ಟ್ಯಾಕ್ಸಿ ಇನ್ಶೂರೆನ್ಸ್

ಟ್ಯಾಕ್ಸಿ/ಕ್ಯಾಬ್‌ಗಳಿಗೆ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್

I agree to the Terms & Conditions

Don’t have Reg num?
It’s a brand new vehicle

ಟ್ಯಾಕ್ಸಿ/ಕ್ಯಾಬ್‌ಗಳಿಗೆ ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಎಂದರೇನು?

ನಾನು ನನ್ನ ಟ್ಯಾಕ್ಸಿ/ಕ್ಯಾಬ್ ಅನ್ನು ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಜೊತೆಗೆ ಏಕೆ ಖರೀದಿಸಬೇಕು?

ಡಿಜಿಟ್ ಮೂಲಕ ಟ್ಯಾಕ್ಸಿ ಇನ್ಶೂರೆನ್ಸ್ ಅನ್ನು ಏಕೆ ಆರಿಸಬೇಕು?

ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ. ಹೇಗೆ ಎಂದು ತಿಳಿಯಿರಿ…

ನಿಮ್ಮ ವಾಹನದ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿ

ನಿಮ್ಮ ವಾಹನದ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮ್ಮ ವಾಹನದ ಐಡಿವಿ ಅನ್ನು ನಿಮ್ಮ ಆಯ್ಕೆಯಂತೆ ನೀವೇ ಕಸ್ಟಮೈಸ್ ಮಾಡಬಹುದು!

 24*7 ಬೆಂಬಲ

24*7 ಬೆಂಬಲ

ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯ ಲಭ್ಯವಿರುತ್ತದೆ.

ಸೂಪರ್-ಫಾಸ್ಟ್ ಕ್ಲೇಮ್ಸ್

ಸೂಪರ್-ಫಾಸ್ಟ್ ಕ್ಲೇಮ್ಸ್

ಸ್ಮಾರ್ಟ್‌ಫೋನ್ ಸಕ್ರಿಯಗೊಳಿಸಿದ ಸ್ವಯಂ ತಪಾಸಣಾ (self-inspection) ಪ್ರಕ್ರಿಯೆಗಳು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ!

ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ಅಪಘಾತಗಳು

ಅಪಘಾತಗಳು

ಅಪಘಾತದ ಸಂದರ್ಭದಲ್ಲಿ ನಿಮ್ಮ ಟ್ಯಾಕ್ಸಿ/ಕ್ಯಾಬ್‌ಗಳಿಗೆ ಉಂಟಾಗುವ ಹಾನಿಯನ್ನು ಒಳಗೊಂಡಿದೆ.

ಕಳ್ಳತನ

ಕಳ್ಳತನ

ಕಳ್ಳತನದಿಂದಾಗಿ ನಿಮ್ಮ ಟ್ಯಾಕ್ಸಿ/ಕ್ಯಾಬ್‌ಗಳಿಗೆ ಉಂಟಾಗುವ ನಷ್ಟ ಅಥವಾ ಹಾನಿಯನ್ನು ಒಳಗೊಂಡಿದೆ.

ಬೆಂಕಿ

ಬೆಂಕಿ

ಬೆಂಕಿಯಿಂದಾಗಿ ನಿಮ್ಮ ಟ್ಯಾಕ್ಸಿ/ಕ್ಯಾಬ್‌ಗಳಿಗೆ ಉಂಟಾಗುವ ಹಾನಿಗಳನ್ನು ಒಳಗೊಂಡಿದೆ.

ಪ್ರಕೃತಿ ವಿಕೋಪಗಳು

ಪ್ರಕೃತಿ ವಿಕೋಪಗಳು

ಯಾವುದೇ ನೈಸರ್ಗಿಕ ವಿಕೋಪದಿಂದ ನಿಮ್ಮ ಟ್ಯಾಕ್ಸಿ/ಕ್ಯಾಬ್‌ಗಳಿಗೆ ಉಂಟಾಗುವ ಹಾನಿಯನ್ನುಒಳಗೊಂಡಿದೆ .

ವೈಯಕ್ತಿಕ ಅಪಘಾತ

ವೈಯಕ್ತಿಕ ಅಪಘಾತ

ನಿಮ್ಮ ಟ್ಯಾಕ್ಸಿ/ಕ್ಯಾಬ್‌ ಅಪಘಾತಕ್ಕೀಡಾದರೆ ಹಾಗೂ ಆ ಸಂದರ್ಭದಲ್ಲಿ ನಿಮಗೆ ಅಥವಾ ಟ್ಯಾಕ್ಸಿ/ಕ್ಯಾಬ್ ಓಡಿಸುವ ಚಾಲಕನಿಗೆ, ಗಾಯ ಅಥವಾ ಸಾವು ಸಂಭವಿಸಿದರೆ ಆ ನಷ್ಟವನ್ನು ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಒಳಗೊಂಡಿದೆ.

ಥರ್ಡ್ ಪಾರ್ಟಿ ನಷ್ಟಗಳು

ಥರ್ಡ್ ಪಾರ್ಟಿ ನಷ್ಟಗಳು

ನಿಮ್ಮ ಟ್ಯಾಕ್ಸಿ/ಕ್ಯಾಬ್‌ಗಳಿಂದ ಥರ್ಡ್ ಪಾರ್ಟಿಗೆ ಅಥವಾ ಅದರ ಪ್ರಯಾಣಿಕರಿಗೆ ಉಂಟಾಗುವ ಯಾವುದೇ ಹಾನಿಯನ್ನು ಒಳಗೊಂಡಿದೆ.

ಟೋಯಿಂಗ್ ಡಿಸೇಬಲ್ಡ್ ವಾಹನಗಳು

ಟೋಯಿಂಗ್ ಡಿಸೇಬಲ್ಡ್ ವಾಹನಗಳು

ನಿಮ್ಮ ಟ್ಯಾಕ್ಸಿ/ಕ್ಯಾಬ್‌ಗಳನ್ನು ಎಳೆಯುವ ಸಂದರ್ಭಗಳಲ್ಲಿ ಉಂಟಾಗುವ ಯಾವುದೇ ಹಾನಿಯನ್ನು ಒಳಗೊಂಡಿದೆ.

ಯಾವುದನ್ನು ಒಳಗೊಂಡಿಲ್ಲ?

ನಿಮ್ಮ ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಪಾಲಿಸಿಯು, ಏನನ್ನು ಒಳಗೊಂಡಿಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಇದರಿಂದಾಗಿ  ನೀವು ಕ್ಲೇಮ್ ಮಾಡುವ ಸಂದರ್ಭದಲ್ಲಿ, ಯಾವುದೇ ಅಚ್ಚರಿ ಪಡಬೇಕಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

ಥರ್ಡ್-ಪಾರ್ಟಿ ಪಾಲಿಸಿ ಹೊಂದಿರುವವರಿಗೆ ಸ್ವಂತ ಹಾನಿ

'ಥರ್ಡ್-ಪಾರ್ಟಿ ಹೊಣೆಗಾರಿಕೆ ಮಾತ್ರ' ಪಾಲಿಸಿಯಲ್ಲಿ,  ಸ್ವಂತ ವಾಹನಕ್ಕೆ ಉಂಟಾಗುವ ಹಾನಿಗಳು ಕವರ್ ಆಗುವುದಿಲ್ಲ.

ಕುಡಿದು ವಾಹನ ಚಾಲನೆ ಅಥವಾ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು.

ಇನ್ಶೂರೆನ್ಸ್ ಮಾಡಲಾದ ಟ್ಯಾಕ್ಸಿ/ಕ್ಯಾಬ್‌ಗಳ ಮಾಲೀಕರು-ಚಾಲಕರು ಕುಡಿದು ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು ಕವರ್ ಆಗುವುದಿಲ್ಲ.

ಕೊಡುಗೆ ನಿರ್ಲಕ್ಷ್ಯಗಳು

ಮಾಲೀಕ-ಚಾಲಕನ ಕೊಡುಗೆಯ ನಿರ್ಲಕ್ಷ್ಯದಿಂದಾಗಿ ಉಂಟಾಗುವ ಯಾವುದೇ ಹಾನಿಯು ಕವರ್ ಆಗುವುದಿಲ್ಲ. (ಉದಾಹರಣೆಗೆ ಪ್ರವಾಹ ಇರುವಾಗ ಚಾಲನೆ ಮಾಡುವುದು)

ಪರಿಣಾಮದ ಹಾನಿಗಳು

ಅಪಘಾತ/ನೈಸರ್ಗಿಕ ವಿಕೋಪ ಇತ್ಯಾದಿಗಳ ನೇರ ಪರಿಣಾಮವಲ್ಲದ ಯಾವುದೇ ಹಾನಿಯು ಕವರ್ ಆಗುವುದಿಲ್ಲ. (ಉಧಾಹರಣೆಗೆ ಅಪಘಾತದ ನಂತರ, ಹಾನಿಗೊಳಗಾದ ಟ್ಯಾಕ್ಸಿಯನ್ನು ತಪ್ಪಾಗಿ ಬಳಸುತ್ತಿದ್ದರೆ ಮತ್ತು ಎಂಜಿನ್‌ಗೆ ಹಾನಿಯಾದರೆ, ಅದನ್ನು ಕವರ್ ಮಾಡಲಾಗುವುದಿಲ್ಲ)

ಡಿಜಿಟ್ ನ ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸಿನ ಪ್ರಮುಖ ಲಕ್ಷಣಗಳು

ಪ್ರಮುಖ ಲಕ್ಷಣಗಳು

ಡಿಜಿಟ್ ಪ್ರಯೋಜನಗಳು

ಕ್ಲೇಮ್ ಪ್ರಕ್ರಿಯೆ

ಕಾಗದರಹಿತ ಕ್ಲೇಮ್ಸ್

ಗ್ರಾಹಕರ ಬೆಂಬಲ

24x7 ಬೆಂಬಲ

ಹೆಚ್ಚುವರಿ ಕವರೇಜ್

ಪಿಎ (PA) ಕವರ್'ಗಳು, ಲೀಗಲ್ ಲೈಬಿಲಿಟಿ ಕವರ್, ವಿಶೇಷ ಹೊರಗಿಡುವಿಕೆಗಳು ( Special Exclusions) ಖಡ್ಡಾಯ ಕಡಿತಗಳು

ಥರ್ಡ್ ಪಾರ್ಟಿಗೆ ಆಗುವ ಹಾನಿಗಳು

ವೈಯುಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ (Unlimited Liability), ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷ ರೂಗಳವರೆಗೆ

ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ನಿಮ್ಮ ಕ್ಯಾಬ್/ಟ್ಯಾಕ್ಸಿ ವಾಹನದ ಅಗತ್ಯವನ್ನು ಆಧರಿಸಿ, ನಾವು ಪ್ರಾಥಮಿಕವಾಗಿ ಎರಡು ಪಾಲಿಸಿಗಳನ್ನು ನೀಡುತ್ತೇವೆ. ಆದಾಗ್ಯೂ, ಯಾವುದೇ ಕಮರ್ಷಿಯಲ್ ವೆಹಿಕಲ್'ನ ಅಪಾಯ ಮತ್ತು ಸತತ ಬಳಕೆಯನ್ನು ಪರಿಗಣಿಸಿ, ನಿಮ್ಮ ಟ್ಯಾಕ್ಸಿ ಮತ್ತು ಮಾಲೀಕ-ಚಾಲಕನನ್ನು ಆರ್ಥಿಕವಾಗಿ ರಕ್ಷಿಸಲು 'ಸ್ಟ್ಯಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು' ತೆಗೆದುಕೊಳ್ಳುವಂತೆ ಶಿಫಾರಸು ಮಾಡಲಾಗುತ್ತದೆ.

ಲಯಬಿಲಿಟಿ ಮಾತ್ರ

ಸ್ಟ್ಯಾಂಡರ್ಡ್ ಪ್ಯಾಕೇಜ್

×

ಕ್ಲೇಮ್ ಮಾಡುವುದು ಹೇಗೆ?

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೇಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?

ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ, ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆಯಿದು. ಒಳ್ಳೆಯದು, ಅದನ್ನು ನೀವೀಗ ಮಾಡುತ್ತಿರುವಿರಿ.

ಡಿಜಿಟ್ ನ ಕ್ಲೇಮ್‌ಗಳ ವರದಿ ಕಾರ್ಡ್ ಅನ್ನು ಓದಿ

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ

ಅಭಿಷೇಕ್ ಯಾದವ್

ಅದ್ಭುತ ಸೇವೆ ಮತ್ತು ಅತ್ಯುತ್ತಮ ಸಹಕಾರ ನೀಡುವ ಸಿಬ್ಬಂದಿ. ಅವರು ಮೊದಲಿಗೆ ನನ್ನ ಹಾನಿಗೊಳಗಾದ ವಾಹನದಿಂದ ನನಗೆ ಉಂಟಾಗಿದ್ದ ಉದ್ವೇಗವನ್ನು ತೆಗೆದುಹಾಕಿದರು. ನಂತರ ಅವರು ನನ್ನ ವಾಹನವನ್ನು ರಿಪೇರಿ ಮಾಡಲು ನನಗೆ ಸಹಾಯ ಮಾಡಿದರು. ನಿಮಗೆ ಒಂದು ಟನ್ ಧನ್ಯವಾದಗಳು.....

ಪ್ರಜ್ವಲ್ ಜಿ ಎಸ್

ಮೊಹಮ್ಮದ್ ರಿಜ್ವಾನ್ ನನಗೆ ಚೆನ್ನಾಗಿ ಮಾರ್ಗದರ್ಶನ ನೀಡಿದ್ದಾರೆ ಮತ್ತು ನನ್ನ ವಾಹನದ ಇನ್ಶೂರೆನ್ಸ್ ರಿನೀವಲ್ ಬಗ್ಗೆ ಎಲ್ಲ ಮಾಹಿತಿಯನ್ನು ನೀಡಿದ್ದಾರೆ. ಅವರ ಡೆಡಿಕೇಟೆಡ್ ಕೆಲಸವನ್ನು ಶ್ಲಾಘಿಸುತ್ತೇನೆ. ಮತ್ತು ಗ್ರಾಹಕರಿಗೆ ವಿವರಿಸುವುದು, ಮಾಹಿತಿ ನೀಡುವುದು ಸುಲಭದ ಕೆಲಸವಲ್ಲ ಮತ್ತು ಅವರಿಗೆ ನಿಜವಾಗಿಯೂ ಡಿಜಿಟ್‌ನಿಂದ ಉತ್ತಮ ಚಪ್ಪಾಳೆ ಬೇಕು. ಗುಡ್ ಸ್ಪಿರಿಟ್ ಮೊಹಮ್ಮದ್ ರಿಜ್ವಾನ್ :)

ವಿಕಾಸ್ ಥಪ್ಪಾ

ಡಿಜಿಟ್ ಇನ್ಶೂರೆನ್ಸ್‌ನೊಂದಿಗೆ ನನ್ನ ವೆಹಿಕಲ್ ಇನ್ಶೂರೆನ್ಸ್ ಅನ್ನು  ಪ್ರಕ್ರಿಯೆಗೊಳಿಸುವಾಗ  ನನಗೆ ಅದ್ಭುತವಾದ ಅನುಭವವಾಯಿತು. ಇದು ಸೂಕ್ತ ತಂತ್ರಜ್ಞಾನದೊಂದಿಗೆ ಗ್ರಾಹಕ ಸ್ನೇಹಿಯಾಗಿದೆ. ಯಾವುದೇ ವ್ಯಕ್ತಿಯನ್ನು ನೇರವಾಗಿ ಭೇಟಿಯಾಗದೆ 24 ಗಂಟೆಗಳ ಒಳಗೆ ಕ್ಲೇಮ್ ಪಡೆಯಲಾಗಿದೆ. ಕಸ್ಟಮರ್ ಕೇರ್ ಸಿಬ್ಬಂದಿಗಳು ನನ್ನ ಕರೆಗಳನ್ನು ಚೆನ್ನಾಗಿ ನಿರ್ವಹಿಸಿದರು . ಪ್ರಕರಣವನ್ನು ಅತ್ಯುತ್ತಮವಾಗಿ ನಿಭಾಯಿಸಿದ ಶ್ರೀ ರಾಮರಾಜು ಕೊಂಡಾಣ ಅವರಿಗೆ ನನ್ನ ವಿಶೇಷ ಧನ್ಯವಾದಗಳು.

Show more

ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಯಾವ ರೀತಿಯ ಟ್ಯಾಕ್ಸಿ/ಕ್ಯಾಬ್‌ಗಳನ್ನು ಒಳಗೊಂಡಿದೆ?

ಸರಳವಾಗಿ ಹೇಳುವುದಾದರೆ, ಎಲ್ಲಾ ಕಾರ್'ಗಳನ್ನು ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ; ಪ್ರಯಾಣಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದನ್ನು ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್  ಒಳಗೊಂಡಿದೆ.

ನೀವು ಟ್ಯಾಕ್ಸಿ ಸೇವೆಗಳನ್ನು ಒದಗಿಸಲು ನೂರಾರು ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳನ್ನು ಹೊಂದಿರುವ ಕಂಪನಿಯಾಗಿದ್ದರೆ; ನಿಮ್ಮ ಎಲ್ಲಾ ಕ್ಯಾಬ್‌ಗಳಿಗೆ ರಕ್ಷಣೆ ನೀಡಲು ನೀವು ಟ್ಯಾಕ್ಸಿ ಇನ್ಶೂರೆನ್ಸ್ ಅನ್ನು ಖರೀದಿಸಬಹುದು.

ನೀವು ಖಾಸಗಿ ಕಾರನ್ನು ಹೊಂದಿದ್ದರೆ ಮತ್ತು ಅದನ್ನು ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸುತ್ತಿದ್ದರೆ ಉಧಾಹರಣೆಗೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಜನರನ್ನು ಸಾಗಿಸಲು. ನಂತರ, ನೀವು ಮತ್ತು ನಿಮ್ಮ ಕಾರನ್ನು ಯಾವುದೇ ದುರದೃಷ್ಟಕರ ನಷ್ಟದಿಂದ ರಕ್ಷಿಸಲು ನಿಮ್ಮ ಕಾರಿಗೆ ಕ್ಯಾಬ್ ಇನ್ಶೂರೆನ್ಸಿನ ಅಗತ್ಯವಿದೆ.

ನೀವು ಸಣ್ಣ ವ್ಯಾಪಾರವನ್ನು ನಡೆಸಲು, ಒಂದಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿದ್ದರೆ. ಇದು ಬೇಡಿಕೆಯ ಸೇವೆಗಳಿಂದ ಹಿಡಿದು ಕಚೇರಿ-ಕ್ಯಾಬ್ ಸೇವೆಗಳವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ. ಈ ಸಂದರ್ಭದಲ್ಲಿಯೂ ಸಹ, ನಿಮ್ಮ ಪ್ರತಿಯೊಂದು ಕ್ಯಾಬ್‌ಗಳಿಗೆ ನೀವು ಇನ್ಶೂರೆನ್ಸ್ ಕವರ್ ಮಾಡಬೇಕಾಗುತ್ತದೆ. ಇದರಿಂದ ನೀವು ಯಾವುದೇ ದುರದೃಷ್ಟಕರ ನಷ್ಟಗಳು ಮತ್ತು ಹಾನಿಗಳಿಂದ ರಕ್ಷಣೆ ಪಡೆಯುತ್ತೀರಿ.

ಟ್ಯಾಕ್ಸಿ/ಕ್ಯಾಬ್‌ಗಳ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.

ಭಾರತದಲ್ಲಿ ಕಮರ್ಷಿಯಲ್ ಟ್ಯಾಕ್ಸಿ/ಕ್ಯಾಬ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು.