ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್: ಪರಿಶೀಲಿಸುವುದು ಹೇಗೆ, ಪ್ರಯೋಜನಗಳು ಮತ್ತು ಮಹತ್ವ

ಎಕ್ಸ್‌ಪೀರಿಯನ್ ಒಂದು ಬಹುರಾಷ್ಟ್ರೀಯ ಕ್ರೆಡಿಟ್ ರಿಪೋರ್ಟಿಂಗ್ ಕಂಪೆನಿಯಾಗಿದ್ದು ಇದನ್ನು ಭಾರತದಲ್ಲಿ 2010 ರಲ್ಲಿ ಆರಂಭಿಸಲಾಯಿತು. ಇದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪರವಾನಗಿ ನೀಡಿರುವ ನಾಲ್ಕು ಕ್ರೆಡಿಟ್ ಬ್ಯೂರೋಗಳಲ್ಲಿ ಒಂದಾಗಿದೆ. ಇದು ಗ್ರಾಹಕರಿಗೆ ಅವರ ಕ್ರೆಡಿಟ್ ಅರ್ಹತೆಯನ್ನು ಅಳೆಯಲು ಹಾಗೂ ತಮ್ಮ ಕ್ರೆಡಿಟ್ ಚಟುವಟಿಕೆಗಳನ್ನು ಹೆಚ್ಚು ಸಮರ್ಥ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡಲು ವೈಯಕ್ತಿಕ ಹಾಗೂ ವ್ಯವಹಾರ ಕ್ರೆಡಿಟ್ ಸ್ಕೋರ್ ಎರಡರನ್ನೂ ಒದಗಿಸುತ್ತದೆ.

ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಎಂದರೇನು?

ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ 300 ಮತ್ತು 850 ಮಧ್ಯದ ವ್ಯಾಪ್ತಿಯನ್ನು ಹೊಂದಿರುವ ಮೂರು ಡಿಜಿಟ್ ನ ಸಂಖ್ಯೆಯಾಗಿದೆ. ಇದನ್ನು ಒಬ್ಬ ವ್ಯಕ್ತಿಯ ಬಿಲ್ ಪಾವತಿಗಳ ಇತಿಹಾಸ, ಕ್ರೆಡಿಟ್ ಬಳಕೆ, ಸಾಲದ ಅರ್ಜಿಗಳು ಮುಂತಾದವುಗಳನ್ನು ಬಳಸಿ ಕ್ರೆಡಿಟ್ ಮಾಹಿತಿ ಕಂಪೆನಿಯಿಂದ ಲೆಕ್ಕಾಚಾರ ಮಾಡಲಾಗುತ್ತದೆ.

ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಅವರ "ಕ್ರೆಡಿಟ್ ಅರ್ಹತೆ"ಯನ್ನು ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಸಾಲಗಳಿಗಾಗಿ ಅನುಮೋದನೆಯನ್ನು ಪಡೆಯುವ ಅವರ ಸಾಮರ್ಥ್ಯವನ್ನು ಸೂಚಿಸುತ್ತದೆ. ಒಂದು ಉತ್ತಮ ಎಕ್ಸ್‌ಪೀರಿಯನ್ ಸ್ಕೋರ್, ಈ ಅನುಮೋದನೆಗಳನ್ನು ಪಡೆಯುವ ನಿಮ್ಮ ಸಾಧ್ಯತೆಗಳನ್ನು ಹೆಚ್ಚಿಸುವುದು, ಏಕೆಂದರೆ ನಿಮ್ಮನ್ನು ಕಡಿಮೆ ಬೇಪಾವತಿ ಅಪಾಯವನ್ನು ಹೊಂದಿರುವ ಒಬ್ಬ ಜವಾಬ್ದಾರಿಯುತ ಕ್ರೆಡಿಟ್ ವರ್ತನೆ ಇರುವ ವ್ಯಕ್ತಿಯಾಗಿ ಕಾಣಲಾಗುವುದು.

ಒಂದು ಒಳ್ಳೆಯ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಎಂದರೇನು?

ಮೇಲೆ ತಿಳಿಸಿರುವಂತೆ, ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ನ ವ್ಯಾಪ್ತಿ 300-850 ಆಗಿದೆ. ಇಲ್ಲಿ, 300 ಕನಿಷ್ಠ ಸಾಧ್ಯ ಸ್ಕೋರ್, ಹಾಗೂ 850 ಗರಿಷ್ಠ ಸ್ಕೋರ್ ಆಗಿದೆ. ಸಾಮಾನ್ಯವಾಗಿ, ಒಂದು ಉತ್ತಮ ಸ್ಕೋರ್ ಒಬ್ಬ ವ್ಯಕ್ತಿ ಆರ್ಥಿಕವಾಗಿ ಉತ್ತಮ ಸ್ಥಾನದಲ್ಲಿರುವುದನ್ನು ಸೂಚಿಸುತ್ತದೆ.

ಎಕ್ಸ್‌ಪೀರಿಯನ್ ಸ್ಕೋರ್ ನ ವ್ಯಾಪ್ತಿ ಅಥವಾ ವರ್ಗಗಳು ಈ ರೀತಿ ಇವೆ:

ಸ್ಕೋರ್ ವರ್ಗ ಅರ್ಥ
NA/NH ಸ್ಕೋರ್ ಇಲ್ಲ ನೀವು ಕ್ರೆಡಿಟ್ ಹಿಸ್ಟರಿಯನ್ನು ಹೊಂದಿಲ್ಲ.
300-549 ಕೆಳಮಟ್ಟದ್ದಾಗಿದೆ ಹಣಕಾಸಿನ ನಿರ್ವಹಣೆಯ ಕಳಪೆ ಇತಿಹಾಸ, ಬೇಪಾವತಿಗಳು ಮತ್ತು ಕಳಪೆ ಸಾಲದ ಬಳಕೆ ಇರುವ ನಿಮ್ಮನ್ನು, ಹೆಚ್ಚಿನ ಅಪಾಯ ಎಂದು ಪರಿಗಣಿಸಲಾಗುತ್ತದೆ ಹಾಗೂ ಸಾಲದಾತರು ನಿಮಗೆ ಸಾಲ ನೀಡಲು ಹಿಂಜರಿಯುವರು.
550-649 ಸಾಧಾರಣ ಬೇಪಾವತಿ, ಅಸುರಕ್ಷಿತ ಸಾಲ ಮುಂತಾದವುಗಳ ಕೆಲ ನಿದರ್ಶನಗಳನ್ನು ಹೊಂದಿರುವ ನಿಮ್ಮನ್ನು ಸಾಲದಾತರು ಅಪಾಯ ಎಂದು ಪರಿಗಣಿಸುತ್ತಾರೆ ಏಕೆಂದರೆ ನೀವು ಡೀಫಾಲ್ಟರ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
650-749 ಒಳ್ಳೆಯ ಸರಿಸಮವಾದ ಕ್ರೆಡಿಟ್ ಹಿಸ್ಟರಿ, ಆರ್ಥಿಕವಾಗಿ ಉತ್ತಮ ನಿರ್ಧಾರಗಳ ಪ್ರದರ್ಶನ, ಮತ್ತು ಸಮಯದಲ್ಲಿ ಮರುಪಾವತಿ ಇರುವ ನಿಮ್ಮನ್ನು ಕಡಿಮೆ-ಅಪಾಯದ ಸಾಲಗಾರ ಎಂದು ಪರಿಗಣಿಸಲಾಗುವುದು, ಹಾಗೂ ಸಾಲದಾತರು ನಿಮಗೆ ಸಾಲವನ್ನು ನೀಡಲು ಮುಂದಾಗುತ್ತಾರೆ.
750-799 ಉತ್ತಮ ಹಣಕಾಸಿನ ನಿರ್ವಹಣೆ ಹಾಗೂ ಸಾಲದ ಬಳಕೆಯ ಉತ್ತಮ ಇತಿಹಾಸ, ಬೇಪಾವತಿಗಳಿಲ್ಲದ ಸಮಯದ ಮರುಪಾವತಿಗಳು ಇರುವ ನೀವು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಸಾಬೀತುಪಡಿಸಿರುತ್ತೀರಿ, ಕ್ರೆಡಿಟ್ ಅರ್ಹತೆ ಹಾಗೂ ಸಾಲವನ್ನು ನೀಡುವಾಗ ಸಾಲದಾತರು ನಿಮ್ಮನ್ನು ಕಡಿಮೆ ಅಪಾಯವೆಂದು ಪರಿಗಣಿಸುತ್ತಾರೆ.
800-850 ಅತ್ಯುತ್ತಮ ಇದು ಎಕ್ಸ್‌ಪೀರಿಯನ್ ನೀಡುವ ಗರಿಷ್ಠ ವ್ಯಾಪ್ತಿಯಾಗಿದ್ದು, ಒಂದು ಪರಿಪೂರ್ಣತೆಗೆ ಹತ್ತಿರವಾದ ಕ್ರೆಡಿಟ್ ದಾಖಲೆಯನ್ನು ಹೊಂದಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ, ನಿಮ್ಮನ್ನು ಅತಿ ಕಡಿಮೆ ಅಪಾಯ ಎಂದು ಪರಿಗಣಿಸಲಾಗುತ್ತದೆ ಹಾಗೂ ನಿಮಗೆ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಗಳಲ್ಲಿ ಉತ್ತಮ ಕೊಡುಗೆಗಳು ದೊರೆಯುವ ಸಾಧ್ಯತೆಯೂ ಹೆಚ್ಚಿರುತ್ತದೆ.

ಒಂದು ಒಳ್ಳೆಯ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಹೊಂದಿರುವುದರ ಮಹತ್ವವೇನು?

ಒಬ್ಬ ವ್ಯಕ್ತಿಯ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಅವರ "ಕ್ರೆಡಿಟ್ ಅರ್ಹತೆ"ಯನ್ನು ಪ್ರತಿಬಿಂಬಿಸುತ್ತದೆ. ಅವರ ಸಾಲದಂತಹ ಕ್ರೆಡಿಟ್ ಮರುಪಾವತಿಯ ಸಾಮರ್ಥ್ಯವನ್ನು ಇದು ಉಲ್ಲೇಖಿಸುತ್ತದೆ.

ಈ ಸ್ಕೋರ್ ಗಳು ಮಹತ್ವಪೂರ್ಣವಾಗಿರುತ್ತವೆ, ಏಕೆಂದರೆ ಬ್ಯಾಂಕ್ ಹಾಗೂ ಇತರ ಸಾಲದಾತರಂತಹ ಹಣಕಾಸಿನ ಸಂಸ್ಥೆಗಳು, ಸಾಲ ಅಥವಾ ಕ್ರೆಡಿಟ್ ಕಾರ್ಡ್ ನ ಅರ್ಜಿಗಳನ್ನು ಅನುಮೊದಿಸುವುದೋ ಬೇಡವೋ ಎಂದು ನಿರ್ಧರಿಸಿ ಕೆಟ್ಟ ಸಾಲ ಅಥವಾ ವಂಚನೆಯ ಸಂದರ್ಭಗಳನ್ನು ತಪ್ಪಿಸಲು, ಇದನ್ನು ಬಳಸುತ್ತಾರೆ.

ಒಂದು ಒಳ್ಳೆಯ/ಉತ್ತಮ ಸ್ಕೋರ್ ಇಂತಹ ಅರ್ಜಿಗಳ ಅನುಮೋದನೆಯಲ್ಲಿ ಸಹಾಯಕಾರಿಯಾಗಬಹುದು, ಆದರೆ ಒಂದು ಕಡಿಮೆ/ಕಳಪೆ ಸ್ಕೋರ್ ನಿಮ್ಮ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಅಸ್ವೀಕಾರವಾಗುವುದಕ್ಕೆ ಕಾರಣವಾಗಬಹುದು.

ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ?

ಒಬ್ಬ ವ್ಯಕ್ತಿಯ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್, ಮತ್ತು ಅವುಗಳ ಕ್ರೆಡಿಟ್ ರಿಪೋರ್ಟ್ ಅನ್ನು ಐದು ಪ್ರಮುಖ ಅಂಶಗಳಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳಲ್ಲಿ ಪ್ರತೀ ಅಂಶವು ನಿಮ್ಮ ಅಂತಿಮ ಸ್ಕೋರ್ ನ ಒಂದು ಭಿನ್ನವಾದ ಪರ್ಸಂಟೇಜ್ ಗೆ ಕೊಡುಗೆ ನೀಡುತ್ತದೆ. ಅವುಗಳು ಈ ರೀತಿ ಇವೆ:

ಅಂಶಗಳು ಪರ್ಸಂಟೇಜ್ ಈ ಅಂಶಗಳ ಮೇಲೆ ಏನು ಪರಿಣಾಮ ಬೀರುತ್ತದೆ?
ಪಾವತಿ ಇತಿಹಾಸ 35% ನಿಮ್ಮ ಕ್ರೆಡಿಟ್ ಅಕೌಂಟ್ ಗಳಾದ ಕ್ರೆಡಿಟ್ ಕಾರ್ಡ್ ಬಿಲ್ ಗಳು, ಸಾಲಗಳು, ಮತ್ತು ಇಎಂಐ ಗಳ ಸರಿಯಾದ ಸಮಯದ ಪಾವತಿಗಳು ನಿಮ್ಮ ಸ್ಕೋರ್ ಗೆ ಸಹಾಯಕಾರಿಯಾಗಬಹುದು, ತಪ್ಪಿದ ಪಾವತಿ ಅಥವಾ ಬೇಪಾವತಿ ನಿಮ್ಮ ಸ್ಕೋರ್ ಗೆ ಹಾನಿ ಉಂಟುಮಾಡಬಹುದು.
ಕ್ರೆಡಿಟ್ ಬಳಕೆ 30% ನೀವು ಪಾವತಿಸಬೇಕಾದ ಹಣ, ನಿಮ್ಮ ಅಕೌಂಟ್ ಬಾಕಿಗಳು, ಹಾಗೂ ನೀವು ನಿಮ್ಮ ಎಷ್ಟು ಕ್ರೆಡಿಟ್ ಮಿತಿಯನ್ನು ಬಳಸುತ್ತೀರಿ ಇವೆಲ್ಲಾ ಅಂಶಗಳಾಗಿವೆ
ಕ್ರೆಡಿಟ್ ಹಿಸ್ಟರಿಯ ಅವಧಿ 15% ಇಲ್ಲಿ ನಿಮ್ಮ ಕ್ರೆಡಿಟ್ ಅಕೌಂಟ್ ಗಳ ಸರಾಸರಿ ವಯಸ್ಸನ್ನು ಪರಿಗಣಿಸಲಾಗುತ್ತದೆ, ನಿಮ್ಮ ಹಳೆಯ ಅಕೌಂಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳು ನೀವು ಒಂದು ಜವಾಬ್ದಾರಿಯುತ ಕ್ರೆಡಿಟ್ ಹಿಸ್ಟರಿಯನ್ನು ಹೊಂದಿದ್ದೀರಿ ಎಂದು ಸಾಲದಾರರಲ್ಲಿ ನಂಬಿಕೆ ಮೂಡಿಸುತ್ತದೆ.
ಕ್ರೆಡಿಟ್ ಮಿಕ್ಸ್ 10% ಇದು ನೀವು ಹೊಂದಿರುವ ಅಕೌಂಟ್ ಅಥವಾ ಕ್ರೆಡಿಟ್ ಗಳ ಬಗ್ಗೆ ತಿಳಿಸುತ್ತದೆ, ಅಸುರಕ್ಷಿತ ಸಾಲಗಳ(ಉದಾ ಕ್ರೆಡಿಟ್ ಕಾರ್ಡ್ ಮತ್ತು ವೈಯಕ್ತಿಕ ಸಾಲಗಳು) ಮತ್ತು ಸುರಕ್ಷಿತ ಸಾಲಗಳ(ಉದಾ ಕಾರ್ ಲೋನ್ ಗಳು ಅಥವಾ ಹೋಮ್ ಲೋನ್ ಗಳು) ಮಿಶ್ರಣವನ್ನು ಹೊಂದಿರುವುದನ್ನು ಶಿಫಾರಸು ಮಾಡಲಾಗಿದೆ ಏಕೆಂದರೆ ನೀವು ಎರಡು ವಿಧಗಳನ್ನೂ ನಿರ್ವಹಿಸಲು ಸಮರ್ಥರು ಎಂದು ಇದು ತೋರಿಸುತ್ತದೆ.
ಹೊಸ ಕ್ರೆಡಿಟ್ 10% ಇದು, ನೀವು ಇತ್ತೀಚಿಗೆ ಹೊಸ ಕ್ರೆಡಿಟ್(ಉದಾ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಗಳು) ಗೆ ಅರ್ಜಿ ಸಲ್ಲಿಸಿದ್ದೀರಾ ಅಥವಾ ಇತ್ತೀಚಿಗೆ ಹೊಸ ಅಕೌಂಟ್ ಅನ್ನು ತೆರೆದಿದ್ದೀರಾ ಎನ್ನುವುದನ್ನು ತಿಳಿಸುತ್ತದೆ, ಹೆಚ್ಚಿನ ವಿಚಾರಣೆಗಳು ನಿಮ್ಮ ಸ್ಕೋರ್ ಅನ್ನು ಕಡಿಮೆ ಮಾಡಬಹುದು.

ನಿಮ್ಮ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದು ಹೇಗೆ?

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದು ಮಹತ್ವಪೂರ್ಣವಾಗಿದ್ದು ನಿಮ್ಮ ನಿಖರವಾದ ಸ್ಥಾನವನ್ನು ನಿಮಗೆ ತಿಳಿಸುತ್ತದೆ. ನೀವು ಸಾಲ ಅಥವಾ ಒಂದು ರೀತಿಯ ಕ್ರೆಡಿಟ್ ಗೆ ಅರ್ಜಿ ಸಲ್ಲಿಸುವ ಬಗ್ಗೆ ಯೋಚಿಸುತ್ತಿದ್ದರೆ ಇದು ವಿಶೇಷವಾಗಿ ಆವಶ್ಯಕವಾಗುತ್ತದೆ, ಏಕೆಂದರೆ ನೀವು ಉತ್ತಮವಾಗಿ ಸಿದ್ಧವಾಗಬಹುದು .

ಆರ್‌ಬಿಐ ಕಡ್ಡಾಯಗೊಳಿಸಿರುವಂತೆ, ಪ್ರತೀ 12 ತಿಂಗಳಿಗೊಮ್ಮೆ ಬಳಕೆದಾರರು ಒಂದು ಉಚಿತ ಕ್ರೆಡಿಟ್ ರಿಪೋರ್ಟ್ ಅನ್ನು ಪಡೆಯುತ್ತಾರೆ, ಹೆಚ್ಚುವರಿ ರಿಪೋರ್ಟ್ ಗಳಿಗಾಗಿ ನೀವು ₹399 ರ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅದಾಗ್ಯೂ, ನೀವು ಬೇಕಾದಾಗಲೆಲ್ಲಾ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಬಹುದಾಗಿದೆ. ಇದನ್ನು ಹೇಗೆ ಮಾಡಬಹುದೆಂದು ಇಲ್ಲಿ ನೀಡಲಾಗಿದೆ:

ನಿಮ್ಮ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಅನ್ನು ಆನ್‌ಲೈನ್‌ ಆಗಿ ಪರಿಶೀಲಿಸುವುದು

  • ಹಂತ 1: ಎಕ್ಸ್‌ಪೀರಿಯನ್ ವೆಬ್ಸೈಟ್ ಗೆ ಭೇಟಿ ನೀಡಿ ಹಾಗೂ "ಉಚಿತ ಕ್ರೆಡಿಟ್ ರಿಪೋರ್ಟ್" ಬಟನ್ ಅನ್ನು ಕ್ಲಿಕ್ ಮಾಡಿ

  • ಹಂತ 2: ಲಾಗ್ ಇನ್ ಮಾಡಲು, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸದಂತಹ ನಿಮ್ಮ ವಿವರಗಳನ್ನು ನಮೂದಿಸಿ.

  • ಹಂತ 3: ನೀವು ಮೇಲೆ ನೀಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುವುದು. ಅದನ್ನು ನಮೂದಿಸಿದ ನಂತರ, ನೀವು "ಕ್ರೆಡಿಟ್ ರಿಪೋರ್ಟ್ ಪಡೆಯಿರಿ" ಆಯ್ಕೆ ಮೇಲೆ ಕ್ಲಿಕ್ ಮಾಡಬಹುದು.

  • ಹಂತ 4: ಒಮ್ಮೆ ಲಾಗಿನ್ ಆದ ನಂತರ, ನಿಮಗೆ ನಿಮ್ಮ ಜನನ ದಿನಾಂಕ, ಮನೆ ವಿಳಾಸ, ಮತ್ತು ಯಾವುದಾದರೂ ಸರಕಾರ ಅನುಮೋದಿತ ಐಡಿ ಕಾರ್ಡ್ ಸಂಖ್ಯೆ (ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್‌, ಡ್ರೈವಿಂಗ್ ಲೈಸನ್ಸ್, ಇತ್ಯಾದಿ) ಗಳನ್ನು ಬಳಸಿ ನಿಮ್ಮ ಗುರುತನ್ನು ದೃಢಪಡಿಸಲು ಹೇಳಲಾಗುತ್ತದೆ.

  • ಹಂತ 5: ಒಮ್ಮೆ ಈ ಮಾಹಿತಿ ಪರಿಶೀಲನೆಯಾದ ನಂತರ, ನಿಮಗೆ ನಿಮ್ಮ ಸಾಲ ಮತ್ತು ಕ್ರೆಡಿಟ್ ಹಿಸ್ಟರಿಯ ಬಗ್ಗೆಯೂ ಕೆಲ ಪ್ರಶ್ನೆಗಳನ್ನು ಕೇಳಲಾಗುವುದು.

  • ಹಂತ 6: ಇದಾದ ನಂತರ, ನಿಮಗೆ ಕ್ರೆಡಿಟ್ ಸ್ಕೋರ್ ತಯಾರಿಸಲಾಗುವ ಪುಟಕ್ಕೆ ನಿರ್ದೆಶಿಸಲಾಗುತ್ತದೆ. 

  • ಹಂತ 7: ನೀವು ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನೂ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ನಿಮ್ಮ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಅನ್ನು ಆಫ್ಲೈನ್ ಆಗಿ ಪರಿಶೀಲಿಸುವುದು

  • ಹಂತ 1: ಎಕ್ಸ್‌ಪೀರಿಯನ್ ವೆಬ್ಸೈಟ್ ಅನ್ನು ಡೌನ್ಲೋಡ್ ಮಾಡಿ ಹಾಗೂ ಕ್ರೆಡಿಟ್ ರಿಪೋರ್ಟ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ.

  • ಹಂತ 2: ಫಾರ್ಮ್ ನಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಹಾಗೂ ಅದನ್ನು ಸೈನ್ ಮಾಡಲು ಮರೆಯಬೇಡಿ.

  • ಹಂತ 3: ನಿಮ್ಮ ಗುರುತಿನ ಪುರಾವೆಯ ಸ್ವಯಂ- ದೃಢೀಕೃತ ಪ್ರತಿಯನ್ನು ಸೇರಿಸಿ, ಉದಾಹರಣೆಗೆ, ನಿಮ್ಮ ಪಾನ್ ಕಾರ್ಡ್, ಪಾಸ್‌ಪೋರ್ಟ್‌ ಅಥವಾ ನಿಮ್ಮ ವೋಟರ್ಸ್ ಐಡಿ. 

  • ಹಂತ 4: ನಿಮ್ಮ ವಿಳಾಸದ ಪುರಾವೆಯ ಸ್ವಯಂ- ದೃಢೀಕೃತ ಪ್ರತಿಯನ್ನೂ ಸೇರಿಸಿ, ಉದಾಹರಣೆಗೆ ನಿಮ್ಮ ಫೋನ್ ಬಿಲ್, ವಿದ್ಯುತ್ ಬಿಲ್, ಬಾಡಿಗೆ ಒಪ್ಪಂದ, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ ಮತ್ತು ಖರೀದಿಯ ಹಕ್ಕುಪತ್ರ.

  • ಹಂತ 5: ನಿಮ್ಮ ಎಕ್ಸ್‌ಪೀರಿಯನ್ ಸಿಐಆರ್ ಗೆ ಬೇಕಾಗುವ ₹138 ಅಗತ್ಯ ಶುಲ್ಕವನ್ನು ಎನ್ಇಎಫ್ಟಿ ಮೂಲಕ ಪಾವತಿಸಿ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಲಗತ್ತಿಸಿ.

  • ಹಂತ 6: ಅಂತಿಮವಾಗಿ, ಅಗತ್ಯ ಡಾಕ್ಯುಮೆಂಟುಗಳು ಹಾಗೂ ಪಾವತಿ ಪುರಾವೆಯೊಂದಿಗೆ ಫಾರ್ಮ್ ಅನ್ನು ಪೋಸ್ಟ್ ಅಥವಾ ಕೊರಿಯರ್ ಮೂಲಕ ಕೆಳಕಂಡ ವಿಳಾಸಕ್ಕೆ ಕಳಿಸಿ:

    • ಎಕ್ಸ್‌ಪೀರಿಯನ್ ಕ್ರೆಡಿಟ್ ಇನ್ಫೋರ್ಮೆಶನ್ ಕಂಪೆನಿ ಇಂಡಿಯಾ ಪ್ರೈ. ಲೀ. ಕನ್ಸ್ಯೂಮರ್ ಸರ್ವಿಸಸ್ ಈಕ್ವಿನಾಕ್ಸ್ ಬಿಸ್ನೆಸ್ ಪಾರ್ಕ್, ಟವರ್ 3, 5ನೇ ಮಹಡಿ, ಈಸ್ಟ್ ವಿಂಗ್, ಎಲ್ ಬಿ ಎಸ್ ಮಾರ್ಗ್, ಕುರ್ಲಾ (ಪಶ್ಚಿಮ), ಮುಂಬಯಿ 400070.

  • ಹಂತ 7: ನಿಮಗೆ ನಿಮ್ಮ ಕ್ರೆಡಿಟ್ ಸ್ಕೋರ್ ಹಾಗೂ ಕ್ರೆಡಿಟ್ ರಿಪೋರ್ಟ್ ಅನ್ನು ಅಂಚೆಯ ಮೂಲಕ ಕಳಿಸಲಾಗುವುದು.

ನೀವು ನಿಮ್ಮ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರನ್ನು ಸುಧಾರಿಸಬಹುದೇ?

ಮೇಲೆ ನೀಡಿರುವ ವಿಷಯಗಳ ಪ್ರಕಾರ ಒಂದು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುವುದು ಎಷ್ಟು ಮಹತ್ವಪೂರ್ಣ ಎಂದು ನೀವು ಗಮನಿಸಿರಬಹುದು. ಅದೃಷ್ಟವೆಂಬಂತೆ, ನೀವು ಕೆಳಗಡೆ ನೀಡಲಾದ ಕೆಲ ಅಗತ್ಯ ಕ್ರಮಗಳನ್ನು ಅನುಸರಿಸಿ ಸುಲಭವಾಗಿ ನಿಮ್ಮ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಬಹುದಾಗಿದೆ.

  • ನಿಮ್ಮ ಬಿಲ್ ಗಳನ್ನು ಸರಿಯಾದ ಸಮಯದಲ್ಲಿ ಪಾಲಿಸಿ, ಕಾರಣ, ನಿಮ್ಮ ಒಂದು ಎರಡು ತಪ್ಪಿದ ಪಾವತಿಗಳು ಕೂಡಾ ನಿಮ್ಮ ಸ್ಕೋರ್ ಗೆ ಹಾನಿಯುಂಟು ಮಾಡಬಹುದು.

  • ನಿಮ್ಮ ಸಾಲದ ಬಳಕೆ ಅನುಪಾತ(ಅಂದರೆ, ನಿಮಗೆ ಲಭ್ಯವಿರುವ ಕ್ರೆಡಿಟ್ ನಿಂದ ನೀವು ಎಷ್ಟನ್ನು ಬಳಸುತ್ತಿದ್ದೀರಿ)ವನ್ನು ಕಡಿಮೆ ಇರಿಸಿ.

  • ನೀವು ಕ್ರೆಡಿಟ್ ಅನ್ನು ಜವಾಬ್ದಾರಿಯುತವಾಗಿ ಬಳಸುತ್ತಿದ್ದೀರಿ ಎಂದು ತೋರಿಸಲು ಒಂದು ಉತ್ತಮ ಕ್ರೆಡಿಟ್ ಮಿಕ್ಸ್ ಅನ್ನು ನಿರ್ವಹಿಸಿ.

  • ನಿಮ್ಮ ಹಳೆಯ ಅಕೌಂಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ತೆರೆದಿಡಿ, ಏಕೆಂದರೆ ಒಂದು ಸುದೀರ್ಘ ಕ್ರೆಡಿಟ್ ಹಿಸ್ಟರಿಯು ನೀವು ಜವಾಬ್ದಾರಿಯುತ ಕ್ರೆಡಿಟ್ ವರ್ತನೆಯನ್ನು ಪ್ರದರ್ಶಿಸಿದ್ದೀರಿ ಎಂದು ಸಾಲದಾತರಿಗೆ ತೋರಿಸುತ್ತದೆ.

  • ಅಗತ್ಯ ಬಿದ್ದರೆ ಮಾತ್ರ ಹೊಸ ಕ್ರೆಡಿಟ್ ಅಕೌಂಟ್ ಗಳಿಗೆ ಅರ್ಜಿ ಸಲ್ಲಿಸಿ.

  • ನಿಮ್ಮ ಸ್ಕೋರ್ ಗೆ ಹಾನಿಯುಂಟು ಮಾಡಬಲ್ಲ ಯಾವುದೇ ತಪ್ಪುಗಳಿರದಂತೆ ಖಚಿತಪಡಿಸಲು ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ಆಗಾಗ್ಗೆ ಪರಿಶೀಲಿಸುತ್ತಿರಿ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ನಿಮ್ಮ ಎಕ್ಸ್‌ಪೀರಿಯನ್ ಕ್ರೆಡಿಟ್ ರಿಪೋರ್ಟ್ ಅನ್ನು ಎಷ್ಟು ಬಾರಿ ನವೀಕರಿಸಲಾಗುತ್ತದೆ?

ಸಾಮಾನ್ಯವಾಗಿ, ಸಾಲದಾತರು, ಬ್ಯಾಂಕುಗಳು ಮತ್ತು ಇತರ ಸಾಲದಾತರು ನಿಮ್ಮ ಮಾಹಿತಿಯನ್ನು ಮಾಸಿಕ ಆಧಾರದ ಮೇಲೆ ಎಕ್ಸ್‌ಪೀರಿಯನ್ ಹಾಗೂ ಇತರ ಕ್ರೆಡಿಟ್ ಬ್ಯೂರೋಗಳಿಗೆ ರವಾನಿಸುತ್ತಾರೆ (ಆದರೂ, ಅವರು ಕಳುಹಿಸುವ ತಿಂಗಳಿನ ದಿನವು ಬೇರೆ ಬೇರೆ ಆಗಿರಬಹುದು). ಆದ್ದರಿಂದ, ನಿಮ್ಮ ಸಾಲದಾತರು ನಿಮ್ಮ ಪಾವತಿ ಇತಿಹಾಸವನ್ನು ಯಾವಾಗ ಕಳಿಸುತ್ತಾರೆ ಎನ್ನುವುದನ್ನು ಅವಲಂಬಿಸಿ, ನಿಮ್ಮ ಕ್ರೆಡಿಟ್ ರಿಪೋರ್ಟ್ ಅನ್ನು ಸಾಮಾನ್ಯವಾಗಿ ಮಾಸಿಕವಾಗಿ ನವೀಕರಿಸಲಾಗುತದೆ.

ನಿಮ್ಮ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದು ಏಕೆ ಮಹತ್ವಪೂರ್ಣವಾಗಿದೆ?

ನಿಮ್ಮ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವುದು ಒಂದು ಉಚಿತ ಪ್ರಕ್ರಿಯೆ ಆಗಿರುವ ಕಾರಣ, ಇದನ್ನು ನಿಯಮಿತವಾಗಿ ಮಾಡುವುದು ಮಹತ್ವಪೂರ್ಣವಾಗಿದೆ. ಹೀಗೆ ಮಾಡಿದ್ದಲ್ಲಿ ನೀವು ನಿಮ್ಮ ಸ್ಕೋರ್ ಹೇಗೆ ಸಮಯದೊಂದಿಗೆ ಬಾದಲಾಗುತ್ತದೆ ಎಂದು ನೋಡಬಹುದು, ವಿಶೇಷವಾಗಿ ನೀವು ನಿಮ್ಮ ಸ್ಕೋರ್ ಅನ್ನು ಸುಧಾರಿಸಲು ಬಯ.ಸುತ್ತಿದ್ದಾರೆ.

ಇತರ ಬ್ಯೂರೋಗಳು ಒದಗಿಸುವ ಕ್ರೆಡಿಟ್ ಸ್ಕೋರ್ ಗಿಂತ ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಹೇಗೆ ಭಿನ್ನವಾಗಿದೆ?

ಭಾರತದ ಇತರ ಕ್ರೆಡಿಟ್ ಬ್ಯೂರೋಗಳ(ಈಕ್ವಿಫ್ಯಾಕ್ಸ್, ಕ್ರಿಫ್ ಹೈಮಾರ್ಕ್ ಮತ್ತು ಸಿಬಿಲ್) ಹಾಗೆ ಎಕ್ಸ್‌ಪೀರಿಯನ್, ವೈಯಕ್ತಿಕ ಬಳಕೆದಾರರಿಗೆ ಹಾಗೂ ಕಂಪೆನಿಗಳಿಗೆ ಕ್ರೆಡಿಟ್ ಸ್ಕೋರ್ ಹಾಗೂ ಕ್ರೆಡಿಟ್ ರಿಪೋರ್ಟ್ ಗಳನ್ನು ಒದಗಿಸುತ್ತದೆ.

ಎಕ್ಸ್‌ಪೀರಿಯನ್ ಕ್ರೆಡಿಟ್ ಸ್ಕೋರ್ ಅನ್ನು ಸಾಲದಾತರು, ಬ್ಯಾಂಕ್, ಹಣಕಾಸಿನ ಸಂಸ್ಥೆಗಳು ನೀಡುವ ಮಾಹಿತಿಯನ್ನು ಬಳಸಿ ಲೆಕ್ಕಾಚಾರ ಮಾಡಲಾಗುತ್ತದೆ. ಅವರು ಕ್ರೆಡಿಟ್ ಸ್ಕೋರ್ ಅನ್ನು ಹೊರತೆಗೆಯಲು ವಿಭಿನ್ನ ಆಲ್ಗಾರಿದ್ಮ್ ಅಥವಾ ಕ್ರಮಾವಳಿಗಳನ್ನು ಬಳಸುತ್ತಾರೆ. ಆದ್ದರಿಂದ, ಪ್ರತೀ ಕ್ರೆಡಿಟ್ ಬ್ಯೂರೋ ಒದಗಿಸುವ ಕ್ರೆಡಿಟ್ ಸ್ಕೋರ್ ಸ್ವಲ್ಪ ಭಿನ್ನವಾಗಿರುತ್ತದೆ.

ನನ್ನ ಉಚಿತ ಕ್ರೆಡಿಟ್ ಸ್ಕೋರ್ ಪರಿಶೀಲನೆಯಿಂದ ಇದರ ಮೇಲೆ ಪರಿಣಾಮ ಬೀರುವುದೇ?

ನೀವೇ ಮಾಡಿರುವ ಕ್ರೆಡಿಟ್ ಸ್ಕೋರ್ ಪರಿಶೀಲನೆಯನ್ನು ಸಾಫ್ಟ್ ವಿಚಾರಣೆ ಎಂದು ಪರಿಗಣಿಸಲಾಗುತ್ತದೆ. ಸಾಫ್ಟ್ ವಿಚಾರಣೆಗಳು ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರಿಂಗ್ ಲೆಕ್ಕಾಚಾರ ಮಾಡುವ ಒಂದು ಅಂಶವಾಗದೇ ಇರುವುದರಿಂದ ಇದು ನಿಮ್ಮ ಕ್ರೆಡಿಟ್ ಸ್ಕೋರ್ ನ ಮೇಲೆ ಪರಿಣಾಮ ಬೀರುವುದಿಲ್ಲ.