ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಭಾರತದಲ್ಲಿ ಶಿಶುಗಳಿಗೆ/ನವಜಾತ ಶಿಶುಗಳಿಗೆ ಪಾಸ್‌ಪೋರ್ಟ್‌ಗಳು

ಭಾರತದಲ್ಲಿ ಪಾಸ್‌ಪೋರ್ಟ್ ಅಪ್ಲಿಕೇಶನ್ ಪ್ರಕ್ರಿಯೆಯು ಸಾಕಷ್ಟು ವ್ಯವಸ್ಥಿತವಾಗಿದೆ ಮತ್ತು ವಿದೇಶಕ್ಕೆ ಪ್ರಯಾಣ ಭಾರತದಲ್ಲಿ ಪಾಸ್‌ಪೋರ್ಟ್ ಅಪ್ಲಿಕೇಶನ್ ಪ್ರಕ್ರಿಯೆಯು ಸಾಕಷ್ಟು ವ್ಯವಸ್ಥಿತವಾಗಿದೆ ಮತ್ತು ವಿದೇಶಕ್ಕೆ ಪ್ರಯಾಣ ಮಾಡುವ ಹೆಚ್ಚಿನ ಜನರು ಇದರೊಂದಿಗೆ ಚಿರಪರಿಚಿತರಾಗಿದ್ದಾರೆ. ಅದೇನೇ ಇದ್ದರೂ, ಶಿಶುಗಳ ಪಾಸ್‌ಪೋರ್ಟ್ ಅನ್ನು ಪಡೆದುಕೊಳ್ಳುವ ವಿಷಯ ಬಂದಾಗ, ಜನಸಾಮಾನ್ಯರಲ್ಲಿ ಕೆಲವು ಗೊಂದಲಗಳಿವೆ.

ನವಜಾತ/ಶಿಶು ಪಾಸ್‌ಪೋರ್ಟ್ ಎಂದರೇನು? ನಿಮ್ಮ ಮಗುವಿಗಾಗಿ ಹೇಗೆ ಪಡೆಯುವುದು?

ನಿಮ್ಮ ಮನಸ್ಸಿನಲ್ಲಿ ಇಂತಹ ಹತ್ತು ಹಲವು ಪ್ರಶ್ನೆಗಳಿದ್ದರೆ, ಓದುವುದನ್ನು ಮುಂದುವರೆಸಿ. ಕೆಳಗಿನ ಲೇಖನವು ಭಾರತದಲ್ಲಿ ಶಿಶು ಪಾಸ್‌ಪೋರ್ಟ್‌ಗಳ ಕುರಿತು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತದೆ.

ನವಜಾತ ಶಿಶುವಿನ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಒಳಗೊಂಡಿರುವ ವಿವಿಧ ಹಂತಗಳನ್ನು ಅರ್ಥಮಾಡಿಕೊಳ್ಳುವ ಮೊದಲು, ಈ ಡಾಕ್ಯುಮೆಂಟ್ ಏನನ್ನು ಒಳಗೊಂಡಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಯಾವುದೇ ಪೋಷಕರು ತಿಳಿದುಕೊಳ್ಳಬೇಕಾದ ಮೊದಲ ವಿಷಯವೆಂದರೆ ಶಿಶು ಪಾಸ್‌ಪೋರ್ಟ್‌ಗಳ ವಯಸ್ಸಿನ ಮಿತಿಗಳು. ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಮಗು 4 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಅವನು/ಅವಳು ಈ ಡಾಕ್ಯುಮೆಂಟ್ ಅನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಅವರ ಪರವಾಗಿ ಪೋಷಕರು ಅಥವಾ ಲೀಗಲ್ ಗಾರ್ಡಿಯನ್‌ಗಳು ಮಾತ್ರ ಅರ್ಜಿ ಸಲ್ಲಿಸಬಹುದು.

ಭಾರತದಲ್ಲಿ ನವಜಾತ ಶಿಶುವಿನ ಪಾಸ್‌ಪೋರ್ಟ್‌ ಅರ್ಜಿಯು ಆನ್‌ಲೈನ್ ಮತ್ತು ಆಫ್‌ಲೈನ್ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ನೀವು ಎರಡು ವಿಧಾನಗಳಲ್ಲಿ ಯಾವುದಾದರೂ ವಿಧಾನವನ್ನು ಅನುಸರಿಸಲು ಆಯ್ಕೆ ಮಾಡಿಕೊಳ್ಳಬಹುದು. ಕೆಳಗೆ ಪಟ್ಟಿ ಮಾಡಲಾದ ಆನ್‌ಲೈನ್ ಮತ್ತು ಆಫ್‌ಲೈನ್ ಪ್ರಕ್ರಿಯೆಗಳನ್ನು ನೀವು ಕಾಣಬಹುದು.

ನವಜಾತ ಶಿಶುಗಳಿಗೆ ಆನ್‌ಲೈನ್ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿ

ನೀವು ನಿಮ್ಮ ನವಜಾತ ಶಿಶುವಿಗಾಗಿ ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದರೆ, ನೀವು ಅಗತ್ಯವಾಗಿ ಅನುಸರಿಸಬೇಕಾದ ಪ್ರತಿ ಹಂತಗಳು ಇಲ್ಲಿವೆ-

  • ಹಂತ 2: ನಿಖರವಾದ ಮಾಹಿತಿಯನ್ನು ಒದಗಿಸುವ ಮೂಲಕ ಈ ಪೋರ್ಟಲ್‌ನಲ್ಲಿ ಅಕೌಂಟ್ ಅನ್ನು ರಿಜಿಸ್ಟರ್ ಮಾಡಿ. ನಿಮ್ಮ ಇಮೇಲ್ ಐಡಿಗೆ ಕಳುಹಿಸಲಾದ ಲಿಂಕ್ ಅನ್ನು ಬಳಸಿಕೊಂಡು ಈ ಅಕೌಂಟ್ ಅನ್ನು ದೃಢೀಕರಿಸಿ.
  • ಹಂತ 3: ನಿಮ್ಮ ರುಜುವಾತುಗಳೊಂದಿಗೆ ಈ ಪಿಎಸ್ ಕೆ ಅಕೌಂಟ್‌ಗೆ ಲಾಗ್ ಇನ್ ಮಾಡಿ.
  • ಹಂತ 4: ಆನ್‌ಲೈನ್ ಪಾಸ್‌ಪೋರ್ಟ್ ಅಪ್ಲಿಕೇಶನ್‌ನ ಪರ್ಯಾಯ 1 ಅಥವಾ ಪರ್ಯಾಯ 2 ರಿಂದ ಆರಿಸಿಕೊಳ್ಳಿ. ಮೊದಲನೆ ಆಯ್ಕೆಯು ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಲು ಅನುಮತಿಸಿದರೆ, ಎರಡನೆಯ ಆಯ್ಕೆಯು ಈ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಲು ಮತ್ತು ನಿಮ್ಮ ಬಿಡುವಿನ ವೇಳೆಯಲ್ಲಿ ಅದನ್ನು ಭರ್ತಿ ಮಾಡಲು ಅನುಮತಿಸುತ್ತದೆ.
  • ಹಂತ 5: ನೀವು ಆನ್‌ಲೈನ್ ಫಾರ್ಮ್ ಅನ್ನು ನೇರವಾಗಿ ಪರ್ಯಾಯ 1ರ ಅಡಿಯಲ್ಲಿ ಸಲ್ಲಿಸಬಹುದು. ನೀವು ಪರ್ಯಾಯ 2 ಅನ್ನು ಆರಿಸಿಕೊಂಡರೆ, ನೀವು ಭರ್ತಿ ಮಾಡಿದ ಫಾರ್ಮ್ ಅನ್ನು XML ಫಾರ್ಮ್ಯಾಟ್‌ನಲ್ಲಿ ಸೇವ್ ಮಾಡಬೇಕಾಗುತ್ತದೆ. ನಂತರ ನೀವು ಪರ್ಯಾಯ 2 ಆಯ್ಕೆಯನ್ನು ಆರಿಸಿದ ಅದೇ ವಿಭಾಗದಲ್ಲಿ, ಅದನ್ನು ಅಪ್‌ಲೋಡ್ ಮಾಡಿ.
  • ಹಂತ 6: ಸಂಬಂಧಿತ ಅಪ್ಲಿಕೇಶನ್ ಶುಲ್ಕವನ್ನು ಪಾವತಿಸಿ ಮತ್ತು ಸ್ಲಾಟ್ ಅನ್ನು ಬುಕ್ ಮಾಡಿ.

ಇದು ಶಿಶುಗಳ ಆನ್‌ಲೈನ್ ಪಾಸ್‌ಪೋರ್ಟ್ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುತ್ತದೆ.

ಆದಾಗ್ಯೂ, ಇದು ನಿಮ್ಮ ಆದ್ಯತೆಯಾಗಿಲ್ಲದಿದ್ದರೆ, ಸರ್ಕಾರವು ಆಫ್‌ಲೈನ್ ಅಪ್ಲಿಕೇಶನ್‌ಗಳಿಗೂ ಸಹ ಅನುಮತಿಸುತ್ತದೆ.

ನವಜಾತ ಶಿಶುಗಳ ಆಫ್‌ಲೈನ್ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿ

ಎಲ್ಲಾ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ವಯಸ್ಕರ ಪಾಸ್‌ಪೋರ್ಟ್‌ಗಳ ಸಂದರ್ಭದಲ್ಲಿ ವಾಕ್-ಇನ್ ಅರ್ಜಿಗಳನ್ನು ಅನುಮತಿಸದಿದ್ದರೂ, ಈ ಸೌಲಭ್ಯವು ಮೈನರ್ ಮತ್ತು ಶಿಶುಗಳ ಪಾಸ್‌ಪೋರ್ಟ್‌ಗಳಿಗೆ ಲಭ್ಯವಿದೆ. ಆದ್ದರಿಂದ, ಆಫ್‌ಲೈನ್ ಪ್ರಕ್ರಿಯೆ ಇಲ್ಲಿದೆ -

  • ಹಂತ 1: ನಿಮ್ಮ ಸಂಬಂಧಪಟ್ಟ ಪಾಸ್‌ಪೋರ್ಟ್ ಸೇವಾ ಕೇಂದ್ರ/ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರ/ಪಾಸ್‌ಪೋರ್ಟ್ ಕಚೇರಿಗೆ ಭೇಟಿ ನೀಡಿ.
  • ಹಂತ 2: ಸಂಬಂಧಿತ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ.
  • ಹಂತ 3: ಭರ್ತಿ ಮಾಡಿದ ಫಾರ್ಮ್ ಜೊತೆಗೆ ಎಲ್ಲಾ ಅಗತ್ಯ ಡಾಕ್ಯುಮೆಂಟುಗಳನ್ನು ಸಲ್ಲಿಸಿ.
  • ಹಂತ 4: ಶಿಶುವಿನ ಪಾಸ್‌ಪೋರ್ಟ್ ಅಪ್ಲಿಕೇಶನ್ ಪೂರ್ಣಗೊಳಿಸಲು ಅನ್ವಯವಾಗುವ ಶುಲ್ಕವನ್ನು ಪಾವತಿಸಿ.

ಶಿಶು ಪಾಸ್‌ಪೋರ್ಟ್‌ಗೆ ಹೇಗೆ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದು ಈಗ ನಿಮಗೆ ತಿಳಿದಿದೆ, ಈ ಪ್ರಕ್ರಿಯೆಯ ಪೂರ್ಣಗೊಳಿಸುವಿಕೆಗೆ ಅಗತ್ಯವಾದ ವಿವಿಧ ಡಾಕ್ಯುಮೆಂಟುಗಳ ಬಗ್ಗೆಯೂ ನೀವು ತಿಳಿದಿರಬೇಕು.

ಶಿಶುವಿಗೆ ಅಗತ್ಯವಿರುವ ಪಾಸ್‌ಪೋರ್ಟ್ ಡಾಕ್ಯುಮೆಂಟುಗಳು

ಸರಿಯಾದ ಡಾಕ್ಯುಮೆಂಟುಗಳನ್ನು ಸಲ್ಲಿಸದಿದ್ದರೆ ಶಿಶುವಿನ ಪಾಸ್‌ಪೋರ್ಟ್ ಪ್ರಕ್ರಿಯೆಯು ಅಪೂರ್ಣವಾಗಿ ಉಳಿದುಬಿಡುತ್ತದೆ. ಭಾರತದಲ್ಲಿ ಶಿಶುವಿಗಾಗಿ ಕೆಲವು ಪ್ರಮುಖ ಪಾಸ್‌ಪೋರ್ಟ್ ಡಾಕ್ಯುಮೆಂಟುಗಳು ಇಲ್ಲಿವೆ -

  • ಆಯಾ ಮುನ್ಸಿಪಲ್ ಕಾರ್ಪೊರೇಶನ್ ಸಂಬಂಧಪಟ್ಟ ಮಗುವಿನ ಜನನ ಪ್ರಮಾಣಪತ್ರವನ್ನು ನೀಡುತ್ತದೆ.

  • ವಿಳಾಸ ಪುರಾವೆ ಆಗಿ ಪೋಷಕರ ಪಾಸ್‌ಪೋರ್ಟ್‌ಗಳಲ್ಲಿ ಒಂದನ್ನು ವ್ಯಾಲಿಡ್ ಪ್ರೂಫ್ ಎಂದು ಪರಿಗಣಿಸಲಾಗುತ್ತದೆ.

  • ಪ್ರಶ್ನೆಯಲ್ಲಿರುವ ಮಗುವಿನ ಪಾಸ್‌ಪೋರ್ಟ್ ಸೈಜಿನ ಫೋಟೋಗಳು ಭಾರತದಲ್ಲಿ ಮತ್ತೊಂದು ಮುಖ್ಯವಾದ ಶಿಶು ಪಾಸ್‌ಪೋರ್ಟ್ ಡಾಕ್ಯುಮೆಂಟ್ ಆಗಿದೆ.

  • ಪಾಸ್‌ಪೋರ್ಟ್ ಸೇವಾ ಕೇಂದ್ರದಿಂದ ಸಂಗ್ರಹಿಸಿದ ಅನುಬಂಧ H ಫಾರ್ಮ್ ಅನ್ನು ಭರ್ತಿ ಮಾಡಲಾಗಿದೆ.

  • ಅರೆಂಜ್‌ಮೆಂಟ್ ರಶೀದಿ

ಶಿಶು ಪಾಸ್‌ಪೋರ್ಟ್‌ನ ಅಪ್ಲಿಕೇಶನ್ ಗಾಗಿ ಶುಲ್ಕರಚನೆ

ಶಿಶು ಪಾಸ್‌ಪೋರ್ಟ್‌ಗೆ ಅಗತ್ಯವಿರುವ ಡಾಕ್ಯುಮೆಂಟುಗಳನ್ನು ತಿಳಿದುಕೊಳ್ಳುವುದರ ಜೊತೆಗೆ, ಶುಲ್ಕದ ರಚನೆಯನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ.

ಸಾಮಾನ್ಯವಾಗಿ, ಭಾರತದಲ್ಲಿ ಅಪ್ರಾಪ್ತ ವಯಸ್ಕರಿಗೆ ರೆಗ್ಯುಲರ್ ಪಾಸ್‌ಪೋರ್ಟ್ ಅಪ್ಲಿಕೇಶನ್ ಶುಲ್ಕ ₹ 1000 ಮತ್ತು ತತ್ಕಾಲ್ ಶುಲ್ಕ ₹ 2000 ಇರುತ್ತದೆ.

ಶಿಶು ಪಾಸ್‌ಪೋರ್ಟ್ ಅರ್ಜಿಗಳ ಪ್ರಕ್ರಿಯೆಯ ಸಮಯ

ಶಿಶು ಪಾಸ್‌ಪೋರ್ಟ್ ಪ್ರಕ್ರಿಯೆಯ ಸಮಯವು ಕೆಲವು ಅಂಶಗಳ ಆಧಾರದ ಮೇಲೆ ಬದಲಾಗಬಹುದು. ಯಶಸ್ವಿ ಅಪ್ಲಿಕೇಶನ್ ನಂತರ, ಪೋಷಕರು/ಗಾರ್ಡಿಯನ್‌ಗಳು ದೃಢೀಕರಣ ರಸೀದಿ ಅಥವಾ ನೋಟಿಫಿಕೇಶನ್ ಅನ್ನು ಸ್ವೀಕರಿಸುತ್ತಾರೆ. ಸಾಮಾನ್ಯವಾಗಿ, ಈ ದೃಢೀಕರಣ ನಂತರದ 4-7 ದಿನಗಳಲ್ಲಿ ಪಾಸ್‌ಪೋರ್ಟ್ ಅನ್ನು ಸಂಬಂಧಪಟ್ಟ ವಿಳಾಸಕ್ಕೆ ಕಳುಹಿಸಲಾಗುತ್ತದೆ.

ಕೆಲವು ಸಂದರ್ಭಗಳಲ್ಲಿ, ನಿಮ್ಮ ಶಿಶುವಿನ ಪಾಸ್‌ಪೋರ್ಟ್ ಪಡೆಯುವುದು ಬಹು ಮುಖ್ಯವಾಗಿರುತ್ತದೆ. ಅಂತಹ ಸಮಯದಲ್ಲಿ, ನೀವು ಎಲ್ಲಾ ಅಗತ್ಯ ತಿಳುವಳಿಕೆಯೊಂದಿಗೆ ಸಿದ್ಧರಾಗಿರಬೇಕು. ನೀವು ಹುಡುಕುತ್ತಿದ್ದ ವಿಷಯಕ್ಕೆ ಈ ಲೇಖನ ನಿಮಗೆ ಸಹಾಯ ಮಾಡಿದೆ ಎಂದು ನಾವು ಭಾವಿಸುತ್ತೇವೆ!

ಪದೇ ಪದೇ ಕೇಳಲಾದ ಪ್ರಶ್ನೆಗಳು

ನಿಮ್ಮ ಸಂಗಾತಿಯು ವಿದೇಶದಲ್ಲಿದ್ದರೆ ಶಿಶುವಿನ ಪಾಸ್‌ಪೋರ್ಟ್‌ಗೆ ನೀವು ಹೇಗೆ ಅರ್ಜಿ ಸಲ್ಲಿಸಬಹುದು?

ಅಪ್ಲಿಕೇಶನ್ ಸಲ್ಲಿಸುವ ಸಮಯದಲ್ಲಿ ನಿಮ್ಮ ಸಂಗಾತಿಯು ವಿದೇಶದಲ್ಲಿದ್ದರೆ, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಿಯ ರೂಪದಲ್ಲಿ ಅವನ/ಅವಳ ಒಪ್ಪಿಗೆಯ ಅಗತ್ಯವಿರುತ್ತದೆ. ಫಾರ್ಮ್‌ನ ಅನುಬಂಧ D ಅಡಿಯಲ್ಲಿ ಈ ನಿರ್ದಿಷ್ಟ ನಿಬಂಧನೆಯನ್ನು ಹುಡುಕಿ.

ಆಫ್‌ಲೈನ್ ಅಪ್ಲಿಕೇಶನ್ ಸಮಯದಲ್ಲಿ ನಿಮ್ಮ ಶಿಶು ನಿಮ್ಮೊಂದಿಗೆ ಪಿಎಸ್ ಕೆಗೆ ಹೋಗಬೇಕೇ?

ಇಲ್ಲ, ಆಫ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ಪಾಸ್‌ಪೋರ್ಟ್ ಅರ್ಜಿಯ ಸಮಯಕ್ಕೆ ಪಿಎಸ್ ಕೆಯಲ್ಲಿ ನಿಮ್ಮ ನವಜಾತ ಮಗ ಅಥವಾ ಮಗಳು ಇರಬೇಕಾದ ಅಗತ್ಯವಿರುವುದಿಲ್ಲ. ಕೇವಲ ಪೋಷಕರು ಮಾತ್ರ ಹಾಜರಿರಬೇಕು.

ಶಿಶು ಪಾಸ್‌ಪೋರ್ಟ್ ಅಪ್ಲಿಕೇಶನ್ ಪೊಲೀಸ್ ವೆರಿಫಿಕೇಶನ್ ಅನ್ನು ಒಳಗೊಂಡಿರುತ್ತದೆಯೇ?

ಇಲ್ಲ, ಒಬ್ಬ ಅಥವಾ ಇಬ್ಬರೂ ಪೋಷಕರು ಸಂಗಾತಿಯ ಹೆಸರನ್ನು ಅನುಮೋದಿಸಿದ ಪಾಸ್‌ಪೋರ್ಟ್ ಹೊಂದಿದ್ದರೆ ಆಗ ಪೊಲೀಸ್ ವೆರಿಫಿಕೇಶನಿನ ಅಗತ್ಯವಿಲ್ಲ.