ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಮೋಟಾರ್ ಇನ್ಶೂರೆನ್ಸ್ ನ ಪ್ರಕಾರಗಳು

ಮೋಟಾರ್ ಇನ್ಶೂರೆನ್ಸ್ ಎಂದರೇನು?

ಮೋಟಾರ್ ಇನ್ಶೂರೆನ್ಸ್ ಎಲ್ಲಾ ಇನ್ಶೂರೆನ್ಸ್ ಪಾಲಿಸಿಗಳ ಹಾಗೆಯೇ ಒಂದು ಪಾಲಿಸಿಯಾಗಿದೆ, ಆದರೆ ಇದು ಕಡ್ಡಾಯವಾಗಿದೆ! ಹಾಗೂ, ಹೆಸರೇ ಸೂಚಿಸುವಂತೆ, ಇದು ಎಲ್ಲಾ ವರ್ಗದ ಮೋಟಾರ್ ವಾಹನಗಳು-ಮೋಟಾರ್ ಸೈಕಲ್ ಗಳು, ಕಾರುಗಳು, ಜೀಪುಗಳು, ವಾಣಿಜ್ಯ ವಾಹನಗಳು ಇತ್ಯಾದಿಗಳಿಗೆ ಸಂಬಂಧಪಟ್ಟಿದೆ.

ಸರಕಾರವು, ನಿಮ್ಮ ಹಾಗೂ ಇತರರ ಸುರಕ್ಷತೆಗಾಗಿ, ಮೋಟಾರ್ ಇನ್ಶೂರೆನ್ಸ್ ಅನ್ನು ಕಡ್ಡಾಯಗೊಳಿಸಿದೆ. ದುರಾದೃಷ್ಟವಶಾತ್, ಯಾವುದಾದರೂ ಅವಘಡ ಸಂಭವಿಸಿದ ಸಂದರ್ಭದಲ್ಲಿ ಇದು ನಿಮಗೆ ಒದಗಿಸುವ ಲಾಭಗಳಿಗೆ ಹೋಲಿಸಿದರೆ, ನೀವು ಇದಕ್ಕಾಗಿ ಪಾವತಿಸುವ ವಾರ್ಷಿಕ ಪ್ರೀಮಿಯಂ ಅತೀ ಕಡಿಮೆಯಾಗಿದೆ.

ಹೆಚ್ಚಿನ ಜನರಿಗೆ ಇರುವ ತಪ್ಪು ತಿಳುವಳಿಕೆ ಏನೆಂದರೆ, ಮೋಟಾರ್ ಇನ್ಶೂರೆನ್ಸ್ ಕೇವಲ ಮೋಟಾರ್ ವಾಹನಗಳನ್ನು ಕವರ್ ಮಾಡುತ್ತದೆ ಎಂದು, ಇದೂ ತಪ್ಪು!

ಆದ್ದರಿಂದ ಮೊದಲಿಗೆ, ನಾವು ಮೋಟಾರ್ ಇನ್ಶೂರೆನ್ಸ್ ನ ಪ್ರಕಾರಗಳು ಹಾಗೂ ಅವುಗಳು ಏನೆಲ್ಲ ಕವರ್ ಮಾಡುತ್ತವೆ, ಇದರೊಂದಿಗೆ ಆರಂಭಿಸೋಣ!ಮೋಟಾರ್ ಇನ್ಶೂರೆನ್ಸ್ ಅನ್ನು 2 ವಿಷಯಗಳ ಆಧಾರದ ಮೇಲೆ ವಿಂಗಡಿಸಬಹುದು

  • ನೀವು ಇನ್ಶೂರ್ ಮಾಡುತ್ತಿರುವ ವಾಹನದ ಪ್ರಕಾರ

  • ನೀವು ನಿಮ್ಮ ವಾಹನವನ್ನು ಕವರ್ ಮಾಡಲು ಪಾವತಿಸುವ ಕವರೇಜ್ ಮೊತ್ತ

ಹಾಗಾದರೆ, ನೀವು ಹೊಂದಿರುವ ವಾಹನದ ಪ್ರಕಾರವನ್ನು ಅವಲಂಬಿಸಿ ಭಾರತದಲ್ಲಿರುವ ವಿವಿಧ ಪ್ರಕಾರದ ವಾಹನ ಇನ್ಶೂರೆನ್ಸ್ ಗಳು ಯಾವುವು?

ಭಾರತದಲ್ಲಿ ಮೋಟಾರ್ ಇನ್ಶೂರೆನ್ಸ್ ನ ಪ್ರಕಾರಗಳು

ಖಾಸಗಿ ಕಾರು ಇನ್ಶೂರೆನ್ಸ್ ಪಾಲಿಸಿ

ಯಾವುದೇ ಖಾಸಗಿ ಕಾರು ಹೊಂದಿರುವ ವ್ಯಕ್ತಿಯು ಪಡೆಯಬೇಕಾದ ಮೋಟಾರ್ ಇನ್ಶೂರೆನ್ಸ್ ಇದಾಗಿದ್ದು, ಇದನ್ನು ಭಾರತ ಸರಕಾರವು ಕಡ್ಡಾಯಗೊಳಿಸಿದೆ. ಇದು ವಾಹನವನ್ನು, ಅಪಘಾತ, ಬೆಂಕಿ, ನೈಸರ್ಗಿಕ ವಿಪತ್ತುಗಳು, ಕಳವು ಇತ್ಯಾದಿಗಳಿಂದ ಕವರ್ ಮಾಡುತ್ತದೆ ಹಾಗೂ ಮಾಲೀಕನಿಗಾದ ಗಾಯಗಳಿಗೂ ಕವರ್ ನೀಡುತ್ತದೆ. ಇದು ಥರ್ಡ್ ಪಾರ್ಟೀಗಾದ ಯಾವುದೇ ರೀತಿಯ ಹಾನಿಗಳನ್ನು ಮತ್ತು ಗಾಯಗಳನ್ನೂ ಕವರ್ ಮಾಡುತ್ತದೆ. ಕಾರು ಇನ್ಶೂರೆನ್ಸ್ ಪಡೆಯಿರಿ

ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ

ಈ ಇನ್ಶೂರೆನ್ಸ್ ಪಾಲಿಸಿಯು ಸ್ಕೂಟರ್ ಅಥವಾ ಬೈಕಿನಂತಹ ಟು ವೀಲರ್ ವಾಹನಗಳನ್ನು ಕವರ್ ಮಾಡುತ್ತದೆ ಹಾಗೂ ಇದನ್ನು ಭಾರತ ಸರಕಾರದಿಂದ ಕಡ್ಡಾಯಗೊಳಿಸಲಾಗಿದೆ.ಇದು, ಟು ವೀಲರ್  ವಾಹನಕ್ಕೆ ಅಪಘಾತಗಳು, ಅವಘಡಗಳು, ಬೆಂಕಿ, ಕಳವು ಇತ್ಯಾದಿಗಳಿಂದ ಉಂಟಾಗುವ ಹಾನಿಗಳಿಂದ ಕವರ್ ನೀಡುವುದು ಮಾತ್ರವಲ್ಲದೆ ಥರ್ಡ್ ಪಾರ್ಟೀಗಾದ ಹಾನಿಗಳನ್ನೂ ಕವರ್ ಮಾಡುತ್ತದೆ. ಇದು, ಮಾಲಕ ರೈಡರ್ ಗೆ ಕಡ್ಡಾಯ ವೈಯಕ್ತಿಕ ಅಪಘಾತ ಕವರ್ ಅನ್ನೂ ಒದಗಿಸುತ್ತದೆ ಹಾಗೂ ಇದನ್ನು ಪ್ರಯಾಣಿಕರಿಗಾಗಿಯೂ ಪಡೆಯಬಹುದಾಗಿದೆ. ಬೈಕ್ ಇನ್ಶೂರೆನ್ಸ್ ಪಡೆಯಿರಿ

ಕಮರ್ಷಿಯಲ್ ವಾಹನ ಇನ್ಶೂರೆನ್ಸ್

ಈ ಇನ್ಶೂರೆನ್ಸ್, ವೈಯಕ್ತಿಕ ಬಳಕೆಗೆ ಉಪಯೋಗಿಸದೇ ಇರುವ ಎಲ್ಲಾ ವಾಹನಗಳನ್ನು ಕವರ್ ಮಾಡುತ್ತದೆ. ಈ ಪ್ರಕಾರದ ಇನ್ಶೂರೆನ್ಸ್, ವೈಯಕ್ತಿಕವಾಗಿ ಬಳಕೆಯಾಗದ ಎಲ್ಲಾ ವಾಹನಗಳನ್ನು ಕವರ್ ಮಾಡುತ್ತದೆ. ಟ್ರಕ್ ಗಳು, ಬಸ್ ಗಳು, ಭಾರೀ ವಾಣಿಜ್ಯ ವಾಹನಗಳು, ಲಘು ವಾಣಿಜ್ಯ ವಾಹನಗಳು, ಮಲ್ಟೀ ಯುಟಿಲಿಟೀ ವಾಹನಗಳು, ಕೃಷಿ ಸಂಬಂಧಿತ ವಾಹನಗಳು, ಟ್ಯಾಕ್ಸಿ/ಕ್ಯಾಬ್, ಆಂಬ್ಯುಲೆನ್ಸ್ ಗಳು, ಆಟೋ ರಿಕ್ಷಾಗಳು ಇತ್ಯಾದಿ, ಈ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುವ ಕೆಲವು ವಾಹನಗಳಾಗಿವೆ.  ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಡೆಯಿರಿ

ಭಾರತದಲ್ಲಿ ಮೋಟಾರ್ ಇನ್ಶೂರೆನ್ಸ್ ಪಾಲಿಸಿಗಳ ಪ್ರಕಾರಗಳು

ಥರ್ಡ್ ಪಾರ್ಟಿ ಸಮಗ್ರ

ಅಪಘಾತದಿಂದಾಗಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿಯ ವಾಹನಕ್ಕೆ ಆಗುವ ಹಾನಿ

×

ಥರ್ಡ್ ಪಾರ್ಟಿಯ ಆಸ್ತಿಗೆ ಆಗುವ ಹಾನಿ

×

ಪರ್ಸನಲ್ ಆಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಬೈಕ್/ಸ್ಕೂಟರಿನ ಕಳ್ಳತನ

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮೋಟಾರ್ ಇನ್ಶೂರೆನ್ಸ್ ಪಾಲಿಸಿ ಜೊತೆಗಿನ ಆಡ್-ಆನ್ ಗಳು

ಈ ಕೆಳಗೆ ಕೆಲವು ‘ಆಡ್-ಆನ್’ ಗಳನ್ನು ಪಟ್ಟಿ ಮಾಡಲಾಗಿದ್ದು, ಇವುಗಳನ್ನು ನಿಮ್ಮ ಮೂಲ ಮೋಟಾರ್ ಇನ್ಶೂರೆನ್ಸ್ ಪಾಲಿಸಿ ಬೆಲೆಯ ಮೇಲೆ ಸ್ವಲ್ಪ ಹೆಚ್ಚು ಪ್ರೀಮಿಯಂ ನೀಡಿ ಪಡೆಯಬಹುದು.

ಶೂನ್ಯ ಡಿಪ್ರಿಸಿಯೇಷನ್

ವಯಸ್ಸಿಗೆ ಅದರದೇ ಆದ ದುಷ್ಪರಿಣಾಮಗಳಿವೆ. ಇದು ನಿಮ್ಮ ವಾಹನಕ್ಕೂ ಅನ್ವಯಿಸುತ್ತದೆ.ಅದು ಹಳೆಯದಾದಂತೆಯೇ, ನಿಮ್ಮ ಕಾರು ಅಥವಾ ಬೈಕಿನ ಮೌಲ್ಯ ಕುಸಿಯುತ್ತದೆ ಅಥವಾ ‘ಡಿಪ್ರಿಷಿಯೇಟ್’ ಆಗುತ್ತದೆ. ಆದರೆ, ಎದೆಗುಂದಬೇಡಿ, ನಿಮ್ಮ ವಾಹನದ ಮೌಲ್ಯವು ನೀವು ಅದನ್ನು ಖರೀದಿಸಿದ ದಿನ ಇದ್ದಷ್ಟೇ ಉಳಿಯುವ ಹಾಗೆ ಶೂನ್ಯ ಡಿಪ್ರಿಸಿಯೇಷನ್ ಆಡ್-ಆನ್ ಖಚಿತಪಡಿಸುತ್ತದೆ. ಅಂದರೆ ಕೊನೆಯ ಸೆಟ್ಲ್ಮೆಂಟ್ ಸಂದರ್ಭದಲ್ಲಿ, ಇನ್ಶೂರರ್ ಡಿಪ್ರಿಸಿಯೇಷನ್ ಅನ್ನು ಪರಿಗಣಿಸುವುದಿಲ್ಲ!

ಎಂಜಿನ್ ಸುರಕ್ಷತಾ ಕವರ್

ಎಂಜಿನ್ ಹಾಗೂ ಗೇರ್ ಬಾಕ್ಸ್ ಸುರಕ್ಷತಾ ಕವರ್, ವಾಹನದ ಎಂಜಿನ್ ಗಾದ ಹಾನಿಗಳಿಗೆ ಆರ್ಥಿಕ ಸಂರಕ್ಷಣೆಯನ್ನು ನೀಡುವ ಒಂದು ಆಡ್-ಆನ್ ಆಗಿದೆ. ಯಾವುದೇ ರೀತಿಯ ಹಾನಿ ಇರಲಿ; ಎಂಜಿನ್ ನೊಳಗೆ ನೀರು ನುಗ್ಗುವುದರಿಂದ ಹಿಡಿದು ಲ್ಯೂಬ್ರಿಕೇಟಿಂಗ್ ತೈಲದ ಸೋರಿಕೆವರೆಗೆ,ಎಲ್ಲವೂ ಈ ಪಾಲಿಸಿಯಲ್ಲಿ ಕವರ್ ಆಗುತ್ತದೆ.

ರೋಡ್ಸೈಡ್ ಅಸಿಸ್ಟೆನ್ಸ್

ನಡುರಾತ್ರಿಯಲ್ಲಿ, ಒಂದು ಡಕಾಯಿತರಿಂದ ತುಂಬಿದ ರಸ್ತೆಯಲ್ಲಿ ನಿಮ್ಮ ಕಾರಿನ ಚಕ್ರಗಳು ಕೆಟ್ಟುನಿಲ್ಲುವ ಸನ್ನಿವೇಶದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹೆದರಬೇಡಿ, ರೋಡ್ಸೈಡ್ ಅಸಿಸ್ಟೆನ್ಸ್ ನಿಮ್ಮ ನೆರವಿಗೆ ಬರುತ್ತದೆ. ನೀವು ಕೇವಲ ಅವರಿಗೆ ಒಂದು ಕರೆಯನ್ನು ಮಾಡಿದಾಗ ಅವರು ನೀವಿದ್ದ ಸ್ಥಳಕ್ಕೆ ಬಂದು ನಿಮ್ಮ ವಾಹನವನ್ನು ರಿಪೇರಿ ಮಾಡುತ್ತಾರೆ. ಇದು ಸಾಧ್ಯವಾಗದೇ ಇದ್ದಲ್ಲಿ, ಅದನ್ನು ಹತ್ತಿರದ ಸರ್ವಿಸ್ ಸ್ಟೇಷನ್ ಗೆ ಟೋ ಮಾಡುತ್ತಾರೆ. ಕನಿಷ್ಟ ಪಕ್ಷ ನೀವು ಕಳ್ಳರಿಂದ ತಪ್ಪಿಸಿಕೊಳ್ಳಬಹುದು!

ಕನ್ಸ್ಯೂಮೇಬಲ್(ಗ್ರಾಹಕ ಬಳಕೆಯ) ಕವರ್

ಇಂದು, ಮೋಟಾರ್ ಇನ್ಶೂರೆನ್ಸ್ ಕಂಪನಿಗಳು ನಿಮ್ಮ ವಾಹನದ ಸರ್ವಿಸ್(ಸೇವಾ) ದರವನ್ನು ಕವರ್ ಮಾಡಲು, ಕನ್ಸ್ಯೂಮೇಬಲ್ ಕವರ್ ಆಡ್-ಆನ್ ಅನ್ನು ನೀಡುತ್ತದೆ; ನಿಮ್ಮ ವಾಹನಕ್ಕೆ ಹೊಸ ಎಂಜಿನ್ ಆಯಿಲ್ ಹಾಕುವುದರಿಂದ ಹಿಡಿದು ಅದರ ಕಳೆದುಹೋದ ನಟ್ ಅನ್ನು ಸಿಕ್ಕಿಸುವವರೆಗೆ, ಎಲ್ಲವೂ ಇದರಲ್ಲಿ ಕವರ್ ಆಗುತ್ತದೆ.

ರಿಟರ್ನ್ ಟು ಇನ್ವಾಯ್ಸ್ (ಬೆಲೆಪಟ್ಟಿ) ಕವರ್

ದುರಸ್ತಿಗೂ ಮೀರಿ ಹಾನಿ ಅಥವಾ ಕಳ್ಳತನವಾಗಿದ್ದರೆ, ರಿಟರ್ನ್ ಟು ಇನ್ವಾಯ್ಸ್ ಆಡ್-ಆನ್, ನಿಮ್ಮ ಕಾರು ಅಥವಾ ಬೈಕಿನ ಇನ್ವಾಯ್ಸ್ ಮೌಲ್ಯದ ಸಂಪೂರ್ಣ ಮೊತ್ತವನ್ನು ಹಿಂಪಡೆಯುವ ಲಾಭವನ್ನು ನಿಮಗೆ ಒದಗಿಸುತ್ತದೆ, ಹೊಸ ವಾಹನದ ನೋಂದಣಿ ವೆಚ್ಚ ಹಾಗೂ ರಸ್ತೆ ತೆರಿಗೆಯನ್ನೂ ಸೇರಿಸಿ.

ಟಯರ್ ಸುರಕ್ಷತಾ ಕವರ್

ಸಾಮಾನ್ಯವಾಗಿ, ಅಪಘಾತದ ಸಮಯದಲ್ಲಾದ ಹಾನಿಯನ್ನು ಹೊರತುಪಡಿಸಿ, ಸ್ಟಾಂಡರ್ಡ್ ಇನ್ಶೂರೆನ್ಸ್ ನಲ್ಲಿ ಟಯರ್ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ. ಆದ್ದರಿಂದಲೇ ಈ ಟಯರ್ ಸುರಕ್ಷತಾ ಆಡ್-ಆನ್,  ನಿಮ್ಮ ಕಾರು ಟಯರ್ ಅನ್ನು ಟಯರ್ ಒಡೆತ, ಉಬ್ಬುಗಳು ಅಥವಾ ಕಡಿತಗಳಿಂದ, ಎಲ್ಲಾ ಸಂದರ್ಭಗಳಲ್ಲೂ ಸಂರಕ್ಷಿಸುವ ಲಾಭವನ್ನು, ನಿಮಗೆ ನೀಡುತ್ತದೆ. 

ಸರಿ, ಈ ಇನ್ಶೂರೆನ್ಸ್ ನಿಂದ ವೈಯಕ್ತಿಕವಾಗಿ ಯಾರಿಗೂ ಯಾವ ಲಾಭಗಳಿಲ್ಲದಿದ್ದರೂ ಇದನ್ನು ಏಕೆ ಖರೀದಿಸಬೇಕು ಎಂದು ನೀವು ಯೋಚಿಸುತ್ತಿರಬೇಕು, ಅಲ್ಲವೇ?

 

ನೀವು ನಿಮ್ಮ ವಾಹನವನ್ನು ಪ್ರತಿದಿನದ ಪ್ರಯಾಣಕ್ಕೆ ಬಳಸದೆ, ಅಪರೂಪವಾಗಿ ಚಲಾಯಿಸುತ್ತಿದ್ದರೆ, ಅವಘಡವಾಗುವ ಅವಕಾಶಗಳು ಕಡಿಮೆ ಇರುವ ಕಾರಣ ನಿಮಗೆ ಥರ್ಡ್ ಪಾರ್ಟೀ ಇನ್ಶೂರೆನ್ಸ್ ಅನ್ನು ಖರೀದಿಸುವುದೇ ಸರಿ ಎಂದೆನಿಸುತ್ತದೆ, ಅಲ್ಲವೇ?

ಹಾಗೂ, ನೀವು ನಿಮ್ಮ ಕಾರು ಅಥವಾ ಬೈಕನ್ನು ಮುಂಬರುವ ಕೆಲವು ತಿಂಗಳಿನಲ್ಲಿ ಮಾರಾಟ ಮಾಡಲು ಯೋಚಿಸುತ್ತಿದ್ದರೆ, ಸಂಪೂರ್ಣ ವರ್ಷಕ್ಕಾಗಿ ಹೆಚ್ಚು ಪ್ರೀಮಿಯಂ ನೀಡಿ ಕಾಂಪ್ರೆಹೆನ್ಸಿವ್  ಇನ್ಶೂರೆನ್ಸ್ ಪಡೆಯುವುದಕ್ಕೆ ಅರ್ಥವೇ ಇಲ್ಲ!

ನಾವು ಗಮನಿಸಬೇಕಾದ ಇನ್ನೊಂದು ಅಂಶವೇನೆಂದರೆ ಕಾಂಪ್ರೆಹೆನ್ಸಿವ್  ಇನ್ಶೂರೆನ್ಸ್ ಗಾಗಿ ನಾವು ತೆರುವ ಭಾರೀ ಪ್ರೀಮಿಯಂ ಮೊತ್ತವು ಕೊನೆಗೆ, ಮಿತವಾದ ಬಜೆಟ್ ಇರುವ ವ್ಯಕ್ತಿಗೆ ಸಮಸ್ಯೆಯಾಗಿ ಪರಿಣಮಿಸಬಹುದು!

ಇದೇ ಕಾರಣದಿಂದಾಗಿ ಅವರು ಥರ್ಡ್ ಪಾರ್ಟೀ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುತ್ತಾರೆ. 

ಇದನ್ನೆಲ್ಲಾ ಹೇಳಿದ ನಂತರವೂ, ನಾವು ಥರ್ಡ್ ಪಾರ್ಟೀ ಇನ್ಶೂರೆನ್ಸ್ ಗಿಂತ ಕಾಂಪ್ರೆಹೆನ್ಸಿವ್  ಇನ್ಶೂರೆನ್ಸ್ ಅನ್ನೇ ಶಿಫಾರಸು ಮಾಡುತ್ತೇವೆ, ಇದಕ್ಕಿರುವ ಸರಳ ಕಾರಣವೇನೆಂದರೆ, ಇದು ನೀಡುವ ಲಾಭಗಳು, ನೀವು ನೀಡುವ ಸ್ವಲ್ಪ ಅಧಿಕ ಪ್ರೀಮಿಯಂಕ್ಕಿಂತ ಹೆಚ್ಚು ಅಮೂಲ್ಯವಾಗಿವೆ.