ಓನ್ ಡ್ಯಾಮೇಜ್ ಇನ್ಶೂರೆನ್ಸ್

ಓನ್ ಡ್ಯಾಮೇಜ್ ಇನ್ಶೂರೆನ್ಸ್ a. k. a. ಓ.ಡಿ (OD) ಇನ್ಶೂರೆನ್ಸ್ ಬಗ್ಗೆ ವಿವರವಾದ ಮಾರ್ಗದರ್ಶಿ

ಹೆಸರೇ ಸೂಚಿಸುವಂತೆ, ಓನ್ ಡ್ಯಾಮೇಜ್ ಇನ್ಶುರೆನ್ಸ್ ಎನ್ನುವುದು ಕಸ್ಟಮೈಸ್ ಮಾಡಿದ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ನಿಮ್ಮ ವಾಹನಕ್ಕೆ ನಿಮ್ಮಿಂದಾಗುವ ಹಾನಿಗಳಿಂದ ನಿಮ್ಮನ್ನು ಮತ್ತು ನಿಮ್ಮ ಇನ್ಶೂರೆನ್ಸ್ ಮಾಡಿದ ವಾಹನವನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ, ಅಂದರೆ ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿ ಮತ್ತು ನಷ್ಟಗಳಿಂದ ನಿಮ್ಮ ವಾಹನವನ್ನು ರಕ್ಷಿಸುತ್ತದೆ.

ನೋಡಲು ತಮಾಷೆಯಾಗಿರುವ ಆದರೆ ನೈಜ ಉದಾಹರಣೆಯನ್ನು ತೆಗೆದುಕೊಳ್ಳೋಣ;ನಿಮ್ಮ ಕಾರನ್ನು ಅದರ ಸಾಮಾನ್ಯವಾಗಿ ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸಲಾಗಿದೆ ಎಂದುಕೊಳ್ಳಿ ಹಾಗೇ ಇದ್ದಕ್ಕಿದ್ದಂತೆ, ಪಕ್ಕದ ಮರದ ಕೊಂಬೆ ನಿಮ್ಮ ಕಾರಿನ ಮೇಲೆ ಬಿದ್ದರೆ, ಅಥವಾ ಇನ್ನೂ ಕೆಟ್ಟದಾಗಿ ನಿಮ್ಮ ಪಕ್ಕದವರ ಕ್ರಿಕೆಟ್ ಚೆಂಡು ಕಾರಿನ ಕಿಟಕಿಯ ಮೇಲೆ ಬಿದ್ದುಬಿಟ್ಟರೆ, ಅಂತಿಮವಾಗಿ, ತೆಂಗಿನಕಾಯಿ ಬೀಳುತ್ತದೆ!

ಕಥೆಯೇನೋ ತಮಾಷೆಯಾಗಿದೆ. ಆದರೆ ಅವಲೋಕಿಸಿ ನೋಡಿದರೆ ನಿಜ ಜೀವನದಲ್ಲಿ ಇದರಿಂದ ಭಾರೀ ನಷ್ಟ ಉಂಟಾಗುತ್ತದೆ! ಇಂತಹ ಸಂದರ್ಭಗಳಲ್ಲಿ, ಓ.ಡಿ (OD) ಇನ್ಶೂರೆನ್ಸ್, ಈ ರೀತಿಯ ನಷ್ಟದಿಂದ ಉಂಟಾಗುವ ತೊಂದರೆಯಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತದೆ.

ಇದರ ಬಗ್ಗೆ ಇನ್ನಷ್ಟು ತಿಳಿಯಿರಿ:

ಓನ್ ಡ್ಯಾಮೇಜ್ ಇನ್ಶೂರೆನ್ಸ್ ಅನ್ನು ಖರೀದಿಸಲು ಯಾರು ಅರ್ಹರು?

ಸೆಪ್ಟೆಂಬರ್ 2019ರಿಂದ ಅನ್ವಯವಾಗುವಂತೆ, ಇನ್ಶೂರೆನ್ಸ್ ಕಂಪನಿಗಳು ಈಗ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅಥವಾ ಬೈಕ್ ಇನ್ಶೂರೆನ್ಸ್ ಅನ್ನು ಹೊಂದಿರುವ ಕಾರುಗಳಿಗೆ ಮತ್ತು ದ್ವಿಚಕ್ರ ವಾಹನಗಳಿಗೆ ಸ್ವತಂತ್ರ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡಬಹುದು.

ಉದಾಹರಣೆಗೆ; ಅನೇಕ ಕಾರು ಅಥವಾ ಬೈಕ್ ಮಾಲೀಕರು ತಮ್ಮ ವಾಹನವನ್ನು ಖರೀದಿಸುವ ಸಮಯದಲ್ಲಿ ಲಾಂಗ್ ಟರ್ಮ್ ಥರ್ಡ್-ಪಾರ್ಟಿ ಪಾಲಿಸಿಗಳನ್ನು ಖರೀದಿಸಿರುತ್ತಾರೆ.(ವಿಶೇಷವಾಗಿ ಮಾರ್ಚ್ 2019 ರಲ್ಲಿ ಇವುಗಳನ್ನು ಪಡೆದವರು) ಅವರು ಈಗ ಓನ್ ಡ್ಯಾಮೇಜ್ ನಷ್ಟವನ್ನು ಸರಿದೂಗಿಸಲು ಸ್ವತಂತ್ರ ಓ.ಡಿ (OD) ಇನ್ಶೂರೆನ್ಸ್  ಅನ್ನು ಆರಿಸಿಕೊಳ್ಳಬಹುದು.

ಸೂಚನೆ : ನೀವು ಓ.ಡಿ (OD) ಇನ್ಶೂರೆನ್ಸ್ ಅನ್ನು ಖರೀದಿಸಿದಾಗ, ನೀವು ಈಗಾಗಲೇ ಮಾನ್ಯ ಮಾಡಲಾದ ಥರ್ಡ್ ಪಾರ್ಟಿ ಪಾಲಿಸಿಯನ್ನು (ಭಾರತೀಯ ಮೋಟಾರು ಕಾನೂನುಗಳಿಂದ ಕಾನೂನುಬದ್ಧಗೊಳಿಸಿರುವಂತೆ) ಹೊಂದಿರುವಿರಿ ಎಂದು ಪರೋಕ್ಷವಾಗಿ ದೃಢೀಕರಿಸುತ್ತೀರಿ. ಇದು ಡಿಜಿಟ್ ಇನ್ಶೂರೆನ್ಸ್‌ ಕಂಪನಿಯದಾಗಿರಬಹುದು ಅಥವಾ ಬೇರೆ ಇನ್ಶೂರೆನ್ಸ್ ಕಂಪನಿಯವರದೂ ಆಗಿರಬಹುದು.

ಸ್ವತಂತ್ರ ಓ.ಡಿ (OD) ಇನ್ಶೂರೆನ್ಸ್ ಅನ್ನು ಯಾರು ಪಡೆಯಬೇಕು?

ನೀವು ಇತ್ತೀಚೆಗೆ ಡಿಜಿಟ್‌ನಿಂದ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಮಾತ್ರ ಖರೀದಿಸಿದ್ದರೆ, ನಿಮ್ಮ ಸ್ವಂತ ವಾಹನವನ್ನು ಹಾನಿ ಮತ್ತು ನಷ್ಟದಿಂದ ರಕ್ಷಿಸಲು ನೀವು ಈಗ ಸ್ವತಂತ್ರವಾದ ಓನ್ ಡ್ಯಾಮೇಜ್ ಕವರ್ ಸಹ ಪಡೆಯಬಹುದು.

ನೀವು ಇತ್ತೀಚೆಗೆ ಈಗಾಗಲೇ ವಾಹನವನ್ನು ಖರೀದಿಸಿದ್ದರೆ ಮತ್ತು ಅದರ ಪರಿಣಾಮವಾಗಿ ಬೇರೊಂದು ಇನ್ಶೂರೆನ್ಸ್ ಕಂಪನಿಯಿಂದ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಪಡೆದಿದ್ದರೆ, ನೀವು ಡಿಜಿಟ್‌ನಿಂದಲೂ ನಿಮ್ಮ ಓನ್ ಡ್ಯಾಮೇಜ್  ಕವರ್ ಅನ್ನು ಖರೀದಿಸಬಹುದು . ಇದು ಅಪಘಾತ, ನೈಸರ್ಗಿಕ ವಿಪತ್ತು, ಕಳ್ಳತನ ಮತ್ತು ಮುಂತಾದವುಗಳನ್ನು ನಿಮ್ಮ ಇನ್ಶೂರೆನ್ಸ್ ವ್ಯಾಪ್ತಿಗೊಳಪಡಿಸುತ್ತದೆ. ಅಲ್ಲದೇ ನಿಮ್ಮ  ವ್ಯಾಪ್ತಿಯ ಮಟ್ಟಿಗೆ ನೀವು ಆಡ್-ಆನ್ ಕವರ್‌ಗಳನ್ನು ಸಹ ಆರಿಸಿಕೊಳ್ಳಬಹುದು.

OD ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ಯಾವುದನ್ನು ಒಳಗೊಂಡಿಲ್ಲ?

ನಿಮ್ಮ ವಾಹನದ ರಕ್ಷಣೆಗಾಗಿ ಓನ್ ಡ್ಯಾಮೇಜ್ ಕವರ್ ಉತ್ತಮವಾಗಿದ್ದರೂ, ಇಲ್ಲಿ ಕೆಲವು ವಿನಾಯಿತಿಗಳಿವೆ.

ಥರ್ಡ್ ಪಾರ್ಟಿಯ ಹೊಣೆಗಾರಿಕೆಗಳು

ಇದು ಸ್ವತಂತ್ರವಾದ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಆದ್ದರಿಂದ, ನಿಮ್ಮ ಥರ್ಡ್ ಪಾರ್ಟಿಯ ಹೊಣೆಗಾರಿಕೆಗಳನ್ನು ಇದರಲ್ಲಿ ಸೇರಿಸಲಾಗುವುದಿಲ್ಲ. ನಿಮ್ಮ ಥರ್ಡ್-ಪಾರ್ಟಿ ವೆಹಿಕಲ್ ಇನ್ಶೂರೆನ್ಸ್  ಅದನ್ನು ನೋಡಿಕೊಳ್ಳುತ್ತದೆ.

ಕುಡಿದು ವಾಹನ ಚಾಲನೆ

ಇದು ಕಾನೂನಿಗೆ ವಿರುದ್ಧವಾಗಿದೆ, ಆದ್ದರಿಂದ ನೀವು ಮದ್ಯದ ಅಮಲಿನಲ್ಲಿ ಚಾಲನೆ ಮಾಡಿದ್ದರೆ, ಅದನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ.

ಲೈಸೆನ್ಸ್ ಇಲ್ಲದೆ ಚಾಲನೆ

ಪ್ರಮಾಣಿತ ನಿಯಮದಂತೆ, ಹೇಳಲಾದ ವ್ಯಕ್ತಿಯು ಕಾನೂನುಬಾಹಿರವಾಗಿ ಚಾಲನೆ ಮಾಡುತ್ತಿದ್ದರೆ, ಅಂತಹವರಿಂದ ಯಾವುದೇ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಸ್ವೀಕರಿಸುವುದಿಲ್ಲ. ನೀವು ವ್ಯಾಲಿಡ್ ಆಗಿರುವ ಡ್ರೈವಿಂಗ್ ಲೈಸೆನ್ಸ್ ನೊಂದಿಗೆ ಸರಿಯಾಗಿ ಡ್ರೈವಿಂಗ್ ಮಾಡುತ್ತಿದ್ದರೆ ಮಾತ್ರ ಕ್ಲೈಮ್‌ ಮಾಡಬಹುದು.

ಆ್ಯಡ್-ಆನ್‌ಗಳನ್ನು ಖರೀದಿಸಿರದಿದ್ದರೆ

ಇದು ಸರ್ವೇ ಸಾಮಾನ್ಯ, ಅಲ್ವಾ?  ನೀವು ಸರಿಯಾದ ಆ್ಯಡ್-ಆನ್ ಗಳನ್ನು ಖರೀದಿಸದಿದ್ದರೆ, ಅವುಗಳಿಂದ ನೀವು ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಉದಾಹರಣೆಗೆ, ಟೈರ್ ಪ್ರೊಟೆಕ್ಷನ್ ಕವರ್ ಅನ್ನು ತೆಗೆದುಕೊಂಡಿಲ್ಲ ಅಂದ್ರೆ - ನಿಮ್ಮ ಟೈರ್ ಅನ್ನು ಕೇವಲ ಅಪಘಾತ ಸಂದರ್ಭದಲ್ಲಿ ಮಾತ್ರ ರಕ್ಷಿಸಲಾಗುತ್ತದೆಯೇ ಹೊರತು ಬೇರಾವುದೇ ಸಂದರ್ಭದಲ್ಲಿ ಆಗುವುದಿಲ್ಲ.

ಸತತ ಡ್ಯಾಮೇಜ್'ಗಳು

ಸತತ ಡ್ಯಾಮೇಜ್'ಗಳನ್ನು ಅಪಘಾತದ ನಂತರ ಸಂಭವಿಸುವ ಡ್ಯಾಮೇಜ್'ಗಳೆಂದು ಉಲ್ಲೇಖಿಸಲಾಗುತ್ತದೆ. ದುರದೃಷ್ಟವಶಾತ್, ಅಪಘಾತದ ಸಮಯದಲ್ಲಿಯೇ ಡ್ಯಾಮೇಜ್ ಆಗದ  ಹೊರತು, ಅವುಗಳನ್ನು ಕವರ್ ಮಾಡಲು ಸಾಧ್ಯವಿಲ್ಲ.

ಕೊಡುಗೆಯ ನಿರ್ಲಕ್ಷ್ಯ

ಸರಳವಾಗಿ ಹೇಳುವುದಾದರೆ, ನೀವು  ಏನನ್ನಾದರೂ  ಮಾಡಬಾರದ್ದನ್ನು ಮಾಡಿದ್ದರೆ ನಿಮ್ಮ ವಾಹನವನ್ನು, ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ ಎಂದರ್ಥ. ಉದಾಹರಣೆಗೆ; ನಿಮ್ಮ ನಗರವು ಈಗಾಗಲೇ ಪ್ರವಾಹಕ್ಕೆ ಒಳಗಾಗಿದ್ದು, ನೀವು ನಿಮ್ಮ ಕಾರ್ ಅಥವಾ ಬೈಕ್ ಅನ್ನು ಪ್ರವಾಹದಲ್ಲಿ ಡ್ರೈವಿಂಗ್ ಮಾಡುತ್ತಿದ್ದರೆ.

ಲೈಸೆನ್ಸ್ ಹೊಂದಿರುವವರು ಇಲ್ಲದೆ ವಾಹನ ಚಾಲನೆ

ಕಾನೂನಿನ ಪ್ರಕಾರ, ನೀವು ಕೇವಲ ಕಲಿಕಾ ಲೈಸೆನ್ಸ್ (learner's licence) ಹೊಂದಿದ್ದರೆ, ನಿಮ್ಮೊಂದಿಗೆ ಪರಮನೆಂಟ್ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಯಾರಾದರೂ ಇರಬೇಕು. ಇಲ್ಲದಿದ್ದಲ್ಲಿ, ನಿಮ್ಮ ವಾಹನಕ್ಕೆ ಇನ್ಶೂರೆನ್ಸ್ ಕವರ್ ಆಗುವುದಿಲ್ಲ.

ಓನ್ ಡ್ಯಾಮೇಜ್ ಇನ್ಶೂರೆನ್ಸ್ ಜೊತೆಗೆ ಲಭ್ಯವಿರುವ ಆಡ್-ಆನ್‌ಗಳು.

  • ಜೀರೋ ಡೆಪ್ರಿಸಿಯೇಷನ್ ಕವರ್
  • ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್
  • ಬ್ರೇಕ್ ಡೌನ್ ಅಸಿಸ್ಟನ್ಸ್
  • ಕಾನ್ಸ್ಯುಮಬಲ್ ಕವರ್
  • ರಿಟರ್ನ್ ಟು ಇನ್‌ವಾಯ್ಸ್ ಕವರ್‌
  • ಟೈರ್ ಪ್ರೊಟೆಕ್ಟ್ ಕವರ್ (ಕಾರಿಗೆ ಮಾತ್ರ)
  • ಪ್ಯಾಸೆಂಜರ್ ಕವರ್ (ಕಾರಿಗೆ ಮಾತ್ರ)

ಓನ್ ಡ್ಯಾಮೇಜ್ ಪ್ರೀಮಿಯಂ ಎಂದರೇನು?

ಓನ್ ಡ್ಯಾಮೇಜ್ ಪ್ರೀಮಿಯಂ ಎನ್ನುವುದು ನಿಮ್ಮ ಓ.ಡಿ (OD) ಇನ್ಶೂರೆನ್ಸಿಗೆ ನೀವು ಪಾವತಿಸುವ ಬೆಲೆಯಾಗಿದೆ. ಸಾಮಾನ್ಯವಾಗಿ ನಿಮ್ಮ ಬಳಿ ಇರುವ ವಾಹನದ ಪ್ರಕಾರ, ವಾಹನ ಎಷ್ಟು ಹಳೆಯದು ಹಾಗೂ ನೀವು ಅದನ್ನು ಯಾವ ನಗರದಲ್ಲಿ ಬಳಸುತ್ತೀರಿ ಎನ್ನುವುದನ್ನು ಆಧರಿಸಿ, ಅದರ ಪ್ರೀಮಿಯಂ ಬೆಲೆಯನ್ನು ನಿರ್ಧರಿಸಲಾಗುತ್ತದೆ.

ಆದಾಗ್ಯೂ, ನಿಮ್ಮ ಪ್ರೀಮಿಯಂ ಬೆಲೆ ಏನೇ ಇರಲಿ, ಪ್ರತಿ ಓ.ಡಿ (OD) ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನವುಗಳಿಂದ ನಿಮಗೆ ರಕ್ಷಣೆ ನೀಡುತ್ತದೆ:

  • ಬಾಹ್ಯ ಕಾರಣಗಳಿಂದ ಉಂಟಾಗುವ ಆಕಸ್ಮಿಕ ಹಾನಿಗಳು.
  • ಕಳ್ಳತನ, ದರೋಡೆ ಮತ್ತು ಮನೆ ಒಡೆಯುವಿಕೆ.
  • ಬೆಂಕಿ, ಬೆಂಕಿ ಸ್ಫೋಟಗಳು, ಬೆಂಕಿ ಅವಘಢಗಳು, ಮಿಂಚು, ಮತ್ತು ಸ್ವಯಂ ದಹನ.
  • ನೈಸರ್ಗಿಕ ವಿಕೋಪಗಳಾದ ಪ್ರವಾಹ, ಚಂಡಮಾರುತ, ಸುನಾಮಿ, ಆಲಿಕಲ್ಲು, ಇತ್ಯಾದಿ.
  • ಭೂಕಂಪ, ಭೂಕುಸಿತ ಮತ್ತು ಬಂಡೆಗಳ ಕುಸಿತ.
  • ರೈಲು, ರಸ್ತೆ, ವಾಯು ಅಥವಾ ಒಳನಾಡಿನ ಜಲಮಾರ್ಗಗಳ ಮೂಲಕ ವಾಹನಗಳ ಸಾಗಣೆ.
  • ಭಯೋತ್ಪಾದನಾ ದಾಳಿಗಳು, ಗಲಭೆಗಳು ಮತ್ತು ಮುಷ್ಕರಗಳು, ಅಥವಾ ದುರುದ್ದೇಶಪೂರಿತ ಹಾನಿಗಳು.

ಓನ್ ಡ್ಯಾಮೇಜ್ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಫೋರ್ ವಿಲರ್  ಅಥವಾ ಟು ವಿಲರ್ ವಾಹನದ ಓನ್ ಡ್ಯಾಮೇಜ್ ಪ್ರೀಮಿಯಂ ಇವುಗಳನ್ನು ಆಧರಿಸಿದೆ:

  • ವಾಹನದ ತಯಾರಿಕೆ, ಪ್ರಕಾರ ಮತ್ತು ವಯಸ್ಸು.
  • ವಾಹನದ ಘೋಷಿತ ಮೌಲ್ಯ.
  • ಎಂಜಿನ್ ಘನ ಸಾಮರ್ಥ್ಯ.
  • ಭೌಗೋಳಿಕ ವಲಯ

ಓನ್ ಡ್ಯಾಮೇಜ್ ಪ್ರೀಮಿಯಂನ ಹೇಗೆ ಲೆಕ್ಕ ಹಾಕುವುದು ಎಂದು ನೋಡೋಣ, ಆದರೆ ಅದಕ್ಕೂ ಮೊದಲು ನೀವು ಲೆಕ್ಕಾಚಾರದ ಬೇಸಿಕ್ಸ್ ತಿಳಿದುಕೊಳ್ಳಬೇಕು.

ಓ.ಡಿ (OD) ಪ್ರೀಮಿಯಂ -ಐ.ಡಿ.ವಿ (IDV) X [ಪ್ರೀಮಿಯಂ ದರ (ಇನ್ಶೂರೆನ್ಸ್ ಕಂಪನಿಯಿಂದ ನಿರ್ಧರಿಸಿದ)] + [ಆ್ಯಡ್-ಆನ್‌ಗಳು (ಉದಾ. ಬೋನಸ್ ಕವರೇಜ್)] – [ಡಿಸ್ಕೌಂಟ್ಸ್ & ಬೆನಿಫಿಟ್ಸ್  (ಯಾವುದೇ ಕ್ಲೇಮ್ ಬೋನಸ್, ಕಳ್ಳತನದ ರಿಯಾಯಿತಿ ಇಲ್ಲ , ಇತ್ಯಾದಿ.)]

ಐ.ಡಿ.ವಿ (IDV) - ವಾಹನದ ಶೋ ರೂಂ ಬೆಲೆ + ಬಿಡಿಭಾಗಗಳ ಬೆಲೆ (ಯಾವುದಾದರೂ ಇದ್ದರೆ) - ಡೆಪ್ರಿಸಿಯೇಶನ್  (IRDAI ಪ್ರಕಾರ )

ಓ.ಡಿ (OD) ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುವುದು ಹೇಗೆ ?

  • ಸ್ವಯಂಪ್ರೇರಿತ ಕಡಿತಗಳನ್ನು ಹೆಚ್ಚಿಸಿ -ಓ. ಡಿ (OD) ಇನ್ಶೂರೆನ್ಸ್ ನಲ್ಲಿ  'ವಾಲಂಟರಿ ಡಿಡಕ್ಟಿಬಲ್ಸ್' ಎಂದು ಕರೆಯಲ್ಪಡುವ ವಿಷಯ ಇದೆ, ಇದು ನೀವು ಕ್ಲೈಮ್‌ ಮಾಡುವ ಸಮಯದಲ್ಲಿ ನೀವು ಪಾವತಿಸಬೇಕಾದ ಹಣವನ್ನು ಆಯ್ಕೆ ಮಾಡುವುದಾಗಿದೆ. ಆದ್ದರಿಂದ, ನಿಮ್ಮ ಕಾರ್ಯಸಾಧ್ಯತೆಯ ಆಧಾರದ ಮೇಲೆ ನಿಮ್ಮ ಸ್ವಯಂಪ್ರೇರಿತ ಕಡಿತಗಳ ಪರ್ಸಂಟೇಜ್ ಅನ್ನು ನೀವು ಹೆಚ್ಚಿಸಬಹುದು, ಇದು ನಿಮ್ಮ ಓ.ಡಿ (OD) ಪ್ರೀಮಿಯಂ ಅನ್ನು ನೇರವಾಗಿ ಕಡಿಮೆ ಮಾಡುತ್ತದೆ.
  • ಸರಿಯಾದ  ಐ.ಡಿ.ವಿ (IDV) ಘೋಷಣೆ - ಡಿಜಿಟ್ ಮೂಲಕ , ನಿಮ್ಮ ಐ.ಡಿ.ವಿ (IDV) ಅನ್ನು ನೀವೇ ಕಸ್ಟಮೈಸ್ ಮಾಡುವ ಆಯ್ಕೆಯನ್ನು ನಿಮಗೆ ನೀಡಿದೆ. ಆದ್ದರಿಂದ, ನಿಮ್ಮ IDV ಯಾವಾಗಲೂ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಇದು ಕ್ಲೈಮ್ ಮಾಡುವ ಸಮಯದಲ್ಲಿ ನಿಮ್ಮ OD ಪ್ರೀಮಿಯಂ ಮತ್ತು ನಿಮ್ಮ ಕ್ಲೈಮ್ ಮೊತ್ತದ ಮೇಲೆ ಪರಿಣಾಮ ಬೀರುತ್ತದೆ.
  • ನಿಮ್ಮ ಎನ್.ಸಿ.ಬಿ (NCB) ವರ್ಗಾಯಿಸಲು ಮರೆಯಬೇಡಿ - ನೀವು ಮೊದಲು ಓನ್ ಡ್ಯಾಮೇಜ್ ಅಥವಾ ಸಮಗ್ರ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ನಿಮ್ಮ ಸಂಚಿತ ಡಿಸ್ಕೌಂಟ್ ಪಡೆಯಲು, ನಿಮ್ಮ NCB ಅನ್ನು ನಿಮ್ಮ ಪ್ರಸ್ತುತ ಪಾಲಿಸಿಗೆ ವರ್ಗಾಯಿಸಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಥರ್ಡ್-ಪಾರ್ಟಿ ಪ್ರೀಮಿಯಂ ಮತ್ತು ಓನ್ ಡ್ಯಾಮೇಜ್ ಪ್ರೀಮಿಯಂ ನಡುವಿನ ವ್ಯತ್ಯಾಸಗಳು

ಭಾರತದಲ್ಲಿ ಮೋಟಾರ್ ವೆಹಿಕಲ್ ಆಕ್ಟ್, 1988 ರ ಪ್ರಕಾರ ನಾವು ಎರಡು ರೀತಿಯ ಪಾಲಿಸಿಗಳನ್ನು ಪಡೆಯಬಹುದು ಎನ್ನುವುದು ಈಗಾಗಲೇ ತಿಳಿದ ವಿಚಾರ. ಒಂದು ಓನ್ ಡ್ಯಾಮೇಜ್ ಮತ್ತು ಲಾಯಬಿಲಿಟಿ ಕವರ್‌ನೊಂದಿಗೆ ಸಮಗ್ರ ಪಾಲಿಸಿಯಾಗಿರಬಹುದು ಮತ್ತು ಇನ್ನೊಂದು, ಸ್ವತಂತ್ರ ಥರ್ಡ್ ಪಾರ್ಟಿ ಹೊಣೆಗಾರಿಕೆಯ ಪಾಲಿಸಿಯಾಗಿರಬಹುದು. ವರ್ಷಗಳು ಕಳೆದಂತೆ , ಥರ್ಡ್-ಪಾರ್ಟಿ ಪ್ರೀಮಿಯಂ ಹೆಚ್ಚಳದ ಪರಿಣಾಮವಾಗಿ ಲಾಯಬಿಲಿಟಿ ಕ್ಲೈಮ್'ಗಳು ಹೆಚ್ಚುತ್ತಿವೆ.

ಥರ್ಡ್ ಪಾರ್ಟಿ ಪ್ರೀಮಿಯಂ ಓನ್ ಡ್ಯಾಮೇಜ್ ಪ್ರೀಮಿಯಂ
ಕ್ಯಾಲ್ಕುಲೇಶನ್ ಆಧಾರದ ಮೇಲೆ ವಾಹನದ ಕ್ಯುಬಿಕ್ ಕೆಪಾಸಿಟಿ (Engine CC) ಆಧಾರದ ಮೇಲೆ ಇನ್ಶೂರೆನ್ಸ್ ರೇಗ್ಯುಲೇಟರ್ ಅನ್ನು ನಿಗದಿಪಡಿಸಲಾಗುತ್ತದೆ ಮತ್ತೊಂದೆಡೆ, ಓನ್ ಡ್ಯಾಮೇಜ್ ಪ್ರೀಮಿಯಂ ಅನ್ನು IDV, ಖರೀದಿಸಿದ ವರ್ಷ, ಸ್ಥಳ ಮತ್ತು ವಾಹನದ ಪ್ರಕಾರವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ.
ಸ್ಟೇಬಿಲಿಟಿ ರೆಗ್ಯುಲೇಟರ್ IRDA ಮೂಲಕ ಥರ್ಡ್ ಪಾರ್ಟಿ ಪ್ರೀಮಿಯಂ ಅನ್ನು ಹೆಚ್ಚಿಸಬಹುದು ಮತ್ತು ಕಡಿಮೆ ಮಾಡಬಹುದು ವಾಹನದ ಮೌಲ್ಯವು ವರ್ಷಗಳು ಕಳೆದಂತೆ ಡೆಪ್ರಿಶಿಯೇಟ್ ಆಗುವುದರಿಂದ ಓನ್ ಡ್ಯಾಮೇಜ್ ಪ್ರೀಮಿಯಂ ಕಡಿಮೆಯಾಗುತ್ತದೆ.
ಮೋಟಾರ್ ಪ್ರೀಮಿಯಂನಲ್ಲಿ ಶೇರ್ ಯಾವಾಗಲೂ ಮೋಟಾರ್ ಪಾಲಿಸಿಯಲ್ಲಿ ನಿಗದಿಪಡಿಸಿದ ಒಂದು ಪಾಲು ಆಗಿರುತ್ತದೆ, ಅದು ಸಮಗ್ರವಾಗಿರಬಹುದು ಅಥವಾ ಸ್ವತಂತ್ರವಾಗಿರಬಹುದು. ಇದು ಮೋಟಾರ್ ಪಾಲಿಸಿ ಪ್ರೀಮಿಯಂನಲ್ಲಿ ಪಾಲನ್ನು ರೂಪಿಸಬಹುದು ಅಥವಾ ರೂಪಿಸದೆ ಇರಬಹುದು
ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಮ್ಮನ್ನು ಸದಾ ಎಚ್ಚರಿಸುವುದು ನಮ್ಮ ಪ್ರಜ್ಞೆಯೇ. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಎಲ್ಲವೂ ನಮ್ಮ ಹಿಡಿತಕ್ಕೆ ಬರುವುದಿಲ್ಲ. ಆದ್ದರಿಂದ, ಗಮನಾರ್ಹವಾದ ಬಿಕ್ಕಟ್ಟಿನ ಸಮಯದಲ್ಲಿ, ಹಣಕಾಸಿನ ಹೊರೆಗಳನ್ನು ತಡೆಗಟ್ಟಲು ಬುದ್ಧಿವಂತರಾಗಬೇಕು ಮತ್ತು ಸಮಗ್ರ ಮೋಟಾರ್ ಪಾಲಿಸಿಯನ್ನು ಆರಿಸಿಕೊಳ್ಳುವುದು ಉತ್ತಮ.

ನಾನು ಏನನ್ನು ಪಡೆಯುತ್ತೇನೆ ?

ಓನ್ ಡ್ಯಾಮೇಜ್ ಇನ್ಶೂರೆನ್ಸ್ , ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅಥವಾ ಸಮಗ್ರ ಇನ್ಶೂರೆನ್ಸ್ ?

ಇದು ನಿಮ್ಮ ವಾಹನ ಮತ್ತು ನಿಮ್ಮ ಪಾಕೆಟ್, ಎರಡಕ್ಕೂ ನೀವು ಬಯಸುವ ಕವರೇಜ್ ಮತ್ತು ರಕ್ಷಣೆಯನ್ನು ನೀಡುತ್ತದೆ! ಆದ್ದರಿಂದ ನೀವು ಸಮಗ್ರ ಇನ್ಶೂರೆನ್ಸ್ ಆಯ್ಕೆ ಮಾಡಿಕೊಳ್ಳುವುದೇ ಉತ್ತಮ. ಏಕೆಂದರೆ ಇದು ಖಡ್ಡಾಯವಾದ ಥರ್ಡ್ ಪಾರ್ಟಿಯ ನಷ್ಟ ಮತ್ತು ಹಾನಿ ಮತ್ತು ನಿಮ್ಮ ಓನ್ ಡ್ಯಾಮೇಜ್ ಅನ್ನು ಖಡ್ಡಾಯವಾಗಿ ಒಳಗೊಂಡಿದೆ.

ಆದಾಗ್ಯೂ, ನೀವು ಈಗಾಗಲೇ ವ್ಯಾಲಿಡ್ ಆಗಿರುವ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ನಿಮ್ಮ ವಾಹನಕ್ಕೆ ಸಂಪೂರ್ಣ ಕವರೇಜ್ ಪಡೆಯಲು ನೀವು ಓ.ಡಿ (OD) ಇನ್ಶೂರೆನ್ಸ್ ಪಡೆಯಬಹುದು.

ಕ್ಲೇಮ್‌ನ ಸಮಯದಲ್ಲಿ ನೀಡಲಾದ ಕವರೇಜ್‌ನ ಒಟ್ಟು ಮೊತ್ತವು ಪಾಲಿಸಿಯಲ್ಲಿ ನಿರ್ದಿಷ್ಟ ಪಡಿಸಿದ ಷರತ್ತುಗಳು ಮತ್ತು ನಿಸ್ಸಂಶಯವಾಗಿ ನಿಮ್ಮ ಇನ್ಶೂರೆನ್ಸ್ ಯೋಜನೆಯನ್ನು ಅವಲಂಬಿಸಿರುತ್ತದೆ. ಪ್ರತಿ ವರ್ಷ ಕವರೇಜಿನ ವ್ಯಾಪ್ತಿ ಮತ್ತು ಓನ್ ಡ್ಯಾಮೇಜ್ ಪ್ರೀಮಿಯಂ ಬದಲಾಗುತ್ತದೆ ಏಕೆಂದರೆ ವಾಹನದ ಮೌಲ್ಯವು ಕಡಿಮೆಯಾಗುತ್ತಿರುತ್ತದೆ.

ಭಾರತದಲ್ಲಿ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಬಗ್ಗೆ ಕೇಳುವ FAQ ಗಳು.

ಇನ್ಶೂರೆನ್ಸಿನಲ್ಲಿ OD ಎಂದರೆ ಏನು?

ಇನ್ಶೂರೆನ್ಸಿನಲ್ಲಿ ಓ.ಡಿ (OD) ಎನ್ನುವುದು 'ಓನ್ ಡ್ಯಾಮೇಜ್ ' ಎಂಬುದನ್ನು ಸೂಚಿಸುತ್ತದೆ, ಇದು ನಿಮ್ಮ ಸ್ವಂತ ವಾಹನದ ಹಾನಿ ಮತ್ತು ನಷ್ಟಕ್ಕೆ ರಕ್ಷಣೆ ನೀಡುತ್ತದೆ.

ಓ.ಡಿ (OD) ಇನ್ಶೂರೆನ್ಸ್ ಅನ್ನು ಖರೀದಿಸಲು ಯಾರು ಅರ್ಹರು?

ಈಗಾಗಲೇ ವ್ಯಾಲಿಡ್ ಆಗಿರುವ ಥರ್ಡ್-ಪಾರ್ಟಿ ಮೋಟಾರ್ ಇನ್ಶೂರೆನ್ಸ್  ಹೊಂದಿರುವ ಯಾರೇ ಆದರೂ ಸ್ವತಂತ್ರ ಓನ್ ಡ್ಯಾಮೇಜ್  ಇನ್ಶೂರೆನ್ಸ್ ಅನ್ನು ಪಡೆಯಬಹುದು. ಇದು ನಿಮ್ಮ ಓನ್ ಡ್ಯಾಮೇಜ್ ಮತ್ತು ನಷ್ಟಗಳನ್ನು ಸಹ ಭರಿಸುತ್ತದೆ.

ಲಭ್ಯವಿರುವ ವಿವಿಧ ರೀತಿಯ ಮೋಟಾರ್ ಇನ್ಶೂರೆನ್ಸ್ ಪಾಲಿಸಿಗಳು ಯಾವುವು?

ನೀವು ಖರೀದಿಸಬಹುದಾದ ಮೂರು ವಿಧದ ಮೋಟಾರ್ ಇನ್ಶೂರೆನ್ಸ್ ಯೋಜನೆಗಳಿವೆ; ಥರ್ಡ್-ಪಾರ್ಟಿ ಮೋಟಾರ್ ಇನ್ಶೂರೆನ್ಸ್ ಪಾಲಿಸಿ, ಸಮಗ್ರ ಅಥವಾ ಸ್ಟ್ಯಾಂಡರ್ಡ್ ಮೋಟಾರ್ ಇನ್ಶೂರೆನ್ಸ್ ಪಾಲಿಸಿ ಮತ್ತು ಓನ್ ಡ್ಯಾಮೇಜ್ ಮೋಟಾರ್ ಇನ್ಶೂರೆನ್ಸ್ ಪಾಲಿಸಿ.

ಕಾನೂನಿನ ಪ್ರಕಾರ ಓ.ಡಿ (OD) ಇನ್ಶೂರೆನ್ಸ್ ಖಡ್ಡಾಯವೇ?

ಇಲ್ಲ, ನಿಮ್ಮ ಕಾರು ಅಥವಾ ಬೈಕ್‌ಗೆ OD ಇನ್ಶೂರೆನ್ಸ್ ಖಡ್ಡಾಯವಲ್ಲ ಆದರೆ ನಿಮ್ಮ ಸ್ವಂತ ವಾಹನದ ರಕ್ಷಣೆಗಾಗಿ ಶಿಫಾರಸ್ಸು ಮಾಡಲಾಗಿದೆ. ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ಎಲ್ಲಾ ವಾಹನಗಳಿಗೆ ಬೇಸಿಕ್ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಖಡ್ಡಾಯವಾಗಿದೆ. ಹೆಚ್ಚುವರಿಯಾಗಿ, ಒಂದೇ ಪಾಲಿಸಿಯೊಳಗೆ ಥರ್ಡ್ ಪಾರ್ಟಿ ಹೊಣೆಗಾರಿಕೆ ಮತ್ತು ಓನ್ ಡ್ಯಾಮೇಜ್, ಎರಡನ್ನೂ ಸರಿದೂಗಿಸಲು ನೀವು ಸಮಗ್ರ ಇನ್ಶೂರೆನ್ಸ್ ಸಹ ಆರಿಸಿಕೊಳ್ಳಬಹುದು.

ಓ.ಡಿ (OD) ಇನ್ಶೂರೆನ್ಸ್ ಯಾವಾಗ ಜಾರಿಗೆ ಬಂದಿದೆ ?

ಮಾರ್ಚ್ 2019 ರಲ್ಲಿ (ಕಾನೂನಿನ ಪ್ರಕಾರ) ಲಾಂಗ್ ಟರ್ಮ್ ಥರ್ಡ್-ಪಾರ್ಟಿ ಪಾಲಿಸಿಗಳನ್ನು ಖರೀದಿಸಿದ ಕಾರು ಮತ್ತು ಬೈಕ್ ಮಾಲೀಕರಿಗೆ ನಿರ್ದಿಷ್ಟವಾಗಿ ಸಹಾಯ ಮಾಡಲು IRDAI ಸೆಪ್ಟೆಂಬರ್ 2019 ರಲ್ಲಿ ಸ್ವತಂತ್ರ OD ಇನ್ಶೂರೆನ್ಸ್ ಅನ್ನು ಪರಿಚಯಿಸಿತು. ಇದರಿಂದ ವಾಹನದ ಮಾಲೀಕರು ತಮ್ಮಿಂದಾದ ಹಾನಿಯನ್ನು (ಓನ್ ಡ್ಯಾಮೇಜ್ ) ಕವರ್ ಮಾಡುವ ಆಯ್ಕೆ ಹೊಂದಿದ್ದಾರೆ. ಸಕ್ರಿಯವಾಗಿ ಥರ್ಡ್-ಪಾರ್ಟಿ ಮೋಟಾರ್ ಇನ್ಶೂರೆನ್ಸ್  ಪಾಲಿಸಿಯನ್ನು ಹೊಂದಿರುವ ಯಾರಿಗಾದರೂ ಈ ಇನ್ಶೂರೆನ್ಸ್ ಕವರ್ ಅನ್ವಯಿಸುತ್ತದೆ.

ನನ್ನ ಥರ್ಡ್-ಪಾರ್ಟಿ ಪಾಲಿಸಿಯು ಜೂನ್‌ನಲ್ಲಿ ಮುಕ್ತಾಯಗೊಳ್ಳುತ್ತಿದ್ದರೆ ಆಗಲೂ ನಾನು OD ಪಾಲಿಸಿಯನ್ನು ಖರೀದಿಸಬಹುದೇ?

ಹೌದು, ನಿಮ್ಮ ಥರ್ಡ್-ಪಾರ್ಟಿ ಪಾಲಿಸಿಯು ಮುಂದಿನ ನಾಲ್ಕು ತಿಂಗಳುಗಳಲ್ಲಿ ಮುಕ್ತಾಯಗೊಳ್ಳದಿದ್ದರೂ, ನೀವು OD ಪಾಲಿಸಿಯನ್ನು ಆರಿಸಿಕೊಳ್ಳಬಹುದು.