ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್: ಪರಿಶೀಲಿಸುವುದು ಹೇಗೆ, ಮಹತ್ವ ಹಾಗೂ ಪ್ರಯೋಜನಗಳು

ಈಕ್ವಿಫ್ಯಾಕ್ಸ್ ಕ್ರೆಡಿಟ್ ಇನ್ಫಾರ್ಮೇಶನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (ಇಐಸಿಎಸ್) (ಸಾಮಾನ್ಯವಾಗಿ ಕೇವಲ ಈಕ್ವಿಫ್ಯಾಕ್ಸ್ ಎಂದು ಕರೆಯಲ್ಪಡುತ್ತದೆ) ಭಾರತೀಯ ರಿಸರ್ವ್ ಬ್ಯಾಂಕ್ ಪರವಾನಗಿ ನೀಡಿರುವ ನಾಲ್ಕು ಕ್ರೆಡಿಟ್ ಬ್ಯುರೋಗಳಲ್ಲಿ ಒಂದಾಗಿದೆ. ಈಕ್ವಿಫ್ಯಾಕ್ಸ್ ಅನ್ನು 2010 ರಲ್ಲಿ ಆರಂಭಿಸಲಾಯಿತು ಹಾಗೂ ಇದು ಈಕ್ವಿಫ್ಯಾಕ್ಸ್ ಇಂಕ್. ಯುಎಸ್ಎ ಮತ್ತು ಭಾರತದ ಹಲವಾರು ಅಗ್ರಸ್ಥಾನೀಯ ಹಣಕಾಸಿನ ಸಂಸ್ಥೆಗಳೊಂದಿಗೆ ಜಂಟಿ ಉದ್ಯಮವನ್ನು ಹೊಂದಿದೆ. ಇವುಗಳಲ್ಲಿ, ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೊಟಾಕ್ ಮಹಿಂದ್ರಾ ಪ್ರೈಮ್ ಲಿಮಿಟೆಡ್, ಬ್ಯಾಂಕ್ ಆಫ್ ಇಂಡಿಯಾ, ಸುಂದರಂ ಫೈನಾನ್ಸ್ ಲಿಮಿಟೆಡ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಮತ್ತು ರೆಲಿಗೇರ್ ಫಿನ್ವೆಸ್ಟ್ ಲಿಮಿಟೆಡ್, ಸೇರಿವೆ.

ಇತರ ಬ್ಯೂರೋಗಳ ಹಾಗೆ, ಈಕ್ವಿಫ್ಯಾಕ್ಸ್ ಬ್ಯಾಂಕ್ ಹಾಗೂ ಇತರ ಹಣಕಾಸಿನ ಸಂಸ್ಥೆಗಳಿಂದ ಕ್ರೆಡಿಟ್ ಮಾಹಿತಿಯನ್ನು ಪಡೆಯುತ್ತದೆ ಮತ್ತು ಈ ಮಾಹಿತಿಯನ್ನು ಬಳಸಿ ಕ್ರೆಡಿಟ್ ಸ್ಕೋರ್, ಕ್ರೆಡಿಟ್ ಮಾಹಿತಿ ವರದಿಗಳು, ಹಾಗೂ ಇತರ ಸೇವೆಗಳನ್ನು ತಯಾರಿಸುತ್ತದೆ.

ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್ ಎಂದರೇನು?

ಒಬ್ಬ ವ್ಯಕ್ತಿಯ ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್ 300 ರಿಂದ 900 ಮಧ್ಯದ ಒಂದು ಮೂರು ಡಿಜಿಟ್ ಸಂಖ್ಯೆಯಾಗಿದ್ದು ಇದು ಅವರ ಕ್ರೆಡಿಟ್ ಹಿಸ್ಟರಿಯ ಸಾರಾಂಶವನ್ನು ನೀಡುತ್ತದೆ. ಇದನ್ನು ಬ್ಯಾಂಕ್ ಹಾಗೂ ಹಣಕಾಸಿನ ಸಂಸ್ಥೆಗಳಾದ ಕ್ರೆಡಿಟ್ ಸಾಲದಾತರು ಒದಗಿಸುವ ಮಾಹಿತಿಯನ್ನು ಬಳಸಿ ಲೆಕ್ಕಾಚಾರ ಮಾಡಲಾಗುತ್ತದೆ. ಈ ಮಾಹಿತಿಯನ್ನು ಒಂದು ಹೆಚ್ಚು ಕಾಂಪ್ರಹೆನ್ಸಿವ್ ಕ್ರೆಡಿಟ್ ಮಾಹಿತಿ ವರದಿಯಾಗಿಯೂ ಸಂಗ್ರಹಿಸಲಾಗುತ್ತದೆ.

ಈ ವರದಿಯು, ಒಬ್ಬ ವ್ಯಕ್ತಿಯ ಎಲ್ಲಾ ಸಾಲ ಹಾಗೂ ಕ್ರೆಡಿಟ್ ಕಾರ್ಡ್, ಅವರ ಪಾವತಿ ಇತಿಹಾಸ, ಮತ್ತು ಅವರಿಗೆ ಕ್ರೆಡಿಟ್ ಕಾರ್ಡ್ ಅಥವಾ, ಅವರಿಗೆ ಸಾಲ ನೀಡಿರುವ ಸಾಲದಾತರಿಂದ ಸಂಗ್ರಹಿಸಿರುವ ವೈಯಕ್ತಿಕ ಗುರುತಿನ ಮಾಹಿತಿಯ ಸಾರಾಂಶವನ್ನು ಒಳಗೊಂಡಿರುತ್ತದೆ.

ಒಂದು ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್ ಒಬ್ಬ ವ್ಯಕ್ತಿಯ ಕ್ರೆಡಿಟ್ ಅರ್ಹತೆಯನ್ನು ಸೂಚಿಸುತ್ತದೆ. ಮುಖ್ಯವಾಗಿ, ಒಂದು ಉತ್ತಮ ಸ್ಕೋರ್ ಒಬ್ಬ ವ್ಯಕ್ತಿಯು ಬಿಲ್ ಹಾಗೂ ಸಾಲಗಳ ಒಳ್ಳೆಯ ಇತಿಹಾಸ ಹೊಂದಿದ್ದಾರೆ ಎಂದು ಸಂಭಾವ್ಯ ಸಾಲದಾತರಿಗೆ ತಿಳಿಸುತ್ತದೆ, ಹಾಗೂ ಅವರ ಸಾಲದ ಅಪ್ಲಿಕೇಶನ್ ಅನ್ನು ಅನುಮೋದಿಸಬೇಕೇ ಬೇಡವೇ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ.

ಒಳ್ಳೆಯ ಹಾಗೂ ಕಳಪೆ ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್ ಎಂದರೇನು?

ಕ್ರೆಡಿಟ್ ಮಾಹಿತಿ ಕಂಪೆನಿಗಳು ಕ್ರೆಡಿಟ್ ಸ್ಕೋರ್ ನ ವೈಯಕ್ತಿಕ ವ್ಯವಸ್ಥೆಯನ್ನು ಹೊಂದಿವೆ, ಹಾಗೂ ಒಂದು ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್ 300 ರಿಂದ 900 ರ ವ್ಯಾಪ್ತಿಯಲ್ಲಿ ಇರುತ್ತದೆ, ಇಲ್ಲಿ 900 ಗರಿಷ್ಠ ಸಾಧ್ಯ ಸ್ಕೋರ್ ಆಗಿದೆ. ಸಾಮಾನ್ಯವಾಗಿ, 700ಕ್ಕಿಂತ ಹೆಚ್ಚಿರುವ ಸ್ಕೋರ್ ಅನ್ನು ಒಳ್ಳೆಯ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ.

ಈಕ್ವಿಫ್ಯಾಕ್ಸ್ ಸ್ಕೋರ್ ವರ್ಗ ನೀವು ಈ ಸ್ಕೋರ್ ಅನ್ನು ಹೇಗೆ ಪಡೆದಿರಿ?
NH ಇತಿಹಾಸ ಇಲ್ಲ ನೀವು ಯಾವುದೇ ಕ್ರೆಡಿಟ್ ಕಾರ್ಡ್ ಅನ್ನು ಬಳಸಿರದ ಹಾಗೂ ಎಂದೂ ಸಾಲ ಪಡೆಯದ ಕಾರಣ ನೀವು ಕ್ರೆಡಿಟ್ ಹಿಸ್ಟರಿಯನ್ನು ಹೊಂದಿಲ್ಲ.
300-549 ಕಳಪೆ ನೀವು ಮರುಪಾವತಿಗಳನ್ನು ತಪ್ಪಿಸಿದ್ದೀರಿ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಇಎಂಐ ಗಳಲ್ಲಿ ಬೇಪಾವತಿ ಮಾಡಿದ್ದೀರಿ, ನಿಮ್ಮನ್ನು ಹೆಚ್ಚಿನ ಅಪಾಯವಾಗಿ ಪರಿಗಣಿಸಲಾಗುವುದು, ಹಾಗೂ ನಿಮಗೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು ಕಷ್ಟವಾಗಲಿದೆ.
550-649 ಸಾಧಾರಣ ನೀವು ಬಿಲ್/ಇಎಂಐ ಗಳ ವಿಳಂಬವಾದ ಪಾವತಿ ಅಥವಾ ಬಹು ಕ್ರೆಡಿಟ್ ವಿವಿಚಾರಣೆಗಳಂತಹ ಕೆಲವು ಅವ್ಯವಹಾರಗಳನ್ನು ಹೊಂದಿದ್ದೀರಿ, ಕೆಲ ಸಾಲದಾತರು ನಿಮಗೆ ಸಾಲವನ್ನು ನೀಡಲು ಮುಂದಾಗಬಹುದು, ಆದರೆ ನಿಮ್ಮ ಬಡ್ಡಿ ದರ ಹೆಚ್ಚಿರಬಹುದು.
650-749 ಒಳ್ಳೆಯ ನೀವು ಸರಿಯಾದ ಸಮಯಕ್ಕೆ ನಿಮ್ಮ ಕ್ರೆಡಿಟ್ ಪಾವತಿಗಳನ್ನು ಮಾಡುತ್ತಿದ್ದು ಜವಾಬ್ದಾರಿಯುತ ಕ್ರೆಡಿಟ್ ವರ್ತನೆಯನ್ನು ಹೊಂದಿರುತ್ತೀರಿ, ಹೆಚ್ಚಿನ ಸಾಲದಾತರು ನಿಮ್ಮ ಅರ್ಜಿಯನ್ನು ಪರಿಗಣಿಸುವರು, ಆದರೆ ನಿಮಗೆ ಅತ್ಯುತ್ತಮ ಡೀಲ್ ಗಳು ಸಿಗದೇ ಇರಬಹುದು.
750-900 ಅತ್ಯುತ್ತಮ ನೀವು ಯಾವುದೇ ಬೇಪಾವತಿ, ಸಾಲದ ಬಳಕೆ ಇತ್ಯಾದಿಗಳು ಇರದ ಒಂದು ಮಾದರಿ ಕ್ರೆಡಿಟ್ ಹಿಸ್ಟರಿಯನ್ನು ಹೊಂದಿರುವಿರಿ, ನೀವು ಡೀಫಾಲ್ಟರ್ ಆಗುವ ಅಪಾಯವನ್ನು ಕಡಿಮೆ ಎಂದು ಪರಿಗಣಿಸಲಾಗುವುದು, ಹಾಗೂ ಬ್ಯಾಂಕ್ ಮತ್ತು ಸಾಲದಾತ ಕಂಪೆನಿಗಳು ನಿಮಗೆ ಸಾಲ ಹಾಗೂ ಕ್ರೆಡಿಟ್ ಮೇಲೆ ಉತ್ತಮ ಡೀಲ್ ಗಳನ್ನೂ ನೀಡುವರು.

ಒಂದು ಒಳ್ಳೆಯ ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್ ಹೊಂದಿರುವುದು ಏಕೆ ಮಹತ್ವಪೂರ್ಣವಾಗಿದೆ?

ಕ್ರೆಡಿಟ್ ಸ್ಕೋರ್ ಒಬ್ಬ ವ್ಯಕ್ತಿಯ ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ, ಹಾಗೂ ಇದನ್ನು ಬ್ಯಾಂಕ್ ಮತ್ತು ಸಾಲದಾರ ಸಂಸ್ಥೆಗಳಿಗೆ ಒಬ್ಬ ವ್ಯಕ್ತಿಯ ಬಗ್ಗೆ ಹಣಕಾಸಿನ ನಿರ್ಧಾರಗಳನ್ನು ಮಾಡಲು ಸಹಾಯ ಮಾಡುತ್ತದೆ.

ಈ ಸ್ಕೋರ್ ಅನ್ನು ಒಬ್ಬ ವ್ಯಕ್ತಿಯ ಕ್ರೆಡಿಟ್ ಹಿಸ್ಟರಿ, ಸಾಲಗಳು, ಕ್ರೆಡಿಟ್ ಕಾರ್ಡ್ ಪಾವತಿಗಳು, ಬೇಪಾವತಿ ಮುಂತಾದವುಗಳನ್ನು ಬಳಸಿ ಆಲ್ಗಾರಿದ್ಮ್ ಗಳ ಮೂಲಕ ಲೆಕ್ಕಾಚಾರ ಮಾಡುವುದರಿಂದ, ಅವರು ಸಾಲ ಮತ್ತು ಕ್ರೆಡಿಟ್ ಗಳಲ್ಲಿ ಬೇಪಾವತಿ ಮಾಡಬಹುದಾದ ಸಾಧ್ಯತೆಯನ್ನು ಇದು ಪ್ರತಿಬಿಂಬಿಸುತ್ತದೆ. ಸಾಮಾನ್ಯವಾಗಿ, ಸಾಲದಾತರು ಉತ್ತಮ ಸ್ಕೋರ್ ಗಳನ್ನು ಹೊಂದಿರುವ ಸಾಲಗಾರರಿಗೆ ಆದ್ಯತೆ ನೀಡುತ್ತಾರೆ(ಅಂದರೆ ಸಮಯದ ಮರುಪಾವತಿಯ ಸುದೀರ್ಘ ಇತಿಹಾಸ ಹಾಗೂ ಉತ್ತಮ ಹಣಕಾಸಿನ ನಿರ್ಧಾರಗಳು).

ಆದ್ದರಿಂದ, ಉತ್ತಮ ಸ್ಕೋರ್ ಹೊಂದಿರುವವರು ಉತ್ತಮ ಬಡ್ಡಿ ದರವನ್ನು ಪಡೆಯುತ್ತಾರೆ, ಹಾಗೂ ಇದು ಅವರಿಗೆ ಉತ್ತಮ ಸಾಲದ ಒಪ್ಪಂದದ ಮಾತುಕತೆ ನಡೆಸುವ ಹಾಗೂ ಇನ್ನೂ ಹಲವು ಅಧಿಕಾರಗಳನ್ನು ನೀಡುತ್ತದೆ. ಇದನ್ನು ಖಚಿತಪಡಿಸಲು ಪ್ರತಿಯೊಬ್ಬ ವ್ಯಕ್ತಿಯೂ ಅವರ ಸ್ಕೋರ್ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ತಿಳಿದಿರಬೇಕು, ಹಾಗೂ ಒಳ್ಳೆಯ ಸ್ಕೋರ್ ಅನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು.

ಒಬ್ಬ ವ್ಯಕ್ತಿಯ ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ.

ಒಬ್ಬ ವ್ಯಕ್ತಿಯ ಈಕ್ವಿಫ್ಯಾಕ್ಸ್ ಸ್ಕೋರ್ ಅನ್ನು ಕೆಲ ಪ್ರಮುಖ ಅಂಶಗಳನ್ನು ಬಳಸಿ ಲೆಕ್ಕಾಚಾರ ಮಾಡಲಾಗುತ್ತದೆ. ಅವು ಈ ರೀತಿ ಇವೆ:

ಅಂಶಗಳು ಈ ಅಂಶಗಳ ಮೇಲೆ ಏನೆಲ್ಲಾ ಪರಿಣಾಮಗಳನ್ನು ಬೀರುತ್ತವೆ
ಪಾವತಿ ಇತಿಹಾಸ ಕ್ರೆಡಿಟ್ ಕಾರ್ಡ್ ಬಿಲ್, ಸಾಲ ಮತ್ತು ಇಎಂಐ ಗಳ ಸರಿಯಾದ ಸಮಯದಲ್ಲಿ ಮರುಪಾವತಿ, ನಿಮ್ಮ ಪಾವತಿಗಳು ವಿಳಂಬ ಅಥವಾ ಬೇಪಾವತಿ ಆದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ.
ಕ್ರೆಡಿಟ್ ಹಿಸ್ಟರಿಯ ಅವಧಿ ನೀವು ಕ್ರೆಡಿಟ್ ಅಕೌಂಟ್ ಅನ್ನು ಹೊಂದಿರುವ ಅವಧಿ, ಹಳೆಯ ಅಕೌಂಟ್ ಹಾಗೂ ಕಾರ್ಡ್ ಗಳು ನೀವು ಸತತವಾಗಿ ತಮ್ಮ ಬಿಲ್ ಗಳನ್ನು ಸರಿಯಾದ ಸಮಯದಲ್ಲಿ ಪಾವತಿಸುತ್ತಿದ್ದೀರಿ ಎಂದು ಸಾಲದಾತರಿಗೆ ಖಚಿತಪಡಿಸುತ್ತದೆ.
ಸಾಲದ ಬಳಕೆ ನೀವು ಬಳಸುವ ಕ್ರೆಡಿಟ್ ಮಿತಿಯ ಮೊತ್ತ, ಮಾದರಿಯಂತೆ ಒಬ್ಬ ವ್ಯಕ್ತಿಯು ತನ್ನ ಕ್ರೆಡಿಟ್ ಮಿತಿಯ 30% ಕ್ಕಿಂತ ಹೆಚ್ಚು ಖರ್ಚನ್ನು ಮಾಡಬಾರದು; ಇದು ಅದಕ್ಕಿಂತ ಹೆಚ್ಚಾದರೆ, ನಿಮ್ಮ ಸ್ಕೋರ್ ಕಡಿಮೆಯಾಗಬಹುದು.
ಕ್ರೆಡಿಟ್ ಮಿಕ್ಸ್ ನೀವು ಹೊಂದಿರುವ ಕ್ರೆಡಿಟ್ ಪ್ರಕಾರಗಳನ್ನು ಉಲ್ಲೇಖಿಸುತ್ತದೆ; ಎರಡು ಪ್ರಕಾರಗಳಿವೆ: ಅಸುರಕ್ಷಿತ ಸಾಲಗಳು( ಉದಾಹರಣೆಗೆ ಕ್ರೆಡಿಟ್ ಕಾರ್ಡ್ ಮತ್ತು ವೈಯಕ್ತಿಕ ಸಾಲಗಳು) ಮತ್ತು ಅಸುರಕ್ಷಿತ ಸಾಲಗಳು (ಉದಾಹರಣೆಗೆ ವಾಹನ ಸಾಲ ಗಳು ಮತ್ತು ಹೋಮ್ ಲೋನ್ ಗಳು), ಎರಡರ ಮಿಶ್ರಣವನ್ನು ಹೊಂದಿರಲು ಶಿಫಾರಸು ಮಾಡಲಾಗಿದೆ.
ಹೊಸ ಕ್ರೆಡಿಟ್ ವಿಚಾರಣೆಗಳು ನೀವು ಕ್ರೆಡಿಟ್ ಕಾರ್ಡ್, ಸಾಲ, ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಿರುವ ಬಾರಿ, ಒಂದು ಹೆಚ್ಚಿನ ಸಂಖ್ಯೆಯ ವಿಚಾರಣೆಗಳು ನಿಮ್ಮ ಸ್ಕೋರ್ ಅನ್ನು ಕಡಿಮೆ ಮಾಡಬಹುದು.

ನಿಮ್ಮ ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದು ಹೇಗೆ?

ಪ್ರಸ್ತುತ, ಕಂಪೆನಿಯಿಂದ ನೇರವಾಗಿ ಅವರ ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್ ಮತ್ತು ವರದಿಯನ್ನು ಪಡೆಯಲು, ನೀವು ಒಂದು ಫಾರ್ಮ್ ಅನ್ನು ಭರ್ತಿ ಮಾಡಿ ಅದನ್ನು ಕೊರಿಯರ್, ಪೋಸ್ಟ್ ಅಥವಾ ಇಮೇಲ್ ಮೂಲಕ ಕಳಿಸಬೇಕಾಗುತ್ತದೆ.

ಆರ್‌ಬಿಐ, ಕಡ್ಡಾಯಗೊಳಿಸಿರುವಂತೆ, ಎಲ್ಲಾ ಬಳಕೆದಾರರು ಪ್ರತೀ ವರ್ಷ ಒಂದು ಉಚಿತ ಕ್ರೆಡಿಟ್ ರಿಪೋರ್ಟ್ ಪಡೆಯಲು ಅರ್ಹರಾಗಿರುತ್ತಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಕ್ರೆಡಿಟ್ ರಿಪೋರ್ಟ್ ಅನ್ನು ಪಡೆಯಲು, ನೀವು ಒಂದು ಸಣ್ಣ ಶುಲ್ಕವನ್ನು ಭರಿಸಬೇಕಾಗುತ್ತದೆ.

ನೀವು ಇಲ್ಲಿ ನೀಡಿರುವ ಹಂತಗಳನ್ನು ಅನುಸರಿಸಬಹುದಾಗಿದೆ:

  • ಹಂತ 1: ಈಕ್ವಿಫ್ಯಾಕ್ಸ್ ವೆಬ್ಸೈಟ್ ನಲ್ಲಿ ಕ್ರೆಡಿಟ್ ರಿಪೋರ್ಟ್ ರಿಕ್ವೆಸ್ಟ್ ಫಾರ್ಮ್ ಅನ್ನು ಭರ್ತಿ ಮಾಡಿ. 

  • ಹಂತ 2: ನಿಮ್ಮ ಗುರುತಿನ ಪುರಾವೆ(ವೋಟರ್ಸ್ ಐಡಿ, ಡ್ರೈವಿಂಗ್ ಲೈಸನ್ಸ್, ಪಾಸ್‌ಪೋರ್ಟ್‌ ಕಾಪಿ, ಅಥವಾ ಪ್ಯಾನ್ ಕಾರ್ಡ್) ಮತ್ತು ವಿಳಾಸದ ಪುರಾವೆ(ವಿದ್ಯುತ್ ಬಿಲ್, ಫೋನ್ ಬಿಲ್, ಬ್ಯಾಂಕ್ ಸ್ಟೇಟ್ಮೆಂಟ್, ರೇಶನ್ ಕಾರ್ಡ್, ಅಥವಾ ಬಾಡಿಗೆ ಒಪ್ಪಂದ) ಯ ಸ್ವ-ದೃಢೀಕೃತ ಪ್ರತಿಯನ್ನು ಲಗತ್ತಿಸಿ.

  • ಹಂತ 3: ನೀವು ಪಾವತಿ ಮಾಡಿದ ಕ್ರೆಡಿಟ್ ರಿಪೋರ್ಟ್ ಅನ್ನು ಪಡೆಯುಬೇಕೆಂದಿದ್ದರೆ, " ಈಕ್ವಿಫ್ಯಾಕ್ಸ್ ಕ್ರೆಡಿಟ್ ಇನ್ಫರ್ಮೇಷನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್" ಹೆಸರಿನಲ್ಲಿ ಒಂದು ಡಿಡಿ ಯನ್ನು ಲಗತ್ತಿಸಿ. ಇದು ₹138 ಮತ್ತು( ಕೇವಲ ಕ್ರೆಡಿಟ್ ರಿಪೋರ್ಟ್ ಗೆ) ₹472 ಆಗಿರುತ್ತದೆ (ಕ್ರೆಡಿಟ್ ರಿಪೋರ್ಟ್ ಮತ್ತು ಕ್ರೆಡಿಟ್ ಸ್ಕೋರ್ ಎರಡಕ್ಕೆ). 

  • ಹಂತ 4: ಮೇಲೆ ನೀಡಲಾದ ಡಾಕ್ಯುಮೆಂಟುಗಳನ್ನು ಕೊರಿಯರ್, ಪೋಸ್ಟ್, ಅಥವಾ ಈಮೇಲ್ ಮೂಲಕ ಕಳಿಸಿ. 

  • ಈ-ಮೇಲ್ ಮೂಲಕ ಕಳಿಸುವುದಾದರೆ, ಸ್ಕ್ಯಾನ್ ಮಾಡಲಾದ ಡಾಕ್ಯುಮೆಂಟುಗಳನ್ನು ecissupport@equifax.comಗೆ ಕಳಿಸಿ

  • ಪೋಸ್ಟ್ ಮೂಲಕ ಕಳುಹಿಸಲು ಬಯಸಿದರೆ, ಡಾಕ್ಯುಮೆಂಟುಗಳನ್ನು ಇಲ್ಲಿಗೆ ಕಳುಹಿಸಿ:

ಗ್ರಾಹಕ ಸೇವಾ ತಂಡ - ಈಕ್ವಿಫ್ಯಾಕ್ಸ್ ಕ್ರೆಡಿಟ್ ಮಾಹಿತಿ ಸರ್ವಿಸಸ್ ಲಿಮಿಟೆಡ್, 931, 3ನೇ ಮಹಡಿ, ಬಿಲ್ಡಿಂಗ್ 9, ಸಾಲಿಟೈರ್ ಕಾರ್ಪೊರೇಟ್ ಪಾರ್ಕ್, ಅಂಧೇರಿ ಘಾಟ್ಕೊಪರ್ ಲಿಂಕ್ ರಸ್ತೆ, ಮೀರಾಡೋರ್ ಹೋಟೆಲ್ ಎದುರು
ಅಂಧೇರಿ ಈಸ್ಟ್, ಮುಂಬೈ- 400 093

ನೀವು ನಿಮ್ಮ ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್ ಅನ್ನು ಆನ್‌ಲೈನ್‌ ಥರ್ಡ್ ಪಾರ್ಟಿ ವೇದಿಕೆಗಳ ಮೂಲಕವೂ ಪಡೆಯಬಹುದಾಗಿದೆ, ಉದಾಹರಣೆಗೆ ಕ್ರೆಡಿಟ್ ಮಂತ್ರಿ ಆಪ್ ,ಕ್ರೆಡಿಟ್ಸ್ಮಾರ್ಟ್, ಅಥವಾ ಇಟಿಮನಿ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಒಬ್ಬ ವ್ಯಕ್ತಿಯ ಯಾವ ಅಂಶಗಳು ಅವರ ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು?

ಒಬ್ಬ ವ್ಯಕ್ತಿಯ ಈಕ್ವಿಫ್ಯಾಕ್ಸ್ ಸ್ಕೋರ್ ಅನ್ನು ಲೆಕ್ಕಾಚಾರ ಮಾಡಲು ಬಳಸುವ ಪ್ರಮುಖ ಅಂಶಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಅದಾಗ್ಯೂ, ಇನ್ನೂ ಕೆಲ ಅಸ್ಥಿರ ಮೌಲ್ಯಗಳನ್ನು ಪರಿಗಣಿಸಲಾಗುತ್ತವೆ, ಉದಾಹರಣೆಗೆ:

  • ಕ್ರೆಡಿಟ್ ಮರುಪಾವತಿ ಇತಿಹಾಸ
  • ಕ್ರೆಡಿಟ್ ಬಳಕೆ
  • ನೀವು ಹೊಂದಿರುವ
  • ಕ್ರೆಡಿಟ್ ಕಾರ್ಡ್ ಗಳ ಸಂಖ್ಯೆ
  • ಜನಸಂಖ್ಯಾ ಅಸ್ಥಿರಗಳು
  • ನಿಮ್ಮ ಆದಾಯ

ಈಕ್ವಿಫ್ಯಾಕ್ಸ್ ಮತ್ತು ಸಿಬಿಲ್ ಕ್ರೆಡಿಟ್ ಸ್ಕೋರ್ ಮಧ್ಯೆ ಇರುವ ವ್ಯತ್ಯಾಸಗಳೇನು?

ಈಕ್ವಿಫ್ಯಾಕ್ಸ್ ಮತ್ತು ಸಿಬಿಲ್ ಎರಡೂ ಕ್ರೆಡಿಟ್ ಬ್ಯೂರೋಗಳು ಅಥವಾ ಕ್ರೆಡಿಟ್ ಮಾಹಿತಿ ಕಂಪೆನಿಗಳಾಗಿವೆ. ಇವುಗಳು ಆರ್‌ಬಿಐ ಇಂದ ಪರವಾನಗಿ ಪಡೆದಿರುವ ಭಾರತದ ನಾಲ್ಕು ಕಂಪೆನಿಗಳಲ್ಲಿ ಎರಡಾಗಿವೆ. ಎರಡೂ ಬಳಕೆದಾರರಿಗೆ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಗಳನ್ನು ಒದಗಿಸುತ್ತವೆ. 

ಇವುಗಳ ಮಧ್ಯೆ ಇರುವ ಕೆಲವು ವ್ಯತ್ಯಾಸಗಳು ಈ ರೀತಿ ಇವೆ:

  • ಎರಡು ಬ್ಯುರೋಗಳೂ ಪ್ರತೀ ವರ್ಷ ಒಂದು ಉಚಿತ ಕ್ರೆಡಿಟ್ ಕಾರ್ಡ್ ರಿಪೋರ್ಟ್ ಅನ್ನು ನೀಡುತ್ತವೆಯಾದರೂ, ಒಂದು ಹೆಚ್ಚುವರಿ ಸಿಬಿಲ್ ವರದಿ ಯ ಬೆಲೆ ₹550, ಮತ್ತು ಒಂದು ಹೆಚ್ಚುವರಿ ಕ್ರಿಫ್ ಹೈಮಾರ್ಕ್ ಕ್ರೆಡಿಟ್ ವರದಿಯ ಬೆಲೆ ₹138 ಆಗಿದೆ (ಕ್ರೆಡಿಟ್ ರಿಪೋರ್ಟ್ ಮತ್ತು ಕ್ರೆಡಿಟ್ ಸ್ಕೋರ್ ಎರಡೂ ಬೇಕಿದ್ದರೆ ಬೆಲೆ ₹472 ಆಗಿದೆ). 
  • ನೀವು ವರ್ಷದಲ್ಲಿ ಹಲವು ಬಾರಿ ಸಿಬಿಲ್ ರಿಪೋರ್ಟ್ ಗಳನ್ನು ಪಡೆಯಬಹುದು, ಆದರೆ ಈಕ್ವಿಫ್ಯಾಕ್ಸ್ ನಲ್ಲಿ ಕ್ರೆಡಿಟ್ ರಿಪೋರ್ಟ್ ಅನ್ನು ಪಡೆಯುವ ಅವಕಾಶ ವರ್ಷದಲ್ಲಿ ಕೇವಲ 4 ಬಾರಿಯಾಗಿದೆ.
  • ನೀವು ಸಿಬಿಲ್ ಗೆ ಪಾವತಿಯನ್ನು ನೆಟ್ ಬ್ಯಾಂಕಿಂಗ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕವೂ ಮಾಡಬಹುದು ಆದರೆ ಈಕ್ವಿಫ್ಯಾಕ್ಸ್ ಕೇವಲ ಡಿಮಾಂಡ್ ಡ್ರಾಫ್ಟ್ ಅನ್ನು ಸ್ವೀಕರಿಸುತ್ತದೆ.

ಈಕ್ವಿಫ್ಯಾಕ್ಸ್ ಒದಗಿಸುವ ಇತರ ಸೇವೆಗಳು ಯಾವುವು?

ಈಕ್ವಿಫ್ಯಾಕ್ಸ್ ಒದಗಿಸುವ ಉತ್ಪನ್ನಗಳ ಹಾಗೂ ಸೇವೆಗಳ ಪಟ್ಟಿ ಇಲ್ಲಿದೆ:

ಬಳಕೆದಾರ ಕ್ರೆಡಿಟ್ ಬ್ಯೂರೋ: ಇದು ನಿರ್ದಿಷ್ಟ ಆಲ್ಗಾರಿದ್ಮ್ ಮತ್ತು ವಿಶ್ಲೇಷಕಗಳನ್ನು ಬಳಸಿ ಕ್ರೆಡಿಟ್ ಮಾಹಿತಿ ವರದಿ ಮತ್ತು ಕ್ರೆಡಿಟ್ ಸ್ಕೋರ್ ಗಳನ್ನು ಒದಗಿಸುತ್ತದೆ. ಇದು ಗ್ರಾಹಕರಿಗೆ ಪೋರ್ಟ್‌ಫೋಲಿಯೋ ವಿಮರ್ಶೆಯನ್ನು ಸಹ ನೀಡುತ್ತದೆ, ಅಲ್ಲಿ ಅವರು ನಷ್ಟವನ್ನು ಕಡಿತಗೊಳಿಸಲು ಮತ್ತು ಆದಾಯವನ್ನು ಗಳಿಸಲು ಸಹಾಯ ಮಾಡುವ ಭವಿಷ್ಯಸೂಚಕ ಒಳನೋಟವನ್ನು ಬಳಸುತ್ತಾರೆ.

ಕಿರುಬಂಡವಾಳ ಬ್ಯುರೋ: ಈಕ್ವಿಫ್ಯಾಕ್ಸ್‌ನ ಕಿರುಬಂಡವಾಳ ವಿನಿಮಯವು ಮೈಕ್ರೋಫೈನಾನ್ಸ್ ಇನ್‌ಸ್ಟಿಟ್ಯೂಷನ್ಸ್ ನೆಟ್‌ವರ್ಕ್ (MFIN) ನೊಂದಿಗೆ ಸಂಯೋಜಿತವಾಗಿದೆ ಮತ್ತು ಇದು ಕಿರುಬಂಡವಾಳ ಕ್ರೆಡಿಟ್ ಮಾಹಿತಿ ವರದಿ, ಕಿರುಬಂಡವಾಳ ಸ್ಕೋರ್‌ ಮತ್ತು ಮೈಕ್ರೋಫೈನಾನ್ಸ್ ಪೋರ್ಟ್‌ಫೋಲಿಯೊ ವಿಮರ್ಶೆಗಳನ್ನು ಒದಗಿಸುತ್ತದೆ.

ಬಹು ಬ್ಯುರೋ ಪರಿಹಾರಗಳು: ವಿವಿಧ ಕ್ರೆಡಿಟ್ ಬ್ಯೂರೋಗಳಿಂದ ಕ್ರೋಢೀಕರಿಸಿದ ಮಾಹಿತಿಗಾಗಿ ಇದು ಒಂದೇ ಹಂತದ ವಿಚಾರಣೆಯನ್ನು ನೀಡುತ್ತದೆ.

ಮೌಲ್ಯವರ್ಧಿತ ಸೇವೆಗಳು: ಈಕ್ವಿಫ್ಯಾಕ್ಸ್, ಗ್ರಾಹಕರಿಗೆ ಕ್ರೆಡಿಟ್ ವಂಚನೆ ಮತ್ತು ಅಪಾಯ ನಿರ್ವಹಣೆ ತಂತ್ರಗಳು, ಪೋರ್ಟ್ಫೋಲಿಯೋ ನಿರ್ವಹಣೆ, ಸಂಗ್ರಹ ಉತ್ಪನ್ನಗಳು ಮತ್ತು ಪರಿಹಾರಗಳು, ಉದ್ಯಮದ ವಿಶ್ಲೇಷಣೆ, ಮುಂತಾದವುಗಳಂತಹ ಹಲವಾರು ಮೌಲ್ಯವರ್ಧಿತ ಸೇವೆಗಳನ್ನು ನೀಡುತ್ತದೆ.

ನಿಮ್ಮ ಈಕ್ವಿಫ್ಯಾಕ್ಸ್ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಅನ್ನು ಯಾರೆಲ್ಲಾ ಪ್ರವೇಶಿಸಬಹುದಾಗಿದೆ?

ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಒಳಗೊಂಡಿರುವ ನೋಂದಾಯಿತ ಮತ್ತು ಅಧಿಕೃತ ಈಕ್ವಿಫ್ಯಾಕ್ಸ್ ಸದಸ್ಯರು, ಹಾಗೆಯೇ ಕ್ರೆಡಿಟ್ ಮಾಹಿತಿ ಕಂಪನಿಗಳ ಕಾಯಿದೆಯ ಅವಶ್ಯಕತೆಗಳನ್ನು ಪೂರೈಸುವ ಇತರರು ನಿಮ್ಮ ಕ್ರೆಡಿಟ್ ಇತಿಹಾಸವನ್ನು ಪಡೆಯಬಹುದಾಗಿದೆ.