ಗೂಡ್ಸ್ ಕ್ಯಾರಿಂಗ್ ವೆಹಿಕಲ್ ಇನ್ಶೂರೆನ್ಸ್

ಸರಕು ಸಾಗಿಸುವ ವಾಹನಗಳಿಗಾಗಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್

I agree to the Terms & Conditions

Don’t have Reg num?
It’s a brand new vehicle

ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಎಂದರೇನು?

ಹೆಸರೇ ಸೂಚಿಸುವಂತೆ, ಗೂಡ್ಸ್ ಕ್ಯಾರಿಯಿಂಗ್  ವೆಹಿಕಲ್ ಇನ್ಶೂರೆನ್ಸ್ ಎನ್ನುವುದು ಒಂದು ರೀತಿಯ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಆಗಿದೆ. ಈ ಇನ್ಶೂರೆನ್ಸ್ ಅನ್ನು ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಉದ್ದೇಶಕ್ಕಾಗಿ ಬಳಸುವ ಕಮರ್ಷಿಯಲ್ ವೆಹಿಕಲ್'ಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಇತರ ವಾಹನಗಳಿಗೆ ಹೋಲಿಸಿದರೆ ಈ ವಾಹನಗಳು ಹೆಚ್ಚಿನ ಅಪಾಯಗಳಿಗೆ ಗುರಿಯಾಗುತ್ತವೆ. ಆದ್ದರಿಂದ ಅಪಘಾತಗಳು, ಘರ್ಷಣೆಗಳು, ಕಳ್ಳತನಗಳು, ನೈಸರ್ಗಿಕ ವಿಕೋಪಗಳು ಮತ್ತು ಬೆಂಕಿಯಂತಹ ಅನಿಶ್ಚಿತ ಸಂದರ್ಭಗಳಿಂದ ವಾಹನಕ್ಕೆ ಉಂಟಾಗುವ ನಷ್ಟ ಮತ್ತು ಹಾನಿಗಳನ್ನು 'ಗೂಡ್ಸ್ ಕ್ಯಾರಿಯಿಂಗ್  ವೆಹಿಕಲ್ ಇನ್ಶೂರೆನ್ಸ್' ಕವರ್ ಮಾಡುತ್ತದೆ.

ಗೂಡ್ಸ್ ಕ್ಯಾರಿಯಿಂಗ್  ವೆಹಿಕಲ್'ನ ವಿಧಗಳು

ಭಾರತದಲ್ಲಿ, ವಿವಿಧ ವ್ಯವಹಾರಗಳ ಸ್ವರೂಪವನ್ನು ಆಧರಿಸಿ, ವಿವಿಧ ರೀತಿಯ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗಳು ಇವೆ. ಗೂಡ್ಸ್ ಕ್ಯಾರಿಯಿಂಗ್  ವೆಹಿಕಲ್'ನ ಕೆಲವು ಸಾಮಾನ್ಯ ಉದಾಹರಣೆಗಳು ಹೀಗಿವೆ:

  • ಟ್ರಕ್‌ಗಳು- ಟ್ರಕ್‌ಗಳು ವಿಭಿನ್ನ ಆಕಾರ ಮತ್ತು ಗಾತ್ರಗಳಲ್ಲಿ ಇರುತ್ತವೆ. ದೈನಂದಿನ ಅಗತ್ಯ ವಸ್ತುಗಳನ್ನು ತಲುಪಿಸಲು ಬಳಸುವ ಸಣ್ಣ ಟ್ರಕ್‌ಗಳಿಂದ ಹಿಡಿದು, ಪೀಠೋಪಕರಣಗಳು ಮತ್ತು ಉಪಕರಣಗಳಂತಹ ಸರಕುಗಳನ್ನು ಸಾಗಿಸಲು ಬಳಸುವ ದೊಡ್ಡ ಟ್ರಕ್‌ಗಳು ಲಭ್ಯ ಇವೆ. ಎಲ್ಲ ವಿಧದ ಗೂಡ್ಸ್ ಕ್ಯಾರಿಯಿಂಗ್ ಟ್ರಕ್‌ಗಳು, ಕಮರ್ಷಿಯಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತವೆ.
  • ಟೆಂಪೋಗಳು- ತುಲನಾತ್ಮಕವಾಗಿ ನೋಡಿದರೆ ಟೆಂಪೋಗಳು ಟ್ರಕ್‌ಗಳಿಗಿಂತ ಚಿಕ್ಕವಾಗಿವೆ. ಮತ್ತು ಟೆಂಪೋಗಳನ್ನು ನಗರದೊಳಗೆ ಸರಕುಗಳ ಸಾಗಣೆ ಮತ್ತು ವಿತರಣೆಗಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಟೆಂಪೋಗಳನ್ನು ಸಹ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. 
  • ತ್ರಿ-ವೀಲ್ ವೆಹಿಕಲ್ಸ್ - ಸಾಮಾನ್ಯವಾಗಿ ಕಾರ್ಗೋ ಆಟೋಗಳು ಅಥವಾ ತ್ರಿ-ವೀಲ್ ವೆಹಿಕಲ್'ಗಳನ್ನು ನಗರದೊಳಗೆ ಸಣ್ಣ ಸರಕುಗಳನ್ನು ತಲುಪಿಸಲು  ಬಳಸುತ್ತೇವೆ. ಅವು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ, ಟ್ರಕ್‌ಗಳು ಮತ್ತು ಟ್ರೇಲರ್‌ಗಳಿಗೆ ಹೋಲಿಸಿದರೆ ಅವುಗಳು ಕಡಿಮೆ ಅಪಾಯಗಳಿಗೆ ಗುರಿಯಾಗುತ್ತವೆ. ಆದಾಗ್ಯೂ, ಇವುಗಳು ಗರಿಷ್ಠ ರಕ್ಷಣೆ ಮತ್ತು ಕನಿಷ್ಠ ವ್ಯಾಪಾರ ನಷ್ಟಗಳ ವಿರುದ್ಧ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುತ್ತವೆ.
  • ಟ್ರೇಲರ್‌ಗಳು- ಟ್ರೇಲರ್‌ಗಳು ದೊಡ್ಡ ಸರಕುಗಳನ್ನು ಸಾಗಿಸುವ ವಾಹನಗಳಾಗಿವೆ; ಭಾರೀ ಸರಕುಗಳ ಸಾಗಣೆಗೆ ಹೆಚ್ಚಾಗಿ ದೇಶಾದ್ಯಂತ ಬಳಸಲಾಗುತ್ತದೆ. ಅವುಗಳಿಗೆ ಸಂಬಂಧಿಸಿದ ಅಪಾಯವನ್ನು ಗಮನಿಸಿದರೆ, ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ ಪಾಲಿಸಿಯ ಅಡಿಯಲ್ಲಿ ಟ್ರೇಲರ್‌ಗಳನ್ನು ಕವರ್ ಮಾಡುವುದು ಬಹುತೇಕ ಖಡ್ಡಾಯವಾಗಿದೆ.
  • ಟಿಪ್ಪರ್‌ಗಳು- ಟಿಪ್ಪರ್‌ಗಳು ಭಾರೀ ವಾಹನ ಮತ್ತು ಸರಕು ಸಾಗಿಸುವ ವಾಹನಗಳ ಒಂದು ವಿಧವಾಗಿದೆ; ಇವುಗಳನ್ನು ಸಾಮಾನ್ಯವಾಗಿ ಕನ್ಸ್ಟ್ರಕ್ಷನ್ ಸರಕುಗಳನ್ನು ಸಾಗಿಸಲು ಬಳಸಲಾಗುತ್ತದೆ. ಸಂಭವಿಸಬಹುದಾದ ಅಪಾಯಗಳಿಂದ ಇವನ್ನು ರಕ್ಷಿಸಲು, ಡಿಜಿಟ್‌ ನ ಕಮರ್ಷಿಯಲ್ ಇನ್ಶೂರೆನ್ಸ್  ಪಾಲಿಸಿಯ ಅಡಿಯಲ್ಲಿ ಇದನ್ನು ಕವರ್ ಮಾಡಬಹುದು.

Read More

ಡಿಜಿಟ್ ಮೂಲಕ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ ಅನ್ನು ಏಕೆ ಆರಿಸಬೇಕು?

ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ. ಹೇಗೆ ಎಂದು ತಿಳಿಯಿರಿ…

Customize your Vehicle IDV

ನಿಮ್ಮ ವಾಹನದ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮ್ಮ ವಾಹನದ ಐಡಿವಿ ಅನ್ನು ನಿಮ್ಮ ಆಯ್ಕೆಯಂತೆ ನೀವೇ ಕಸ್ಟಮೈಸ್ ಮಾಡಬಹುದು!

24*7 Support

24*7 ಬೆಂಬಲ

ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯ ಲಭ್ಯವಿರುತ್ತದೆ.

ಸೂಪರ್-ಫಾಸ್ಟ್ ಕ್ಲೇಮ್ಸ್

ಸ್ಮಾರ್ಟ್‌ಫೋನ್ ಸಕ್ರಿಯಗೊಳಿಸಿದ ಸ್ವಯಂ ತಪಾಸಣಾ (self-inspection) ಪ್ರಕ್ರಿಯೆಗಳು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ!

ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ ಏನನ್ನು ಒಳಗೊಂಡಿದೆ?

Accidents

ಅಪಘಾತಗಳು

ಅಪಘಾತದ ಸಂದರ್ಭದಲ್ಲಿ ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗೆ ಉಂಟಾಗುವ ಹಾನಿಯನ್ನು ಒಳಗೊಂಡಿದೆ.

Theft

ಕಳ್ಳತನ

ಕಳ್ಳತನದಿಂದಾಗಿ ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗೆ ಉಂಟಾಗುವ ನಷ್ಟ ಅಥವಾ ಹಾನಿಯನ್ನು ಒಳಗೊಂಡಿದೆ.

Fire

ಬೆಂಕಿ

ಬೆಂಕಿಯಿಂದಾಗಿ ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗೆ ಉಂಟಾಗುವ ಹಾನಿಗಳನ್ನು ಒಳಗೊಂಡಿದೆ.

Natural Disasters

ಪ್ರಕೃತಿ ವಿಕೋಪಗಳು

ಯಾವುದೇ ನೈಸರ್ಗಿಕ ವಿಕೋಪದಿಂದ ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗೆ ಉಂಟಾಗುವ ಹಾನಿಯನ್ನು ಒಳಗೊಂಡಿದೆ.

Personal Accident

ವೈಯಕ್ತಿಕ ಅಪಘಾತ

ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಅಪಘಾತಕ್ಕೀಡಾದರೆ ಹಾಗೂ ಆ ಸಂದರ್ಭದಲ್ಲಿ ನಿಮಗೆ ಅಥವಾ ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಓಡಿಸುವ ಚಾಲಕನಿಗೆ, ಗಾಯ ಅಥವಾ ಸಾವು ಸಂಭವಿಸಿದರೆ, ಆ ನಷ್ಟವನ್ನು ಇನ್ಶೂರೆನ್ಸ್ ಪಾಲಿಸಿಯು ಒಳಗೊಳ್ಳುತ್ತದೆ.

Third Party Losses

ಥರ್ಡ್ ಪಾರ್ಟಿ ನಷ್ಟಗಳು

ಥರ್ಡ್ ಪಾರ್ಟಿಗೆ ಅಥವಾ ಅದರ ಪ್ರಯಾಣಿಕರಿಗೆ ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಉಂಟು ಮಾಡುವ ಯಾವುದೇ ಹಾನಿಯನ್ನು ಒಳಗೊಂಡಿದೆ.

Towing Disabled Vehicles

ಟೋಯಿಂಗ್ ಡಿಸೇಬಲ್ಡ್ ವಾಹನಗಳು

ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಅನ್ನು ಎಳೆಯುವ ಸಂದರ್ಭಗಳಲ್ಲಿ ಉಂಟಾಗುವ ಯಾವುದೇ ಹಾನಿಯನ್ನು ಒಳಗೊಂಡಿದೆ.

ಯಾವುದನ್ನು ಒಳಗೊಂಡಿಲ್ಲ?

ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯು, ಏನನ್ನು ಒಳಗೊಂಡಿಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಇದರಿಂದಾಗಿ  ನೀವು ಕ್ಲೇಮ್ ಮಾಡುವ ಸಂದರ್ಭದಲ್ಲಿ, ಯಾವುದೇ ಅಚ್ಚರಿ ಪಡಬೇಕಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

ಥರ್ಡ್-ಪಾರ್ಟಿ ಪಾಲಿಸಿ ಹೊಂದಿರುವವರಿಗೆ ಸ್ವಂತ ಹಾನಿ

ನಿಮ್ಮ ಕಮರ್ಷಿಯಲ್ ವೆಹಿಕಲ್'ಗಾಗಿ ನೀವು ಥರ್ಡ್ ಪಾರ್ಟಿ ಕಮರ್ಷಿಯಲ್ ಇನ್ಶೂರೆನ್ಸ್ ಅನ್ನು ಆಯ್ದುಕೊಂಡರೆ, ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಗಳು ಪಾಲಿಸಿಯಲ್ಲಿ ಕವರ್ ಆಗುವುದಿಲ್ಲ.

ಕುಡಿದು ವಾಹನ ಚಾಲನೆ ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು.

ಇನ್ಶೂರೆನ್ಸ್ ಮಾಡಲಾದ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ನ ಮಾಲೀಕರು-ಚಾಲಕರು, ಕುಡಿದು ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು ಕವರ್ ಆಗುವುದಿಲ್ಲ.

ಕೊಡುಗೆ ನಿರ್ಲಕ್ಷ್ಯಗಳು

ಕೊಡುಗೆಯ ನಿರ್ಲಕ್ಷ್ಯದಿಂದಾಗಿ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗೆ ಉಂಟಾಗುವ ಯಾವುದೇ ಹಾನಿಯು ಕವರ್ ಆಗುವುದಿಲ್ಲ. (ಉದಾಹರಣೆಗೆ ಪ್ರವಾಹ ಇರುವಾಗ ಚಾಲನೆ ಮಾಡುವುದು)

ಪರಿಣಾಮದ ಹಾನಿಗಳು

ಅಪಘಾತ/ನೈಸರ್ಗಿಕ ವಿಕೋಪ ಅಥವಾ ಬೆಂಕಿ ಇತ್ಯಾದಿಗಳ ನೇರ ಪರಿಣಾಮವಲ್ಲದ ಯಾವುದೇ ಹಾನಿಯು ಕವರ್ ಆಗುವುದಿಲ್ಲ.

ಡಿಜಿಟ್ ನ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸಿನ ಪ್ರಮುಖ ಲಕ್ಷಣಗಳು

ಪ್ರಮುಖ ಲಕ್ಷಣಗಳು

ಡಿಜಿಟ್ ಪ್ರಯೋಜನಗಳು

ಕ್ಲೇಮ್ ಪ್ರಕ್ರಿಯೆ

ಕಾಗದರಹಿತ ಕ್ಲೇಮ್ಸ್

ಗ್ರಾಹಕರ ಬೆಂಬಲ

24x7 ಬೆಂಬಲ

ಹೆಚ್ಚುವರಿ ಕವರೇಜ್

ಪಿಎ (PA) ಕವರ್'ಗಳು, ಲೀಗಲ್ ಲೈಬಿಲಿಟಿ ಕವರ್, ವಿಶೇಷ ಹೊರಗಿಡುವಿಕೆಗಳು (Special Exclusions) ಖಡ್ಡಾಯ ಕಡಿತಗಳು

ಥರ್ಡ್ ಪಾರ್ಟಿಗೆ ಆಗುವ ಹಾನಿಗಳು

ವೈಯುಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ (Unlimited Liability), ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷ ರೂಗಳವರೆಗೆ

ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯ ವಿಧಗಳು

ನಿಮ್ಮ ಹೆವಿ-ಡ್ಯೂಟಿ ವಾಹನದ ಪ್ರಕಾರ ಮತ್ತು ನೀವು ಇನ್ಶೂರೆನ್ಸ್ ಮಾಡಲು ಬಯಸುವ ವಾಹನಗಳ ಸಂಖ್ಯೆಯನ್ನು ಆಧರಿಸಿ, ನಾವು ನಿಮಗೆ ಎರಡು ಪ್ರಾಥಮಿಕ ಯೋಜನೆಗಳನ್ನು ನೀಡುತ್ತೇವೆ.

ಹೊಣೆಗಾರಿಕೆ ಮಾತ್ರ

ಪ್ರಮಾಣಿತ ಪ್ಯಾಕೇಜ್

×

ಕ್ಲೈಮ್ ಮಾಡುವುದು ಹೇಗೆ?

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಗಳನ್ನು ಎಷ್ಟು ಶೀಘ್ರದಲ್ಲಿ ಇತ್ಯರ್ಥ ಮಾಡಲಾಗುವುದು?

ನೀವು ಇನ್ಶೂರೆನ್ಸ್ ಕಂಪನಿಯನ್ನು ಬದಲಿಸುವಾಗ ಇದು ನಿಮ್ಮ ಮನಸ್ಸಿನಲ್ಲಿ ಮೂಡಬೇಕಾದ ಮೊದಲನೇ ಪ್ರಶ್ನೆ ಆಗಿರಬೇಕು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ!

ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿರಿ

ನಾನು ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಭಾರತದಲ್ಲಿ, ಆನ್‌ಲೈನ್‌ನಲ್ಲಿ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು