮ್ ಅಮೌಂಟ್
ಹಂತ 3: ಸರಿಯಾಗಿ ಸಹಿ ಮಾಡಿದ ಫಾರ್ಮ್ ಅನ್ನು ಬ್ಯಾಂಕ್ಗೆ ಸಬ್ಮಿಟ್ ಮಾಡಿ.
ಫಾರ್ಮ್ 15Gಯ ಭಾಗ II ಅನ್ನು ಡಿಡಕ್ಟರ್ ಭರ್ತಿ ಮಾಡುತ್ತಾನೆ. ಡಿಡಕ್ಟರ್ ಎಂದರೆ ಟಿಡಿಎಸ್ ಅನ್ನು ಸರ್ಕಾರಕ್ಕೆ ಡೆಪಾಸಿಟ್ ಮಾಡಲು ಜವಾಬ್ದಾರರಾಗಿರುವ ವ್ಯಕ್ತಿ.