ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್
ಕಮರ್ಷಿಯಲ್ ವೆಹಿಕಲ್ ಇನ್‌ಶೂರೆನ್ಸ್ ನೀತಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ನವೀಕರಿಸಿ

Third-party premium has changed from 1st June. Renew now

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್‌ನಲ್ಲಿ ಕನ್ಸ್ಯೂಮೇಬಲ್ ಕವರ್ ಆ್ಯಡ್ ಆನ್

ಪಾಲಿಸಿಹೋಲ್ಡರ್‌ಗೆ ಇನ್ಶೂರ್ಡ್‌ ವೆಹಿಕಲ್‌ನ ಕನ್ಸ್ಯೂಮೇಬಲ್‌ಗೆ ತಗುಲುವ ವೆಚ್ಚವನ್ನು ಇನ್ಶೂರೆನ್ಸ್ ಕಂಪನಿ ಭರಿಸುತ್ತದೆ ಎಂಬ ಭರವಸೆಯನ್ನು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್‌ನ ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಒದಗಿಸುತ್ತದೆ. ಪ್ರೀಮಿಯಂನಂತೆ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಮೂಲಕ ಈ ಆ್ಯಡ್-ಆನ್ ನ ಪ್ರಯೋಜನವನ್ನು ಪಡೆಯಬಹುದು. 

ಕವರ್ ನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:

ಇಲ್ಲಿ ಸ್ಪಷ್ಟಪಡಿಸಬೇಕಾದ ಅಂಶವೆಂದರೆ ಕಮರ್ಷಿಯಲ್ ವೆಹಿಕಲ್ ಗಳ ಕೆಟಗರಿಯ ಅಡಿಯಲ್ಲಿ ಬರುವ ಎಲ್ಲಾ ಮೂರು ವಿಧದ ವೆಹಿಕಲ್ ಗಳಿಗೆ ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಲಭ್ಯವಾಗುತ್ತದೆ.

ಸೂಚನೆ: ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್‌ಡಿಎಐ) ನಲ್ಲಿ ಯುಐಎನ್ ನಂಬರ್ IRDAN158RP0002V01201819/A0042V01201920 (ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್‌ಗಳು), IRDAN158RP0001V01201819/A0034V01201920 (ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್), ಮತ್ತು IRDAN158RP0003V01201819/A0051V01201920 (ವಿವಿಧ ಮತ್ತು ವಿಶೇಷ ವಿಧಾನದ ವೆಹಿಕಲ್‌ಗಳು) ನಲ್ಲಿ ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ- ಕನ್ಸ್ಯೂಮೇಬಲ್ ಕವರ್ ಎಂಬ ಹೆಸರಿನಲ್ಲಿ ಕಮರ್ಷಿಯಲ್ ವೆಹಿಕಲ್‌ಗಳಲ್ಲಿ ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಫೈಲ್ ಆಗಿದೆ. 

ಕಮರ್ಷಿಯಲ್ ವೆಹಿಕಲ್‌ಗಳಲ್ಲಿ ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತವೆ?

ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಈ ಕೆಳಗಿನ ಕವರೇಜ್ ಗಳನ್ನು ಒದಗಿಸುತ್ತದೆ:

ಮೂಲ ಪಾಲಿಸಿಯ ಸೆಕ್ಷನ್ I- ಓನ್ ಡ್ಯಾಮೇಜ್ ಪೆರಿಲ್ ಕವರ್‌ನ ಹೊರತಾಗಿ ಇನ್ಶೂರ್ಡ್ ವೆಹಿಕಲ್/ ಅಥವಾ ಅದರ ಬಿಡಿಭಾಗಗಳ ಭಾಗಶಃ ನಷ್ಟ ಜರುಗಿದ ಸಂದರ್ಭದಲ್ಲಿ ಹೊಸ ಕನ್ಸ್ಯೂಮೇಬಲ್‌ಗ‍ಳ ರಿಪ್ಲೇಸ್‌ಮೆಂಟ್/ ರಿಪ್ಲೆನಿಶಿಂಗ್ ವೆಚ್ಚ ನಷ್ಟದ ಹರಿಹಾರವನ್ನು ಇನ್ಶೂರರ್ ಒದಗಿಸುವ ಭರವಸೆಯನ್ನು ಈ ಆ್ಯಡ್ ಕವರ್ ಒದಗಿಸುತ್ತದೆ.

ಇಲ್ಲಿ ಸ್ಪಷ್ಟಪಡಿಸಬೇಕಾದ ವಿಷಯವೆಂದರೆ ಕನ್ಸ್ಯೂಮೇಬಲ್ ಎಂದರೆ ಅಪಘಾತ ಸಂದರ್ಭದಲ್ಲಿ ಡ್ಯಾಮೇಜ್ ಆಗದ ಮತ್ತು ಸೀಮಿತ ಜೀವಿತಾವಧಿ ಹೊಂದಿರುವ ಅಥವಾ ಬಳಕೆ ಸಂದರ್ಭದಲ್ಲಿ ಪೂರ್ತಿಯಾಗಿಯ ಭಾಗಶಃವಾಗಿ ಬಳಸಲ್ಪಟ್ಟಿದ್ದು ಮತ್ತು ಮರುಬಳಕೆಗೆ ಅನರ್ಹವಾಗಿದ್ದರಿಂದ ರಿಪ್ಲೇಸ್‌ಮೆಂಟ್ ಅಗತ್ಯವಿರುವ ಇನ್ಶೂರ್ಡ್ ವೆಹಿಕಲ್‌ನ ಯಾವುದೇ ವಸ್ತುಗಳ‍ು. ಎಂಜಿನ್ ಆಯಿಲ್, ಗೇರ್-ಬಾಕ್ಸ್ ಆಯಿಲ್, ಬೋಲ್ಟ್ ಗಳು, ಸ್ಕ್ರೂ ನಟ್ ಗಳು, ಆಯಿಲ್ ಫಿಲ್ಟರ್, ರಿವೆಟ್ಸ್ ಇತ್ಯಾದಿಗಳನ್ನು ಅವು ಒಳಗೊಂಡಿವೆ.

ಏನೆಲ್ಲಾ ಕವರ್ ಆಗುವುದಿಲ್ಲ?

ವೆಹಿಕಲ್ ಇನ್ಶೂರೆನ್ಸ್ (ಪ್ರಾಥಮಿಕ ಪಾಲಿಸಿ) ಅಡಿಯಲ್ಲಿ ಇರುವ ಜನರಲ್ ಹೊರಗಿಡುವಿಕೆಗಳಿಗೆ ಸೇರಿಸಿದ ಹೆಚ್ಚುವರಿ ಸೇರ್ಪಡೆಗಳನ್ನು ಪಟ್ಟಿ ಮಾಡಲಾಗಿದೆ. ಈ ಕೆಳಗೆ ಕೊಟ್ಟಿರುವ ಸಂದರ್ಭಗಳಲ್ಲಿ ಮಾಡುವ ಯಾವುದೇ ಕ್ಲೈಮ್ ಗಳಿಗೆ ಈ ಕವರ್ ನಲ್ಲಿ ಪಾವತಿ ಮಾಡುವ ಹೊಣೆಗಾರಿಕೆ ನಾವು ಹೊಂದಿರುವುದಿಲ್ಲ: 

  • ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ವ್ಯಾಲಿಡ್ ಆಗದಿದ್ದಾಗ ಯಾವುದೇ ಕ್ಲೈಮ್ ಪರಿಗಣಿಸಲಾಗುವುದಿಲ್ಲ. 

  • ನೀವು ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಓನ್ ಡ್ಯಾಮೇಜ್ ಕ್ಲೈಮ್ ಮಾಡಿದ್ದರೆ ಅದು ಪಾವತಿಗೆ/ ಸ್ವೀಕಾರಕ್ಕೆ ಅರ್ಹತೆ ಹೊಂದಿಲ್ಲದಿರುವುದಿಂದ ಇನ್ಶೂರರ್ ಪಾವತಿ ಹೊಣೆಗಾರಿಕೆ ಹೊಂದಿರುವುದಿಲ್ಲ.

  • ಇನ್ಶೂರ್ಡ್ ವೆಹಿಕಲ್ ನ ಒಟ್ಟು ನಷ್ಟ ಅಥವಾ ರಚನಾತ್ಮಕ ಒಟ್ಟು ನಷ್ಟಕ್ಕೆ ಕ್ಲೈಮ್ ಮಾಡಿದ್ದರೆ ಇನ್ಶೂರರ್ ಪಾವತಿ ಮಾಡಬೇಕಾಗಿಲ್ಲ.

  • ಯಾವುದೇ ಇನ್ನಿತರ ವಿಧದ ಇನ್ಶೂರೆನ್ಸ್ ಪಾಲಿಸಿ/ಕವರ್ ನಲ್ಲಿ ಕವರ್ ಆಗಿದ್ದ ನಷ್ಟಕ್ಕೆ ಮಾಡಿದ ಕ್ಲೈಮ್.

  • ರಿಪೇರಿ ಆರಂಭಿಸುವ ಮೊದಲು ಇನ್ಶೂರರ್ ಗೆ ಡ್ಯಾಮೇಜ್/ ನಷ್ಟ ಪರಿಶೀಲಿಸುವ ಅವಕಾಶವನ್ನು ಒದಗಿಸದಿದ್ದರೆ ಕ್ಲೈಮ್ ರಿಜಿಸ್ಟರ್ ಆಗುವುದಿಲ್ಲ.

  • ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ರಿಪ್ಲೇಸ್ ಮೆಂಟ್ ಗೆ ಅಪ್ರೂವ್ ಆಗದೇ ಇರುವ ಕನ್ಸ್ಯೂಮೇಬಲ್ ಗೆ ಸಂಬಂಧಿಸಿದ ಯಾವುದೇ ಭಾಗ/ ಉಪ ಭಾಗ/ ಬಿಡಿಭಾಗಗಳಿಗೆ ಮಾಡಿದ ಕ್ಲೈಮ್.

  • ಘಟನೆ ನಡೆದ 30 ದಿನಗಳ ಬಳಿಕ ನಷ್ಟವನ್ನು ರಿಪೋರ್ಟ್ ಮಾಡಿದರೆ ಇನ್ಶೂರರ್ ಕ್ಲೈಮ್ ಪಾವತಿ ಮಾಡುವ ಹೊಣೆಗಾರಿಕೆ ಹೊಂದಿರುವುದಿಲ್ಲ. ಆದಾಗ್ಯೂ, ನೀವು ತಡವಾಗಿದ್ದಕ್ಕೆ ಲಿಖಿತವಾಗಿ ಕೊಡುವ ಕಾರಣವನ್ನು ಆಧರಿಸಿಕೊಂಡು ಅವರು ತಮ್ಮ ಸ್ವಂತ ವಿವೇಚನೆ ಬಳಸಿಕೊಂಡು ಸೂಚನೆ ತಡವಾಗಿದ್ದನ್ನು ಪರಿಗಣಿಸದೆಯೂ ಇರಬಹುದು. 

ಡಿಸ್‌ಕ್ಲೈಮರ್ - ಈ ಬರಹವನ್ನು ಮಾಹಿತಿ ನೀಡುವ ಉದ್ದೇಶದಿಂದ ಮತ್ತು ಡಿಜಿಟ್ ನ ಪಾಲಿಸಿ ವರ್ಡಿಂಗ್ಸ್ ಡಾಕ್ಯುಮೆಂಟ್ ಕಾರಣದಿಂದ ಇಂಟರ್ ನೆಟ್ ನ ನಾನಾ ಮೂಲಗಳಿಂದ ಸಂಗ್ರಹಿಸಿ ರೂಪಿಸಲಾಗಿದೆ. ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ- ಕನ್ಸ್ಯೂಮೇಬಲ್ ಕವರ್ (UINs: IRDAN158RP0002V01201819/A0042V01201920, IRDAN158RP0001V01201819/A0034V01201920, ಮತ್ತು IRDAN158RP0003V01201819/A0051V01201920) ನ ವಿವರವಾದ ಕವರೇಜ್, ಹೊರಗಿಡುವಿಕೆ, ಕಂಡಿಷನ್‌ಗಳನ್ನು ತಿಳಿಯಲು, ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದಿ.

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನಲ್ಲಿ ಕನ್ಸ್ಯೂಮೇಬಲ್ ಕವರ್ ಆ್ಯಡ್-ಆನ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಕನ್ಸ್ಯೂಮೇಬಲ್ ಗಳ ಅಡಿಯಲ್ಲಿ ಇಂಧನ ಒಳಗೊಂಡಿದೆಯೇ?

ಇಲ್ಲ, ಕನ್ಸ್ಯೂಮೇಬಲ್ ಗಳ ಅಡಿಯಲ್ಲಿ ಇಂಧನ ಒಳಗೊಂಡಿಲ್ಲ.

ಒಂದು ವೇಳೆ ಇನ್ಶೂರ್ಡ್ ವೆಹಿಕಲ್ ಡಿಜಿಟ್ ನ ಅಧಿಕೃತ ರಿಪೇರಿ ಮಳಿಗೆಗಳಲ್ಲಿ ರಿಪೇರಿ ಆಗಿದಿದ್ದರೆ ಈ ಆ್ಯಡ್-ಆನ್ ಕವರ್ ನ ಪ್ರಯೋಜನವನ್ನು ನಾನು ಆನಂದಿಸಬಹುದೇ?

ಹೌದು, ಈ ಆ್ಯಡ್ ಆನ್ ಕವರ್ ಪ್ರಯೋಜನ ಯಾವುದೇ ವರ್ಕ್ ಶಾಪ್ ಗಳಲ್ಲಿ ರಿಪೇರಿ ಮಾಡಿದರೂ ಸಿಗಲಿದೆ. ಆದರೆ ಇಂಥಾ ಸಂದರ್ಭಗಳಲ್ಲಿ ನಿರ್ದಿಷ್ಟವಾಗಿ ಕಂಪನಿ ವೇವ್ ಆಫ್ ಮಾಡಲು ಒಪ್ಪಿಗೆ ನೀಡದಿದ್ದರೆ ನೀವು ಈ ಕವರ್ ನಲ್ಲಿ ಪಡೆದಿರುವ ಕ್ಲೈಮ್ ಮೊತ್ತದದಲ್ಲಿ ಶೇ.20ರಷ್ಟನ್ನು ಸಹಪಾವತಿ ಆಗಿ ಪಾವತಿಸಬೇಕಾಗುತ್ತದೆ.

ಮೂಲ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಬರುವ ಷರತ್ತುಗಳಿಗೆ ಕನ್ಸ್ಯೂಮೇಬಲ್ ಆ್ಯಡ್ ಆನ್ ಕವರ್ ಕ್ಲೈಮ್ ಗಳು ಒಳಪಟ್ಟಿರುತ್ತದೆಯೇ?

ಹೌದು, ಮೂಲ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಬರುವ ಷರತ್ತುಗಳಿಗೆ ಕ್ಲೈಮ್ ಗಳು ಒಳಪಟ್ಟಿರುತ್ತವೆ.