ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಸಿಬಿಲ್ ಸ್ಕೋರ್ ಎಂದರೇನು: ಇದರ ಫುಲ್ ಫಾರ್ಮ್, ಹೇಗೆ ಪರಿಶೀಲಿಸುವುದು ಮತ್ತು ಇದರ ಪ್ರಾಮುಖ್ಯತೆ

ಸಿಬಿಲ್ ನ ಫುಲ್ ಫಾರ್ಮ್ ಏನು?

ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ (ಅಥವಾ ಸಿಬಿಲ್) ಭಾರತದಲ್ಲಿ ಕ್ರೆಡಿಟ್ ವರದಿಗಳು ಮತ್ತು ಸ್ಕೋರ್‌ಗಳನ್ನು ಒದಗಿಸುವ ಪ್ರಮುಖ ಏಜೆನ್ಸಿಗಳಲ್ಲಿ ಒಂದಾಗಿದೆ. ಇದು ಟ್ರಾನ್ಸ್‌ಯೂನಿಯನ್ ಇಂಟರ್‌ನ್ಯಾಷನಲ್‌ನಿಂದ ಬೆಂಬಲಿತವಾಗಿದೆ.

ಸಿಬಿಲ್ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ವ್ಯಕ್ತಿಗಳ ಹಣಕಾಸಿನ ಮಾಹಿತಿಯನ್ನು ಪಡೆಯುತ್ತದೆ. ಇದು ಅವರ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಒಳಗೊಂಡಿರುತ್ತದೆ, ನಂತರ ಅದನ್ನು ಕ್ರೆಡಿಟ್ ಮಾಹಿತಿ ವರದಿ (ಸಿಐಆರ್) ಮತ್ತು ವೈಯಕ್ತಿಕ ಕ್ರೆಡಿಟ್ ಸ್ಕೋರ್‌ಗಳಾಗಿ ಸಂಕಲಿಸಲಾಗುತ್ತದೆ.

ಭಾರತದಲ್ಲಿ ಸಿಬಿಲ್ ಸ್ಕೋರ್ ಎಂದರೇನು?

ಸಿಬಿಲ್ ಒಂದು ಕ್ರೆಡಿಟ್ ಸ್ಕೋರ್ ಆಗಿದ್ದು, 300-900 ನಡುವಿನ ಮೂರು-ಅಂಕಿಯ ಸಂಖ್ಯೆಯಾಗಿದೆ, 300 ಎಂದರೆ ಕಡಿಮೆ ಸಂಭವನೀಯ ಸ್ಕೋರ್ ಆಗಿದೆ ಮತ್ತು 900 ಹೆಚ್ಚಿನ ಸ್ಕೋರ್ ಆಗಿದೆ. ಈ ಸ್ಕೋರ್ ಒಬ್ಬ ವ್ಯಕ್ತಿಯ "ಕ್ರೆಡಿಟ್ ಅರ್ಹತೆಯನ್ನು" ಹೇಳುತ್ತದೆ. ಹೆಚ್ಚಿನ ಸಿಬಿಲ್ ಸ್ಕೋರ್ ಒಬ್ಬ ವ್ಯಕ್ತಿಯು ಉತ್ತಮವಾಗಿ ಸಾಲ ತೆಗೆದುಕೊಳ್ಳುವ ಮತ್ತು ಅಷ್ಟೇ ಜವಾಬ್ದಾರಿಯುತವಾಗಿ ತೆಗೆದುಕೊಂಡ ಸಾಲವನ್ನು ವಾಪಾಸ್ ತೀರಿಸುವ ನಡವಳಿಕೆಯನ್ನು ಪ್ರದರ್ಶಿಸಿದ್ದಾನೆ ಎಂದು ತೋರಿಸುತ್ತದೆ.

ಕನಿಷ್ಠ ಕಳೆದ 6 ತಿಂಗಳಿನಿಂದ ವ್ಯಕ್ತಿಗಳ ವಿವರವಾದ ಸಾಲದ ಬಗೆಗಿನ ಮಾಹಿತಿಯನ್ನು ಬಳಸಿಕೊಂಡು ವ್ಯಕ್ತಿಯ ಸಿಬಿಲ್ ಸ್ಕೋರ್ ಅನ್ನು ಲೆಕ್ಕಹಾಕಲಾಗುತ್ತದೆ. ಅಂತಿಮ ಸಿಬಿಲ್ ಸ್ಕೋರ್ ಅನ್ನು ಲೆಕ್ಕಾಚಾರ ಮಾಡಲು ವಿವಿಧ ಅಂಶಗಳ ಜೊತೆಗೆ ಅಲ್ಗಾರಿದಮ್ ಈ ಡೇಟಾವನ್ನು ಬಳಸಿಕೊಳ್ಳುತ್ತದೆ.

ಒಳ್ಳೆಯ ಹಾಗು ಕೆಟ್ಟ ಸಿಬಿಲ್ ಸ್ಕೋರ್ ಎಂದರೇನು?

ನಾವು ಈಗಾಗಲೇ ಹೇಳಿದಂತೆ, ಸಿಬಿಲ್ ಸ್ಕೋರ್ 300-900 ವ್ಯಾಪ್ತಿಯಲ್ಲಿರುತ್ತದೆ. ಸಾಮಾನ್ಯವಾಗಿ, ಸಿಬಿಲ್ ಸ್ಕೋರ್ 750 ಇದ್ದರೆ, ಅದನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ ಮತ್ತು ಸಾಲದಾತರಿಂದ ವ್ಯಕ್ತಿಗಳನ್ನು ಜವಾಬ್ದಾರಿಯುತ ಸಾಲಗಾರರಾಗಿ ನೋಡಲಾಗುತ್ತದೆ. ಸಿಬಿಲ್ ಸ್ಕೋರ್‌ನ ವಿವಿಧ ಶ್ರೇಣಿಗಳು ಇಲ್ಲಿವೆ:

ಸಿಬಿಲ್ ಸ್ಕೋರ್ ವರ್ಗ ಅರ್ಥ
NA/NH "ಅನ್ವಯಿಸುವುದಿಲ್ಲ" ಅಥವಾ "ಯಾವುದೇ ಇತಿಹಾಸವಿಲ್ಲ" ನೀವು ಕ್ರೆಡಿಟ್ ಕಾರ್ಡ್ ಅನ್ನು ಬಳಸದಿದ್ದರೆ ಅಥವಾ ನೀವು ಎಂದಿಗೂ ಸಾಲವನ್ನು ತೆಗೆದುಕೊಳ್ಳದಿದ್ದರೆ, ನೀವು ಯಾವುದೇ ಸಾಲದ ಇತಿಹಾಸವನ್ನು ಹೊಂದಿರುವುದಿಲ್ಲ.
300-549 ಕೆಳಮಟ್ಟದ್ದಾಗಿದೆ ನೀವು ಕ್ರೆಡಿಟ್ ಕಾರ್ಡ್ ಬಿಲ್‌ಗಳು ಅಥವಾ ಇಎಂಐಗಳಲ್ಲಿ ಅನಿಯಮಿತ ಮರುಪಾವತಿಗಳು ಅಥವಾ ಡೀಫಾಲ್ಟ್‌ಗಳನ್ನು ತೋರಿಸಿದ್ದೀರಿ, ಹೆಚ್ಚಿನ ಸಾಲದ ಹೊರೆ, ನೀವು ಡಿಫಾಲ್ಟರ್ ಆಗುವ ಹೆಚ್ಚಿನ ಅಪಾಯದಲ್ಲಿ ಪರಿಗಣಿಸಲಾಗುತ್ತದೆ ಮತ್ತು ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆಯುವುದು ಕಷ್ಟವಾಗುತ್ತದೆ.
550-649 ಸಾಧಾರಣವಾಗಿದೆ ಕ್ರೆಡಿಟ್ ಕಾರ್ಡ್ ಬಿಲ್‌ಗಳು/ಇಎಂಐಗಳ ತಡವಾದ ಪಾವತಿ ಅಥವಾ ಬಹು ಸಾಲ ವಿಚಾರಣೆಗಳಂತಹ ನಿಮ್ಮ ಹಿಂದಿನ ಪಾವತಿಗಳೊಂದಿಗೆ ಕೆಲವು ಅನಿಶ್ಚಿತತೆಗಳು ಇದ್ದರೆ, ಕೆಲವು ಸಾಲದಾತರು ನಿಮಗೆ ಕ್ರೆಡಿಟ್ ನೀಡಲು ಪರಿಗಣಿಸುತ್ತಾರೆ, ಆದರೆ ನಿಮ್ಮ ಬಡ್ಡಿ ದರಗಳು ಹೆಚ್ಚಾಗಬಹುದು
650-749 ಉತ್ತಮವಾಗಿದೆ ನೀವು ಜವಾಬ್ದಾರಿಯುತ ಮರುಪಾವತಿಯ ನಡವಳಿಕೆಯನ್ನು ಪ್ರದರ್ಶಿಸಿದ್ದೀರಿ ಮತ್ತು ದೀರ್ಘವಾದ ಕ್ರೆಡಿಟ್ ಇತಿಹಾಸವನ್ನು ಹೊಂದಿರುವಿರಿ, ಹೆಚ್ಚಿನ ಸಾಲದಾತರು ನಿಮ್ಮ ಕ್ರೆಡಿಟ್ ಮತ್ತು ಸಾಲದ ಅರ್ಜಿಗಳನ್ನು ಪರಿಗಣಿಸುತ್ತಾರೆ, ಆದರೆ ನೀವು ಬಡ್ಡಿ ದರದಲ್ಲಿ ಉತ್ತಮ ವ್ಯವಹಾರಗಳನ್ನು ಪಡೆಯದಿರಬಹುದು
750-900 ಅತ್ಯುತ್ತಮವಾಗಿದೆ ನಿಮ್ಮ ಕ್ರೆಡಿಟ್ ಪಾವತಿಗಳೊಂದಿಗೆ ನೀವು ನಿಯಮಿತವಾಗಿರುತ್ತೀರಿ ಮತ್ತು ಅನುಕರಣೀಯ ಕ್ರೆಡಿಟ್ ಇತಿಹಾಸವನ್ನು ಹೊಂದಿದ್ದೀರಿ, ಬ್ಯಾಂಕ್‌ಗಳು ಮತ್ತು ಸಾಲ ನೀಡುವ ಸಂಸ್ಥೆಗಳು ನಿಮ್ಮನ್ನು ಡಿಫಾಲ್ಟರ್ ಆಗಿ ಪರಿವರ್ತಿಸುವ ಕಡಿಮೆ ಅಪಾಯವನ್ನು ಪರಿಗಣಿಸುತ್ತವೆ ಮತ್ತು ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ನಿಮಗೆ ಉತ್ತಮ ವ್ಯವಹಾರಗಳನ್ನು ನೀಡುತ್ತವೆ.

ಉತ್ತಮ ಸಿಬಿಲ್ ಸ್ಕೋರ್ ಏಕೆ ಮುಖ್ಯವಾಗುತ್ತದೆ?

ಉತ್ತಮ ಸಿಬಿಲ್ ಸ್ಕೋರ್ ಅನ್ನು ಹೊಂದಿರುವುದು (ಅಂದರೆ, 700 ಮತ್ತು 900 ರ ನಡುವೆ ಒಂದು) ತುಂಬಾ ಪ್ರಯೋಜನಕಾರಿಯಾಗಿದೆ. ಸಾಲ ಮತ್ತು ಕ್ರೆಡಿಟ್ ಕಾರ್ಡ್ ಅರ್ಜಿಗಳನ್ನು ಪರಿಗಣಿಸುವಾಗ ಈ ಸ್ಕೋರ್ ಅನ್ನು ಬ್ಯಾಂಕ್‌ಗಳು ಮತ್ತು ಇತರ ಸಾಲ ನೀಡುವ ಸಂಸ್ಥೆಗಳು ಗಣನೆಗೆ ತೆಗೆದುಕೊಳ್ಳುತ್ತವೆ. ಹೀಗಾಗಿ, ಇದು ಸಾಲಕ್ಕಾಗಿ ನಿಮ್ಮ ವಿನಂತಿಗಳನ್ನು ಅನುಮೋದಿಸುವಲ್ಲಿ ಸಂಭಾವ್ಯ ಸಾಲದಾತರಿಗೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತದೆ.

ಇದು ನಿಮಗೆ ಕೆಲವು ಇತರ ಪ್ರಯೋಜನಗಳಿಗೆ ಕಾರಣವಾಗಬಹುದು, ಅವುಗಳೆಂದರೆ:

  • ಸಾಲಗಳ ಮೇಲಿನ ಕಡಿಮೆ ಬಡ್ಡಿ ದರಗಳು

  • ಹೆಚ್ಚಿನ ಸಾಲದ ಮೊತ್ತಗಳು

  • ದೀರ್ಘ ಅಥವಾ ಹೆಚ್ಚು ಹೊಂದಿಕೊಳ್ಳುವ ಮರುಪಾವತಿ ಅವಧಿಯಂತಹ ಉತ್ತಮ ಮರುಪಾವತಿ ನಿಯಮಗಳು

  • ತ್ವರಿತ ಸಾಲ ಮಂಜೂರಾತಿ ಪ್ರಕ್ರಿಯೆ

  • ಸಾಲ ನೀಡುವ ಸಂಸ್ಥೆಗಳ ಹೆಚ್ಚಿನ ಆಯ್ಕೆ

ಸಿಬಿಲ್ ಸಾಲದ ಸ್ಕೋರ್ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಒಬ್ಬ ವ್ಯಕ್ತಿಯ ಸಿಬಿಲ್ ಸ್ಕೋರ್ ಅನ್ನು ನಾಲ್ಕು ಪ್ರಮುಖವಾದ ಅಂಶಗಳಿಂದ ಲೆಕ್ಕ ಹಾಕಲಾಗುತ್ತದೆ. ಈ ಪ್ರತಿಯೊಂದು ಅಂಶವು ನಿಮ್ಮ ಅಂತಿಮ ಸ್ಕೋರ್‌ನಲ್ಲಿ ತಮ್ಮದೇ ಆದ ತೂಕವನ್ನು ಹೊಂದಿರುತ್ತದೆ. ಈ ಅಂಶಗಳು ಎಂದರೆ:

ಅಂಶಗಳು ವೆಯ್ಟೇಜ್ ಈ ಅಂಶಗಳ ಮೇಲೆ ಏನು ಪರಿಣಾಮ ಬೀರಬಹುದು?
ಪಾವತಿ ಇತಿಹಾಸ 30% ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಲೋನ್‌ಗಳು ಮತ್ತು ಇಎಂಐಗಳ ಸಮಯೋಚಿತ ಪಾವತಿಗಳು ಉತ್ತಮ ಸ್ಕೋರ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ, ವಿಳಂಬವಾದ ಅಥವಾ ಡೀಫಾಲ್ಟ್ ಪಾವತಿಗಳು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡುತ್ತವೆ.
ಸಾಲದ ಬಳಕೆ 25% ಸಾಲದ ಬಳಕೆ ನೀವು ಬಳಸುವ ನಿಮ್ಮ ಸಾಲದ ಮಿತಿಯ ಮೊತ್ತವಾಗಿದೆ. ಇದು ಹೆಚ್ಚಾಗಿದ್ದರೆ, ನಿಮ್ಮ ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ, ತಾತ್ತ್ವಿಕವಾಗಿ, ನಿಮ್ಮ ಕ್ರೆಡಿಟ್ ಮಿತಿಯ 30% ಕ್ಕಿಂತ ಹೆಚ್ಚು ಖರ್ಚು ಮಾಡಬಾರದು ಮತ್ತು ಸಾಲ ಹೆಚ್ಚಿಸಿಕೊಳ್ಳಬಾರದು.
ಕ್ರೆಡಿಟ್ ಪ್ರಕಾರ ಮತ್ತು ಅವಧಿ 25% ನೀವು ಹೊಂದಿರುವ ಈ ಪ್ರಕಾರದ ಸಾಲವೂ ಮುಖ್ಯವಾಗಿದೆ. ಇದರಲ್ಲಿ ಎರಡು ಮುಖ್ಯ ವಿಧಗಳಿವೆ - ಅಸುರಕ್ಷಿತ ಸಾಲಗಳು (ಉದಾ. ಕ್ರೆಡಿಟ್ ಕಾರ್ಡ್‌ಗಳು ಮತ್ತು ವೈಯಕ್ತಿಕ ಸಾಲಗಳು) ಮತ್ತು ಸುರಕ್ಷಿತ ಸಾಲಗಳು (ಉದಾ. ವಾಹನ ಸಾಲಗಳು ಅಥವಾ ಗೃಹ ಸಾಲಗಳು). ಎರಡರ ಮಿಶ್ರಣವನ್ನು ಹೊಂದಲು ಶಿಫಾರಸು ಮಾಡಲಾಗಿದೆ. ನಿಮ್ಮ ಸಾಲದ ಇತಿಹಾಸದ ಅವಧಿ ಮೂಲಭೂತವಾಗಿ ನೀವು ಎಷ್ಟು ಸಮಯದವರೆಗೆ ಸಾಲದ ಖಾತೆಯನ್ನು ಹೊಂದಿದ್ದೀರಿ, ಹಾಗೆಯೇ ನಿಮ್ಮ ಸಾಲಗಳನ್ನು ಮರುಪಾವತಿಸಲು ನೀವು ಎಷ್ಟು ಸಮಯ ತೆಗೆದುಕೊಂಡಿದ್ದೀರಿ ಎಂಬುದನ್ನು ಒಳಗೊಂಡಿರುತ್ತದೆ.
ಸಾಲದ ವಿಚಾರಣೆಗಳು 20% ನೀವು ಸಾಲಕ್ಕಾಗಿ ಎಷ್ಟು ಬಾರಿ ಅಪ್ಲೈ ಮಾಡಿದ್ದೀರಿ ಎಂಬುದು ನಿಮ್ಮ ಸ್ಕೋರ್‌ನ ಮೇಲೆ ಪರಿಣಾಮ ಬೀರಬಹುದು, ವಿಶೇಷವಾಗಿ ಕಡಿಮೆ ಅವಧಿಯಲ್ಲಿ ಅಪ್ಲೈ ಮಾಡಿದ್ದರೆ. ಇದು ಕ್ರೆಡಿಟ್ ಕಾರ್ಡ್‌ಗಳು, ಸಾಲಗಳು ಇತ್ಯಾದಿಗಳಿಗೆ ಅಪ್ಲೈ ಮಾಡುವುದನ್ನು ಒಳಗೊಂಡಿರುತ್ತದೆ, ಹೆಚ್ಚಿನ ಸಂಖ್ಯೆಯ ವಿಚಾರಣೆಗಳು ನಿಮ್ಮ ಸ್ಕೋರ್ ಅನ್ನು ಕಡಿಮೆಗೊಳಿಸಬಹುದು.
ಉತ್ತಮ ಸಿಬಿಲ್ ಸ್ಕೋರ್ ಅನ್ನು ನಿರ್ವಹಿಸುವುದು ನಿಧಾನ ಪ್ರಕ್ರಿಯೆಯಾಗಿದೆ. ನೀವು ಸ್ಥಿರವಾದ ಮತ್ತು ಸಮಯೋಚಿತ ಮರುಪಾವತಿಯ ನಡವಳಿಕೆಯನ್ನು ಪ್ರದರ್ಶಿಸಬೇಕು ಮತ್ತು ನಿಮ್ಮ ಸ್ಕೋರ್ ಅನ್ನು ಮೇಲೆ ಇರಿಸಿಕೊಳ್ಳಲು ನಿಮಗೆ ಲಭ್ಯವಿರುವ ಸಾಲವನ್ನು ಜವಾಬ್ದಾರಿಯುತ ರೀತಿಯಲ್ಲಿ ನಿರ್ವಹಿಸಬೇಕು.

ನಿಮ್ಮ ಸಿಬಿಲ್ ಸ್ಕೋರ್ ಅನ್ನು ಹೇಗೆ ಪರಿಶೀಲಿಸುವುದು?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ ಆನ್‌ಲೈನ್‌ನಲ್ಲಿ ಕ್ರೆಡಿಟ್ ಸ್ಕೋರ್‌ಗಳನ್ನು ಪರಿಶೀಲಿಸಲು ಬಳಕೆದಾರರಿಗೆ ಅವಕಾಶ ನೀಡುವುದನ್ನು ಮತ್ತು ಪ್ರತಿ ವರ್ಷ ಒಂದು ಉಚಿತ ಕ್ರೆಡಿಟ್ ಸ್ಕೋರ್ ವರದಿಯನ್ನು ನೀಡುವುದನ್ನು ಕಡ್ಡಾಯಗೊಳಿಸಿದೆ. ಸಿಬಿಲ್ ವೆಬ್‌ಸೈಟ್ ಮೂಲಕ ಇದನ್ನು ಸುಲಭವಾಗಿ ಮಾಡಬಹುದು.

ಸಿಬಿಲ್ ಸ್ಕೋರ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ

ಈ ಹಂತಗಳನ್ನು ಅನುಸರಿಸಬೇಕು:

  • ಹಂತ 1: ಸಿಬಿಲ್ ವೆಬ್‌ಸೈಟ್‌ಗೆ ಹೋಗಿ, ಮತ್ತು ನಿಮ್ಮ ಸ್ಕೋರ್ ಅನ್ನು ತಿಳಿಯಿರಿ ಅಥವಾ ನಿಮ್ಮ ಸಿಬಿಲ್ ಸ್ಕೋರ್ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಹಂತ 2: ನಿಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಲಾಗಿನ್ ಮಾಡಿ ಅಥವಾ ಹೊಸ ಖಾತೆಯನ್ನು ರಚಿಸಿ. ಹಾಗೆ ಮಾಡಲು, ನೀವು ನಿಮ್ಮ ಹೆಸರು, ಸಂಪರ್ಕ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಬಳಸಬೇಕು ಮತ್ತು ಒಂದು ಪಾಸ್ವರ್ಡ್ ಅನ್ನು ರಚಿಸಬೇಕು.
  • ಹಂತ 3: ನೀವು ಐಡಿ ಪುರಾವೆಯನ್ನು (ಪಾಸ್‌ಪೋರ್ಟ್ ಸಂಖ್ಯೆ, ಪ್ಯಾನ್ ಕಾರ್ಡ್, ಆಧಾರ್ ಅಥವಾ ವೋಟರ್ ಐಡಿ) ಮತ್ತು ನಿಮ್ಮ ಪಿನ್ ಕೋಡ್ ಮತ್ತು ಜನ್ಮ ದಿನಾಂಕದಂತಹ ಹೆಚ್ಚುವರಿ ಮಾಹಿತಿಯನ್ನು ಲಗತ್ತಿಸಬೇಕಾಗುತ್ತದೆ.
  • ಹಂತ 4: ಇದು ಪೂರ್ಣಗೊಂಡ ನಂತರ ಫಾರ್ಮ್ ಅನ್ನು ಸಲ್ಲಿಸಿ.
  • ಹಂತ 5: ನಂತರ ನಿಮ್ಮ ಗುರುತನ್ನು ಪರಿಶೀಲಿಸಲು ನಿಮ್ಮ ನೋಂದಾಯಿತ ಫೋನ್ ಸಂಖ್ಯೆ ಮತ್ತು ಇಮೇಲ್-ಐಡಿಗೆ ನೀವು ಒಟಿಪಿ ಅನ್ನು ಪಡೆದುಕೊಳ್ಳುತ್ತೀರಿ.
  • ಹಂತ 6: ಒಮ್ಮೆ ನೀವು ಒಟಿಪಿ ಟೈಪ್ ಮಾಡಿ ಮತ್ತು ಪರಿಶೀಲಿಸಿದ ನಂತರ, ನೀವು ಲಾಗ್ ಇನ್ ಮಾಡಬಹುದು ಮತ್ತು ನಿಮ್ಮ ಸಿಬಿಲ್ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಲು ಡ್ಯಾಶ್‌ಬೋರ್ಡ್‌ಗೆ ಹೋಗಬಹುದು.
  • ಹಂತ 7: ನಿಮ್ಮನ್ನು myscore.cibil.com ಗೆ ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ನಿಮ್ಮ ವಿವರಗಳನ್ನು ಬಳಸಿಕೊಂಡು ನೀವು ಲಾಗ್ ಇನ್ ಆಗಬಹುದು.ಇ ಲ್ಲಿ, ನಿಮ್ಮ ಸಾಲದ ಸ್ಕೋರ್ ಅನ್ನು ನೀವು ನೋಡಲು ಸಾಧ್ಯವಾಗುತ್ತದೆ.

ನಿಮ್ಮ ಕ್ರೆಡಿಟ್ ರಿಪೋರ್ಟ್ ಪಡೆಯಲು

  • ಹಂತ 8: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ "ಕ್ರೆಡಿಟ್ ರಿಪೋರ್ಟ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಹಂತ 9: ನಿಮ್ಮ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಕುರಿತಾದ ಪ್ರಶ್ನೆಗಳು, ನಿಮ್ಮ ಕ್ರೆಡಿಟ್ ಇತಿಹಾಸಕ್ಕೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ನೀವು ಭರ್ತಿ ಮಾಡಬೇಕಾದ ದೃಢೀಕರಣ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ. ಸಿಬಿಲ್ ನೊಂದಿಗೆ ನಿಮ್ಮ ಗುರುತನ್ನು ದೃಢೀಕರಿಸಲು ನೀವು ಕನಿಷ್ಟ 5 ರಲ್ಲಿ 3 ಕ್ಕೆ ಸರಿಯಾಗಿ ಉತ್ತರಿಸುವ ಅಗತ್ಯವಿದೆ.
  • ಹಂತ 10: ಒಮ್ಮೆ ದೃಢೀಕರಿಸಿದ ನಂತರ, ನಿಮ್ಮ ಸಂಪೂರ್ಣ ಕ್ರೆಡಿಟ್ ವರದಿಯನ್ನು 24 ಗಂಟೆಗಳ ಒಳಗೆ ನೀವು ರಿಜಿಸ್ಟರ್ ಮಾಡಿದ ಇಮೇಲ್-ಐಡಿಗೆ ತಲುಪಿಸಲಾಗುತ್ತದೆ

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ವರ್ಷಕ್ಕೊಮ್ಮೆ ಮಾತ್ರ ನೀವು ಉಚಿತವಾಗಿ ಪರಿಶೀಲಿಸಬಹುದು ಎಂಬುದನ್ನು ಮರೆಯದಿರಿ. ನೀವು ಪದೇ ಪದೇ ಕ್ರೆಡಿಟ್ ವರದಿಗಳನ್ನು ಸ್ವೀಕರಿಸಲು ಬಯಸಿದರೆ, ಈ ಮಾಹಿತಿಗಾಗಿ ಸಿಬಿಲ್ ಗೆ ಪಾವತಿಸುವ ಮೂಲಕ ನೀವು ಹಾಗೆ ಮಾಡಬಹುದು. ಪ್ರಸ್ತುತ, ಒಂದು ಕ್ರೆಡಿಟ್ ವರದಿಗೆ ಸುಮಾರು ₹550 ದರವಿದೆ.

ಅಫ್ಲೈನ್ ನಲ್ಲಿ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಹೇಗೆ?

ಈ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಸಿಬಿಲ್ ಕ್ರೆಡಿಟ್ ಸ್ಕೋರ್ ಮತ್ತು ವರದಿಯನ್ನು ನಿಮ್ಮ ಮೇಲ್ ನಲ್ಲಿ ಪಡೆದುಕೊಳ್ಳಬಹುದು:

  • ಹಂತ 1: ಸಿಬಿಲ್ ವೆಬ್‌ಸೈಟ್‌ನಿಂದ ಕ್ರೆಡಿಟ್ ಸ್ಕೋರ್ ವಿನಂತಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.
  • ಹಂತ 2: ಅದನ್ನು ಮುದ್ರಿಸಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
  • ಹಂತ 3: ನಿಮ್ಮ ಐಡಿ ಪುರಾವೆಯ (ಪಾಸ್‌ಪೋರ್ಟ್ ಸಂಖ್ಯೆ, ಪ್ಯಾನ್ ಕಾರ್ಡ್, ಆಧಾರ್ ಅಥವಾ ವೋಟರ್ ಐಡಿ) ನಕಲನ್ನು ಸಹ ನೀವು ಲಗತ್ತಿಸಬೇಕಾಗುತ್ತದೆ.
  • ಹಂತ 4: "ಟ್ರಾನ್ಸ್ಯೂನಿಯನ್ ಸಿಬಿಲ್" ಗೆ ಮಾಡಿದ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಲಗತ್ತಿಸಿ ಇದು ₹164 (ಕೇವಲ ಕ್ರೆಡಿಟ್ ವರದಿಗಾಗಿ) ಅಥವಾ ₹5500 (ಕ್ರೆಡಿಟ್ ವರದಿ ಮತ್ತು ಕ್ರೆಡಿಟ್ ಸ್ಕೋರ್ ಎರಡಕ್ಕೂ) ಆಗಿರಬೇಕು.
  • ಹಂತ 5: ಇದು ಪೂರ್ಣಗೊಂಡ ನಂತರ ಮೇಲಿನ ಡಾಕ್ಯುಮೆಂಟುಗಳನ್ನು ಇಮೇಲ್, ಪೋಸ್ಟ್ ಅಥವಾ ಕೊರಿಯರ್ ಮೂಲಕ ಇಲ್ಲಿಗೆ ಕಳುಹಿಸಿ:
    • ಇಮೇಲ್ ಕಳುಹಿಸುತ್ತೀರಿ ಎಂದರೆ, ಸ್ಕ್ಯಾನ್ ಮಾಡಿದ ಡಾಕ್ಯುಮೆಂಟುಗಳನ್ನು cibilinfo@transunion.com ಗೆ ಕಳುಹಿಸಿ
    • ಪೋಸ್ಟ್ ಮೂಲಕ ಕಳುಹಿಸಲು ಬಯಸಿದರೆ, ಡಾಕ್ಯುಮೆಂಟುಗಳನ್ನು ಇಲ್ಲಿಗೆ ಕಳುಹಿಸಿ:

ಟ್ರಾನ್ಸ್ಯೂನಿಯನ್ ಸಿಬಿಲ್ ಲಿಮಿಟೆಡ್ (ಹಿಂದೆ: ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್) 

ಒನ್ ಇಂಡಿಯಾಬುಲ್ಸ್ ಸೆಂಟರ್, 

ಟವರ್ 2A, 19 ನೇ ಮಹಡಿ, ಸೇನಾಪತಿ ಬಾಪತ್ ಮಾರ್ಗ, 

ಎಲ್ಫಿನ್ಸ್ಟೋನ್ ರೋಡ್, 

ಮುಂಬೈ - 400013

  • ಹಂತ 6: ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ವರದಿಯನ್ನು ನೀವು ಫಾರ್ಮ್‌ನಲ್ಲಿ ನೀಡಿರುವ ವಿಳಾಸಕ್ಕೆ ಅಥವಾ ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ಮೇಲ್ ಮಾಡಲಾಗುತ್ತದೆ.

ನಿಮ್ಮ ಸಿಬಿಲ್ ಸ್ಕೋರ್ ಅನ್ನು ಹೇಗೆ ಸುಧಾರಿಸುವುದು?

ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವುದು ಮುಖ್ಯವಾಗಿದೆ, ಏಕೆಂದರೆ ನೀವು ಸಾಲಗಳು ಮತ್ತು ಇತರ ಕ್ರೆಡಿಟ್‌ಗಳಿಗೆ ಅರ್ಜಿ ಸಲ್ಲಿಸಿದಾಗ ಬ್ಯಾಂಕ್‌ಗಳು ಮತ್ತು ಸಾಲ ನೀಡುವ ಸಂಸ್ಥೆಗಳು ನಿಮ್ಮ ಪರವಾಗಿ ನಿರ್ಧರಿಸಲು ಸಹಾಯ ಮಾಡುತ್ತದೆ. ಇದು ಪ್ರಯೋಜನಕಾರಿಯಾಗಿರುವುದರಿಂದ, ನಿಮ್ಮ ಸಿಬಿಲ್ ಸ್ಕೋರ್ ಅನ್ನು ನೀವು ಸುಧಾರಿಸಲು ಕೆಲವು ಮಾರ್ಗಗಳಿವೆ:

  • ನಿಮ್ಮ ಸಿಬಿಲ್ ಸ್ಕೋರ್ ಅನ್ನು ಆಗಾಗ ಪರಿಶೀಲಿಸಿ ಇದರಿಂದ ನೀವು ಯಾವ ಮಟ್ಟದಲ್ಲಿದ್ದೀರಿ ಎಂಬುದು ನಿಮಗೆ ತಿಳಿಯುತ್ತದೆ.

  • ನಿಮ್ಮ ಕ್ರೆಡಿಟ್ ವರದಿಯನ್ನು ನಿಯಮಿತವಾಗಿ ಪರಿಶೀಲಿಸಿ ಇದರಿಂದ ನೀವು ಯಾವುದೇ ದೋಷಗಳನ್ನು ತ್ವರಿತವಾಗಿ ಸರಿಪಡಿಸಬಹುದು.

  • ನಿಮ್ಮ ಇಎಂಐಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ನಿಯಮಿತವಾಗಿ ಸರಿಯಾದ ಸಮಯಕ್ಕೆ ಪಾವತಿಸಿ; ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಮತ್ತು ವಿಳಂಬ ಮಾಡಬೇಡಿ.

  • ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚು ಬಳಸಬೇಡಿ ಮತ್ತು ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು (ಸಿಯುಆರ್ ) 30% ಒಳಗೆ ಇರಿಸಿಕೊಳ್ಳಲು ಪ್ರಯತ್ನಿಸಿ.

  • ನಿಮ್ಮ ಸಾಲದ ಮಿತಿಯನ್ನು ಹೆಚ್ಚಿಸಲು ಪ್ರಯತ್ನಿಸಿ (ಅಂದರೆ ನಿಮ್ಮ ಕ್ರೆಡಿಟ್ ಕಾರ್ಡ್‌ನ ಒಟ್ಟು ಖರ್ಚಿನ ಮಿತಿಯನ್ನು).

  • ಕಡಿಮೆ ಅವಧಿಯಲ್ಲಿ ಬೇರೆ ಬೇರೆ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವುದನ್ನು ತಪ್ಪಿಸಿ.

  • ಅನಿವಾರ್ಯ ಆಗಿರದಿದ್ದರೆ, ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್‌ಗಳನ್ನು ರದ್ದುಗೊಳಿಸಬೇಡಿ; ಏಕೆಂದರೆ ನೀವು ಜವಾಬ್ದಾರಿಯುತ ಸಾಲದ ಇತಿಹಾಸವನ್ನು ಹೊಂದಿರುವಿರಿ ಎಂದು ನಿಮ್ಮ ಹಳೆಯ ಕಾರ್ಡ್‌ಗಳು ಸಾಲದಾತರಿಗೆ ಭರವಸೆ ನೀಡಬಹುದು.